For Quick Alerts
ALLOW NOTIFICATIONS  
For Daily Alerts

ನೆನಪಿಟ್ಟುಕೊಳ್ಳಿ- ಯಾವತ್ತಿಗೂ 'ನಿಂತು ನೀರು' ಮಾತ್ರ ಕುಡಿಯಬೇಡಿ!

By Hemanth
|

ಮಾನವ ದೇಹದ ಶೇ.75ರಷ್ಟು ಭಾಗದಲ್ಲಿ ನೀರು ತುಂಬಿದೆ ಎಂದು ವೈದ್ಯಕೀಯ ಲೋಕವು ಹೇಳುತ್ತದೆ. ಇದೇ ಕಾರಣದಿಂದಾಗಿ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆಯು ಇರುವುದು. ನೀರು ಇಲ್ಲದೆ ಹೆಚ್ಚು ದಿನ ಜೀವಿಸಲು ಸಾಧ್ಯವಾಗದು. ವೈದ್ಯಕೀಯ ಸಂಶೋಧನೆಯ ಪ್ರಕಾರ ವ್ಯಕ್ತಿಯೊಬ್ಬ ಪ್ರತಿನಿತ್ಯ ಎಂಟು ಲೋಟ ನೀರು ಕುಡಿಯಬೇಕು. ಇದರಿಂದ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದು. ಆದರೆ ನೀರು ಕುಡಿಯುವ ರೀತಿಯಿಂದಲೂ ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ನಿಂತು ನೀರು ಕುಡಿಯುವುದು ಸರಿಯಲ್ಲವೆಂದು ನಮ್ಮ ಹಿರಿಯರು ಕೂಡ ಹೇಳುತ್ತಾ ಬಂದಿದ್ದಾರೆ. ಆದರೆ ನಾವು ಅದನ್ನು ಕಡೆಗಣಿಸಿದ್ದೇವೆ.

Drinking Water

ನೀರು ಕುಡಿದರೆ ಆಯಿತು. ಅದನ್ನು ಯಾವ ಭಂಗಿಯಲ್ಲಿ ಕುಡಿಯುತ್ತೇವೆ ಎನ್ನುವುದು ಯಾಕೆ ಎನ್ನುವ ಪ್ರಶ್ನೆ ಬರಬಹುದು. ನಿಂತುಕೊಂಡು ನೀರು ಕುಡಿದರೆ ಅದರಿಂದ ಅನ್ನನಾಳದ ಕೆಳಗಿನ ಭಾಗಕ್ಕೆ ಹಾನಿಯಾಗಬಹುದು. ಸ್ಪಿಂಕ್ಟರ್ ಎನ್ನುವ ಸ್ನಾಯು ಹೊಟ್ಟೆ ಮತ್ತು ಅನ್ನನಾಳವನ್ನು ಸೇರಿಸುವುದು. ಆದರೆ ಸ್ಪಿಂಕ್ಟರ್ ಚೇತರಿಸಿಕೊಂಡರೂ ಅದಾಗಲೇ ಹಾನಿಯಾಗಿರುವುದು. ಇದನ್ನು ಗ್ಯಾಸ್ಟ್ರೊಸೊಫೆಜಿಲ್ ರಿಫ್ಲಕ್ಸ್ ಡಿಸೀಸ್( ಜಠರ ಹಿಮ್ಮುಖ ಹರಿವು ರೋಗ) ಎಂದು ಕರೆಯಲಾಗುತ್ತದೆ. ಕೇವಲ ಇದು ಮಾತ್ರವಲ್ಲದೆ ಇನ್ನಿತರ ಕೆಲವು ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಬಹುದು.

ಇದರಿಂದ ನೀವು ಕುಳಿತುಕೊಂಡು ನೀರು ಕುಡಿಯಿರಿ. ಯಾಕೆಂದರೆ ಈ ವೇಳೆ ಸ್ನಾಯುಗಳು ಮತ್ತು ನರವ್ಯವಸ್ಥೆಯು ತುಂಬಾ ಆರಾಮವಾಗಿರುವುದು. ಇದರಿಂದ ನರವ್ಯವಸ್ಥೆಯು ಕ್ಷಿಪ್ರವಾಗಿ ನೀರಿನೊಂದಿಗೆ ಆಹಾರ ಜೀರ್ಣಗೊಳಿಸಬೇಕೆಂಬ ಸಂದೇಶ ಕಳುಹಿಸುವುದು. ಇನ್ನು ವಿಜ್ಞಾನವೂ ಕುಳಿತುಕೊಂಡೇ ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಿದೆ. ವಿಜ್ಞಾನ ಹೀಗೆ ಹೇಳಬೇಕಾದರೆ ಇದಕ್ಕೆ ಸೂಕ್ತ ಪುರಾವೆ ಹಾಗೂ ಪ್ರಯೋಗಗಳ ಮೂಲಕ ದೃಢೀಕರಿಸಿಯೇ ಹೇಳಲಾಗಿರುತ್ತದೆ. ಅಂದಿನ ಕಾಲದಿಂದಲೇ ನಾನು ನಿಂತೇ ನೀರು ಕುಡಿಯುತ್ತಿದ್ದೇನೆ, ಗುಂಡುಕಲ್ಲಿನಂತಿದ್ದೇನೆ, ಏನಾಗಿದೆ ನನಗೀಗ ಎಂಬ ಉಢಾಫೆಯ ಮಾತುಗಳನ್ನಾಡುವವರಿಗೆ ವಿಜ್ಞಾನ ಯಾವ ಉತ್ತರ ನೀಡುತ್ತಿದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ....

ಕಿಡ್ನಿಗಳಿಗೆ ಹಾನಿಯಾಗಬಹುದು

ನಿಂತುಕೊಂಡು ನೀರು ಕುಡಿದಾಗ ಕಿಡ್ನಿಯು ನೀರನ್ನು ಸರಿಯಾಗಿ ಸೋಸದೆ ಇರಬಹುದು. ಮೂತ್ರನಾಳಗಳಿಗೆ ಪ್ರವೇಶಿಸುವ ಕಲ್ಮಷವು ರಕ್ತದೊಂದಿಗೆ ಮಿಶ್ರಣವಾಗಬಹುದು. ಇದರಿಂದ ಕಿಡ್ನಿಗೆ ಹಾನಿಯಾಗಬಹುದು. ಇದೇ ರೀತಿ ಮುಂದುವರಿದರೆ ಆಗ ಕಿಡ್ನಿ ವೈಫಲ್ಯ ಉಂಟಾಗಬಹುದು.

ಕೆಲವೊಮ್ಮೆ ಹೊಟ್ಟೆಯ ನೋವಿಗೂ ಕಾರಣವಾಗಬಹುದು!

ನಿಂತೇ ನೀರು ಕುಡಿಯುವ ಮೂಲಕ ರಭಸವಾಗಿ ಧಾವಿಸುವ ನೀರು ಅನ್ನನಾಳ ಹೊಟ್ಟೆಯನ್ನು ಕೂಡುವ ಸ್ಥಳದಲ್ಲಿ (cardiac sphincter) ಕೊಂಚವೇ ಬಾಗಿದಂತಿದ್ದು ಈ ಭಾಗಕ್ಕೆ ಅತಿ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಇದು ಹೊಟ್ಟೆಯಲ್ಲಿರುವ ಆಮ್ಲೀಯ ಜಠರರಸವನ್ನೂ ಗಲಿಬಿಲಿಯಾಗಿಸಬಹುದು. ಹಾಗೂ ಈ ಒತ್ತಡವನ್ನು ಸರಿಪಡಿಸಲು ಇತರ ಸ್ನಾಯುಗಳೂ ಸಂಕುಚಿತಗೊಳ್ಳುವ ಮೂಲಕ ಹೊಟ್ಟೆಯ ಭಾಗದಲ್ಲಿ ಸೆಡೆತವುಂಟಾಬಹುದು. ಕೆಲವೊಮ್ಮೆ ಇದು ನೋವಿಗೂ ಕಾರಣವಾಗಬಹುದು.

ಬಾಯಾರಿಕೆ ತಣಿಯುವುದಿಲ್ಲ

ಬಾಯಾರಿಕೆಯ ಬಳಿಕ ನಿಂತೇ ನೀರು ಕುಡಿಯುವುದರಿಂದ ಬಾಯಾರಿಕೆ ತಣಿಯುವುದಿಲ್ಲ. ಬದಲಿಗೆ ಕುಳಿತು ಕುಡಿಯುವುದರಿಂದ ತಣಿಯುತ್ತದೆ. ಬೇಕಾದರೆ ಪರಾಮರ್ಶಿಸಿ ನೋಡಿ.

ಸಂಧಿವಾತ

ನಿಂತುಕೊಂಡು ನೀರು ಕುಡಿದಾಗ ಉಂಟಾಗುವ ದೊಡ್ಡ ಸಮಸ್ಯೆಯೆಂದರೆ ಅದು ಸಂಧಿವಾತ. ನಿಂತುಕೊಂಡು ನೀರು ಕುಡಿದಾಗ ದೇಹದಲ್ಲಿನ ಇತರ ದ್ರವಗಳಲ್ಲಿ ವ್ಯತ್ಯಯ ಉಂಟಾಗುವುದು. ಇದರಿಂದ ಗಂಟುಗಳಿಗೆ ಸರಿಯಾಗಿ ದ್ರವಾಂಶವು ಹೋಗುವುದಿಲ್ಲ. ಇದರಿಂದ ಸಂಧಿವಾತ ಕಾಡಬಹುದು. ಇದು ತಕ್ಷಣ ಬರಬಹುದು ಅಥವಾ ದೀರ್ಘ ಸಮಯದ ಬಳಿಕ ಕಾಣಿಸಿಕೊಳ್ಳಬಹುದು.

ನರಗಳು ಶಾಂತವಾಗಿರಲ್ಲ

ನಾನು ಕುಳಿತುಕೊಂಡು ನೀರು ಕುಡಿಯುವಾಗ ಪ್ಯಾರಸೈಪಥೆಟಿಕ್ ಸಿಸ್ಟಮ್ ಚಟುವಟಿಕೆಯಲ್ಲಿರುವುದು ಮತ್ತು ಇದರಿಂದಾಗಿ ನರಗಳು ತುಂಬಾ ಶಾಂತವಾಗಿರುವುದು ಮತ್ತು ಜೀರ್ಣಕ್ರಿಯೆಗೆ ಬೇಕಾಗಿರುವ ದ್ರವವನ್ನು ಸರಿಯಾಗಿ ಕಳುಹಿಸುವುದು. ನಿಂತುಕೊಂಡು ಕುಡಿದಾಗ ನರಗಳು ಹೆಚ್ಚಿನ ಒತ್ತಡಕ್ಕೆ ಒಳಗಾಗುವುದು.

ಆಮ್ಲದ ಮಟ್ಟವು ತೆಳುವಾಗುವುದು

ನೀರು ಸ್ವಭಾವದಲ್ಲಿ ಆಮ್ಲೀಯ ಅಥವಾ ಕ್ಷಾರೀಯವಲ್ಲ. ಆದರೆ ಇದು ದೇಹದಲ್ಲಿರುವ ಆಮ್ಲೀಯ ಮಟ್ಟವನ್ನು ತೆಳುವಾಗಿಸುವುದು. ಕುಳಿತುಕೊಂಡು ಕುಡಿದಾಗ ನೀರು ಸಣ್ಣ ಪ್ರಮಾಣದಲ್ಲಿ ಬರುವುದು. ಇದರಿಂದ ದೇಹದಲ್ಲಿನ ಆಮ್ಲೀಯ ಮಟ್ಟವನ್ನು ತೆಳುವಾಗಿಸಲು ನೆರವಾಗುವುದು. ನೀರಿನ ಪ್ರಮಾಣದೊಂದಿಗೆ ಆಮ್ಲದ ಮಟ್ಟವು ಇರುವುದು. ಆದರೆ ನಿಂತುಕೊಂಡು ನೀರು ಕುಡಿದಾಗ ಅದರಿಂದ ಆಗುವ ಹಾನಿಯನ್ನು ಊಹಿಸಲು ಸಾಧ್ಯವಿಲ್ಲ. ಕೊನೆಗೊಂದು ಮಾತು: ಏನೇ ಅವಸರವಿದ್ದರೂ ಸ್ವಲ್ಪ ಆರಾಮವಾಗಿ ಕುಳಿತು ನೀರು ಕುಡಿಯಿರಿ.

ಗುಟುಕು ಗುಟುಕಾಗಿ ಕುಡಿಯಿರಿ....

ನಮ್ಮ ಹಿರಿಯರು ನಂಬಿಕೊಂಡು ಬಂದಿರುವ ನಂಬಿಕೆಯ ಪ್ರಕಾರ ನೀರನ್ನು ಕುಳಿತೇ ಕುಡಿಯಬೇಕು. ಕುರ್ಚಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಿದ್ದರೂ ನಿಂತಲೇ ಕುಕ್ಕರುಗಾಲು ಕುಳಿತು ನೀರು ಕುಡಿದ ಬಳಿಕ ಮೇಲೇಳಬೇಕು. ಅಲ್ಲದೇ ನೀರನ್ನು ಗಟಗಟ ಕುಡಿಯಬಾರದು, ಗುಟುಕು ಗುಟುಕಾಗಿ, ಕೊಂಚ ಕೊಂಚವೇ ಕುಡಿಯಬೇಕು. ದೊಡ್ಡ ಗುಟುಕನ್ನು ಒಮ್ಮೆಲೇ ಹೊಟ್ಟೆಗೆ ಕಳುಹಿಸಿದರೆ ಹೊಟ್ಟೆಯೊಳಗೊಂದು ತ್ಸುನಾಮಿಯೇ ಏಳಬಹುದು.

ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿಯಿರಿ

ನಿಮ್ಮ ನೀರು ಕುಡಿಯುವ ಅಭ್ಯಾಸವನ್ನು ನಿಮ್ಮ ಮೂತ್ರದ ಬಣ್ಣವೇ ಸೂಚಿಸುತ್ತದೆ. ಒಂದು ವೇಳೆ ಇದು ಹೆಚ್ಚೂ ಕಡಿಮೆ ಪಾರದರ್ಶಕವಾಗಿದ್ದರೆ ಉತ್ತಮ. ಗಾಢವಾಗಿದ್ದಷ್ಟೂ ನೀರು ಹೆಚ್ಚು ಕುಡಿಯಬೇಕೆಂದು ಅರ್ಥ. ಉತ್ತಮ ಆರೋಗ್ಯಕ್ಕಾಗಿ ಪ್ರತಿ ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿಯುವುದು ಹಾಗೂ ಪ್ರತಿ ಎರಡು ಗಂಟೆಗಳಿಗೊಮ್ಮೆ ಮೂತ್ರವಿಸರ್ಜಿಸಬೇಕು.

ನಿಂತೇ ನೀರು ಕುಡಿಯುವ ಮೊದಲು....

ಒಂದು ವೇಳೆ ನೀವು ನಿಂತೇ ನೀರು ಕುಡಿಯುವ ಅಭ್ಯಾಸವುಳ್ಳವರಾಗಿದ್ದರೆ ಇದು ನಿಮ್ಮ ಅನ್ನನಾಳದಲ್ಲಿ ಜಲಪಾತದಂತೆ ರಭಸದಲ್ಲಿ ಇಳಿಯುತ್ತದೆ ಹಾಗೂ ಹೊಟ್ಟೆಯ ತಳಭಾಗಕ್ಕೆ ಕೊಂಚ ಒತ್ತಡವನ್ನು ಹೇರುತ್ತದೆ. ಈ ಒತ್ತಡ ಹೊಟ್ಟೆ ಮತ್ತು ಸುತ್ತಮುತ್ತಲ ಅಂಗಗಳಿಗೆ ಘಾಸಿಯುಂಟುಮಾಡಬಹುದು.

ನೀರು ಕುಡಿಯುವ ಸರಿಯಾದ ವಿಧಾನ

ಟೀ ಕುಡಿಯುವ ಮುನ್ನ ನೀರು ಕುಡಿಯುವುದು. ಕಾಫಿ ಟೀ ಮೊದಲಾದ ಬಿಸಿಯಾದ ಪಾನೀಯಗಳು ಕೊಂಚ ಆಮ್ಲೀಯವಾಗಿರುತ್ತದೆ. ಅಂದರೆ ಇವುಗಳ ಪಿಎಚ್ ಮಟ್ಟ 5 ಮತ್ತು 6 ರ ನಡುವೆ ಇರುತ್ತದೆ. ಇದರಿಂದ ಜೀರ್ಣರಸಗಳ ಆಮ್ಲೀಯತೆ ಕೊಂಚ ಹೆಚ್ಚುತ್ತದೆ ಹಾಗೂ ಹೊಟ್ಟೆಯಲ್ಲಿ ಮತ್ತು ಕರುಳುಗಳಲ್ಲಿ ಹುಣ್ಣು (ಅಲ್ಸರ್) ಆಗುವ ಸಾಧ್ಯತೆ ಇದೆ. ಇದು ಕ್ಯಾನ್ಸರಿಗೂ ತಿರುಗಬಹುದು. ಆದ್ದರಿಂದ ಟೀ ಕಾಫಿ ಕುಡಿಯುವ ಮುನ್ನ ಒಂದು ಲೋಟ ನೀರು ಕುಡಿಯುವುದರಿಂದ ಜೀರ್ಣರಸಗಳ ಆಮ್ಲೀಯತೆ ಹೆಚ್ಚುವುದನ್ನು ಕಡಿಮೆಗೊಳಿಸಬಹುದು.

ಸ್ನಾನಕ್ಕೂ ಮುನ್ನ ನೀರು ಕುಡಿಯುವುದು

ಸ್ನಾನಕ್ಕೆ ಹೋಗುವ ಮುನ್ನ ಒಂದು ಲೋಟ ನೀರು ಕುಡಿಯುವುದು ಅವಶ್ಯ. ಏಕೆಂದರೆ ಈ ಮೂಲಕ ನರಗಳು ಸಡಿಲಗೊಂಡು ರಕ್ತದೊತ್ತಡ ಕಡಿಮೆಯಾಗಲು ಸಾಧ್ಯವಾಗುತ್ತದೆ. ಆದರೆ ಒಂದು ಎಚ್ಚರಿಕೆಯ ಮಾತೆಂದರೆ ಬಿಸಿನೀರಿನ ಸ್ನಾನ ಮಾಡುವವರಿದ್ದರೆ ಇದಕ್ಕೂ ಮುನ್ನ ತಣ್ಣೀರು ಕುಡಿಯಬಾರದು. ಆರೋಗ್ಯಕ್ಕೆ ಬಿಸಿನೀರಿಗಿಂತಲೂ ಉಗುರುಬೆಚ್ಚನೆಯ ಅಥವಾ ತಣ್ಣೀರಿನ ಸ್ನಾನವೇ ಅತ್ಯುತ್ತಮ.

ಊಟಕ್ಕೂ ಮುನ್ನ ನೀರು ಕುಡಿಯುವುದು

ಊಟದ ಸಮಯದಲ್ಲಿ ನೀರು ಯಾವಾಗ ಕುಡಿಯಬೇಕೆಂಬುದು ಮುಖ್ಯವಾಗಿದೆ. ತಜ್ಞರ ಪ್ರಕಾರ ಊಟಕ್ಕೂ ಮುನ್ನ ಒಂದು ಲೋಟ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಆದರೆ ಊಟಕ್ಕೂ ಸುಮಾರು ಅರ್ಧ ಗಂಟೆಗೂ ಮುನ್ನ ನೀರು ಕುಡಿಯುವುದು ಅಗತ್ಯ. ಬಳಿಕ ಊಟದ ನಡುವೆ ಹಾಗೂ ಊಟದ ಬಳಿಕ ತಕ್ಷಣವೇ ನೀರು ಕುಡಿಯಬಾರದು. ಬದಲಿಗೆ ಊಟ ಮುಗಿಸಿದ ಒಂದು ಘಂಟೆಯ ಬಳಿಕ ಇನ್ನೊಂದು ಲೋಟ ನೀರು ಕುಡಿಯುವುದರಿಂದ ಹೊಟ್ಟೆಯಲ್ಲಿ ಜೀರ್ಣವಾಗಿದ್ದ ಆಹಾರವನ್ನು ಕರುಳುಗಳು ಹೀರಿಕೊಳ್ಳಲು ಹೆಚ್ಚಿನ ಸಹಾಯ ದೊರಕುತ್ತದೆ.

English summary

Is Drinking Water While Standing Good For You?

For as long as humans have existed, water has been an intrinsic requirement for our survival. It is so vital that it is considered to do no harm in almost all situations. Almost 75% of our body is made up of water, in fact, experts recommend that we must consume at least 8 glasses of water every day. It is imperative for the normal functioning of our body and its benefits are insurmountable. So, water is water, right? What could possibly go wrong with drinking water in the "incorrect" position? Apparently, a lot!
X
Desktop Bottom Promotion