For Quick Alerts
ALLOW NOTIFICATIONS  
For Daily Alerts

ಸಿಕ್ಸ್ ಪ್ಯಾಕ್ ಬಾಡಿ ಬೇಕೆಂದರೆ ಇಂತಹ ಟ್ರಿಕ್ಸ್ ಅನುಸರಿಸಿ ನೋಡಿ...

By Sushma Charhra
|

ಸಿಕ್ಸ್ ಪ್ಯಾಕ್ ಸಾಧಿಸುವುದು ಅನ್ನುವುದೊಂದು ಕ್ರೇಝ್.. ಹುಡುಗರಿಗೆ ಸಿಕ್ಸ್ ಪ್ಯಾಕ್ ಇದ್ದರೆ ಹುಡುಗಿಯರು ಬೋಲ್ಡ್ ಆಗಿ ಬಿಡುತ್ತಾರೆ.. ಶಾರೂಕ್ ಖಾನ್, ಸಲ್ಮಾನ್ ಖಾನ್ ಹೀಗೆ ಹೀರೋಗಳ ಸಿಕ್ಸ್ ಪ್ಯಾಕ್ ಫಿದಾ ಆಗೋ ಹುಡುಗಿಯರನ್ನು ನೋಡಿ, ಒಬ್ಬ ಹುಡುಗ ನಾನೂ ಸಿಕ್ಸ್ ಪ್ಯಾಕ್ ಬೆಳೆಸಿಕೊಂಡು ಆ ಹುಡುಗಿಯನ್ನು ಮೆಚ್ಚಿಸಬೇಕು ಅಂದುಕೊಳ್ಳುವುದರಲ್ಲಿ ಹೊಸತೇನಿಲ್ಲ..

ಅದೇನೋ ಗೊತ್ತಿಲ್ಲು ಹುಡುಗರ ಸಿಕ್ಸ್ ಪ್ಯಾಕ್ ಹುಡುಗಿಯರನ್ನು ಸೆಳೆದು ಬಿಡುತ್ತೆ. ಹುಡುಗಿಯರನ್ನು ಸೆಳೆಯಲು ಹುಡುಗರು ಸಿಕ್ಸ್ ಪ್ಯಾಕ್ ಗಾಗಿ ಆಸೆ ಪಡ್ತಾರೆ ಮತ್ತು ಅದಕ್ಕಾಗಿ ವರ್ಕ್ ಔಟ್ ಮಾಡ್ತಾರೆ. ಆದರೆ ಕೇವಲ ವರ್ಕ್ ಔಟ್ ಮಾತ್ರವೇ ಸಿಕ್ಸ್ ಪ್ಯಾಕ್ ಸಾಧಿಸಲು ಸಾಕಾಗುವುದಿಲ್ಲ. ಸಿಕ್ಸ್ ಪ್ಯಾಕ್ ಸಾಧಿಸಲು ನೀವು ಹಲವಾರು ವೈಜ್ಞಾನಿಕ ಸಂಗತಿಗಳನ್ನು ನೆನಪಿನಲ್ಲಿ ಇಡಬೇಕಾಗುತ್ತದೆ.

science based six pack

ವ್ಯಾಯಾಮದ ಜೊತೆಗೆ ಆಹಾರ ಕ್ರಮವೂ ಕೂಡ ಸರಿಯಾಗಿದ್ದಲ್ಲಿ ಮಾತ್ರ ಸಿಕ್ಸ್ ಪ್ಯಾಕ್ ಪಡೆಯಲು ಸಾಧ್ಯವಾಗುತ್ತೆ. ಹೆಚ್ಚಿನವರು ಏನು ಮಾಡ್ತಾರೆ ಅಂದರೆ ಸಾಕಷ್ಟು ವ್ಯಾಯಾಮ ಮಾಡ್ತಾರೆ, ಆಬ್ಸ್ ವರ್ಕ್ ಔಟ್ ಮಾಡ್ತಾರೆ, ಆದರೆ ಒಟ್ಟಾರೆ ಕೊಬ್ಬು ಕರಗುವಿಕೆ ಅದ್ರಲ್ಲೂ ಹೊಟ್ಟೆಯ ಭಾಗದಲ್ಲಿ ಕುಳಿತಿರುವ ಕೊಬ್ಬಿನಾಂಶವನ್ನು ಕರಗಿಸಲು ಹೆಚ್ಚೆಚ್ಚು ಪ್ರಯತ್ನ ನಡೆಸುತ್ತಾರೆ.

ಸಿಕ್ಸ್ ಪ್ಯಾಕ್ ಮೈಕಟ್ಟು ಬೇಕೇ? ಈ ಆಹಾರಗಳನ್ನು ಸೇವಿಸಿ

ಕಿಬ್ಬೊಟ್ಟೆಯ ಸಾಂದ್ರತೆ ಮತ್ತು ದಪ್ಪವನ್ನು ಹೈಲೆಟ್ ಮಾಡಬೇಕು ಎಂದರೆ ಕೆಲವೊಂದು ಸರಿಯಾದ ಮಾರ್ಗದರ್ಶನ ಮತ್ತು ಆಹಾರ ಕ್ರಮ, ಪರಿಶ್ರಮ ಇದ್ದರೆ ಮಾತ್ರ ನೀವು ಅಂದುಕೊಂಡ ಸಿಕ್ಸ್ ಪ್ಯಾಕ್ ಆಬ್ಸ್ ಪಡೆಯಲು ಸಾಧ್ಯವಾಗುತ್ತದೆ. ಸಿಕ್ಸ್ ಪ್ಯಾಕ್ ಪಡೆಯುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನವೂ ಸಾಗುತ್ತಿದ್ದರೆ ಖಂಡಿತ ನೀವೂ ಈ ಲೇಖನವನ್ನು ಓದುವುದು ತಪ್ಪಿಸಬಾರದು. ಇಲ್ಲಿ ನಾವು ಸಿಕ್ಸ್ ಪ್ಯಾಕ್ ಸಾಧಿಸಲು ಯಾವೆಲ್ಲ ಪ್ರಮುಖ ವೈಜ್ಞಾನಿಕ ಸಂಗತಿಗಳನ್ನು ತಿಳಿದಿರಬೇಕು ಎಂದು ತಿಳಿಸಲಿದ್ದೇವೆ.

ಸಿಕ್ಸ್ ಪ್ಯಾಕ್ ಹಿಂದಿನ ವಿಜ್ಞಾನ

ಸಿಕ್ಸ್ ಪ್ಯಾಕ್ ಆಬ್ಸ್ ಪಡೆಯಲು ನೀವು ಪ್ರಯತ್ನಿಸುವುದಕ್ಕಿಂತ ಮುನ್ನ ಯಾವೆಲ್ಲ ಅಂಶಗಳು ಆಬ್ಸ್ ಪಡೆಯಲು ಪ್ರಮುಖವಾಗಿ ಕಾರಣವಾಗುತ್ತದೆ ಎಂಬುದನ್ನು ಅರಿಯುವುದು ಒಳ್ಳೆಯದು. ಅದ್ರಲ್ಲೂ ಪ್ರಮುಖವಾಗಿ ವೈಜ್ಞಾನಿಕ ದೃಷ್ಟಿಕೋನದಲ್ಲಿ ಸಿಕ್ಸ್ ಪ್ಯಾಕ್ ಪಡೆಯಲು ನೆರವಾಗುವ ಸಂಗತಿಗಳ ಬಗ್ಗೆ ತಿಳಿದಿದ್ದರೆ ನಿಮ್ಮ ಕಾರ್ಯವು ಸಿದ್ಧಿಸುವುದಕ್ಕೆ ಹೆಚ್ಚು ದಿನ ಬೇಕಾಗುವುದಿಲ್ಲ.

*ದೇಹದ ಕೊಬ್ಬಿನ ಮಟ್ಟ: ಮೊದಲನೆಯದಾಗಿ ಒಂದು ವೇಳೆ ನಿಮ್ಮ ದೇಹದ ಒಟ್ಟು ಕೊಬ್ಬಿನಂಶ ಅತ್ಯಧಿಕವಾಗಿದ್ದರೆ, ನಿಮಗೆ ಉತ್ತಮ ಸಿಕ್ಸ್ ಪ್ಯಾಕ್ ಪಡೆಯುವ ಅವಕಾಶ ಚೆನ್ನಾಗಿರುತ್ತದೆ. ನಿಮಗೆ ಅತ್ಯಂತ ಗ್ರೇಟ್ ಆಗಿರುವ ಆಬ್ಸ್ ಇದ್ದು, ದೇಹದ ಫ್ಯಾಟ್ ಅಂಶ ಹೆಚ್ಚಿದ್ದರೆ, ಯಾವಾಗಲೂ ನಿಮ್ಮ ಸಿಕ್ಸ್ ಪ್ಯಾಕ್ ಒಂದು ಮೂಲೆಯಲ್ಲಿರುವಂತಾಗುತ್ತದೆ.

*ಕಿಬ್ಬೊಟ್ಟೆಯ ಸ್ನಾಯುವಿನ ದ್ರವ್ಯರಾಶಿ: ಒಮ್ಮೆ ನೀವು ಸಾಕಷ್ಟು ಕೊಬ್ಬಿನಾಂಶವನ್ನು ಮ್ಯಾನೇಜ್ ಮಾಡಲು ತಯಾರಿದ್ದು ಅದು ಸಾಧ್ಯವಾದರೆ, ಹೆಚ್ಚಿನ ಆಬ್ಸ್ ವ್ಯಾಯಾಮಗಳನ್ನು ಮಾಡುವ ಮೂಲಕ ಅದನ್ನು ಸುಧಾರಿಸಿಕೊಳ್ಳಲು ಮತ್ತು ದಪ್ಪವಾಗಿ ಮಾಡುವುದು ಅಷ್ಟೇನು ಕಷ್ಟವಾಗಲಾರದು. ಅಂದರೆ ಕಿಬ್ಬೊಟ್ಟೆ ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸುವುದು ಸುಲಭ.

*ಕಿಬ್ಬೊಟ್ಟೆಯ ರಚನೆ ಮತ್ತು ಜೆನೆಟಿಕ್ಸ್: ಕೆಲವು ವ್ಯಕ್ತಿಗಳು ಕಡಿಮೆ ಫ್ಯಾಟ್ ಅಂಶದಿಂದ ಹುಟ್ಟಿರುತ್ತಾರೆ, ಅದ್ರಲ್ಲೂ ಪ್ರಮುಖವಾಗಿ ಹೊಟ್ಟೆ ಮತ್ತು ತೊಳುಗಳಲ್ಲಿ ಅವರಿಗೆ ಯಾವುದೇ ಕೊಬ್ಬಿನಾಂಶವಿರುವುದೇ ಇಲ್ಲ. ಇವರಿಗೆ ಬೇಸಿಕ್ ವ್ಯಾಯಾಮಗಳು ಬೇಕಾಗುತ್ತದೆ. ಕಿಬ್ಬೊಟ್ಟೆಯ ರಚನೆ ಮತ್ತು ವಂಶವಾಹಿಯ ಅನುಸಾರ ಅವರ ದೇಹವು ಸಣ್ಣಗಿದ್ದರೆ ಅದನ್ನು ಬಿಲ್ಡ್ ಅಪ್ ಮಾಡಬೇಕಾಗುತ್ತದೆ.

*ಕರಗದಿರುವ ಕೊಬ್ಬಿನ ಪ್ರದೇಶಗಳು: ಕೆಲವು ವ್ಯಕ್ತಿಗಳು ಕರಗದಿರುವ ಕೊಬ್ಬಿನ ಅಂಶಗಳನ್ನು ಹೊಟ್ಟೆಯಲ್ಲಿಟ್ಟುಕೊಂಡಿರುತ್ತಾರೆ, ಇದರ ಅರ್ಥ ಅವರು ಹೆಚ್ಚು ಕಠಿಣವಾದ ವ್ಯಾಯಾಮವನ್ನು ಮಾಡಬೇಕು ಮತ್ತು ಹೊಟ್ಟೆಯ ಸುತ್ತಲಿನ ಕೊಬ್ಬಿನಾಂಶವನ್ನು ಕರಗಿಸಿಕೊಳ್ಳಬೇಕು.
ಈಗ ನಿಮಗೆ ಸಿಕ್ಸ್ ಪ್ಯಾಕ್ ಹಿಂದಿನ ಸಿದ್ದಾಂತಗಲು ಅರ್ಥವಾಗಿರಬಹುದು. ಈಗ ನಿಮ್ಮ ಆಬ್ಸ್ ಟ್ರೈನಿಂಗ್ ಮತ್ತು ಅದರ ತಯಾರಿ ಹೇಗಿದ್ದರೆ ಒಳಿತು ಎಂಬ ಬಗ್ಗೆ ತಿಳಿಸಲಿದ್ದೇವೆ.

ಸಿಕ್ಸ್ ಪ್ಯಾಕ್ ಆಬ್ ಗೆ ವೈಜ್ಞಾನಿಕ ಸಲಹೆಗಳು :

* ನಿಮ್ಮ ಆಹಾರ ಕ್ರಮವನ್ನು ಶುದ್ಧಗೊಳಿಸಿ
* ನಿಮ್ಮ ದೇಹವನ್ನು ಸರಿಯಾಗಿ ತರಬೇತು ಮಾಡಿ
* ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ವ್ಯಾಯಾಮ
*ಹಲಗೆಯಲ್ಲಿ ವ್ಯಾಯಾಮಗಳು
*ಕ್ರೀಡೆಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳಿ

1. ನಿಮ್ಮ ಆಹಾರ ಕ್ರಮವನ್ನು ಶುದ್ಧಗೊಳಿಸಿ

ಆಬ್ಸ್ ಸರಳವಾಗಿ ಜಿಮ್ ನಲ್ಲಿ ಪಡೆದು ಬಿಡುವುದಕ್ಕೆ ಸಾಧ್ಯವಾಗುವುದಿಲ್ಲ, ಪ್ರಮುಖವಾಗಿ ಇದರ ಕೆಲಸ ಆರಂಭವಾಗುವುದು ನಿಮ್ಮ ಅಡುಗೆ ಮನೆಯಿಂದ. ನಿಮ್ಮ ವರ್ಕ್ ಔಟ್ ನಲ್ಲೇ ಶುದ್ಧವಾಗಿ ಮತ್ತು ಕ್ರಮಬದ್ಧವಾಗಿ ನಿಮ್ಮ ಆಹಾರ ಕ್ರಮವೂ ಇದ್ದರೆ ಮಾತ್ರ ಸಿಕ್ಸ್ ಪ್ಯಾಕ್ ಪಡೆಯಲು ಸಾಧ್ಯವಾಗುತ್ತದೆ. ಸಂಸ್ಕರಿಸಿದ ಮತ್ತು ಜಂಕ್ ಫುಡ್ ಗಳನ್ನು ಬಿಟ್ಟು ಬಿಡಿ ಮತ್ತು ಆದಷ್ಟು ತರಕಾರಿಗಳನ್ನು ಹೆಚ್ಚು ಸೇವಿಸಿ, ಸಾವಯವವಾಗಿ ಪಡೆದಿರುವ ಪ್ರೋಟೀನ್ ಗಳು ಮತ್ತು ಆರೋಗ್ಯಕಾರಿ ಫ್ಯಾಟ್ ಅಂಶಗಳು ಉದಾಹರಣೆಗೆ ಆಲಿವ್ ಆಯಿಲ್, ಫಿಶ್ ಆಯಿಲ್ ಮತ್ತು ಅವಕಾಡೋ ಗಳನ್ನು ಸೇವಿಸುವುದು ನಿಮ್ಮ ಡಯಟ್ ನ ಆರಂಭಿಕ ಅಂಶವಾಗಿರುತ್ತದೆ.

ನಿಮ್ಮ ತಜ್ಞರು ನಿಮಗೆ ದಿನಕ್ಕೆ 6 ಸಣ್ಣ ಆಹಾರಗಳನ್ನು ಸೇವಿಸುವುದಕ್ಕೆ ಸಲಹೆ ನೀಡಬಹುದು. ಮೂರು ಬಾರಿ ತುಂಬಾ ತಿನ್ನುವ ಬದಲು ಆರು ಬಾರಿ ಕಡಿಮೆ ತಿನ್ನಬೇಕು ಎಂಬ ಸಿದ್ಧಾಂತವು ಸಿಕ್ಸ್ ಪ್ಯಾಕ್ ಸಾಧಿಸಲು ಸಾಕಷ್ಟು ನೆರವು ನೀಡುತ್ತದೆ. ಆದರೆ ಹೊಸ ಡಯಟ್ ಕ್ರಮವನ್ನು ಆರಂಭಿಸುವ ಮುನ್ನ ನಿಮ್ಮ ವೈದ್ಯರ ಬಳಿ ಈ ಬಗ್ಗೆ ಚರ್ಚೆ ನಡೆಸುವುದಕ್ಕೆ ಮುಜುಗರ ಮಾಡಿಕೊಳ್ಳಬೇಡಿ ಅಥವಾ ಯಾವುದಾದರೂ ಆಹಾರ ತಜ್ಞರ ಸಲಹೆಯನ್ನು ಕೂಡ ನೀವು ಪಡೆಯುವುದು ಬಹಳ ಒಳ್ಳೆಯದು.

2. ನಿಮ್ಮ ತಾಲೀಮು ಆಳವಾಗಿ ಮತ್ತು ಶ್ರೀಮಂತವಾಗಿರಬೇಕು

ನೀವು ಜಿಮ್ ನಲ್ಲಿರುವಾಗ ನಿಮ್ಮ ದೇಹವನ್ನು ಸಂಪೂರ್ಣವಾಗಿ ಟ್ರೈನ್ ಮಾಡುವ ಅಗತ್ಯವಿದೆ ಎಂಬುದು ನೆನಪಿರಲಿ. ನೀವು ವಾರಕ್ಕೆ ಮೂರು ದಿನ ಮಾತ್ರವೇ ವ್ಯಾಯಾಮ ಮಾಡುವುದಾದರೂ ಕೂಡ ನಿಮ್ಮ ಚಯಾಪಚಯ ಕ್ರಿಯೆಯು ಗರಿಷ್ಟವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು, ನಿಮ್ ದೇಹದ ಒಂದು ಇಂಚಿನ ಬಗ್ಗೆಯೂ ಕೂಡ ನೀವು ನಿರ್ಲಕ್ಷಿಸುವಂತಿಲ್ಲ, ಕಾಲುಗಳನ್ನು ಕೂಡ ನೀವು ಯಾವುದೇ ಕಾರಣಕ್ಕೂ ಕೇರ್ ತೆಗೆದುಕೊಳ್ಳದೇ ಇರುವಂತಿಲ್ಲ.ಹೆಚ್ಚಿನ ಪುರುಷರು ತಮ್ಮ ಹೊಟ್ಟೆಗೆ ಮಾತ್ರ ಮಹತ್ವ ನೀಡಿ ದೇಹದ ಇತರೆ ಭಾಗಗಳನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ ಹೀಗೆ ಮಾಡಿದರೆ ಸಿಕ್ಸ್ ಪ್ಯಾಕ್ ಸಿದ್ದಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂಬುದು ನೆನಪಿರಲಿ.

ಸಿರಾಕ್ಯೂಸ್ ಯುನಿವರ್ಸಿಟಿಯ ಅಧ್ಯಯನಕಾರರು ತಿಳಿಸುವಂತೆ, ಹೆಚ್ಚಿನವರು ದೇಹದ ಮೇಲ್ಬಾಗದ ವ್ಯಾಯಾಮಗಳನ್ನು ಮಾಡಿ ಕ್ಯಾಲೋರಿ ಕರಗಿಸುತ್ತಾರಂತೆ, ಆದರೆ ದೇಹದ ಕೆಳಗಿನ ಭಾಗಕ್ಕೆ ಯಾವುದೇ ವ್ಯಾಯಾಮಗಳನ್ನು ನೀಡುವುದಿಲ್ಲವಂತೆ. ಸ್ಕ್ವಾಡ್ಸ್, ಡೆಡ್ ಲಿಫ್ಟ್ ಇತ್ಯಾದಿ ಮಲ್ಟಿಜಾಯಿಂಟ್ ಮೂವ್ ಮೆಂಟ್ ಗಳನ್ನು ನಿಮ್ಮ ವರ್ಕ್ ಔಟ್ ನಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

3. ಹೃದಯ ರಕ್ತನಾಳಗಳ ವ್ಯಾಯಾಮ :

ಕೇವಲ ನಿಮ್ಮ ಡಯಟ್ ಮೂಲಕ ಕ್ಯಾಲೋರಿ ಕಡಿಮೆ ಮಾಡಿಕೊಳ್ಳುವುದು ಪ್ರಾಥಮಿಕ ಹಂತದಲ್ಲಿ ನಿಮಗೆ ತೂಕವನ್ನು ಇಳಿಸಿಕೊಳ್ಳಲು ನೆರವು ನೀಡಬಹುದು, ಆದರೆ ಹೃದಯ ರಕ್ತನಾಳಗಳ ವ್ಯಾಯಾಮ ಮಾತ್ರ ನಿಮಗೆ ಅದನ್ನು ಹೆಚ್ಚು ದಿನ ಕಾಯ್ದುಕೊಳ್ಳಲು ಸಹಾಯಕವಾಗಿರುತ್ತದೆ.
ಒಂದು ವೇಳೆ ನೀವು ಜಿಮ್ ಗೆತೆರಳದೇ ಇರುವವರಾದರೆ, ದೂರ ನಡಿಗೆ ಮಾಡಿ, ಈಜುವ ಅಭ್ಯಾಸ ಬೆಳೆಸಿಕೊಳ್ಳಿ, ಸ್ವಲ್ಪ ದಿನ ನಿಮ್ಮ ಕಾರನ್ನು ಪಾರ್ಕ್ ಮಾಡಿ, ಆದಷ್ಟು ಹೆಜ್ಜೆ ಇಟ್ಟು ನಡೆಯಿರಿ.

4. ಪ್ಲ್ಯಾಂಕ್ ವರ್ಕ್ ಔಟ್ ಮಾಡುವುದರಲ್ಲಿ ನೀವು ಮಾಸ್ಟರ್ ಆಗಬೇಕು:

ಪ್ಲ್ಯಾಕ್, ಇತರೆ ಹಲವು ರೀತಿಯ ವ್ಯಾಯಾಮಗಳನ್ನು ಮಾಡಿದರೂ ಕೂಡ ಬಹಳ ಮಹತ್ವದ ವರ್ಕ್ ಔಟ್ ನೀವು ಮಾಡಲೇಬೇಕಾಗಿರುವುದೆಂದರೆ ಪ್ಲ್ಯಾಂಕ್.. ಈ ಪ್ರಾರಂಭಿಕ ಹಂತದ ಚಲನೆ ನಿಮಗೆ ಬಹಳ ಸರಳ ಅನ್ನಿಸಬಹುದು. ಆದರೆ ಪ್ಲ್ಯಾಂಕ್ ವ್ಯಾಯಾಮವು ನಿಮ್ಮ ಸಿಕ್ಸ್ ಪ್ಯಾಕ್ ಸಾಧಿಸುವುದರ ಕೀ ಅಂಶವಾಗಿರುತ್ತದೆ. ಈ ಸ್ಕಿಲ್ ನ್ನು ನೀವು ಪ್ರತಿ ವ್ಯಾಯಾಮದಲ್ಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

5. ಹೊಸ ಆಟಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳಿ

ಸಿಕ್ಸ್ ಪ್ಯಾಕ್ ನ್ನು ಯಾಕೆ ನೀವು ಆನಂದದಿಂದ ಪಡೆಯಬಾರದು. ಸಿಕ್ಸ್ ಪ್ಯಾಕ್ ಪಡೆಯಲು ಇರುವ ಒಂದು ಅತ್ಯದ್ಭುತವಾದ ಒಂದು ಮಾರ್ಗವೆಂದರೆ ನೀವು ಆಟಗಳಲ್ಲಿ ಭಾಗವಹಿಸುವುದು ಮತ್ತು ನೈಸರ್ಗಿಕವಾಗಿ ನಿಮ್ಮ ಹೊಟ್ಟೆಯ ಫ್ಯಾಟ್ ಅಂಶವನ್ನು ಕರಗಿಸಿಕೊಂಡು, ಕ್ಯಾಲೋರಿ ಬರ್ನ್ ಮಾಡಿ ಸಿಕ್ಸ್ ಪ್ಯಾಕ್ ಸಾಧಿಸುವುದು. ಆಟಗಳಲ್ಲಿ ತೊಡಗುವುದರಿಂದಾಗಿ ನಿಮ್ಮ ಮೇಲಿನ ಮತ್ತು ಕೆಳಗಿನ ದೇಹದ ಭಾಗವು ದೃಢವಾಗಿ, ಪುನರಾವರ್ತಿತವಾಗಿ ಚಲನೆಗಳಲ್ಲಿ ತೊಡಗಿಕೊಳ್ಳುತ್ತೆ ಮತ್ತು ಸಿಕ್ಸ್ ಪ್ಯಾಕ್ ಸಾಧಿಸಲು ಸುಲಭವಾದ ಮಾರ್ಗವಾಗಿರುತ್ತದೆ. ಆದರೆ ಸಿಕ್ಸ್ ಪ್ಯಾಕ್ ಸಾಧಿಸಲು ಇಚ್ಛಿಸುವ ಪ್ರತಿಯೊಬ್ಬರೂ ನೆನಪಿನಲ್ಲಿ ಇಡಬೇಕಾದ ಪ್ರಮುಖ ಅಂಶವೇನೆಂದರೆ ಆತುರಾತುರವಾಗಿ ನಿಮ್ಮ ದೇಹದ ಫ್ಯಾಟ್ ಅಂಶವನ್ನು ಕರಗಿಸಲು ಪ್ರಯತ್ನಿಸಬೇಡಿ. ವೇಗವಾಗಿ ಫ್ಯಾಟ್ ಕರಗುವುದಕ್ಕಿಂತ ಆರೋಗ್ಯಕಾರಿಯಾಗಿ ಕರಗಿದಾಗ ಮಾತ್ರವೇ ಸಿಕ್ಸ್ ಪ್ಯಾಕ್ ಬರಲು ಸಾಧ್ಯವಾಗುತ್ತದೆ ಎಂಬ ವಿಚಾರ ನಿಮ್ಮ ಗಮನದಲ್ಲಿ ಇರಲಿ.

English summary

here-s-the-science-behind-building-a-better-six-pack

Everyone, of those those who lift, wants "six-pack abs". Although having those strong, ripped abdominal muscles is not a cakewalk, you can, however, find your inner six pack, or at least a strong and toned belly just by combining healthy eating and a solid fitness regime. Building a sturdy six-pack abs takes much more than a set list of kick-ass abs exercises. Whoever has said that abs are primarily made in the kitchen, has actually said the rightest thing.
Story first published: Monday, July 16, 2018, 17:42 [IST]
X
Desktop Bottom Promotion