ಶೀಘ್ರ ಸ್ಖಲನವನ್ನು ತಡೆಯಲು ಇಲ್ಲಿವೆ ಕೆಲವು ಸಿಂಪಲ್ ಸಲಹೆಗಳು

By Sushma Charhra
Subscribe to Boldsky

ನಿಮ್ಮ ಸಂಗಾತಿ ಅಥವಾ ನಿಮಗೆ ಶೀಘ್ರ ಸ್ಖಲನವಾಗುವ ಸಮಸ್ಯೆ ಇದಿಯಾ? ಉತ್ತರ ಹೌದು ಆಗಿದ್ದಲ್ಲಿ, ಈ ಲೇಖನ ನಿಮ್ಮ ಸಮಸ್ಯೆಗೆ ಪರಿಹಾರ ನೀಡಲಿದೆ. ಲೈಂಗಿಕ ಪ್ರಕ್ರಿಯೆಯಲ್ಲಿ ಪುರುಷರು ಉದ್ದೇಶಿತ ಸಮಯಕ್ಕಿಂತ ಮೊದಲೇ ಪೂರ್ಣಗೊಳಿಸಿ ಬಿಡುತ್ತಾರೆ. ಅದು ನಿಮಗೆ ಅಥವಾ ನಿಮ್ಮ ಸಂಗಾತಿ ಪರಿಪೂರ್ಣ ಅನ್ನಿಸದಂತೆ ಮಾಡಿರಬಹುದು. ಅಕಾಲಿಕ ಸ್ಖಲನ ಅನ್ನುವುದು ತೃಪ್ತಿ ನೀಡದ ಲೈಂಗಿಕ ಪ್ರಕ್ರಿಯೆಗೆ ಕಾರಣವಾಗಬಹುದು. ಎಲ್ಲಾ ವಯಸ್ಸಿನ ಪುರುಷರನ್ನು ಕಾಡುವ ಸಾಮಾನ್ಯ ಲೈಂಗಿಕ ಸಮಸ್ಯೆ ಇದಾಗಿದ್ದು ಒಂದೇ ಒಂದು ನಿಮಿಷದ ಕಾಲಾವಧಿಯ ಒಳನುಗ್ಗುವಿಕೆಯಲ್ಲಿಯೇ ಸ್ಖಲನವಾಗಿ ಬಿಡುತ್ತದೆ. ಇದು ಪುರುಷರ ವಿಶ್ವಾಸವನ್ನು ಕುಗ್ಗಿಸುತ್ತದೆ ಮತ್ತು ಕೆಲವೊಮ್ಮೆ ಮಾನಸಿಕ ಸಮಸ್ಯೆಗಳು ಉದಾಹರಣೆಗೆ ಒತ್ತಡ, ಆತಂಕಕ್ಕೆ ಕಾರಣವಾಗಬಹುದು. ಅಧ್ಯಯನವೊಂದು ತಿಳಿಸಿರುವ ಪ್ರಕಾರ ಶೇಕಡಾ 29 ರಷ್ಟು ಪುರುಷರು ಈ ಸಮಸ್ಯೆಯನ್ನು ತಮ್ಮ ಜೀವಮಾನದಲ್ಲಿ ಕೆಲವೊಮ್ಮೆ ಅನುಭವಿಸಿಯೇ ಅನುಭವಿಸುತ್ತಾರೆ. ಹಾಗಾದ್ರೆ ಈ ಸಮಸ್ಯೆಯಿಂದ ಹೊರಬರುವುದು ಹೇಗೆ... ಇಲ್ಲಿವೆ ನೋಡಿ ಕೆಲವೊಂದು ಸಿಂಪಲ್ ಮನೆಮದ್ದುಗಳು. ನಿಮ್ಮಲ್ಲೂ ಈ ಸಮಸ್ಯೆ ಇದ್ದಲ್ಲಿ ಟ್ರೈ ಮಾಡಿ ನೋಡಿ.

1. ಅಶ್ವಗಂಧ

1. ಅಶ್ವಗಂಧ

ಅಶ್ವಗಂಧ ಬಹಳ ಮಹತ್ವಪೂರ್ಣವಾಗಿರುವ ವೈದ್ಯಕೀಯ ಮದ್ದಾಗಿದೆ. ಇದನ್ನು ಬಹಳಷ್ಟು ಆಯುರ್ವೇದ ಔಷಧಗಳಲ್ಲಿ ಪ್ರಮುಖವಾಗಿ ಪುರುಷರ ಲೈಂಗಿಕ ಸಮಸ್ಯೆಯ ಪರಿಹಾರಕ್ಕಾಗಿ ಬಳಕೆ ಮಾಡಲಾಗುತ್ತೆ. ಅಶ್ವಗಂಧವೂ ಸ್ಖಲಕ್ಕೆ ಸಂಬಂಧಿಸಿದ ಅಂಗಗಳ ಬಲವರ್ಧನೆಗೆ ಸಹಕರಿಸುತ್ತೆ ಮತ್ತು ಪುರುಷರ ಶಕ್ತಿಯನ್ನು ಹೆಚ್ಚಿಸುತ್ತೆ.

. ಒಂದು ಟೇಬಲ್ ಸ್ಪೂನ್ ನಷ್ಟು ಅಶ್ವಗಂಧವನ್ನು ತೆಗೆದುಕೊಂಡು ಒಂದು ಲೋಟ ಆಡಿನ ಹಾಲಿನೊಂದಿಗೆ ಬೆರೆಸಿ

.ಇದನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ

ಸೂಚನೆ: ದನದ ಹಾಲಿಗಿಂತ ಆಡಿನ ಹಾಡು ಈ ಔಷಧದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ

2. ಕೇಸರಿ ಮತ್ತು ಬಾದಾಮಿ

2. ಕೇಸರಿ ಮತ್ತು ಬಾದಾಮಿ

ಅದೆಷ್ಟು ಜನರಿಗೆ ತಿಳಿದಿದೆ ಕೇಸರಿಯಲ್ಲಿ ಕಾಮೋತ್ತೇಜಕ ಗುಣಗಳಿವೆ ಅನ್ನುವುದು. ಅಷ್ಟೇ ಅಲ್ಲ ಇದು ಕಾಮಾಸಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನೂ ಕೂಡ ಹೊಂದಿದೆ. ಬಾದಾಮಿಯಲ್ಲಿ ಸೆಲೇನಿಯಂ, ಗಂಧಕ,ವಿಟಮಿನ್ ಇ ಗಳಿದ್ದು ಇದು ಕಾಮಾಸಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ನಿರ್ವಹಿಸುತ್ತದೆ ಸೆಲೇನಿಯಂ ಬಂಜೆತನ ಸಮಸ್ಯೆಗೂ ಪರಿಹಾರ ನೀಡುತ್ತೆ. ಗಂಧಕವು ಪುರುಷಕ ಲೈಂಗಿಕ ಹಾರ್ಮೋನುಗಳನ್ನು ಉತ್ತೇಜಿಸುವ ಕೆಲಸ ಮಾಡಿ ಕಾಮಾಸಕ್ತಿಯನ್ನು ಹೆಚ್ಚಿಸುತ್ತೆ.

. 10 ಬಾದಾಮಿ ಬೀಜಗಳು,ಒಂದು ಕಪ್ ಹಾಲು,ಸ್ವಲ್ಪ ಶುಂಠಿ,ಚಕ್ಕೆ ಮತ್ತು, ಕೇಸರಿಯನ್ನು ರುಬ್ಬಿ ಜ್ಯೂಸ್ ತಯಾರಿಸಿಕೊಳ್ಳಿ.

.ಪ್ರತಿದಿನ ನಿದ್ದೆಗೂ ಮುನ್ನ ಇದನ್ನು ಸೇವಿಸಿ

3. ಶುಂಠಿ ಮತ್ತು ಜೇನುತುಪ್ಪ

3. ಶುಂಠಿ ಮತ್ತು ಜೇನುತುಪ್ಪ

ಶುಂಠಿ ಮತ್ತು ಜೇನುತುಪ್ಪದ ಮಿಶ್ರಣ ಶೀಘ್ರ ಸ್ಖಲನಕ್ಕೆ ಮತ್ತೊಂದು ಔಷಧವಾಗಿದೆ. ಶಿಶ್ನದ ಭಾಗಗಳಲ್ಲಿ ರಕ್ತಸಂಚಾರವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಶುಂಠಿ ಹೊಂದಿದೆ. ಸ್ಖಲನದಲ್ಲಿ ಹೆಚ್ಚಿನ ನಿಯಂತ್ರಣವನ್ನು ಇಟ್ಟುಕೊಳ್ಳಲು ಇದು ಪುರುಷರಿಗೆ ನೆರವಾಗುತ್ತೆ. ಜೇನುತುಪ್ಪವು ಮತ್ತೊಂದು ಕಾಮೋತ್ತೇಜಕ ಪದಾರ್ಥವಾಗಿದ್ದು, ಶುಂಠಿಯು ನೀಡುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ತಾಕತ್ತು ಇದಕ್ಕಿದೆ.

. ರಾತ್ರಿ ಮಲಗುವ ಮುನ್ನ ಅರ್ಧ ಟೇಬಲ್ ಸ್ಪೂನ್ ನಷ್ಟು ಶುಂಠಿರಸ ಮತ್ತು ಜೇನುತುಪ್ಪವನ್ನು ಸೇವಿಸಿ

4. ಬೆಳ್ಳುಳ್ಳಿ

4. ಬೆಳ್ಳುಳ್ಳಿ

ಶೀಘ್ರ ಸ್ಖಲನವನ್ನು ತಡೆಯಲು ಇರುವ ಪ್ರಮುಖ ಮನೆಮದ್ದುಗಳಲ್ಲಿ ಬೆಳ್ಳುಳ್ಳಿ ಕೂಡ ಮಹತ್ವವಾದದ್ದು. ಶಿಶ್ನದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುವ ಕೆಲಸವನ್ನು ಇದು ಮಾಡುತ್ತೆ. ಅಷ್ಟೇ ಅಲ್ಲ, ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುವ ಕೆಲಸವನ್ನು ಕೂಡ ಇದು ನಿರ್ವಹಿಸಲಿದೆ.

. ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಕೆಂಪು ಬಣ್ಣ ಬರುವವರೆಗೆ ಹುರಿಯಿರಿ

.ಪ್ರತಿದಿನ ಇದನ್ನು ಸೇವಿಸಿ

.3 ರಿಂದ 4 ಲವಂಗ ಮತ್ತು ಬೆಳ್ಳುಳ್ಳಿಯನ್ನು ಬರೀಬಾಯಿಗೆ ನಿಮಗೆ ಜಗಿಯಲು ಸಾಧ್ಯವಿದ್ದರೆ ಹಾಗೆ ಮಾಡಿದರೂ ಆಗುತ್ತೆ.

5. ಹಸಿರು ಈರುಳ್ಳಿಯ ಬೀಜಗಳು

5. ಹಸಿರು ಈರುಳ್ಳಿಯ ಬೀಜಗಳು

ಹಸಿರು ಈರುಳ್ಳಿಯ ಬೀಜಗಳು ಕೂಡ ಈ ಸಮಸ್ಯೆಗೆ ಪರಿಹಾರ ನೀಡುತ್ತದೆ. ಕಾಮವನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಇದು ಹೊಂದಿದ್ದು, ಪುರುಷರ ಲೈಂಗಿಕ ಸಮಸ್ಯೆಗೆ ಪರಿಹಾರ ನೀಡಲಿದೆ. ಇಲ್ಲವೇ ಈರುಳ್ಳಿಯನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುವುದರಿಂದ ಕೂಡ ಪುರುಷರ ತಾಕತ್ತು ವರ್ಧಿಸಲ್ಪಡುತ್ತದೆ.

. ಬೀಜಗಳನ್ನು ಪುಡಿ ಮಾಡಿ ನೀರಿನಲ್ಲಿ ಚೆನ್ನಾಗಿ ಮಿಕ್ಸ್ ಮಾಡಬೇಕು

.ಇದರ ನೀರನ್ನು ಪ್ರತಿದಿನ ಊಟಕ್ಕೆ ಮುನ್ನ ದಿನಕ್ಕೆ ಮೂರು ಬಾರಿ ಸೇವಿಸಿ

6. ಬೆಂಡೆಕಾಯಿ ಮತ್ತು ಸಕ್ಕರೆ

6. ಬೆಂಡೆಕಾಯಿ ಮತ್ತು ಸಕ್ಕರೆ

ಬೆಂಡೆಕಾಯಿಯಲ್ಲಿರುವ ಕೆಲವು ಪ್ರಮುಖ ಅಂಶಗಳಿಂದಾಗಿ ಲೈಂಗಿಕ ಸಮಸ್ಯೆ ದೂರವಾಗಲಿದೆ ಎಂದು ಹೇಳಲಾಗುತ್ತೆ. 10 ಗ್ರಾಂನಷ್ಟು ಬೆಂಡೆಗಿಡದ ಬೇರುಗಳನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಹಾಲು, ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ ಪ್ರತಿದಿನ ಸೇವಿಸಿ.

7. ಕ್ಯಾರೆಟ್, ಮೊಟ್ಟೆ ಮತ್ತು ಜೇನುತುಪ್ಪ

7. ಕ್ಯಾರೆಟ್, ಮೊಟ್ಟೆ ಮತ್ತು ಜೇನುತುಪ್ಪ

ಈ ಮೂರು ಪದಾರ್ಥಗಳು ಕ್ಯಾರೆಟ್, ಮೊಟ್ಟೆ ಮತ್ತು ಜೇನುತುಪ್ಪ ಶೀಘ್ರ ಸ್ಖಲನದ ಸಮಸ್ಯೆಗೆ ಪರಿಹಾರ ನೀಡಲಿದೆ. ಜೇನುತುಪ್ಪವನ್ನು ಕಾಮೋತ್ತೇಜಕ ಎಂದು ಪರಿಗಣಿಸಲಾಗಿದೆ.,ಲೈಂಗಿಕ ಪ್ರಕ್ರಿಯೆಯ ಸಂದರ್ಬದಲ್ಲಿ ಶಿಶ್ನದಲ್ಲಿ ರಕ್ತಸಂಚಾರವನ್ನು ಹೆಚ್ಚಿಸಲು ಕ್ಯಾರೆಟ್ ಸಹಕಾರಿಯಾಗಿದೆ. ಟೆಸ್ಟೋಸ್ಟೆರಾನ್ ಲೆವೆಲ್ ನ್ನು ಹೆಚ್ಚಿಸಲು ಮೊಟ್ಟೆಯು ಸಹಾಯ ಮಾಡುತ್ತೆ.

. ಬೇಯಿಯಿದ ಮೊಟ್ಟೆ ಅರ್ಧ ತೆಗೆದುಕೊಳ್ಳಿ.ಅದಕ್ಕೆ ನುಣ್ಣಗೆ ಮಾಡಿದ ಕ್ಯಾರೆಟ್ ಸೇರಿಸಿ.

.ಮೂರು ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ

.ಮೂರು ತಿಂಗಳು ಪ್ರತಿದಿನ ಇದನ್ನು ಸೇವಿಸಿ

8. ಶತಾವರಿ

8. ಶತಾವರಿ

ಶತಾವರಿ ಬೇರುಗಳಲ್ಲಿ ಕಾಮೋತ್ತೇಜಕ ಗುಣಗಳಿವೆ. ಶೀಘ್ರ ಸ್ಖಲನದ ಸಮಸ್ಯೆಗೆ ಪರಿಹಾರ ನೀಡುವ ತಾಕತ್ತು ಶತಾವರಿಗಿದೆ.ಶತಾವರಿಯಲ್ಲಿ ಫೋಲೇಟ್ ಅಂಶಗಳು ಅಧಿಕವಾಗಿದೆ ಮತ್ತು ವಿಟಮಿನ್ ಬಿ ಅಂಶವಿದೆ. ಇದು ಹಿಸ್ಟಮಿನ್ ನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಈ ಹಿಸ್ಟಮಿನ್ ಎಂಬುದು ಪುರುಷರಲ್ಲಿ ಲೈಂಗಿಕ ಪ್ರಕ್ರಿಯೆಯಲ್ಲಿ ಅವರಿಗೆ ನಿಯಂತ್ರಣವಿಟ್ಟುಕೊಳ್ಳಲು ಸಹಕರಿಸುತ್ತೆ.

. ಒಂದು ಲೋಟ ಹಾಲಿಗೆ ಮೂರರಿಂದ ನಾಲ್ಕು ಟೇಬಲ್ ಸ್ಪೂನ್ ಶತಾವರಿ ಪೌಡರ್ ಬೆರೆಸಿ.

.ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಪುರುಷರ ಶಕ್ತಿಯನ್ನು ಇದು ಹೆಚ್ಚಿಸುತ್ತೆ.

9. ಹಣ್ಣುಗಳು ಮತ್ತು ಲಿಬಿಡೋ ಹೆಚ್ಚಿಸುವ ಪದಾರ್ಥಗಳು

9. ಹಣ್ಣುಗಳು ಮತ್ತು ಲಿಬಿಡೋ ಹೆಚ್ಚಿಸುವ ಪದಾರ್ಥಗಳು

ಬಾಳೆಹಣ್ಣು, ಇತರೆ ಪದಾರ್ಥಗಳಾದ ಸೆಲೆರಿ, ಕ್ಯಾರೆಟ್, ಈರುಳ್ಳಿ ಇತ್ಯಾದಿಗಳ ಸೇವನೆ ಮಾಡುವುದು ಸೂಕ್ತ. ನಿಮ್ಮ ಆಹಾರಗಳಲ್ಲಿ ಆಗಾಗ ಇವುಗಳನ್ನು ಬಳಕೆ ಮಾಡುತ್ತಿದ್ದರೆ ಒಳಿತು. ಪ್ರತಿದಿನ ಬೆಳಿಗ್ಗೆ ಬಾಳೆಹಣ್ಣು ಸೇವಿಸಿ.,ಓಟ್ಸ್ ತಿನ್ನಿ,ಸಲಾಡ್ ಗಳಲ್ಲಿ ಸೆಲೆರಿಯನ್ನು ಬೆರೆಸಿ.

10. ವ್ಯಾಯಾಮ

10. ವ್ಯಾಯಾಮ

ಸರಿಯಾದ ವ್ಯಾಯಾಮ ರೂಢಿಸಿಕೊಳ್ಳುವುದು ಮತ್ತೊಂದು ಬಹುಮುಖ್ಯ ಮನೆಮದ್ದುಗಳಲ್ಲಿ ಒಂದು., ದೀರ್ಘ ಉಸಿರಾಟದ ಧ್ಯಾನ ಮಾಡುವಿಕೆಯು ಶೀಘ್ರ ಸ್ಖಲನವನ್ನು ನಿಯಂತ್ರಣಕ್ಕೆ ಇಡಲು ಸಹಕಾರಿಯಾಗಿದೆ. ಅಷ್ಟೇ ಅಲ್ಲ ಲೈಂಗಿಕ ಕ್ರಿಯೆಗೆ ಬೇಕಾಗುವ ಕೆಲವು ಮಾಂಸಖಂಡಗಳ ಸುಭದ್ರತೆಗೆ ಇದು ನೆರವಾಗುತ್ತೆ ಮತ್ತು ಶೀಘ್ರ ಸ್ಖಲನದ ಸಮಸ್ಯೆ ನಿವಾರಣೆಯಾಗುತ್ತೆ.

For Quick Alerts
ALLOW NOTIFICATIONS
For Daily Alerts

  Read more about: health
  English summary

  how-to-prevent-premature-ejaculation

  how-to-prevent-premature-ejaculation
  Story first published: Saturday, May 12, 2018, 17:00 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more