ಒಂದೇ ಗಂಟೆಯಲ್ಲಿ ಮುಟ್ಟಿನ ನೋವು ಕಂಟ್ರೋಲ್ ಮಾಡುವ ಮನೆಮದ್ದುಗಳು

Posted By: Deepu
Subscribe to Boldsky

ತಿಂಗಳ ಮುಟ್ಟಿನ ನೋವು, ಕಿರಿಕಿರಿ, ಯಾತನೆ, ಖಿನ್ನತೆ ಪ್ರತಿಯೊಬ್ಬ ಮಹಿಳೆಗೂ ತಿಳಿದಿರುತ್ತದೆ. ಪ್ರತೀ ತಿಂಗಳು ಇದನ್ನು ಅನುಭವಿಸಲೇ ಬೇಕು. ಇದನ್ನು ತಡೆಯುವಂತಿಲ್ಲ. ಹೊಟ್ಟೆಯ ಕೆಳಭಾಗದಲ್ಲಿ ಉಂಟಾಗುವಂತಹ ಈ ಕ್ರಿಯೆಯ ವೇಳೆ ಸ್ನಾಯು ಸೆಳೆತವೂ ಉಂಟಾಗುತ್ತದೆ. ಇದರಿಂದಾಗಿ ದೈನಂದಿನ ಕೆಲವೊಂದು ಚಟುವಟಿಕೆ ಮಾಡಲು ಕಷ್ಟವಾಗುತ್ತದೆ.

ಆದರೆ ನೋವನ್ನು ನಿವಾರಿಸಲು ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಮನೆಮದ್ದನ್ನು ಬಳಸಿದರೆ ತುಂಬಾ ಒಳ್ಳೆಯದು.ವಿಶೇಷವಾಗಿ ಮುಟ್ಟಿಗಿಂತ ಮೊದಲು ಪಪ್ಪಾಯಿಯನ್ನು ಸೇವಿಸುವುದು ಒಳ್ಳೆಯದು. ಒಂದೆರಡು ಶುಂಠಿಯ ತುಂಡನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲವು ನಿಮಿಷಗಳವರೆಗೆ ಹಾಗೆಯೇ ಕಾಯಿಸಿದ ನಂತರ ಅದರ ಡಿಕಾಕ್ಷನ್ ತೆಗೆದುಕೊಳ್ಳಿ ಆರಿಸಿ ಕುಡಿಯಿರಿ....

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ವಿಶೇಷವಾಗಿ ಮುಟ್ಟಿಗಿಂತ ಮೊದಲು ಪಪ್ಪಾಯಿಯನ್ನು ಸೇವಿಸುವುದು ಒಳ್ಳೆಯದು. ಪಪ್ಪಾಯಿ ಮುಟ್ಟಿನ ನೋವಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಕಿಣ್ವ, (ಪಪಿಯನ್) ಗಳನ್ನು ಒಳಗೊಂಡಿದೆ. ಇದು ಮುಟ್ಟಿನ ಸಂದರ್ಭದಲ್ಲಿ ರಕ್ತದ ಹರಿವನ್ನು ಸಹನೀಯ ಮತ್ತು ಸುಲಭವಾಗಿ ಆಗುವಂತೆ ಮಾಡುತ್ತದೆ.

ಜೀರಿಗೆ

ಜೀರಿಗೆ

ಅನಿಯಮಿತ ಮುಟ್ಟಿನ ದಿನಗಳನ್ನು ಸೂಕ್ತ ಪರಿಹಾರವನ್ನು ನೀಡುವ ಜೀರಿಗೆ ಮುಟ್ಟಿನ ನೋವನ್ನು ಉಪಶಮನಗೊಳಿಸುವಲ್ಲಿ ಎತ್ತಿದ ಕೈಯಾಗಿದೆ. ಒಂದು ಕಪ್ ನೀರಿಗೆ ಸ್ವಲ್ಪ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡು ಅದನ್ನು ಕುಡಿಯುವುದರಿಂದ ಮುಟ್ಟಿನ

ಶುಂಠಿ ತುಂಡನ್ನು ಜಜ್ಜಿ ಮಾಡಿದ ಕಷಾಯ

ಶುಂಠಿ ತುಂಡನ್ನು ಜಜ್ಜಿ ಮಾಡಿದ ಕಷಾಯ

ಒಂದೆರಡು ಶುಂಠಿಯ ತುಂಡನ್ನು ಜಜ್ಜಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೆಲವು ನಿಮಿಷಗಳವರೆಗೆ ಹಾಗೆಯೇ ಕಾಯಿಸಿದ ನಂತರ ಅದರ ಡಿಕಾಕ್ಷನ್ ತೆಗೆದುಕೊಳ್ಳಿ ಆರಿಸಿ ಕುಡಿಯಿರಿ. ಹಾಗೆಯೇ ಕುಡಿಯಲು ಸಾಧ್ಯವಾಗಿಲ್ಲ ಅಂದ್ರೆ ಜೇನುತುಪ್ಪ ಇಲ್ಲ ಸಕ್ಕರೆ ಅಥವಾ ಬೆಲ್ಲ ಸೇರಿಸಿಯೂ ಸೇವಿಸ್ಬಹುದು. ಮುಟ್ಟಿನ ದಿನಗಳಲ್ಲಿ ನಿಮ್ಮನ್ನ ಅತಿಯಾಗಿ ಕಾಡುವ ರಕ್ತಸ್ರಾವ ಸಮಸ್ಯೆಗೆ ಇದು ಕೂಡ ಉತ್ತಮ ರೀತಿಯಲ್ಲಿ ಪರಿಹಾರ ನೀಡಬಲ್ಲದು.

ಲಿಂಬು-ಮೊಸಂಬಿ ಹಣ್ಣಿನ ಜ್ಯೂಸ್

ಲಿಂಬು-ಮೊಸಂಬಿ ಹಣ್ಣಿನ ಜ್ಯೂಸ್

ಫ್ರೆಶ್ ಜ್ಯೂಸ್ ಯಾವಾಗಲೂ ಕೂಡ ಆರೋಗ್ಯಕ್ಕೆ ಉತ್ತಮವೇ. ಮೂಸಂಬಿರಸಕ್ಕೆ ಎರಡು ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ, ದಿನಕ್ಕೆ ನಾಲ್ಕರಿಂದ ಐದು ಬಾರಿ ಸೇವಿಸಿ. ಮೂಸಂಬಿ ರಸದಲ್ಲಿ ನಿಮಗೆ ವಿಟಮಿನ್ ಸಿ ಲಭ್ಯವಾಗುತ್ತೆ ಮತ್ತು ಅದಕ್ಕೆ ಸೇರಿಸಿದ ಲಿಂಬೆಯ ರಸ ಹೆಚ್ಚಿನ ರಕ್ತಸ್ರಾವವವನ್ನು ತಡೆಗಟ್ಟಿ ಆರಾಮದಾಯಕವಾಗಿರುವಂತೆ ಮಾಡುತ್ತೆ.

ಸಾಸಿವೆ ಉಪಯೋಗಿಸಿ ನೋವು ಹೋಗಲಾಡಿಸಿ

ಸಾಸಿವೆ ಉಪಯೋಗಿಸಿ ನೋವು ಹೋಗಲಾಡಿಸಿ

ನೀರಿಗೆ ಸಾಸಿವೆಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಇದರಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ,ಹಿಂಡಿ,ಹೊಟ್ಟೆ ನೋವಿರುವಾಗ ಹೊಟ್ಟೆಯ ಮೇಲೆ ಈ ಬಟ್ಟೆಯನ್ನು ಹಾಕಿ ಇದರಿಂದ ಹೊಟ್ಟೆ ನೋವು ನಿವಾರಿಸಬಹುದು. ಅನಿಯಮಿತ ಮುಟ್ಟಿನ ದಿನಗಳನ್ನು ಸೂಕ್ತ ಪರಿಹಾರವನ್ನು ನೀಡುವ ಜೀರಿಗೆ ಮುಟ್ಟಿನ ನೋವನ್ನು ಉಪಶಮನಗೊಳಿಸುವಲ್ಲಿ ಎತ್ತಿದ ಕೈಯಾಗಿದೆ. ಒಂದು ಕಪ್ ನೀರಿಗೆ ಸ್ವಲ್ಪ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡು ಅದನ್ನು ಕುಡಿಯುವುದರಿಂದ ಮುಟ್ಟಿನ ಸೆಳೆತ, ಆಯಾಸ ಕಡಿಮೆಯಾಗುತ್ತದೆ. ಈ ನೀರನ್ನು ಐದು ನಿಮಷಗಳ ಕಾಲ ಕುದಿಸಿ ತಣಿಸಿದ ನಂತರ ಸೇವಿಸಿ.

ನುಗ್ಗೆ ಸೊಪ್ಪಿನ ಜ್ಯೂಸ್

ನುಗ್ಗೆ ಸೊಪ್ಪಿನ ಜ್ಯೂಸ್

ತಿಂಗಳ ಮುಟ್ಟಿನ ವೇಳೆ ಅತಿಯಾದ ನೋವನ್ನು ಅನುಭವಿಸುವವರು ಮನೆಮದ್ದನ್ನು ಉಪಯೋಗಿಸಬೇಕೆಂದು ಬಯಸುವುದಾದರೆ ನುಗ್ಗೆ ಕಾಯಿ ಮರದ ಎಲೆಗಳಿಂದ ಮಾಡಿದ ಜ್ಯೂಸ್ ಅನ್ನು ಕುಡಿಯಬೇಕು. ನುಗ್ಗೆ ಕಾಯಿ ಮರದ ಎಲೆಗಳ ಅಥವಾ ನುಗ್ಗೆ ಸೊಪ್ಪಿನ ಜ್ಯೂಸ್ ಅನ್ನು ಕುಡಿಯುವುದರಿಂದ ದೇಹದಲ್ಲಿ ಕಬ್ಬಿನಾಂಶವು ಹೆಚ್ಚಾಗುತ್ತದೆ. ಇದು ದೇಹಕ್ಕೆ ಪೋಷಕಾಂಶವನ್ನು ನೀಡಿ ದೇಹದಲ್ಲಿ ರಕ್ತವು ಸರಿಯಾಗಿ ಸರಬರಾಜು ಆಗಲು ನೆರವಾಗುತ್ತದೆ. ಇದರಿಂದ ನೋವು ಕಡಿಮೆಯಾಗುವುದು.

ನುಗ್ಗೆ ಸೊಪ್ಪಿನ ಜ್ಯೂಸ್ ಮಾಡಿಕೊಳ್ಳುವುದು ಹೇಗೆ?

ನುಗ್ಗೆ ಸೊಪ್ಪಿನ ಜ್ಯೂಸ್ ಮಾಡಿಕೊಳ್ಳುವುದು ಹೇಗೆ?

1. ನುಗ್ಗೆ ಸೊಪ್ಪಿನ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಸರಿಯಾಗಿ ತೊಳೆಯಿರಿ.

2. ಎಲೆಗಳನ್ನು ರುಬ್ಬಿಕೊಂಡು ಅದರ ಜ್ಯೂಸ್ ತೆಗೆಯಿರಿ.

3. ಜ್ಯೂಸ್ ಅನ್ನು ಗಾಳಿಸಿಕೊಂಡು ¼ ಕಪ್ ಜ್ಯೂಸ್‌ಗೆ ಒಂದು ಚಮಚ ಜೇನುತುಪ್ಪ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.

4.ತಿಂಗಳ ಮುಟ್ಟಿನ ಮೊದಲ ಎರಡು ದಿನ ಈ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ.

5. ತಿಂಗಳ ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ನೋವು ಇದರಿಂದ ಕಡಿಮೆಯಾಗುವುದು.

ಮೂಲಂಗಿ

ಮೂಲಂಗಿ

ಸ್ವಲ್ಪ ನೀರು ಸೇರಿಸಿ ಎರಡರಿಂದ ಮೂರು ಮೂಲಂಗಿಯನ್ನು ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಒಂದು ಗ್ಲಾಸ್ ಮಜ್ಜಿಗೆಯನ್ನು ಸೇರಿಸಿ. ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿ. ಅತಿಯಾದ ರಕ್ತಸ್ರಾವವನ್ನು ಕಂಟ್ರೋಲ್ ಮಾಡುವುದರ ಜೊತೆಗೆ ನೋವನ್ನು ಕಡಿಮೆ ಮಾಡಿ ಆರಾಮದಾಯಕ ಫೀಲಿಂಗ್ ನೀಡಲು ಇದು ನೆರವಾಗುತ್ತೆ.

English summary

home remedies for menstrual cramps and heavy bleeding

During menstruation, a lot of hormonal changes occur in the body that can cause inflammation of the uterine walls, as it is ready to shed, thus causing a lot of pain and discomfort in the lower abdominal region. A lot of women experience unbearable pain during periods and resort to taking painkillers, which can damage their health in the long run. It is always best to try natural remedies to ease menstrual pain, so here is an exceptional home remedy that can help you!
Story first published: Wednesday, April 4, 2018, 23:31 [IST]