Just In
Don't Miss
- News
ಮಹಿಳೆಯರ ಸುರಕ್ಷತೆಗೆ ಆಂಧ್ರ ಸರ್ಕಾರದ ದಿಟ್ಟ ಕ್ರಮ
- Movies
ಬಿಗ್ ಬಾಸ್ ಶೋನಿಂದ ಹೊರಬಂದ ಸಲ್ಮಾನ್ ಖಾನ್, ಹೊಸ ನಿರೂಪಕಿ ಎಂಟ್ರಿ
- Sports
ಪಬ್ಜಿ ಅಪ್ಡೇಟ್: ಪ್ರಮುಖ ಬದಲಾವಣೆಯೊಂದಿಗೆ ''ಬ್ಯಾಟಲ್ ಗ್ರೌಂಡ್''
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Technology
ಗೂಗಲ್ ಮ್ಯಾಪ್ಸ್ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್ ಹೇಗೆ..?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಯೋನಿಯಲ್ಲಿ ತುರಿಕೆ-ಇಲ್ಲಿದೆ ನೋಡಿ ಸರಳ ಮನೆಮದ್ದುಗಳು
ಯೋನಿ ಭಾಗದಲ್ಲಿ ಉರಿಯೂತ ಅಥವಾ ತುರಿಕೆ ಕಾಣಿಸಿಕೊಳ್ಳುತ್ತಿದ್ದರೆ ಇದು ಸೋಂಕಿನ ಸಮಸ್ಯೆಯಾಗಿರ ಬಹುದು. ಮಹಿಳೆಯರಲ್ಲಿ ಇದು ಕೆಲವೊಮ್ಮೆ ಕಾಣಿಸಿಕೊಳ್ಳುವುದು ಇದೆ. ಹೆಚ್ಚಿನವರು ಇದರಿಂದ ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ ಇದನ್ನು ಹೆಚ್ಚಿನ ಮಹಿಳೆಯರು ವೈದ್ಯರ ಬಳಿ ಕೂಡ ಹೇಳಿಕೊಳ್ಳಲು ಹೋಗಲ್ಲ.
ಯೋನಿ ಉರಿ ಅಥವಾ ತುರಿಕೆಯನ್ನು ವೈದ್ಯಕೀಯ ಭಾಷೆಯಲ್ಲಿ ವಜಿನಿಟಿಸ್ ಅಥವಾ ವಲ್ವೋವಾಜಿನೈಟಿಸ್ ಎಂದು ಕರೆಯಲಾಗುತ್ತದೆ. ಸೋಂಕು ಅಥವಾ ಉರಿಯೂತವು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಸಾಮಾನ್ಯ ಯೋನಿ ವಿಸರ್ಜನೆ, ನೋವು ಮತ್ತು ಕೆಟ್ಟ ವಾಸನೆಯು ಇದರ ಲಕ್ಷಣಗಳಾಗಿರಬಹುದು. ಇದರ ನಿವಾರಣೆಗೆ ನೀವು ಕೆಲವೊಂದು ಮನೆಮದ್ದುಗಳನ್ನು ಬಳಸಬಹುದು.

ಮೊಸರು
ಮೊಸರಿನಲ್ಲಿ ಇರುವಂತಹ ಲ್ಯಾಕ್ಟೋಬಾಸಿಲ್ಲಸ್ ಅಸಿಡೋಫಿಲಸ್ ಎನ್ನುವ ಒಳ್ಳೆಯ ಬ್ಯಾಕ್ಟೀರಿಯಾವು ಕ್ಯಾಂಡಿಡವು ಅತಿಯಾಗಿ ಬೆಳೆಯುವುದನ್ನು ತಪ್ಪಿಸುತ್ತದೆ. ಯೀಸ್ಟ್ ಸೋಂಕಿನಿಂದ ಬಳಲುವಂತಹ ಮಹಿಳೆಯರು ಪ್ರತಿನಿತ್ಯ ಮೊಸರು ಸೇವನೆ ಮಾಡಿದಾಗ ಯೀಸ್ಟ್ ಸೋಂಕು ಪರಿಣಾಮಕಾರಿಯಾಗಿ ಕಡಿಮೆಯಾಗಿದೆ.

ಬೆಳ್ಳುಳ್ಳಿ
ಯೀಸ್ಟ್ ಮತ್ತು ಬ್ಯಾಕ್ಟೀರಿಯಾದ ಸೋಂಕಿಗೆ ಬೆಳ್ಳುಳ್ಳಿ ತುಂಬಾ ಪರಿಣಾಮಕಾರಿ. ಸಲ್ಫರ್ ಅಂಶವನ್ನು ಹೊಂದಿರುವ ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎನ್ನುವ ಅಂಶವಿದ್ದು, ಕ್ಯಾಂಡಿಡ ಬೆಳವಣೆಗೆಯನ್ನು ಇದು ತಡೆಯುವುದು. ಇನ್ನೊಂದು ಅಂಶವಾಗಿರುವ ಅಲೆನ್ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ.
ಬಳಸುವ ವಿಧಾನ
ಕೆಲವು ಎಸಲು ಬೆಳ್ಳುಳ್ಳಿ ಸಿಪ್ಪೆ ತೆಗೆಯಿರಿ. ತೆಳುವಾದ ಬಟ್ಟೆಯಲ್ಲಿ ಕಟ್ಟಿ, ಯೋನಿ ಭಾಕ್ಕೆ ಇಡಿ. ರಾತ್ರಿಯಿಡಿ ಹಾಗೆ ಬಿಟ್ಟರೆ ಸೋಂಕು ನಿವಾರಣೆ ಮಾಡುವುದು. ಬೆಳ್ಳುಳ್ಳಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡು ತಿಂದರೂ ತುಂಬಾ ಪರಿಣಾಮಕಾರಿಯಾಗಿರುವುದು. ಬೆಳ್ಳುಳ್ಳಿ ಹುಡಿಗಿಂತ ತಾಜಾ ಬೆಳ್ಳುಳ್ಳಿ ಹೆಚ್ಚು ಪರಿಣಾಮಕಾರಿ.
Most Read: ಆರೋಗ್ಯ ಟಿಪ್ಸ್: ಸರ್ವರೋಗಕ್ಕೂ ವೀಳ್ಯದೆಲೆಯೇ ಮನೆಮದ್ದು...

ಟ್ರೀ ಟ್ರಿ ಮರದ ಎಣ್ಣೆ
ಟ್ರೀ ಟ್ರಿ ಮರದ ಎಣ್ಣೆ ಹಾಕಿದ ನೀರಿನಿಂದ ಯೋನಿ ತೊಳೆಯಿರಿ. ಶೇಕಡಾ 0.4 ಸಾರಭೂತ ತೈಲ ಹಾಕಿಕೊಂಡಿರುವ ನೀರಿನೊಂದಿಗೆ ನೀವು ಇದನ್ನು ಬಳಸಬಹುದು. ಶೇ.40ರಷ್ಟಿರುವ ಚಾ ಮರದ ಎಣ್ಣೆಯ ಸೊಲ್ಯೂಷನ್ ನಲ್ಲಿ ಟ್ಯಾಂಪನ್ ಅದ್ದಿಕೊಳ್ಳಿ ಮತ್ತು ಇದನ್ನು ಬಳಸಿ. 24 ಗಂಟೆಗಿಂತ ಹೆಚ್ಚು ಕಾಲ ಟ್ಯಾಪನ್ ಇಡಬೇಡಿ.

ಬೊರಿಕ್ ಆಮ್ಲ ಬಳಸಿ
ಜೆಲೆಟಿನ್ ಕ್ಯಾಪ್ಸೂಲ್ ಗೆ 600 ಮಿ.ಗ್ರಾಂನಷ್ಟು ಬೋರಿಕ್ ಆಮ್ಲದ ಹುಡಿ ಹಾಕಿ. ಈ ಕ್ಯಾಪ್ಸೂಲ್ ನ್ನು ಪ್ರತೀ ರಾತ್ರಿ ಯೋನಿ ಒಳಗೆ ಹಾಕಿ ಮತ್ತು ಮರುದಿನ ಬೆಳಗ್ಗೆ ತೆಗೆಯಿರಿ. 2 ವಾರಗಳ ಕಾಲ ಹೀಗೆ ಮಾಡಿ. ಸೋಂಕು ಕಡಿಮೆ ಮಾಡಿಕೊಳ್ಳಲು ನೀವು ಬೋರಿಕ್ ಆಮ್ಲವನ್ನು ಇತರ ರೂಪದಲ್ಲಿ ಸೇವಿಸಬಹುದು. ವೈದ್ಯರ ಸಲಹೆ ಪಡೆದು ಎಷ್ಟು ಸಮಯ ಮಾಡಬಹುದು ಎಂದು ತಿಳಿಯಿರಿ.

ನೈಸರ್ಗಿಕ ತೈಲದ ಮೊಶ್ಚಿರೈಸರ್
ಯೋನಿನಾಳದ ಉರಿಯೂತದಿಂದ ಒಣ ಯೋನಿ, ತುರಿಕೆ ಕಾಣಿಸಿಕೊಳ್ಳುತ್ತಿದ್ದರೆ ಆಗ ನೀವು ನೈಸರ್ಗಿಕವಾಗಿರುವ ತೈಲಗಳಾಗಿರುವಂತಹ ತೆಂಗಿನೆಣ್ಣೆ ಮತ್ತು ಬಾದಾಮಿ ಎಣ್ಣೆ ಬಳಸಬಹುದು. ಇದು ಯೋನಿಗೆ ಮೊಶ್ಚಿರೈಸ್ ಮಾಡುವುದು. ಪೆಟ್ರೋಲಿಯಂ ಜೆಲ್ಲಿಯನ್ನು ದೇಹವು ಹೊರಹಾಕಲು ತುಂಬಾ ಕಷ್ಟಪಡಬೇಕಾಗುತ್ತದೆ. ಆದರೆ ಈ ಎಣ್ಣೆಯನ್ನು ಬೇಗನೆ ಹೊರಹಾಕುವುದು. ಸಿಂಥೆಟಿಕ್ ತೈಲ ಬಳಸಿಕೊಂಡರೆ ಅದು ದೇಹದಲ್ಲಿ ಹಲವಾರು ದಿನಗಳ ಕಾಲ ಹಾಗೆ ಉಳಿಯುವುದು. ಇದರಿಂದ ಯೋನಿಯ ಪಿಎಚ್ ಮಟ್ಟದ ಮೇಲೆ ಪರಿಣಾಮ ಉಂಟಾಗಬಹುದು. ಬೆರಳುಗಳನ್ನು ಬಳಸಿಕೊಂಡು ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಯೋನಿಗೆ ಹಚ್ಚಿಕೊಳ್ಳಿ.
Most Read: ಅಕ್ಟೋಬರ್ 2018ರ ತಿಂಗಳ ಭವಿಷ್ಯ-ನಿಮ್ಮದೂ ಪರಿಶೀಲಿಸಿಕೊಳ್ಳಿ

ಅಗಸೆ ಬೀಜ
ಅಗಸೆ ಬೀಜಗಳನ್ನು ಹುಡಿ ಮಾಡಿಕೊಂಡು ಹೆಚ್ಚಿನ ಪ್ರಮಾಣದ ನೀರಿನೊಂದಿಗೆ ಸೇವಿಸಿ. ಹುಡಿ ಮಾಡಿಕೊಂಡು 24 ಗಂಟೆಯೊಳಗಡೆ ಅಗಸೆ ಬೀಜದ ಹುಡಿ ಸೇವಿಸಬೇಕು. ಆಗ ಮಾತ್ರ ಅದು ತುಂಬಾ ಪರಿಣಾಮಕಾರಿಯಾಗಿರುವುದು. ಪ್ರತಿನಿತ್ಯ ನೀವು 9 ಗ್ರಾಂ ಅಗಸೆ ಬೀಜದ ಹುಡಿ ಸೇವಿಸಬಹುದು. ಇದನ್ನು ನೀವು ಆಹಾರ ಕ್ರಮದಲ್ಲೂ ಸೇರಿಸಿಕೊಳ್ಳಿ.

ಅಶ್ವಗಂಧ
ತುಪ್ಪ ಮತ್ತು ಜೇನುತುಪ್ಪದೊಂದಿಗೆ ಅಶ್ವಗಂಧ ಬಳಸಬೇಕು ಎಂದು ಆಯುರ್ವೇದವು ಹೇಳಿದೆ. ಅರ್ಧ ಚಮಚ ಅಶ್ವಗಂಧದ ಹುಡಿಯನ್ನು ಒಂದು ಕಪ್ ಹಾಲಿಗೆ ಹಾಕಿಕೊಂಡು ಮಲಗುವ ಮೊದಲು ಸೇವಿಸಿ. ಅಶ್ವಗಂಧ ಸೇವನೆ ಮಾಡುವ ಮೊದಲು ಈ ಗಿಡಮೂಲಿಕೆಯು ನಿಮಗೆ ಹೊಂದಿಕೊಳ್ಳುತ್ತದೆಯಾ ಎಂದು ವೈದ್ಯರಿಂದ ತಿಳಿಯಿರಿ.
Most Read: ಮಹಿಳೆಯರಿಗಾಗಿ ತಾತ್ಕಾಲಿಕ ಗರ್ಭನಿರೋಧಕ ಕ್ರಮಗಳು

ಉಪ್ಪು ನೀರಿನ ಸ್ನಾನ
ಯೋನಿಯಲ್ಲಿ ತುರಿಕೆ ಕಾಣಿಸಿಕೊಂಡ ವೇಳೆ ಉಪ್ಪು ನೀರಿನಿಂದ ತೊಳೆದುಕೊಂಡರೆ ತುಂಬಾ ಒಳ್ಳೆಯದು. ಸೋಂಕು ಉಂಟು ಮಾಡುವಂತಹ ಸೂಕ್ಷ್ಮಾಣುಜೀವಿಗಳನ್ನು ಉಪ್ಪು ತಡೆಯುವುದು. ತುರಿಕೆ ಮತ್ತು ಇತರ ಸಮಸ್ಯೆ ನಿವಾರಣೆ ಮಾಡುವುದು.

ತೆಂಗಿನೆಣ್ಣೆ
ಇದರಲ್ಲಿ ಇರುವಂತಹ ಶಿಲೀಂಧ್ರ ವಿರೋಧಿ ಗುಣಗಳಿಂದಾಗಿ ಇದು ಹಲವಾರು ಆರೋಗ್ಯ ಗುಣಗಳನ್ನು ಹೊಂದಿದೆ. ಶುದ್ಧವಾಗಿರುವ ತೆಂಗಿನೆಣ್ಣೆ ಬಳಸಿಕೊಂಡು ಯೋನಿ ತುರಿಕೆ ಸಮಸ್ಯೆ ನಿವಾರಣೆ ಮಾಡಬಹುದು. ನೇರವಾಗಿ ಈ ಭಾಗಕ್ಕೆ ತೆಂಗಿನೆಣ್ಣೆ ಹಚ್ಚಿಕೊಳ್ಳಬಹುದು.