For Quick Alerts
ALLOW NOTIFICATIONS  
For Daily Alerts

ಅಲೋವೆರಾ-ಜೇನು ಬೆರೆಸಿದ ನೀರು ಕುಡಿದರೆ ಕನಿಷ್ಠ ಒಂಬತ್ತು ಲಾಭಗಳಿವೆ!

By Arshad
|

ಇತ್ತೀಚೆಗೆ ನೈಸರ್ಗಿಕ ಆರೋಗ್ಯ ಪ್ರಸಾದನಗಳ ಬಗ್ಗೆ ಹೆಚ್ಚಿನ ಜನರು ಗಮನ ಹರಿಸುತ್ತಿರುವ ಕಾರಣ ಎಲ್ಲೆಡೆ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿದ ಪ್ರಸಾದನಗಳ ಜಾಹೀರಾತುಗಳು ಕಂಡುಬರುತ್ತಿವೆ. ಇದರಲ್ಲಿ ಪ್ರಮುಖವಾಗಿ ಲೋಳೆಸರದ ಚಿತ್ರವನ್ನು ಧಾರಾಳವಾಗಿ ಬಳಸಿರುತ್ತಾರೆ. ಮುಖ ತೊಳೆಯುವ ಸೋಪು, ಮುಖಲೇಪ, ತೂಕ ಇಳಿಸುವ ಔಷಧಿ, ಅಧಿಕ ಕೊಲೆಸ್ಟ್ರಾಲ್ ಮೊದಲಾದ ತೊಂದರೆಗಳ ಔಷಧಿಗಳು ಮೊದಲಾದ ಹಲವು ಉತ್ಪನ್ನಗಳಲ್ಲಿಯೂ ಲೋಳೆಸರ ಬಳಸಿರುವ ಬಗ್ಗೆ ಹೇಳಿಕೊಂಡಿರುತ್ತಾರೆ. ಏಕೆಂದು ಗೊತ್ತೇ?

ಇಂದು ಇದರ ಬಳಕೆಯನ್ನು ನಗದೀಕರಿಸಲು ಜಾಹೀರಾತು ನೀಡುತ್ತಿದ್ದರೂ ಇದರ ಬಳಕೆ ಭಾರತದಲ್ಲಿ ಆಯುರ್ವೇದ ಸಾವಿರಾರು ವರ್ಷಗಳ ಹಿಂದಿನಿಂದಲೂ ಅನುಸರಿಸಿಕೊಂಡು ಬರುತ್ತಿದೆ. ಆಯುರ್ವೇದದ ಪ್ರಕಾರ ನೈಸರ್ಗಿಕ ಲೋಳೆಸರವನ್ನು ಸುಮಾರು ಐವತ್ತಕ್ಕೂ ಹೆಚ್ಚು ಬಗೆಯಲ್ಲಿ ಸೌಂದರ್ಯವರ್ಧಕ ಹಾಗೂ ಆರೋಗ್ಯವರ್ಧಕವಾಗಿ ಬಳಸಬಹುದು.

ಬಹುಪಯೋಗಿ ಲೋಳೆಸರದ ಲಾಭಗಳು ಒಂದೇ, ಎರಡೇ?

ಕಳೆದ ನೂರು ವರ್ಷಗಳಲ್ಲಿ ಆಧುನಿಕ ಔಷಧಿಗಳ ಆಗಮನದ ನಂತರ, ಹಲವು ರೋಗಗಳ ಚಿಕಿತ್ಸೆ ಮತ್ತು ರೋಗಗಳನ್ನು ತಡೆಗಟ್ಟಲು ನೈಸರ್ಗಿಕ ಸಾಮಾಗ್ರಿಗಳ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ. ಅಲ್ಲದೇ, ಹಲವು ಜನರ ವೈಯಕ್ತಿಕ ಅನುಭವಗಳು ಹಾಗೂ ಕೆಲವಾರು ಸಂಶೋಧನೆಗಳು ನೈಸರ್ಗಿಕ ಸಾಮಾಗ್ರಿಗಳು ದೀರ್ಘಾವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ ಮತ್ತು ಅಡ್ಡಪರಿಣಾಮಗಳಿಲ್ಲದ ಕಾರಣ ಹೆಚ್ಚು ಸುರಕ್ಷಿತ ಎಂದು ಸಾಬೀತಾಗಿದೆ. ಆಯುರ್ವೇದ ಅತ್ಯುತ್ತಮವೆಂದು ಬಣ್ಣಿಸಿರುವ ಲೋಳೆಸರ ಹಾಗೂ ಜೇನುತುಪ್ಪವನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಹಲವಾರು ಆರೋಗ್ಯರಕ ಪ್ರಯೋಜನಗಳಿವೆ.

ತಯಾರಿಕೆಯ ವಿಧಾನ :

*ಲೋಳೆಸರ (ಅಲೋವೆರಾ) ದ ತಿರುಳು 2 ದೊಡ್ಡ ಚಮಚ. ಮತ್ತು 1 ಕಪ್ ಜೇನುತುಪ್ಪವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕಲಕಿ.

*ಬೆಳಗಿನ ಉಪಹಾರಕ್ಕೂ 30 ನಿಮಿಷಗಳ ಮುನ್ನ, ನಿತ್ಯವೂ ಈ ಪೇಯವನ್ನು ಕುಡಿಯಿರಿ.

ಬನ್ನಿ, ಈ ಪೇಯದ ನಿತ್ಯದ ಸೇವನೆಯಿಂದ ಯಾವ ಬಗೆಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ:

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಸ್ಥೂಲಕಾಯ ಹಲವಾರು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ ಎಂದು ನಾವೆಲ್ಲಾ ಅರಿತೇ ಇದ್ದೇವೆ. ಸಂಧಿವಾತ, ಹೃದಯ ಸಂಬಂಧಿ ತೊಂದರೆಗಳು, ಬೆನ್ನುನೋವು ಮೊದಲಾದವು ಎದುರಾಗುತ್ತವೆ. ಆದ್ದರಿಂದ ತೂಕ ಇಳಿಸುವ ಬಗ್ಗೆ ಪ್ರತಿ ಸ್ಥೂಲದೇಹಿಗಳು ಪ್ರಾಮಾಣಿಕ ಯತ್ನ ನಡೆಸಬೇಕು. ಈ ಪೇಯದಲ್ಲಿನ ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಲೋಳೆಸರದಲ್ಲಿರುವ ವಿಟಮಿನ್ ಇ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಸ್ಥೂಲಕಾಯವನ್ನು ನೈಸರ್ಗಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಕಡಿಮೆಗೊಳಿಸುತ್ತದೆ.

ಮಲಬದ್ಧತೆಯಿಂದ ರಕ್ಷಿಸುತ್ತದೆ

ಮಲಬದ್ಧತೆಯಿಂದ ರಕ್ಷಿಸುತ್ತದೆ

ಹಲವಾರು ವೈದ್ಯಕೀಯ ಅಧ್ಯಯನಗಳ ಮೂಲಕ ಕಳೆದ ಎರಡು ದಶಕಗಳಲ್ಲಿ ಮಲಬದ್ದತೆಯ ತೊಂದರೆ ಇರುವ ರೋಗಿಗಳ ಸಂಖ್ಯೆ 52%ರಷ್ಟು ಏರಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅನಾರೋಗ್ಯಕರ ಆಹಾರಕ್ರಮ ಮತ್ತ್ತುವ್ಯಾಯಾಮ ರಹಿತ ಜೀವನಕ್ರಮ. ಲೋಳೆಸರ ಹಾಗೂ ಜೇನಿನ ಪೇಯವನ್ನು ಕುಡಿಯುವ ಮೂಲಕ ಜೀರ್ಣಾಂಗಗಳಲ್ಲಿ ನೈಸರ್ಗಿಕ ಜಾರುಕದಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ಗಟ್ಟಿಯಾಗಿದ್ದ ಕಲ್ಮಶಗಳನ್ನು ಸಡಿಲಿಸಿ ಕರುಳುಗಳಲ್ಲಿ ಸುಲಭವಾಗಿ ಚಲಿಸಲು ಹಾಗೂ ಸುಲಭವಾಗಿ ವಿಸರ್ಜಿಸಲು ನೆರವಾಗುತ್ತದೆ. ತನ್ಮೂಲಕ ಮಲಬದ್ದತೆಯ ತೊಂದರೆಯನ್ನು ಇಲ್ಲವಾಗಿಸುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದಷ್ಟೂ ದೇಹ ಆರೋಗ್ಯಕರವಾಗಿರುತ್ತದೆ. ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಲೋಳೆಸರದಲ್ಲಿರುವ ಸಾಪೋಯಿನ್ ಎಂಬ ಪೋಷಕಾಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೆಚ್ಚಿಸುತ್ತದೆ ಹಾಗೂ ಈ ಮೂಲಕ ಹಲವಾರು ರೋಗಗಳಿಂದ ರಕ್ಷಣೆಯನ್ನು ಒದಗಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿದಷ್ಟೂ ರೋಗಗ್ರಸ್ತವಾಗುವ ಸಂಭವ ಕಡಿಮೆಯಾಗುತ್ತದೆ.

ಜೀವಕೋಶಗಳ ಸವೆತ ಕಡಿಮೆಗೊಳಿಸುತ್ತದೆ

ಜೀವಕೋಶಗಳ ಸವೆತ ಕಡಿಮೆಗೊಳಿಸುತ್ತದೆ

ವಯಸ್ಸಾಗುತ್ತಾ ಹೋದಂತೆ ನಮ್ಮ ದೇಹದ ಜೀವಕೋಶಗಳೂ ನಷ್ಟವಾಗುತ್ತಾ ಹೋಗುತ್ತವೆ. ಇದು ಸ್ವಾಭಾವಿಕವಾಗಿದ್ದು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಸೂಕ್ತ ಆರೈಕೆಯ ಮೂಲಕ ಇದನ್ನು ತಡವಾಗಿಸಬಹುದು. ಕೆಲವು ವ್ಯಕ್ತಿಗಳಲ್ಲಿ ಇದು ಬೇಗಬೇಗನೇ ಜರುಗುತ್ತದೆ ಹಾಗೂ ಪರಿಣಾಮವಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ನೆರೆಯುವುದು, ನಿಃಶಕ್ತಿ, ಸ್ಮರಣ ಶಕ್ತಿ ಕುಂದುವುದು ಮೊದಲಾದವು ಎದುರಾಗುತ್ತದೆ. ಜೇನು ಮತ್ತು ಲೋಳೆಸರದ ಪೇಯದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಖನಿಜಗಳ ಜೋಡಿ ಈ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ಒದಗಿಸುವ ಮೂಲಕ ಸವೆತವನ್ನು ನಿಧಾನವಾಗಿಸಿ ಈ ಮೂಲಕ ವೃದ್ದಾಪ್ಯವನ್ನು ಮುಂದೂಡುತ್ತದೆ.

ಕಣ್ಣಿನ ಆರೋಗ್ಯ ಉತ್ತಮಗೊಳಿಸುತ್ತದೆ:

ಕಣ್ಣಿನ ಆರೋಗ್ಯ ಉತ್ತಮಗೊಳಿಸುತ್ತದೆ:

ಇಂದು ಕಣ್ಣು ಒಣಗುವುದು, ದೃಷ್ಟಿ ಮಂಜಾಗುವುದು, ಕಣ್ಣಿನ ಅಲರ್ಜಿಗಳು ಮೊದಲಾದವು ಸಾಮಾನ್ಯವಾಗಿದೆ. ಇದಕ್ಕೆ ಗಾಳಿಯಲ್ಲಿರುವ ಪ್ರದೂಷಣೆ, ಘಂಟೆಗಳ ಕಾಲ ಕಂಪ್ಯೂಟರ್ ಮುಂದೆ ಕುಳಿತಿರುವುದು, ಪ್ರಖರ ಬೆಳಕನ್ನು ಅನಿವಾರ್ಯವಾಗಿ ನೋಡಬೇಕಾಗುವುದು ಮೊದಲಾದವು ಇದಕ್ಕೆ ಕಾರಣವಾಗಿವೆ. ಲೋಳೆಸರದಲ್ಲಿ ವಿಟಮಿನ್ ಎ ಉತ್ತಮ ಪ್ರಮಾಣದಲ್ಲಿವೆ. ಈ ಪೋಷಕಾಂಶ ಕಣ್ಣಿನ ಜೀವಕೋಶಗಳಿಗೆ ನವಚೈತನ್ಯ ನೀಡುತ್ತದೆ ಹಾಗೂ ಕಣ್ಣುಗಳಿಗೆ ಅಗತ್ಯವಾದ ಕಣ್ಣೀರಿನ ಪ್ರಮಾಣವನ್ನು ಹೆಚ್ಚಿಸಿ ಒಣಗದಿರಲು ನೆರವಾಗುತ್ತದೆ. ಆದರೆ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಈ ಪೇಯವನ್ನು ನಿತ್ಯವೂ ಬೆಳಿಗ್ಗೆ ಕುಡಿಯಬೇಕೇ ವಿನಃ ಎಂದಿಗೂ ಕಣ್ಣುಗಳಿಗೆ ಹಚ್ಚಿಕೊಳ್ಳಬಾರದು.

ಗಾಯಗಳನ್ನು ಶೀಘ್ರವೇ ಮಾಗಿಸುತ್ತದೆ

ಗಾಯಗಳನ್ನು ಶೀಘ್ರವೇ ಮಾಗಿಸುತ್ತದೆ

ನಿತ್ಯವೂ ಈ ಪೇಯವನ್ನು ಕುಡಿಯುತ್ತಾ ಬರುವ ಮೂಲಕ ದೇಹದ ಗಾಯಗಳನ್ನು ಗುಣಪಡಿಸುವ ಗುಣ ಹೆಚ್ಚುತ್ತದೆ ಹಾಗೂ ಗಾಯಗಳು ಶೀಘ್ರವೇ ಮಾಗುತ್ತವೆ. ಲೋಳೆಸರದಲ್ಲಿರುವ ಆಕ್ಸಿನ್ ಹಾಗೂ ಗಿಬ್ಬೆರೆಲೆಲ್ಲಿನ್ಸ್ ಎಂಬ ರಸದೂತಗಳು ಸವೆತಗೊಂಡಿದ್ದ ಅಥವಾ ತುಂಡಾದ ಅಂಗಾಂಶಗಳು ಶೀಘ್ರವೇ ಮತ್ತೆ ಬೆಳೆಯಲು ನೆರವಾಗುವ ಮೂಲಕ ಗಾಯಗಳು ಶೀಘ್ರವಾಗಿ ಗುಣವಾಗುತ್ತವೆ. ಅಲ್ಲದೇ ಗಾಯಗಳ ಮೇಲೆ ಲೋಳೆಸರದ ತಿರುಳನ್ನು ಹಚ್ಚಿಕೊಳ್ಳುವ ಮೂಲಕ ಉರಿಯೂತವನ್ನು ಕಡಿಮೆಗೊಳಿಸಿ ಗಾಯ ಶೀಘ್ರವಾಗಿ ಮಾಗಿಸಬಹುದು.

ಸೂಕ್ಷ್ಮಜೀವಿಗಳಿಂದ ಎದುರಾದ ಕಾಯಿಲೆಗಳನ್ನು ಗುಣಪಡಿಸುತ್ತದೆ

ಸೂಕ್ಷ್ಮಜೀವಿಗಳಿಂದ ಎದುರಾದ ಕಾಯಿಲೆಗಳನ್ನು ಗುಣಪಡಿಸುತ್ತದೆ

ವೈರಲ್ ಫ್ಲೂ, ಬ್ಯಾಕ್ಟೀರಿಯಾಗಳ ಸೋಂಕು ಮೊದಲಾದ ಸೂಕ್ಷ್ಮಜೀವಿಗಳಿಂದ ಎದುರಾದ ಕಾಯಿಲೆಗಳು ಇಂದು ಸಾಮಾನ್ಯವಾಗಿವೆ. ಏಕೆಂದರೆ ಈ ಸೂಕ್ಷ್ಮಜೀವಿಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಬೇಧಿಸಿ ದೇಹದ ಸೂಕ್ಷ್ಮಭಾಗಗಳ ಮೇಲೆ ಧಾಳಿ ಎಸಗುತ್ತವೆ. ಲೋಳೆಸರ ಹಾಗೂ ಜೇನು ಎರಡರಲ್ಲಿಯೂ ಅತಿಸೂಕ್ಷ್ಮಜೀವಿ ನಿರೋಧಕ ಗುಣವಿರುವ ಕಾರಣ ದೇಹದಲ್ಲಿ ಪ್ರವೇಶಿಸಿರುವ ಸೂಕ್ಷ್ಮಜೀವಿಗಳ ವಿರುದ್ದ ಹೋರಾಡುವ ಗುಣವನ್ನು ಹೊಂದಿವೆ. ಈ ಮೂಲಕ ಇವು ಉಂಟುಮಾಡುವ ಕೆಲವಾರು ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ.

ಶಕ್ತಿಯನ್ನು ಹೆಚ್ಚಿಸುತ್ತದೆ

ಶಕ್ತಿಯನ್ನು ಹೆಚ್ಚಿಸುತ್ತದೆ

ನಿತ್ಯವೂ ಮುಂಜಾನೆ ಪ್ರಥಮ ಆಹಾರವಾಗಿ ಈ ಪೇಯವನ್ನು ಕುಡಿಯುವ ಮೂಲಕ ನಿಮ್ಮ ದೇಹದ ಶಕ್ತಿ ಗಣನೀಯವಾಗಿ ಹೆಚ್ಚುವುದನ್ನು ಗಮನಿಸಬಹುದು ಹಾಗೂ ಈ ಮೂಲಕ ನಿಮ್ಮ ನಿತ್ಯದ ಕೆಲಸಗಳನ್ನು ಇನ್ನಷ್ಟು ಸಕ್ಷಮವಾಗಿ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಬಹುದು. ಲೋಳೆಸರದಲ್ಲಿರುವ ಪೊಟ್ಯಾಶಿಯಂ ಹಾಗೂ ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಇದಕ್ಕೆ ಕಾರಣವಾಗಿದೆ ಹಾಗೂ ಈ ಪೇಯ ದೇಹದ ನೈಸರ್ಗಿಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನೂ ಉತ್ತಮವಾಗಿರಿಸಲು ನೆರವಾಗುತ್ತದೆ.

ಗರ್ಭವತಿಯರ ಆರೋಗ್ಯ ಉತ್ತಮಗೊಳಿಸುತ್ತದೆ.

ಗರ್ಭವತಿಯರ ಆರೋಗ್ಯ ಉತ್ತಮಗೊಳಿಸುತ್ತದೆ.

ಲೋಳೆಸರದಲ್ಲಿರುವ ವಿಟಮಿನ್ ಸಿ ಹಾಗೂ ಫೋಲಿಕ್ ಆಮ್ಲ ಮತ್ತು ಜೇನಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಇ ವಿಶೇಷವಾಗಿ ಗರ್ಭವತಿಯರಿಗೆ ಹೆಚ್ಚಿನ ಪೋಷಣೆ ಒದಗಿಸುತ್ತದೆ. ಗರ್ಭಾವಸ್ಥೆಯಲ್ಲಿ ಈ ಪೋಷಕಾಂಶಗಳು ಹೆಚ್ಚು ಅಗತ್ಯವಾಗಿದ್ದು ಬೆಳೆಯುತ್ತಿರುವ ಮಗುವಿನ ಆರೋಗ್ಯ ಉತ್ತಮವಾಗಿರಿಸುತ್ತದೆ. ಆದರೆ ಈ ಪೇಯದ ಸೇವನೆಯನ್ನು ಪ್ರಾರಂಭಿಸುವ ಮುನ್ನ ನಿಮ್ಮ ಕುಟುಂಬ ವೈದ್ಯರ ಸಲಹೆಯನ್ನು ಪಡೆದು ಅವರ ಅನುಮತಿಯ ಮೇರೆಗೆ ಮಾತ್ರವೇ ಸೇವಿಸಬೇಕು.

ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನ

English summary

Health Benefits Of Aloe Vera & Honey When Consumed Every Morning

Even the ancient system of Indian medicine, Ayurveda, opines that aloe vera is one natural plant, which comes with over 50 beauty and health benefits! Over the past century, after the advent of modern medicines, people have started to trust less on natural ingredients which can treat and prevent a number of ailments. So, here are the health benefits of aloe vera and honey, which can help prevent and treat numerous health conditions; have a look!
Story first published: Saturday, February 10, 2018, 7:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more