For Quick Alerts
ALLOW NOTIFICATIONS  
For Daily Alerts

ಮೊಣಕಾಲು ನೋವು ನಿವಾರಣೆಗೆ 8 ನೈಸರ್ಗಿಕ ವಿಧಾನಗಳು

|

ವಯಸ್ಸು ಕಳೆದಂತೆ ಆರೋಗ್ಯದಲ್ಲಿ ವೈಪರೀತ್ಯಗಳು ಉಂಟಾಗುತ್ತಲೇ ಇರುತ್ತವೆ. ಅದರಲ್ಲೂ 40ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಸಾಮಾನ್ಯವಾಗಿ ಮೂಳೆಗೆ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳುವುದು ಸಹಜ ಎಂಬುದು ತಜ್ಞರ ಅಭಿಪ್ರಾಯ. ಹೆಚ್ಚಿನ ಮಹಿಳೆಯರಲ್ಲಿ ಮೊಣಕಾಲು ಸಂಬಂಧಿ ನೋವು ತೀವ್ರವಾಗಿ ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗುವುದು. ಒಂದು ಅಂದಾಜಿನ ಪ್ರಕಾರ ಅರ್ಧಕ್ಕಿಂತ ಹೆಚ್ಚಿನ ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದು.

ಅಧಿಕವಾಗಿರುವ ತೂಕ, ಕ್ಯಾಲ್ಸಿಯಂ ಕೊರತೆ, ಮೊಣಕಾಲು ಚಿಪ್ಪಿನ ಸವೆತ, ಅನುಚಿತ ವ್ಯಾಯಾಮ, ಅತಿಯಾದ ಕೆಲಸ ಹೀಗೆ ಅನೇಕ ಸಮಸ್ಯೆಗಳಿಂದ ಮೊಣಕಾಲಿನ ನೋವು ಕಾಣಿಸಿಕೊಳ್ಳುವುದು ಸಹಜ. ಸಂಧಿ ನೋವು ಅಥವಾ ಮಂಡಿ ನೋವಿನಿಂದ ನಡೆಯುವಾಗ ತೀವ್ರವಾದ ನೋವು ಉಂಟಾಗುವುದು. ಕೆಲವರಿಗೆ ನಡೆಯಲು ಸಾಧ್ಯವಾಗದೆ ಇರಬಹುದು. ವೈದ್ಯಕೀಯ ಶಾಸ್ತ್ರದ ಪ್ರಕಾರ ಸಂಧಿವಾತವು ಸಹ ಮೊಣಕಾಲಿನ ನೋವನ್ನು ಉಂಟುಮಾಡುವುದು. ತೀವ್ರವಾದ ಮೊಣಕಾಲಿನ ನೋವಿಗೆ ಶಸ್ತ್ರ ಚಿಕಿತ್ಸೆ ಅಥವಾ ಸೂಕ್ತ ಆರೈಕೆಗೆ ಒಳಪಡಬೇಕಾಗುವುದು.

Knee pain

ಸಾಮಾನ್ಯ ಕಾರಣಗಳಿಂದ ಕಾಲುನೋವು ಅಥವಾ ಮಂಡಿನೋವು ಉಂಟಾದಾಗ ಮನೆಯಲ್ಲಿಯೇ ನೈಸರ್ಗಿಕ ವಿಧಾನಗಳ ಮೂಲಕ ಆರೈಕೆ ಮಾಡಬಹುದು. ಈ ಆರೈಕೆಗಳಿಂದ ಬಹುಬೇಗ ನೋವನ್ನು ನಿವಾರಿಸಬಹುದು. ಅಲ್ಲದೆ ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗದು ಎಂದು ಹೇಳಲಾಗುವುದು.ನೀವು ಸಹ ಆಗಾಗ ಮೊಣಕಾಲು ನೋವಿನಿಂದ ಬಳಲುತ್ತಿರುತ್ತೀರಿ ಎಂದಾರೆ ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ. ನಿಮ್ಮ ಆರೋಗ್ಯ ಸಮಸ್ಯೆಯನ್ನು ಬಹುಬೇಗ ನಿವಾರಿಸಿಕೊಳ್ಳಿ.

1. ಅಕ್ಕಿ:

1. ಅಕ್ಕಿ:

ಏಷ್ಯಾದ ಜನರ ಪ್ರಮುಖ ಆಹಾರ ಅಕ್ಕಿ. ಈ ಅಕ್ಕಿ ಮಂಡಿ ನೋವು ನಿವಾರಣೆಗೆ ಅತ್ಯಂತ ಪ್ರಯೋಜಕಾರಿ. ಕಾಲು ಉಳುಕುವುದು, ತಿರುಚಿ ಹೋಗುವುದು ಸೇರಿದಂತೆ ಇನ್ನಿತರ ಕಾರಣಗಳಿಂದ ಮಂಡಿ ನೋವು ಅನುಭವಿಸುತ್ತಿದ್ದರೆ ಅಕ್ಕಿಯನ್ನು ಮನೆಯಲ್ಲಿ ಪ್ರಥಮ ಚಿಕಿತ್ಸೆಯನ್ನಾಗಿ ಬಳಸಬಹುದು.

ವಿಧಾನ:

- ಸ್ವಲ್ಪ ಅಕ್ಕಿಯನ್ನು ಚೀಲದಲ್ಲಿ ತುಂಬಿ ಐಸ್ ಅಲ್ಲಿ ಇಟ್ಟು ತಣ್ಣಗಾಗಿಸಿ.

- ಮೊಣಕಾಲು ಮತ್ತು ಪಾದವನ್ನು ವಿಶ್ರಮಿಸಲು ಬಿಡಿ. ಬಳಿಕ ಹೆಪ್ಪುಗಟ್ಟಿರುವ ಅಕ್ಕಿ ಚೀಲವನ್ನು ಮೊಣಕಾಲಿನ ಮೇಲೆ ಇರಿಸಿ.

- ನೋವಿನ ಜಾಗದಲ್ಲಿ ಸ್ವಲ್ಪ ಸಮಯದ ತನಕ ಉಳಿಯಲು ಬಿಡಬೇಕು.

- ಹೀಗೆ ತರಕಾರಿಗಳನ್ನು ಸಹ ತಣ್ಣಗಾಗಿಸಿ ಮೊಣಕಾಲಿನ ಮೇಲೆ ಇಡಬಹುದು.

- ಈ ಚಿಕಿತ್ಸೆ ಪಡೆಯುವಾಗ ಒಡಾಡಬಾರದು. ಪಾದವನ್ನು ಮೇಲಕ್ಕೇರಿಸಿ ಇಟ್ಟಿರುವ ವಿಧಾನದಲ್ಲಿ ಇರಬೇಕು.

2. ತೈಚಿ:

2. ತೈಚಿ:

ಮೊಣಕಾಲಿನ ನೋವನ್ನು ಕಡಿಮೆ ಮಾಡಲು ತೈಚಿ ವಿಧಾನ ಅತ್ಯುತ್ತಮವಾದದ್ದು. ನಮ್ಯತೆ ಮತ್ತು ಸಮತೋಲನವನ್ನು ಮೊಣಕಾಲಿಗೆ ನೀಡುವುದು. ಪುರಾತನ ಚೈನೀಸ್ ಕ್ರಮವಾದ ಇದು ಮೂಳೆ ಸಂಬಂಧಿತ ಸಮಸ್ಯೆಗಳಿಗೆ, ಸೌಮ್ಯವಾದ ಮಂಡಿ ನೋವಿಗೆ ಹಾಗೂ ಸಂಧಿವಾತದಿಂದ ನೋವನ್ನು ಅನುಭವಿಸುತ್ತಿದ್ದವರಿಗೆ ಇದು ಅಪರಿಣಾಮಕಾರಿಯಾದ ಚಿಕಿತ್ಸೆ ನೀಡುವುದು. ನಿಯಮಿತವಾಗಿ ಈ ವಿಧಾನವನ್ನು ಅನ್ವಯಿಸುವುದರಿಂದ ನೋವು ನಿವಾರಣೆಯಾಗಿ ಚಲನೆಯ ವ್ಯಾಪ್ತಿಯನ್ನು ಹೆಚ್ಚಿಸುವುದು.

3. ವ್ಯಾಯಾಮ ಮತ್ತು ತೂಕ ನಿರ್ವಹಣೆ:

3. ವ್ಯಾಯಾಮ ಮತ್ತು ತೂಕ ನಿರ್ವಹಣೆ:

ತೀವ್ರವಾದ ಮೊಣಕಾಲು ನೋವಿಗೆ ಪ್ರಮುಖ ಕಾರಣವೆಂದರೆ ಸ್ಥೂಲಕಾಯ. ದೇಹದ ತೂಕ ಹೆಚ್ಚಾದಂತೆ ನೋವಿನ ತೀವ್ರತೆಯು ಹೆಚ್ಚುತ್ತದೆ. ಹಾಗಾಗಿ ದೇಹದ ತೂಕವನ್ನು ನಿರ್ವಹಿಸುವುದು ಬಹಳ ಮುಖ್ಯ. ನಿತ್ಯವೂ ನಿಯಮಿತವಾಗಿ ವ್ಯಾಯಾಮ ಮಾಡುವುದರ ಮೂಲಕ ಮೊಣಕಾಲು ನೋವನ್ನು ನಿಯಂತ್ರಿಸಬಹುದು. ಸಂಧಿವಾತ ಇರುವವರಿಗೆ ನಿಂತಾಗ ಅಥವಾ ಚಲನೆಯನ್ನು ಮಾಡಿದಾಗ ನೋವು ಉಲ್ಬಣಗೊಳ್ಳುತ್ತದೆ. ಹಾಗಾಗಿ ನಿಯಮಿತವಾದ ವ್ಯಾಯಾಮ ಹಾಗೂ ತೂಕ ನಿರ್ವಹಣೆ ನೋವು ನಿವಾರಣೆಗೆ ಪ್ರಮುಖವಾದದ್ದು.

4. ಶಾಖ ಮತ್ತು ಶೀತ ಚಿಕಿತ್ಸೆ:

4. ಶಾಖ ಮತ್ತು ಶೀತ ಚಿಕಿತ್ಸೆ:

ಕೆಲವು ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಮೊಣಕಾಲು ನೋವಿಗೆ ವೈದ್ಯರು ಶಾಖ ಮತ್ತು ಶೀತ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುತ್ತಾರೆ. ನೋವು ಉಲ್ಬಣಗೊಳ್ಳುವುದು ಎನ್ನುವ ಕಾರಣಕ್ಕಾಗಿ ಸಂಧಿವಾತ ಹೊಂದಿರುವವರು ತಮ್ಮ ಚಲನೆಯನ್ನು ಕಡಿಮೆಮಾಡುತ್ತಾರೆ. ಇದರಿಂದ ಕೀಲುಗಳು ಗಟ್ಟಿಯಾಗುತ್ತವೆ. ಅಂತಹ ಸಂದರ್ಭದಲ್ಲಿ ಶಾಖದ ಚೀಲವನ್ನು ಪೀಡಿತ ಪ್ರದೇಶದಲ್ಲಿ ಇಟ್ಟುಕೊಳ್ಳುವುದರ ಮೂಲಕ ನೋವನ್ನು ಕಡಿಮೆ ಮಾಡಬಹುದು. ಮೊಣಕಾಲು ನೋವು ನಿವಾರಣೆಗೆ ಕೋಲ್ಡ್ ಪ್ಯಾಕ್ ಅಥವಾ ಕೋಲ್ಡ್ ಕಂಪ್ರೆಷನ್ ಬಳಸುವುದರ ಮೂಲಕ ಸುಲಭ ಚಿಕಿತ್ಸೆ ಪಡೆಯಬಹುದು. ಮೊಣಕಾಲು ಗಾಯದಿಂದ ಬಳಲುತ್ತಿದ್ದವರು 24 ಗಂಟೆಗಳ ಕಾಲ ಕೋಲ್ಡ್ ಪ್ಯಾಕ್ ಅನ್ವಯಿಸಲು ಶಿಪಾರಸ್ಸು ಮಾಡಲಾಗುವುದು. ಶಾಖ ಮತ್ತು ಶೀತ ಚಿಕಿತ್ಸೆಯನ್ನು ಪರ್ಯಾಯವಾಗಿ ಬಳಸಬಹುದು.

5. ಗಿಡಮೂಲಿಕೆಗಳ ಮುಲಾಮು:

5. ಗಿಡಮೂಲಿಕೆಗಳ ಮುಲಾಮು:

ಮಂಡಿ ನೋವಿನಿಂದ ಬಳಲುತ್ತಿದ್ದವರು ಶುಂಠಿ, ಎಳ್ಳಿನ ಎಣ್ಣೆ ಮತ್ತು ದಾಲ್ಚಿನ್ನಿ ಬಹಳ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವುದು ಎಂದು ತಜ್ಞರು ಅಭಿಪ್ರಾಯಿಸುತ್ತಾರೆ. ಮಾರುಕಟ್ಟೆಯಲ್ಲಿ ದೊರೆಯುವ ಸ್ಯಾಲಿಸಿಲೇಟ್ ಕ್ರೀಮ್ ಅಥವಾ ಸಂಧಿಗೆ ಹಚ್ಚುವ ಇತರ ಕ್ರೀಮ್‍ಗಳಿಗಿಂತ ಗಿಡಮೂಲಿಕೆಯಿಂದ ತಯಾರಿಸುವ ಪೇಸ್ಟ್ ಮತ್ತು ಮುಲಾಮುಗಳು ಅತ್ಯುತ್ತಮ ರೀತಿಯಲ್ಲಿ ಆರೈಕೆ ಮಾಡುವುದು.

6. ವಿಲ್ಲೋ ಬಾರ್ಕ್:

6. ವಿಲ್ಲೋ ಬಾರ್ಕ್:

2001ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಸಂಧಿವಾತ ಹೊಂದಿರುವವರು ಅಥವಾ ಮಂಡಿನೋವಿನಿಂದ ಬಳಲುತ್ತಿದ್ದವರು ವಿಲ್ಲೋ ಬಾರ್ಕ್ ಮರದ ತೊಗಟೆಯನ್ನು ಬಳಸಿ ಪರಿಹಾರಕವನ್ನಾಗಿ ಬಳಸಬಹುದಾಗಿದೆ. ಇದರ ಬಳಕೆಯಿಂದ ಉರಿಯೂತ, ಜ್ವರ ಮತ್ತು ನೋವನ್ನು ಚಿಕಿತ್ಸಕ ರೂಪದಲ್ಲಿ ಪರಿಹಾರ ನೀಡುವುದು. ಆಸ್ಪಿರಿನ್ ಅಲರ್ಜಿ ಅಥವಾ ರಕ್ತ ಸಂಬಂಧಿ ಸಮಸ್ಯೆಯಿದ್ದವರು ಇದನ್ನು ಬಳಸಬಾರದು. ಜೊತೆಗೆ 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ಇದನ್ನು ನೀಡಬಾರದು.

7. ಶುಂಠಿ:

7. ಶುಂಠಿ:

ಪ್ರತಿಯೊಂದು ಮನೆಯಲ್ಲೂ ಸಾಮಾನ್ಯವಾಗಿರುವ ಮಸಾಲೆ ಪದಾರ್ಥಗಳಲ್ಲಿ ಶುಂಠಿಯೂ ಒಂದು. ಅನೇಕ ಅಡುಗೆ ವಿಧಾನಗಳಲ್ಲೂ ಇದನ್ನು ಬಳಸಲಾಗುವುದು. ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿರುವ ಈ ನೈಸರ್ಗಿಕ ಘಟಕವು ವಾಕರಿಕೆ, ನೆಗಡಿ, ಕಫ, ಹೊಟ್ಟೆಯ ತೊಂದರೆ ಹಾಗೂ ಸಂಧಿವಾತ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರಕ. ಮಂಡಿ ನೋವಿನ ಸಮಸ್ಯೆಯ ನಿವಾರಣೆಗೆ ಶುಂಠಿ ಪರಿಣಾಮಕಾರಿ ಚಿಕಿತ್ಸೆ ನೀಡುವುದು.

8. ಗ್ಲೂಕೋಸ್‍ಅಮೈನ್ ಮತ್ತು ಕೊಂಡ್ರೊಯಿಟಿನ್ ಸಲ್ಫೇಟ್:

8. ಗ್ಲೂಕೋಸ್‍ಅಮೈನ್ ಮತ್ತು ಕೊಂಡ್ರೊಯಿಟಿನ್ ಸಲ್ಫೇಟ್:

ಕಳೆದ ಎರಡು ದಶಕಗಳಿಂದ ಗ್ಲೂಕೋಸ್‍ಅಮೈನ್ ಮತ್ತು ಕೊಂಡ್ರೊಯಿಟಿನ್ ಸಲ್ಫೇಟ್ ಸಂಧಿ ನೋವಿಗೆ ಮತ್ತು ಗಂಟು ನೋವಿನ ಸಮಸ್ಯೆಗೆ ಉತ್ತಮ ಚಿಕಿತ್ಸೆ ನೀಡುವುವವು ಎಂದು ಹೇಳಲಾಗುತ್ತಿದೆ. ಮನೆಯಲ್ಲಿ ಪಡೆಯಬಹುದಾದ ಈ ಉತ್ಪನ್ನಗಳ ಮಿಶ್ರಣವನ್ನು ನಿಯಮಿತವಾಗಿ ಬಳಸುವುದರ ಮೂಲಕ ತೀವ್ರವಾದ ನೋವು ನಿವಾರಣೆ ಮಾಡಬಹುದು ಎಂದು ಹೇಳಲಾಗುತ್ತದೆ.

English summary

How to Cure Knee Pain Naturally? Here Are 8 Ways to Do So

Knee pain can occur due to various reasons such as sprain while playing or running, muscle pain, but it is seen that arthritis is a common cause of knee pain. In case of extreme pain, it is advisable to visit a medical professional, but for mild or moderate knee pain you can successfully try out some of the home-made remedies.
X
Desktop Bottom Promotion