For Quick Alerts
ALLOW NOTIFICATIONS  
For Daily Alerts

ಋತುಚಕ್ರದ ವೇಳೆ ರಕ್ತಸ್ರಾವ ಕಡಿಮೆಯಾದರೆ ಸಮಸ್ಯೆಯೇ?

By Hemanth
|

ಮಹಿಳೆಯು ಪ್ರೌಢಾವಸ್ಥೆ ತಲುಪಿದ ಬಳಿಕ ಪ್ರತೀ ತಿಂಗಳು ಗರ್ಭಾಶಯದ ಒಳಪದರವು ಯೋನಿಯ ಮೂಲಕವಾಗಿ ದೇಹದಿಂದ ರಕ್ತ ಮತ್ತು ರಕ್ತದ ಗಡ್ಡೆಯನ್ನು ಹೊರಹಾಕುವುದು. ಇದನ್ನೇ ಋತುಚಕ್ರವೆಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಋತುಚಕ್ರವು 3-7ದಿನಗಳ ಕಾಲ ಇರುವುದು. ರಕ್ತಸ್ರಾವದೊಂದಿಗೆ ಶ್ರೋಣಿಯಲ್ಲಿ ಸೆಳೆತದೊಂದಿಗೆ ಇತರ ಕೆಲವೊಂದು ಲಕ್ಷಣಗಳಾಗಿರುವಂತಹ ಹಸಿವು ಹೆಚ್ಚಳ, ಹೊಟ್ಟೆ ಉಬ್ಬರ, ಸ್ತನಗಳು ಮೃಧುವಾಗುವುದು ಇತ್ಯಾದಿ.

ಋತುಚಕ್ರದ ವೇಳೆ ಕೆಲವು ಮಹಿಳೆಯರಲ್ಲಿ ಅತಿಯಾಗಿ ರಕ್ತಸ್ರಾವವಾಗುತ್ತಲಿದ್ದರೆ ಆಗ ವೈದ್ಯರಲ್ಲಿ ಪರೀಕ್ಷೆ ಮಾಡಿಕೊಳ್ಳುವರು. ಆದರೆ ಕೆಲವೊಂದು ಸಲ ರಕ್ತಸ್ರಾವು ಕಡಿಮೆ ಕೂಡ ಆಗುವುದು. ಇದನ್ನು ಹೆಚ್ಚಿನ ಮಹಿಳೆಯರು ಕಡೆಗಣಿಸುವರು. ಅದಾಗ್ಯೂ ಋತುಚಕ್ರದ ವೇಳೆ ರಕ್ತಸ್ರಾವ ಕಡಿಮೆಯಾಗುವುದು ಕೂಡ ಕೆಲವೊಂದು ಸಮಸ್ಯೆಯ ಸೂಚನೆಯಾಗಿರಬಹುದು ಮತ್ತು ಇದನ್ನು ಕಡೆಗಣಿಸಿದರೆ ಗಂಭೀರ ಆರೋಗ್ಯ ಸಮಸ್ಯೆಯು ಉಂಟಾಗಬಹುದು. ಋತುಚಕ್ರದ ವೇಳೆ ರಕ್ತಸ್ರಾವ ಕಡಿಮೆಯಾಗಲು ಕಾರಣವೇನೆಂದು ನೀವು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

Is Light Period Flow Unhealthy? Reasons Your Period Is So Light

ಋತುಚಕ್ರದ ವೇಳೆ ಕಡಿಮೆ ರಕ್ತಸ್ರಾವವಾಗಲು ಕಾರಣವೇನು?

ಋತುಬಂಧವಾಗುವ ಹತ್ತಿರವಿಲ್ಲದೆ ಇರುವಂತಹ ಮಹಿಳೆಯರಲ್ಲಿ ಋತುಚಕ್ರದ ವೇಳೆ ಸಾಮಾನ್ಯವಾಗಿ 30 ಮಿ.ಲೀನಿಂದ 50 ಮಿ.ಲೀ ರಕ್ತಸ್ರಾವವಾಗಬೇಕು. ಋತುಚಕ್ರದ ಎಲ್ಲಾ ದಿನಗಳಲ್ಲಿ ಆಗುವಂತಹ ರಕ್ತಸ್ರಾವ ಪ್ರಮಾಣ ಇದಾಗಿದೆ.

ಅದಾಗ್ಯೂ, ಮಹಿಳೆಯಲ್ಲಿ ಕೇವಲ 30 ಮಿ.ಲೀ ಅಥವಾ ಅದಕ್ಕಿಂತ ಕಡಿಮೆ ರಕ್ತಸ್ರಾವವಾಗುತ್ತಲಿದ್ದರೆ ಹೈಪೊಮೆನೊರ್ರೆಹೆಯಾ'ದ ಸಮಸ್ಯೆಯಾಗಿದೆ. ಈ ಸಮಸ್ಯೆ ಇದೆಯಾ ಎಂದು ಪರೀಕ್ಷಿಸಿಕೊಳ್ಳಲು ಮಹಿಳೆಯರು ತಾವು ಬಳಸಿದ ಸ್ಯಾನಿಟರಿ ಪ್ಯಾಡ್ ಅಥವಾ ಟ್ಯಾಂಪೊನ್ಸ್ ನ್ನು ಎಷ್ಟು ಬಳಸುತ್ತಿದ್ದೀರಿ ಮತ್ತು ರಕ್ತಸ್ರಾವವು ಎಷ್ಟು ದಿನಗಳ ಕಾಲ ಇರುವುದು ಎಂದು ಗಮನಿಸಬೇಕು.

ರಕ್ತಸ್ರಾವವು ಕೇವಲ ಮೂರು ದಿನಕ್ಕಿಂತಲೂ ಕಡಿಮೆಯಾಗುತ್ತಲಿದ್ದರೆ, ದಿನಕ್ಕೆ 1-2 ಸ್ಯಾನಿಟರಿ ಪ್ಯಾಡ್ ಮಾತ್ರ ಬಳಸಿದರೆ ಇದು ಹೈಪೊಮೆನೊರ್ರೆಹೆಯಾದ ಲಕ್ಷಣವಾಗಿದೆ.

ಮುಟ್ಟಿನ ಸಮಯದಲ್ಲಿ ಈ 5 ಲಕ್ಷಣಗಳು ಕಂಡುಬಂದರೆ ವೈದ್ಯರ ಬಳಿ ಹೋಗಿ!

ಋತುಚಕ್ರದ ವೇಳೆ ಲಘುರಕ್ತಸ್ರಾವವು ಹಾನಿಕಾರಕವೇ?

ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುವಂತಹ ಹೈಪೊಮೆನೊರ್ರೆಹೆಯಾಗೆ ದೀರ್ಘಕಾಲದ ತನಕ ಚಿಕಿತ್ಸೆ ಪಡೆಯದೇ ಇದ್ದರೆ ಮತ್ತು ಇದು ತಿಂಗಳುಗಳ ಕಾಲ ಇದು ಮುಂದುವರಿದರೆ ಆಗ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೈಪೊಮೆನೊರ್ರೆಹೆಯಾ ಚಿಕಿತ್ಸೆ ಪಡೆಯದೆ ಇದ್ದರೆ ತೂಕ ಹೆಚ್ಚಳ, ಬಂಜೆತನ ಮತ್ತು ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಹಾರ್ಮೋನು ಅಸಮತೋಲನದಿಂದಾಗಿ ತೂಕ ಹೆಚ್ಚಳವಾಗಬಹುದು. ಹೈಪೊಮೆನೊರ್ರೆಹೆಯಾ ಪ್ರಮುಖ ಕಾರಣವೇ ಹಾರ್ಮೋನು ಅಸಮತೋಲನ ಮತ್ತು ಇದಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಆಗ ಸಮಸ್ಯೆಯು ಉಲ್ಬಣಗೊಂಡು ತೂಕ ಹೆಚ್ಚಳದೊಂದಿಗೆ ಇತರ ಚಯಾಪಚಯ ಸಮಸ್ಯೆಗಳು ಕಾಣಿಸಬಹುದು.

ಮುಟ್ಟು ಹತ್ತಿರವಾಗುತ್ತಿದ್ದಂತೆ ಕಂಡು ಬರುವ ಲಕ್ಷಣಗಳು

ಹೈಪೊಮೆನೊರ್ರೆಹೆಯಾ ಸಮಸ್ಯೆಯು ನಿಮ್ಮ ಗರ್ಭಕೋಶದ ಪದರವು ತುಂಬಾ ತೆಳುವಾಗಿದೆ ಎನ್ನುವುದರ ಸೂಚನೆಯಾಗಿದೆ. ಗರ್ಭಧರಿಸಬೇಕಿದ್ದರೆ ಆಗ ಗರ್ಭಕೋಶವು ಪೋಷಣೆಯಿಂದ ಮತ್ತು ಆರೋಗ್ಯಕರ ಮತ್ತು ದಪ್ಪಗಿನ ಪದರ ಹೊಂದಿರಬೇಕು. ಗರ್ಭಧರಿಸಲು ಬಯಸುತ್ತಾ ಇರುವಂತಹ ಮಹಿಳೆಯರು ರಕ್ತಸ್ರಾವದ ಬಗ್ಗೆ ಗಮನಹರಿಸಬೇಕು ಮತ್ತು ಇದು ಸಾಮಾನ್ಯವಾಗಿದೆಯಾ ಎಂದು ತಿಳಿಯಬೇಕು. 40-50ರ ಹರೆಯದ ಮಹಿಳೆಯರಲ್ಲಿ ರಕ್ತಸ್ರಾವವು ಕಡಿಮೆಯಾಗುತ್ತಾ ಬರುವುದು. ಋತುಬಂಧಕ್ಕೆ ಮೊದಲು ಅಸಾಮಾನ್ಯವಾಗಿ ರಕ್ತಸ್ರಾವಾಗುತ್ತಲಿದ್ದರೆ ಆಗ ಅದನ್ನು ಪರೀಕ್ಷಿಸಿಕೊಳ್ಳುವುದು ಅಗತ್ಯ. ಋತುಚಕ್ರದ ಅಸಾಮಾನ್ಯತೆಯು ಗರ್ಭಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳಾಗಿರಬಹುದು. ಹೈಪೊಮೆನೊರ್ರೆಹೆಯಾಗೆ ಚಿಕಿತ್ಸೆ ನೀಡದೆ ಇರುವುದು ಮತ್ತು ಕಡಿಮೆ ರಕ್ತಸ್ರಾವ ಕಡೆಗಣೀಸುವುದು ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು.

ಹೈಪೊಮೆನೊರ್ರೆಹೆಯಾ ಲಕ್ಷಣಗಳು ಮತ್ತು ಅದಕ್ಕೆ ಕಾರಣಗಳು

ಹಾರ್ಮೋನು ಅಸಮತೋಲನ, ಗರ್ಭಕೋಶದ ಪದರ ತೆಳುವಾಗಿರುವುದು, ಅತಿಯಾದ ಒತ್ತಡ, ಅಧಿಕ ತೂಕ, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್(ಪಿಸಿಒಎಸ್), ಗರ್ಭನಿರೋಧಕ ಮಾತ್ರೆಗಳ ಸೇವನೆ, ಹೈಪರ್ ಥೈರಾಯ್ಡಿಸಮ್, ಋತುಬಂಧಕ್ಕೆ ಹತ್ತಿರವಾಗುವುದು, ಪೋಷಕಾಂಶಗಳ ಕೊರತೆ, ಕಿಡ್ನಿ ಸಮಸ್ಯೆ

ಕೆಲವು ದಿನ ಇರುವ ಕಡಿಮೆ ರಕ್ತಸ್ರಾವದೊಂದಿಗೆ ಹೈಪೊಮೆನೊರ್ರೆಹೆಯಾದ ಇತರ ಕೆಲವೊಂದು ಲಕ್ಷಣಗಳು...
ಋತುಚಕ್ರದ ವಿಳಂಬ, 2-3 ತಿಂಗಳ ಕಾಲ ನಿರಂತರವಾಗಿ ಋತುಚಕ್ರವಾಗದೆ ಇರುವುದು, ನಿಶ್ಯಕ್ತಿ ಮತ್ತು ಆಯಾಸ, ರಕ್ತಹೀನತೆ, ದೇಹದಲ್ಲಿ ಅತಿಯಾಗಿ ಕೂದಲಿನ ಬೆಳವಣಿಗೆ, ಕಾಮಾಸಕ್ತಿ ಕುಗ್ಗುವುದು, ಗಂಟು ನೋವು, ಬಂಜೆತನ, ಶ್ರೋಣಿ ಭಾಗ ಮತ್ತು ಪಾದಗಳಲ್ಲಿ ನೀರು ನಿಲ್ಲುವುದು.

ಹೈಪೊಮೆನೊರ್ರೆಹೆಯಾ ಚಿಕಿತ್ಸೆ

ಹೈಪೊಮೆನೊರ್ರೆಹೆಯಾ ಚಿಕಿತ್ಸೆಯು ಅದಕ್ಕೆ ಕಾರಣವೇನೆಂದು ತಿಳಿದ ಬಳಿಕ ನೀಡಲಾಗುತ್ತದೆ. ಇದು ಒಬ್ಬರಿಗಿಂತ ಇನ್ನೊಬ್ಬರಿಗೆ ಭಿನ್ನವಾಗಿರುವುದು. ಒತ್ತಡದಿಂದಾಗಿ ಹೈಪೊಮೆನೊರ್ರೆಹೆಯಾ ಕಾಣಿಸಿಕೊಂಡಿದ್ದರೆ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಹೈಪೊಮೆನೊರ್ರೆಹೆಯಾವು ಹಾರ್ಮೋನು ಅಸಮತೋಲನದಿಂದ ಉಂಟಾಗಿದ್ದರೆ ಆಗ ಇದನ್ನು ಹಾರ್ಮೋನು ಥೆರಪಿ ನೀಡಬೇಕು. ಪಿಸಿಒಎಸ್ ನಿಂದಾಗಿ ಹೀಗೆ ಆಗಿದ್ದರೆ ಆಗ ಚಿಕಿತ್ಸೆ ನೀಡಬೇಕು. ವೈದ್ಯರು ಹೈಪೊಮೆನೊರ್ರೆಹೆಯಾವನ್ನು ಪತ್ತೆ ಮಾಡಿದ ಬಳಿಕ ಅದಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ಆರಂಭಿಸುವರು. ಹಾರ್ಮೋನು ಮಟ್ಟ ಮತ್ತು ರಕ್ತ ಪರೀಕ್ಷೆ ಮೂಲಕ ಇದನ್ನು ಪತ್ತೆ ಮಾಡಬಹುದು. ಗರ್ಭಕೋಶದ ಸ್ಕ್ಯಾನಿಂಗ್ ಕೂಡ ಮಾಡಿಸಬಹುದು. ಇದರೊಂದಿಗೆ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳಾಗಿರುವ ಶುದ್ಧವಾಗಿರುವುದನ್ನು ತಿನ್ನುವುದು, ನಿಯಮಿತವಾಗಿ ವ್ಯಾಯಾಮ ನೈಸರ್ಗಿಕವಾಗಿ ಹಾರ್ಮೋನು ಅಸಮತೋಲನ ತಡೆಯುವುದು. ದಾಲ್ಚಿನಿ, ಪಪ್ಪಾಯಿ, ಅಲೋವೆರಾ, ಎಳ್ಳು ಇತ್ಯಾದಿಗಳ ಸೇವನೆಯಿಂದ ಹಾರ್ಮೋನು ಅಸಮತೋಲನ ತಡೆಯಬಹುದು ಮತ್ತು ಹೈಪೊಮೆನೊರ್ರೆಹೆಯಾಗೆ ಚಿಕಿತ್ಸೆ ನೀಡಬಹುದು ಎಂದು ಅಧ್ಯಯನಗಳು ಹೇಳಿವೆ.

ಮುಟ್ಟಿನ ದಿನಗಳಲ್ಲಿ ಸೆಕ್ಸ್, ಅಪಾಯ ಮೈಮೇಲೆ ಎಳೆದುಕೊಂಡಂತೆ!!

English summary

Is Light Period Flow Unhealthy?

The menstrual flow of most healthy women has to go on for a certain number of days and in certain quantities, on an average. If the period flow is very light or lesser than normal, it could indicate the presence of an ailment known as hypomenorrhea. It has many causes and symptoms. Treatments are also available for this ailment.
Story first published: Wednesday, September 5, 2018, 17:15 [IST]
X
Desktop Bottom Promotion