For Quick Alerts
ALLOW NOTIFICATIONS  
For Daily Alerts

ಹಸ್ತಮೈಥುನದ ಕೆಟ್ಟ ಚಾಳಿ ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದುಗಳು

By Hemanth
|

ಸಂಗಾತಿಯಿಲ್ಲದೆ ದೇಹ ಬಯಸುವ ಕಾಮವನ್ನು ತಣಿಸಬೇಕಾದರೆ ಇರುವ ಉಪಾಯವೇ ಹಸ್ತುಮೈಥುನ. ಇದು ಸಾಮಾನ್ಯವಾಗಿ ಪ್ರತಿಯೊಬ್ಬರು ಮಾಡುವಂತಹ ಕ್ರಿಯೆ. ಆದರೆ ಹೆಚ್ಚಿನವರು ಇದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಲ್ಲ. ಈ ಕ್ರಿಯೆಯು ಜನನೇಂದ್ರೀಯವನ್ನು ಮುಟ್ಟುವುದು, ಮಹಿಳೆಯಾದರೆ ಸ್ತನಗಳು ಹಾಗೂ ತುಟಿಗಳನ್ನು ಮುಟ್ಟುವುದು ಸೇರಿದೆ. ಸಂಗಾತಿಯಿಲ್ಲದೆ ತನ್ನದೇ ಕೈಯಿಂದ ಹಸ್ತಮೈಥುನ ಮಾಡಿಕೊಳ್ಳುವುದು.

ಹಸ್ತಮೈಥುನದ ಬಯಕೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು. ಕೆಲವರು ವಾರದಲ್ಲಿ ಒಂದು ಸಲ ಹಸ್ತಮೈಥುನ ಮಾಡಿದರೆ, ಇನ್ನು ಕೆಲವರು ಪ್ರತಿನಿತ್ಯ ಮತ್ತು ದಿನದಲ್ಲಿ ಮೂರು ಸಲ ಹಸ್ತಮೈಥುನ ಮಾಡಿಕೊಳ್ಳುವವರು ಇದ್ದಾರೆ. ಆದರೆ ಯಾವುದು ಕೂಡ ಅತಿಯಾದರೆ ಅದು ವಿಷವೆನ್ನುತ್ತಾರೆ. ಅದೇ ರೀತಿ ಹಸ್ತಮೈಥುನವು ಅತಿಯಾದರೆ ಅದರಿಂದ ಹಲವಾರು ಅಡ್ಡಪರಿಣಾಮಗಳು ಇವೆ. ಕಾಮದ ಬಯಕೆ ಮತ್ತು ಇತರ ಕಾರಣಗಳಿಂದಾಗಿ ಕೆಲವರು ಹಸ್ತುಮೈಥುನದ ಗೀಳು ಅಂಟಿಸಿಕೊಂಡಿದ್ದಾರೆ.

ಹಸ್ತಮೈಥುನವು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ ಎನ್ನುವ ಬಗ್ಗೆ ಹಲವಾರು ಅಧ್ಯಯನಗಳು ನಡೆಯುತ್ತಲೇ ಇದೆ. ಈ ಲೇಖನದಲ್ಲಿ ಹಸ್ತಮೈಥುನದ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಪದೇ ಪದೇ ಹಸ್ತಮೈಥುನ ಮಾಡುವುದರಿಂದ ನೈಸರ್ಗಿಕವಾಗಿ ದೂರವಾಗುವುದು ಹೇಗೇ? ಹಸ್ತಮೈಥುನದ ಚಾಳಿಯಿಂದಾಗಿ ಏನಾಗುವುದು ಮತ್ತು ಇದರಿಂದ ಹೊರಬರಲು ಕೆಲವೊಂದು ಸಲಹೆಗಳು ಇಲ್ಲಿವೆ.

ಅತಿಯಾದ ಹಸ್ತಮೈಥುನ ಚಾಳಿಗೆ ಮನೆಮದ್ದು
ಮಿತಿಯಲ್ಲಿ ಹಸ್ತಮೈಥುನ ಮಾಡಿಕೊಂಡರೆ ಇದು ಆರಾಮ ಮತ್ತು ಸುಖಕ್ಕೆ ಆರೋಗ್ಯಕರ. ಆದರೆ ಅತಿಯಾದರೆ ಇದು ಆರೋಗ್ಯದ ಮೇಲೆ ಸಮಸ್ಯೆ ಬೀರಬಹುದು. ಅತಿಯಾದ ಹಸ್ತಮೈಥುನ ಸಮಸ್ಯೆಯಿಂದ ಹೊರಬರುವುದು ಹೇಗೆಂದು ಹಲವಾರು ಮಂದಿ ಇಂಟರ್ ನೆಟ್ ನಲ್ಲಿ ಹುಡುಕಾಡಿರಬಹುದು. ಹಸ್ತಮೈಥುನದಿಂದ ಆಗುವಂತಹ ಅಡ್ಡಪರಿಣಾಮಗಳನ್ನು ನಿವಾರಣೆ ಮಾಡಬಹುದು ಎನ್ನುವುದು ಒಳ್ಳೆಯ ಸುದ್ದಿ. ಇದಕ್ಕಾಗಿ ದೈನಂದಿನ ಜೀವನದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು. ಹಸ್ತಮೈಥುನ ಅತಿಯಾದ ಸಮಸ್ಯೆ ಪರಿಹಾರಕ್ಕೆ ನೈಸರ್ಗಿಕವಾದ ವಿಧಾನವು ತುಂಬಾ ಪರಿಣಾಮಕಾರಿ. ನೈಸರ್ಗಿಕವಾಗಿ ಹಸ್ತಮೈಥುನದ ಅತಿಯಾದ ಬಯಕೆಯಿಂದ ದೂರವಾಗುವುದು ಹೇಗೆ ಎಂದು ನೀವು ಲೇಖನ ಮುಂದಕ್ಕೆ ಓದುತ್ತಾ ತಿಳಿಯಿರಿ....

1. ನಿಮ್ಮ ಮನೋಬಲ

1. ನಿಮ್ಮ ಮನೋಬಲ

ಅತಿಯಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರೆ ಅದಕ್ಕೆ ಒಳ್ಳೆಯ ಪರಿಹಾರ ನಿಮ್ಮ ಮನೋಬಲ. ನಿಮ್ಮ ಮನೋಬಲವು ಬಲಿಷ್ಠವಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳಲಾಗುತ್ತದೆ. ನೀವು ಹಸ್ತಮೈಥುನ ಬಗ್ಗೆ ಒಂದು ದೃಢವಾದ ನಿರ್ಧಾರ ತೆಗೆದುಕೊಂಡು ಅದನ್ನು ಪಾಲಿಸಿಕೊಂಡು ಹೋಗಿ. ನಿಮ್ಮ ಒಂದು ನಿರ್ಧಾರವು ಹಸ್ತಮೈಥುನದ ಹಲವಾರು ಅಡ್ಡಪರಿಣಾಮಗಳಿಂದ ರಕ್ಷಿಸುವುದು.

2. ಹಸ್ತಮೈಥುನ ಚಾಳಿಯಿಂದ ದೂರವಾಗಲು ವ್ಯಾಯಾಮ ಮಾಡಿ

2. ಹಸ್ತಮೈಥುನ ಚಾಳಿಯಿಂದ ದೂರವಾಗಲು ವ್ಯಾಯಾಮ ಮಾಡಿ

ಹಸ್ತಮೈಥುನ ಕಡಿಮೆ ಮಾಡಿಕೊಳ್ಳಲು ನೀವು ಪ್ರತಿನಿತ್ಯ ವ್ಯಾಯಾಮ ಮಾಡಿ. ಹಸ್ತಮೈಥುನವು ನಿಮ್ಮಲ್ಲಿರುವಂತಹ ಅತಿಯಾದ ಶಕ್ತಿಯನ್ನು ಬಿಡುಗಡೆ ಮಾಡುವುದು. ನೀವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಆಗ ನಿಮ್ಮಲ್ಲಿರುವ ಅತಿಯಾದ ಶಕ್ತಿಯು ಹೊರಗೆ ಹೋಗುವುದು. ವ್ಯಾಯಾಮದ ಮತ್ತೊಂದು ಲಾಭವೆಂದರೆ ಇದು ಮಾನಸಿಕ ಸ್ಥಿರತೆ ಮತ್ತು ಏಕಾಗ್ರತೆ ನೀಡುವುದು. ಬೆಳಗ್ಗೆ ಬೇಗನೆ ಎದ್ದು ವ್ಯಾಯಾಮ ಮಾಡಿದರೆ ದಿನವಿಡಿ ನಿಮ್ಮ ಮನಸ್ಸು ಉಲ್ಲಾಸಿತವಾಗಿರುವುದು. ನಿಮ್ಮ ಮನಸ್ಸು ತುಂಬಾ ತಾಜಾ ಹಾಗೂ ಕೇಂದ್ರೀಕೃತವಾಗಿದ್ದರೆ ಹಸ್ತಮೈಥುನದ ಬಗ್ಗೆ ಆಲೋಚನೆ ಬರದು. ವ್ಯಾಯಾಮ ಹಾಗೂ ಸರಿಯಾದ ಆಹಾರ ಕ್ರಮ ಪಾಲಿಸಿಕೊಂಡು ನೀವು ದೈನಂದಿನ ಆರೋಗ್ಯಕ್ರಮ ಪಾಲಿಸಿ.

3. ಏಕಾಂಗಿಯಾಗಿರಬೇಡಿ

3. ಏಕಾಂಗಿಯಾಗಿರಬೇಡಿ

ಮನೆಯಲ್ಲಿ ಏಕಾಂಗಿಯಾಗಿರುವ ಹೆಚ್ಚಿನ ಜನರು ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಇದು ವಾಸ್ತವ ಕೂಡ. ನೀವು ಮನೆಯಲ್ಲಿ ಏಕಾಂಗಿಯಾಗಿದ್ದರೆ ಮನಸ್ಸು ಕೂಡ ಹಸ್ತಮೈಥುನ ಮಾಡುವ ಬಗ್ಗೆ ಆಲೋಚಿಸುವುದು. ಇದರಿಂದ ಮನೆಯಲ್ಲಿ ಏಕಾಂಗಿಯಾಗಿದ್ದರೆ ಹಸ್ತಮೈಥುನ ಅತಿಯಾಗುವುದು. ಇದರಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮನೆಯಲ್ಲಿ ಏಕಾಂಗಿಯಾಗಿ ಇರಬೇಡಿ. ಏಕಾಂಗಿಯಾಗಿರುವ ಸಮಯವನ್ನು ಇತರ ಕೆಲಸದಲ್ಲಿ ವಿನಿಯೋಗಿಸಿ. ನೀವು ಮನಸ್ಸನ್ನು ಬೇರೆ ಕಡೆ ಪರಿವರ್ತಿಸಿದರೆ ಆಗ ಹಸ್ತಮೈಥುನದ ಆಲೋಚನೆಯು ತನ್ನಿಂದತಾನೇ ಮಾಯವಾಗುವುದು.

4. ಒತ್ತಡ ನಿವಾರಿಸಿಕೊಳ್ಳಿ

4. ಒತ್ತಡ ನಿವಾರಿಸಿಕೊಳ್ಳಿ

ಅತಿಯಾಗಿ ಒತ್ತಡಕ್ಕೆ ಒಳಗಾಗುವ ವ್ಯಕ್ತಿಗಳು ಹಸ್ತಮೈಥುನದಲ್ಲಿ ಒಳಗೊಳ್ಳುವರು ಎಂದು ಅಧ್ಯಯನಗಳು ಹೇಳಿವೆ. ಹಸ್ತಮೈಥುನ ಮೂಲಕ ಒತ್ತಡವೆನ್ನುವ ಋಣಾತ್ಮಕ ಶಕ್ತಿಯನ್ನು ಹೊರಹಾಕುತ್ತಾರೆ. ಆದರೆ ಕೆಲವು ಸಮಯದ ಬಳಿಕ ಈ ಋಣಾತ್ಮಕ ಶಕ್ತಿ ಅಥವಾ ಒತ್ತಡವು ಮತ್ತೆ ಬರುವುದು. ಇದರಿಂದ ಮತ್ತೆ ಹಸ್ತಮೈಥುನ ಮಾಡಿಕೊಳ್ಳುವ ಸಮಸ್ಯೆಯು ನಿಮ್ಮನ್ನು ಅದೇ ರೀತಿ ಕಾಡುವುದು.

5. ಆರೋಗ್ಯಕರ ಆಹಾರ ಕ್ರಮ ಪಾಲಿಸಿ

5. ಆರೋಗ್ಯಕರ ಆಹಾರ ಕ್ರಮ ಪಾಲಿಸಿ

ನಿಮ್ಮ ಆಹಾರ ಕ್ರಮವು ಲೈಂಗಿಕ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುವುದು ಎಂದು ನಿಮಗೆ ತಿಳಿದಿರಲಿಕ್ಕಿಲ್ಲ. ಹಾಲಿನ ಉತ್ಪನ್ನಗಳು, ಸಿಹಿ, ಆಲ್ಕೋಹಾಲ್ ಮತ್ತು ಕೆಫಿನ್ ಸೇವನೆ ಕಡಿಮೆ ಮಾಡಿ. ಈ ಉತ್ಪನ್ನಗಳಲ್ಲಿ ನಿಮ್ಮ ಹಸ್ತಮೈಥುನ ಚಟವು ಹೆಚ್ಚು ಮಾಡಿಸುವಂತಹ ಅಂಶಗಳು ಇವೆ. ನಿಮ್ಮ ಆರೋಗ್ಯಕರ ಆಹಾರ ಕ್ರಮದಲ್ಲಿ ನೆಲಗಡಲೆ, ಸೂರ್ಯಕಾಂತಿ ಬೀಜಗಳು, ಸೋಯಾಬೀನ್, ತರಕಾರಿಗಳು ಮತ್ತು ಹಣ್ಣುಗಳು ಇರಬೇಕು. ನೀರನ್ನು ಸರಿಯಾಗಿ ಸೇವಿಸಿ, ಇದರಿಂದ ದೇಹದಲ್ಲಿ ನೀರಿನಾಂಶ ಉಳಿದು, ತಾಜಾವಾಗಿರುವುದು.

6. ನೀಲಿಚಿತ್ರಗಳನ್ನು ಕಡೆಗಣಿಸಿ

6. ನೀಲಿಚಿತ್ರಗಳನ್ನು ಕಡೆಗಣಿಸಿ

ನೀಲಿಚಿತ್ರಗಳನ್ನು ಅತಿಯಾಗಿ ನೋಡುವ ಕಾರಣದಿಂದಾಗಿ ಯುವಕರು ಹಸ್ತಮೈಥುನದಲ್ಲಿ ತೊಡಗಿಕೊಳ್ಳುವರು. ನೀವು ಎಲ್ಲಾ ಸಮಯದಲ್ಲಿ ನೀಲಿಚಿತ್ರ ನೋಡುವುದನ್ನು ಕಡೆಗಣಿಸಿ. ನೀಲಿಚಿತ್ರಕ್ಕೆ ಸಂಬಂಧಿಸಿರುವಂತಹ ಸಿಡಿಗಳು, ವೀಡಿಯೋಗಳು, ಮ್ಯಾಗಜಿನ್ ಗಳು, ಫೋಟೊಗಳು ಇತ್ಯಾದಿಗಳನ್ನು ನಾಶ ಮಾಡಿ. ಹಸ್ತಮೈಥುನದ ಚಾಳಿಯು ನಿಮ್ಮಲ್ಲಿ ಅತಿಯಾಗಿದ್ದರೆ ಆಗ ಟಿವಿಯಲ್ಲಿ ಕೂಡ ಹೆಚ್ಚು ಕೆರಳಿಸುವ ದೃಶ್ಯಗಳನ್ನು ನೋಡಬೇಡಿ.

7. ಹಾಲಿನೊಂದಿಗೆ ಕೇಸರಿ

7. ಹಾಲಿನೊಂದಿಗೆ ಕೇಸರಿ

ಹಸ್ತಮೈಥುನದ ಅಡ್ಡಪರಿಣಾಮ ನಿವಾರಣೆ ಮಾಡಲು ನೀವು ಹಾಲಿನೊಂದಿಗೆ ಕೇಸರಿ ಸೇವನೆ ಮಾಡಿ. ಹಾಲು ಮತ್ತು ಕೇಸರಿಯಲ್ಲಿ ದೇಹಕ್ಕೆ ಬೇಕಾಗಿರುವಂತಹ ಪ್ರಮುಖ ಪ್ರೋಟೀನ್ ಗಳು ಮತ್ತು ವಿಟಮಿನ್ ಗಳು ಇವೆ. ಇದು ಲೈಂಗಿಕ ಜೀವನ ನಿಯಂತ್ರಿಸುವುದು ಮತ್ತು ಹಸ್ತಮೈಥುನದ ಬಯಕೆ ಕಡಿಮೆ ಮಾಡುವುದು. ರಾತ್ರಿ ಮಲಗುವ ಮೊದಲು ಇದನ್ನು ಸೇವಿಸಿ.

8. ಶುಂಠಿ-ಜೇನುತುಪ್ಪ ಮಿಶ್ರಣ

8. ಶುಂಠಿ-ಜೇನುತುಪ್ಪ ಮಿಶ್ರಣ

ಶುಂಠಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವೈರಲ್ ವಿರೋಧಿ ಗುಣಗಳು ಇವೆ. ಶುಂಠಿ ಮತ್ತು ಜೇನುತುಪ್ಪದ ಮಿಶ್ರಣ ಸೇವನೆ ಮಾಡಿದರೆ ಇದು ಹಸ್ತಮೈಥುನದಿಂದ ಆಗುವಂತಹ ದೈಹಿಕ ಹಾಗೂ ಮಾನಸಿಕ ಸಮಸ್ಯೆ ನಿವಾರಿಸುವುದು. ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಶುಂಠಿ ಮತ್ತು ಜೇನುತುಪ್ಪ ಸೇರಿಸಿಕೊಳ್ಳಿ. ದಿನವಿಡಿ ನೀವು ಶುಂಠಿ ಜಗಿಯುತ್ತಾ ಇರಬಹುದು.

ಧ್ಯಾನದಲ್ಲಿ ತೊಡಗಿಕೊಳ್ಳಿರಿ

ಧ್ಯಾನದಲ್ಲಿ ತೊಡಗಿಕೊಳ್ಳಿರಿ

ಧ್ಯಾನವು ದೇಹ ಮತ್ತು ಮನಸ್ಸು ಎರಡಕ್ಕೂ ಒಳ್ಳೆಯದು. ನೀವು ಧ್ಯಾನದಲ್ಲಿ ತೊಡಗಿರುವಾಗ, ನಿಮ್ಮ ಮನಸ್ಸು ಮತ್ತು ದೇಹಗಳೆರಡಕ್ಕೂ ಕೂಡ, ಹಸ್ತಮೈಥುನವನ್ನು ಹೊರತುಪಡಿಸಿ ಇತರ ವಿಚಾರಗಳ ಕುರಿತು ಚಿ೦ತಿಸಲು ನೀವು ಅನುವು ಮಾಡಿಕೊಡುವ೦ತಾಗುತ್ತದೆ.

English summary

Get Rid Of Excessive Masturbation Using Home Remedies

Masturbation is one of those things that most of you don’t speak about publicly. It is an act of making yourself feel good by exciting the body.This process includes touching genitals, breast, lips etc. Masturbation is carried out with one’s own hand usually without the presence of a partner.There are a lot of studies going on Whether masturbation is bad or good for health?. In this article we will help you to know the positive and negative effects of masturbation, How to get rid of frequent masturbation naturally, What causes masturbation addiction and quick tips to get rid of masturbation.
Story first published: Saturday, June 23, 2018, 15:34 [IST]
X
Desktop Bottom Promotion