ಇದೇ ಕಾರಣಕ್ಕೆ ಮಹಿಳೆಯರಿಗೆ ಸೆಕ್ಸ್ ವೇಳೆ ನೋವು ಕಾಣಿಸಿಕೊಳ್ಳುವುದು...

By Hemanth
Subscribe to Boldsky

ನೋವು ಹಾಗೂ ಸುಖ ಎರಡನ್ನೂ ನೀಡುವಂತಹ ಕ್ರಿಯೆಯೇ ಲೈಂಗಿಕ ಕ್ರಿಯೆ. ಇದು ನೋವನ್ನು ನೀಡಿದರೂ ಅಂತಿಮವಾಗಿ ಸಂಗಾತಿಗಳಿಗೆ ಪರಮಸುಖ ನೀಡುವುದು. ಲೈಂಗಿಕ ಸುಖಕ್ಕಿಂತ ಹೆಚ್ಚಾಗಿ ನೋವೇ ನಿಮ್ಮನ್ನು ಕಾಡುತ್ತಲಿದ್ದರೆ ಆಗ ಮಾತ್ರ ಎಚ್ಚೆತ್ತು ಕೊಳ್ಳಬೇಕು. ಯಾಕೆಂದರೆ ನೋವು ಸಾಮಾನ್ಯಕ್ಕಿಂತ ಅತಿಯಾಗಿದ್ದರೆ ಇದು ಯಾವುದಾದರೂ ಒಂದು ರೋಗದ ಕಾರಣವಾಗಿರ ಬಹುದು. ಹೆಚ್ಚಾಗಿ ಮಹಿಳೆಯರು ಲೈಂಗಿಕ ಕ್ರಿಯೆ ಬಳಿಕ ಯೋನಿ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ನೋವಿರುವುದಾಗಿ ಹೇಳುತ್ತಾರೆ.

ಲೈಂಗಿಕ ಕ್ರಿಯೆ ವೇಳೆ ಯೋನಿ ಸುಡುವುದು ಮತ್ತು ಅಸ್ವಸ್ಥತೆಯು ಹೆಚ್ಚಿನ ಮಹಿಳೆಯರಲ್ಲಿ ಕಂಡುಬರುವುದು. ಇಂತಹ ಸಮಸ್ಯೆಗಳಿಗೆ ಕಾರಣವೇನೆಂದು ನೀವು ತಿಳಿದುಕೊಳ್ಳುವುದು ಅತೀ ಅಗತ್ಯವಾಗಿದೆ. ಉದಾಹರಣೆಗೆ ನೀವು ಅದಕ್ಕೆ ಸಿದ್ಧವಾಗಿಲ್ಲದೆ ಇದ್ದರೆ ಮತ್ತು ತೇವವಿಲ್ಲದೆ ಇದ್ದರೆ ಆಗ ನೋವು ಕಂಡುಬರುವುದು. ಅದಾಗ್ಯೂ, ಆರೋಗ್ಯವು ಇದರಲ್ಲಿ ಪ್ರಮುಖ ಪಾತ್ರ ವಹಿಸುವುದು. ದೀರ್ಘಕಾಲದ ತನಕ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದರಿಂದ ನಿಮ್ಮ ಶ್ರೋಣಿಯ ಸ್ನಾಯುಗಳ ಮೇಲೆ ಒತ್ತಡ ಬಿದ್ದು ಸೆಳೆತ ಕಂಡುಬರಬಹುದು.

ಮಹಿಳೆಯರೇ ಲೈಂಗಿಕ ಕ್ರಿಯೆ ವೇಳೆ ನೋವಾಗುತ್ತಿದೆಯಾ? ಕೂಡಲೇ ವೈದ್ಯರನ್ನು ಕಾಣಿ...

ಮೈಗಂಟಿಕೊಂಡಿರುವ ಮತ್ತು ತುಂಬಾ ಬಿಗಿಯಾದ ಜೀನ್ಸ್ ಗಳನ್ನು ಧರಿಸುವ ಕಾರಣದಿಂದಾಗಿ ಅದು ಮಹಿಳೆಯ ಜನನಾಂಗಕ್ಕೆ ನೋವುಂಟು ಮಾಡಿ ಕಿರಿಕಿರಿ ಉಂಟು ಮಾಡಬಹುದು. ಕೆಲವೊಂದು ಸಲ ಮಹಿಳೆಯರಲ್ಲಿ ಊತ ಕಂಡುಬರುವುದು ಮತ್ತು ಇದಕ್ಕೆ ಕಾರಣವೇನೆಂದು ಕೂಡ ಅವರಿಗೆ ತಿಳಿದಿರುವುದಿಲ್ಲ. ಯೋನಿಯಲ್ಲಿ ಊತ ಮತ್ತು ಕಿರಿಕಿರಿ ಕಂಡುಬರುವುದು ಬಿಗಿಯಾದ ಜೀನ್ಸ್ ಧರಿಸುವ ಕಾರಣದಿಂದಾಗಿ. ದೇಹದಲ್ಲಿ ಈಸ್ಟ್ರೋಜನ್ ಮಟ್ಟವು ಕಡಿಮೆಯಾಗಿದ್ದರೂ ಯೋನಿ ಒಣಗುವುದು. ಇದರಿಂದ ಲೈಂಗಿಕ ಕ್ರಿಯೆಯು ತುಂಬಾ ನೋವಿನಿಂದ ಕೂಡಿರುವುದು. ಯುಟಿಐ ಅಥವಾ ಯೀಸ್ಟ್ ಸೋಂಕು ಕೂಡ ಮಹಿಳೆಯರಿಗೆ ಸಮಸ್ಯೆ ತರಬಹುದು. ಮಹಿಳೆಯರಿಗೆ ಲೈಂಗಿಕ ಕ್ರಿಯೆ ವೇಳೆ ನೋವುಂಟು ಮಾಡುವ ಹತ್ತು ಸಮಸ್ಯೆಗಳ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ತಿಳಿಸಿಕೊಡಲಿದೆ....   

1.ಬಿಗಿಯಾದ ಜೀನ್ಸ್

1.ಬಿಗಿಯಾದ ಜೀನ್ಸ್

ಲೈಂಗಿಕ ಕ್ರಿಯೆ ವೇಳೆ ನೋವಾಗಲು ಬಿಗಿಯಾದ ಜೀನ್ಸ್ ಧರಿಸುವುದು ಪ್ರಮುಖ ಕಾರಣವಾಗಿದೆ. ಬಿಗಿಯಾದ ಜೀನ್ಸ್ ನಿಂದ ಮಹಿಳೆಯ ಸೂಕ್ಷ್ಮ ಭಾಗದಲ್ಲಿ ಕಿರಿಕಿರಿ ಉಂಟುಮಾಡುವುದು. ಎಣ್ಣೆ ಹಚ್ಚಿಕೊಳ್ಳಿ ಮತ್ತು ಬಿಗಿಯಾಗಿರದ ಜೀನ್ಸ್ ಮತ್ತು ಬಟ್ಟೆ ಧರಿಸಿ.

2.ಈಸ್ಟ್ರೋಜನ್ ಕೊರತೆ

2.ಈಸ್ಟ್ರೋಜನ್ ಕೊರತೆ

ಮಹಿಳೆಯರ ಲೈಂಗಿಕ ಜೀವನದಲ್ಲಿ ಈ ಹಾರ್ಮೋನು ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು. ಲೈಂಗಿಕ ಕ್ರಿಯೆ ವೇಳೆ ಪ್ರಚೋದನೆ ಉಂಟಾಗದಿರುವುದು ಕೂಡ ನೋವಿಗೆ ಕಾರಣವಾಗಿದೆ. ದೇಹದಲ್ಲಿ ಈಸ್ಟ್ರೋಜನ್ ಹೆಚ್ಚು ಮಾಡುವಂತಹ ಆಹಾರ ಸೇವನೆ ಮಾಡಿ.

3.ಒತ್ತಡ

3.ಒತ್ತಡ

ಒತ್ತಡವು ನಿಮ್ಮ ರೋಮ್ಯಾನ್ಸ್ ನ್ನು ಸಂಪೂರ್ಣವಾಗಿ ಕೊಲ್ಲುವುದು ಮಾತ್ರವಲ್ಲದೆ, ಇದು ನಿಮ್ಮ ಯೋನಿಯ ಸ್ನಾಯುಗಳ ಬಿಗಿತಕ್ಕೆ ಕಾರಣವಾಗುವುದು. ಈ ಸ್ನಾಯುಗಳು ಒತ್ತಡಕ್ಕೆ ಪ್ರತಿಕ್ರಿಯಿಸುವ ಕಾರಣ ನೋವು ಉಂಟಾಗುವುದು.

4.ಮಲಬದ್ಧತೆ

4.ಮಲಬದ್ಧತೆ

ಲೈಂಗಿಕ ಜೀವನದಲ್ಲಿ ಪರಿಣಾಮ ಬೀರುವ ಮತ್ತೊಂದು ಸಮಸ್ಯೆಯೆಂದರೆ ಮಲಬದ್ಧತೆ. ಹೊಟ್ಟೆಯ ಕ್ರಿಯೆಯು ಸರಿಯಾಗಿರದೆ ಇದ್ದರೆ ಆಗ ನೋವು ಮತ್ತು ದೇಹದ ಕೆಳಭಾಗದಲ್ಲಿ ಅಸ್ವಸ್ಥತೆ ಕಾಣಿಸುವುದು. ಒಂದು ವೇಳೆ ನಿಮಗೂ ಕೂಡ ಇಂತಹ ಸಮಸ್ಯೆ ಕಾಡುತ್ತಿದ್ದರೆ... ಹೀಗೆ ಮಾಡಿ *ಎರಡು ಚಮಚ ಕೊತ್ತಂಬರಿ ಬೀಜ *ಒಂದು ಲೋಟ ನೀರು. ಇದಕ್ಕೆ ಕರಿಮೆಣಸು ಹಾಕಬಹುದು(ಆಯ್ಕೆ ನಿಮ್ಮದು) ಹೇಳಿದ ಸಾಮಗ್ರಿಗಳನ್ನು ಒಂದು ಸಣ್ಣ ಬಾಣಲೆಗೆ ಹಾಕಿಕೊಂಡು ಅದನ್ನು ಕೆಲವು ನಿಮಿಷ ಕುದಿಯಲು ಬಿಡಿ. *ಕುದಿದ ಬಳಿಕ ತಣ್ಣಗಾಗಲು ಬಿಡಿ ಮತ್ತು ನೀರನ್ನು ಸೋಸಿಕೊಳ್ಳಿ. *ದಿನದಲ್ಲಿ 1-2 ಸಲ ಈ ನೀರನ್ನು ಕುಡಿಯಿರಿ.

5.ಆಲ್ಕೋಹಾಲ್

5.ಆಲ್ಕೋಹಾಲ್

ಆಲ್ಕೋಹಾಲ್ ಸೇವನೆ ಮಾಡುವುದರಿಂದ ನಿಮಗೆ ಲೈಂಗಿಕ ಕ್ರಿಯೆಯನ್ನು ಆನಂದಿಸಲು ನೆರವಾಗಬಹುದು. ಆದರೆ ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡಿ, ಖಾರವಾಗಿರುವ ಆಹಾರ ಸೇವನೆ ಮಾಡಿದರೆ ಇದರಿಂದ ಮೂತ್ರ ಬಂದಂತೆ ಆಗಬಹುದು. ಇದರಿಂದ ಮೂತ್ರನಾಳದಲ್ಲಿ ನೋವು ಕಾಣಿಸಬಹುದು ಮತ್ತು ಒತ್ತಡವು ಲೈಂಗಿಕ ಕ್ರಿಯೆ ವೇಳೆ ನೋವುಂಟು ಮಾಡಬಹುದು.

7. ಗರ್ಭಕೋಶದಲ್ಲಿ ಊತ

7. ಗರ್ಭಕೋಶದಲ್ಲಿ ಊತ

ಋತುಚಕ್ರಕ್ಕೆ ಕೆಲವು ದಿನಗಳ ಮೊದಲು ಗರ್ಭಕೋಶದಲ್ಲಿ ಊತ ಕಾಣಿಸುವುದು ಮತ್ತು ನೋವು ಇರುವುದು. ಅಂಡೋತ್ಪತ್ತಿ ಬಳಿಕ ಹೆಚ್ಚಿನ ಮಹಿಳೆಯರಲ್ಲಿ ಸೂಕ್ಷ್ಮತೆಯು ಕಂಡುಬರುವುದು. ಇದು ಲೈಂಗಿಕ ಕ್ರಿಯೆ ವೇಳೆ ನೋವಿಗೆ ಕಾರಣವಾಗಬಹುದು.

8.ಯೋನಿಯು ಒಣಗುವುದು

8.ಯೋನಿಯು ಒಣಗುವುದು

ಹವಾಮಾನದಲ್ಲಿ ಆಗುವ ಬದಲಾವಣೆಗಳು ನಿಮ್ಮ ಚರ್ಮ ಮತ್ತು ತುಟಿಗಳನ್ನು ಒಣಗಿಸುವುದು ಮಾತ್ರವಲ್ಲದೆ, ಜನನೇಂದ್ರಿಯಗಳು ಕೂಡ ಒಣಗುವುದು. ಯೋನಿಯು ಒಣಗುವುದು ಸಮಸ್ಯೆಯಾಗಿದ್ದರೆ ಆಗ ಅದರಲ್ಲಿ ಬಿರುಕು ಕಂಡುಬರಬಹುದು. ಜನನೇಂದ್ರಿಯ ಕೆಲವು ಕ್ರೀಮ್ ಗಳನ್ನು ಬಳಸಿ ಮಾಯಿಶ್ಚರೈಸ್ ಆಗಿಡಿ.

9.ನೋವು

9.ನೋವು

ಅತಿಯಾಗಿ ಓಡುವುದು ಮತ್ತು ಬೆನ್ನಿನ ಮೇಲೆ ಮಲಗಿರುವುದರಿಂದ ಯೋನಿಯ ಸ್ನಾಯುಗಳಲ್ಲಿ ನೋವು ಕಾಣಿಸುವುದು ಮತ್ತು ಇದು ಲೈಂಗಿಕ ಕ್ರಿಯೆ ವೇಳೆ ಹೆಚ್ಚಾಗುವುದು.

9.ಬ್ರೆಜಿಲಿಯನ್ ವ್ಯಾಕ್ಸ್

9.ಬ್ರೆಜಿಲಿಯನ್ ವ್ಯಾಕ್ಸ್

ಯೋನಿಯ ಸುತ್ತಲಿನ ಚರ್ಮವು ತುಂಬಾ ಸೂಕ್ಷ್ಮವಾಗಿರುವುದು. ವ್ಯಾಕ್ಸಿಂಗ್ ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವುದು ಮತ್ತು ಊತ ಕಂಡುಬರಬಹುದು. ಬ್ರೆಜಿಲಿಯನ್ ವ್ಯಾಕ್ಸಿಂಗ್ ನಿಂದ ಉಂಟಾಗುವ ಅಡ್ಡಪರಿಣಾಮವೆಂದರೆ ಉರಿಯೂತ. ಇತರ ವಿಧಾನಗಳಾದ ಟ್ರಿಮ್ಮಿಂಗ್, ಲೇಸರ್ ಅಥವಾ ಶೇವಿಂಗ್ ಬಳಸಿ.

10.ಸೋಂಕು

10.ಸೋಂಕು

ಮಹಿಳೆಯರಿಗೆ ಹೆಚ್ಚಾಗಿ ಯೋನಿಯ ಸೋಂಕು ಕಾಣಿಸಿಕೊಳ್ಳುವುದು ಮತ್ತು ಇದು ಕಿರಿಕಿರಿ ಉಂಟು ಮಾಡಿ ನೋವು ಕಾಣಿಸುವುದು. ಹಾಗಾಗಿ ಲೈಂಗಿಕ ಕ್ರಿಯೆಯಾದ ತಕ್ಷಣ ಮಹಿಳೆಯರು ಮೂತ್ರವಿಸರ್ಜನೆ ಮಾಡಿಕೊಳ್ಳುವುದು ಅತೀ ಅಗತ್ಯ. ಯಾಕೆಂದರೆ ಜನನೇಂದ್ರಿಯಗಳಲ್ಲಿ ಇರುವಂತಹ ಸೋಂಕು ಮೂತ್ರವಿಸರ್ಜನೆ ಮೂಲಕ ಹೊರಹೋಗುತ್ತದೆ. ಪುರುಷರ ವೀರ್ಯ ಮತ್ತು ಮೂತ್ರವು ಒಂದೇ ನಾಳದ ಮೂಲಕ ಬರುವ ಕಾರಣದಿಂದ ಮೂತ್ರನಾಳದಲ್ಲಿರುವ ಸೋಂಕು ಮಹಿಳೆಯರಿಗೆ ತಗುಲಬಹುದು. ಇನ್ನು ಲೈಂಗಿಕ ಕ್ರಿಯೆ ಬಳಿಕ ತೆಗೆದುಕೊಳ್ಳಬೇಕಾದ ಮುಖ್ಯ ಕ್ರಮವೆಂದರೆ ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು.ಕೇವಲ ಮೂತ್ರನಾಳದ ಸೋಂಕು ಮಾತ್ರವಲ್ಲ, ಬೇರೆ ರೀತಿಯ ಸೋಂಕು ನಿಮ್ಮ ದೇಹದೊಳಗೆ ಪ್ರವೇಶ ಮಾಡಬಹುದು. ಕಾಂಡೋಮ್ ಬಳಸಿದರೆ ಅದು ಇಬ್ಬರು ಸಂಗಾತಿಗಳನ್ನು ಕೂಡ ಲೈಂಗಿಕ ಸೋಂಕಿನಿಂದ ರಕ್ಷಿಸುವುದು. ಕಾಂಡೋಮ್ ಬಳಸದೆ ಇದ್ದರೆ ಆಗ ಸರಿಯಾದ ಸ್ವಚ್ಛತೆಯನ್ನು ಪಾಲಿಸಿ. ಸಾಮಾನ್ಯವಾಗಿ ಮಹಿಳೆಯರಿಗೆ ಮೂತ್ರವಿಸರ್ಜನೆ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಯು ಬೇರೆ ಬೇರೆಯಾಗಿರುವ ಕಾರಣದಿಂದ ಪುರುಷರಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಇರುವುದು. ಯಾವುದೇ ರೀತಿಯ ಸೋಂಕು ಬರದಂತೆ ತಡೆಯಲು ಮಹಿಳೆಯರು ಹಾಗೂ ಪುರುಷರು ಲೈಂಗಿಕ ಕ್ರಿಯೆ ಮೊದಲು ಗುಪ್ತಾಂಗವನ್ನು ಸರಿಯಾಗಿ ತೊಳೆಯಬೇಕು. ಮಹಿಳೆಯರು ಲೈಂಗಿಕ ಕ್ರಿಯೆ ಬಳಿಕ ಮೂತ್ರವಿಸರ್ಜನೆ ಮಾಡಿದರೆ ಸೋಂಕು ಹೊರಹೋಗುವುದು.

11.ಎಂಡೊಮೆಟ್ರೋಸಿಸ್ ಸಮಸ್ಯೆ ಕಾರಣ

11.ಎಂಡೊಮೆಟ್ರೋಸಿಸ್ ಸಮಸ್ಯೆ ಕಾರಣ

ಲೈಂಗಿಕ ಕ್ರಿಯೆ ವೇಳೆ ಉಂಟಾಗುವಂತಹ ನೋವನ್ನು ಕಡೆಗಣಿಸಬಾರದು. ದೀರ್ಘಕಾಲದ ತನಕ ಈ ಸಮಸ್ಯೆ ಕಾಡುತ್ತಲಿದ್ದರೆ ಇದಕ್ಕೆ ಎಂಡೊಮೆಟ್ರೋಸಿಸ್ ಕಾರಣವಾಗಿದೆ. ಗರ್ಭಕೋಶದ ಸಂಧಿಯ ಕೆಲವೊಂದು ಕೋಶಗಳು ಬೇರೆ ಭಾಗದಲ್ಲಿ ಬೆಳೆಯುವುದು ಈ ನೋವಿಗೆ ಕಾರಣವಾಗಿದೆ.

12.ಅಂಡಾಶಯದ ಚೀಲಗಳು

12.ಅಂಡಾಶಯದ ಚೀಲಗಳು

ಲೈಂಗಿಕ ಕ್ರಿಯೆ ವೇಳೆ ನಿಮಗೆ ತುಂಬಾ ನೋವಾಗುತ್ತಾ ಇದ್ದರೆ ಮತ್ತು ಆ ಜಾಗವು ತುಂಬಾ ಸೂಕ್ಷ ಮತ್ತು ಸ್ಪರ್ಶವಿಲ್ಲದಂತೆ ಆಗಿದ್ದರೆ ಇದಕ್ಕೆ ಗರ್ಭಕೋಶದ ಚೀಲಗಳು ಕಾರಣವಾಗಿವೆ. ಇದನ್ನು ನೀವು ದೃಢಪಡಿಸಲು ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

For Quick Alerts
ALLOW NOTIFICATIONS
For Daily Alerts

    English summary

    Health Causes Of Painful Sex

    Having sex is one of the ways to boost your love life and also enjoy pleasure. But is is always said that sex comes with pleasure and pain. Often women complain of pain in their genitals and lower abdomen after having sex. Making love also leads to vaginal burn and discomfort which makes a lot of women abstain from it. Well, if the jagger is troubling you, you need to know what your problems are. For example, if you are not turned on or lubricating, making love becomes painful.
    ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more