ರಾತ್ರಿಗಿಂತ ಬೆಳಗಿನ ಜಾವದ ಸೆಕ್ಸ್ ಆರೋಗ್ಯಕ್ಕೆ ಒಳ್ಳೆಯದಂತೆ!

Subscribe to Boldsky

ಬೆಳಗ್ಗೆ ಹಾಸಿಗೆಯಿಂದ ಎದ್ದ ಬಳಿಕ ನಿತ್ಯಕರ್ಮಗಳನ್ನು ಮುಗಿಸಿಕೊಂಡು ವಾಕಿಂಗ್ ಗೆ ಹೋಗುವಂತಹ ಹವ್ಯಾಸವನ್ನು ಕೆಲವು ಇಟ್ಟುಕೊಂಡಿರುವರು. ದೇಹದ ಆರೋಗ್ಯದ ದೃಷ್ಟಿಯಿಂದ ಇದು ತುಂಬಾ ಒಳ್ಳೆಯದು. ಆದರೆ ನೀವು ವಾಕಿಂಗ್ ಗೆ ಹೋಗದೆ ಹಾಸಿಗೆ ಮೇಲೆ ನಿಮಗೆ ಉತ್ತಮ ಆರೋಗ್ಯ ಸಿಗುವಂತಹ ವಿಧಾನವೊಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ನಿಮಗೆ ಆರೋಗ್ಯ ಹಾಗೂ ಖುಷಿ ಎರಡನ್ನು ನೀಡುವುದು. ಇದರ ಬಗ್ಗೆ ಊಹೆ ಮಾಡಿದ್ದೀರಾ?

ಹೌದು, ನಿಮ್ಮ ಊಹೆ ಸರಿಯಾಗಿರಲೂಬಹುದು. ಯಾಕೆಂದರೆ ಹಾಸಿಗೆಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಮುಂಜಾನೆ ವೇಳೆ ಮಾಡುವಂತಹ ಸೆಕ್ಸ್ ನಿಂದ ಹಲವಾರು ರೀತಿಯ ಲಾಭಗಳು ಇವೆ ಎಂದು ಅಧ್ಯಯನಗಳು ಹೇಳಿವೆ. ಇದು ಉಪಾಹಾರಕ್ಕೆ ಮೊದಲು ಸಿಗುವಂತಹ ಸಿಹಿ ಎನ್ನಲಾಗುತ್ತದೆ. ಇದರ ಬಗ್ಗೆ ನೀವು ಇನ್ನಷ್ಟು ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ....

 ಆತಂಕ ನಿವಾರಣೆ

ಆತಂಕ ನಿವಾರಣೆ

ಬೆಳಗ್ಗೆ ನಿದ್ರೆಯಿಂದ ಕಣ್ಣು ಬಿಟ್ಟಾಗ ಸಂಪೂರ್ಣ ದಿನದ ಬಗ್ಗೆ ತಲೆಯಲ್ಲಿ ಓಡುವುದು. ಇದರ ನಿವಾರಣೆಗೆ ಮುಂಜಾನೆಯ ಸೆಕ್ಸ್ ತುಂಬಾ ನೆರವಾಗುವುದು. ಲೈಂಗಿಕ ಚಟುವಟಿಕೆಯನ್ನು ಮೆದುಳು ಒಂದು ಉಡುಗೊರೆಯೆಂದು ಪರಿಗಣಿಸಿದೆ ಮತ್ತು ಇದು ಒತ್ತಡ ನಿವಾರಿಸುವುದು. ಲೈಂಗಿಕಪರಾಕಾಷ್ಠೆಯಿಂದ ಎಂಡ್ರೋಪಿನ್ ಎನ್ನುವ ಹಾರ್ಮೋನು ಬಿಡುಗಡೆ ಯಾಗುವುದು. ಇದು ಸಂಪೂರ್ಣ ಸಂತೋಷಕ್ಕೆ ಕಾರಣವಾಗುವುದು. ಎಂಡ್ರೋಫಿನ್ ಒತ್ತಡದ ವಿರುದ್ಧ ಹೋರಾಡುವುದು, ಮನಸ್ಥಿತಿ ಉತ್ತಮಗೊಳಿಸುವುದು ಮತ್ತು ನೋವು ನಿವಾರಿಸುವುದು. ಮನಸ್ಥಿತಿ ಉತ್ತಮಪಡಿಸುವಂತಹ ಚಟುವಟಿಕೆಯಿಂದ ದಿನವನ್ನು ಆರಂಭಿಸುವುದಕ್ಕಿಂತ ಬೇರೆ ವಿಧಾನವಿದೆಯಾ?

ವ್ಯಾಯಾಮವೆಂದು ಪರಿಗಣನೆ

ವ್ಯಾಯಾಮವೆಂದು ಪರಿಗಣನೆ

ನೀವು ಜಿಮ್ ಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದರೆ ಮತ್ತು ಲೈಂಗಿಕಕ್ರಿಯೆಯು ನಿಮಗೆ ಅಷ್ಟೊಂದು ಒಳ್ಳೆಯ ವಿಧಾನವೆಂದು ಅನಿಸದು. ಆದರೆ ಕೆಲವೊಂದು ಅಧ್ಯಯನಗಳ ಪ್ರಕಾರ ಸೆಕ್ಸ್ ಕೂಡ ವ್ಯಾಯಾಮದ ಒಂದು ಭಾಗವೆಂದು ಪರಿಗಣಿಸಲಾಗಿದೆ. ಟ್ರೇಡ್ ಮಿಲ್ ಅಥವಾ ಬೇರೆ ವಿಧದ ವ್ಯಾಯಾಮಕ್ಕಿಂತ ಸೆಕ್ಸ್ ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಇದು ಕ್ಯಾಲರಿ ದಹಿಸುತ್ತದೆ. ಇನ್ನು ಮುಂದೆ ನೀವು ಜಿಮ್ ಗೆ ತೆರಳುವ ಬದಲು ಸ್ವಲ್ಪ ಹಾಸಿಗೆ ಕಡೆ ತಿರುಗಿ ನೋಡಿ.

Most Read:ಮುಟ್ಟಿನ ದಿನಗಳಲ್ಲಿ ಸೆಕ್ಸ್ ನಡೆಸುವುದು ಸುರಕ್ಷಿತವೇ?

ನಿಮಗೆ ಯೌವನ ನೀಡುವುದು

ನಿಮಗೆ ಯೌವನ ನೀಡುವುದು

ಪ್ರತಿದಿನವೂ ತುಂಬಾ ತಾಜಾ ಹಾಗೂ ಆತ್ಮವಿಶ್ವಾಸದಿಂದ ಇರಬೇಕೆಂದು ಪ್ರತಿಯೊಬ್ಬರು ಬಯಸುವರು. ಸೆಕ್ಸ್ ಶ್ರೇಷ್ಠವಾಗಿ ನಿಮಗೆ ನೆರವಾಗುವುದು. ಲೈಂಗಿಕ ಕ್ರಿಯೆ ವೇಳೆ ಬಿಡುಗಡೆಯಾಗುವಂತಹ ಈಸ್ಟ್ರೋಜನ್ ನೀವು ಹದಿಹರೆಯದವರಂತೆ ಮತ್ತು ಸುಂದರವಾಗಿ ಕಾಣಲು ನೆರವಾಗುವುದು. ಇದು ಒಣ ಚರ್ಮ, ಮೊಡವೆ ನಿವಾರಣೆ ಮಾಡಿಕೊಂಡು, ಚರ್ಮಕ್ಕೆ ತೇವಾಂಶ ನೀಡುವುದು. ಇದರಿಂದ ನೆರಿಗೆ ತಡೆಯುವುದು. ಸೆಕ್ಸ್ ರಕ್ತಸಂಚಾರವನ್ನು ಸುಧಾರಿಸುವುದು. ಆರೋಗ್ಯಕರ ರಕ್ತಸಂಚಾರವು ಮುಖಕ್ಕೆ ಕಾಂತಿ ಹಾಗೂ ಸೌಂದರ್ಯ ನೀಡುವುದು. ಇದರಿಂದ ನೀವು ಮುಂಜಾನೆ ಬೇರೆ ಕೆಲಸವನ್ನು ಆರಂಭಿಸುವ ಮೊದಲು ಸೆಕ್ಸ್ ನಲ್ಲಿ ತೊಡಗಿಸಿಕೊಂಡರೆ ಒಳ್ಳೆಯದು.

ಅನ್ಯೋನ್ಯತೆ ಹೆಚ್ಚಿಸುವುದು

ಅನ್ಯೋನ್ಯತೆ ಹೆಚ್ಚಿಸುವುದು

ಲೈಂಗಿಕ ಕ್ರಿಯೆ ಬಳಿಕ ನಿಮ್ಮ ಸಂಗಾತಿ ಜತೆಗೆ ಹೆಚ್ಚು ಅನ್ಯೋನ್ಯತೆಯಿಂದ ಇರಲು ಹೇಗೆ ಸಾಧ್ಯ ಎಂದು ನಿಮಗೆ ತಿಳಿದಿದೆಯಾ? ಲೈಂಗಿಕ ಕ್ರಿಯೆ ವೇಳೆ ಬಿಡುಗಡೆಯಾಗುವಂತಹ ಒಕ್ಸಿಟಾಸಿನ್ ಎನ್ನುವ ರಾಸಾಯನಿಕವು ಒಂದಾಗುವಿಕೆ ಮತ್ತು ಅನ್ಯೋನ್ಯತೆಯ ಭಾವನೆ ಹೆಚ್ಚಿಸುವುದು. ಹೆರಿಗೆ ಬಳಿಕ ತಾಯಿ ಹಾಗೂ ಮಗುವಿನ ನಡುವಿನ ಬಾಂಧವ್ಯವನ್ನು ಹೆಚ್ಚಿಸುವುದು ಕೂಡ ಒಕ್ಸಿಟಾಸಿನ್ ಎನ್ನುವ ರಾಸಾಯನಿಕ. ಪ್ರೀತಿಯಿಂದ ಮತ್ತು ಅನ್ಯೋನ್ಯತೆಯಿಂದ ದಿನದ ಆರಂಭ ಮಾಡುವುದು ಯಾರಿಗೆ ಬೇಡ ಹೇಳಿ?

 ಫಲವತ್ತತೆ ಸುಧಾರಣೆ

ಫಲವತ್ತತೆ ಸುಧಾರಣೆ

ನೀವು ಮಗುವನ್ನು ಪಡೆಯಲು ಬಯಸಿರುವಿರಾದರೆ ಆಗ ಮುಂಜಾನೆ ವೇಳೆ ಸೆಕ್ಸ್ ನಲ್ಲಿ ತೊಡಗಿಕೊಳ್ಳಿ. ನಿದ್ರೆಯಿಂದ ಎದ್ದ ಬಳಿಕ ಸೆಕ್ಸ್ ನಲ್ಲಿ ತೊಡಗಿಕೊಳ್ಳುವುದರಿಂದ ಫಲವತ್ತತೆಯು ಹೆಚ್ಚಾಗುವುದು. ಯಾಕೆಂದರೆ ಟೆಸ್ಟೊಸ್ಟೆರಾನ್ ಮಟ್ಟವು ಮುಂಜಾನೆ ವೇಳೆ ಅಧಿಕವಾಗಿರುವುದು. ನಿಯಮಿತವಾಗಿ ಮಾಡುವಂತಹ ಸೆಕ್ಸ್ ನಿಂದಾಗಿ ವೀರ್ಯಾಣುವಿನ ಹಾನಿಯು ಕಡಿಮೆಯಾಗುವುದು. ಆದರೆ ಮುಂಜಾನೆಯ ಸೆಕ್ಸ್ ಗೆ ಇದು ದೃಢಪಟ್ಟಿಲ್ಲ.

Most Read:ಥಾಯ್ಲೆಂಡ್‌ನಲ್ಲಿ ಶಿಶ್ನ ಬಿಳಿಯಾಗಿಸುವ ಟ್ರೆಂಡ್ ಸಿಕ್ಕಾಪಟ್ಟೆ ಫೇಮಸ್ ಅಂತೆ!!

 ಋತುಚಕ್ರದ ಸೆಳೆತ ನಿವಾರಣೆ

ಋತುಚಕ್ರದ ಸೆಳೆತ ನಿವಾರಣೆ

ಋತುಚಕ್ರದ ವೇಳೆ ಸೆಳೆತ, ಮನಸ್ಥಿತಿ ಬದಲಾವಣೆ ಮತ್ತು ಇತರ ಕೆಲವೊಂದು ಸಮಸ್ಯೆಗಳು ಕಾಣಿಸಬಹುದು. ಕೆಲವೊಂದು ತಜ್ಞರ ಪ್ರಕಾರ ಸೆಕ್ಸ್ ನಿಂದಾಗಿ ಋತುಚಕ್ರದ ಸೆಳೆತವು ಕಡಿಮೆಯಾಗುವುದು. ಆದರೆ ಇದನ್ನು ಸಾಬೀತುಮಾಡಲು ವೈಜ್ಞಾನಿಕ ಸಾಕ್ಷಿಗಳಿಲ್ಲ. ಕೆಲವು ಮಹಿಳೆಯರು ಇದನ್ನು ದೃಢಪಡಿಸಿದ್ದಾರೆ. ಋತುಚಕ್ರದಲ್ಲಿದ್ದರೆ ಆಗ ಮುಂಜಾನೆ ಸೆಕ್ಸ್ ನಲ್ಲಿ ತೊಡಗಿಕೊಳ್ಳುವುದು ತುಂಬಾ ಒಳ್ಳೆಯದು. ಇದು ನೋವನ್ನು ಕಡಿಮೆ ಮಾಡಿಕೊಂಡು, ಮುಂದಿನ ಮೂರು ದಿನಕ್ಕೆ ನಿಮ್ಮ ತಯಾರಾಗಿಟ್ಟುಕೊಳ್ಳುವುದು. ಋತುಚಕ್ರದ ವೇಳೆ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಉತ್ತಮ ಭಾವನೆಯಾಗುವುದು. ಇದಕ್ಕೆ ಬೇಡವೆನ್ನಲು ಕಾರಣವೇ ಇಲ್ಲ.

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ...

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ...

ದಂಪತಿಗಳು ಲೈಂಗಿಕ ಕ್ರಿಯೆಗೆ ಮೊದಲು ಮತ್ತು ನಂತರ ಜನನಾಂಗಗಳನ್ನು ಸ್ವಚ್ಛಗೊಳಿಸಿಕೊಂಡು ತಮ್ಮನ್ನು ತಾವು ಸೋಂಕುಗಳಿಂದ ಕಾಪಾಡಿಕೊಳ್ಳುವುದು ಅತ್ಯಗತ್ಯ. ಮಹಿಳೆಯರು ಸಹ ಸಂಭೋಗದ ನಂತರ ಮೂತ್ರ ವಿಸರ್ಜನೆ ಮಾಡಿ, ತಮ್ಮ ಜನನಾಂಗದಲ್ಲಿರುವ ಸೋಂಕನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು.

For Quick Alerts
ALLOW NOTIFICATIONS
For Daily Alerts

    English summary

    Health benefits of morning sex!

    Waking up in the morning, especially if you know you’re going to have a long day ahead, isn’t the easiest task. It’s tempting to just get back in the sheets – or the sack. And giving in to this temptation might just be worth it, according to experts! Morning sex is like dessert for breakfast – and honestly, who doesn’t like dessert in bed? Here are some reasons why it might be a great idea to give your morning coffee a pass and get naughty under the sheets instead.
    ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more