For Quick Alerts
ALLOW NOTIFICATIONS  
For Daily Alerts

ಪುರುಷರ ಶಿಶ್ನದ ಗಾತ್ರವನ್ನು ಹೆಚ್ಚಿಸುವ ಪವರ್ ಇಂತಹ ಆಹಾರಗಳಲ್ಲಿದೆ!

|

ತಮ್ಮ ಜನನಾಂಗದ ಗಾತ್ರ ದೊಡ್ಡದಿರಬೇಕೆಂಬುದು ಪ್ರತಿ ಪುರುಷನ ಬಯಕೆಯಾಗಿದೆ. ಇದೇ ಕಾರಣಕ್ಕೆ ಜನನಾಂಗದ ಗಾತ್ರ ಹೆಚ್ಚಿಸುವ ಭರವಸೆ ನೀಡುವ ಸಾವಿರಾರು ಉತ್ಪನ್ನಗಳು ಹಾಗೂ ಉಪಕರಣಗಳು ಮಾರುಕಟ್ಟೆಯಲ್ಲಿವೆ. ಈ ಸೂಕ್ಷ್ಮ ಅಂಗದ ಗಾತ್ರವನ್ನು ಹೆಚ್ಚಿಸುವುದು ಗಂಭೀರವಾದ ವಿಷಯವಾಗಿದೆ ಹಾಗೂ ಹೆಚ್ಚಿನವರಿಗೆ ಇದಕ್ಕಾಗಿ ಎಲ್ಲಿಂದ ಪ್ರಾರಂಭಿಸಬೇಕೆಂದೇ ಗೊತ್ತಿಲ್ಲ. ಕೆಲವೇ ಇಂಚುಗಳಷ್ಟು ಹೆಚ್ಚಿಸಲು ಕೆಲವು ವಿಧಾನಗಳಿವೆ, ಇವುಗಳಲ್ಲಿ ಪ್ರಮುಖವಾದುದೆಂದರೆ ಶಿಶ್ನದ ಶಸ್ತ್ರಚಿಕಿತ್ಸೆ, ಗಾತ್ರ ಹೆಚ್ಚಿಸುವ ವ್ಯಾಯಾಮಗಳು, ನಿರ್ವಾತದ ಮೂಲಕ ಹಿಗ್ಗಿಸುವ ಪಂಪುಗಳು ಹಾಗೂ ನೈಸರ್ಗಿಕ ಚಿಕಿತ್ಸೆಯ ಮಾತ್ರೆಗಳು.

ಆದರೆ ಮಾರುಕಟ್ಟೆಯಲ್ಲಿ ಹಣ ಮಾಡುವ ದುರುಳರು ವಂಚನೆಯ ಇರಾದೆಯಿಂದಲೇ ಈ ಹುಸಿಭರವಸೆ ನೀಡುವ ಕಾರಣ ಯಾವ ವಿಧಾನ ಸುರಕ್ಷಿತ ಯಾವುದು ಅಪಾಯಕರ ಎಂದು ಒಂದೇ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಶಸ್ತ್ರಚಿಕಿತ್ಸೆಯ ಸಹಿತ ಇತರ ವಿಧಾನಗಳು ದುಬಾರಿಯೂ ಹೆಚ್ಚಿನ ಸಮಯ ತೆಗೆದುಕೊಳ್ಳುವಂತಹದ್ದೂ ಆಗಿರುವ ಕಾರಣ ಸುಲಭ ವ್ಯಾಯಾಮ ಹಾಗೂ ನೈಸರ್ಗಿಕವಾಗಿ ಗಾತ್ರ ಹೆಚ್ಚಿಸಲು ನೆರವಾಗುವ ಆಹಾರಗಳ ಸೇವನೆಯ ಮೂಲಕ ಈ ಅಗತ್ಯತೆಯನ್ನು ಪೂರೈಸಿಕೊಳ್ಳಬಹುದು.

ಶಿಶ್ನದ ಬಗ್ಗೆ ನೀವು ತಿಳಿದಿರದ ಕೆಲವೊಂದು ಆಸಕ್ತಿಕರ ಸಂಗತಿಗಳು

ವಾಸ್ತವವೇನೆಂದರೆ, ಯಾವುದೇ ಪುರುಷ ಈ ಅಗತ್ಯತೆಗಾಗಿ ಅಪಾಯಕರ ಶಸ್ತ್ರಕ್ರಿಯೆಗೆ ಒಳಗಾಗುವ ಮುನ್ನ ಆಹಾರಸೇವನೆಯ ಮೂಲಕವೇ ಇದು ಸಾಧ್ಯವಾಗುತ್ತದೆಯೋ ಎಂದು ಪ್ರಯತ್ನಿಸುವುದು ಖಚಿತ. ಉತ್ತಮ ಪ್ರದರ್ಶನಕ್ಕಾಗಿ ಸೇವಿಸಲು ಯಾವ ಆಹಾರಗಳು ಸೂಕ್ತ ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ವಿವಿಧ ಆಹಾರಗಳನ್ನು ಸೇವಿಸುವ ಮೂಲಕ ಈ ನಿಟ್ಟಿನಲ್ಲಿ ಸರಿಯಾದ ಪಥವನ್ನು ಆಯ್ದುಕೊಳ್ಳಬಹುದು. ಇಲ್ಲಿ ವಿವರಿಸಲಾಗಿರುವ ಪ್ರತಿ ಆಹಾರದಲ್ಲಿಯೂ ತನ್ನದೇ ಆದ ಪ್ರಯೋಜನಗಳಿವೆ ಹಾಗೂ ಜೊತೆಜೊತೆಗೇ ಶಿಶ್ನದ ಗಾತ್ರವನ್ನೂ ನೈಸರ್ಗಿಕವಾಗಿ ಹೆಚ್ಚಿಸುವ ಮೂಲಕ ದಾಂಪತ್ಯಜೀವನ ಸುಖಕರವಾಗಿರಲು ನೆರವಾಗುತ್ತವೆ.

ಬಾಳೆಹಣ್ಣು

ಬಾಳೆಹಣ್ಣು

ಅಧ್ಯಯನಗಳ ಮೂಲಕ ಕಂಡುಕೊಳ್ಳಲಾದ ಅಂಶವೆಂದರೆ ಹೃದಯದ ಆರೋಗ್ಯ ಉತ್ತಮವಾಗಿರುವ ಪುರುಷರ ಶಿಶ್ನವೂ ಕೆಲವು ಇಂಚುಗಳಷ್ಟು ಹೆಚ್ಚಿನ ಗಾತ್ರವನ್ನು ಪಡೆಯುತ್ತದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ರಕ್ತಪರಿಚಲನೆಯನ್ನು ಉತ್ತಮಗೊಳಿಸುವ ಮೂಲಕ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ರಕ್ತಪರಿಚಲನೆ ಉತ್ತಮವಾಗಿದ್ದರೆ ದೇಹದ ಇತರ ಭಾಗಗಳ ಜೊತೆಗೇ ಜನನಾಂಗಕ್ಕೂ ಉತ್ತಮ ಪ್ರಮಾಣದ ರಕ್ತಪರಿಚಲನೆ ದೊರಕುತ್ತದೆ ಹಾಗೂ ಸ್ವಾಭಾವಿಕವಾಗಿ ಉತ್ತಮ ಗಾತ್ರ ಪಡೆಯಲು ನೆರವಾಗುತ್ತದೆ. ಅಲ್ಲದೇ ನಿತ್ಯವೂ ಬಾಳೆಹಣ್ಣು ಸೇವಿಸುವ ಮೂಲಕ ದೇಹದಲ್ಲಿ ಸೋಡಿಯಂ ಲವಣದ ಪ್ರಮಾಣವೂ ತಗ್ಗುತ್ತದೆ, ಈ ಮೂಲಕ ಹೃದಯ ಸಂಬಂಧಿ ಕಾಯಿಲೆಗಳು ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಸಾಲ್ಮನ್ ಮೀನು

ಸಾಲ್ಮನ್ ಮೀನು

ಸಾಲ್ಮನ್ ಮೀನಿನಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳ ಸಹಿತ ಇತರ ತೈಲಗಳಿವೆ. ಈ ಆರೋಗ್ಯರಕ ತೈಲಗಳು ಮತ್ತು ಆಮ್ಲಗಳು ರಕ್ತವನ್ನು ತೆಳುವಾಗಿಸಲು ನೆರವಾಗುವ ಮೂಲಕ ನರಗಳಲ್ಲಿ ರಕ್ತಪರಿಚಲನೆ ಸುಲಭಗೊಳಿಸುತ್ತದೆ. ಈ ಬಗ್ಗೆ ನಡೆಸಿದ ಸಂಶೋಧನೆಗಳ ಮೂಲಕ ದೇಹದಲ್ಲಿ ಆರೋಗ್ಯಕರ ರಕ್ತಪರಿಚಲನೆ ಇದ್ದಾಗ ನಿಮಿರುತನವೂ ಗರಿಷ್ಟವಾಗುತ್ತದೆ ಹಾಗೂ ಹೆಚ್ಚು ದೃಢವಾಗಿರುತ್ತದೆ.

 ಈರುಳ್ಳಿ

ಈರುಳ್ಳಿ

ಈರುಳ್ಳಿಯ ಸೇವನೆಯಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಿಂದೆ ಗೊತ್ತಿಲ್ಲದಿದ್ದರೂ, ಇಂದಿನ ಸಂಶೋಧನೆಗಳ ಮೂಲಕ ಈ ಮಾಹಿತಿ ಖಚಿತವಾಗಿದೆ. ಈರುಳ್ಳಿಯ ಸೇವನೆಯಿಂದ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಈ ಗುಣವೇ ರಕ್ತಪರಿಚಲನೆ ಉತ್ತಮಗೊಳ್ಳಲು ಹಾಗೂ ವಿಶೇಷವಾಗಿ ಹೃದಯ ಮತ್ತು ಶಿಶ್ನದ ಕಾರ್ಯಕ್ಷಮತೆ ಹೆಚ್ಚಲು ನೆರವಾಗುತ್ತದೆ.

ನೆನಪಿಡಿ

ನೆನಪಿಡಿ

ಇದುವರೆಗೆ ಪರಿಗಣಿಸಿದ ಅಂಶದಿಂದ ಏನು ಸಾಬೀತಾಗುತ್ತದೆ ಎಂದರೆ ಶಿಶ್ನದ ಗಾತ್ರ ಹೆಚ್ಚಲು ಹಾಗೂ ಗರಿಷ್ಟ ನಿಮಿರುತನ ಪಡೆಯಲು ರಕ್ತಪರಿಚಲನೆಯೂ ಉತ್ತಮವಾಗಿರುವುದು ಅಗತ್ಯವಾಗಿದೆ. ಮೇಲೆ ವಿವರಿಸಿದ ಆಹಾರಗಳ ಸೇವನೆಯಿಂದ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆಯಾದರೂ ಕೇವಲ ಇವುಗಳಲ್ಲಿ ಒಂದೇ ಆಹಾರದ ಸೇವನೆ ಸಾಕಾಗದು. ಈ ಮೂರೂ ಆಹಾರಗಳನ್ನು ಸೂಕ್ತ ಪ್ರಮಾಣದಲ್ಲಿ ನಿತ್ಯವೂ ಸೇವಿಸುವ ಜೊತೆಗೇ ಇತರ ಹಸಿ ತರಕಾರಿ, ಇಡಿಯ ಧಾನ್ಯ, ಹಣ್ಣುಗಳು, ಬಿಳಿಯ ಮಾಂಸ ಮತ್ತು ಇತರ ಆರೋಗ್ಯಕರ ಆಹಾರಗಳನ್ನೂ ಸೇವಿಸಬೇಕಾಗುತ್ತದೆ. ಅಲ್ಲದೇ ಅನಾರೋಗ್ಯಕರ ಸಿದ್ಧ ಆಹಾರಗಳು, ಬುರುಗು ಪಾನೀಯಗಳು, ಮದ್ಯಪಾನ, ಧೂಮಪಾನ, ತಂಬಾಕು ಮೊದಲಾದವುಗಳನ್ನೂ ಕಡ್ಡಾಯವಾಗಿ ಬಿಡಬೇಕಾಗುತ್ತದೆ.

ಆರೋಗ್ಯಕರ ಶಿಶ್ನಕ್ಕಾಗಿ ಈ ವಿಷಯಗಳನ್ನು ಪ್ರತಿ ಪುರುಷನೂ ನೆನಪಿನಲ್ಲಿಟ್ಟುಕೊಳ್ಳಬೇಕು

ಆರೋಗ್ಯಕರ ಶಿಶ್ನಕ್ಕಾಗಿ ಈ ವಿಷಯಗಳನ್ನು ಪ್ರತಿ ಪುರುಷನೂ ನೆನಪಿನಲ್ಲಿಟ್ಟುಕೊಳ್ಳಬೇಕು

ಶಿಶ್ನವನ್ನು ಉತ್ತಮ ಆರೋಗ್ಯದಲ್ಲಿರಿಸಬೇಕಾದರೆ ನಿಯಮಿತವಾಗಿ ಶಿಶ್ನವನ್ನು ಪೂರ್ಣಪ್ರಮಾಣದ ನಿಮಿರುತನಕ್ಕೆ ಒಳಪಡಿಸುತ್ತಾ ಇರುವುದು ಅಗತ್ಯ. ಅಂದರೆ ಈ ಅಂಗಕ್ಕೂ ಇತರ ಅಂಗಗಳಂತೆ ನಿಯಮಿತವಾದ ವ್ಯಾಯಾಮವೂ ಅಗತ್ಯವಾಗಿದೆ. ಹಾಗಾಗಿ ಆರೋಗ್ಯಕರ ಶಿಶ್ನಕ್ಕಾಗಿ ಆಗಾಗ ಶಿಶ್ನದ ಸ್ನಾಯುಗಳಿಗೆ ಪೂರ್ಣಪ್ರಮಾಣದ ರಕ್ತವನ್ನು ಒದಗಿಸುತ್ತಾ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಒದಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ಮೂಲಕ ಶಿಶ್ನದ ಆರೋಗ್ಯ ಮತ್ತು ದೃಢತೆಯೂ ಬಹುಕಾಲ ಉತ್ತಮವಾಗಿರುತ್ತದೆ.

ನಿಮಿರುತನ ಸಮಸ್ಯೆ ಇದ್ದರೆ

ನಿಮಿರುತನ ಸಮಸ್ಯೆ ಇದ್ದರೆ

ಒಂದು ವೇಳೆ ಪುರುಷರಿಗೆ ಕೇವಲ ರಾತ್ರಿಯ ಸಮಯದಲ್ಲಿ ಮಾತ್ರವೇ ನಿಮಿರುತನ ಸಾಧ್ಯವಾಗುತ್ತಿದ್ದು ಹಗಲಿನಲ್ಲಿ ಸಾಧ್ಯವಾಗದೇ ಹೋದರೆ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ. ವಾಸ್ತವವಾಗಿ ಶಿಶ್ನದ ನಿಮಿರುವಿಕೆ ಮೆದುಳಿನ ನಿಯಂತ್ರಣದಲ್ಲಿದೆ (ಅಚ್ಚರಿಯ ವಿಷಯವೆಂದರೆ ಸ್ಖಲನದ ನಿಯಂತ್ರಣ ಮೆದುಳುಬಳ್ಳಿಯಲ್ಲಿದೆ, ಮೆದುಳಿನಲ್ಲಿ ಅಲ್ಲ) ಹಗಲಿನ ಸಮಯದಲ್ಲಿ ಮೆದುಳು ದಿನದ ಇತರ ಕಾರ್ಯಗಳಲ್ಲಿ ಮಗ್ನವಾಗಿದ್ದ ಕಾರಣಕ್ಕೆ ಪೂರ್ಣಪ್ರಮಾಣದ ಗಮನ ನೀಡಲು ಸಾಧ್ಯವಾಗುವುದಿಲ್ಲ, ಇದೇ ನಿಮಿರುತನ ಪಡೆಯದಿರಲು ಕಾರಣವಾಗಿದೆ. ಅಲ್ಲದೇ, ಗಾಢ ನಿದ್ದೆಯ ಸಮಯದಲ್ಲಿ ಕಣ್ಣುರೆಪ್ಪೆಗಳು ತೀವ್ರವಾಗಿ ಅಲುಗುತ್ತಿದ್ದರೆ (REM phase) ಸ್ವಪ್ನ ಬಿದ್ದರೆ ಈ ಸಮಯದಲ್ಲಿಯೂ ಮೆದುಳು ಕೆಲವು ಸೂಚನೆಗಳನ್ನು ನೀಡುವ ಮೂಲಕ ಶಿಶ್ನದ ಪೂರ್ಣಪ್ರಮಾಣದ ನಿಮಿರುತನ ಪಡೆಯುವಂತೆ ಮಾಡುತ್ತದೆ. ಕೆಲವೊಮ್ಮೆ ಈ ಸಮಯದಲ್ಲಿ ಸ್ಖಲನವೂ ಆಗುವುದುಂಟು, ಇದಕ್ಕೆ ಸ್ವಪ್ನಸ್ಖಲನ ಎಂದು ಕರೆಯುತ್ತಾರೆ.

ಗಾತ್ರದಲ್ಲಿ ವ್ಯತ್ಯಾಸ ಕಾಣಬಹುದು!!

ಗಾತ್ರದಲ್ಲಿ ವ್ಯತ್ಯಾಸ ಕಾಣಬಹುದು!!

ಒಂದು ವೇಳೆ ಶಿಶ್ನಕ್ಕೆ ಯಾವುದೇ ಕೆಲಸ ನೀಡದೇ ಸೋಮಾರಿಯಾಗಿಸುವ ಪುರುಷರಿಗೆ ಈ ಅಂಗದ ಗಾತ್ರ ಕೊಂಚ ಕಿರಿದಾಗುವುದು ಅನುಭವಕ್ಕೆ ಬರುತ್ತದೆ. ಆಗಾಗ ನಿಮಿರುತನ ಪಡೆಯದೇ ಇರುವ ಶಿಶ್ನ ನಿಧಾನವಾಗಿ ಸಂಕುಚಿತಗೊಳ್ಳುತ್ತಾ ಹೋಗುತ್ತದೆ ಹಾಗೂ ತನ್ನ ಹಿಗ್ಗುವ ಗುಣವನ್ನು ಕಳೆದುಕೊಳ್ಳುತ್ತ್ತಾಹೋಗುತ್ತದೆ. ಸಾಮಾನ್ಯವಾಗಿ ನಿಮಿರುತನ ಪಡೆಯದೇ ಇರುವ ಶಿಶ್ನ ಸಾಮಾನ್ಯಕ್ಕಿಂತಲೂ ಒಂದರಿಂದ ಎರಡು ಸೆಂಟಿಮೀಟರ್ ನಷ್ಟು ಗಾತ್ರದಲ್ಲಿ ಕುಗ್ಗುವುದನ್ನು ಗಮನಿಸಲಾಗಿದೆ.

English summary

Foods That Help You Increase the Penis Size

Nearly every man wants a larger penis. This is one reason why there are numerous vendors who sell products like pills and devices. Enlargement of the penis can be a major issue, but many males do not know where to start when they want to obtain a few more inches. There are numerous methods that are often utilized to enlarge the penis size, and these include penis enlargement surgery, penis enlarging exercises, penis enlarging pumps, and even herbal pills. Many of these methods work while others do not.
X
Desktop Bottom Promotion