For Quick Alerts
ALLOW NOTIFICATIONS  
For Daily Alerts

ಚೋಟುದ್ದ ನುಗ್ಗೆಯಲ್ಲಿದೆ ಲೆಕ್ಕಕ್ಕೆ ಸಿಗದ ಆರೋಗ್ಯ ಗುಣಗಳು!

|

ಆರೋಗ್ಯದ ವಿಷಯ ಬಂದಾಗ ನಿಸರ್ಗ ನೀಡಿರುವ ಹಸಿರು ತರಕಾರಿ ಮತ್ತು ಹಣ್ಣುಗಳಿಗಿಂತ ಉತ್ತಮ ಆಹಾರ ಇನ್ನೊಂದಿಲ್ಲ. ಆದರೆ ಪ್ರಸ್ತುತ ಜಗತ್ತಿನಲ್ಲಿ ಆಹಾರ ಕಣ್ಣಿಗೆ ಆಕರ್ಷಕವಾಗಿ, ನಾಲಿಗೆಗೆ ರುಚಿಕರವಾಗಿ, ಅದಕ್ಕೂ ಮಿಗಿಲಾಗಿ ಪ್ರತಿಷ್ಠೆ ಹೆಚ್ಚಿಸುವಂತಿದ್ದರೆ ಮಾತ್ರವೇ ಇದರಿಂದ ಲಾಭ ಮಾಡಿಕೊಳ್ಳಲು ಸಾಧ್ಯ ಎಂಬ ಭಾವನೆ ದಟ್ಟವಾಗಿದೆ. ಈ ಅಬ್ಬರದಲ್ಲಿ ನೈಸರ್ಗಿಕ ಆಹಾರಗಳು ಬೇಡಿಕೆ ಕಳೆದುಕೊಂಡಿವೆ.

ಜನರಿಗೆ ಸಮಯವೇ ಇಲ್ಲವಾಗಿ ಸಿದ್ಧರೂಪದಲ್ಲಿ ಸಿಗುವ ಅನಾರೋಗ್ಯಕರ ಸಿದ್ದ ಆಹಾರಗಳನ್ನೇ ಸೇವಿಸಬೇಕಾಗಿ ಬಂದಿದೆ. ತನ್ಮೂಲಕ ಆರೋಗ್ಯಕರ ದೇಹಕ್ಕೆ ಅಗತ್ಯವಾದ ವಿಟಮಿನ್ನುಗಳು ಹಾಗೂ ಖನಿಜಗಳು ಸಿಗದೇ ಹೋಗುತ್ತವೆ ಹಾಗೂ ಅವುಗಳ ಸ್ಥಳದಲ್ಲಿ ಅನಾರೋಗ್ಯಕರ ಕೊಬ್ಬು ಮತ್ತು ಭಾರೀ ಪ್ರಮಾಣದ ಕಾರ್ಬೋಹೈಡ್ರೇಟುಗಳು ಮತ್ತು ಕೊಬ್ಬು ಆಗಮಿಸುತ್ತವೆ. ನಾವು ಸೇವಿಸುವ ಆಹಾರದಲ್ಲಿ ಎಷ್ಟು ತರಕಾರಿ ಇದೆ ಎಂಬುದನ್ನು ಕಂಡುಕೊಳ್ಳುವುದು ಕಷ್ಟ.

ಆದರೆ ಆರೋಗ್ಯ ಉಳಿಸಿಕೊಳ್ಳಬೇಕೆಂದರೆ ವರ್ಷವಿಡೀ ಸಿಗುವ ಕೆಲವು ತರಕಾರಿಗಳನ್ನು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಲೇಬೇಕು. ನುಗ್ಗೇಕಾಯಿ ಇಂತಹ ಒಂದು ಆರೋಗ್ಯಕರವಾದ ತರಕಾರಿಯಾಗಿದೆ. ಭಾರತದ ಹಲವು ಅಡುಗೆಗಳಲ್ಲಿ, ದಕ್ಷಿಣ ಭಾರತದ ಸಾಂಬಾರ್ ನಲ್ಲಿ ಕಡ್ಡಾಯ ಎಂಬಂತೆ ನುಗ್ಗೇಕಾಯಿಯನ್ನು ಬಳಸಲಾಗುತ್ತದೆ.

ಆರೋಗ್ಯ ಚೆನ್ನಾಗಿರಲು ನುಗ್ಗೆಕಾಯಿ ಸೇವಿಸಲೇಬೇಕು!

ಆರೋಗ್ಯ ಚೆನ್ನಾಗಿರಲು ನುಗ್ಗೆಕಾಯಿ ಸೇವಿಸಲೇಬೇಕು!

ನುಗ್ಗೇಕಾಯಿಯ ಆರೋಗ್ಯಕರ ಗುಣಗಳು ನಮಗೊಂದು ವರದಾನವಿದ್ದಂತಿವೆ. ಆರೋಗ್ಯ ಚೆನ್ನಾಗಿರಲು ಈ ಗುಣಗಳು ನೆರವಾಗುತ್ತವೆ ಹಾಗೂ ನಡುನಡುವೆ ಸೇವಿಸುವ ಸಿದ್ದ ಆಹಾರಗಳಿಂದ ಆರೋಗ್ಯ ಕೆಡದಂತೆ ರಕ್ಷಣೆಯನ್ನೂ ನೀಡುತ್ತದೆ. ನೀವು ಸಾಮಾನ್ಯವಾಗಿ ಹೆಸರಿಸುವ ಎಲ್ಲಾ ಪೋಷಕಾಂಶಗಳು ಇದರಲ್ಲಿವೆ. Moringa oleifera ಎಂಬ ವೈಜ್ಞಾನಿಕ ಹೆಸರಿನ ಈ ತರಕಾರಿಯಲ್ಲಿ ಏನೇನಿದೆ ಎಂಬುದನ್ನು ನೋಡೋಣ. ಇದನ್ನು ನೋಡಿದ ಬಳಿಕ ಸಾಂಬಾರಿನಲ್ಲಿ ನಮ್ಮ ಹಿರಿಯರೇಕೆ ನುಗ್ಗೇಕಾಯಿಯನ್ನು ಕಡ್ಡಾಯವಾಗಿ ಹಾಕುತ್ತಾ ಬಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ತಾನಾಗಿಯೇ ದೊರಕುತ್ತದೆ....

ಅತಿಹೆಚ್ಚಿನ ಓಲಿಕ್ ಆಮ್ಲದ ಪ್ರಮಾಣ

ಅತಿಹೆಚ್ಚಿನ ಓಲಿಕ್ ಆಮ್ಲದ ಪ್ರಮಾಣ

ನುಗ್ಗೇಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಓಲಿಕ್ ಆಮ್ಲ (Oleic acid) ಇದೆ. ಇದೊಂದು ಏಕ-ಅಪರ್ಯಾಪ್ತ ಕೊಬ್ಬಿನ ಆಮ್ಲವಾಗಿದ್ದು (monounsaturated fatty acid) ದೇಹಕ್ಕೆ ಅವಶ್ಯಕವಾಗಿ ಬೇಕಾದ ಪೋಷಕಾಂಶವಾಗಿದೆ.

ಅಧಿಕ ವಿಟಮಿನ್ ಸಿ ಮಟ್ಟ

ಅಧಿಕ ವಿಟಮಿನ್ ಸಿ ಮಟ್ಟ

ನುಗ್ಗೇಕಾಯಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ. ಇದೆ. ನುಗ್ಗೇಕಾಯಿ ಆರೋಗ್ಯಕ್ಕೆ ಒಳ್ಳೆಯದು ಎಂಬ ಹೆಗ್ಗಳಿಕೆಗೆ ಈ ವಿಟಮಿನ್ನೇ ಕಾರಣ. ಈ ವಿಟಮಿನ್ ನಮ್ಮ ರೋಗ ನಿರೋಧಕ ಶಕ್ತಿ ಸಕ್ಷಮವಾಗಿರಲು ಅತ್ಯಂತ ಅವಶ್ಯಕವಾಗಿದ್ದು ಹಲವಾರು ರೋಗಗಳ ವಿರುದ್ದ ರಕ್ಷಣೆ ಒದಗಿಸುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಎದುರಾಗುವ ಶೀತದಿಂದ ರಕ್ಷಣೆ ನೀಡುತ್ತದೆ. ಒಂದು ವೇಳೆ ಶೀತದಿಂದ ಮೂಗು ಕಟ್ಟಿಕೊಂಡಿದ್ದು ಕಿವಿಯೂ ಮುಚ್ಚಿದ್ದರೆ ಕೆಲವು ನುಗ್ಗೇಕಾಯಿಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಇದರಿಂದ ಹೊಮ್ಮುವ ಆವಿಯನ್ನು ದೀರ್ಘ ಉಸಿರಾಟದ ಮೂಲಕ ಒಳಗೆಳೆದುಕೊಳ್ಳಬೇಕು. ಇದರಿಂದ ಗಂಟಲು ಮೂಗಿನ ಒಳಭಾಗದಲ್ಲಿ ಕಟ್ಟಿಕೊಂಡಿದ್ದ ಕಫ ನಿವಾರಣೆಯಾಗಿ ಮೂಗು ತೆರೆದುಕೊಳ್ಳುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ಅಸ್ತಮಾದಂತಹ ಕೆಲವಾರು ಉಸಿರಾಟದ ತೊಂದರೆಗಳನ್ನೂ ಗುಣಪಡಿಸಲು ನೆರವಾಗುತ್ತದೆ.

Most Read: ಹಲ್ಲು ನೋವಿಗೆ ಆಯುರ್ವೇದ ಚಿಕಿತ್ಸೆ-ಒಂದೆರಡು ಗಂಟೆಯಲ್ಲಿಯೇ ನಿಯಂತ್ರಣಕ್ಕೆ!

ಖನಿಜಗಳ ಗಣಿಯಾಗಿದೆ

ಖನಿಜಗಳ ಗಣಿಯಾಗಿದೆ

ನುಗ್ಗೇಕಾಯಿಯಲ್ಲಿ ದೇಹದ ಪ್ರಾಥಮಿಕ ಕೆಲಸಗಳನ್ನು ನಿರ್ವಹಿಸಲು ಅಗತ್ಯವಾದ ಹಲವಾರು ಖನಿಜಗಳಿವೆ. ವಿಶೇಷವಾಗಿ ಮೂಳೆಗಳನ್ನು ದೃಢಗೊಳಿಸಲು ಅಗತ್ಯವಾಗಿರುವ ಕ್ಯಾಲ್ಸಿಯಂ, ರಕ್ತಹೀನತೆಯನ್ನು ಹೋಗಲಾಡಿಸಲು ಕಬ್ಬಿಣ ಹಾಗೂ ಇತರ ಖನಿಜಗಳಾದ ಮ್ಯಾಂಗನೀಸ್, ಮೆಗ್ನೇಶಿಯಂ ಹಾಗೂ ಸೆಲೆನಿಯಂಗಳು ಉತ್ತಮ ಪ್ರಮಾಣದಲ್ಲಿವೆ.

ಉತ್ತಮ ಕಾಮೋತ್ತೇಜಕವೂ ಆಗಿದೆ

ಉತ್ತಮ ಕಾಮೋತ್ತೇಜಕವೂ ಆಗಿದೆ

ನುಗ್ಗೇಕಾಯಿ ಉತ್ತಮ ಕಾಮೋತ್ತೇಜಕವಾಗಿದ್ದು ಸಾವಿರಾರು ವರ್ಷಗಳಿಂದ ಭಾರತದಲ್ಲಿ ಬಳಸಲ್ಪಡುತ್ತಾ ಬಂದಿದೆ. ವಿಶೇಷವಾಗಿ ಪುರುಷರಲ್ಲಿ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ.

ಗರ್ಭವತಿಯರಿಗೂ ಉತ್ತಮವಾಗಿದೆ

ಗರ್ಭವತಿಯರಿಗೂ ಉತ್ತಮವಾಗಿದೆ

ನುಗ್ಗೇಕಾಯಿಯ ರಸ ಗರ್ಭವತಿಯರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಇದು ಹೆರಿಗೆಯ ಸಮಯದಲ್ಲಿ ಎದುರಾಗುವ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ಹೆರಿಗೆಯ ಬಳಿಕ ಎದುರಾಗುವ ದೈಹಿಕ ತೊಂದರೆಗಳನ್ನೂ ಶೀಘ್ರವೇ ಗುಣಪಡಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಬಾಣಂತಿಯರಿಗೂ ಈ ರಸ ಉತ್ತಮವಾಗಿದ್ದು ಎದೆಹಾಲಿನ ಉತ್ಪತ್ತಿ ಹೆಚ್ಚುತ್ತದೆ.

Most Read: ಅದೃಷ್ಟ ನಿಮ್ಮ ಕೈಹಿಡಿಯಬೇಕೇ? ಹಾಗಾದರೆ ಈ 5 ವಸ್ತುಗಳು ನಿಮ್ಮ ಬಳಿ ಇರಲಿ

ವಿಟಮಿನ್ ಬಿ ಕಾಂಪ್ಲೆಕ್ಸ್ ನಿಂದ ಸಮೃದ್ಧವಾಗಿದೆ

ವಿಟಮಿನ್ ಬಿ ಕಾಂಪ್ಲೆಕ್ಸ್ ನಿಂದ ಸಮೃದ್ಧವಾಗಿದೆ

ನುಗ್ಗೆ ಕಾಯಿ ಹಾಗೂ ನುಗ್ಗೆಯ ಎಲೆಗಳಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಗಳಾದ ವಿಟಮಿನ್ ಬಿ೬, ನಿಯಾಸಿನ್, ರೈಬೋಫ್ಲೇವಿನ್ ಹಾಗೂ ಫೋಲಿಕ್ ಆಮ್ಲಗಳು ಸಮೃದ್ದವಾಗಿವೆ. ಈ ಎಲ್ಲಾ ಪೋಷಕಾಂಶಗಳು ಜೀರ್ಣಕ್ರಿಯೆಯಲ್ಲಿ ತಮ್ಮದೇ ಆದ ಕಾರ್ಯವನ್ನು ನಿರ್ವಹಿಸುತ್ತವೆ. ಇವು ಸಂಕೀರ್ಣ ಕೊಬ್ಬು,ಪ್ರೋಟೀನುಗಳು ಹಾಗೂ ಕಾಬ್ರೋಹೈಡ್ರೇಟುಗಳನ್ನು ಒಡೆದು ಸರಳ ಸಂಯುಕ್ತಗಳಾಗಿಸುತ್ತವೆ.

ವೃದ್ಧಾಪ್ಯವನ್ನು ತಡವಾಗಿಸುತ್ತದೆ

ವೃದ್ಧಾಪ್ಯವನ್ನು ತಡವಾಗಿಸುತ್ತದೆ

ನುಗ್ಗೇಕಾಯಿಯಲ್ಲಿ ವಿಟಮಿನ್ ಎ ಉತ್ತಮ ಪ್ರಮಾಣದಲ್ಲಿದ್ದು ತ್ವಚೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಸೌಂದರ್ಯ ಪ್ರಸಾದನಗಳಲ್ಲಿ ವಿಟಮಿನ್ ಎ ಕಡ್ಡಾಯವಾಗಿ ಬಳಸಲಾಗುತ್ತದೆ. ನಿಯಮಿತವಾಗಿ ನುಗ್ಗೇಕಾಯಿ ಅಥವಾ ಎಲೆಗಳನ್ನು ಸೇವಿಸುತ್ತಾ ಬರುವ ಮೂಲಕ ಈ ದುಬಾರಿ ಸೌಂದರ್ಯ ಪ್ರಸಾಧನಗಳನ್ನು ಕೊಂಡುಕೊಳ್ಳುವ ಅವಶ್ಯಕತೆಯೇ ಇಲ್ಲದೇ ಇದಕ್ಕಾಗಿ ಸುರಿಯುವ ಹಣವನ್ನು ಉಳಿಸಬಹುದು. ಅಲ್ಲದೇ ಈ ಪೋಷಕಾಂಶ ಕಣ್ಣಿನ ದೃಷ್ಟಿ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಬಲಪಡಿಸುತ್ತದೆ.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ನುಗ್ಗೇಕಾಯಿಯ ಸೇವನೆಯಿಂದ ಚರ್ಮಕ್ಕೆ ನೇರವಾಗಿ ಲಾಭ ಇಲ್ಲದಿದ್ದರೂ ಇದರೊಂದಿಗೆ ಬೇರೆ ಆಹಾರಗಳನ್ನು ಸೇವಿಸುವ ಮೂಲಕ ಖಂಡಿತಾ ಲಾಭವಿದೆ. ನುಗ್ಗೆರಸ ಮತ್ತು ಲಿಂಬೆರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಚರ್ಮಕ್ಕೆ ಹಚ್ಚಿಕೊಳ್ಳುವ ಮೂಲಕ ಬ್ಲಾಕ್ ಹೆಡ್, ಮೊಡವೆ ಮತ್ತು ಚರ್ಮ ಕೆಂಪಗಾಗುವ ತೊಂದರೆಗಳನ್ನು ನಿವಾರಿಸಬಹುದು. ಅಲ್ಲದೇ ಈ ರಸವನ್ನು ತೆಳ್ಳಗೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ಚರ್ಮದ ಕಾಂತಿಯೂ ಹೆಚ್ಚುತ್ತದೆ.

Most Read: ನೇರಳೆ ಹಣ್ಣು: ರುಚಿಗಷ್ಟೇ ಅಲ್ಲ, ಅನೇಕ ಕಾಯಿಲೆ ನಿವಾರಿಸುವ ಔಷಧಿಯೂ ಹೌದು!

ರಕ್ತ ಶುದ್ಧೀಕರಿಸುತ್ತದೆ

ರಕ್ತ ಶುದ್ಧೀಕರಿಸುತ್ತದೆ

ನುಗ್ಗೇಕಾಯಿ ಹಾಗೂ ಎಲೆಗಳು ಈ ಗುಣದಿಂದಾಗಿಯೇ ಹೆಚ್ಚಿನ ಮಹತ್ವ ಪಡೆದಿವೆ. ಈ ಗುಣವನ್ನು ಗರಿಷ್ಟ ಪ್ರಮಾಣದಲ್ಲಿ ಪಡೆಯಲು ನುಗ್ಗೇಕಾಯಿ ಅಥವಾ ಎಲೆಗಳ ಸೂಪ್ ಮಾಡಿಕೊಂಡು ಕುಡಿಯಬೇಕು. ಇದರಿಂದ ರಕ್ತ ಶುದ್ಧೀಕರಣಗೊಂಡು ಮೊಡವೆಗಳು ಹಾಗೂ ಇತರ ಸಂಬಂಧಿತ ತೊಂದರೆಗಳು ಎದುರಾಗುವುದರಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೇ ಇದೊಂದು ಉತ್ತಮ ಪ್ರತಿಜೀವಕ (ಆಂಟಿ ಬಯೋಟಿಕ್) ನಂತೆಯೂ ಕಾರ್ಯನಿರ್ವಹಿಸ್ತುತದೆ. ಮೊಡವೆಗಳನ್ನು ಕಡಿಮೆ ಮಾಡಲು ಇದರ ರಸವನ್ನು ನೇರವಾಗಿ ಹಚ್ಚಿಕೊಳ್ಳಬಹುದು ಹಾಗೂ ಸೇವಿಸಲೂಬಹುದು.

Most Read: ಕಡ್ಲೆಹಿಟ್ಟು ಬೋಂಡಾ ಮಾಡುವುದಕ್ಕೆ ಮಾತ್ರವಲ್ಲ-ಆರೋಗ್ಯಕ್ಕೂ ಬಲು ಉಪಕಾರಿ!

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ

ವಯಸ್ಸಾದಂತೆ ಕಣ್ಣಿನ ದೃಷ್ಟಿ ಕುಂದಲು ಕಣ್ಣಿನ ಅಕ್ಷಿಪಟಲದ ಸೋಂಕು ಸಹಾ ಒಂದು ಕಾರಣ. ನುಗ್ಗೇಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಈ ಸೋಂಕು ತಗಲುವ ಸಂಭವ ಕಡಿಮೆಯಾಗಿ ಅಕ್ಷಿಪಟಲದ ಕ್ಷಮತೆಯನ್ನು ಉಳಿಸಿಕೊಳ್ಳುತ್ತದೆ. ಪರಿಣಾಮವಾಗಿ ಬಹಳ ವರ್ಷಗಳವರೆಗೆ ಕನ್ನಡಕ ಉಪಯೋಗಿಸುವ ಸಾಧ್ಯತೆಯನ್ನು ಮುಂದೆ ಹಾಕಬಹುದು.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ನುಗ್ಗೇಕಾಯಿ ಮಧುಮೇಹಿಗಳೂ ಸುರಕ್ಷಿತವಾಗಿ ಸೇವಿಸಬಹುದಾದ ಆಹಾರವಾಗಿದ್ದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸಲು ಸಹಕರಿಸುತ್ತದೆ.

English summary

Health Benefits Of Drumsticks which should surprise you

The health benefits of drumstick come as a blessing. It is one such vegetable that not only ensures that you stay healthy; it also wards off the probability of any other illness cropping up due to junk in take. It is loaded with all possible nutrients that you can think of. It contains all the vital minerals, vitamins, fatty acids and proteins needed for better health. One among the most beneficial vegetables is drumstick (scientifically called as Moringa oleifera). Let's talk about what it has to give. With these health benefits of drumsticks, it undoubtedly does qualify in the list of veggies that you must add to your daily diet.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more