For Quick Alerts
ALLOW NOTIFICATIONS  
For Daily Alerts

ಊಟವಾದ ಬಳಿಕ ನೀರು ಕುಡಿಯಲು ಎಷ್ಟು ಹೊತ್ತು ಕಾಯಬೇಕು?

|

ಸಾಮಾನ್ಯವಾಗಿ ಊಟವಾದ ತಕ್ಷಣ ನಾವೆಲ್ಲಾ ಒಂದು ದೊಡ್ಡ ಲೋಟ ನೀರು ಕುಡಿಯಲು ಹವಣಿಸುತ್ತೇವೆ. ವರ್ಷಗಳಿಂದ ನಡೆದುಬಂದ ಅಭ್ಯಾಸದಿಂದ ನಮ್ಮಲ್ಲಿ ಹಲವರಿಗೆ ಊಟದ ನಡುವೆ ಮತ್ತು ಕಡ್ಡಾಯವಾಗಿ ಎಂಬಂತೆ ಊಟದ ಬಳಿಕ ನೀರು ಕುಡಿಯದೇ ಇದ್ದರೆ ಆಗುವುದೇ ಇಲ್ಲ.

ನೀರು ನಮ್ಮ ದೇಹಕ್ಕೆ ಅತಿ ಅಗತ್ಯವಾಗಿದೆ ನಿಜ, ದಿನಕ್ಕೆ ಸಾಕಷ್ಟು ಬಾರಿ, ಸಾಕಷ್ಟು ಪ್ರಮಾಣದಲ್ಲಿ ಕುಡಿಯಬೇಕು, ಇದೂ ನಿಜ. ಆದರೆ ದಿನದ ಕೆಲವು ಅವಧಿಗಳಲ್ಲಿ ನೀರು ಕುಡಿಯದಿರುವುದೇ ಆರೋಗ್ಯಕರವಾಗಿದೆ. ಇದರಲ್ಲಿ ಪ್ರಮುಖವಾದ ಸಂದರ್ಭವೆಂದರೆ ಊಟವಾದ ಬಳಿಕ ಕುಡಿಯುವ ನೀರು. ಈ ಅಭ್ಯಾಸಕ್ಕೆ ಒಳಗಾದವರು ಮೊದಲು ಕೇಳುವ ಪ್ರಶ್ನೆ "ಏಕೆ?"

ಮೊದಲನೆಯದಾಗಿ, ಊಟದ ಬಳಿಕ ಮಾತ್ರವಲ್ಲ, ಊಟಕ್ಕೂ ಮೊದಲು ಅಥವಾ ಊಟದ ನಡುವೆಯೂ ನೀರು ಕುಡಿಯಬಾರದು! ಈ ಮಾಹಿತಿಯನ್ನು ಅರಗಿಸಿಕೊಳ್ಳಲು ಈಗ ಈ ಅಭ್ಯಾಸಕ್ಕೆ ಒಳಗಾಗಿರುವವರಿಗೆ ಕಷ್ಟವಾಗಬಹುದು, ಆದರೆ ದಿನಂಪ್ರತಿ ಇದನ್ನು ಅನುಸರಿಸುತ್ತಾ ಬಂದರೆ ಇದು ಅಸಾಧ್ಯವೇನಲ್ಲ! ಈ ಮಾಹಿತಿ ಓದಿದ ಬಳಿಕ ಈ ವ್ಯಕ್ತಿಗಳ ಮನದಲ್ಲಿ ಈ ಪ್ರಶ್ನೆ ಮಾತ್ರ ಮೂಡಿಯೇ ಇರುತ್ತದೆ. ಅದೆಂದರೆ: ಊಟದ ಬಳಿಕ ತಕ್ಷಣ ನೀರು ಕುಡಿಯಬಾರದು ಸರಿ, ಆದರೆ ಊಟದ ಬಳಿಕ ಎಷ್ಟು ಹೊತ್ತು ಬಿಟ್ಟು ಕುಡಿಯಬೇಕು? ಮುಂದೆ ಓದಿ...

ಊಟದ ಬಳಿಕ ಸುಮಾರು ಅರ್ಧ ಗಂಟೆ ಬಿಟ್ಟು ನೀರು ಕುಡಿಯಿರಿ

ಊಟದ ಬಳಿಕ ಸುಮಾರು ಅರ್ಧ ಗಂಟೆ ಬಿಟ್ಟು ನೀರು ಕುಡಿಯಿರಿ

ಸರಳವಾಗಿ ಹೇಳುವುದಾದರೆ ಊಟದ ಬಳಿಕ ಸುಮಾರು ಅರ್ಧ ಗಂಟೆಯಾದರೂ ನೀರು ಕುಡಿಯದೇ, ಆ ಬಳಿಕ ಕುಡಿಯಬಹುದು. ಏಕೆಂದರೆ ಊಟದ ಬಳಿಕ ಜೀರ್ಣಕ್ರಿಯೆ ಪೂರ್ಣಗೊಳ್ಳಲು ಸುಮಾರು ಎರಡು ಘಂಟೆ ಬೇಕಾಗುತ್ತದೆ. ಅನ್ನನಾಳದಿಂದ ಪ್ರಾರಂಭಗೊಳ್ಳುವ ಜೀರ್ಣಾಂಗ ವ್ಯವಸ್ಥೆಯಲ್ಲಿ ಬಳಿಕ ಜಠರ, ನಂತರ ಸಣ್ಣ ಕರುಳು, ಬಳಿಕ ದೊಡ್ಡ ಕರುಳು, ನಂತರ ಗುದದ್ವಾರದ ಮೂಲಕ ಕಲ್ಮಶಗಳು ವಿಸರ್ಜಿಸಲ್ಪಡುತ್ತವೆ.

ಊಟದ ಬಳಿಕ ತಕ್ಷಣವೇ ನೀರು ಕುಡಿದರೆ ಸಮತೋಲನ ತಪ್ಪುತ್ತದೆ...

ಊಟದ ಬಳಿಕ ತಕ್ಷಣವೇ ನೀರು ಕುಡಿದರೆ ಸಮತೋಲನ ತಪ್ಪುತ್ತದೆ...

ಇಡಿಯ ಜೀರ್ಣವ್ಯವಸ್ಥೆಯಲ್ಲಿ ಆಹಾರದ ಘನ ಮತ್ತು ನೀರಿನ ದ್ರವ ಗುಣಗಳೆರಡೂ ಮಿಶ್ರಣಗೊಂಡು ಸುಲಭವಾಗಿ ಚಲಿಸಲು ಸಾಧ್ಯವಾಗುವಂತಿರಬೇಕು. ಊಟದ ಬಳಿಕ ತಕ್ಷಣವೇ ನೀರು ಕುಡಿಯುವುದರಿಂದ ಈ ಸಮತೋಲನ ತಪ್ಪುತ್ತದೆ. ಊಟದ ಬಳಿಕ ಜಠರದಲ್ಲಿ ನಡೆಯುವ ಜೀರ್ಣಕ್ರಿಯೆಗೆ ಜಠರ ರಸದ ಆಮ್ಲೀಯವಾಗಿರುವುದು ಅಗತ್ಯವಾಗಿದೆ. ಈಗ ನೀರು ಕುಡಿದರೆ ಈ ಅಮ್ಲೀಯತೆ ಕಡಿಮೆಯಾಗಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಕುಗ್ಗುತ್ತದೆ. ಪರಿಣಾಮವಾಗಿ ಇದು ಸಾಮಾನ್ಯವಾಗಿರುದಕ್ಕಿಂತಲೂ ಇನ್ನಷ್ಟು ಹಸಿವು ಹೆಚ್ಚಿಸುತ್ತದೆ ಹಾಗೂ ಅಗತ್ಯಕ್ಕೂ ಕೆಚ್ಚು ಕ್ಯಾಲೋರಿಗಳನ್ನು ಸೇವಿಸಲು ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ.

Most Read:ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಜೇನುತುಪ್ಪ ಸೇವಿಸಿದರೆ, ಆರೋಗ್ಯಕ್ಕೆ ಲೆಕ್ಕಕ್ಕೆ ಸಿಗದಷ್ಟು ಪ್ರಯೋಜನಗಳಿವೆ

ತಜ್ಞರ ಪ್ರಕಾರ ಅರ್ಧಗಂಟೆ ಬಿಟ್ಟು ನೀರು ಕುಡಿಯಬೇಕಂತೆ

ತಜ್ಞರ ಪ್ರಕಾರ ಅರ್ಧಗಂಟೆ ಬಿಟ್ಟು ನೀರು ಕುಡಿಯಬೇಕಂತೆ

ಹಾಗಾಗಿ ಊಟದ ಬಳಿಕ ಸುಮಾರು ಅರ್ಧಗಂಟೆಯಾದರೂ ನೀರು ಸೇವಿಸಬಾರದು ಎಂದು ತಜ್ಞರು ಸಲಹೆ ಮಾಡುತ್ತಾರೆ. ಈ ಅರ್ಧ ಗಂಟೆಯಲ್ಲಿ ನಮ್ಮ ಜಠರದಿಂದ ಆಹಾರ ಪ್ರಥಮ ಹಂತದ ಜೀರ್ಣಕ್ರಿಯೆ ಮುಗಿಸಿ ಮುಂದಿನ ಹಂತಕ್ಕಾಗಿ ಕರುಳುಗಳಿಗೆ ಆಹಾರವನ್ನು ರವಾನಿಸಿ ಆಗಿರುತ್ತದೆ. ಈ ಸಮಯದಲ್ಲಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಬಾಧೆಗೊಳಗಾಗುವುದಿಲ್ಲ.

ಅಪ್ಪಿತಪ್ಪಿಯೂ ಊಟದ ತಕ್ಷಣ ನೀರು ಕುಡಿಯಬೇಡಿ

ಅಪ್ಪಿತಪ್ಪಿಯೂ ಊಟದ ತಕ್ಷಣ ನೀರು ಕುಡಿಯಬೇಡಿ

ಹೌದು! ಊಟದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣರಸಗಳ ಜೊತೆಗೇ ಕಿಣ್ವಗಳೂ ತಿಳಿಗೊಳ್ಳುತ್ತವೆ. ಜೀರ್ಣಕ್ರಿಯೆಯಲ್ಲಿ ಇವುಗಳದ್ದೂ ಪ್ರಮುಖ ಪಾತ್ರವಿದೆ. ಜೀರ್ಣಕ್ರಿಯೆಯ ಸಮಯದಲ್ಲಿ ನೀರು ಕುಡಿಯುವುದರಿಂದ ಅಗತ್ಯ ಪ್ರಮಾಣದ ಕಿಣ್ವಗಳು ಸ್ರವಿಸುವುದಿಲ್ಲ. ಪರಿಣಾಮವಾಗಿ ದೇಹದಲ್ಲಿ ಅಮ್ಲೀಯತೆ ಹೆಚ್ಚುತ್ತದೆ ಹಾಗೂ ಇದು ಹೆಚ್ಚುತ್ತಿದ್ದಂತೆಯೇ ಎದೆಯುರಿ, ಹೊಟ್ಟೆಯುರಿ ಎದುರಾಗುತ್ತದೆ. ಜೀರ್ಣಕ್ರಿಯೆಯ ಸಮಯದಲ್ಲಿ ಆಹಾರದಿಂದ ಅಮೂಲ್ಯ ಪೋಷಕಾಂಶಗಳು ಹೀರಲ್ಪಡುತ್ತವೆ. ಆದರೆ ಊಟದ ಬಳಿಕ ಹೆಚ್ಚು ನೀರು ಕುಡಿಯುವುದರಿಂದ ಈ ಕ್ರಿಯೆಯೂ ಬಾಧೆಗೊಳ್ಳುತ್ತದೆ. ನೀರಿನ ಪ್ರಮಾಣ ಹೆಚ್ಚಿದಷ್ಟೂ ಹೀರಿಕೊಳ್ಳುವ ಪೋಷಕಾಂಶಗಳೂ ಕಡಿಮೆಯಾಗುತ್ತಾ ಹೋಗುತ್ತವೆ. ಅಷ್ಟೇ ಅಲ್ಲದೆ ಊಟದ ಬಳಿಕ ನೀರು ಕುಡಿಯುವ ಅಭ್ಯಾಸದಿಂದ ಕೇವಲ ಜೀರ್ಣಕ್ರಿಯೆ ಮಾತ್ರವಲ್ಲ, ನಾವು ಸೇವಿಸುವ ಅಹಾರದ ಗುಣಮಟ್ಟವನ್ನೇ ಬಾಧಿಸುತ್ತದೆ. ಅಲ್ಲದೇ ನೀರು ತಂಪುಗೊಳಿಸುವ ದ್ರವವಾಗಿದ್ದು ನಾವು ಸೇವಿಸಿರುವ ಆಹಾರವನ್ನೂ ಜಠರದಲ್ಲಿ ತಂಪುಗೊಳಿಸುತ್ತವೆ. ಈ ತಂಪುಗೊಂಡ ಆಹಾರಗಳು ಸ್ಥೂಲದೇಹಕ್ಕೆ ಮೂಲವಾಗಿದೆ!

ಊಟ ತಣ್ಣಗಾಗುವುದಕ್ಕೂ ಸ್ಥೂಲಕಾಯಕ್ಕೂ ಎತ್ತಿಂದೆತ್ತ ಸಂಬಂಧ

ಊಟ ತಣ್ಣಗಾಗುವುದಕ್ಕೂ ಸ್ಥೂಲಕಾಯಕ್ಕೂ ಎತ್ತಿಂದೆತ್ತ ಸಂಬಂಧ

ಊಟ ತಣ್ಣಗಾಗುವುದಕ್ಕೂ ಸ್ಥೂಲಕಾಯಕ್ಕೂ ಎತ್ತಣ ಬಾದರಾಯಣ ಸಂಬಂಧ? ಇದನ್ನು ಸುಲಭ ಪದಗಳಲ್ಲಿ ಹೇಳಬೇಕೆಂದರೆ, ತಂಪುಗೊಂಡ ಆಹಾರವನ್ನು ಜಠರದಲ್ಲಿ ಬಿಸಿ ಆಹಾರದಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಆಹಾರದಲ್ಲಿರುವ ಗ್ಲುಕೋಸ್ ಬಳಸಲ್ಪಡದೇ ಹೋಗುತ್ತದೆ, ಆದರೆ ಕರುಳುಗಳಲ್ಲಿ ಇವು ಹೀರಲ್ಪಟ್ಟು ಹೆಚ್ಚುವರಿ ಆಹಾರವಾಗಿ ಕೊಬ್ಬಾಗಿ ಪರಿವರ್ತನೆಗೊಳ್ಳುತ್ತವೆ ಹಾಗೂ ದೇಹದ ವಿವಿಧ ಭಾಗಗಳಲ್ಲಿ ಸಂಗ್ರಹಿಸಲ್ಪಡುತ್ತವೆ. ದಿನೇ ದಿನೇ ಹೀಗೇ ಕೊಂಚಕೊಂಚವಾಗಿ ಸಂಗ್ರಹಿಸಲ್ಪಟ್ಟ ಕೊಬ್ಬಿನ ಒಟ್ಟು ತೂಕವೇ ..... ಸ್ಥೂಲಕಾಯ!

ಮಧುಮೇಹಕ್ಕೆ ಮುಕ್ತ ಆಹ್ವಾನ!

ಮಧುಮೇಹಕ್ಕೆ ಮುಕ್ತ ಆಹ್ವಾನ!

ಯಾವಾಗ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚುತ್ತದೆಯೋ, ಆಗ ಅನಿವಾರ್ಯವಾಗಿ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನೂ ಹೆಚ್ಚಿಸಬೇಕಾಗುತ್ತದೆ. ಪರಿಣಾಮವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟವೂ ಏರುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಏರುವುದೆಂದರೆ ಮಧುಮೇಹಕ್ಕೆ ಮುಕ್ತ ಆಹ್ವಾನವಾಗಿದೆ, ಇದರೊಂದಿಗೆ ಸ್ಥೂಲದೇಹ ಉಚಿತ ಕಾಣಿಕೆ! ಅಲ್ಲದೇ ಊಟದ ಬಳಿಕ ನೀರಿನ ಸೇವನೆಯಿಂದ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವೂ ಏರುತ್ತದೆ, ಇದರೊಂದಿಗೆ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL cholesterol ಮತ್ತು VLDL ಹಾಗೂ ಟ್ರೈಗ್ಲಿಸರೈಡ್ಸ್ ಗಳ ಮಟ್ಟವೂ ಏರುತ್ತದೆ.

ಯೂರಿಕ್ ಆಮ್ಲ

ಯೂರಿಕ್ ಆಮ್ಲ

ಈ ಆಮ್ಲದ ಮಟ್ಟ ದೇಹದಲ್ಲಿ ಹೆಚ್ಚುತ್ತಿದ್ದಂತೆಯೇ ಮೊಣಕಾಲುಗಳಲ್ಲಿ ನೋವು, ಭುಜ ಹಾಗೂ ಕೈಗಂಟಿನಲ್ಲಿಯೂ ನೋವು ಕಾಣಿಸಿಕೊಳ್ಳುತ್ತದೆ. ಪರಿಣಾಮವಾಗಿ ಕೈಗಂಟು, ಮೊಣಕೈ, ಮೊಣಕಾಲು, ಪಾದದ ಕೀಲು ಮೊದಲಾದವುಗಳಲ್ಲಿ ಬಾವು ಕಾಣಿಸಿಕೊಳ್ಳುತ್ತದೆ.

LDL (Low-density Lipoproteins)

LDL (Low-density Lipoproteins)

ಇದು ಒಂದು ಕೆಟ್ಟ ಕೊಲೆಸ್ಟ್ರಾಲ್ ಆಗಿದೆ ಹಾಗೂ ನಮ್ಮ ದೇಹದಲ್ಲಿ ಯಾವಾಗ ಅಜೀರ್ಣಗೊಂಡ ಆಹಾರ ಕೊಬ್ಬಾಗಿ ಪರಿವರ್ತನೆಗೊಳ್ಳಲು ಆರಂಭವಾಯ್ತೋ, ಆಗಲಿಂದಲೇ ಈ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವೂ ಏರತೊಡಗುತ್ತದೆ. ಈ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತಿದ್ದಂತೆಯೇ ರಕ್ತನಾಳಗಳ ಒಳಭಾಗದಲ್ಲಿ ಎಲ್ಲೆಲ್ಲಿ ಕವಲು, ತಿರುವುಗಳಿವೆಯೋ, ಅಲ್ಲೆಲ್ಲಾ ಈ ಕಣಗಳು ಅಂಟಿಕೊಳ್ಳತೊಡಗುತ್ತವೆ ಹಾಗೂ ರಕ್ತದ ಮೂಲಕ ಬರುವ ಇನ್ನಷ್ಟು ಕಣಗಳನ್ನು ತನ್ನೊಂದಿಗೆ ಅಂಟಿಸಿಕೊಳ್ಳುತ್ತಾ ಹೋಗುತ್ತದೆ. ಹೀಗೇ ಅಂಟಿಸಿಕೊಳ್ಳುತ್ತಾ ದಿನೇ ದಿನೇ ವೃದ್ದಿಸುವ ಈ ಕೊಲೆಸ್ಟ್ರಾಲ್ ಅಲ್ಲಿ ಬಬ್ಬಲ್ ಗಂ ಅಂಟಿದಂತೆ ಅಂಟಿಕೊಂಡು ರಕ್ತಪರಿಚಲನೆಗೆ ಅಡ್ಡಿಯುಂಟುಮಾಡುತ್ತದೆ. ಇದೇ ಕಾರಣಕ್ಕೆ ಈ ಕೊಲೆಸ್ಟ್ರಾಲ್ ಗೆ 'ಕೆಟ್ಟ' ಎಂವ ವಿಶೇಷಣವನ್ನು ನೀಡಲಾಗಿದೆ! ರಕ್ತಪರಿಚಲನೆಗೆ ಅಡ್ಡಿಯಾದಾಗ ಹೃದಯದ ಮೇಲಿನ ಭಾರ ಹೆಚ್ಚುತ್ತದೆ ಹಾಗೂ ಹೆಚ್ಚಿನ ಒತ್ತಡದಿಂದ ರಕ್ತವನ್ನು ನೂಕಬೇಕಾಗುತ್ತದೆ. ಇದನ್ನೇ ಅಧಿಕ ರಕ್ತದೊತ್ತಡ ಎನ್ನುತ್ತೇವೆ. ಇದಕ್ಕೆ ಕಡಿವಾಣ ಹಾಕದೇ ಇದ್ದರೆ ಕಡೆಗೊಂದು ದಿನ ಹೃದಯಾಘಾತಕ್ಕೂ ಕಾರಣವಾಗಬಹುದು!

Most Read:ಹಸಿ ಹಾಲು, ಪ್ಯಾಕೇಟ್ ಹಾಲು, ಟೆಟ್ರಾ ಪ್ಯಾಕ್ - ಇದರಲ್ಲಿ ಯಾವುದು ಉತ್ತಮ?

VLDL (Very Low-density Lipoproteins):

VLDL (Very Low-density Lipoproteins):

ಇದು ಮೇಲೆ ವಿವರಿಸಿದ ಕೆಟ್ಟ ಕೊಲೆಸ್ಟ್ರಾಲ್ ಗಿಂತಲೂ ಇನ್ನಷ್ಟು ಕೆಟ್ಟದ್ದು. ಅಸಮರ್ಪಕ ಜೀರ್ಣಕ್ರಿಯೆಯಿಂದ ಈ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ ಹಾಗೂ ಇದೊಂದು ಹಂತವನ್ನು ದಾಟಿದರೆ ಪ್ರಾಣಾಪಾಯಕ್ಕೂ ಕಾರಣವಾಗಬಹುದು.

ಟ್ರೈಗ್ಲಿಸರೈಡ್ಸ್

ಟ್ರೈಗ್ಲಿಸರೈಡ್ಸ್

ಊಟದ ಬಳಿಕ ಸೇವಿಸಿದ ನೀರು ಆಹಾರವನ್ನು ಪೂರ್ಣವಾಗಿ ಜೀರ್ಣಗೊಳಿಸಲು ಬಿಡದೇ ಇರುವ ಮೂಲಕ ದೇಹದಲ್ಲಿ ಟ್ರೈಗ್ಲಿಸರೈಡ್ಸ್ ಗಳ ಮಟ್ಟವೂ ಹೆಚ್ಚುತ್ತದೆ. ನಮ್ಮ ಆಹಾರದ ಮೂಲಕ ಲಭಿಸುವ ನೈಸಗಿಕ ಕೊಬ್ಬು ಮತ್ತು ತೈಲಗಳ ಸಂಗ್ರವೇ ಈ ಟ್ರೈಗ್ಲಿಸರೈಡ್ಸ್ ಆಗಿದ್ದು ಇವು ಒಂದು ಪ್ರಮಾಣದಲ್ಲಿ ಮಾತ್ರವೇ ರಕ್ತದಲ್ಲಿ ಅಗತ್ಯವಾಗಿದೆ. ಇದಕ್ಕೂ ಹೆಚ್ಚಿನ ಪ್ರಮಾಣದಿಂದ ರಕ್ತ ಹೆಚ್ಚು ಹೆಚ್ಚು ಗಾಢವಾಗುತ್ತಾ ಹೋಗುತ್ತದೆ ಹಾಗೂ ಅತಿ ಹೆಚ್ಚಾದರೆ ಹರಳೆಣ್ಣೆಯಷ್ಟು ಸ್ನಿಗ್ಧವಾಗಬಹುದು. ಆದ್ದರಿಂದ, ಯಾವಾಗ ರಕ್ತದಲ್ಲಿ ಟ್ರೈಗ್ಲಿಸರೈಡ್ಸ್ ಪ್ರಮಾಣ ಅಪಾರವಾಗಿ ಹೆಚ್ಚುತ್ತದೆಯೋ, ಆಗ ರಕ್ತ ಅತಿ ಗಾಢವಾಗಿ ರಕ್ತದ ಮೂಲ ಕಾರ್ಯವೇ ಭಂಗಗೊಳ್ಳುತ್ತದೆ. ಈ ಸ್ನಿಗ್ಧಗೊಂಡ ರಕ್ತವನ್ನು ದೇಹದ ಮುಖ್ಯ ಅಂಗಗಳಿಗೆ ತಲುಪಿಸಲು ವಿಫಲವಾಗಿ ಮೆದುಳು ಅಥವಾ ಹೃದಯವೇ ವಿಫಲಗೊಳ್ಳಬಹುದು.

ಫ್ರಿಜ್ಜಿನ ಐಸ್ ನೀರು ಹೆಚ್ಚು ಕುಡಿಯಬೇಡಿ

ಫ್ರಿಜ್ಜಿನ ಐಸ್ ನೀರು ಹೆಚ್ಚು ಕುಡಿಯಬೇಡಿ

ಕೆಲವರಿಗೆ ಊಟದ ಬಳಿಕ ಫ್ರಿಜ್ಜಿನ ಐಸ್ ನೀರನ್ನು ಕುಡಿಯುವ ಅಭ್ಯಾಸವಿರುತ್ತದೆ. ಇದು ಜಠರರಸದ ಸಾಮರ್ಥ್ಯವನ್ನೇ ಕಸಿದುಬಿಡುತ್ತದೆ ಹಾಗೂ ಆಹಾರ ಜೀರ್ಣಗೊಳ್ಳದೇ ಹೋಗುತ್ತದೆ. ಮುಂದಿನ ಹಂತಕ್ಕೆ ಹೋದ ಆಹಾರವೂ ಪರಿಪೂರ್ಣವಾಗಿ ಜೀರ್ಣಗೊಳ್ಳದೇ ಮೇಲೆ ವಿವರಿಸಿದ ಎಲ್ಲಾ ತೊಂದರೆಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಹೃದಯಾಘಾತ, ಮಧುಮೇಹ ಹಾಗೂ ಸ್ಥೂಲದೇಹ ಈ ವ್ಯಕ್ತಿಗಳಿಗೆ ಇನ್ನಷ್ಟು ಬೇಗನೇ ಆವರಿಸಿಕೊಳ್ಳುತ್ತದೆ.

ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯಬೇಕು

ನೀರನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯಬೇಕು

ನೀರು ನಮ್ಮ ಆರೋಗ್ಯಕ್ಕೆ ಅವಶ್ಯವಾಗಿ ಬೇಕಾಗಿರುವ ದ್ರವವಾಗಿದ್ದರೂ, ದಿನಕ್ಕೆ ಎಂಟು ಲೀಟರುಗಳಷ್ಟು ನೀರನ್ನು ಕುಡಿಯುವುದು ಅಗತ್ಯವಾಗಿದ್ದರೂ, ನೀರನ್ನು ಕುಡಿಯಲೂ ಒಂದು ಸಮಯವಿದೆ ಹಾಗೂ ಕುಡಿಯಬಾರದ ಸಮಯವೂ ಇದೆ.

 ಊಟಕ್ಕೂ ಮುನ್ನ ಮತ್ತು ಊಟದ ಬಳಿಕ ನೀರು ಕುಡಿಯಬೇಡಿ!

ಊಟಕ್ಕೂ ಮುನ್ನ ಮತ್ತು ಊಟದ ಬಳಿಕ ನೀರು ಕುಡಿಯಬೇಡಿ!

ದಿನದ ವಿವಿಧ ಅವಧಿಯಲ್ಲಿ ನೀರು ಕುಡಿಯಬಹುದು, ಆದರೆ ಊಟಕ್ಕೂ ಮುನ್ನ ಮತ್ತು ಊಟದ ಬಳಿಕ ಮಾತ್ರ ಸರ್ವಥಾ ಸಲ್ಲದು. ಊಟದ ನಡುವೆಯೂ ನೀರನ್ನು ಕುಡಿಯುವುದು ಸಲ್ಲದು, ಆದರೆ ಕೆಲವೊಮ್ಮೆ ಆಹಾರ ಗಂಟಲಲ್ಲಿ ಸಿಲುಕಿಕೊಂಡು ತೊಂದರೆಯಾದರೆ ಕೊಂಚವೇ ನೀರನ್ನು ಸೇವಿಸಬಹುದು.

ನೆನಪಿರಲಿ- ಆರೋಗ್ಯವೇ ಭಾಗ್ಯ, ಸ್ವಲ್ಪ ಕಾಳಜಿ ವಹಿಸಿ

ನೆನಪಿರಲಿ- ಆರೋಗ್ಯವೇ ಭಾಗ್ಯ, ಸ್ವಲ್ಪ ಕಾಳಜಿ ವಹಿಸಿ

ಜೀರ್ಣಕ್ರಿಯೆ ಉತ್ತಮವಾಗಿರುವುದೆಂದರೆ ಆರೋಗ್ಯಕರ ಹಾಗೂ ಸಂತೋಷಕರ ಜೀವನ ನಡೆಸುವುದೇ ಆಗಿದೆ. ಉತ್ತಮ ಆರೋಗ್ಯಕ್ಕಾಗಿ ದೇಹದ ಇತರ ಎಲ್ಲಾ ವ್ಯವಸ್ಥೆಗಳಂತೆಯೇ ಜೀರ್ಣವ್ಯವಸ್ಥೆಯನ್ನೂ ಉತ್ತಮ ವಾಗಿರಿಸಿಕೊಳ್ಳುವುದು ಅಗತ್ಯ. ಈ ಮೂಲ ಕ್ರಿಯೆ ಬಾಧೆಗೊಳಗಾದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಈ ಲೇಖನದಲ್ಲಿ ವಿವರಿಸಿದಂತೆ ದಿನದ ಇತರ ಅವಧಿಗಳಲ್ಲಿ ಸಾಕಷ್ಟು ನೀರನ್ನು ಕುಡಿದರೂ ಊಟಕ್ಕೂ ಮುಂಚೆ ಮತ್ತು ಬಳಿಕ ಮಾತ್ರ ಸೇವಿಸುವುದನ್ನು ತಡೆಯಬೇಕು. ಊಟದ ಬಳಿಕ ಸುಮಾರು ಮೂವತ್ತು ನಿಮಿಷಗಳಾದರೂ ನೀರು ಕುಡಿಯಬಾರದು! ನೆನಪಿರಲಿ, ಆರೋಗ್ಯವೇ ಭಾಗ್ಯ! ನೀರಿನ ಮತ್ತು ಆಹಾರದ ಸರಿಯಾದ ಸೇವನೆಯಿಂದ ಮಾತ್ರವೇ ಈ ಭಾಗ್ಯ ಲಭಿಸಲು ಸಾಧ್ಯ.

English summary

How Long Should You Wait To Drink Water After Eating?

Drinking water immediately after eating results in hindering the process of digestion by diluting the digestive acids and enzymes. It also lowers the amount of nutrients absorbed by the body & can trigger heartburn & acidity. It can also cause obesity and diabetes; hence we should drink water half an hour after we eat our meal.
X
Desktop Bottom Promotion