For Quick Alerts
ALLOW NOTIFICATIONS  
For Daily Alerts

ಸ್ವಚ್ಛತೆಯ ಪಾಠ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು..

By Hemanth
|

ಸ್ವಚ್ಛತೆಯ ಪಾಠ ನಮಗೆ ಬಾಲ್ಯದಿಂದಲೇ ಸಿಗುವುದು. ಇದರಿಂದಾಗಿ ನಾವು ಬೆಳೆಯುತ್ತಾ ಇರುವಂತೆ ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸುತ್ತೇವೆ. ಇಂದಿನ ದಿನಗಳಲ್ಲಿ ದೇಶದ ಪ್ರಧಾನ ಮಂತ್ರಿಗಳೇ ಸ್ವಚ್ಛತೆ ಬಗ್ಗೆ ಪಾಠ ಮಾಡಲು ಶುರು ಮಾಡಿದ ಬಳಿಕ ಪ್ರತಿಯೊಬ್ಬರು ಜಾಗೃತರಾಗಿ ಸ್ವಚ್ಛತೆ ಕಡೆ ಗಮನಹರಿಸುತ್ತಿದ್ದಾರೆ.

ಇದು ನಮ್ಮ ಸುತ್ತಲಿನ ಸ್ವಚ್ಛತೆ ಮಾತ್ರವಲ್ಲದೆ, ದೇಹದ ಸ್ವಚ್ಛತೆ ಕೂಡ ಇದರಲ್ಲಿ ಒಳಗೊಂಡಿದೆ. ಅದರಲ್ಲೂ ನಾವು ಮಾಡುವಂತಹ ಕೆಲವೊಂದು ಕೆಲಸಗಳಿಂದ ಕೀಟಾಣುಗಳು ಹಾಗೂ ಬ್ಯಾಕ್ಟೀರಿಯಾಗಳು ದೇಹದೊಳಗೆ ಸೇರಿಕೊಳ್ಳುವ ಕಾರಣದಿಂದ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಷ್ಟು ಮಾತ್ರವಲ್ಲದೆ ಏನೇ ಆಹಾರವಾದರೂ ಮೊದಲು ಕೈತೊಳೆದು ತಿನ್ನಬೇಕು. ಆದರೆ ಎಷ್ಟು ಕಾಲ ಕೈ ತೊಳೆಯಬೇಕು ಎಂದು ನಾವು ಈ ಲೇಖನದ ಮೂಲಕ ತಿಳಿದುಕೊಂಡು ಸ್ವಚ್ಛತೆ ಕಾಪಾಡುವ.

hands wash

20 ಸೆಕೆಂಡುಗಳ ಕಾಲ...
ರೋಗ ನಿಯಯಂತ್ರಣ ಹಾಗೂ ತಡೆ ಕೇಂದ್ರದ ಪ್ರಕಾರ ಪ್ರತಿಯೊಬ್ಬರು ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲಬೇಕಾದರೆ ಸುಮಾರು 20 ಸೆಕೆಂಡುಗಳ ಕಾಲ ಕೈ ತೊಳೆದುಕೊಳ್ಳಬೇಕು. ಕೇವಲ ಎರಡು ಸೆಕೆಂಡುಗಳ ಕಾಲ ನೀವು ಕೈಗೆ ಸಾಬೂನು ಹಾಕಿಕೊಂಡು ಉಜ್ಜಿದರೆ ಅದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. 20 ಸೆಕೆಂಡು ಎಷ್ಟು ಎಂದು ನಿಮಗೆ ಗೊಂದಲವಿದ್ದರೆ ಆಗ ನೀವು ಹ್ಯಾಪಿ ಬರ್ತ್ ಡೇ ಟು ಯೂ....' ಹಾಡನ್ನು ಮನಸ್ಸಿನಲ್ಲೇ ಎರಡು ಸಲ ಹಾಡಿ. ಆದರೆ ಇಡೀ ದಿನ ಈ ಹಾಡು ನಿಮ್ಮ ತಲೆಯಲ್ಲೇ ತಿರುಗುತ್ತಾ ಇದ್ದರೆ ಅದು ದೊಡ್ಡ ಸಮಸ್ಯೆಯಾಗಬಹುದು.

20 ಸೆಕೆಂಡುಗಳ ಕಾಲ ಕೈಗಳನ್ನು ಉಜ್ಜಿಕೊಳ್ಳಲು ಏನು ಮಾಡಬೇಕು?
ಕೇವಲ ಅಂಗೈಯ ಹಿಂಭಾಗ ಹಾಗೂ ಎದುರಿನ ಭಾಗಕ್ಕೆ ಸಾಬೂನು ಹಾಕಿ ಉಜ್ಜಿಕೊಂಡರೆ ಆಗ 20 ಸೆಕೆಂಡು ಎನ್ನುವುದು ತುಂಬಾ ದೀರ್ಘವೆನಿಸಬಹುದು.

1. ಅಂಗೈ ಅಡಿ ಮತ್ತು ಹಿಂಬದಿ ಉಜ್ಜಿಕೊಳ್ಳಿ
ಮೊದಲು ಎರಡು ಅಂಗೈಗಳನ್ನು ಸರಿಯಾಗಿ ಉಜ್ಜಿಕೊಳ್ಳಿ. ಈಗ ಒಂದು ಕೈಯಿಂದ ಇನ್ನೊಂದು ಕೈಯ ಹಿಂದಿನ ಭಾಗ ತೊಳೆಯಿರಿ. ಐದು ನಿಮಿಷ ಕಾಲ ಹೀಗೆ ಮಾಡಿ.

2. ಈಗ ಬೆರಳನ್ನು ತೊಳೆಯಿರಿ
ಎರಡು ಕೈಯ ಬೆರಳುಗಳನ್ನು ಪರಸ್ಪರ ಒಂದರ ನಡುವೆ ಇನ್ನೊಂದನ್ನು ಸಿಕ್ಕಿಸಿಕೊಂಡು ಹಿಂದಕ್ಕೆ ಹಾಗೂ ಮುಂದಕ್ಕೆ ಮಾಡಿಕೊಳ್ಳಿ. 5 ನಿಮಿಷ ಕಾಲ ಹೀಗೆ ಮಾಡಿ.

3. ಉಗುರುಗಳನ್ನು ಸ್ಕ್ರಬ್ ಮಾಡಿ
ಉಗುರಿನಲ್ಲಿ ಯಾವಾಗಲೂ ಕೀಟಾಣುಗಳು ಕುಳಿತುಕೊಳ್ಳುವುದು ಹೆಚ್ಚು. ಇದರಿಂದ ಅಂಗೈ ಮೇಲೆ ಉಗುರುಗಳನ್ನು 2.5 ನಿಮಿಷ ಕಾಲ ಸ್ಕ್ರಬ್ ಮಾಡಿ. ಎರಡು ಕೈಗಳ ಉಗುರು ಸ್ಕ್ರಬ್ ಮಾಡಲು 5 ಸೆಕೆಂಡು ತೆಗೆದುಕೊಳ್ಳಿ.

4. ಹೆಬ್ಬೆರಳು ತೊಳೆಯಿರಿ
ಕೈಗಳನ್ನು ತೊಳೆಯುವಾಗ ಹೆಬ್ಬೆರಳುಗಳು ನಿರ್ಲಕ್ಷ್ಯಕ್ಕೆ ಒಳಗಾಗುವುದು. ಇದರಿಂದ ಇದರ ಕಡೆ ಗಮನಹರಿಸಿ. ಒಂದು ಅಂಗೈಯನ್ನು ಮಡಚಿಕೊಂಡು ಇನ್ನೊಂದು ಹೆಬ್ಬೆರಳನ್ನು ಹಿಡಿದು ತೊಳೆಯಿರಿ. ಹೀಗೆ ಮತ್ತೊಂದು ಕೈಯ ಹೆಬ್ಬೆರಳಿಗೂ ಮಾಡಿ. 5 ಸೆಕೆಂಡು ಕಾಲ ಹೀಗೆ ಮಾಡಿ.

ಸೋಪು vs ಹ್ಯಾಂಡ್ ಸ್ಯಾನಿಟೈಸರ್: ಇದರಲ್ಲಿ ಉತ್ತಮ ಯಾವುದು?
ನೀವು ನೀರಿಲ್ಲದೆ ಕಡೆಗೆ ಪ್ರಯಾಣ ಬೆಳೆಸುತ್ತಿರಬೇಕಾದರೆ ಈ ಸಮಯದಲ್ಲಿ ನಿಮಗೆ ಹ್ಯಾಂಡ್ ಸ್ಯಾನಿಟೈಸರ್ ಅಗತ್ಯವಾಗಿ ಬೇಕಾಗುವುದು. ಶೇ.60ರಷ್ಟು ಆಲ್ಕೋಹಾಲ್ ಇರುವಂತಹ ಹ್ಯಾಂಡ್ ಸ್ಯಾನಿಟೈಸರ್ ಬಳಸಿಕೊಳ್ಳಿ. ಆದರೆ ದಿನನಿತ್ಯದ ಬಳಕೆಗೆ ನಿಮಗೆ ಸೋಪು ಮತ್ತು ನೀರು ತುಂಬಾ ಒಳ್ಳೆಯ ಆಯ್ಕೆ. ಆದರೆ ಸೋಪುಗಳಿಗೆ ಹಾಕಿರುವಂತಹ ಆ್ಯಂಟಿಬಯೋಟಿಕ್ ಗಳು ತುಂಬಾ ಕೆಟ್ಟದು. ಯಾಕೆಂದರೆ ಇದು ಸೂಕ್ಷ್ಮಾಣು ಜೀವಿಗಳಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ವೈದ್ಯಕೀಯ ಲೋಕದಲ್ಲೂ ಇದು ದೊಡ್ಡ ಸಮಸ್ಯೆ ಎಂದು ಪರಿಗಣಿಸಲಾಗಿದೆ. ಯಾವಾಗಲೂ ಶೌಚಾಲಯಕ್ಕೆ ಮತ್ತು ಇತರ ಕಡೆಗಳಿಗೆ ಹೋಗಿ ಬಂದು ಕೈ ತೊಳೆಯದೆ ಇದ್ದರೆ ಅಂತಹವರಿಗೆ ಈ ಲೇಖನವನ್ನು ಶೇರ್ ಮಾಡಿ.

English summary

How often do you wash your hands and for how much duration?

If you are wondering how long should I wash my hands, this article will answer that question. Plus, you probably have been washing your hands wrong all this while, so here’s the correct technique for washing your hands with soap and water.
X
Desktop Bottom Promotion