For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೋಗ್ಯಕ್ಕೆ ಈ 7 ಯೋಗಗಳು ಸಹಕಾರಿ ಎಂದರೆ ನೀವು ನಂಬುತ್ತೀರಾ?

By Sushma Charhra
|

ಯೋಗ ಅನ್ನುವುದು ದೈಹಿಕ, ಮಾನಸಿಕ, ಮತ್ತು ಆದ್ಯಾತ್ಮಿಕ ಅಭ್ಯಾಸ ಅಥವಾ ಶಿಸ್ತಾಗಿದ್ದು ಭಾರತದಲ್ಲಿ ಸುಮಾರು 5000 ವರ್ಷಗಳ ಹಿಂದಿನಿಂದಲ ರೂಢಿಯಲ್ಲಿದೆ. ಈಗಿನ ಮಾರ್ಡನ್ ಜೀವನಶೈಲಿಯಲ್ಲೂ ಕೂಡ ಹಲವಾರು ಮಂದಿ ಯೋಗಾಭ್ಯಾಸ ಮಾಡುತ್ತಿದ್ದಾರೆ ಮತ್ತು ಆ ಮೂಲಕ ಒತ್ತಡ ಮುಕ್ತ, ದೈಹಿಕ ಮತ್ತು ಮಾನಸಿಕ ಶಕ್ತಿಯ ಹೆಚ್ಚಳ, ದೇಹ ತೂಕ ಇಳಿಸಿಕೊಳ್ಳುವಿಕೆ,ಫ್ಲೆಕ್ಸಿಬಲ್ ಆಗಿ ಜೀವನ ನಡೆಸಲು ಪ್ರಯತ್ನ ನಡೆಸುತ್ತಾರೆ.

ವ್ಯಾಯಾಮ ಮಾಡುವ ಪ್ರಮುಖ ಉದ್ದೇಶ ಕ್ಯಾಲೋರಿ ಕಳೆದು ಕೊಳ್ಳುವುದು, ಉಸಿರಾಟ ಪ್ರಕ್ರಿಯೆ ಹತೋಟಿಯ ಮೂಲಕ ದೇಹವನ್ನು ಬೆವರಿಸುವುದು. ಈ ನಿಟ್ಟಿನಲ್ಲಿ ಯೋಗ ವಿಭಿನ್ನವಾಗಿ ಕೆಲಸ ಮಾಡುತ್ತೆ. ಯೋಗ ಮಾಡಿದ ನಂತರ ಕೊನೆಯಲ್ಲಿ ನೀವು ಉತ್ತಮ ರೀತಿಯಲ್ಲಿ ಉಸಿರಾಡಲು ಮತ್ತು ರಿಲ್ಯಾಕ್ಸ್ ಎಂಬಂತೆ ಭಾಸವಾಗಲು ಇದು ನೆರವಾಗುತ್ತೆ

hair

ಯೋಗದ ಮುಖಾಂತರ ಒತ್ತಡ,ಹಿಂಜರಿಕೆ, ಅಸ್ತಮಾ, ಆರ್ಥೈಟೀಸ್, ಕ್ಯಾನ್ಸರ್ ರಿಲೇಟೆಡ್ ಚಿಹ್ನೆಗಳು, ಬೈಪೋಲಾರ್ ಡಿಸಾರ್ಡರ್, ಕುತ್ತಿಗೆ ನೋವು, ಕಾರ್ಡಿಯೋವಸ್ಕುಲರ್ ಕಾಯಿಲೆಗಳು, ಬೆನ್ನುನೋವು, ಅತಿಯಾದ ಟೆಕ್ಷನ್ಸ್, ಮೈಗ್ರೇನ್, ಮುಟ್ಟಿನ ಸಮಸ್ಯೆಗಳು, ಮುಟ್ಟು ನಿಲ್ಲುವ ಸಮಯದ ಸಮಸ್ಯೆಗಳು, ಪ್ರಗ್ನೆನ್ಸಿಯಲ್ಲಿನ ತೊಂದರೆಗಳು, ನಿದ್ದೆಯ ಸಮಸ್ಯೆಗಳು, ಇತ್ಯಾದಿ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸಾಧ್ಯವಿದೆ.

ನಿಮ್ಮ ಕೂದಲನ್ನು ಆರೋಗ್ಯವಾಗಿಡಲು ಕೆಲವು ಯೋಗದ ಭಂಗಿಗಳಿವೆ ಎಂದು ಹೇಳಿದರೆ ನಿಮಗೆ ನಂಬಿಕೆ ಬರುತ್ತಾ? ಈ ಎಲ್ಲಾ ಯೋಗದ ಭಂಗಿಗಳನ್ನು ನೀವು ಬೆಳ್ಳಿ ಎದ್ದು ಕೂಡಲೇ ಖಾಲಿ ಹೊಟ್ಟೆಯಲ್ಲಿ ಮಾಡುವುದರಿಂದ ಹೆಚ್ಚು ಲಾಭಗಳನ್ನು ಪಡೆಯಬಹುದಾಗಿದೆ.
ಇಲ್ಲಿದೆ ನೋಡಿ ಕೂದಲಿನ ಆರೋಗ್ಯ ಹೆಚ್ಚಿಸುವ ಯೋಗ ಭಂಗಿಗಳ ಪಟ್ಟಿ

1.ಅಧೋ ಮುಖ ಶ್ವಾನಾಸನ (Downward-Facing Dog)

ಮಾಡುವ ವಿಧಾನ ಹೇಗೆ? : ನೆಲಕ್ಕೆ ಸಮನಾಂತರವಾಗಿ ನಿಮ್ಮ ಕೈ ಮತ್ತು ಕಾಲುಗಳನ್ನು ಇಡಿ. ನಿಮ್ಮ ಪೃಷ್ಟದ ಭಾಗವನ್ನು ಎತ್ತಿ ಮತ್ತು ತೋಳು ಮತ್ತು ಕಾಲುಗಳನ್ನು ನೇರವಾಗಿಸಿ. ಅದರೆ V ಅಕ್ಷವನ್ನು ತಿರುಗಿಸಿದಾಗ ಹೇಗೆ ಆಗುತ್ತೋ ಹಾಗೆ ನಿಮ್ಮ ದೇಹಾಕೃತಿಯಾಗಬೇಕು. ಕಾಲುಗಳು ಪೃಷ್ಟದ ನೇರಕ್ಕೆ ಮತ್ತು ಕೈಗಳು ತೋಳಿನ ನೇರಕ್ಕೆ ಇರುವಂತೆ ನೋಡಿಕೊಳ್ಳಿ., ನಿಮ್ಮ ತೋಳುಗಳನ್ನು ನೆಲಕ್ಕೆ ಪ್ರೆಸ್ ಮಾಡಿ. ನಿಮ್ಮ ಹಿಂಭಾಗವನ್ನು ಎಷ್ಟು ಸಾಧ್ಯವೋ ಅಷ್ಟು ಆರಾಮಗೊಳಿಸಿ. ಇದೇ ಸ್ಥಿತಿಯಲ್ಲಿ ಒಂದರಿಂದ ಮೂರು ನಿಮಿಷ ಇರಿ. ಇದು ನಾಯಿಗಳು ಬ್ಲೆಂಡ್ ಆಗುವ ರೀತಿಯಲ್ಲಿ ಕಾಣುತ್ತೆ ಹಾಗಾಗಿ ಇದನ್ನು ಅಧೋ ಮುಖ ಶ್ವಾನಾಸನ ಎಂದು ಕರೆಯಲಾಗುತ್ತೆ.

ಲಾಭಗಳು :: ಇದು ಕೂದಲಿನ ಆರೋಗ್ಯಕ್ಕೆ ಬಹಳ ಉಪಕಾರಿ ಯಾಕೆಂದರೆ ಈ ಭಂಗಿ ಮಾಡುವುದರಿಂದಾಗಿ ಮೆದುಳಿಗೆ ರಕ್ತಸಂಚಾರ ಸರಾಗವಾಗಿ ಆಗುತ್ತೆ. ಇದು ಜೀರ್ಣಕ್ರಿಯೆಗೆ ಬಹಳ ಸಹಕಾರಿ ಮತ್ತು ನಿಮ್ಮ ತೋಳುಗಳು ಮತ್ತು ಕಾಲಿನ ಆರೋಗ್ಯ ಕಾಪಾಡಲು ಇದು ನೆರವಾಗುತ್ತೆ.

2.ಉಸ್ಟ್ರಾಸನ(Camel Pose)

ಮಾಡುವ ವಿಧಾನ ಹೇಗೆ? : ಮೊದಲು ನಿಮ್ಮ ಮಂಡಿಯ ಮೇಲೆ ಕುಳಿತುಕೊಳ್ಳಿ. ಕಾಲುಗಳು ನೇರವಾಗಿರಲಿ. ನಂತರ ಹಿಮ್ಮ್ಮುಖವಾಗಿ ಬಾಗಿ ನಿಮ್ಮ ಕೈಗಳ ಸಹಾಯದಿಂದ ನಿಮ್ಮ ಪಾದಗಳ ಹಿಮ್ಮಡಿಯನ್ನು ಮುಟ್ಟಬೇಕು . ನಿಮ್ಮ ಕುತ್ತಿಗೆಗೆ ಹೆಚ್ಚು ಒತ್ತಡ ಕೊಡಬೇಡಿ... ನಾರ್ಮಲ್ ಆಗಿ ಈ ಭಂಗಿಗೆ ಬನ್ನಿ. ಮೇಲಿರುವ ಚಿತ್ರವನ್ನು ಫಾಲೋ ಮಾಡಿ.. ಒಂದು ನಿಮಿಷ ಹಾಗೆಯೇ ಇರಿ ಮತ್ತು ಪುನಃ ನಿಮ್ಮ ಮೊದಲಿನ ಸ್ಥಿತಿಗೆ ಬನ್ನಿ.

ಲಾಭಗಳು :: ಇದು ಕೂಡ ಮೆದುಳಿಗೆ ರಕ್ತ ಸಂಚಾರವು ಬಹಳ ದೊಡ್ಡ ಮಟ್ಟದಲ್ಲಿ ಹೆಚ್ಚಿಸುತ್ತೆ. ಜೀರ್ಣಕ್ರಿಯೆ ಮತ್ತು ವಿಸರ್ಜನೆಯ ಕೆಲಸವು ಸರಾಗವಾಗುತ್ತೆ. ಮುಟ್ಟಿನ ನೋವು ಮತ್ತು ಎದೆಯಲ್ಲಿನ ಒತ್ತಡದ ನಿವಾರಣೆಗೆ ಇದು ಬಹಳ ಉಪಕಾರಿ.

3. ಪವನಮುಕ್ತಾಸನ (Wind Relieving Pose)

ಮಾಡುವ ವಿಧಾನ ಹೇಗೆ? : ಮೊದಲು ನಿಮ್ಮ ಮ್ಯಾಟಿನ ಮೇಲೆ ನೇರವಾಗಿ ಮಲಗಿ ನಂತರ ಕಾಲುಗಳನ್ನು ಮತ್ತು ಕೈಗಳನ್ನು ಒಂದೇ ಬದಿಗೆ ಒಟ್ಟುಗೂಡಿಸಿ, ನಿಚ್ವಾಸ ಮಾಡುತ್ತಾ ಕೈಗಳ ಸಹಾಯದಿಂದ ಕಾಲುಗಳನ್ನು ಅಪ್ಪಿಕೊಳ್ಳಿ.. ಭಂಗಿಯ ಬಗ್ಗೆ ಸಂಪೂರ್ಣ ಚಿತ್ರಕ್ಕಾಗಿ ಮೇಲಿನ ಚಿತ್ರ ಗಮನಿಸಿ.. ಭಂಗಿಗೆ ಬಂದ ನಂತರ ಸಹಜವಾಗಿ ಉಸಿರಾಟ ನಡೆಸಿ. ಎದೆಯ ಭಾಗದಿಂದ ನೀಡುವ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿ ಮತ್ತು ಗಟ್ಟಿಯಾಗಿ ಕಾಲುಗಳನ್ನು ಅಪ್ಪಿಕೊಳ್ಳಿ .ಒಂದು ನಿಮಿಷ ಹೀಗೆಯೇ ಇಟ್ಟುಕೊಳ್ಳಿ ಮತ್ತು ಪುನಃ ನಿಮ್ಮ ಸಹಜ ಸ್ಥಿತಿಗೆ ತಲುಪಿ.

ಲಾಭಗಳು :: ಇದು ನಿಮ್ಮ ದೇಹದಲ್ಲಿ ರಕ್ತಸಂಚಾರವನ್ನು ಅಧಿಕಗೊಳಿಸುತ್ತೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತೆ ಮತ್ತು ಸೊಂಟದ ಫ್ಯಾಟ್ ಅಂಶವನ್ನು ಕರಗಿಸುತ್ತೆ ಮತ್ತು ಕಿಬ್ಬೊಟ್ಟೆಯನ್ನು ಮತ್ತಷ್ಟು ಬಲಿಷ್ಟಗೊಳಿಸುತ್ತೆ,.

4. ಸಲಂಭ ಸರ್ವಾಂಗಾಸನ (All Limb Pose)

ಮಾಡುವ ವಿಧಾನ ಹೇಗೆ? : ಮೊದಲು ಮ್ಯಾಟಿನ ಮೇಲೆ ನೇರವಾಗಿ ಮಲಗಿ ಮತ್ತು ಕೈಗಳು ಮತ್ತು ಕಾಲುಗಳನ್ನು ನೇರವಾಗಿಸಿ.. ನಂತರ ನಿಮ್ಮ ಕೈಗಳ ಸಹಾಯದಿಂದ ಪುಷ್ಟವನ್ನು ಎತ್ತುತ್ತಾ ಸಾಗಿ. ಅಂದರೆ ನಿಮ್ಮ ಕಾಲುಗಳು ಮೇಲಕ್ಕೆ ಹೋಗಬೇಕು. ಬೆನ್ನು ಕೂಡ ಮೇಲಕ್ಕೆ ಎತ್ತಿ ನೇರವಾಗಿಸಬೇಕು. ನಿಮ್ಮ ಮೊಣಕೈ ಮೇಲೆ ನಿಮ್ಮ ದೇಹದ ಭಾರವಿರಬೇಕು. ಆದರೆ ಕುತ್ತಿಗೆ ಮತ್ತು ತಲೆಯ ಮೇಲೆ ಯಾವುದೇ ಭಾರವಿರಬಾರದು. ಬೆನ್ನುಮೂಳೆಯನ್ನು ನೇರವಾಗಿಸಿ, ಪಾದಗಳು ನೇರವಾಗಿರುವಂತೆ ಮಾಡಿ..ಒಂದು ನಿಮಿಷ ಇದೇ ಭಂಗಿಯಲ್ಲಿರಿ. ಪುನಃ ನಿಮ್ಮ ಮೊದಲಿನ ಸ್ಥಿತಿಗೆ ಬನ್ನಿ

ಲಾಭಗಳು :: ರಕ್ತ ಸಂಚಾರ ಮತ್ತಷ್ಟು ಹೆಚ್ಚಾಗುತ್ತೆ.ಸಣ್ಣ ಮಟ್ಟದ ಖಿನ್ನತೆ, ಉದ್ವೇಗ,ನೋವುಗಳು ಈ ಆಸನ ಮಾಡುವುದರಿಂದ ಗುಣಮುಖವಾಗುತ್ತೆ.. ತೋಳುಗಳು ಮತ್ತು ಕುತ್ತಿಗೆಯ ಬಲವನ್ನು ಹೆಚ್ಚಿಸಲು ಈ ಆಸನವು ಸಹಕರಿಸಿ ನಿಮ್ಮನ್ನು ಮತ್ತಷ್ಟು ಆಕ್ಟೀವ್ ಆಗಿರುವಂತೆ ನೋಡಿಕೊಳ್ಳುತ್ತೆ.

5. Thunderbolt Pose Or Vajrasana- ವಜ್ರಾಸನ (Thunderbolt Pose)

ಮಾಡುವ ವಿಧಾನ ಹೇಗೆ? : ಮೊಣಕಾಲೂರಿ ಮ್ಯಾಟಿನ ಮೇಲೆ ಕುಳಿತುಕೊಳ್ಳುವ ಆಸನ ಇದು. ನಿಮ್ಮ ಪಾದಗಳು ಒಂದಕ್ಕೊಂದು ಕ್ರಾಸ್ ಆಗಿರಬೇಕು. ನಿಮ್ಮ ಪೃಷ್ಟವು ಪಾದಗಳ ಮೇಲೆ ಆರಾಮಿಸುವಂತೆ ನೋಡಿಕೊಳ್ಳಿ.ನೇರವಾದ ನೋಟವಿರಲಿ, ನಿಮ್ಮ ಕೈಗಳನ್ನು ತೊಡೆಯ ಮೇಲಿಡಿ. ನಿಮ್ಮ ಮಾಂಸಖಂಡಗಳನ್ನು ಬ್ಯುಸಿಯಾಗಿಸಿ. ಕಣ್ಣುಗಳನ್ನು ಮುಚ್ಚಿ. ನಿಮ್ಮ ಉಸಿರಾಟದ ಮೇಲೆ ಗಮನ ಹರಿಸಿ. 5 ರಿಂದ 10 ನಿಮಿಷ ಹಾಗೆಯೇ ಇರಿ.

ಲಾಭಗಳು :: ಮಲಬದ್ಧತೆ ಸಮಸ್ಯೆಯನ್ನು ಈ ಆಸನವು ನಿವಾರಿಸುತ್ತೆ.ಇದು ನಿಮ್ಮ ಜೀರ್ಣಕ್ರಿಯೆ, ಬಲಾಢ್ಯತೆ, ಮಾಂಸಖಂಡಗಳ ಆರೋಗ್ಯ, ರಕ್ತ ಸಂಚಾರ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಇದು ಒಬೆಸಿಟಿಯನ್ನು ನಿವಾರಿಸಿ, ಬೆನ್ನಿನ ಭಾಗದಲ್ಲಿ ಯಾವುದೇ ಒತ್ತಡವಿದ್ದರೆ ಅದನ್ನು ನಿವಾರಿಸುತ್ತೆ.

6. ಉತ್ತಾನಾಸನ (Standing Forward Bend Pose)

ಮಾಡುವ ವಿಧಾನ ಹೇಗೆ? : ಮ್ಯಾಟಿನ ಮೇಲೆ ನೇರವಾಗಿ ನಿಂತುಕೊಳ್ಳಿ , ಉಛ್ವಾಸ ಮಾಡಿ. ನೀವು ನಿಛ್ವಾಸ ಮಾಡುತ್ತಿದ್ದಂತೆ, ನಿಮ್ಮ ಮಂಡಿಯ ಬದಿಗೆ ನಿಧಾನವಾಗಿ ಬಾಗಿ..ಆದರೆ ಕಾಲುಗಳು ನೇರವಾಗಿಯೇ ಇರಬೇಕು, ಮತ್ತು ಸೊಂಟದ ಭಾಗದಿಂದ ನೇರವಾಗಿ ಬಗ್ಗಿ.ಕಾಲಿನ ಬದಿಯಲ್ಲಿ ನಿಮ್ಮ ಕೈಗಳನ್ನು ಆರಾಮಿ, ನೀವು ನಿಮ್ಮ ಸೊಂಟದ ಭಾಗದಲ್ಲಿ ಸ್ಟ್ರೆಚ್ ಆದಂತೆ ಅನ್ನಿಸಿದರೆ ನೀವು ಸರಿಯಾಗಿ ಮಾಡುತ್ತಿದ್ದೀರಿ ಈ ಭಂಗಿಯನ್ನು ಎಂದರ್ಥ.ಒಂದು ನಿಮಿಷ ಹಾಗೆಯೇ ಇರಿ. ನಂತರ ಮತ್ತೆ ನಿಂತುಕೊಳ್ಳುವ ಸ್ಥಿತಿಗೆ ನಿಧಾನವಾಗಿ ತಲುಪಿ. ಯಾಕೆಂದರೆ ಯಾವುದೇ ಸಡನ್ ಪ್ರತಿಕ್ರಿಯೆಗಳು ನಿಮ್ಮ ತಲೆಗೆ ಬಲವಾಗಬಹುದು.

ಲಾಭಗಳು : ಮೆದುಳಿಗೆ ರಕ್ತ ಸಂಚಾರವು ಬಹಳ ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತೆ. ಮತ್ತು ಉತ್ತಮ ನಿದ್ದೆ ಬರಲು ಸಹಾಯ ಮಾಡುತ್ತೆ. ಈ ಮೂಲಕ ನಿಮ್ಮ ಕೂದಲಿನ ಆರೋಗ್ಯ ಹೆಚ್ಚುತ್ತೆ.ಎಬ್ಡಾಮಿನಲ್ ಮಾಂಸಗಳು ಸೆಳೆಯಲ್ಪಡುವುದರಿಂದಾಗಿ ಉತ್ತಮ ರೀತಿಯಲ್ಲಿ ಜೀರ್ಣಕ್ರಿಯೆಯೂ ಇದರಿಂದ ಸಾಧ್ಯವಾಗುತ್ತೆ.

7. ಸಸಂಗಾಸನ (Rabbit Pose)

ಮಾಡುವ ವಿಧಾನ ಹೇಗೆ? : ಚಿತ್ರವನ್ನು ಗಮನಿಸಿ.. ಮ್ಯಾಟ್ ನಲ್ಲಿ ಮೊದಲು ಕುಳಿತುಕೊಳ್ಳಿ. ಮತ್ತು ಮುಂಭಾಗಕ್ಕೆ ಸೊಂಟವನ್ನು ಎತ್ತಿ ಬಾಗಿ., ಕಾಲುಗಳು ಒಟ್ಟಿಗೆ ಇರಲಿ ಮತ್ತು ತಲೆ ಮ್ಯಾಟಿಗೆ ತಾಗಲಿ. ಕೈಗಳನ್ನು ಹಿಂದಕ್ಕೆ ತೆಗೆದುಕೊಂಡು ಪಾದಗಳನ್ನು ಮುಟ್ಟಿ... ಒಂದು ನಿಮಿಷ ಈ ಭಂಗಿಯಲ್ಲಿ ಇರಿ.

ಲಾಭಗಳು :: ಮೆದುಳಿಗೆ ರಕ್ತ ಸಂಚಾರವು ಬಹಳ ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತೆ. ಬೆನ್ನುಮೂಳೆಯ ಆರೋಗ್ಯ ಅಧಿಕವಾಗುತ್ತೆ. ಬೆನ್ನು ಮತ್ತು ಕುತ್ತಿಗೆಯ ದೌರ್ಬಲ್ಯವು ನಿವಾರಣೆಯಾಗಿ ನೆಮ್ಮದಿ ಪಡೆಯುತ್ತವೆ.

English summary

These 7 Yoga Poses Can Protect Your Hair And Make Them Stronger

Yoga is used for treating anxiety, depression, asthma, arthritis, cancer-related symptoms, bipolar disorders, neck pains, cardiovascular diseases, back pain, hypertension, migraines, cramps during periods, menopause, complications during pregnancy, stress, sleep disorders, etc. Can you believe that there are actually Yoga poses that can help keep your hair strong and healthy? All these need to be done in the morning on an empty stomach for maximum benefits.
X
Desktop Bottom Promotion