For Quick Alerts
ALLOW NOTIFICATIONS  
For Daily Alerts

ಅಡುಗೆಮನೆಯ ಪುಟ್ಟ 'ಬೆಳ್ಳುಳ್ಳಿ'ಯ ಪವರ್‌ಗೆ ಬೆರಗಾಗಲೇಬೇಕು!

|

ನಾವು ಸೇವಿಸುವಂತಹ ಸಾಂಬಾರು ಪದಾರ್ಥಗಳಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದ್ದು, ಹಿಂದಿನಿಂದಲೂ ನಮ್ಮ ಹಿರಿಯರು ಸಾಂಬಾರು ಪದಾರ್ಥಗಳನ್ನು ಬಳಸಿಕೊಂಡು ಕೆಲವೊಂದು ಕಾಯಿಲೆಗಳಿಗೆ ಚಿಕಿತ್ಸೆ ನೀಡಿದರೆ, ಇನ್ನು ಕೆಲವು ರೋಗಗಳು ಬರದಂತೆ ತಡೆಯುತ್ತಿದ್ದರು. ಅದರಲ್ಲೂ ಬೆಳ್ಳುಳ್ಳಿಯಲ್ಲಿ ನೂರಾರು ಔಷಧೀಯ ಗುಣಗಳು ಇವರು ಬಗ್ಗೆ ನಮಗೆ ತಿಳಿದೇ ಇದೆ. ಕೆಲವೊಂದು ಕಡೆಗಳಲ್ಲಿ ಬೆಳ್ಳುಳ್ಳಿ ಬಳಸಿಕೊಂಡು ಅದರಿಂದ ದುಷ್ಟಶಕ್ತಿಗಳನ್ನು ದೂರ ಮಾಡುವಂತಹ ಕ್ರಮಗಳನ್ನು ಮಾಡುವರು.

ಆಯುರ್ವೇದದಲ್ಲಿ ಬೆಳ್ಳುಳ್ಳಿಯನ್ನು ಲಸೂನ'ಎಂದು ಕರೆಯಲಾಗುತ್ತದೆ. ಇದರಲ್ಲಿ ಇರುವಂತಹ ಔಷಧೀಯ ಗುಣಗಳು ಹೇಗೆ ಕೆಲಸ ಮಾಡುತ್ತದೆ ಎಂದು ಆಯುರ್ವೇದ ಗುರುಗಳು ಹೇಳುವರು. ಬೆಳ್ಳುಳ್ಳಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಬ್ಯಾಕ್ಟೀರಿಯಾ, ಶಿಲೀಂಧ್ರ, ಪರಾವಲಂಬಿ ಮತ್ತು ವೈರಲ್ ಸೋಂಕನ್ನು ನಿಯಂತ್ರಣ ಮಾಡುವುದು. ಇದು ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಉರಿಯೂತ ಶಮನ ಮಾಡುವುದು. ಬೆಳ್ಳುಳ್ಳಿಯಿಂದ ತಯಾರಿಸಬಹುದಾದ ಕೆಲವೊಂದು ಮನೆಮದ್ದುಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಯುವ.

ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ನಿಯಂತ್ರಣಕ್ಕೆ

ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ನಿಯಂತ್ರಣಕ್ಕೆ

ಚಳಿಗಾಲ ಬರುತ್ತಿರುಂತಹ ಒಣ ತಲೆಬುರುಡೆಯ ಸಮಸ್ಯೆಯು ಸಾಮಾನ್ಯವಾಗಿ ಕಾಡುವುದು. ಒಣ ತಲೆಬುರುಡೆಯಿಂದಾಗಿ ತಲೆಹೊಟ್ಟಿನ ಸಮಸ್ಯೆ ಬರುವುದು. ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ತಲೆಬುರುಡೆಯ ಚರ್ಮವು ಬಲಗೊಳ್ಳುವುದು. ಚಟ್ನಿ, ಸಲಾಡ್ ಮತ್ತು ಇತರ ಖಾದ್ಯಗಳಲ್ಲಿ ಬೆಳ್ಳುಳ್ಳಿ ಬಳಸಬಹುದು. ಬೆಳ್ಳುಳ್ಳಿಯನ್ನು ತಲೆಬುರುಡೆಗೆ ಹೊರಗಿನಿಂದ ಹಚ್ಚಿಕೊಳ್ಳಬಹುದು.

• ನಾಲ್ಕು ಎಸಲು ಬೆಳ್ಳುಳ್ಳಿ ಸಿಪ್ಪೆ ತೆಗೆಯಿರಿ.

• ಇದನ್ನು ಜಜ್ಜಿಕೊಂಡು ಐದು ನಿಮಿಷ ಕಾಲ ಹಾಗೆ ಬಿಡಿ.

• ಅರ್ಧ ಕಪ್ ತೆಂಗಿನೆಣ್ಣೆ ಜತೆಗೆ ಇದನ್ನು ಬಿಸಿ ಮಾಡಿ.

• ಬೆಳ್ಳುಳ್ಳಿ ಎಸಲನ್ನು ತೆಗೆದು, ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ.

ಕಿವಿ ನೋವಿಗೆ ಬೆಳ್ಳುಳ್ಳಿ

ಕಿವಿ ನೋವಿಗೆ ಬೆಳ್ಳುಳ್ಳಿ

ಕಿವಿನೋವು ಸಾಮಾನ್ಯವಾಗಿ ಕಾಡುವಂತಹ ಸಮಸ್ಯೆಯಾಗಿದೆ. ಕಿರಿಕಿರಿ ಉಂಟು ಮಾಡುವ ಗಂಟಲು ಮತ್ತು ಬಂದ್ ಆಗಿರುವಂತಹ ಕಿವಿಗಳು ಚಳಿಗಾಲದಲ್ಲಿ ಸಾಮಾನ್ಯ. ಎರಡು ಎಸಲು ಬೆಳ್ಳುಳ್ಳಿ ಜಜ್ಜಿಕೊಂಡು ಅದನ್ನು ಕೆಲವು ನಿಮಿಷ ಕಾಲ ಹಾಗೆ ಬಿಡಿ. ಒಂದು ಹತ್ತಿಯಲ್ಲಿ ಈ ಬೆಳ್ಳುಳ್ಳಿ ಸುತ್ತಿಕೊಂಡು ಕಿವಿಯ ಒಳಗಡೆ ಹಾಕಿ. ಇದನ್ನು ಆಳಕ್ಕೆ ತಳ್ಳಬೇಡಿ.

ಶೀತ ಹಾಗೂ ಕೆಮ್ಮಿಗೆ ಬೆಳ್ಳುಳ್ಳಿ

ಶೀತ ಹಾಗೂ ಕೆಮ್ಮಿಗೆ ಬೆಳ್ಳುಳ್ಳಿ

ಎರಡು ಎಸಲು ಬೆಳ್ಳುಳ್ಳಿ ಜಜ್ಜಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಎರಡು ಚಮಚ ಜೇನುತುಪ್ಪ ಮತ್ತು ಚಿಟಿಕೆ ಕಲ್ಲುಪ್ಪಿನ ಜತೆಗೆ ಇದನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ನಾಲಿಗೆ ಮೇಲೆ ಇಟ್ಟುಕೊಂಡು ನಿಧಾನವಾಗಿ ಗಂಟಲಿನ ಮೂಲಕ ಒಳಗೆ ಹೋಗಲಿ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ಅಸಿಡಿಟಿ ಹೆಚ್ಚಾಗಬಹುದು. ಚಳಿಗಾಲದಲ್ಲಿ ಬಿಸಿಯಾದ ಸೂಪ್ ಗೆ ಬೆಳ್ಳುಳ್ಳಿ ಸೇರಿಸಿ ಸೇವಿಸಿದರೆ ಒಳ್ಳೆಯದು. ಬೆಳ್ಳುಳ್ಳಿಯು ವೈರಲ್ ವಿರೋಧಿ ಗುಣಗಳನ್ನು ಹೊಂದಿರುವ ಕಾರಣ ಶೀತ ಮತ್ತು ಕೆಮ್ಮು ನಿವಾರಣೆಯಾಗುವುದು.

Most Read: ಆರೋಗ್ಯ ಟಿಪ್ಸ್: ಸರ್ವರೋಗಕ್ಕೂ ವೀಳ್ಯದೆಲೆಯೇ ಮನೆಮದ್ದು...

ಗಂಟುನೋವಿಗೆ ಎಣ್ಣೆ

ಗಂಟುನೋವಿಗೆ ಎಣ್ಣೆ

ಮೂರು ಎಸಲು ಬೆಳ್ಳುಳ್ಳಿ ಜಜ್ಜಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. 10 ಮಿ.ಲೀ. ಎಳ್ಳೆಣ್ಣೆಯೊಂದಿಗೆ ಇದನ್ನು ಬಿಸಿ ಮಾಡಿ. ನೋವಿರುವಂತಹ ಗಂಟುಗಳಿಗೆ ಈ ಎಣ್ಣೆಯಿಂದ ಮಸಾಜ್ ಮಾಡಿ. ಚರ್ಮವು ಬೆಳ್ಳುಳ್ಳಿ ಸೂಕ್ಷ್ಮವಾಗಿದ್ದರೆ ಇದನ್ನು ಬಳಸಬೇಡಿ.

ಎಚ್ಚರಿಕೆ

ಆಸ್ಪಿರಿನ್ ನಂತಹ ಹೆಪ್ಪುರೋಧಕ ಸೇವನೆ ಮಾಡುತ್ತಲಿದ್ದರೆ ಆಗ ನೀವು ಬೆಳ್ಳುಳ್ಳಿ ಸೇವನೆ ಮಾಡಬೇಡಿ. ಚರ್ಮವು ತುಂಬಾ ಸೂಕ್ಷ್ಮವಾಗಿದ್ದರೆ ಆಗ ಚರ್ಮದ ಮೇಲೆ ಕೆಂಪು ಕಲೆಗಳು ಮೂಡಬಹುದು. ಇದರಿಂದ ಎಚ್ಚರಿಕೆಯಿಂದ ಬಳಸಿ.

Most Read: ಒಣಕೆಮ್ಮು, ಗಂಟಲ ಕೆರೆತ, ಕಫ ನಿವಾರಣೆಗೆ: ಏಲಕ್ಕಿ ಪರ್ಫೆಕ್ಟ್ ಮನೆಮದ್ದು

ಚೆನ್ನಾಗಿ ನಿದ್ದೆ ಬರಲು

ಚೆನ್ನಾಗಿ ನಿದ್ದೆ ಬರಲು

ಸಾಮಾನ್ಯವಾಗಿ ಬೆಳ್ಳುಳ್ಳಿಯ ಖಾರವಾದ ಮತ್ತು ಘಾಟು ವಾಸನೆಯನ್ನು ಯಾರೂ ಸಹಿಸುವುದಿಲ್ಲ. ಆದರೆ ಈ ಘಾಟು ಆರೋಗ್ಯಕ್ಕೆ ಉತ್ತಮವಾಗಿದ್ದು ಇದನ್ನು ಕೊಂಚ ಸಹಿಸಬೇಕಾಗಿರುವುದು ಅಗತ್ಯವಾಗಿದೆ. ಈ ಘಾಟು ವಾಸನೆ ನಮಗೆ ಹೇಗೆ ಸಹ್ಯವಲ್ಲವೋ ಹಾಗೇ ಋಣಾತ್ಮಕ ಶಕ್ತಿಗಳಿಯೂ ಸಹ್ಯವಲ್ಲ. ಒಂದೆರಡು ಎಸಳು ಬೆಳ್ಳುಳ್ಳಿಯನ್ನು ತಲೆದಿಂಬಿನಡಿ ಅಥವಾ ಜೇಬಿನಲ್ಲಿರಿಸಿದರೆ ಈ ಶಕ್ತಿಗಳು ಹತ್ತಿರ ಬರದೇ ಸುಖನಿದ್ದೆಗೆ ಯಾವುದೇ ತಡೆ ಇಲ್ಲವಾಗುತ್ತದೆ.

ಸಣ್ಣ-ಪುಟ್ಟ ಕಾಯಿಲೆಗಳಿಗೆ ರಾಮಬಾಣ...

ಸಣ್ಣ-ಪುಟ್ಟ ಕಾಯಿಲೆಗಳಿಗೆ ರಾಮಬಾಣ...

ಬೆಳ್ಳುಳ್ಳಿಯನ್ನು ಆಹಾರ ಮತ್ತು ಔಷಧಿಯ ರೂಪವಾಗಿ ಸಾವಿರಾರು ವರ್ಷಗಳಿಂದ ಬಳಸ್ಪಡುತ್ತಾ ಬರಲಾಗಿದೆ. ಇದರ ಔಷಧೀಯ ಗುಣಗಳ ಬಗ್ಗೆ ವಿಜ್ಞಾನಿಗಳು ತಿಳಿದುಕೊಳ್ಳಲು ಪ್ರಾರಂಭಿಸಿದ್ದು ತೀರಾ ಇತ್ತೀಚೆಗೆ. ಸಾಮಾನ್ಯ ನೆಗಡಿ, ಶೀತ, ರಕ್ತಜಿನುಗುವ ಒಸಡುಗಳು, ಕೆಮ್ಮು ಮತ್ತು ಕೆಲವು ಬಗೆಯ ಕ್ಯಾನ್ಸರ್‌ಗಳಿಗೆ ಬೆಳ್ಳುಳ್ಳಿ ಉತ್ತಮ ಔಷಧಿಯಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಕೆಲವು ವೈಜ್ಞಾನಿಕ ಸಮೀಕ್ಷೆಗಳ ಮೂಲಕ ನಿಯಮಿತವಾಗಿ ಬೆಳ್ಳುಳ್ಳಿ ಸೇವಿಸಿದ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ. ವಿಶೇಷವಾಗಿ ಶೀತ ಮತ್ತು ಇದರ ಇತರ ಪರಿಣಾಮಗಳನ್ನು 63%ರಷ್ಟು ಕಡಿಮೆಗೊಳಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಚೈತನ್ಯ ಹೆಚ್ಚಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಸತತವಾಗಿ ಶೀತ ಕೆಮ್ಮು ಜ್ವರ ಎಂದು ನಿತ್ಯವೂ ಕಾಯಿಲೆ ಬೀಳುವ ವ್ಯಕ್ತಿಗಳಿಗೆ ಊಟದಲ್ಲಿ ಬೆಳ್ಳುಳ್ಳಿ ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.

Most Read: 'S'ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು, ಕಠಿಣ ಪರಿಶ್ರಮಿ ಹಾಗೂ ಮಗುವಿನಂತ ಮನಸ್ಸು...

ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಬೆಳ್ಳುಳ್ಳಿಯಲ್ಲಿ ಪಾಲಿ ಸಲ್ಫೈಡ್ ಎಂಬ ಪೋಷಕಾಂಶವಿದೆ. ನಮ್ಮ ರಕ್ತದ ಕೆಂಪು ರಕ್ತಕಣಗಳು ಈ ಪೋಷಕಾಂಶಗಳನ್ನು ಹೈಡ್ರೋಜನ್ ಸಲ್ಫೈಡ್ ಆಗಿ ಪರಿವರ್ತಿಸುತ್ತವೆ. ಇದು ನರಗಳು ಪೆಡಸಾಗಿದ್ದರೆ ಸಡಿಲಗೊಳಿಸಲು ನೆರವಾಗುತ್ತವೆ. ಪರಿಣಾಮವಾಗಿ ಹೃದಯಕ್ಕೆ ಕಡಿಮೆ ಒತ್ತಡದಲ್ಲಿ ರಕ್ತವನ್ನು ದೂಡಿಕೊಟ್ಟರೆ ಸಾಕಾಗುತ್ತದೆ. ಇದು ಅಧಿಕ ರಕ್ತದ ಒತ್ತಡದ ಸಮಸ್ಯೆ ಇರುವ ವ್ಯಕ್ತಿಗಳಿಗೆ ಒಂದು ವರದಾನವಾಗಿದೆ.

Read more about: health garlic
English summary

Garlic Home Remedies for Hair Loss Cough And Joint Pain

Since ages garlic has been praised for its medicinal properties. This spice is globally used in almost all cuisines. Garlic also has religious value. Garlic is worshipped or used to ward off evil spirits in many traditions. Garlic is known as “lasuna” in Ayurveda. Ayurveda acharyas laud its healing properties and explain many remedies using this wonder bulb. According to various researches Garlic has antimicrobial property. It helps in bacterial, parasitic, fungal and viral infections. It also helps to reduce high blood pressure, cholesterol and inflammation.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more