For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಯಾರಿಗಾದರೂ ಜ್ವರವಿದ್ದರೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

|

ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಆಗ ಮನೆಯಲ್ಲಿರುವಂತಹ ಪ್ರತಿಯೊಬ್ಬರಲ್ಲೂ ಚಿಂತೆ ಕಾಡುವುದು. ಅದರಲ್ಲೂ ಹೆಚ್ಚಿನವರು ತುಂಬಾ ದುಃಖದಿಂದ ಇರುವರು. ಭಾವನಾತ್ಮಕವಾಗಿ ಇದು ಸರಿಯಾದ ವಿಚಾರ. ಇದರೊಂದಿಗೆ ವೈದ್ಯಕೀಯವಾಗಿ ನೋಡಿದರೆ ಕೆಲವೊಂದು ಸಮಸ್ಯೆಗಳು ಮನೆಯಲ್ಲಿ ಆರೋಗ್ಯದಿಂದ ಇರುವವರಿಗೂ ಆಗಬಹುದು. ಅದೇನೆಂದರೆ ಮನೆಯಲ್ಲಿ ಇರುವಂತಹ ಅನಾರೋಗ್ಯ ವ್ಯಕ್ತಿಯಿಂದಾಗಿ ಬೇರೆಯವರಿಗೂ ಸೋಂಕು ತಗುಲಬಹುದು. ಇದರಿಂದ ಮುನ್ನೆಚ್ಚರಿಕೆ ವಹಿಸುವುದು ಅತೀ ಅಗತ್ಯವಾಗುವುದು.

If someone in your house has flu, follow these instructions

ಯಾಕೆಂದರೆ ಕೀಟಾಣುಗಳು ಹಾಗೂ ಬ್ಯಾಕ್ಟೀರಿಯಾವು ಬೇಗನೆ ಹರಡುವುದು. ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಕೆಲವೊಂದು ಸೋಂಕುಗಳು ಗಾಳಿಯಲ್ಲಿ ಹರಡುವಂತಹ ಸಾಧ್ಯತೆಗಳು ಇವೆ. ಹೆಚ್ಚಾಗಿ ನಾವು ಪ್ರಯಾಣಿಸುವಂತಹ ಬಸ್, ರೈಲು ಹಾಗೂ ಲಿಫ್ಟ್ ಗಳಲ್ಲಿ ಕೀಟಾಣುಗಳು ಹಾಗೂ ಬ್ಯಾಕ್ಟೀರಿಯಾಗಲು ಪ್ರಸಾರವಾಗುವುದು ಎಂದು ತಿಳಿದಿರುತ್ತೇವೆ. ಆದರೆ ಮನೆಯಲ್ಲಿ ಇವುಗಳು ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬುವ ಸಾಧ್ಯತೆ ಇದೆ. ಕೆಲವು ಜ್ವರ ವೈರಸ್ ಗಳು ಗಾಳಿಯಲ್ಲಿ ಕೂಡ ಹಬ್ಬುವುದು. ಇದು ತುಂಬಾ ಅಪಾಯಕಾರಿ ಸಂಕೇತ. ಇಂತಹ ಸಮಯದಲ್ಲಿ ನಾವು ಮುನ್ನೆಚ್ಚರಿಕೆ ವಹಿಸದರೆ ಇದ್ದರೆ ಅಗ ಮನೆಯಲ್ಲಿನ ಪ್ರತಿಯೊಬ್ಬರು ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ. ನಿಮ್ಮ ಮನೆಯಲ್ಲಿ ಅನಾರೋಗ್ಯದಿಂದ ಇರುವ ವ್ಯಕ್ತಿಗೆ ನೀವು ಉಪಚಾರ ಮಾಡುತ್ತಲಿದ್ದರೆ ಅಥವಾ ನೀವೇ ಅನಾರೋಗ್ಯಕ್ಕೆ ಒಳಗಾಗಿದ್ದರೆ ಆಗ ನೀವು ಈ ವಸ್ತುಗಳನ್ನು ತುಂಬಾ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿದೆ.

ಬೆಡ್ ಶೀಟ್ ಗಳು

ಬೆಡ್ ಶೀಟ್ ಗಳು

ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಯು ಚೇತರಿಸಿಕೊಂಡ ಬಳಿಕ ಬೆಡ್ ಶೀಟ್ ನ್ನು ಒಗೆಯುವುದು ಅತೀ ಅಗತ್ಯವಾಗಿರುವುದು. ಇದರಲ್ಲಿ ನೂರಾರು ರೀತಿಯ ಕೀಟಾಣುಗಳು ಇರಬಹುದು. ಇದರಿಂದಾಗಿ ನಿಮ್ಮ ಆರೋಗ್ಯವನ್ನು ಅಪಾಯಕ್ಕೆ ದೂಡಿದಂತೆ ಆಗಬಹುದು. ಇದರಿಂದ ಮನೆಯಲ್ಲಿ ನೀವು ಅಥವಾ ಬೇರೆ ಯಾರೇ ಅನಾರೋಗ್ಯಕ್ಕೆ ಒಳಗಾಗಿದ್ದರೆ ಆಗ ನೀವು ಬೆಡ್ ಶೀಟ್ ನ್ನು ಒಗೆಯಲು ಹಿಂದೇಟು ಹಾಕಬೇಡಿ.

ಬಾಗಿಲಿನ ಹಿಡಿ ಮತ್ತು ಸ್ವಿಚ್ ಗಳು

ಬಾಗಿಲಿನ ಹಿಡಿ ಮತ್ತು ಸ್ವಿಚ್ ಗಳು

ಪ್ರತಿನಿತ್ಯವು ನಾವು ಬಳಕೆ ಮಾಡುವಂತಹ ಸಾಮಗ್ರಿಗಳಲ್ಲಿ ಇವುಗಳು ಪ್ರಮುಖವಾಗಿದೆ. ಯಾಕೆಂದರೆ ನಾವು ಇವುಗಳನ್ನು ದಿನದಲ್ಲಿ ಹಲವಾರು ಬಾರಿ ಬಳಕೆ ಮಾಡುತ್ತೇವೆ. ಅನಾರೋಗ್ಯಕ್ಕೆ ಒಳಗಾಗಿರುವ ವ್ಯಕ್ತಿಯು ಇದನ್ನು ಮುಟ್ಟಿದರೆ ಅದರಿಂದಲೂ ಸೋಂಕು ಬರಬಹುದು. ಸ್ವಿಚ್ ಮತ್ತು ಬಾಗಿಲಿನ ಹಿಡಿ ಬಗ್ಗೆ ನಾವು ಆಲೋಚನೆ ಮಾಡುತ್ತೇವೆ. ಆದರೆ ನಿಜ ಏನೆಂದರೆ ಅನಾರೋಗ್ಯ ಪೀಡಿತ ವ್ಯಕ್ತಿಯ ಸಂಪರ್ಕಕ್ಕೆ ಬರುವಂತಹ ಪ್ರತಿಯೊಂದು ವಸ್ತುವಿನಲ್ಲೂ ಕೀಟಾಣುಗಳು ನೆಲೆ ನಿಲ್ಲುವುದು ಮತ್ತು ಇದರಿಂದ ಅವುಗಳು ಸುಲಭವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ಇದಕ್ಕೆ ನೀವು ಮಾಡಬೇಕಾದ ಕೆಲಸವೆಂದರೆ ನೀವು ಒಳ್ಳೆಯ ಗುಣಮಟ್ಟದ ಕ್ಲೀನರ್ ನ್ನು ಬಳಸಿಕೊಂಡು ಇವುಗಳನ್ನು ನಾಶ ಮಾಡಬೇಕು. ಇದರಿಂದ ಅವುಗಳು ಹಬ್ಬುವಂತಹ ಸಾಧ್ಯತೆಯು ಕಡಿಮೆ ಆಗುವುದು.

Most Read: ಮಧ್ಯಾಹ್ನದ ಊಟವಾದ ತಕ್ಷಣವೇ ಸರ್ವಥಾ ಮಾಡಬಾರದ 7 ಕಾರ್ಯಗಳು

ಟವೆಲ್

ಟವೆಲ್

ಗಾಳಿಯಲ್ಲಿ ಹರಡುವಂತಹ ಕೀಟಾಣುಗಳು ಮತ್ತು ವೈರಸ್ ಗಳು ಸಾಮಾನ್ಯವಾಗಿ ನಾವು ಬಳಸುವಂತಹ ಟವೆಲ್ ಗಳನ್ನು ವಾಸಸ್ಥಾನವನ್ನಾಗಿ ಮಾಡಿಕೊಳ್ಳುವುದು ಹೆಚ್ಚು. ಟವೆಲ್ ಯಾವಾಗಲೂ ಒದ್ದೆ ಆಗಿರುವುದು ಮತ್ತು ಇದರಿಂದ ಕೀಟಾಣುಗಳು ಮತ್ತು ವೈರಸ್ ಗಳಿಗೆ ಒಳ್ಳೆಯ ವಾಸಸ್ಥಾನವಾಗಿದೆ. ಇದರಿಂದಾಗಿ ನಿಮಗೆ ಸಾಮಾನ್ಯ ಶೀತ ಅಥವಾ ಕೆಮ್ಮು ಇದ್ದರೂ ಟವೆಲ್ ನ್ನು ಮಾತ್ರ ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು ಹೋಗಬೇಡಿ. ಇದರಿಂದ ನಿಮ್ಮ ಕೆಮ್ಮು ಮತ್ತು ಶೀತವು ಬೇರೆಯವರಿಗೂ ಹಬ್ಬಬಹುದು.

ಲೋಟ ಮತ್ತು ಬಟ್ಟಲುಗಳು

ಲೋಟ ಮತ್ತು ಬಟ್ಟಲುಗಳು

ನೀವು ಮನೆಯಲ್ಲಿ ಯಾವುದೇ ಅನಾರೋಗ್ಯ ಪೀಡಿತ ವ್ಯಕ್ತಿಗೆ ಉಪಚಾರ ಮಾಡುತ್ತಾ ಇದ್ದರೆ ಆಗ ನೀವು ತುಂಬಾ ಎಚ್ಚರಿಕೆ ವಹಿಸಿಕೊಳ್ಳುವುದು ಅತೀ ಅಗತ್ಯ ಆಗಿರುವುದು. ಅನಾರೋಗ್ಯ ಪೀಡಿತ ವ್ಯಕ್ತಿಯು ಕುಡಿದಿರುವ ಲೋಟದಲ್ಲಿ ಮನೆಯ ಬೇರೆ ಸದಸ್ಯರು ಕೂಡ ಕುಡಿಯುವ ಕಾರಣದಿಂದ ಸೋಂಕು ಹರಡಬಹುದು ಮತ್ತು ಅದೇ ರೀತಿಯಾಗಿ ಅನಾರೋಗ್ಯ ಪೀಡಿತ ವ್ಯಕ್ತಿಯು ಕುಡಿದ ಲೋಟವನ್ನು ಸಿಂಕ್ ನಲ್ಲಿ ತೊಳೆಯುವುದರ ಮೂಲಕವು ಇದು ಹಬ್ಬ ಬಹುದು. ಇದಕ್ಕಾಗಿ ನೀವು ಅನಾರೋಗ್ಯ ಪೀಡಿತ ವ್ಯಕ್ತಿ ಕುಡಿದ ಲೋಟವನ್ನು ತೊಳೆದ ಬಳಿಕ ಸರಿಯಾಗಿ ಕೈ ತೊಳೆಯಿರಿ ಮತ್ತು ಹ್ಯಾಂಡ್ ವಾಶ್ ಬಳಸಿಕೊಂಡು ಸುಮಾರು 10-20 ಸೆಕೆಂಡು ಕಾಲ ಕೈ ತೊಳೆದರೆ ಕೀಟಾಣುಗಳು ನಾಶ ಆಗುವುದು.

ಪೆನ್ ಮತ್ತು ಪೆನ್ಸಿಲ್ ಗಳು

ಪೆನ್ ಮತ್ತು ಪೆನ್ಸಿಲ್ ಗಳು

ಈ ಒಂದು ತಪ್ಪನ್ನು ನಾವು ಎಲ್ಲರೂ ಮಾಡುತ್ತೇವೆ. ಯಾವುದೇ ರೀತಿಯ ವಸ್ತುವನ್ನು ಅನಾರೋಗ್ಯ ಪೀಡಿತ ವ್ಯಕ್ತಿಯು ಮುಟ್ಟಿದರೆ ಆಗ ಅಲ್ಲಿ ಖಂಡಿತವಾಗಿಯೂ ಎಚ್ಚರಿಕೆಯ ಸಂಕೇತವಿದೆ. ಶೀತ ಮತ್ತು ಜ್ವರಕ್ಕೆ ಕಾರಣವಾಗುವಂತಹ ಕೆಲವೊಂದು ವೈರಸ್ ಗಳು ತುಂಬಾ ಕಠಿಣ, ಸಣ್ಣ ಮೇಲ್ಮೈಗಳಾಗಿರುವಂತಹ ಪೆನ್, ಪೆನ್ಸಿಲ್ ಗಳಲ್ಲಿ ಉಳಿದುಕೊಳ್ಳಬಹುದು. ನೀವು ಕೈ ತೊಳೆಯದೆ ಆಗ ನೀವು ಇವುಗಳನ್ನು ಮುಟ್ಟುವುದನ್ನು ಕಡಿಮೆ ಮಾಡಬೇಕು.

Most Read: ಮಕ್ಕಳನ್ನು ಕಾಡುವ ಜ್ವರಕ್ಕೆ ನೈಸರ್ಗಿಕ ಚಿಕಿತ್ಸೆಯೇ ಸಾಕು

ರಿಮೋಟ್ ಕಂಟ್ರೋಲ್

ರಿಮೋಟ್ ಕಂಟ್ರೋಲ್

ನಾವು ಅನಾರೋಗ್ಯದಿಂದ ಬಳಲುತ್ತಾ ಇರುವಾಗ ನಮಗೆ ಮನರಂಜನೆ ನೀಡುವುದು ಎಂದರೆ ಅದು ಟಿ.ವಿ ಮಾತ್ರ. ಆದರೆ ರಿಮೋಟ್ ನ್ನು ಮುಟ್ಟುವಾಗ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ರಿಮೋಟ್ ನಲ್ಲಿ ಕೂಡ ಕೀಟಾಣುಗಳು ಮತ್ತು ವೈರಸ್ ಜೀವಂತವಾಗಿರುವುದು. ನಿಮಗೆ ತಿಳಿಯದೆ ಇರುವಂತಹ ಹಲವಾರು ಮಂದಿಯನ್ನು ನೀವು ಅನಾರೋಗ್ಯಕ್ಕೆ ಒಳಗಾಗಿಸಬಹುದು. ಇದರಿಂದಾಗಿ ಪ್ರತಿಯೊಬ್ಬರು ಬಳಕೆ ಮಾಡುವಂತಹ ರಿಮೋಟ್ ಕಂಟ್ರೋಲ್ ಮತ್ತು ಬೇರೆ ಸಾಮಗ್ರಿಗಳನ್ನು ನಿಯಮಿತವಾಗಿ ಶುಚಿಗೊಳಿಸುತ್ತಲೇ ಇರುಬೇಕು. ರಿಮೋಟ್ ಕಂಟ್ರೋಲ್ ನ ಸಣ್ಣ ಸಣ್ಣ ಭಾಗವನ್ನು ಕೂಡ ಶುಚಿ ಮಾಡಿ.

Most Read: ಮಧ್ಯಾಹ್ನದ ಊಟವಾದ ತಕ್ಷಣವೇ ಸರ್ವಥಾ ಮಾಡಬಾರದ 7 ಕಾರ್ಯಗಳು

ಕಸದ ಡಬ್ಬ

ಕಸದ ಡಬ್ಬ

ನೀವು ಜ್ವರ ಅಥವಾ ಶೀತದಿಂದ ಬಳಲುತ್ತಾ ಇರುವಂತಹ ಬಳಸುವಂತಹ ಟಿಶ್ಯೂಗಳನ್ನು ಕಸದ ಡಬ್ಬಕ್ಕೆ ಹಾಕುವಿರಿ. ನೀವು ಇದನ್ನು ಹೊರಗೆ ಎಸೆದುಬಂದ ಬಳಿಕ ಅದನ್ನು ಸರಿಯಾಗಿ ತೊಳೆಯದೆ ಇದ್ದರೆ ಆಗ ಸೋಂಕು ತಗಲುವಂತಹ ಸಾಧ್ಯತೆಯು ಶೇ. 40ರಷ್ಟು ಇರುವುದು. ಇದರಿಂದ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು.

ನೀರಿನ ನಲ್ಲಿಗಳು

ನೀರಿನ ನಲ್ಲಿಗಳು

ಮನೆಯಲ್ಲಿರುವಂತಹ ಸ್ವಿಚ್ ಗಳಂತೆ ನಲ್ಲಿಗಳನ್ನು ಕೂಡ ಅನಾರೋಗ್ಯ ಪೀಡಿತ ವ್ಯಕ್ತಿಯು ಪದೇ ಪದೇ ಮುಟ್ಟಬಹುದು. ಅವರು ಕೈಗಳನ್ನು ತೊಳೆದುಕೊಂಡರೂ ಇದರಲ್ಲಿ ಕೀಟಾಣುಗಳು ನೆಲೆ ನಿಲ್ಲುವುದು. ಇದಕ್ಕೆ ಒಳ್ಳೆಯ ಉಪಾಯವೆಂದರೆ ನೀವು ಬಳಸುವಂತಹ ನಲ್ಲಿಯ ಬದಿಯಲ್ಲಿ ಸ್ಯಾನಿಟರಿ ವೈಪ್ಸ್ ನ್ನು ಇಟ್ಟುಕೊಂಡರೆ ಆಗ ಕೀಟಾಣುಗಳು ಹಬ್ಬುವುದು ತಪ್ಪುತ್ತದೆ.

ಟೂಥ್ ಬ್ರಶ್ ಇಡುವ ಜಾಗ

ಟೂಥ್ ಬ್ರಶ್ ಇಡುವ ಜಾಗ

ಮನೆಯಲ್ಲಿನ ಪ್ರತಿಯೊಬ್ಬರು ಹೆಚ್ಚಾಗಿ ಒಂದೇ ಜಾಗದಲ್ಲಿ ಟೂಥ್ ಬ್ರಷ್ ನ್ನು ಇಡುವರು. ಆದರೆ ಇದರಲ್ಲಿ ಮನೆಯಲ್ಲಿರುವ ಅನಾರೋಗ್ಯ ಪೀಡಿತ ವ್ಯಕ್ತಿಯು ಸೇರಿರುವ ಕಾರಣದಿಂದ ಟೂಥ್ ಬ್ರಷ್ ಮೂಲಕವಾಗಿ ಕೀಟಾಣುಗಳು ಹಾಗೂ ವೈರಸ್ ಗಳು ಬೇರೆಯವರಿಗೆ ಹಬ್ಬುವಂತೆ ಸಾಧ್ಯತೆಯು ಹೆಚ್ಚಾಗಿರುವುದು. ಅನಾರೋಗ್ಯ ಪೀಡಿತ ವ್ಯಕ್ತಿಯ ಬ್ರಷ್ ನ ಸನಿಹದಲ್ಲೇ ಇರುವಂತಹ ಬೇರೆಯವರ ಬ್ರಷ್ ಗಳಿಗೆ ಕೀಟಾಣುಗಳು ಹಾಗೂ ವೈರಸ್ ಸುಲಭವಾಗಿ ಹೋಗಬಹುದು. ಇದರಿಂದಾಗಿ ನೀವು ಯಾವಾಗಲೂ ಹಲ್ಲುಜ್ಜುವ ಬ್ರಷ್ ನ್ನು ಪ್ರತ್ಯೇಕವಾಗಿ ಇಡಲು ಪ್ರಯತ್ನಿಸಿ. ಯಾಕೆಂದರೆ ಕೆಲವೊಂದು ಅನಾರೋಗ್ಯಗಳು ಅಷ್ಟು ಬೇಗನೆ ನಿವಾರಣೆಯಾಗದು.

English summary

If someone in your house has flu, follow these instructions

If someone in your house has flu, follow these cleaning instructions to stay safe Our home is the place we all need when we fall sick but for people who aren’t sick, it can actually be a place where infections spread. You may worry about catching germs in a train or an elevator but your own home could put you at risk. If you are nursing a sick patient in your home or sick yourself, you should definitely be giving these household items a good clean if you want to avoid catching any infection!
Story first published: Saturday, December 22, 2018, 15:18 [IST]
X
Desktop Bottom Promotion