For Quick Alerts
ALLOW NOTIFICATIONS  
For Daily Alerts

ರಂಜಾನ್‌ ಉಪವಾಸ ಆರೋಗ್ಯಕ್ಕೆ ಲಾಭವೂ ಇದೆ-ತೊಂದರೆಯೂ ಇದೆ!

By Sushma Charhra
|

ರಂಜಾನ್ ತಿಂಗಳಲ್ಲಿ, ವಿಶ್ವದಾದ್ಯಂತ ಮಿಲಿಯನ್ ನಷ್ಟು ಮುಸ್ಲೀಂಮರು ಈ ಹೋಲಿ ತಿಂಗಳಲ್ಲಿ ಉಪವಾಸವಿರುತ್ತಾರೆ.. ರಂಜಾನ್ ನಲ್ಲಿ, ಇಸ್ಲಾಂ ಧರ್ಮದ ಪಾಲಕರು ಹಗಲಿನಲ್ಲಿ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಈ ಲೇಖನದಲ್ಲಿ ನಾವು ರಂಜಾನ್ ನ ಉಪವಾಸದಿಂದಾಗುವ ಆರೋಗ್ಯ ಲಾಭಗಳು ಮತ್ತು ತೊಂದರೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಮುಸ್ಲಿಂ ಬಾಂಧವರು ತಮ್ಮ ಮನಸ್ಸು ಮತ್ತು ದೇಹವನ್ನು ಈ ತಿಂಗಳಲ್ಲಿ ಸಿದ್ಧಗೊಳಿಸಿಕೊಂಡಿರುತ್ತಾರೆ ಆ ಮೂಲಕ ಅವರು ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸದಂತೆ ನೋಡಿಕೊಳ್ಳುತ್ತಾರೆ. ಆದರೆ ಉಪವಾಸವನ್ನು ಗಣನೆಗೆ ತೆಗೆದುಕೊಂಡರೆ , ಹಲವಾರು ರೀತಿಯ ಅಂದರೆ ಎದೆಯುರಿ ಸಮಸ್ಯೆ, ಡಿಹೈಡ್ರೇಷನ್, ಮತ್ತು ಕಿರಿಕಿರಿಯಂತ ಅನಾರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆಗಳಿರುತ್ತದೆ. ಅಷ್ಟೇ ಅಲ್ಲ, ಇದರಿಂದಾಗಿ ತೂಕ ಇಳಿಕೆ, ರಕ್ತದ ಒತ್ತಡದಲ್ಲಿ ಇಳಿಕೆ, ಡಯಾಬಿಟೀಸ್ ನಿಯಂತ್ರಣ, ಸ್ನಾಯುವಿನ ಬಲವನ್ನು ಸಂರಕ್ಷಿಸುವಿಕೆ ಇತ್ಯಾದಿಗಳಿಗೂ ಇದು ಕಾರಣವಾಗಬಹುದು.

ramadan

ದೇಹವು ಈ ಸಂದರ್ಭದಲ್ಲಿ ಅಂದರೆ ರಂಜಾನ್ ತಿಂಗಳಲ್ಲಿ ಹಲವು ಹಂತಗಳನ್ನು ಎದುರಿಸುತ್ತದೆ ಯಾಕೆಂದರೆ ಬೇರೆಬೇರೆ ರೀತಿಯ ಆಹಾರ ಕ್ರಮ ಮತ್ತು ಬೇರೆಬೇರೆ ರೀತಿಯ ಪಾನೀಯ ಸೇವನೆ ಇದಕ್ಕೆ ಕಾರಣವಿರಬಹುದು. ಇದರಿಂದಾಗಿ, ಎಂಡಾರ್ಫಿನ್ಗಳ ಲೆವೆಲ್ ರಕ್ತದಲ್ಲಿ ಅಧಿಕವಾಗುತತೆ ಮತ್ತು ನಿಮ್ಮನ್ನು ಹೆಚ್ಚು ಎಚ್ಚರದಿಂದ ಇರುವಂತೆ ಮತ್ತು ಖುಷಿಯಾಗಿ ಇರುವಂತೆ ಅಷ್ಟೇ ಯಾಕೆ, ನಿಮ್ಮ ಮಾನಸಿಕ ಆರೋಗ್ಯವೂ ಒಳ್ಳೆಯ ರೀತಿಯಲ್ಲಿ ಇರಲು ನೆರವಾಗುತ್ತದೆ.

ರಂಜಾನ್ ನ ಉಪವಾಸದಿಂದಾಗುವ ಆರೋಗ್ಯ ಲಾಭಗಳು ಮತ್ತು ತೊಂದರೆಗಳ ಬಗ್ಗೆ ಒಂದು ನೋಟ ಇಲ್ಲಿದೆ ನೋಡಿ..

1. ತೂಕವನ್ನು ಇಳಿಸಿಕೊಳ್ಳಲು ಸಹಕಾರಿ
2. ರಕ್ತದ ಸಕ್ಕರೆಯಂಶದ ನಿಯಂತ್ರಣ
3. ಇದು ಹೆಚ್ಚಿನ ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತೆ
4. ಸ್ನಾಯುವಿನ ಬಲವನ್ನು ಸಂರಕ್ಷಿಸುತ್ತದೆ
5. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
6. ಇದು ಉರಿಯೂತದ ಪ್ರತಿಕ್ರಿಯೆಯನ್ನು ಪರಿಹರಿಸುತ್ತದೆ
7. ಮೆದುಳಿನ ಕಾರ್ಯಚಟುವಟಿಕೆಯನ್ನು ಹೆಚ್ಚಿಸುತ್ತದೆ
8. ಮಾನಸಿಕ ಸ್ಪಷ್ಟತೆ ನೀಡುತ್ತದೆ

1. ತೂಕವನ್ನು ಇಳಿಸಿಕೊಳ್ಳಲು ಸಹಕಾರಿ

ಅತಿಯಾದ ತೂಕವಿರುವವರು ಅರ್ಥಾತ್ ಅತಿಯಾದ ಬೊಜ್ಜು ಹೊಂದಿರುವವರು ಈ ತಿಂಗಳಿನಲ್ಲಿ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಹಾಗಂತ ರಂಜಾನ್ ಬೇಕಂತಲೆ ತೂಕ ನಷ್ಟಕ್ಕೆ ಕಾರಣವಾಗುವುದಿಲ್ಲ. ಯಾವ ಜನರು ಆರೋಗ್ಯಯುತವಾದ ಬೆಳಗಿನ ಡಯಟ್ ಮತ್ತು ಸಂಜೆಯ ಡಯಟ್ ಪಾಲಿಸುತ್ತಾರೋ ಅವರು ಅಂದರೆ, ಸೂಪ್, ತಾಜಾ ಬ್ರೆಡ್, ಖರ್ಜೂರ, ಮತ್ತು ಹಣ್ಣುಗಳನ್ನು ಸೇವಿಸುತ್ತಾರೋ ಅಂತವರು ಬೇಗನೆ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತೆ.

ಸಕ್ಕರೆ ಮತ್ತು ಬೊಜ್ಜಿನ ಆಹಾರ ಪದಾರ್ಥಗಳನ್ನು ಸೇವಿಸದೇ ತಾಜಾ ಹಣ್ಣುಗಳು , ತಾಜಾ ತರಕಾರಿಗಳು ಮತ್ತು ನೀರಿನ ಸೇವನೆಯನ್ನು ಅಧಿಕವಾಗಿರಲಿ. ಇದು ನಿಮ್ಮ ದೇಹ ತೂಕವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ..

2.ರಕ್ತದ ಸಕ್ಕರೆಯಂಶದ ನಿಯಂತ್ರಣ

ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವುದರಿಂದಾಗುವ ಒಂದು ಪ್ರಮುಖ ಲಾಭವೆಂದರೆ ಅದು ನಿಮ್ಮ ರಕ್ತದ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವು ನೀಡುತ್ತದೆ. ಉಪವಾಸವು ನಿಮ್ಮ ಗ್ಲುಕೋಸ್ ಅಂಶವನ್ನು ತಗ್ಗಿಸಿ ಕೆಳಗಿಳಿಸುತ್ತದೆ ಅರ್ಥಾತ್ ಕರಗಿಸುತ್ತದೆ ಹಾಗಾಗಿ ನಿಮ್ಮ ದೇಹಕ್ಕೆ ಶಕ್ತಿಯ ಲಭ್ಯತೆ ಆಗುತ್ತದೆ. ಇದು ನಿಮ್ಮ ಮೇಧೋಜೀರಕ ಗ್ರಂಥಿಗಳಿಗೆ ಆರಾಮ ಒದಗಿಸುತ್ತದೆ. ಗ್ಲುಕೋಸ್ ನ ಸ್ಥಗಿತವನ್ನು ಹೆಚ್ಚುಗೊಳಿಸಲು ಗ್ಲುಕೋಗನ್ ನ್ನು ತಯಾರಿಸಲಾಗುತ್ತದೆ ಮತ್ತು ಇದರ ಫಲಿತಾಂಶದಿಂದಾಗಿ ರಕ್ತದ ಸಕ್ಕರೆ ಅಂಶದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತದೆ.

ಶಾಂತಿ ಸೌಹಾರ್ದತೆಯ ಸಾರುವ-ರಂಜಾನ್ ಹಬ್ಬದ ಮಹತ್ವ

3.ಇದು ಹೆಚ್ಚಿನ ರಕ್ತದೊತ್ತಡವನ್ನು ಕಂಟ್ರೋಲ್ ಮಾಡುತ್ತೆ

ಉಪವಾಸ ಮಾಡುವ ಪರಿಣಾಮದಿಂದಾಗಿ ಆರ್ಥೆರೋಸೆಲೋರಿಸಿಸ್ ಅಂದರೆ ಅಪಧಮನಿಯ ಕಾಠಿಣ್ಯತೆಯು ಆಗುವ ಭಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಅಂದರೆ ಬೊಬ್ಬಿನ ಪದಾರ್ಥಗಳಿಂದ ಆಗುವ ಆರ್ಥೈಟಿಸ್ ಅಡಚಣೆಯು ಆಗದಂತೆ ತಡೆಯುತ್ತದೆ. ದೇಹವು ಸರಿಯಾದ ಸಮಯದ ಆಹಾರ ಮತ್ತು ನೀರನ್ನು ಕಳೆದುಕೊಳ್ಳುವುದರಿಂದಾಗಿ, ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬಿನ ಅಥವಾ ಬೊಜ್ಜಿನ ಅಂಶವು ಶಕ್ತಿಯಾಗಿ ಪರಿವರ್ತನೆಯಾಗಿ ಬಳಕೆಯಾಗುತ್ತದೆ. ಹಾಗಾಗಿ ಉಪವಾಸ ಮಾಡುವಾಗ ಚಯಾಪಚಯ ಕ್ರಿಯೆಯ ಒಟ್ಟಾರೆ ದರವು ಕಡಿಮೆಯಾಗುತ್ತದೆ. ಅಡ್ರಿನಾಲಿನ್ ಮತ್ತು ನಾನ್ಡ್ರೆನಾಲಿನ್ ಎಂಬ ಎರಡು ಹಾರ್ಮೋನುಗಳ ಸ್ರವಿಸುವಿಕೆ ಕೂಡ ಈ ಸಂದರ್ಬದಲ್ಲಿ ಕಡಿಮೆಯಾಗುತ್ತದೆ, ಇದು ನಿಮಗೆ ನಿಮ್ಮ ಚಯಾಪಚಯ ದರವು ಸರಿಯಾದ ಕ್ರಮದಲ್ಲಿ ಇರಲು ನೆರವು ನೀಡುತ್ತದೆ ಮತ್ತು ಹೆಚ್ಚಿನ ರಕ್ತದೊತ್ತಡವನ್ನು ಕಂಟ್ರೋಲ್ ನಲ್ಲಿ ಇಡಲು ನೆರವಾಗುತ್ತದೆ.

4.ಸ್ನಾಯುವಿನ ಬಲವನ್ನು ಸಂರಕ್ಷಿಸುತ್ತದೆ

ನಿಮ್ಮ ಸ್ನಾಯುಗಳಲ್ಲಿ ಸಂಗ್ರಹವಾಗಿರುವ ಬೊಜ್ಜಿನ ಅಂಶಗಳು ಈ ಉಪವಾಸದ ಸಂದರ್ಬದಲ್ಲಿ ಬಳಕೆಯಾಗುತ್ತಾ ಸಾಗುತ್ತೆ. ನೀವು ಯಾವಾಗ ಆಹಾರ ಸೇವಿಸುತ್ತಲೇ ಇರುತ್ತೀರೋ ಆಗ ನಿಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ಸ್ ಮತ್ತು ಗ್ಲುಕೋಜೆನ್( ಕೊಬ್ಬಿನ ಜೀವಕೋಶಗಳು) ಸೇರುತ್ತಲೇ ಸಾಗುತ್ತೆ, ಮತ್ತು ಇದು ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ., ಆದರೆ ರಂಜಾನ್ ನಲ್ಲಿ ಉಪವಾಸ ಕೈಗೊಳ್ಳುವುದರಿಂದಾಗಿ, ಈ ಕೊಬ್ಬಿನ ಜೀವಕೋಶಗಳು ಬಳಕೆಯಾಗುತ್ತದೆ ಮತ್ತು ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಮತ್ತು ನಿಮ್ಮ ಸ್ನಾಯುಗಳ ಬಲವನ್ನು ಸಂರಕ್ಷಿಸುತ್ತದೆ ಜೊತೆಗೆ ಹೆಚ್ಚಿನ ಬೊಜ್ಜಿನ ಅಂಶ ನಿಮ್ಮ ಸ್ನಾಯುಗಳಲ್ಲಿ ಸೇರದಂತೆ ನೋಡಿಕೊಳ್ಳುತ್ತದೆ.

5.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರಂಜಾನ್ ನಲ್ಲಿ ಉಪವಾಸ ಮಾಡುವುದರಿಂದಾಗಿ, ಜನರು ಹೆಚ್ಚಾಗಿ ಆರೋಗ್ಯದಾಯಕವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುತ್ತಾರೆ.ಇದು ಸಹಜವಾಗಿಯೇ ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು, ಟಾಕ್ಸಿನ್ ಅಂಶಗಳು ದೇಹದಿಂದ ಹೊರಹೋಗುವಂತೆ ನೋಡಿಕೊಳ್ಳುತ್ತದೆ. ಯಾವಾಗ ಖರ್ಜೂರ ಮತ್ತು ಹಣ್ಣುಗಳನ್ನು ತಿಂದು ಉಪವಾಸವನ್ನು ನಿಲ್ಲಿಸುತ್ತಾರೋ, ಆಗ ದೇಹಕ್ಕೆ ಅಗತ್ಯವಿರುವ ವಿಟಮಿನ್ಸ್ ಮತ್ತು ಮಿನರಲ್ಸ್ ಗಳು ಶೇಖರಣೆಗೊಳ್ಳುವ ಪ್ರಮಾಣ ಅಧಿಕ ಆಗುತ್ತದೆ. ವಿಟಮಿನ್ ಎ ಮತ್ತು ವಿಟಮಿನ್ ಇ ಅಂಶವು ಹೆಚ್ಚಿನ ಎಲ್ಲಾ ಹಣ್ಣುಗಳಲ್ಲೂ ಇರುತ್ತದೆ ಮತ್ತು ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವು ನೀಡುತ್ತದೆ.

6.ಇದು ಉರಿಯೂತದ ಪ್ರತಿಕ್ರಿಯೆಯನ್ನು ಪರಿಹರಿಸುತ್ತದೆ

ರಂಜಾನ್ ನಲ್ಲಿ ಉಪವಾಸ ಮಾಡುವುದರಿಂದಾಗುವ ಇನ್ನೊಂದು ದೈಹಿಕ ಲಾಭವೆಂದರೆ ದೇಹದ ಉರಿಯೂತದ ಕಾಯಿಲೆಗಳು ಮತ್ತು ಅಲರ್ಜಿಗಳನ್ನು ಪರಿಹರಿಸಲು ಇದು ನೆರವು ನೀಡುತ್ತದೆ. ಉರಿಯೂತಕ್ಕೆ ಸಂಬಂಧಿಸಿದ ಕೆಲವು ಕಾಯಿಲೆಗಳೆಂದರೆ, ಆರ್ಥೈಟೀಸ್ ಮತ್ತು ಚರ್ಮದ ಸಮಸ್ಯೆಗಳು ಅಂದರೆ ಸ್ಪೋರಿಯೋಸಿಸ್.. ಇತ್ಯಾದಿಗಳು. ತಜ್ಞರು ತಿಳಿಸುವಂತೆ ಉಪವಾಸವು ಉರಿಯೂತಕ್ಕೆ ಸಂಬಂಧಿಸಿದ ಕೆಲವು ಕಾಯಿಲೆಗಳು ಉದಾಹರಣೆಗೆ ಅಲ್ಸರೇಟಿವ್ ಕೊಲೈಟೀಸ್ ನ್ನು ನಿವಾರಿಸಲು ನೆರವು ನೀಡುತ್ತದೆ.

7.ಮೆದುಳಿನ ಕಾರ್ಯಚಟುವಟಿಕೆಯನ್ನು ಹೆಚ್ಚಿಸುತ್ತದೆ

ಹಲವಾರು ಅಧ್ಯಯನಗಳು ತಿಳಿಸಿರುವಂತೆ, ಉಪವಾಸದಿಂದಾಗಿ ಹಲವಾರು ರೀತಿಯ ಪ್ರೊಟೀನ್ ಗಳ ಉತ್ಪಾದನೆಯು ಅಧಿಕವಾಗುತ್ತದೆ ಮತ್ತು ಈ ಪ್ರೋಟೀನುಗಳು ಮೆದುಳಿನ ಕಾರ್ಯಚಟುವಟಿಕೆಗೆ ಸಾಕಷ್ಟು ನೆರವು ನೀಡುತ್ತದೆ. ಮೆದುಳಿನ ಸ್ಟೆಮ್ ಸೆಲ್ ಗಳನ್ನು ಆಕ್ಟೀವ್ ಮಾಡಲು ಮತ್ತು ಸರಿಯಾಗಿ ಕೆಲಸ ನಿರ್ವಹಿಸಲು ಈ ಪ್ರೋಟೀನ್ ಗಳು ಸಹಾಯ ಮಾಡುತ್ತೆ. ಇದೇ ಕಾರಣದಿಂದಾಗಿ ನಿಮ್ಮ ಉಪವಾಸವು, ಮೆದುಳನ್ನು ಹೆಚ್ಚು ಅಲರ್ಟ್ ಆಗಿರುವಂತೆ ನೋಡಿಕೊಳ್ಳುತ್ತದೆ.

8. ಮಾನಸಿಕ ಸ್ಪಷ್ಟತೆ ನೀಡುತ್ತದೆ

ರಂಜಾನ್ ನಲ್ಲಿ ಉಪಮಾಸ ಮಾಡುವುದರಿಂದ ಆಗುವ ಒಂದು ಮಾನಸಿಕ ಲಾಭವೆಂದರೆ, ನಿಮ್ಮ ದೇಹವು ಹೇಗೆ ಆಹಾರ ಮತ್ತು ಪಾನೀಯಗಳನ್ನು ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಮಾನಸಿಕ ಸ್ಪಷ್ಟತೆಯನ್ನು ಪಡೆಯುತ್ತದೆ. ಈ ಪ್ರಕ್ರಿಯೆಯಲ್ಲಿ, ನಿಮ್ಮ ಮೆದುಳು ಹೇಗೆ ತಾಳ್ಮೆಯಿಂದ ಇರುವುದು ಮತ್ತು ಎಲ್ಲದಕ್ಕೂ ಹೊಂದಿಕೊಳ್ಳುವುದು ಎಂಬುದನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತದೆ. ಇದಿಷ್ಟನ್ನು ಹೊರತು ಪಡಿಸಿ ರಂಜಾನ್ ನಲ್ಲಿ ಉಪವಾಸ ಮಾಡುವುದರಿಂದಾಗಿ ಕೆಲವು ಅಪಾಯಗಳೂ ಕೂಡ ಒದಗಿ ಬರಬಹುದು. ಅವುಗಳು ಯಾವುವು ಎಂಬ ಬಗ್ಗೆ ಇಲ್ಲಿದೆ ನೋಡಿ ವಿವರ..

ರಂಜಾನ್ ಸಮಯದಲ್ಲಿ ಮಾಡುವ ಉಪವಾಸದ ಮಹತ್ವ

•ಕೆಫಿನ್ ಅಂಶವಿರುವ ಪಾನೀಯಗಳನ್ನು ರಂಜಾನ್ ನಲ್ಲಿ ಸೇವಿಸುವುದು ಆದಷ್ಟು ತಡೆಯುವುದು ಒಳ್ಳೆಯುದು ಅಷ್ಟೇ ಅಲ್ಲ, ಕಾರ್ಬೋನೆಟೆಡ್ ಪಾನೀಯಗಳೂ ಕೂಡ ಹಿತವಲ್ಲ. ಇದು ನಿಮಗೆ ಅಸಿಡಿಟಿಯ ಸಮಸ್ಯೆಯನ್ನು ತಂದೊಡ್ಡುತ್ತದೆ.
•ಸೂರ್ಯನ ಕಿರಣಗಳು ಮೈಯೊಡ್ಡುವುದನ್ನು ಆದಷ್ಟು ಕಡಿಮೆ ಮಾಡಿ ಮತ್ತು ಅತೀ ಹೆಚ್ಚು ನೀರನ್ನು ಸೇವಿಸಿ. ಹೊರಗಿನ ಅತಿಯಾದ ಬಿಸಿಲಿನಿಂದಾಗಿ ನೀವು ಡಿಹೈಡ್ರೇಷನ್ ಸಮಸ್ಯೆಯನ್ನು ಎದುರಿಸುವಂತಾಗಬಹುದು.
•ಯಾರಿಗೆ ದೊಡ್ಡ ಪ್ರಮಾಣದ ಕಿಡ್ನಿ ಸಮಸ್ಯೆ ಇರುತ್ತೋ, ಅಂತವರು ಉಪವಾಸ ಮಾಡುವುದರಿಂದಾಗಿ ಮೂತ್ರಪಿಂಡದ ಕಾರ್ಯದಲ್ಲಿ ಮತ್ತಷ್ಟು ಹಾಳಾಗಬಹುದು. ಎಚ್ಚರವಿರಲಿ.
ಈ ಲೇಖನವನ್ನು ಹಂಚಿಕೊಳ್ಳಿ! ನಿಮಗೆ ಈ ಲೇಖನ ಇಷ್ಟವಾದರೆ, ಇದನ್ನು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ.

English summary

Health Benefits And Risks Of Fasting During Ramadan

In the month of Ramadan, millions of Muslims around the world have geared up to fast during this holy month. During Ramadan, followers of Islam are required to go without any food and water from dawn till dusk. In this article, we will be writing about the risks and benefits of fasting during Ramadan.Let's have a look at the health benefits and risks of fasting during Ramadan.
Story first published: Friday, June 15, 2018, 15:03 [IST]
X
Desktop Bottom Promotion