For Quick Alerts
ALLOW NOTIFICATIONS  
For Daily Alerts

ದಿನದ ಹೆಚ್ಚಿನ ಹೊತ್ತು ಕುಳಿತೇ ಇದ್ದರೆ ಖತರ್ನಾಕ್ ಕಾಯಿಲೆ ಬರಬಹುದು!

|

ಇಂದಿನ ದಿನಗಳಲ್ಲಿ ಲಭ್ಯವಿರುವ ಹೆಚ್ಚಿನ ಉದ್ಯೋಗಗಳು ಕುರ್ಚಿಯಲ್ಲಿ ಕುಳಿತೇ ನಿರ್ವಹಿಸುವಂತದ್ದಾಗಿವೆ. ಈ ಲೇಖನವನ್ನು ಓದುತ್ತಿರುವ ವೇಳೆಯಲ್ಲಿಯೂ ನೀವು ಮನೆಯಲ್ಲಿ ಅಥವಾ ಕಛೇರಿಯ ಕುರ್ಚಿಯಲ್ಲಿ ಕುಳಿತೇ ಇದ್ದಿರಬಹುದು. ಮನರಂಜನೆಗಾಗಿ ವೀಕ್ಷಿಸುವ ಟೀವಿಯನ್ನೂ ಕುಳಿತೇ ವೀಕ್ಷಿಸುವುದು, ಪ್ರಯಾಣದ ಅವಧಿಯಲ್ಲಿ ಕಾರು, ಬಸ್ಸುಗಳಲ್ಲಿ ಕುಳಿತೇ ಪ್ರಯಾಣಿಸುವುದು, ಊಟದ ಸಮಯ, ಓದುವ ಸಮಯ, ಗೆಳೆಯರೊಂದಿಗೆ, ಕುಟುಂಬದವರೊಂದಿಗೆ ಹರಟುವ ಮೊದಲಾದ ಹತ್ತು ಹಲವು ಕಾರ್ಯಗಳೆಲ್ಲಾ ಕುರ್ಚಿಯಲ್ಲಿ ಕುಳಿತೇ ನಡೆಯುತ್ತವೆ.

ನಮ್ಮ ದೇಹಗಳು ದಿನವಿಡೀ ಕುಳಿತು ಕಳೆಯುವುದಕ್ಕಾಗಿ ವಿನ್ಯಾಸಗೊಳಿಸಲಾಗಿಲ್ಲ, ಬದಲಿಗೆ ಹಲವು ಚಟುವಟಿಕೆಗಳಲ್ಲಿ ಮಗ್ನವಾಗಿರುವಂತೆ ನಿರ್ಮಿಸಲಾಗಿದೆ. ಹಾಗಾಗಿ ದಿನವಿಡೀ ಕುಳಿತೇ ಇದ್ದರೆ ಇದು ನಿಸರ್ಗನಿಯಮಕ್ಕೆ ವಿರುದ್ಧವಾಗಿದ್ದು ಆರೋಗ್ಯವನ್ನು ಬಾಧಿಸಬಹುದು. ಅಮೇರಿಕನ್ ಕ್ಯಾನ್ಸರ್ ಸೊಸೈಟಿ ನಡೆಸಿದ ಒಂದು ಸಂಶೋಧನೆಯ ಬಳಿಕ ಕಂಡುಕೊಂಡ ಒಂದು ಅಂಶದ ಪ್ರಕಾರ ದಿನದಲ್ಲಿ ಆರು ಘಂಟೆಗೂ ಹೆಚ್ಚಿನ ಕಾಲ ಕುಳಿತೇ ಇರುವ ವ್ಯಕ್ತಿಗಳು ದಿನಕ್ಕೆ ಮೂರು ಅಥವಾ ಕಡಿಮೆ ಘಂಟೆಗಳ ಕಾಲ ಕುಳಿತುಕೊಳ್ಳುವ ವ್ಯಕ್ತಿಗಳಿಗಿಂತಲೂ ಶೀಘ್ರವಾಗಿ ಸಾವು ಪಡೆಯುವ ಸಾಧ್ಯತೆ 19 ಶೇಖಡಾ ಹೆಚ್ಚುತ್ತದೆ.

ಈ ಸಂಶೋಧನೆಯಲ್ಲಿ ಒಟ್ಟು 128,000 ಯಾವುದೇ ಕಾಯಿಲೆ ಇಲ್ಲದ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರ ಆರೋಗ್ಯದ ಮಾಹಿತಿಯನ್ನು ಕಲೆಹಾಕಲಾಗಿತ್ತು. ಆದರೆ ಇಪ್ಪತ್ತೊಂದು ವರ್ಷದ ಬಳಿಕ, ಇವರಲ್ಲಿ 49,000 ಜನರು ಸಾವನ್ನಪ್ಪಿದ್ದರು. ದಿನದ ಹೆಚ್ಚಿನ ಹೊತ್ತು ಕುಳಿತೇ ಇದ್ದರೆ ಯಾವ ಅಪಾಯಗಳ ಸಾಧ್ಯತೆ ಹೆಚ್ಚುತ್ತದೆ? ದಿನವಿಡೀ ಕುಳಿತೇ ಇರುವುದು ಕೆಟ್ಟದೇ? ಹೌದು, ಹೆಚ್ಚಿನ ಹೊತ್ತು ಕುಳಿತೇ ಇದ್ದರೆ ಹೃದಯದ ಕಾಯಿಲೆ, ಸ್ತಂಭನ, ಮಧುಮೇಹ, ಮೂತ್ರಪಿಂಡದ ಕಾಯಿಲೆ, ಶ್ವಾಸಕೋಶದ ಕಾಯಿಲೆ, ಯಕೃತ್ ನ ಕಾಯಿಲೆ, ನರದೌರ್ಬಲ್ಯ ಹಾಗೂ ಸ್ನಾಯು ಮತ್ತು ಮೂಳೆಗಳ ಆರೋಗ್ಯ ಕುಂಠಿತಗೊಳ್ಳುವುದು ಮೊದಲಾದವು ಎದುರಾಗುತ್ತವೆ.

ಈ ಮೂಲಕ ಸ್ಥೂಲಕಾಯ, ಅಧಿಕ ರಕ್ತದೊತ್ತಡ, ಅಧಿಕ ರಕ್ತದ ಸಕ್ಕರೆಯ ಮಟ್ಟ, ಅಧಿಕ ಕೊಲೆಸ್ಟ್ರಾಲ್ ಸಹಾ ಎದುರಾಗಬಹುದು. ಏಕೆಂದರೆ ಕುಳಿತಿದ್ದ ಸಮಯದಲ್ಲಿ ದೇಹ ಕಡಿಮೆ ಶಕ್ತಿಯನ್ನು ವ್ಯಯಿಸುತ್ತದೆ ಹಾಗೂ ಈ ಮೂಲಕ ಬಳಕೆಯಾಗಿ ಹೋಗಬೇಕಾಗಿದ್ದ ಶಕ್ತಿ ಬಳಕೆಗೊಳ್ಳದೇ ಕೊಬ್ಬಿನ ರೂಪದಲ್ಲಿ ಸಂಗ್ರಹಗೊಳ್ಳುತ್ತದೆ ಹಾಗೂ ಹಲವಾರು ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ಅಲ್ಲದೇ ಹೆಚ್ಚಿನ ಹೊತ್ತು ಕುಳಿತೇ ಇದ್ದರೆ ಇದು ಕ್ಯಾನ್ಸರ್ ಗೂ ಕಾರಣವಾಗಬಹುದು. ಅಧ್ಯಯನದ ಪ್ರಕಾರ ದೀರ್ಘ ಕಾಲದವರೆಗೆ ಕುಳಿತೇ ಇರುವುದರಿಂದ ಪರಿಧಮನಿಯ ಕಾಲ್ಸಿಯಮ್ ಗೆ ಕಾರಣವಾಗಬಹುದು. ಇದರಿಂದ ಅಪಧಮನಿಯ ಕಾಯಿಲೆ ಕಾಣಿಸಿಕೊಳ್ಳಬಹುದು. ದೀರ್ಘ ಕಾಲ ಕುಳಿತೇ ಇರುವುದರಿಂದ ಹಾರ್ಮೋನುಗಳು ಹಾಗೂ ಕಿಣ್ವಗಳು ಬಿಡುಗಡೆಯಾಗಿ ಅಪಧಮನಿಗಳಲ್ಲಿ ಕ್ಯಾಲ್ಸಿಯಮ್ ಶೇಖರಣೆ ಮಾಡುತ್ತದೆ. ಇದರಿಂದಾಗಿ ನೆತ್ತರುನಾಳದ ಗಡಸು ಉಂಟಾಗುವ ಅಪಾಯವು ಹೆಚ್ಚಾಗುತ್ತದೆ. ಒಂದು ವೇಳೆ ಕುಳಿತೇ ಇರುವುದು ಅನಿವಾರ್ಯವಾಗಿದ್ದರೆ ಹೀಗೆ ಮಾಡಿ...

ಶರೀರವನ್ನು ಸಾಧ್ಯವಾದಷ್ಟು ಸೆಳೆತಗೊಳಿಸಿ, ಎಡಬಲಕ್ಕೆ ಹೊರಳಿಸಿ

ಶರೀರವನ್ನು ಸಾಧ್ಯವಾದಷ್ಟು ಸೆಳೆತಗೊಳಿಸಿ, ಎಡಬಲಕ್ಕೆ ಹೊರಳಿಸಿ

ದಿನಕ್ಕೆ ಕನಿಷ್ಟ ಹತ್ತು ನಿಮಿಷಗಳಾದರೂ ಸರಿ, ಶರೀರವನ್ನು ಸೆಳೆತಕ್ಕೊಳಗಾಗಿಸುವುದು, ಬಾಗುವುದು ಇತ್ಯಾದಿಗಳನ್ನು ದಿನದಲ್ಲಿ ಕೆಲವಾರು ಬಾರಿಯಾದರೂ ನಿರ್ವಹಿಸಬೇಕು. ಇದರಿಂದ ಸ್ನಾಯುಗಳು ಸೆಡೆತಕ್ಕೊಳಗಾಗುವುದರಿಂದ ತಡೆಯಲ್ಪಡುತ್ತವೆ. ದಿನದಲ್ಲಿ ಕನಿಷ್ಟ ಆರು ಬಾರಿಯಾದರೂ ಶರೀರವನ್ನು ಸೆಳೆತಕ್ಕೊಳಪಡಿಸಿ ಈ ಕಾಯಿಲೆ ಆವರಿಸುವುದರಿಂದ ತಪ್ಪಿಸಿಕೊಳ್ಳಬಹುದು.

ಮಧ್ಯಾಹ್ನದ ಹೊತ್ತಿನ ವ್ಯಾಯಾಮವನ್ನು ನಿರ್ವಹಿಸಿ

ಮಧ್ಯಾಹ್ನದ ಹೊತ್ತಿನ ವ್ಯಾಯಾಮವನ್ನು ನಿರ್ವಹಿಸಿ

ಮಧ್ಯಾಹ್ನದ ಹೊತ್ತಿನಲ್ಲಿ ವ್ಯಾಯಾಮವೇ ಎಂದು ಚಕಿತರಾದಿರೇ? ಸಾಮಾನ್ಯವಾಗಿ ಊಟದ ಬಳಿಕ ನಾವೆಲ್ಲರೂ ಹರಟೆ ಕೊಚ್ಚುವುದು ಅಥವಾ ಸಾಧ್ಯವಾದರೆ ಮಲಗಿ ಬಿಡುತ್ತೇವೆ. ಇದರ ಬದಲಿಗೆ ಕೊಂಚ ಹೊತ್ತು ನಡೆದಾಡುವುದು ಒಳ್ಳೆಯದು. ಹಾಗಾಗಿ, ಕಛೇರಿಯಲ್ಲಿ ಊಟದ ಬಳಿಕ ಲಿಫ್ಟ್ ಬಳಸುವ ಬದಲು ಮೆಟ್ಟಿಲುಗಳನ್ನು ಏರಿ ಇಳಿಯಿರಿ ಅಥವಾ ಲಭ್ಯವಿರುವ ಸಮಯವನ್ನು ನಡೆದಾಡಿ ಕಳೆಯಿರಿ.

ನಿಂತಲ್ಲೇ ಮಾಡುವ ವ್ಯಾಯಾಮ

ನಿಂತಲ್ಲೇ ಮಾಡುವ ವ್ಯಾಯಾಮ

ಕೆಲಸಮಯ ಸುಮ್ಮನೇ ನಿಂತೇ ಇದ್ದರೆ ಈ ಮೂಲಕವೂ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ಕುಳಿತುಕೊಂಡಾಗ ಆಗುವುದಕ್ಕಿಂತಲೂ ಹೆಚ್ಚಿನ ಕ್ಯಾಲೋರಿಗಳು ಬಳಕೆಯಾಗುತ್ತವೆ. ನಿಂತಿದ್ದಲ್ಲೇ ಪೂರ್ಣ ಉಸಿರೆಳೆದು ಎರಡೂ ಕೈಗಳನ್ನು ಹಿಂದಕ್ಕೆ ಚಾಚಿ ಎದೆಯನ್ನು ಅಗಲಿಸಿ. ಇದರಿಂದ ಹೃದಯದ ಕಾಯಿಲೆ, ಬೆನ್ನುನೋವು, ಹಾಗೂ ಇತರ ಜೀವರಾಸಾಯನಿಕ ಕ್ರಿಯೆಗಳಿಗೆ ಸಂಬಂಧಿಸಿದ ತೊಂದರೆಗಳ ಸಾಧ್ಯತೆ ಕಡಿಮೆಯಾಗುತ್ತದೆ.

ಕೆಲಸದ ಸಮಯದಲ್ಲಿ ಮೆಟ್ಟಿಲುಗಳನ್ನು ಬಳಸಿ

ಕೆಲಸದ ಸಮಯದಲ್ಲಿ ಮೆಟ್ಟಿಲುಗಳನ್ನು ಬಳಸಿ

ದಿನದಲ್ಲಿ ಎರಡು ಮಹಡಿಗಳನ್ನು ಏರಿ ಇಳಿಯುವ ಮೂಲಕ ಸಾಕಷ್ಟು ಕ್ಯಾಲೋರಿಗಳು ಬಳಕೆಯಾಗುತ್ತವೆ ಹಾಗೂ ಇದು ವರ್ಷದಲ್ಲಿ ಸುಮಾರು ಆರು ಪೌಂಡುಗಳಷ್ಟು ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಹಾಗಾಗಿ ಕಛೇರಿಯ ಸ್ಥಳವನ್ನು ತಲುಪಲು ಹಾಗೂ ನಿರ್ಗಮಿಸಲು ವಾರದ ಐದೂ ದಿನ ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸಿದರೆ ಸುಮಾರು ಮೂವತ್ತಾರು ನಿಮಿಷ ನಡೆದಾಡಿದಷ್ಟೇ ಕ್ಯಾಲೋರಿಗಳನ್ನು ದಹಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಇಂದಿನಿಂದಲೇ ಮೆಟ್ಟಿಲು ಬಳಸಲು ಪ್ರಾರಂಭಿಸಿ, ಸ್ಥೂಲಕಾಯದಿಂದ ರಕ್ಷಣೆ ಪಡೆಯಿರಿ.

ಭುಜಗಳನ್ನು ಹುರಿಗಟ್ಟಿಸುವ ವ್ಯಾಯಾಮಗಳು:

ಭುಜಗಳನ್ನು ಹುರಿಗಟ್ಟಿಸುವ ವ್ಯಾಯಾಮಗಳು:

ನಿಮ್ಮ ಕೆಲಸದ ಸ್ಥಳದಲ್ಲಿಯೇ ಕ್ಷಿಪ್ರಕಾಲದ ಈ ಸುಲಭ ವ್ಯಾಯಾಮದಿಂದ ಭುಜಗಳ ಸ್ನಾಯುಗಳನ್ನು ಹುರಿಗಟ್ಟಿಸಬಹುದು. ಕುಳಿತಲ್ಲಿಯೇ ಬೆನ್ನು ನೆಟ್ಟಗಾಗಿಸಿ ಬೆನ್ನನ್ನು ಕುರ್ಚಿಯ ಹಿಂಬದಿಗೆ ಒತ್ತಿ, ಪಾದಗಳನ್ನು ಜೋಡಿಸಿ ಹಿಮ್ಮಡಿಯಿಂದ ನೆಲವನ್ನು ಒತ್ತಿ. ಈಗ ಕೈಗಳನ್ನು ಮೇಲೆತ್ತುತ್ತಾ ಹಸ್ತಗಳನ್ನು ತೆರೆದು ಸಾಧ್ಯವಾದಷ್ಟು ತಲೆಯ ಮೇಲೆ ಕೊಂಡೊಯ್ದು ಜೋಡಿಸಿ. ಈ ಹಂತದಲ್ಲಿ ಕಾಲುಗಳನ್ನೂ ಕೈಗಳನ್ನೂ ಗಟ್ಟಿಯಾಗಿ ಜೋಡಿಸಿ ಸುಮಾರು ಮೂವತ್ತು ನಿಮಿಷಗಳವರೆಗೆ ದೀರ್ಘವಾಗಿ ಉಸಿರಾಡಿ. ಬಳಿಕ ನಿಧಾನವಗಿ ಕೈಗಳನ್ನು ಕೆಳಕ್ಕೆ ತಂದು ಸಾಮಾನ್ಯವಾಗಿ ಉಸಿರಾಡಿ. ಈ ಸರಳ ವ್ಯಾಯಾಮ ಭುಜ ಸ್ನಾಯುಗಳನ್ನು ಸಡಿಲಗೊಳಿಸಿ ಹುರಿಗಟ್ಟಿಸುತ್ತದೆ.

ಸಾಧ್ಯವಾದಷ್ಟೂ ಭೇಟಿಯನ್ನು ನಡೆದಾಡುತ್ತಾ ನಿರ್ವಹಿಸಿ

ಸಾಧ್ಯವಾದಷ್ಟೂ ಭೇಟಿಯನ್ನು ನಡೆದಾಡುತ್ತಾ ನಿರ್ವಹಿಸಿ

ಒಂದು ವೇಳೆ ವ್ಯಕ್ತಿಯೊಬ್ಬರೊಂದಿಗೆ ನಿಮ್ಮ ಭೇಟಿ ನಿಗದಿಯಾಗಿದ್ದು ಇದನ್ನು ನಿರ್ವಹಿಸಲು ಕಛೇರಿಯ ಉಪಕರಣಗಳು ಅಗತ್ಯವಿಲ್ಲವೆಂದರೆ ಈ ಭೇಟಿಯನ್ನು ಕಛೇರಿಯಿಂದ ಹೊರಗೆ, ಸಾಧ್ಯವಾದಷ್ಟು ನಡೆದಾಡುತ್ತಾ ನಿಸರ್ಗದಲ್ಲಿಯೇ ನಿರ್ವಹಿಸಿ. ಅಗತ್ಯಬಿದ್ದರೆ ಚಿಕ್ಕ ಪುಸ್ತಕ ಅಥವಾ ಧ್ವನಿಮುದ್ರಣ ಯಂತ್ರವನ್ನು ಕೊಂಡೊಯ್ದು ಈ ಭೇಟಿಯ ಅಂಶಗಳನ್ನು ಗುರುತು ಹಾಕಿಕೊಳ್ಳಬಹುದು. ಆಶ್ಚರ್ಯಕರ ಅನ್ನಿಸಿದರೂ ಇದು ನಿಜವಾಗಿಯೂ ಆರೋಗ್ಯಕರವಾದ ಕ್ರಮವಾಗಿದೆ.

English summary

How Too Much Sitting Can Harm You!

There is no doubt about the fact that office jobs have chained us to our desk. And while you are reading this article, chances are you will be sitting in front of your computer at your office or home. In addition to that, we sit in the car, sit on the couch watching TV, sit at the table while having food, etc. Sitting disease, as it is referred to, is the sedentary lifestyle we practice that might put your health at risk. A study of the American Cancer Society suggests if you sit for six hours a day or more, your risk of dying early increases to 19 per cent, compared to those who sit fewer than three hours.
X
Desktop Bottom Promotion