For Quick Alerts
ALLOW NOTIFICATIONS  
For Daily Alerts

ಮಹಿಳೆಯರ ಗುಪ್ತಾಂಗದ ಸಮಸ್ಯೆ, ಆದಷ್ಟು ಇಂತಹ ತಪ್ಪುಗಳನ್ನು ಮಾಡಬೇಡಿ

By Deepu
|

ಮಹಿಳೆಯರ ದೇಹದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಪ್ರಧಾನ ಭಾಗ ಯೋನಿ. ಯೋನಿಯ ಮಹಿಳೆಯರ ಜನನಾಂಗದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುತ್ತದೆ. ಈ ಯೋನಿಯ ಆರೋಗ್ಯವು ಮಹಿಳೆಯರ ಆರೋಗ್ಯದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ ಎಂಬುದು ಸತ್ಯ. ಯೋನಿಯು ಬ್ಯಾಕ್ಟೀರಿಯಾ ಮತ್ತು ಸೋಂಕುಗಳಿಗೆ ತುತ್ತಾಗುವ ಅಪಾಯವನ್ನು ಯಾವಾಗಲೂ ಎದುರಿಸುತ್ತಿರುತ್ತದೆ.

ಲೈಂಗಿಕ ಕ್ರಿಯೆ, ಮಕ್ಕಳ ಜನನ ಹಾಗು ದೇಹದ ಆರೋಗ್ಯ ಇವೆಲ್ಲದಕ್ಕೂ ಯೋನಿಯ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿರುತ್ತದೆ. ಹಾಗಾಗಿ ಯೋನಿಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಹೇಗೆಂದು ನಿಮಗೆ ತಿಳಿಸಲು ನಾವು ಈ ಲೇಖನವನ್ನು ನಿಮಗೆ ನೀಡುತ್ತಿದ್ದೇವೆ. ಯೋನಿಯ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂಬ ಅನುಮಾನ ನಿಮ್ಮನ್ನು ಕಾಡಿದಲ್ಲಿ ಸಂಕೋಚ ಮತ್ತು ನಾಚಿಕೆಪಡದೆ ನಿಮ್ಮ ಸ್ತ್ರೀ ರೋಗ ತಜ್ಞರನ್ನು ಸಂಪರ್ಕಿಸಿ. ಅವರಿಂದ ಸಲಹೆ ಮತ್ತು ಚಿಕಿತ್ಸೆ ಪಡೆಯಿರಿ. ಬನ್ನಿ ಈ ಅಂಕಣದಲ್ಲಿ ನಿಮಗಾಗಿ ಕೆಲವೊಂದು ಸಲಹೆಗಳನ್ನು ನಾವು ನೀಡಿದ್ದೇವೆ ಮುಂದೆ ಓದಿ....

ಆಗಾಗ ಪ್ಯಾಂಟಿ ಲೈನರ್ ಬಳಸುವುದು

ಆಗಾಗ ಪ್ಯಾಂಟಿ ಲೈನರ್ ಬಳಸುವುದು

ಒಂದು ವೇಳೆ ನಿಮ್ಮ ಮಾಸಿಕ ಋತು ಚಕ್ರವು ಅನಿಯಮಿತವಾಗಿದ್ದರೆ, ನೀವು ಮುಜುಗರವನ್ನು ತಪ್ಪಿಸಿಕೊಳ್ಳಲು ಪ್ಯಾಂಟಿ ಲೈನರನ್ನು ನಿಯಮಿತವಾಗಿ ಬಳಸುತ್ತಿರುತ್ತೀರಿ. ಇದರಿಂದ ನಿಮಗೆ ಮುಜುಗರವು ತಪ್ಪಬಹುದು. ಆದರೆ ತುರಿಕೆ ಮತ್ತು ಇನ್‍ಫೆಕ್ಷನ್ ಕಾಡಬಹುದು. ಪ್ಯಾಂಟಿ ಲೈನರ್‌ನಲ್ಲಿರುವ ಪ್ಲಾಸ್ಟಿಕ್ ಹಿಂಬದಿಯು ಗಾಳಿಯು ಸರಾಗವಾಗಿ ಸಾಗಲು ತೊಡಕನ್ನುಂಟು ಮಾಡುತ್ತದೆ. ಇದರಿಂದಾಗಿ ಸೆಕೆ ಮತ್ತು ಬಿಸಿಯು ಯೋನಿಯನ್ನು ಕಾಡುತ್ತದೆ. ಜೊತೆಗೆ ಇದನ್ನು ತುಂಬಾ ಹೊತ್ತು ಹಾಕಿಕೊಳ್ಳುವುದರಿಂದ ಬ್ಯಾಕ್ಟೀರಿಯಾ ಮತ್ತು ಫಂಗಲ್ ಇನ್‍ಫೆಕ್ಷನ್‍ಗಳು ಸಹ ಸಂಭವಿಸುತ್ತವೆ. ಇದಲ್ಲದೆ ಇದು ನಿರಂತರವಾಗಿ ಉಜ್ಜಲ್ಪಡುವುದರಿಂದ ಯೋನಿ ಭಾಗದಲ್ಲಿ ತುರಿಕೆ ಉಂಟಾಗುತ್ತದೆ. ಇದನ್ನು ತಪ್ಪಿಸಲು ಸದಾ ನಿಮ್ಮ ಬಳಿ ಹೆಚ್ಚು ಟ್ಯಾಂಪನ್‍ಗಳನ್ನು ಅಥವಾ ಪ್ಯಾಡ್‍ಗಳನ್ನು ಇರಿಸಿಕೊಳ್ಳಿ. ಮುಜುಗರದಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಆಗಾಗ ಒಳ ಉಡುಪನ್ನು ಬದಲಾಯಿಸುತ್ತಿರಿ. ಅನಿಯಮಿತ ಋತು ಚಕ್ರವನ್ನು ಕೆಗೆಲ್ ಮೂಲಕ ಪರಿಹರಿಸಿಕೊಳ್ಳಿ. ಜೀವನ ಶೈಲಿಯಲ್ಲಿ ಬದಲಾವಣೆ ಅಥವಾ ವೈಧ್ಯೋಪಚಾರವು ಪ್ಯಾಂಟಿ ಲೈನರ್‌ಗಳ ಅವಲಂಬನೆಯನ್ನು ಕಡಿಮೆ ಮಾಡಬಲ್ಲವು. ಯಾವಾಗ ನೀವು ಪ್ಯಾಂಟಿ ಲೈನರ್‌ಗಳನ್ನು ಬಳಸುತ್ತೀರೋ, ಆಗ ಅವುಗಳನ್ನು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಬದಲಾಯಿಸಿ.

ಗರ್ಭ ನಿರೋಧಕಗಳ ಮಾತ್ರೆ

ಗರ್ಭ ನಿರೋಧಕಗಳ ಮಾತ್ರೆ

ಗರ್ಭ ನಿರೋಧಕಗಳ ಬಳಕೆಯನ್ನು ನಿಲ್ಲಿಸುವುದು 40 ದಾಟಿದ ವಯಸ್ಕರು ಯುವ ಜನರಿಗಿಂತ ಹೆಚ್ಚಾಗಿ ಕಾಂಡೋಮ್‍ಗಳನ್ನು ಬಳಸುತ್ತಾರೆ. ನೀವು ಹಾರ್ಮೋನಲ್ ಬರ್ತ್ ಕಂಟ್ರೋಲ್ ವಿಧಾನವನ್ನು ಬಳಸುತ್ತಿದ್ದರು ಅಥವಾ ನೀವು ಮುಟ್ಟು ನಿಲ್ಲುವ ಕಾಲವನ್ನು ದಾಟಿದ್ದರು ಮತ್ತು ಗರ್ಭಿಣಿಯಾಗುವ ಅವಕಾಶವನ್ನು ಹೊಂದಿಲ್ಲದಿದ್ದರು ಸಹ ಪ್ರತಿ ಬಾರಿ ಸಂಭೋಗವನ್ನು ಮಾಡುವಾಗ ಕಾಂಡೋಮ್ ಧರಿಸುವುದು ಸುರಕ್ಷಿತ.

ಟಾಲ್ಕಂ ಪೌಡರನ್ನು ಲೇಪಿಸುವುದು

ಟಾಲ್ಕಂ ಪೌಡರನ್ನು ಲೇಪಿಸುವುದು

ನಿಮ್ಮ ಜನನಾಂಗದ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳುವ ಭರದಲ್ಲಿ ಟಾಲ್ಕಂ ಪೌಡರ್, ಬೇಬಿ ಪೌಡರ್ ಅಥವಾ ಇನ್ನಿತರ ಯಾವುದೇ ಉತ್ಪನ್ನಗಳನ್ನು ಬಳಸುವುದು ಅಪಾಯಕಾರಿಯಲ್ಲ. ಆದರೆ ಈ ಅಭ್ಯಾಸವು ಕಾಲ ಕ್ರಮೇಣ ಮುಂದೆ ಸಂಭವಿಸಬಹುದಾದ ಗರ್ಭಾಶಯದ ಕ್ಯಾನ್ಸರ್‌ನ ಸಾಧ್ಯತೆಯನ್ನು ಶೇ.30 ರಷ್ಟು ಹೆಚ್ಚಿಸುತ್ತದೆ ಎಂದು ಅಮೆರಿಕನ್ ಅಸೋಸಿಯೇಷನ್ ಫಾರ್ ಕ್ಯಾನ್ಸರ್ ರಿಸರ್ಚ್ ಸಂಸ್ಥೆಯವರು 2011ರಲ್ಲಿ ನಡೆಸಿದ ವಾರ್ಷಿಕ ಸಮಾವೇಶದಲ್ಲಿ ಪ್ರಸ್ತುತ ಪಡಿಸಲಾದ ಹೊಸ ಅಧ್ಯಯನದಲ್ಲಿ ದೃಢಪಟ್ಟಿದೆ. ಪ್ರತಿನಿತ್ಯ ಇವುಗಳನ್ನು ಬಳಸುವುದರಿಂದಾಗಿ ನಿಮಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಎರಡರಿಂದ ಒಮ್ಮೊಮ್ಮೆ ಮೂರು ಪಟ್ಟು ಸಹ ಅಧಿಕವಾಗುತ್ತದೆ. ಒಂದೊಮ್ಮೆ ನಿಮ್ಮ ಜನನಾಂಗದ ಬಳಿ ನಿಮಗೆ ಅಧಿಕ ಬೆವರು ಬರುತ್ತಿದ್ದರೆ, ಹತ್ತಿಯ ಒಳ ಉಡುಪನ್ನು ಧರಿಸಿ. ಆಗಾಗ ಅದನ್ನು ಬದಲಾಯಿಸುತ್ತ ಇರಿ. ಆದಷ್ಟು ಬಿಗಿಯಾದ

ಪ್ಯಾಂಟ್‍ಗಳನ್ನು ಧರಿಸಬೇಡಿ. ಜೊತೆಗೆ ರಾತ್ರಿಯ ಹೊತ್ತು ಕಮಾಂಡೊ( ಜನನಾಂಗ ಭಾಗಕ್ಕೆ ಗಾಳಿಯಾಡುವಂತೆ ಮಾಡುವುದು) ಆಗುವುದು ಒಳಿತು.

ಅತಿಯಾಗಿ ಕಾಡುವ ಮುಟ್ಟಿನ ಸಮಸ್ಯೆ

ಅತಿಯಾಗಿ ಕಾಡುವ ಮುಟ್ಟಿನ ಸಮಸ್ಯೆ

ಬಹುಶಃ ನಿಮ್ಮ ಸ್ನೇಹಿತರು ನಿಮಗೆ ಎಚ್ಚರಿಸಿರಬಹುದು. ನಿಮಗೆ ವಯಸ್ಸಾಂದತೆಲ್ಲ ನಿಮ್ಮ ಋತು ಚಕ್ರವು ಅತಿಯಾಗಿ ಹಾಗುತ್ತದೆಯೆಂದು. ಇದು ಯಾವಾಗಲು ನಿಜವಾಗುವುದಿಲ್ಲ.ಬಹುಶಃ ನಿಮ್ಮ ಋತುಸ್ರಾವವು ಹೆಚ್ಚಾಗಬಹುದು ಅಥವಾ ಅವುಗಳು ಆಗಾಗ ಸಂಭವಿಸಬಹುದು ( ಅಂದರೆ ಪ್ರತಿ ಎರಡು ವಾರಗಳಿಗೊಮ್ಮೆ), ಅಥವಾ ಋತು ಚಕ್ರದ ನಡುವೆ ಅಥವಾ ಸಂಭೋಗದ ನಂತರ ನಿಮ್ಮ ಯೋನಿಯಲ್ಲಿ ರಕ್ತ ಸ್ರಾವವಾಗಬಹುದು. ಆಗ ತಡ ಮಾಡದೆ ನಿಮ್ಮ ವೈಧ್ಯರನ್ನು ಸಂಪರ್ಕಿಸಿ. ಅಧಿಕ ರಕ್ತ ಸ್ರಾವವು ಫೈಬ್ರಾಯ್ಡ್‌ಗಳ ( ಸೌಮ್ಯ ಗರ್ಭಕೋಶದ ಗಡ್ಡೆಗಳ), ಅನಿಮಿಯಾ, ಪಾಲಿಸಿಸ್ಟಿಕ್ ಒವರಿಯನ್ ಸಿಂಡ್ರೋಮ್‍ನಂತಹ ಹಾರ್ಮೋನ್ ಸಮಸ್ಯೆ ಅಥವಾ ಅಪರೂಪವಾಗಿ ಗರ್ಭಕಂಠದ, ಗರ್ಭಾಶಯದ ಮತ್ತು ಅಂಡಾಶಯದ ಕ್ಯಾನ್ಸರ್‌ನ ಮುನ್ಸೂಚನೆಯಾಗಿರುತ್ತದೆ.

 ದುರ್ಗಂಧದಿಂದ ಕೂಡಿದ ಸ್ರವಿಸುವಿಕೆ

ದುರ್ಗಂಧದಿಂದ ಕೂಡಿದ ಸ್ರವಿಸುವಿಕೆ

ದುರ್ಗಂಧದಿಂದ ಕೂಡಿದ ಸ್ರವಿಸುವಿಕೆ ಯೋನಿಯಿಂದ ಬರುತ್ತಿದ್ದಲಿ ಅದು ಸೋಂಕಿನ ಸಂಕೇತವಾಗಿರುತ್ತದೆ. ಅಪಾಯಕಾರಿ ಬ್ಯಾಕ್ಟೀರಿಯಾ ಮಿತಿ ಮೀರಿದಾಗ ಬ್ಯಾಕ್ಟೀರಿಯಲ್ ವ್ಯಜಿನೊಸಿಸ್‌ಗೆ ಕಾರಣವಾಗುತ್ತದೆ. ಇಂತಹ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಸ್ತ್ರೀ ವೈದ್ಯರನ್ನು ಕಾಣಿರಿ

 ಒಳ ಉಡುಪನ್ನು ಪ್ರತಿದಿನ ಬದಲಾಯಿಸುತ್ತಾ ಇರಿ...

ಒಳ ಉಡುಪನ್ನು ಪ್ರತಿದಿನ ಬದಲಾಯಿಸುತ್ತಾ ಇರಿ...

ಗುಪ್ತಾಂಗದ ಸೋಂಕಿಗೆ ಪ್ರಮುಖ ಕಾರಣ ಇಂದಿನ ಒಳ ಉಡುಪನ್ನು ಬದಲಿಸದೇ ಮರುದಿನವೂ ಧರಿಸುವುದು. ಹಿಂದಿನ ದಿನಗಳಲ್ಲಿ ಕಡಿಮೆ ಉಡುಪುಗಳಿದ್ದ ಕಾರಣ ಮತ್ತು ಒಣಗದಿರುವ ಅನಿವಾರ್ಯತೆ ಅರಿವಿಲ್ಲದೇ ಒಂದು ಅಭ್ಯಾಸವಾಗಿ ಬಂದಿರುವುದು ಒಂದು ಕಾರಣವಾಗಿದೆ. ಆದರೆ ಪ್ರತಿದಿನವೂ ಗುಪ್ತಾಂಗದಿಂದ ಒಸರುವ ದ್ರವ ಒಳ ಉಡುಪುಗಳಿಗೆ ತಗುಲಿ ತೇವವಾಗಿದ್ದು ಇದರಲ್ಲಿ ಸೋಂಕು ಹರಡುವ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳು ಬೀಡು ಬಿಡುತ್ತವೆ. ಮರುದಿನವೂ ಇದನ್ನೇ ತೊಡುವ ಮೂಲಕ ಈ ವೈರಸ್ಸುಗಳಿಗೆ ನಮ್ಮ ಕೈಯಾರೆ ಸೋಂಕು ಹರಡಲು ದಾರಿ ತೋರಿದಂತಾಗುತ್ತದೆ. ಆದ್ದರಿಂದ ಪ್ರತಿದಿನವೂ ಸ್ವಚ್ಛವಾಗಿ ಒಗೆದು ಇಸ್ತ್ರಿ ಮಾಡಿದ ಒಳ ಉಡುಪುಗಳನ್ನೇ ಧರಿಸಬೇಕು.

ಬಿಗಿ ತುಂಡುಡುಗೆಗಳನ್ನು ಹೆಚ್ಚು ಧರಿಸುವುದು

ಬಿಗಿ ತುಂಡುಡುಗೆಗಳನ್ನು ಹೆಚ್ಚು ಧರಿಸುವುದು

ಕೆಲವರಿಗೆ ದೇಹವನ್ನು ಬಿಗಿಯಾಗಿ ಹಿಡಿದಿರುವ ತುಂಡು ಉಡುಗೆಗಳೇ ಇಷ್ಟ. ಆದರೆ ಈ ಬಿಗಿತನ ಅತಿ ಸೂಕ್ಷವಾದ ಗುಪ್ತಾಂಗದ ಮೇಲೆ ಹೆಚ್ಚಿನ ಒತ್ತಡ ಹೇರಿ ನಡೆಯುವಾಗ ತಿಕ್ಕಾಟ ಅಥವಾ ಘರ್ಷಣೆಗೆ ಕಾರಣವಾಗುತ್ತದೆ. ಇದರಿಂದ ಸೂಕ್ಷ್ಮ ಚರ್ಮ ಹೆಚ್ಚು ಸವೆದು ಸೋಂಕು ತಗುಲಲು ಕಾರಣವಾಗುತ್ತದೆ. ಆದ್ದರಿಂದ ಅನಿವಾರ್ಯವಲ್ಲದೇ ತುಂಡುಡುಗೆ ಅಥವಾ ಬಿಗಿಯಾದ ಉಡುಗೆಗಳನ್ನು ತೊಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಮಹಿಳೆಯರು ಸ್ವಾಭಾವಿಕವಾಗಿ ಅಲಂಕಾರ ಪ್ರಿಯರು. ಮಹಿಳಾ ಗ್ರಾಹಕರನ್ನು ಆಕರ್ಷಿಸಲು ಒಳ ಉಡುಪುಗಳಲ್ಲಿಯೂ ವೈವಿಧ್ಯತೆಯನ್ನು ಮೂಡಿಸಲು ಇದರ ಅಂಚುಗಳಲ್ಲಿ ವಿವಿಧ ಬಣ್ಣದ ಲೇಸ್, ಸ್ಯಾಟಿನ್ ಪಟ್ಟಿ ಮೊದಲಾದವುಗಳನ್ನು ಇಟ್ಟು ಹೊಲಿದಿರಲಾಗುತ್ತದೆ. ನೋಡಲು ಇವು ಚೆನ್ನಾಗಿದ್ದರೂ ಈ ಪಟ್ಟಿಗಳನ್ನು ಹೊಲಿದಿರುವ ಅಂಚುಗಳು ಸೂಕ್ಷಾಣುಜೀವಿಗಳಿಗೆ ಸಮರ್ಪಕವಾದ ಆಶ್ರಯದಾಣವಾಗುತ್ತದೆ.

ಸೋಂಕು ತಗಲದೇ ಇರಲು ಕೆಲವು ಆರೋಗ್ಯಕರ ಅಭ್ಯಾಸಗಳು ಇಂತಿವೆ

ಸೋಂಕು ತಗಲದೇ ಇರಲು ಕೆಲವು ಆರೋಗ್ಯಕರ ಅಭ್ಯಾಸಗಳು ಇಂತಿವೆ

* ರಾತ್ರಿ ಮಲಗುವಾಗ ಒಳ ಉಡುಪು ಧರಿಸಬೇಡಿ

* ಗುಪ್ತಾಂಗಗಳನ್ನು ಸ್ವಚ್ಛಗೊಳಿಸಲು ಸೋಪಿನ ಬದಲು ಇದಕ್ಕಾಗಿಯೇ ಇಂದು ದೊರಕುತ್ತಿರುವ ದ್ರಾವಣವನ್ನು ಬಳಸಿ. ಕೊಂಚ ದುಬಾರಿಯಾದರೂ ಸರಿ, ಇವು ಹೆಚ್ಚಿನ ರಕ್ಷಣೆ ನೀಡುತ್ತವೆ.

* ದಿನದಲ್ಲಿ ಕೆಲ ಹೊತ್ತಾದರೂ ಕಾಲುಗಳನ್ನು ಅಗಲಿಸುವ ವ್ಯಾಯಾಮಗಳನ್ನು ಮಾಡಿ.

* ಸಾರ್ವಜನಿಕವಾಗಿ ಮೊಣಕಾಲುಗಳನ್ನು ಜೋಡಿಸಿ ಕುಳಿತುಕೊಳ್ಳುವ ಅನಿವಾರ್ಯತೆ ಇದ್ದ ಹೊರತು ಮನೆಯಲ್ಲಿ ಆರಾಮವಾಗಿ ಕುಳಿತುಕೊಳ್ಳುವ ಸಮಯದಲ್ಲಿ ಕಾಲುಗಳನ್ನು ಅಗಲಿಸಿಯೇ ಕುಳಿತುಕೊಳ್ಳಿ.

* ರಾತ್ರಿ ಮಲಗುವಾಗ ಒಳ ಉಡುಪು ಧರಿಸಬೇಡಿ

* ಗುಪ್ತಾಂಗಗಳನ್ನು ಸ್ವಚ್ಛಗೊಳಿಸಲು ಸೋಪಿನ ಬದಲು ಇದಕ್ಕಾಗಿಯೇ ಇಂದು ದೊರಕುತ್ತಿರುವ ದ್ರಾವಣವನ್ನು ಬಳಸಿ. ಕೊಂಚ ದುಬಾರಿಯಾದರೂ ಸರಿ, ಇವು ಹೆಚ್ಚಿನ ರಕ್ಷಣೆ ನೀಡುತ್ತವೆ.

* ದಿನದಲ್ಲಿ ಕೆಲ ಹೊತ್ತಾದರೂ ಕಾಲುಗಳನ್ನು ಅಗಲಿಸುವ ವ್ಯಾಯಾಮಗಳನ್ನು ಮಾಡಿ.

* ಸಾರ್ವಜನಿಕವಾಗಿ ಮೊಣಕಾಲುಗಳನ್ನು ಜೋಡಿಸಿ ಕುಳಿತುಕೊಳ್ಳುವ ಅನಿವಾರ್ಯತೆ ಇದ್ದ ಹೊರತು ಮನೆಯಲ್ಲಿ ಆರಾಮವಾಗಿ ಕುಳಿತುಕೊಳ್ಳುವ ಸಮಯದಲ್ಲಿ

ಕಾಲುಗಳನ್ನು ಅಗಲಿಸಿಯೇ ಕುಳಿತುಕೊಳ್ಳಿ.

* ಸದಾ ಪರ್ಸ್ ನಲ್ಲಿ ಕೆಲವು ಟಿಶ್ಯೂ ಕಾಗದಗಳನ್ನು ಇರಿಸಿಕೊಳ್ಳಿ. ಸಾರ್ವಜನಿಕ ಶೌಚಾಲಯವನ್ನು ಬಳಸಿದ ಬಳಿಕ ಒಣಗಿಸಿಕೊಳ್ಳಲು ಇವು ನೆರವಾಗುತ್ತವೆ.

* ಮಾಸಿಕ ದಿನಗಳ ಸ್ರಾವವನ್ನು ಹೆಚ್ಚು ಸಮರ್ಪಕವಾಗಿ ನಿಭಾಯಿಸಲು ಸಾಂಪ್ರಾದಾಯಿಕ ಪ್ಯಾಡ್ ಬದಲಿಗೆ ಹೊಸದಾಗಿ ಬರುತ್ತಿರುವ ಟ್ಯಾಂಪೋನ್ ಗಳನ್ನು ಬಳಸಲು

ಪ್ರಾರಂಭಿಸಿ

* ಒಳ ಉಡುಗೆಗಳನ್ನು ಬಲು ಹೆಚ್ಚು ಕಾಲ ಬಳಸಬೇಡಿ. ಕಾಲಕಾಲಕ್ಕೆ ಹೊಸದನ್ನು ಖರೀದಿಸಿ. * ತೀರಾ ಕಿರಿದಾಗಿರುವ ಒಳ ಉಡುಪುಗಳು ಸರ್ವಥಾ

ಆರಾಮದಾಯಕವಲ್ಲ. ಆದ್ದರಿಂದ ಸೊಂಟವನ್ನು ಪೂರ್ಣವಾಗಿ ಸುತ್ತುವರೆಯುವ ಸಮರ್ಪಕವಾದ ಒಳ ಉಡುಪುಗಳನ್ನೇ ಧರಿಸಿ.

* ಪ್ರತಿದಿನ ತಲೆಗೆ ಸ್ನಾನ ಮಾಡದಿದ್ದರೂ ಪರವಾಗಿಲ್ಲ, ಆದರೆ ಮೈಸ್ನಾನ ಮಾತ್ರ ಮರೆಯದಿರಿ.

English summary

How To Keep Your Vagina Healthy And Clean

Your vagina didn’t exactly come with an owner’s manual, but after a couple of decades of getting your period, Here, share the most common vaginal mistakes they see among patients in their forties and older — and let you know how to take better care of your lady parts.
X
Desktop Bottom Promotion