For Quick Alerts
ALLOW NOTIFICATIONS  
For Daily Alerts

ನಿಮ್ಮ ನಿದ್ದೆಯನ್ನು ಹಾಳು ಮಾಡುವ ಆಹಾರಗಳಿವು!- ಆದಷ್ಟು ರಾತ್ರಿ ಹೊತ್ತು ಇವುಗಳನ್ನೆಲ್ಲಾ ತಿನ್ನಬೇಡಿ

|

ರಾತ್ರಿ ಮಲಗುವ ಕೆಲ ಹೊತ್ತು ಮುನ್ನ ಒಳ್ಳೆಯ ಆಹಾರ ಸೇವಿಸುವುದರಿಂದ ನಿದ್ರೆ ಉತ್ತಮವಾಗಿರುತ್ತದೆ ಹಾಗೂ ಜೀರ್ಣಕ್ರಿಯೆಗೂ ಇದು ಸಹಕಾರಿಯಾಗಿದೆ. ರಾತ್ರಿ ನೀವು ಸೇವಿಸುವ ಎಲ್ಲ ಆಹಾರ ಪದಾರ್ಥಗಳು ಅನಾರೋಗ್ಯಕರ ವಾಗಿಲ್ಲದಿದ್ದರೂ ಕೆಲವನ್ನು ಮಾತ್ರ ತಿನ್ನದೆ ಇರುವುದು ಒಳಿತು. ರಾತ್ರಿ ಹೊಟ್ಟೆ ತುಂಬಾ ತಿಂದ ತಕ್ಷಣ ಮಲಗುವುದು ಒಳ್ಳೆಯ ಅಭ್ಯಾಸವಲ್ಲ.

ಮಲಗುವುದಕ್ಕಿಂತ ಮೂರು ತಾಸು ಮೊದಲು ರಾತ್ರಿ ಊಟ ಮಾಡುವುದು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಆದಾಗ್ಯೂ ರಾತ್ರಿ ಊಟದ ಸಮಯದಲ್ಲಿ ಕೆಲ ಆಹಾರ ಪದಾರ್ಥಗಳನ್ನು ತಿನ್ನಕೂಡದು. ಆಕಸ್ಮಾತ್ ತಿಂದಲ್ಲಿ ಕೆಲ ಅನಾರೋಗ್ಯ ಸಮಸ್ಯೆಗಳು ಕಾಡಬಹುದು, ಅಷ್ಟೇ ಅಲ್ಲದೆ ನಿಮ್ಮ ನಿದ್ದೆಯನ್ನೂ ಹಾಳು ಮಾಡಿಬಿಡಬಹುದು

ಹಾಲು

ಹಾಲು

ಹಾಲು ಪ್ರೋಟೀನ್ ಹಾಗೂ ಕ್ಯಾಲ್ಸಿಯಂಗಳಿಂದ ಸಮೃದ್ಧವಾಗಿದ್ದರೂ ರಾತ್ರಿ ಮಾತ್ರ ಹಾಲು ಕುಡಿಯಬಾರದು. ಹಾಲಿನಲ್ಲಿರುವ ಲ್ಯಾಕ್ಟೋಸ್ ಅಂಶದಿಂದ ರಾತ್ರಿ ಆಹಾರದ ಜೀರ್ಣಕ್ರಿಯೆಗೆ ಅಡ್ಡಿಯುಂಟಾಗುತ್ತದೆ. ಇದರಿಂದ ಸುಖ ನಿದ್ರೆಗೆ ಭಂಗ ಬರುತ್ತದೆ. ಅದರಲ್ಲೂ ನಿಮಗೆ ಲ್ಯಾಕ್ಟೋಸ್ ಆಗಿ ಬರದಿದ್ದರೆ ರಾತ್ರಿ ಹಾಲು ಕುಡಿಯಲೇಬಾರದು. ಅದರ ಬದಲು ಪಾಸ್ತಾ ತಿಂದು ಮಲಗಬಹುದು.

ಚಾಕೊಲೇಟ್

ಚಾಕೊಲೇಟ್

ಊಟವಾದ ನಂತರ ಒಂದು ಚಿಕ್ಕ ಚಾಕೊಲೇಟ್ ಹೋಳನ್ನು ಬಾಯಿಗೆ ಹಾಕಿಕೊಳ್ಳುವುದು ಬಹಳ ಜನರಿಗೆ ಇಷ್ಟವಾದ ಸಂಗತಿ. ಆದರೆ ಮಲಗುವ ಮುನ್ನ ಚಾಕೊಲೇಟ್ ತಿನ್ನುವುದು ಸರಿಯಲ್ಲ. ಚಾಕೊಲೇಟ್‌ನಲ್ಲಿ ಅಧಿಕ ಪ್ರಮಾಣದಲ್ಲಿರುವ ಕೆಫೀನ್ ಹಾಗೂ ಸಕ್ಕರೆಯ ಅಂಶದಿಂದ ನಿದ್ರೆ ದೂರವಾಗಬಹುದು. ಇದರಿಂದ ಮರುದಿನವಿಡೀ ಉತ್ಸಾಹವಿಲ್ಲದೆ ಬಳಲುವಂತಾಗುವ ಸಾಧ್ಯತೆಗಳಿರುತ್ತವೆ.

Most Read: ಹಾಸಿಗೆಯಲ್ಲಿ ಮಲಗಿದ ಕೂಡಲೇ ನಿದ್ರಿಸಲು ಇಲ್ಲಿವೆ ತ್ರಿಸೂತ್ರಗಳು

ಪಿಜ್ಜಾ

ಪಿಜ್ಜಾ

ಅನೇಕರಿಗೆ ಪಿಜ್ಜಾ ಎಂದರೆ ಪ್ರಾಣಕ್ಕಿಂತಲೂ ಹೆಚ್ಚು ಇಷ್ಟ. ಆದರೆ ಇದನ್ನು ದಿನದಲ್ಲಿ ಯಾವಾಗಾದರೂ ತಿನ್ನಿ, ರಾತ್ರಿ ಮಲಗುವ ಮುನ್ನ ಮಾತ್ರ ಇದರಿಂದ ದೂರವಿರುವುದೇ ಲೇಸು. ಪಿಜ್ಜಾದಲ್ಲಿರುವ ಅಧಿಕ ಕ್ಯಾಲೊರಿಗಳು ಮತ್ತು ಟ್ರಾನ್ಸ್ ಫ್ಯಾಟ್‌ಗಳು ಹೊಟ್ಟೆಯಲ್ಲಿ ಹೆಚ್ಚು ಸಮಯದವರೆಗೆ ಉಳಿದುಕೊಳ್ಳುವುದರಿಂದ ರಾತ್ರಿ ಸಮಯದಲ್ಲಿ ನೆಮ್ಮದಿ ಹಾಳಾಗಬಹುದು ಅಲ್ಲದೆ ಇದರಿಂದಾಗಿ ಸರಿಯಾಗಿ ನಿದ್ದೆಯೂ ನಿಮಗೆ ಬರದೇ ಇರಬಹುದು. ಹೀಗಾಗಿ ತಡರಾತ್ರಿ ಪಿಜ್ಜಾ ತಿನ್ನುವುದು ಬೇಡವೇ ಬೇಡ.

ಹಣ್ಣಿನ ಜ್ಯೂಸ್

ಹಣ್ಣಿನ ಜ್ಯೂಸ್

ರಾತ್ರಿ ಊಟ ಬಿಟ್ಟು ಒಂದು ಗ್ಲಾಸ್ ಜ್ಯೂಸ್ ಕುಡಿದು ಮಲಗುವ ಅಭ್ಯಾಸ ನಿಮಗಿದ್ದರೆ ಈಗಲೇ ಅದನ್ನು ಬಿಟ್ಟು ಬಿಡಿ. ರಾತ್ರಿ 9 ರ ನಂತರ ಫ್ರೂಟ್ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಆಸಿಡಿಕ್ ರಿಯಾಕ್ಷನ್ ಉಂಟಾಗುತ್ತದೆ. ಇದರಿಂದ ತಡರಾತ್ರಿ ಎದೆ ಉರಿ ಸಹ ಕಾಣಿಸಿಕೊಳ್ಳಬಹುದು, ಜೊತೆಗೆ ನಿದ್ದಗೂ ಭಂಗ ಉಂಟಾಗಲಿದೆ

ಅಲ್ಕೊಹಾಲ್

ಅಲ್ಕೊಹಾಲ್

ರಾತ್ರಿ ಸಮಯದಲ್ಲಿ ಒಂದು ಪೆಗ್ ಆಲ್ಕೊಹಾಲ್ ಸೇವನೆಯಿಂದ ಹೊಟ್ಟೆಯಲ್ಲಿ ಆಸಿಡ್ ರಿಫ್ಲಕ್ಸ್ (ಆಸಿಡ್ ಮೇಲೇಳುವಿಕೆ) ಉಂಟಾಗುತ್ತದೆ. ಅಲ್ಕೊಹಾಲ್ ಅನ್ನನಾಳವನ್ನು ಸಂಪರ್ಕಿಸುವ ನಾಳಗಳನ್ನು ಸಡಿಲಗೊಳಿಸುತ್ತದೆ. ಇದರಿಂದ ತಿಂದ ಆಹಾರ ಸರಿಯಾದ ಜಾಗಕ್ಕೆ ಸೇರದೆ ಆಸಿಡ್ ರಿಫ್ಲಕ್ಸ್ ಉಂಟಾಗುತ್ತದೆ. ಅಲ್ಲದೆ ರಾತ್ರಿ ಇಡೀ ನಿದ್ದೆ ಇರದೇ ಪರದಾಡುವ ಸ್ಥಿತಿ ಉಂಟಾಗಲಿದೆ

ಸೋಡಾ

ಸೋಡಾ

ಆಸಿಡ್ ರಿಫ್ಲಕ್ಸ್ ಉಂಟಾದಾಗ ಅಥವಾ ಜೀರ್ಣವಾಗದೆ ಪಿತ್ತ ಹೆಚ್ಚಾದಾಗ ಒಂದು ಸೋಡಾ ಕುಡಿದರೆ ಎಲ್ಲ ಸರಿಹೋಗುತ್ತದೆ ಎಂದು ನೀವಂದುಕೊಂಡಿದ್ದರೆ ಅದು ಸಂಪೂರ್ಣ ತಪ್ಪು. ನಿಜ ಹೇಳಬೇಕೆಂದರೆ ಸೋಡಾಗಿಂತ ಅಧಿಕ ಆಸಿಡಿಕ್ ಪದಾರ್ಥ ಮತ್ತೊಂದಿಲ್ಲ. ಸೋಡಾದಲ್ಲಿ ಆಸಿಡ್‌ಗಳಿಂದ ಉಂಟಾಗುವ ಕಾರ್ಬೊನೇಶನ್‌ನಿಂದ ಕವಾಟಗಳು ಹಾನಿಗೀಡಾಗಿ ಹೊಟ್ಟೆಯಲ್ಲಿ ಒತ್ತಡ ಮತ್ತಷ್ಟು ಜಾಸ್ತಿಯಾಗುತ್ತದೆ.

 ಟೊಮೆಟೊ ಸಾಸ್

ಟೊಮೆಟೊ ಸಾಸ್

ನಾಲಿಗೆಗೆ ರುಚಿ ನೀಡುವ ಟೊಮ್ಯಾಟೊ ಸಾಸ್ ಅನ್ನು ರಾತ್ರಿ ಹೊತ್ತು ಸೇವಿಸದಿರುವುದೇ ಉತ್ತಮ. ಇದು ಅಧಿಕ ಆಸಿಡಿಕ್ ಆಹಾರ ಪದಾರ್ಥವಾಗಿರುವುದರಿಂದ ರಾತ್ರಿ ಸೇವಿಸಿದಲ್ಲಿ ಮರುದಿನ ಬೆಳಗ್ಗೆ ಎದೆ ಉರಿ ಹಾಗೂ ಅಜೀರ್ಣದ ಸಮಸ್ಯೆಗಳು ಎದುರಾಗಬಹುದು. ಆದರೂ ರಾತ್ರಿ ಒಂದು ಬಟ್ಟಲು ಸ್ಫಾಗೆಟ್ಟಿ (ನೂಡಲ್ಸ್) ತಿನ್ನಬಹುದು. ಏನೇ ಆದರೂ ರಾತ್ರಿ ಮಲಗುವ ಮೂರು ಗಂಟೆ ಮೊದಲು ಊಟ ಮಾಡುವುದು ಒಳಿತು ಎಂಬುದು ಆಹಾರ ತಜ್ಞರ ಅಭಿಪ್ರಾಯವಾಗಿದೆ. ಹೆಚ್ಚು ಎಣ್ಣೆ ಹಾಗೂ ಮಸಾಲೆಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ರಾತ್ರಿ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಎದೆ ಉರಿ ಕಾಣಿಸಿಕೊಳ್ಳಬಹುದು ಹಾಗೂ ಇದರಿಂದ ನಿದ್ರಾಭಂಗ ಆಗಬಹುದು. ರುಚಿಯಾದ ಮಸಾಲೆ ಪದಾರ್ಥಗಳನ್ನು ತಿಂದು ಮಲಗಿದಾಗ ಏಕೆ ಸರಿಯಾಗಿ ನಿದ್ರೆ ಬಂದಿಲ್ಲ ಎಂಬುದು ನಿಮಗೆ ಈಗ ಅರ್ಥವಾಗಿರಬಹುದು.

Most Read: ಮೀನು ಸೇವಿಸಿದರೆ, ಹೃದಯಕ್ಕೆ ಒಳ್ಳೆಯದು ಅಲ್ಲದೆ ಹಲವಾರು ಕಾಯಿಲೆಗಳನ್ನೂ ನಿವಾರಿಸಬಹುದು

ಸಂಸ್ಕರಿಸಿದ ಮಾಂಸ ಹಾಗೂ ಚೀಸ್

ಸಂಸ್ಕರಿಸಿದ ಮಾಂಸ ಹಾಗೂ ಚೀಸ್

ಸಂಸ್ಕರಿಸಿದ ಮಾಂಸದ ಪದಾರ್ಥಗಳು ಹಾಗೂ ಚೀಸ್ ಅನ್ನು ದಿನದ ಅವಧಿಯಲ್ಲಿ ತಿನ್ನುವುದು ಒಳ್ಳೆಯದು. ಆದರೆ ಮಲಗುವ ಮುನ್ನ ಇವನ್ನು ತಿನ್ನಕೂಡದು. ಸಂಸ್ಕರಿಸಿದ ಮಾಂಸ ಹಾಗೂ ಚೀಸ್‌ಗಳಲ್ಲಿ ಇರುವ ಟೈರಾಮೈನ್ ಹಾಗೂ ಅಮೀನೊ ಆಸಿಡ್‌ಗಳು ನಿಮ್ಮನ್ನು ಎಚ್ಚರವಾಗಿರುವಂತೆ ಮಾಡುತ್ತವೆ. ಇದು ಸಹಜವಾಗಿಯೇ ನಿದ್ರೆಯನ್ನು ಹಾಳು ಮಾಡುತ್ತದೆ.

ಖಾರ ಪದಾರ್ಥಗಳು

ಖಾರ ಪದಾರ್ಥಗಳು

ಸಾಮಾನ್ಯವಾಗಿ ಮಾಂಸಾಹಾರಿಗಳು ಖಾರವನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಖಾರ ನೀಡಲು ಉಪಯೋಗಿಸುವ ಮೆಣಸು ರಾತ್ರಿ ಹೊತ್ತು ತಿನ್ನಲೇಬಾರದ ಆಹಾರಗಳಲ್ಲಿ ಒಂದಾಗಿದೆ. ತಾರುಣ್ಯದಲ್ಲಿ ಈ ಮೆಣಸಿನ ಪ್ರಭಾವವನ್ನು ದೇಹ ತಾಳಿಕೊಳ್ಳಲು ಶಕ್ಯವಿರುವುದರಿಂದ ಹೆಚ್ಚಿನವರು ಈ ಬಗ್ಗೆ ತಲೆಬಿಸಿಮಾಡಿಕೊಳ್ಳದೇ ಸಾಕಷ್ಟು ಖಾರವನ್ನು ಸೇವಿಸುತ್ತಾರೆ. ಆದರೆ ನಲವತ್ತು ದಾಟಿದ ಬಳಿಕ ದೇಹದ ರಕ್ಷಣಾ ವ್ಯವಸ್ಥೆ ಕೊಂಚ ಶಿಥಿಲವಾಗುವುದರಿಂದ ನಿಧಾನಕ್ಕೆ ಖಾರದ ಪ್ರಭಾವ ಅರಿವಿಗೆ ಬರುತ್ತದೆ. ಅಜೀರ್ಣ, ಹೊಟ್ಟೆಯಲ್ಲಿ ಉರಿ, ಕರುಳು ಹುಣ್ಣು ಮೊದಲಾದ ತೊಂದರೆಗಳು ಎದುರಾಗುತ್ತವೆ. ಅಪರೂಪಕ್ಕೊಮ್ಮೆ ಖಾರ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದ ಬಳಿಕ ಕೊಂಚ ಮೊಸರು ಮತ್ತು ಮಜ್ಜಿಗೆಯನ್ನು ಸೇವಿಸುವುದರಿಂದ ಈ ತೊಂದರೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಬಹುದು.

English summary

Foods That Disrupt Your night Sleep, So Avoid them

Eating right before bed is anyway not a very healthy habit. The ideal time for supper is at least three hours before bed. Eating right before bedtime is the key recipe for perfect sleep and good digestion. Not all foods you eat at night are unhealthy. But there are some foods you should definitely not eat before going to bed. They can be the reason for a rough night ahead. Though a very rich source of protein and calcium, milk is something you should definitely avoid before going to bed.
Story first published: Monday, October 29, 2018, 20:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X