For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಸೇವಿಸುವ ಆಹಾರಕ್ರಮ ಹೀಗಿರಲಿ, ಆರೋಗ್ಯವಾಗಿರುವಿರಿ

By Hemanth
|

ಬೇಸಿಗೆ ಕಾಲ ಬಂದೇ ಬಿಟ್ಟಿದೆ. ಅದರ ಬೆನ್ನಿಗೆ ರೋಗಗಳು ಕೂಡ! ಬೇಸಿಗೆಯಲ್ಲಿ ನಾವು ಆದಷ್ಟು ಶುದ್ಧವಾಗಿರುವ ನೀರು ಹಾಗೂ ಆಹಾರ ಸೇವನೆ ಮಾಡಬೇಕು. ಆದರೆ ಕೆಲವೊಂದು ಸಲ ನಾವು ಸೇವಿಸುವಂತಹ ಆಹಾರದಿಂದಾಗಿ ನಮಗೆ ಕೆಲವೊಂದು ರೋಗಗಳು ಬರುತ್ತಲಿರುತ್ತದೆ. ಬಿಸಲಿನ ತಾಪದಿಂದ ಪಾರಾಗಲು ಹೆಚ್ಚಿನವರು ಬೇಸಗೆಯಲ್ಲಿ ತುಂಬಾ ತಂಪಾಗಿರುವಂತಹ ಪ್ರದೇಶಗಳಿಗೆ ಪ್ರಯಾಣ ಮಾಡಲು ತಯಾರಿ ನಡೆಸುತ್ತಾರೆ. ಆದರೆ ದೇಹಕ್ಕೆ ತಂಪು ನೀಡುವುದರೊಂದಿಗೆ ತಿನ್ನುವಂತಹ ಆಹಾರದ ಕಡೆ ಕೂಡ ಗಮನಹರಿಸುವುದು ಅತೀ ಅಗತ್ಯ. ಹೊರಗಡೆ ಹೋಗಿ ಕೆಲಸ ಮಾಡುವಾಗ ಹೆಚ್ಚಾಗಿ ಬೆವರುವ ಕಾರಣದಿಂದ ಕೆಲವೊಂದು ಸಲ ನಿರ್ಜಲೀಕರಣ ಉಂಟಾಗುವುದು ಇದೆ.

ಇದರಿಂದ ಚರ್ಮವು ಸುಕ್ಕುಗಟ್ಟಬಹುದು, ವಿಟಮಿನ್ ಹಾಗೂ ಖನಿಜಾಂಶಗಳ ಕೊರತೆ ಕಾಣಿಸಬಹುದು. ಆದರೆ ಇದಕ್ಕೆ ಕೂಡ ಬೋಲ್ಡ್ ಸ್ಕೈಯು ನಿಮಗೆ ಪರಿಹಾರ ಕೊಡಲಿದೆ. ಈ ಋತುವಿನಲ್ಲಿ ಸಿಗುವಂತಹ ಹಣ್ಣುಹಂಪಲುಗಳನ್ನು ತಿನ್ನುವುದರಿಂದ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ಯಾಕೆಂದರೆ ಇದರಲ್ಲಿ ನಿಮ್ಮ ದೇಹಕ್ಕೆ ಬೇಕಾಗಿರುವಂತಹ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇರುವುದು. ಬಿರುಬಿಸಿಲಿನಲ್ಲಿ ಕೇವಲ ಹಣ್ಣುಹಂಪಲುಗಳನ್ನು ತಿಂದರೆ ಮಾತ್ರ ಸಾಕಾಗದು. ಇದಕ್ಕಾಗಿ ನೀವು ಆರೋಗ್ಯಕರ ಜೀವನಶೈಲಿ ಮತ್ತು ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು.

fruits

ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಿ
ಬೇಸಿಗೆಯಲ್ಲಿ ದೇಹದಲ್ಲಿ ಹೆಚ್ಚಿನ ನೀರಿನಾಂಶ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿರುವುದು. ಬೇಸಿಗೆಯಲ್ಲಿತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಬೇಕಾಗುವ ನೀರಿನಾಂಶ ಸಿಗುವುದು. ಇದರಿಂದ ದೇಹವು ನಿರ್ಜಲೀಕರಣದಿಂದ ತಪ್ಪುವುದು. ಕಿತ್ತಳೆ ಹಾಗೂ ಇತರ ಕೆಲವೊಂದು ಕೆಂಪು ಬಣ್ಣದ ಹಣ್ಣುಗಳಲ್ಲಿ ಬೆಟಾ ಕ್ಯಾರೋಟಿನ್ ಅಂಶವಿರುವುದು. ಇದು ಬಿಸಿಲಿನಿಂದ ನಿಮ್ಮ ರಕ್ಷಿಸುವುದು. ತುಂಬಾ ಕಡುಬಣ್ಣದ ತರಕಾರಿಗಳ ಸೇವನೆ ಮಾಡಿ. ಇದರಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿಆಕ್ಸಿಡೆಂಟ್‌ಗಳು ಇವೆ.

ತಿಂಡಿಗಳ ಬಗ್ಗೆ ಎಚ್ಚರ
ಬೇಸಿಗೆ ಕಾಲದಲ್ಲಿ ಹೆಚ್ಚಿನ ತಿಂಡಿತಿನಿಸುಗಳು ಸಿಗುವುದು ಸಾಮಾನ್ಯ. ಆದರೆ ಬೇಸಿಗೆಯಲ್ಲಿ ಕರಿದಿರುವಂತಹ ತಿಂಡಿತಿನಿಸುಗಳನ್ನು ಕಡೆಗಣಿಸಬೇಕು. ಇದರಿಂದಾಗಿ ಹೊಟ್ಟೆ ಉಬ್ಬರ, ಅಜೀರ್ಣ ಮತ್ತು ಇತರ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರ ಬದಲಿಗೆ ನೀವು ಕೆಲವೊಂದು ತಾಜಾ ಹಣ್ಣುಗಳಾದ ಕಲ್ಲಂಗಡಿ, ಸೌತೆಕಾಯಿ ಇತ್ಯಾದಿಗಳನ್ನು ಸೇವಿಸಿ. ಇವುಗಳ್ಲಲಿ ಹೆಚ್ಚಿನ ಮಟ್ಟದ ನೀರಿನಾಂಶ ಹಾಗೂ ನಾರಿನಾಂಶವಿದೆ. ಟೊಮೆಟೋ ಸಲಾಡ್ ಮಾಡಿಕೊಂಡು ಅದರ ಮೇಲೆ ಫೆಟಾ ಚೀಸ್ ಮತ್ತು ಸ್ವಲ್ಪ ಆಲಿವ್ ಹಾಕಿಕೊಳ್ಳಿ.

ಜಾಣರಾಗಿರಿ
ಬೇಸಿಗೆಯಲ್ಲಿ ಜ್ಯೂಸ್ ಹಾಗೂ ಸ್ಮೂಥಿಗಳು ಎಷ್ಟರ ಮಟ್ಟಿಗೆ ಮಾರಾಟವಾಗುತ್ತದೆ ಎಂದು ಹೇಳಲು ಅಸಾಧ್ಯ. ಆದರೆ ಹೊರಗಡೆ ಸೇವನೆ ಮಾಡುವ ಬದಲು ನೀವೇ ಮನೆಯಲ್ಲಿ ತಯಾರಿಸಿಕೊಳ್ಳಿ ಅಥವಾ ಇಡೀ ಹಣ್ಣನ್ನು ತಿನ್ನಿ. ಇಡೀ ಹಣ್ಣಿನಲ್ಲಿ ನಿಮ್ಮ ದೇಹಕ್ಕೆ ನಾರಿನಾಂಶವು ಸಿಗುವುದು. ಇದು ಸ್ಮೂಥಿಯಲ್ಲಿ ನಿಮಗೆ ಸಿಗದು. ಹಣ್ಣುಗಳು ಹೊಟ್ಟೆ ತುಂಬುವಂತೆ ಮಾಡುವುದು. ಆದರೆ ನಿಮಗೆ ಸ್ಮೂಥಿ ಬೇಕೆಂದು ಅನಿಸಿದರೆ ಆಗ ನೀವು ಅರ್ಧ ಜ್ಯೂಸ್ ಮತ್ತು ಅರ್ಧ ತಂಪಾದ ನೀರು ಹಾಕಿಕೊಂಡು ಕುಡಿದರೆ ದೀರ್ಘಕಾಲ ತನಕ ಹೊಟ್ಟೆ ತುಂಬಿದಂತೆ ಇರುವುದು. ಸ್ಮೂಥಿ ಮಾಡುವಾಗ ಸಕ್ಕರೆ ಹಾಕಬೇಡಿ.

ಗ್ರಿಲ್‌ನ ಆಹಾರಗಳು
ಬೇಸಿಗೆಯಲ್ಲಿ ಹೆಚ್ಚು ಪಾರ್ಟಿಗಳು ನಡೆಯುತ್ತಲಿರುವ ಕಾರಣ, ಬೆಂಕಿಯಲ್ಲಿ ನೇರವಾಗಿ ಬೇಯಿಸಿದ ಆಹಾರಗಳಿಗೆ ಹೆಚ್ಚಿನ ಬೇಡಿಕೆ. ಇದರಲ್ಲಿ ಬಾರ್ಬೆಕ್ಯು ಕೂಡ ಒಂದು. ಆದರೆ ಹೊಟ್ಟೆಗೆ ಹೆಚ್ಚು ತೊಂದರೆಯಾಗಬಾರದು ಎಂದಿದ್ದರೆ ಆಗ ನೀವು ಬಾರ್ಬೆಕ್ಯೂ ಮಾಡುವಾಗ ಖಾರ ಮತ್ತು ಕೆಲವೊಂದು ಗಿಡಮೂಲಿಕೆಗಳನ್ನು ಅದಕ್ಕೆ ಹಾಕಿ. ಹಾಟ್ ಡಾಗ್ಸ್ ಮತ್ತು ಬರ್ಗರ್ ಬದಲಿಗೆ ನೀವು ಸಿಗಡಿ ಕಬಾಬ್ ಹಾಗೂ ತರಕಾರಿ ರೋಸ್ಟ್ ಮಾಡಿಕೊಂಡು ಸೇವಿಸಿ. ಸಿಗಡಿ ಕಾಕ್ ಟೇಲ್ ಅಥವಾ ಅನಾನಸು ಹಾಗೂ ಕೆಲವು ಪಿಯರ್ಸ್ ನಂತಹ ಹಣ್ಣುಗಳನ್ನು ಗ್ರಿಲ್ ಮಾಡಿಕೊಂಡರೆ ಹೆಚ್ಚು ರುಚಿಕರ.

ಸಾಸ್ ಬಗ್ಗೆ ಯೋಚಿಸಿ
ಆರೋಗ್ಯಕರ ಸಲಾಡ್ ಗಳು ಹಾಗೂ ತರಕಾರಿಗಳು ಪ್ಲೇಟ್ ನಲ್ಲಿ ಇರುವಾಗ ನಿಮಗೆ ತುಂಬಾ ಸಂತೋಷವಾಗುವುದು. ಆದರೆ ಸಲಾಡ್ ಅಲಂಕರಿಸಲು ಹಾಕುವಂತಹ ಸಾಸ್ ಬಗ್ಗೆ ನೀವು ಯೋಚನೆ ಮಾಡಿ. ಯಾಕೆಂದರೆ ಇದರಲ್ಲಿ ಕೊಬ್ಬು, ಸಕ್ಕರೆ ಮತ್ತು ಕ್ಯಾಲರಿ ಅಧಿಕವಾಗಿದೆ. ಇದರ ಬದಲಿಗೆ ಎಕ್ಸಟ್ರಾ ವರ್ಜಿನ್ ಆಲಿವ್ ತೈಲ ಬಳಸಿ. ಇದರಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ನೀವು ಲಿಂಬೆ ಅಥವಾ ವಿನೇಗರ್ ನ ಮಿಶ್ರಣವನ್ನು ಸಲಾಡ್ ಗೆ ಬಳಸಬಹುದು. ಇದು ತುಂಬಾ ರುಚಿ ಹಾಗೂ ಆರೋಗ್ಯಕರ.

ಗುಣಮಟ್ಟದ ಮಾಂಸ
ಬೇಸಿಗೆ ಕಾಲದಲ್ಲಿ ನೀವು ಸಂಸ್ಕರಿತ ಮಾಂಸ ಕಡಿಮೆ ತಿನ್ನಬೇಕು ಎನ್ನುವುದು ನಮ್ಮ ಸಲಹೆಯಾಗಿದೆ. ನೀವು ಮಾಂಸ ಪ್ರೇಮಿಯಾಗಿದ್ದರೆ ಆಗ ನೀವು ತಾಜಾ ಮಾಂಸದ ಕಡೆ ಗಮನಹರಿಸಿ. ನೀವು ಬರ್ಗರ್ ಮಾಡಿಕೊಳ್ಳಿ. ಇದಕ್ಕೆ ತಾಜಾ ಮಾಂಸ ಮತ್ತು ಗಿಡಮೂಲಿಕೆಗಳನ್ನು ಹಾಕಿ. ಸಂಸ್ಕರಿತ ಸಾಸೇಜ್ ಬಳಸುವ ಬದಲು ಮೀನು ಅಥವಾ ಇತರ ಸಾಸೇಜ್ ಬಳಸಿ. ಜೋಳ, ಗೆಣಸು, ಟೊಮೆಟೋ ಮತ್ತು ಬೆಂಕಿಯಲ್ಲಿ ಹಾಕಿದ ಬದನೆ ತುಂಬಾ ಒಳ್ಳೆಯದು.

ನಿಮ್ಮ ಪ್ಲೇಟ್ ತುಂಬಿ ತುಳುಕದಿರಲಿ!
ಮದುವೆ ಇನ್ನಿತರ ಸಮಾರಂಭದಲ್ಲಿ ಭಾಗಿಯಾದ ವೇಳೆ ನಮಗೆ ಊಟ ಮೇಲೆ ನಿಯಂತ್ರಣವೇ ಇರುವುದಿಲ್ಲ. ನಿಮ್ಮ ಪ್ಲೇಟ್ ನ್ನು ಸಂಪೂರ್ಣವಾಗಿ ತುಂಬುವ ಬದಲು ಅಲ್ಲಿ ಏನೇನು ಇದೆ ಎನ್ನುವುದನ್ನು ನೀವು ತಿಳಿಯಿರಿ. ನಿಮ್ಮ ಪ್ಲೇಟ್ ನಲ್ಲಿ ಅರ್ಧದಷ್ಟು ಸಲಾಡ್ ಗಳು ಮತ್ತು ತೆಳು ಪ್ರೋಟೀನ್ ಇರಲಿ. ನೀವು ತಿನ್ನುವ ಪ್ರಮಾಣವು ಪರಿಣಾಮ ಬೀರುವುದು ಎಂದು ಅಧ್ಯಯನಗಳು ಹೇಳುತ್ತದೆ.

ಸಲಾಡ್ ಗಳನ್ನು ನೀವೇ ತಯಾರಿಸಿ
ಈ ಬೇಸಗೆಯಲ್ಲಿ ಲೆಟಸ್ ಬದಲಿಗೆ ನೀವು ವಿಟಮಿನ್ ತುಂಬಿರುವಂತಹ ಕಲ್ಲಂಗಡಿ ಹಣ್ಣನ್ನು ನಿಮ್ಮ ಸಲಾಡ್ ಗೆ ಸೇರಿಸಿಕೊಳ್ಳಿ. ಇದರಲ್ಲಿ ಹೆಚ್ಚಿನ ರುಚಿ ಹಾಗೂ ಆ್ಯಂಟಿಆಕ್ಸಿಡೆಂಟ್ ಕೂಡ ಸಮೃದ್ಧವಾಗಿದೆ. ಕೆಲವೊಂದು ತರಕಾರಿಗಳನ್ನು ಗ್ರಿಲ್ ಅಥವಾ ರೋಸ್ಟ್ ಮಾಡಿಕೊಂಡಾಗ ಅದರ ರುಚಿಯು ಮತ್ತಷ್ಟು ಹೆಚ್ಚಾಗುವುದು. ಇದರಿಂದ ನಿಮ್ಮ ಸಲಾಡ್ ಗೆ ವಿಶೇಷ ರುಚಿ ಬರುವುದು ಮತ್ತು ಹೊಟ್ಟೆಯು ತುಂಬಿದಂತೆ ಆಗುವುದು. ಕೋಳಿ ಅಥವಾ ಸಲ್ಮಾನ್ ನ್ನು ಗ್ರಿಲ್ ಮಾಡಿಕೊಂಡು ತಿನ್ನಬಹುದು. ಇದಕ್ಕೆ ಆರೋಗ್ಯಕಾರಿ ಕೊಬ್ಬುಗಳಾದ ಆಲಿವ್ ತೈಲ ಮತ್ತು ಅವಕಾಡೋ ಹಾಕಿ.

ಮೀನು ಸೇವನೆ ಹೆಚ್ಚಿಸಿ
ವಾರದಲ್ಲಿ ಎರಡು ಸಲ ಎಣ್ಣೆಯುಕ್ತ ಮೀನಿನ ಸೇವನೆ ಮಾಡಬೇಕೆಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮೀನಿನಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಇದೆ ಮತ್ತು ಬೇಸಿಗೆಯಲ್ಲಿ ಇದರ ತಯಾರಿ ಕೂಡ ಸುಲಭ. ಕೊತ್ತಂಬರಿ ಸೊಪ್ಪು ಮತ್ತು ಇತರ ಕೆಲವೊಂದು ಗಿಡಮೂಲಿಕೆ ಬಳಸಿಕೊಂಡು ಪೇಸ್ಟ್ ಮಾಡಿ. ಕತ್ತರಿಸಿಕೊಂಡಿರುವ ಶುಂಠಿ, ಬೆಳ್ಳುಳ್ಳಿ ಮತ್ತು ಲಿಂಬೆ ಹಾಕಿಕೊಂಡು ನೀವು ಗ್ರಿಲ್ ಮಾಡಿದರೆ ಆಗ ನಿಮಗೆ ಹೆಚ್ಚಿನ ಆರೋಗ್ಯ ಲಾಭಗಳು ಸಿಗುವುದು. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಆಗ ನೀವು ಇದನ್ನು ಶೇರ್ ಮಾಡಿಕೊಳ್ಳಿ.

English summary

How To Eat Healthy This Summer

This summer, prep yourself up for the heat! Summers are already here and with it comes a whole host of delicious and healthy treats. Summers also mean going to the beach and visiting cool hilly areas. So, you may be wondering how to eat healthy this summer? You will be sweating and going outdoors for work, this will increase the risk of health problems such as dehydration, skin sensitivities and vitamin and mineral deficiencies. So, what's the simple solution? Eating local and seasonal fruits is the solution because their nutrients are at their peak in the summer.
X
Desktop Bottom Promotion