For Quick Alerts
ALLOW NOTIFICATIONS  
For Daily Alerts

ಮುಟ್ಟಿನ ದಿನಗಳಲ್ಲಿ ಎಷ್ಟು ಬಾರಿ ಸ್ಯಾನಿಟರಿ ಪ್ಯಾಡ್ ಬದಲಿಸಬೇಕು?

|

ಮಾಸಿಕ ದಿನಗಳಲ್ಲಿ ಎದುರಾಗುವ ಸ್ರಾವ ಒಂದು ವೇಳೆ ಅತಿಯಾಗಿದ್ದರೆ ನೀವೇನು ಮಾಡುತ್ತೀರಿ? ಹೆಚ್ಚಿನ ಸ್ರಾವವಿದ್ದಾಗ ಪ್ರತಿ ಮೂರು ಗಂಟೆಗೊಮ್ಮೆ ಹಾಗೂ ಇತರ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ಬದಲಿಸುತ್ತಿರುತ್ತೀರೋ? ಒಂದು ವೇಳೆ ಈ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾಗಿದ್ದಲ್ಲಿ ಈ ಲೇಖನದಲ್ಲಿ ಒದಗಿಸಿರುವ ಅಮೂಲ್ಯ ಮಾಹಿತಿ ನಿಮ್ಮ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿದೆ.

ಋತುಚಕ್ರದ ಸಮಯದಲ್ಲಿ ರಾಷಸ್ ತಡೆಯುವ 5 ಟಿಪ್ಸ್

How Often Should You Change Pads A Day

ಮಾಸಿಕ ದಿನಗಳಲ್ಲಿ ಪ್ರತಿ ಮಹಿಳೆಯೂ ತನ್ನ ಅಗತ್ಯಕ್ಕೆ ಸೂಕ್ತವಾದ ಮೆತ್ತೆ ಅಥವಾ ಸ್ಯಾನಿಟರಿ ಪ್ಯಾಡ್ ಗಳನ್ನು ತಪ್ಪದೇ ಬಳಸಿ ಇದರ ಅಗತ್ಯತೆ ಪೂರ್ಣಗೊಂಡ ತಕ್ಷಣವೇ ಬದಲಿಸಿಕೊಳ್ಳಬೇಕು. ಈ ಸಮಯದಲ್ಲಿ ಅತಿ ಸೂಕ್ಷ್ಮ ಸಂವೇದಿಯಾಗಿರುವ ಗುಪ್ತಾಂಗಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ ಹಾಗೂ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಬೇಕಾಗುತ್ತದೆ. ಆದರೆ ಎಷ್ಟು ಸಮಯದ ಬಳಿಕ ಈ ಮೆತ್ತೆಗಳನ್ನು ಬದಲಿಸಬೇಕು ಎಂಬ ಬಗ್ಗೆ ಹೆಚ್ಚಿನವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಬನ್ನಿ, ತಜ್ಞರು ಈ ಬಗ್ಗೆ ನೀಡುವ ಅಮೂಲ್ಯ ಮಾಹಿತಿಯನ್ನು ನೋಡೋಣ:

ನಿಮ್ಮ ಮಾಸಿಕ ದಿನಗಳೆಷ್ಟು ಕಾಲ ಇರುತ್ತದೆ?

ನಿಮ್ಮ ಮಾಸಿಕ ದಿನಗಳೆಷ್ಟು ಕಾಲ ಇರುತ್ತದೆ?

ಈ ಅವಧಿ ಪ್ರತಿ ಮಹಿಳೆಯ ಆರೋಗ್ಯವನ್ನು ಅನುಸರಿಸಿ ಬೇರೆ ಬೇರೆಯಾಗಿರುತ್ತದೆ.

* ಕೆಲವು ಮಹಿಳೆಯರಿಗೆ ಈ ಅವಧಿ ಮೂರರಿಂದ ನಾಲ್ಕು ದಿನಗಳಿದ್ದರೆ ಕೆಲವು ಮಹಿಳೆಯರಿಗೆ ಎಂಟು ದಿನಗಳವರೆಗೂ ಇರಬಹುದು.

* ಮಾಸಿಕ ದಿನಗಳ ಅವಧಿಯಂತೆಯೇ ರಕ್ತಸ್ರಾವದ ಪ್ರಮಾಣವೂ ಪ್ರತಿ ಮಹಿಳೆಯ ಆರೋಗ್ಯದ ಪ್ರಕಾರ ಭಿನ್ನ ಭಿನ್ನವಾಗಿರುತ್ತದೆ. ಸಾಮಾನ್ಯ ಆರೋಗ್ಯ ಹೋಂದಿರುವ ಹೆಚ್ಚಿನ ಮಹಿಳೆಯರಲ್ಲಿ ಇದು ಹತ್ತರಿಂದ ಮೂವತ್ತೈದು ಮಿಲೀ ಯವರೆಗೆ ಇರುತ್ತದೆ. ಆದರೆ ಆರೋಗ್ಯ ಮತ್ತು ವೈಪರೀತ್ಯವನ್ನು ಅನುಸರಿಸಿ ಇದು ಸುಮಾರು 540 ಮಿಲೀ ಯವರೆಗೂ ಇರಬಹುದು.

ಮೆತ್ತೆಗಳಲ್ಲಿ ಎಷ್ಟು ವಿಧಗಳಿವೆ?

ಮೆತ್ತೆಗಳಲ್ಲಿ ಎಷ್ಟು ವಿಧಗಳಿವೆ?

ಪ್ರತಿ ಮಹಿಳೆಯ ಅಗತ್ಯತೆಯನ್ನು ಅನುಸರಿಸಿ ವಿವಿಧ ಬಗೆಗಳ ಮೆತ್ತೆಗಳನ್ನು (sanaitary pads) ನಿರ್ಮಿಸಲಾಗುತ್ತದೆ. ಅವೆಂದರೆ

* ರೆಕ್ಕೆಗಳಿಲ್ಲದಿರುವ ಮೆತ್ತೆಗಳು (Pads with or without wings)

* ಸಾಮಾನ್ಯ ಸ್ರಾವಕ್ಕಾಗಿ ದಿನದ ಅವಧಿಯಲ್ಲಿ ಮತ್ತು ರಾತ್ರಿಯ ವೇಳೆ ಬಳಸಲಾಗುವ ಮೆತ್ತೆಗಳು

* ಸುಗಂಧ ಲೇಪಿಸಿದ ಹಾಗೂ ಲೇಪಿಸಿರದ ಮೆತ್ತೆಗಳು

* ಹತ್ತಿಯ ಮತ್ತು ಇತರ ಬಟ್ಟೆಗಳಿಂದ ತಯಾರಿಸಿದ ಮೆತ್ತೆಗಳು

ಮಹಿಳೆಯರು ತಮ್ಮ ಮಾಸಿಕ ಸ್ರಾವದ ಪ್ರಮಾಣದ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಮೆತ್ತೆಯನ್ನು ಆಯ್ದುಕೊಳ್ಳಬೇಕು

ಯಾವ ಬಗೆಯ ಮೆತ್ತೆ ಅಥವಾ ಸ್ಯಾನಿಟರಿ ಪ್ಯಾಡ್ ನಿಮಗೆ ಸೂಕ್ತ?

ಯಾವ ಬಗೆಯ ಮೆತ್ತೆ ಅಥವಾ ಸ್ಯಾನಿಟರಿ ಪ್ಯಾಡ್ ನಿಮಗೆ ಸೂಕ್ತ?

ಸಾಮಾನ್ಯವಾಗಿ, ಮಹಿಳೆಯರು ಸುಗಂಧರಹಿತ ಹಾಗೂ 100 ಶೇಖಡಾ ಹತ್ತಿಯಿಂದ ಮಾಡಿರುವ ಮೆತ್ತೆಗಳನ್ನು ಆಯ್ದುಕೊಳ್ಳಬೇಕು. ಈ ಬಗೆಯ ಮೆತ್ತೆಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವುದಿಲ್ಲ, ಏಕೆಂದರೆ ಈ ಸಾವಯವ ವಸ್ತುಗಳಿಂದ ನಿರ್ಮಿಸಿದ ಮೆತ್ತೆಗಳು ವೈಭವದ ಪ್ರಚಾರ ಪಡೆದಿಲ್ಲ. ಹಾಗಾಗಿ ಈ ಮೆತ್ತೆಗಳು ಅಲಭ್ಯವಾಗಿದ್ದರೆ ಇದರ ಬದಲಾಗಿ ಕೊಂಚ ದುಬಾರಿಯಾಗಿದ್ದರೂ ಭರಿಸುವಂತಿರುವ ಹಾಗೂ ಹೆಚ್ಚಿನ ಭಾರ ಹತ್ತಿಯಿಂದಲೇ ತಯಾರಿಸಿದ ಮೆತ್ತೆಗಳನ್ನು ಕೊಳ್ಳಬಹುದು.

ಮಾಸಿಕ ದಿನಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು

ಮಾಸಿಕ ದಿನಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು

ಮಾಸಿಕ ದಿನಗಳಲ್ಲಿ ಸ್ರಾವ ಹೆಚ್ಚಾಗಿರುತ್ತದೆಯೋ, ಕಡಿಮೆ ಇರುತ್ತದೆಯೋ, ಏಕಪ್ರಕಾರವಾಗಿದೆಯೋ, ಬಿಟ್ಟು ಬಿಟ್ಟು ಬರುತ್ತದೆಯೋ, ಒಟ್ಟಾರೆ ಯಾವುದೇ ಪ್ರಕಾರ ಇದ್ದರೂ ಪ್ರತಿ ಬಾರಿಯೂ ಗುಪ್ತಾಂಗಗಳನ್ನು ಸ್ವಚ್ಛಗೊಳಿಸುವುದು ಅತಿ ಅಗತ್ಯವಾಗಿದೆ. ಸೌಮ್ಯ ಸಾಬೂನು ಬಳಸಿ ಈ ಭಾಗವನ್ನು ಸ್ವಚ್ಛಗೊಳಿಸುವುದು ಹಾಗೂ ಹೊಸ ಮೆತ್ತೆಯನ್ನು ಧರಿಸಿಕೊಳ್ಳುವ ಮೊದಲು ಚೆನ್ನಾಗಿ ಒರೆಸಿಕೊಂಡು ಒಣಗಿದ ಬಳಿಕವೇ ಧರಿಸಬೇಕು. ಇದರಿಂದ ಸೋಂಕು ಹಾಗೂ ಚರ್ಮದಲ್ಲಿ ಸೂಕ್ಷ್ಮಗೆರೆಗಳಾಗುವುದನ್ನು ತಪ್ಪಿಸಬಹುದು. ಈ ಭಾಗವನ್ನು ಆದಷ್ಟೂ ಒಣದಾಗಿರುವಂತೆ ನೋಡಿಕೊಳ್ಳುವುದೇ ಆರೋಗ್ಯ ಕಾಪಾಡಿಕೊಳ್ಳಲು ಮೂಲ ಅಗತ್ಯವಾಗಿದೆ.

ಇದರಲ್ಲಿ ಹಲವಾರು ಸೋಂಕುಕಾರಕ ಅಂಶಗಳಿರುತ್ತವೆ!

ಇದರಲ್ಲಿ ಹಲವಾರು ಸೋಂಕುಕಾರಕ ಅಂಶಗಳಿರುತ್ತವೆ!

ಸ್ರಾವಗೊಂಡ ರಕ್ತದಲ್ಲಿ ಹಲವಾರು ಸೋಂಕುಕಾರಕ ಅಂಶಗಳಿರುತ್ತವೆ ಹಾಗೂ ನೆನೆದ ಮೆತ್ತೆಯನ್ನು ಹೆಚ್ಚು ಹೊತ್ತು ಧರಿಸಿರುವುದರಿಂದ ತ್ವಚೆಯ ಸೋಂಕುಗಳು ಆವರಿಸಬಹುದು. ಇದರ ಜೊತೆಗೇ ಚರ್ಮದ ಸೂಕ್ಷ್ಮಗೀರು, ಯೋನಿಯ ಭಾಗದಲ್ಲಿ ನೋಂಕು ಹಾಗೂ ಮೂತ್ರನಾಳದಲ್ಲಿಯೂ ಸೋಂಕು ಎದುರಾಗಬಹುದು. ಇದರ ಹೊರತಾಗಿ, ಬಳಸಿದ ಮೆತ್ತೆಯನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದೂ ಮುಖ್ಯ. ಎಂದಿಗೂ ಇವುಗಳನ್ನು ಶೌಚಾಲಯದ ಕಮೋಡ್ ನಲ್ಲಿ ಹಾಕದಿರಿ. ಇವು ನೀರಿನಲ್ಲಿ ಕರಗದ ವಸ್ತುಗಳಾದ ಕಾರಣ ಇವು ಕೊಳೆನೀರು ಹೋಗುವ ಪೈಪುಗಳಲ್ಲಿ ಸಿಲುಕಿ ನೀರು ಕಟ್ಟಿಕೊಂಡು ಶೌಚಾಲಯದ ನೀರು ಮನೆಯ ಒಳ ಹರಿಯಲು ಕಾರಣವಾಗಬಹುದು! ಅಲ್ಲದೇ ನೇರವಾಗಿ ಹೊರಗೂ ಎಸೆಯದಿರಿ, ಇವುಗಳಿಂದ ವಾತಾವರಣದಲ್ಲಿ ಸೋಂಕುಕಾರಕ ಕ್ರಿಮಿಗಳು ನೀರಿಗೆ ಹರಡುವ ಸಾಧ್ಯತೆ ಇದೆ. ಬದಲಿಗೆ ಪ್ಲಾಸ್ಟಿಕ್ಕಿನಲ್ಲಿ ಸುತ್ತಿ ಕಸದ ಬುಟ್ಟಿಯಲ್ಲಿಯೇ ಎಸೆಯಬೇಕು.

ಮಾಸಿಕ ಸ್ರಾವದ ದಿನಗಳಲ್ಲಿ ಎಷ್ಟು ಬಾರಿ ಮೆತ್ತೆಗಲನ್ನು (ಪ್ಯಾಡ್) ಬದಲಿಸಬೇಕು?

ತಜ್ಞರು ಈ ಪ್ರಶ್ನೆಗೆ ಏನು ಉತ್ತರ ನೀಡುತ್ತಾರೆ ನೋಡೋಣ: ಸಾಮಾನ್ಯ ಪ್ರಮಾಣ ಹಾಗೂ ಇದಕ್ಕೂ ಕೊಂಚವೇ ಹೆಚ್ಚು ಸ್ರಾವ ಹೊಂದಿರುವ ಮಹಿಳೆಯರು ಪ್ರತಿ ನಾಲ್ಕು ಘಂಟೆಗಳಿಗೊಮ್ಮೆ ಮೆತ್ತೆಗಳನ್ನು ಬದಲಿಸಬೇಕು. ಒಂದು ವಿಷಯ ನೆನಪಿನಲ್ಲಿರಲಿ, ನಿಮ್ಮ ಮೆತ್ತೆ ರಕ್ತಸ್ರಾವವಿಲ್ಲದೇ ಸ್ವಚ್ಛವಾಗಿದೆ ಎಂದು ಅನ್ನಿಸಿದರೂ ರಕ್ತಸ್ರಾವವಾಗಿಲ್ಲ ಎಂದರ್ಥವಲ್ಲ. ಬದಲಿಗೆ ಇಂದಿನ ಹೊಸವಿನ್ಯಾಸದ ಮೆತ್ತೆಗಳು ರಕ್ತವನ್ನು ಒಳಪದರದಲ್ಲಿ ಹೀರಿಕೊಂಡು ಹೊರಪದರವನ್ನು ಒಣದಾಗಿಯೇ ಮತ್ತು ಕಲೆಯಿಲ್ಲದಂತೆ ಇರಿಸಿರುತ್ತವೆ. ನೈಮರ್ಲ್ಯಕ್ಕೆ ಈ ಗುಣ ಇರುವ ಮೆತ್ತೆಗಳು ಉತ್ತಮವಾದದೂ ನಾಲ್ಕು ಘಂಟೆಗಳಾದ ಬಳಿಕ ತಪ್ಪದೇ ಬದಲಿಸಬೇಕು.

ಸೋಂಕು ಹರಡುವ ಸಾಧ್ಯತೆ ಹೆಚ್ಚು

ಸೋಂಕು ಹರಡುವ ಸಾಧ್ಯತೆ ಹೆಚ್ಚು

ಕೆಲವರು ಈ ರಕ್ತ ಸೋಂಕುಕಾರಕವಲ್ಲ ಎಂಬ ಅಭಿಪ್ರಾಯ ಹೊಂದಿರುತ್ತಾರೆ. ವಾಸ್ತವದಲ್ಲಿ ತೇವಾಂಶವಿರುವ ಯಾವುದೇ ಭಾಗದಲ್ಲಿ ಅತಿ ಸೂಕ್ಷ್ಮ ಜೀವಿಗಳು ಅಭಿವೃದ್ಧಿಗೊಳ್ಳುತ್ತವೆ ಹಾಗೂ ಸೋಂಕು ಹರಡುತ್ತವೆ. ಮಾಸಿಕ ದಿನಗಳಲ್ಲಿ ಈ ಭಾಗದಲ್ಲಿಯೂ ಹೆಚ್ಚಿನ ತೇವಾಂಶ ಕಂಡುಬರುವ ಕಾರಣ ಸೋಂಕು ಹರಡುವ ಸಾಧ್ಯತೆ ಇದ್ದೇ ಇರುತ್ತದೆ.

ಎರಡು ಗಂಟೆಗಳಿಗೊಮ್ಮೆ ಪ್ಯಾಡ್ ಬದಲಿಸಬೇಕು

ಅತಿ ಹೆಚ್ಚು ಸ್ರಾವವನ್ನು ಎದುರಿಸುವ ಮಹಿಳೆಯರು ಪ್ರತಿ ಎರಡು ಗಂಟೆಗಳಿಗೊಮ್ಮೆ ತಮ್ಮ ಮೆತ್ತೆಗಳನ್ನು ಬದಲಿಸಿಕೊಳ್ಳಬೇಕು. ಹೀಗೆ ಮಾಡುವ ಮೂಲಕ ಮಾತ್ರವೇ ಸೂಕ್ಷ್ಮವಾದ ಈ ಪ್ರದೇಶವನ್ನು ಕೀಟಾಣುರಹಿತವಾಗಿಸಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಬಹುದು.

ಅವಧಿ ಮುಗಿದಾಕ್ಷಣ ಪ್ಯಾಡ್ ಗಳನ್ನು ಬದಲಿಸಿ

ಅವಧಿ ಮುಗಿದಾಕ್ಷಣ ಪ್ಯಾಡ್ ಗಳನ್ನು ಬದಲಿಸಿ

ಅಲ್ಲದೇ, ಮೆತ್ತೆಯಲ್ಲಿ ಸಂಗ್ರಹವಾದ ರಕ್ತ ಕೊಂಚ ಹೊತ್ತಿಗೇ ವಾಸನೆ ಹೊಡೆಯಲು ಪ್ರಾರಂಭಿಸುತ್ತದೆ, ಇದು ಸ್ವಾಭಾವಿಕವಾಗಿದೆ. ಈ ಬಗ್ಗೆ ಚಿಂತೆಗೆ ಕಾರಣವಿಲ್ಲ. ಒಂದು ವೇಳೆ ಯಾವುದೇ ವಾಸನೆ ಇಲ್ಲದೇ ಇದ್ದರೆ ಅಥವಾ ಈ ವಾಸನೆ ಅತಿ ಕಟುವಾಗಿದೆಯೇ ಎಂದು ಗಮನಿಸಬೇಕು. ಈ ವಾಸನೆಯಿಂದ ಪ್ಯಾಡ್ ಗಳ ಒಳಗೆ ಅತಿ ಸೂಕ್ಷ್ಮಜೀವಿಗಳು ಅತಿ ಹೆಚ್ಚಾಗಿ ವೃದ್ಧಿಗೊಂಡಿದೆಯೇ ಇಲ್ಲವೇ ಎಂದು ಪರಿಶೀಲಿಸಬಹುದು. ಮೆತ್ತೆಯಲ್ಲಿರುವ ತೇವಾಂಶ ಹಾಗೂ ಬೆಚ್ಚಗಿನ ತಾಪಮಾನ ಬ್ಯಾಕ್ಟೀರಿಯಾಗಳು ಬೆಳೆಯಲು ಸೂಕ್ತವಾಗಿವೆ. ಹಾಗಾಗಿ ಮೆತ್ತೆಯನ್ನು ಅದರ ಅವಧಿ ಮುಗಿದಾಕ್ಷಣ ಬದಲಿಸಿಕೊಳ್ಳಬೇಕು.

ಪ್ರತಿ ಮಹಿಳೆಯೂ ಅರಿತಿರಬೇಕಾದ ಒಂದು ಅಚ್ಚರಿಯ ಮಾಹಿತಿ

ಪ್ರತಿ ಮಹಿಳೆಯೂ ಅರಿತಿರಬೇಕಾದ ಒಂದು ಅಚ್ಚರಿಯ ಮಾಹಿತಿ

ಓರ್ವ ಮಹಿಳೆ ತನ್ನ ಜೀವಿತಾವಧಿಯಲ್ಲಿ ಸುಮಾರು 12,000 ಮೆತ್ತೆ ಅಥವಾ ದೇಹದೊಳಗೆ ತೂರಿಸಿಕೊಳ್ಳಬಹುದಾದ ಟ್ಯಾಂಪೋನ್ ಗಳನ್ನು ಬಳಸುತ್ತಾಳೆ. ಈ ಮೆತ್ತೆಗಳನ್ನು ಕಂಡುಹಿಡಿದಿರುವುದೂ ಒಂದು ಕ್ರಾಂತಿಕಾರಕ ಬೆಳವಣಿಗೆಯಾತ್ತು. ಏಕೆಂದರೆ ಇದಕ್ಕೂ ಮುನ್ನ ಮಹಿಳೆಯರು ಕೇವಲ ಬಟ್ಟೆಯನ್ನು ಮಡಚಿ ಬಳಸುತ್ತಿದ್ದರು ಹಾಗೂ ಮಲಿನಗೊಂಡ ಆ ಬಟ್ಟೆಯನ್ನೇ ಮತ್ತೆ ಮತ್ತೆ ತೊಳೆದು ಒಣಗಿಸಿ ಬಳಸುತ್ತಿದ್ದರು. ಇದು ಅತ್ಯಂತ ಅಸುರಕ್ಷಿತ ಹಾಗೂ ಸೋಂಕಿಗೆ ಕಾರಣವಾಗುವ ವಿಧಾನವಾಗಿತ್ತು. ಆದರೆ ಇಂದು ಸುಲಭವಾಗಿ ಲಭಿಸುತ್ತಿರುವ ಈ ಮೆತ್ತೆಗಳು ಮಹಿಳೆಯರ ಆರೋಗ್ಯ ಕಾಪಾಡುವಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನೇ ಸೃಷ್ಟಿಸಿದೆ. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಆಪ್ತರೊಂದಿಗೂ ಹಂಚಿಕೊಳ್ಳಿ.

English summary

How Often Should You Change Pads A Day

Every woman should choose pads that best suit their needs at all times when they are on their periods. Taking care of your intimate area and your body is extremely important. Women who have a normal to moderate flow during their periods should change pads every four hours. And women who experience a heavy flow should change every two hours.
X
Desktop Bottom Promotion