For Quick Alerts
ALLOW NOTIFICATIONS  
For Daily Alerts

ನಾಲ್ಕೇ ನಾಲ್ಕು ದಿನದಲ್ಲಿ ಹೊಟ್ಟೆಯ ಕೊಬ್ಬು ಕರಗಿಸಲು ಸರಳ ಟಿಪ್ಸ್

|

ಸಪಾಟಾದ ಹೊಟ್ಟೆ ಪ್ರತಿಯೊಬ್ಬರ ಕನಸು. ಆದರೆ ಇಂದಿನ ದಿನಗಳಲ್ಲಿ ಕೆಲಸ ಕಡಿಮೆಯಾದ ಕಾರಣ ಸೊಂಟದ ಸುತ್ತಳತೆ ವಿಶಾಲವಾಗುತ್ತಾ ಸಾಗುತ್ತದೆ. ಇದಕ್ಕೆ ಇಂಬುಕೊಡುವಂತೆ ಸಿದ್ಧ ಆಹಾರಗಳು, ವ್ಯಾಯಾಮದ ಕೊರತೆ, ಟಿವಿ ನೋಡುವಾಗ ತಿನ್ನುವ ಕುರುಕು ತಿಂಡಿಗಳು, ಹೆಚ್ಚಿನ ಕೊಬ್ಬಿನ ಅಂಶವಿರುವ ಆಹಾರಗಳನ್ನು ಮದುವೆ, ವಿಹಾರ, ಕೂಟಗಳಲ್ಲಿ ತಿನ್ನುವುದು ಇತ್ಯಾದಿಗಳೆಲ್ಲಾ ಕಾರಣವಾಗಿವೆ.

ಸೊಂಟ ವಿಶಾಲವಾದಷ್ಟೂ ಹೊಟ್ಟೆಯೂ ಕೊಂಚ ಮುಂದೆ ಬಂದು, ಹೇಸಿಗೆ ಮೂಡಿಸುವಂತಿರುತ್ತದೆ, ಅದರಲ್ಲೂ ಸ್ತ್ರೀಯರ ಬಳುಕುತನವನ್ನು ಕಸಿದುಕೊಳ್ಳುವುದು ಮಾತ್ರವಲ್ಲ, ಮಾನಸಿಕವಾಗಿಯೂ ಹೈರಾಣಾಗಿಸುತ್ತದೆ ಸಪಾಟಾದ ಹೊಟ್ಟೆ ಬೇಕೆಂದರೆ ನಮ್ಮ ಶರೀರವನ್ನು ನಿಸರ್ಗ ಹೇಗೆ ನಿರ್ಮಿಸಿದೆಯೋ ಆ ಕೆಲಸಕ್ಕೆ ತಕ್ಕಂತೆ ಮತ್ತೊಮ್ಮೆ ಮಾರ್ಪಾಡಿಸುವುದು ಅಗತ್ಯ.

ನಿಸರ್ಗ ನಮ್ಮ ಶರೀರವನ್ನು ಇಡಿಯ ದಿನ ಕುಳಿತಿರಲು ಅಲ್ಲ, ಬದಲಿಗೆ ಕೆಲಸ ಮಾಡುತ್ತಲೇ ಇರಲು ನಿರ್ಮಿಸಿದೆ. ಆ ಪ್ರಕಾರ ದಿನವಿಡೀ ಒಂದಲ್ಲಾ ಒಂದು ಕೆಲಸದಲ್ಲಿ ಮಗ್ನರಾಗಿದ್ದು ಸಾತ್ವಿಕ ಆಹಾರ ಸೇವನೆಯ ಮೂಲಕ ಕೆಲವೇ ದಿನಗಳಲ್ಲಿ ಉತ್ತಮ ಆರೋಗ್ಯ ಹಾಗೂ ಸಪಾಟಾದ ಹೊಟ್ಟೆಯನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಅತ್ಯುತ್ತಮವಾದ ಆಹಾರವನ್ನು ಇಂದು ಬೋಲ್ಡ್ ಸ್ಕೈ ತಂಡ ಪ್ರಸ್ತುತಪಡಿಸುತ್ತಿದೆ.....

ಲೋಳೆಸರ ಮತ್ತು ಜೇನಿನ ಪಾನೀಯ

ಲೋಳೆಸರ ಮತ್ತು ಜೇನಿನ ಪಾನೀಯ

ಹೊಟ್ಟೆಯ ಕೊಬ್ಬು ಕರಗಿಸಲು ಲೋಳೆಸರವೂ ಉತ್ತಮವಾಗಿದೆ. ಒಂದು ವೇಳೆ ಹೊಟ್ಟೆಯಲ್ಲಿ ಆಮ್ಲೀಯತೆ, ಅಜೀರ್ಣ, ಹೊಟ್ಟೆ ಉಬ್ಬರಿಕೆ ಮೊದಲಾದ ತೊಂದರೆಗಳಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಎರಡು ದೊಡ್ಡಚಮಚ ಲೋಳೆಸರದ ರಸ ಮತ್ತು ಒಂದು ದೊಡ್ಡಚಮಚ ಜೇನು ಸೇರಿಸಿ ಮಿಶ್ರಣ ಮಾಡಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಕೊಂಚವೇ ಬಿಸಿ ಮಾಡಿಕೊಂಡು ಪ್ರಥಮ ಆಹಾರವಾಗಿ ಸೇವಿಸಿ. ಒಂದು ಗಂಟೆಯ ಬಳಿಕವೇ ಉಪಾಹಾರ ಸೇವಿಸಿ.

ಸೌತೆ ಜ್ಯೂಸ್

ಸೌತೆ ಜ್ಯೂಸ್

ಹೊಟ್ಟೆಯ ಕೊಬ್ಬನ್ನು ಕರಗಿಸಲು ಸೌತೆಯ ಜ್ಯೂಸ್ ಮಾಡಿಕೊಂಡು ಕುಡಿದರೆ ಉತ್ತಮ. ಈ ರಸವನ್ನು ನಿತ್ಯವೂ ಸೇವಿಸುವ ಮೂಲಕ ದೇಹದ ಕಲ್ಮಶಗಳನ್ನು ದೂರಾಗಿಸಿ ಆರೋಗ್ಯವನ್ನು ವೃದ್ದಿಸಿಕೊಳ್ಳುವುದರ ಜೊತೆಗೇ ಹೊಟ್ಟೆಯ ಕೊಬ್ಬನ್ನು ಕರಗಿಸಿ ಸ್ಥೂಲಕಾಯಕ್ಕೂ ವಿದಾಯ ಹೇಳಬಹುದು.

* ಒಂದು ಕಪ್ ನೀರಿನಲ್ಲಿ ಸುಮಾರು ಎಂಟರಿಂದ ಹತ್ತು ಪುದಿನಾ ಎಲೆಗಳನ್ನು ಹಾಕಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿ ಆರಿಸಿ ಐದು ನಿಮಿಷ

ಹಾಗೇ ಬಿಡಿ.

* ಒಂದು ಮಧ್ಯಮ ಗಾತ್ರದ ಸೌತೆಕಾಯಿಯ ಸಿಪ್ಪೆ ಸುಲಿದು ದೊಡ್ಡ ತುಂಡುಗಳನ್ನಾಗಿಸಿ ಮಿಕ್ಸಿಯಲ್ಲಿ ನುಣ್ಣಗೆ ಕಡೆಯಿರಿ.

* ಇದಕ್ಕೊಂದು ಲಿಂಬೆಯ ರಸವನ್ನು ಹಿಂಡಿ.

* ಈಗ ಪುದೀನಾ ಕುದಿಸಿದ್ದ ನೀರನ್ನು ಹಾಕಿ.

* ಇದಕ್ಕೆ ಒಂದೂವರೆ ಲೀಟರಿನಷ್ಟು ನೀರನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.

* ಒಂದು ವೇಳೆ ನಿಮಗೆ ಇಷ್ಟವಾದರೆ ಒಂದು ಚಿಕ್ಕ ಚಮಚದಷ್ಟು ತುರಿದ ಹಸಿಶುಂಠಿಯನ್ನೂ ಬೆರೆಸಬಹುದು.

* ಈ ನೀರನ್ನು ದಿನವಿಡೀ ಕೊಂಚಕೊಂಚವಾಗಿ ಕುಡಿಯುತ್ತಿರಿ, ಅಥವಾ ಮೂರು ಹೊತ್ತಾದರೂ ತಪ್ಪದೇ ಕುಡಿದು ದಿನದ ಕೊನೆಯಲ್ಲಿ ಮುಗಿಸಬೇಕು.

ಅಕ್ರೋಟು ತಿನ್ನಿ

ಅಕ್ರೋಟು ತಿನ್ನಿ

ಪ್ರತಿದಿನ ಒಂದೆರಡು ಅಕ್ರೋಟು ತಿನ್ನುವುದು ತೂಕ ಇಳಿಸಲು ನೆರವಾಗುತ್ತದೆ. ಇದರಲ್ಲಿರುವ ಎಲಾರ್ಜಿಕ್ ಆಮ್ಲ (ellagic acid) ಎಂಬ ಪೋಷಕಾಂಶ ದೇಹದಲ್ಲಿ ಎದುರಾಗಬಹುದಾಗಿದ್ದ ಉರಿಯೂತವನ್ನು ತಡೆಯುತ್ತದೆ. ಈ ತೊಂದರೆ ಉಂಟಾದರೆ ರಕ್ತದಲ್ಲಿ ಇನ್ಸುಲಿನ್ ವಿರೋಧಿ ಗುಣ ಉಂಟಾಗಿ ಮಧುಮೇಹ ಆವರಿಸುತ್ತದೆ. ಇನ್ಸುಲಿನ್ ಬಳಕೆಯಾಗುವ ಮೂಲಕ ಸಕ್ಕರೆಯೂ ಬಳಕೆಯಾಗಿ ಕೊಬ್ಬು ಕರಗಲು ನೆರವಾಗುತ್ತದೆ.ಜೊತೆಗೇ ಇದರಲ್ಲಿರುವ ಒಮೆಗಾ 3 ಕೊಬ್ಬಿನ ತೈಲ, ನಾರು ಮತ್ತು ಪ್ರೋಟೀನ್ ಹಸಿವಾಗುವುದನ್ನು ತಡೆದು ಇನ್ನಷ್ಟು ಆಹಾರ ಸೇವಿಸುವುದರಿಂದ ತಡೆಯುತ್ತದೆ. ಪರೋಕ್ಷವಾಗಿ ಕೊಬ್ಬು ಬಳಸಲ್ಪಡುವ ಮೂಲಕ ಕರಗುತ್ತದೆ.

ಬೀನ್ಸ್

ಬೀನ್ಸ್

ಅಪಾನವಾಯುವಿಗೆ ಆಹ್ವಾನ ಎಂಬ ಒಂದೇ ಅವಗುಣವನ್ನು ಬಿಟ್ಟರೆ ಬೀನ್ಸ್ ತೂಕವಿಳಿಸಲು ಉತ್ತಮವಾದ ಆಹಾರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬಿನ ಅವಶ್ಯಕತೆ ಇರುವುದರಿಂದ ದೇಹ ಅನಿವಾರ್ಯವಾಗಿ ಕೊಬ್ಬನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಅಲ್ಲದೇ ಬೀನ್ಸ್ ಕರಗಲು ಹೆಚ್ಚು ಹೊತ್ತು ಬೇಕಾಗುವುದರಿಂದ ಪದೇ ಪದೇ ತಿನ್ನುವುದರಿಂದ ತಪ್ಪಿಸಿಕೊಂಡು ಪರೋಕ್ಷವಾಗಿ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಸಾಮಾನ್ಯ ಚಹಾ ಬದಲಿಗೆ ಹಸಿರು ಚಹಾ ಸೇವಿಸಿ

ಸಾಮಾನ್ಯ ಚಹಾ ಬದಲಿಗೆ ಹಸಿರು ಚಹಾ ಸೇವಿಸಿ

ಹಸಿರು ಟೀಯಲ್ಲಿ ಹಲವಾರು ಆರೋಗ್ಯಕರ ಪೋಷಕಾಂಶಗಳಿದ್ದು ತೂಕ ಇಳಿಸಲೂ ನೆರವಾಗುತ್ತದೆ. ಕಾಫಿ ನಿಮ್ಮನ್ನು ಕೊಂಚ ಹೊತ್ತು ಎಚ್ಚರಿರಲು ಸಹಕರಿಸಿದರೂ ಉಳಿದಂತೆ ಕೊಬ್ಬನ್ನು ಹೆಚ್ಚಿಸಲು ನೆರವಾಗುತ್ತದೆ. ಬದಲಿಗೆ ಹಸಿರು ಚಹಾ ಸೇವಿಸುವ ಮೂಲಕ ನಿದ್ದೆಯನ್ನು ನಿಯಂತ್ರಿಸುವ ಜೊತೆಗೇ ತೂಕವನ್ನೂ ಕಳೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಇದರಲ್ಲಿಯೂ ಸಕ್ಕರೆ ಅಲ್ಪಪ್ರಮಾಣದಲ್ಲಿ ಅಥವಾ ಇಲ್ಲದೇ ಇದ್ದರೂ ಉತ್ತಮ.

 ಕಾಳುಮೆಣಸಿನ ಪುಡಿ ಬಳಸಿ

ಕಾಳುಮೆಣಸಿನ ಪುಡಿ ಬಳಸಿ

ಕಾಳುಮೆಣಸಿಗೆ ಖಾರದ ರುಚಿ ನೀಡುವ ಪೈಪರಿನ್ (piperine) ಎಂಬ ಪೋಷಕಾಂಶ ಆರೋಗ್ಯಕ್ಕೆ ಹಲವು ವಿಧದಲ್ಲಿ ಉಪಯೋಗಕಾರಿಯಾಗಿದೆ. ಉರಿಯೂತವನ್ನು ನಿವಾರಿಸುವ ಈ ಪೋಷಕಾಂಶವನ್ನು ಕರಗಿಸಲು ಹೆಚ್ಚಿನ ಪ್ರಮಾಣದ ಕೊಬ್ಬು ಬೇಕಾಗುತ್ತದೆ. ಇದು ಕೊಬ್ಬಿನ ಪ್ರಮಾಣವನ್ನು ಕಡಿಮೆಗೊಳಿಸಿ ಸೊಂಟದ ಸುತ್ತಳತೆಯನ್ನು ಕಡಿಮೆಮಾಡುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಮಟ್ಟವನ್ನೂ ತಗ್ಗಿಸುತ್ತದೆ. ತಮ್ಮಲ್ಲಿರುವ ತೂಕ ಇಳಿಕೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಇದಕ್ಕಾಗಿ ಮುಖ್ಯ ಪುಟದ ಕಮೆಂಟ್ಸ್ ಸ್ಥಳವನ್ನು ಬಳಸಿಕೊಳ್ಳಿ.

ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ

ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ

ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕು ಎಂಬ ಕಟ್ಟುಪಾಡುಗಳನ್ನೆಲ್ಲಬಿಟ್ಟುಬಿಡಿ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಇಲ್ಲದ ಕಾರಣ ಹೊಟ್ಟೆಯಿಂದ "ಬೇಕೇ ಬೇಕು ಊಟ ಬೇಕು" ಎಂಬ ಘೋಷಣೆಗಳು ಬರುತ್ತಲೇ ಇರುತ್ತವೆ. ಹೀಗೆ ಬಂದಾಗಲೆಲ್ಲಾ ಒಂದು ಲೋಟ ತಣ್ಣೀರು ಕುಡಿಯಿರಿ, ಇಡಿಯ ದಿನ ಕುಡಿಯುತ್ತಿರಿ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ.

ಲಿಂಬೆ ಹಣ್ಣಿನ ರಸ

ಲಿಂಬೆ ಹಣ್ಣಿನ ರಸ

ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ.

*ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.

*ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಟ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ.

*ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ನಿಮ್ಮ ನಿತ್ಯದ ಪೇಯಗಳಾದ ಟೀ, ಕಾಫಿ ಅಥವಾ ಹಾಲಿನ ಮೇಲೆ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿ ಕಲಕಿ ಕುಡಿಯಿರಿ.

* ನಿಮ್ಮ ನಿತ್ಯದ ಉಪಾಹಾರಗಳಾದ ಉಪ್ಪಿಟ್ಟು, ಬ್ರೆಡ್ ಟೋಸ್ಟ್ ಮೊದಲಾದವುಗಳ ಮೇಲೆ ಕೊಂಚವಾಗಿ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಿರಿ

* ನಿತ್ಯದ ಸಾಲಾಡ್ (ಅಥವಾ ಪಲ್ಯ)ಗಳ ಮೇಲೆ ಚಿಮುಕಿಸಿ ಸೇವಿಸಿ. ಕೆಲವೇ ದಿನಗಳಲ್ಲಿ ಕೊಬ್ಬು ಕರಗತೊಡಗಿರುವುದು ಗಮನಕ್ಕೆ ಬರುತ್ತದೆ.

ಓಟ್ಸ್

ಓಟ್ಸ್

ಹೊಟ್ಟೆ ಕರಗಿಸುವ ಇರಾದೆಯುಳ್ಳವರಿಗೆ ಓಟ್ಸ್ ಉತ್ತಮ ಆಯ್ಕೆಯಾಗಿದೆ. ಬೆಳಗ್ಗಿನ ಉಪಾಹಾರಕ್ಕೆ ಓಟ್ಸ್ ಉತ್ತಮ ಆಯ್ಕೆಯಾಗಿದ್ದು ದಿನಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಜೊತೆಗೇ ಇದು ಜೀರ್ಣಗೊಳ್ಳಲು ಶರೀರದ ಕೊಬ್ಬನ್ನು ಬಳಸುವ ಮೂಲಕ ಕೊಬ್ಬು ಕರಗಲು ನೆರವಾಗುತ್ತದೆ. ಇದರಲ್ಲಿ ಕರಗದ ನಾರು ಅತಿ ಹೆಚ್ಚಾಗಿರುವ ಕಾರಣ ಇದನ್ನು ಜೀರ್ಣಿಸಿಕೊಳ್ಳುವ ಯತ್ನದಲ್ಲಿ ದೇಹ ಹೆಚ್ಚಿನ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಅಲ್ಲದೇ ಪದೇ ಪದೇ ಹಸಿವಾಗುವುದರಿಂದ ರಕ್ಷಿಸುತ್ತದೆ.

English summary

how to lose belly fat in one week and get flat stomach

Using just a few natural ingredients like dry ginger, black pepper, ajwain, ... These Ingredients Have Proven To Reduce Belly Fat In One Week
X
Desktop Bottom Promotion