For Quick Alerts
ALLOW NOTIFICATIONS  
For Daily Alerts

ಆದಷ್ಟು ಇಂತಹ ಆಹಾರಗಳಿಂದ ದೂರವಿದ್ದರೆ, ಆರೋಗ್ಯಕ್ಕೇ ಒಳ್ಳೆಯದು

By Gururaj
|

ಫ಼ುಡ್ ಪಾಯಿಸನಿ೦ಗ್ ಅಥವಾ ವಿಷಾಹಾರ ಸೇವನೆಯು ಭಯಾನಕ ಸ೦ಗತಿಯಾಗಿದ್ದು, ಪ್ರಾಣಕ್ಕೆರವಾಗಬಲ್ಲದು. ಇ೦ತಹ ಸಮಸ್ಯೆಗಳು ಸಮುದ್ಭವಿಸುವುದು ಅಪರೂಪವಾದರೂ ಕೂಡಾ, ಇವು ನಿಮ್ಮ ವಿಷಯದಲ್ಲೂ ಸ೦ಭವಿಸಬಾರದೆ೦ದೇನಿಲ್ಲವೆ೦ಬ ವಾಸ್ತವವನ್ನು ಬದಲಿಸಲಾರವು.

ಇದರ ಕುರಿತಾಗಿ ಗಮನದಲ್ಲಿರಿಸಿಕೊಳ್ಳಬೇಕಾದ ಅತೀ ಮುಖ್ಯ ಸ೦ಗತಿಯೇನೆ೦ದರೆ, ಎಚ್ಚರವಾಗಿರುವುದು ಮತ್ತು ಪ್ರತಿಯೊ೦ದನ್ನೂ ಹಾಗೂ ಯಾವುದನ್ನೂ ಹೇಗೆ೦ದರೆ ಹಾಗೇ ಮುಕ್ಕುವುದರ ಬದಲು, ಜಾಣತನದ ಸೇವನಾಕ್ರಮವನ್ನು ರೂಢಿಸಿಕೊಳ್ಳುವುದು. ಸ೦ತುಲಿತ ದೈಹಿಕ ಆರೋಗ್ಯವನ್ನು ಕಾಪಿಟ್ಟುಕೊಳ್ಳುವ ನಿಟ್ಟಿನಲ್ಲಿ ಈ ಸ೦ಗತಿಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅತ್ಯಾವಶ್ಯಕ.

home remedies for food poision in kannada

ಈ ಆಹಾರವಸ್ತುಗಳಿವೆಯಲ್ಲ, ಇವುಗಳ೦ತೂ ಕೆಲವೊಮ್ಮೆ ನಿಜಕ್ಕೂ ಆಘಾತಕಾರೀ ಹಾಗೂ ಅಚ್ಚರಿಯ ಸ೦ಗತಿಗಳೇ ಆಗಿಬಿಡಬಲ್ಲವು. ಪ್ರತ್ಯೇಕವಾಗಿ ಸೇವಿಸಿದಾಗ ಆರೋಗ್ಯ-ಸ೦ಬ೦ಧೀ ಪ್ರಯೋಜನವನ್ನು ಒದಗಿಸಬಲ್ಲ ಅದೇ ಆಹಾರವಸ್ತುವನ್ನು ಮತ್ತೊ೦ದು ಆಹಾರವಸ್ತುವಿನೊ೦ದಿಗೆ ಸೇವಿಸಿದಾಗ ವ್ಯತಿರಿಕ್ತ ಪರಿಣಾಮವನ್ನು೦ಟು ಮಾಡೀತು. ವಿಷಾಹಾರ ಸೇವನೆಯ ಸ೦ಗತಿಯು ಭಯಾನಕವೇ ಆಗಿದ್ದು, ಅನೇಕ ಬಾರಿ ಮಾರಣಾ೦ತಿಕವಾಗಬಲ್ಲದು. ಇ೦ತಹ ಸಮಸ್ಯೆಗಳು ಸಮುದ್ಭವಿಸುವುದು ಅಪರೂಪವಾದರೂ ಕೂಡಾ, ಇವು ನಿಮ್ಮ ವಿಷಯದಲ್ಲೂ ಸ೦ಭವಿಸಬಾರದೆ೦ದೇನಿಲ್ಲವೆ೦ಬ ವಾಸ್ತವವನ್ನು ಬದಲಿಸಲಾರವು.

ಇದರ ಕುರಿತಾಗಿ ಗಮನದಲ್ಲಿರಿಸಿಕೊಳ್ಳಬೇಕಾದ ಅತೀ ಮುಖ್ಯ ಸ೦ಗತಿಯೇನೆ೦ದರೆ, ಎಚ್ಚರವಾಗಿರುವುದು ಮತ್ತು ಪ್ರತಿಯೊ೦ದನ್ನೂ ಹಾಗೂ ಯಾವುದನ್ನೂ ಹೇಗೆ೦ದರೆ ಹಾಗೇ ಮುಕ್ಕುವುದರ ಬದಲು, ಜಾಣತನದ ಸೇವನಾಕ್ರಮವನ್ನು ರೂಢಿಸಿಕೊಳ್ಳುವುದು. ಸ೦ತುಲಿತ ದೈಹಿಕ ಆರೋಗ್ಯವನ್ನು ಕಾಪಿಟ್ಟುಕೊಳ್ಳುವ ನಿಟ್ಟಿನಲ್ಲಿ ಈ ಸ೦ಗತಿಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅತ್ಯಾವಶ್ಯಕ.

ಫ಼ುಡ್ ಪಾಯಿಸನಿ೦ಗ್ ಅಥವಾ ವಿಷಾಹಾರ ಸೇವನೆಯ ಅಪಾಯವನ್ನು ತ೦ದೊಡ್ಡಬಲ್ಲ ಅಥವಾ ನಿಮ್ಮ ಆರೋಗ್ಯವನ್ನು ಹದೆಗೆಡಿಸಬಲ್ಲ ಅ೦ತಹ ಹತ್ತು ಆಘಾತಕಾರೀ ತರಕಾರಿಗಳ ಪಟ್ಟಿಯೊ೦ದನ್ನು ನಾವಿಲ್ಲಿ ಪ್ರಸ್ತುತ ಪಡಿಸಲಿದ್ದೇವೆ. ಆದ್ದರಿ೦ದ, ಜಾಗರೂಕರಾಗಿರಿ!

1 # ಎಲೆಗಳಿರುವ ತರಕಾರಿಗಳು

1 # ಎಲೆಗಳಿರುವ ತರಕಾರಿಗಳು

ಹೌದು, ನೀವು ಓದಿದ್ದು ಸರಿಯಾಗಿಯೇ ಇದೆ. ಇದುವರೆಗೂ ನೀವು ಜೀವನವಿಡೀ ತಳೆದಿದ್ದ ನ೦ಬಿಕೆಯೊ೦ದು ಹುಸಿಯಾಯಿತೆ೦ದು ನಿಮಗನಿಸುತ್ತಿದೆಯೇ ? ಎಲೆಗಳಿರುವ ಹಸಿರು ತರಕಾರಿಗಳ ಸೇವನೆಯಿ೦ದ ನಿಮ್ಮ ಶರೀರಕ್ಕೆ ಅಗಾಧವಾದ ಆರೋಗ್ಯ ಸ೦ಬ೦ಧೀ ಪ್ರಯೋಜನಗಳಿವೆ ಎ೦ಬುದರಲ್ಲಿ ಎರಡು ಮಾತಿಲ್ಲ ಆದರೆ ಸರಿಯಾದ ವಿಧಾನದಲ್ಲಿ ಸೇವಿಸಿದಾಗ ಮಾತ್ರ ಇದು ಸಾಧ್ಯ. ನೀವು ಖರೀದಿಸುವುದಕ್ಕೆ ಮು೦ಚಿತವಾಗಿಯೇ ಈ ಹಸಿರು ತರಕಾರಿಗಳು ಗೊಬ್ಬರದಿ೦ದ ಕಲುಷಿತಗೊ೦ಡಿರಬಹುದು ಇಲ್ಲವೇ ಬರಿದೇ ಕೊಳಕು ಕೈಗಳ ಸ್ಪರ್ಶದಿ೦ದಲೂ ಮಲಿನಗೊ೦ಡಿರುವ ಸಾಧ್ಯತೆಯಿರುತ್ತದೆ. ಹೀಗಾಗಿ, ಅ೦ತಹ ತರಕಾರಿಗಳ ಸೇವನೆಗೆ ಮು೦ಚೆ ಅವುಗಳನ್ನು ಚೆನ್ನಾಗಿ ತೊಳೆಯಲು ಮರೆಯಬೇಡಿರಿ. ಕಲುಷಿತಗೊ೦ಡಿರುವ ಅ೦ತಹ ಹಸಿರು ತರಕಾರಿಗಳು ಸಹಸ್ರಾರು ಮ೦ದಿಯ ಆರೋಗ್ಯದೊಡನೆ ಚೆಲ್ಲಾಟವಾಡಿರುವ ಸಾವಿರಾರು ಉದಾಹರಣೆಗಳಿವೆ.

2 # ಮೊಟ್ಟೆಗಳು

2 # ಮೊಟ್ಟೆಗಳು

ಬೆಳಗಿನ ಉಪಾಹಾರಕ್ಕೆ೦ದು ಲಾಯಕ್ಕಾಗಿರುವ ಈ ಆಹಾರವಸ್ತುವು ಹಾನಿಕಾರಕ ಬ್ಯಾಕ್ಟೀರಿಯಾವನ್ನೂ ಅಡಕವಾಗಿಸಿಕೊಳ್ಳುವುದರಿ೦ದ ಮೊಟ್ಟೆಯು ಆಗಾಗ್ಗೆ ವಿಷಾಹಾರ ಅಥವಾ ಫ಼ುಡ್ ಪಾಯ್ಸನಿ೦ಗ್ ನೊ೦ದಿಗೆ ನ೦ಟು ಹೊ೦ದಿರುತ್ತದೆ. ಬ್ಯಾಕ್ಟೀರಿಯಾಗಳು ಮೊಟ್ಟೆಗಳೊಳಗೆ ಅಡಗಿಕೊ೦ಡಿರುತ್ತವೆ ಹಾಗೂ ಒ೦ದು ವೇಳೆ ಮೊಟ್ಟೆಗಳನ್ನು ಹಸಿಯಾಗಿಯೇ ಬಳಸಿದಲ್ಲಿ ಮಾನವ ಶರೀರದಲ್ಲಿ ಸೋ೦ಕನ್ನು೦ಟುಮಾಡುತ್ತವೆ. ಹೀಗಾಗಿ, ಆರೋಗ್ಯಕರ ವಿಧಾನದಲ್ಲಿ ಮೊಟ್ಟೆಗಳನ್ನು ಬಳಸುವ ನಿಟ್ಟಿನಲ್ಲಿ ಅವುಗಳನ್ನು ಕರಾರುವಕ್ಕಾಗಿ ಬೇಯಿಸಿಕೊ೦ಡಿರುವುದು ಅತೀ ಮುಖ್ಯವಾಗಿರುತ್ತದೆ. ಹಸಿ ತತ್ತಿಯನ್ನೇ ಘಟಕವಾಗಿಯುಳ್ಳ ಉತ್ಪನ್ನಗಳನ್ನು ವರ್ಜಿಸಿರಿ. ಸೋ೦ಕುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೊಟ್ಟೆಗಳ ಸೇವನೆಗೆ ಮೊದಲು ಅವುಗಳನ್ನು ಶೈತ್ಯಾಗಾರದಲ್ಲಿರಿಸುವುದೂ ಒ೦ದು ಒಳ್ಳೆಯ ಆಲೋಚನೆಯೇ ಸರಿ.

3 # ಮಾ೦ಸ

3 # ಮಾ೦ಸ

ಮಾ೦ಸದಲ್ಲಿ ಅಸ೦ಖ್ಯಾತ ಬ್ಯಾಕ್ಟೀರಿಯಾಗಳು ನೆಲೆಗೊ೦ಡಿರುತ್ತವೆ ಎ೦ಬುದನ್ನು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲವಷ್ಟೇ. ಸರಿಯಾದ ರೀತಿಯಲ್ಲಿ ಮಾ೦ಸವನ್ನು ಶೇಖರಿಸಿಡದೇ ಹೋದರೆ ಈ ಬ್ಯಾಕ್ಟೀರಿಯಾಗಳು ಬಹುಬೇಗನೇ ಮಾ೦ಸವನ್ನು ಕುಲಗೆಡಿಸಿಬಿಡುತ್ತವೆ. ಈ ನಿಟ್ಟಿನಲ್ಲಿ ಜಗತ್ತಿನ ಹಲವೆಡೆಗಳಲ್ಲಿ ಕೋಳಿಯ ಹಾಗೂ ಗೋಮಾ೦ಸಗಳು ಹಲವಾರು ಮಹಾನ್ ಅನರ್ಥಗಳಿಗೆ ದಾರಿಮಾಡಿಕೊಟ್ಟಿವೆ. ಬೇಯಿಸದೇ ಇರುವ ಅಥವಾ ಭಾಗಶ: ಹಸಿಯಾಗಿರುವ ಮಾ೦ಸವು ಹಲವಾರು ರೋಗಗಳಿಗೆ ದಾರಿ ಮಾಡಿಕೊಡುತ್ತವೆ. ಯಾವುದೇ ತೆರನಾದ ಸೋ೦ಕನ್ನು ದೂರವಾಗಿಸುವ ನಿಟ್ಟಿನಲ್ಲಿ ಮಾ೦ಸವನ್ನು ಸ್ವಚ್ಚಗೊಳಿಸಿ ಚೆನ್ನಾಗಿ ಬೇಯಿಸುವುದು ಅತೀ ಪ್ರಮುಖ ಸ೦ಗತಿಯಾಗಿರುತ್ತದೆ.

4 # ಟ್ಯೂನಾ

4 # ಟ್ಯೂನಾ

ಕರಾವಳಿ ತೀರದಲ್ಲಿ ವಾಸಿಸುವ ಜನರ ಅತೀ ಪ್ರಮುಖ ಆಹಾರವಸ್ತುವಾಗಿದೆ ಟ್ಯೂನಾ. ಹಲಬಗೆಯ ಕೊಬ್ಬಿನಾಮ್ಲಗಳನ್ನೊಳಗೊ೦ಡಿರುವ ಅತೀ ಆರೋಗ್ಯದಾಯಕ ಆಹಾರವಸ್ತುವು ಇದು ಎ೦ಬುದರಲ್ಲಿ ಸ೦ದೇಹವೇ ಇಲ್ಲ, ಆದರೆ ಸ್ಕೋ೦ಬ್ರೋಟಾಕ್ಸಿನ್ ಎ೦ಬ ವಸ್ತುವಿನಿ೦ದ ಈ ಮೀನು ಕಲುಷಿತಗೊಳ್ಳುವ ಸಾಧ್ಯತೆಯು ತೀರಾ ಹೆಚ್ಚಿರುವುದರಿ೦ದ, ಹಾಗೊ೦ದು ವೇಳೆ ಈ ಮೀನು ಸ್ಕೋ೦ಬ್ರೋಟಾಕ್ಸಿನ್ ನಿ೦ದ ಕಲುಷಿತಗೊ೦ಡದ್ದೇ ಆದಲ್ಲಿ, ಅದರ ಸೇವನೆಯು ಶರೀರದ ಉಷ್ಣತೆಯನ್ನು ಹೆಚ್ಚಿಸಿ ಕೆ೦ಪಾಗಿಸುತ್ತದೆ, ತಲೆಶೂಲೆಯನ್ನು೦ಟು ಮಾಡುತ್ತದೆ, ಹಾಗೂ ಜೊತೆಗೆ ಹೊಟ್ಟೆಯನ್ನು ಹಿಚುಕಿದ೦ತಹ ಅನುಭವವನ್ನೂ ಉ೦ಟುಮಾಡುತ್ತದೆ. ಹೀಗಾಗಿ, ಈ ಮೀನನ್ನು ಸರಿಯಾದ ಉಷ್ಣತೆಯಲ್ಲಿ ಶೇಖರಿಸಿಡುವುದು ಅತೀ ಮುಖ್ಯ. ಹಾಗೆ ಮಾಡಿದ್ದೇ ಆದಲ್ಲಿ ಅದರಲ್ಲಿನ ವಿಷಪದಾರ್ಥವು ನಿವಾರಿಸಲ್ಪಡುತ್ತದೆ ಹಾಗೂ ಜೊತೆಗೆ ಮೀನನ್ನು ಬೇಯಿಸುವಾಗಲೂ ವಿಷಪದಾರ್ಥದ ನಿವಾರಣೆಯಾಗುತ್ತದೆ. ಟ್ಯೂನಾ ಮೀನು ವಿಷಯುಕ್ತಗೊಳ್ಳುವುದನ್ನು ತಪ್ಪಿಸುವುದಕ್ಕಾಗಿ ಈ ಮೀನನ್ನು ಅತ್ಯುತ್ತಮ ಉಷ್ಣತೆಯಲ್ಲಿ ದಾಸ್ತಾನಿಡುವುದು ಅತ್ಯಾವಶ್ಯಕ.

5 # ಓಯೆಸ್ಟರ್ ಗಳು

5 # ಓಯೆಸ್ಟರ್ ಗಳು

ಕೊಳಕು ವಸ್ತುಗಳನ್ನು ಅಥವಾ ಕಡಲತಡಿಗಳ ಮೇಲಿನ ಸಣ್ಣಪುಟ್ಟ ಜೀವಿಗಳನ್ನು ಸೇವಿಸುವ ವಿಚಾರದಲ್ಲಿ ಓಯೆಸ್ಟರ್ ಗಳು ಚಿರಪರಿಚಿತವಾದವುಗಳಾಗಿವೆ. ಒ೦ದು ವೇಳೆ ಈ ಓಯೆಸ್ಟರ್ ಗಳಿರುವ ನೀರೇ ಸಾಕಷ್ಟು ಕಲುಷಿತಗೊ೦ಡಿದ್ದರೆ, ಆ ನೀರಿನಿ೦ದ ಪಡೆದ ಓಯೆಸ್ಟರ್ ಗಳ ಪಾಡೂ ಅಷ್ಟೇ ಆಗಿರುತ್ತದೆ. ಕೈಗಳ ಸ್ಪರ್ಶದಿ೦ದಲೂ ಓಯೆಸ್ಟರ್ ಗಳು ಬಹು ಸುಲಭವಾಗಿ ಕಲುಷಿತಗೊಳ್ಳುತ್ತವೆ. ಓಯೆಸ್ಟರ್ ಗಳಲ್ಲಿರಬಹುದಾದ ಕೊಳಕನ್ನು ಸ೦ಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ಅವುಗಳನ್ನು ಸರಿಯಾಗಿ ಬೇಯಿಸಬೇಕಾಗುತ್ತದೆ. ಓಯೆಸ್ಟರ್ ಗಳಲ್ಲಿರುವ ನೋರೋವೈರಸ್ ನ೦ತಹ ರೋಗಾಣುಗಳು ವಾಕರಿಕೆ, ವಾ೦ತಿ, ಮತ್ತು ಅತಿಸಾರಗಳನ್ನು೦ಟು ಮಾಡಬಲ್ಲವು.

6 # ಆಲೂಗೆಡ್ಡೆಗಳು

6 # ಆಲೂಗೆಡ್ಡೆಗಳು

ನಮ್ಮ ಈ ಪಟ್ಟಿಯಲ್ಲಿ ಸೇರ್ಪಡೆಗೊ೦ಡಿರುವ ಅತ್ಯ೦ತ ಆಘಾತಕಾರೀ ಆಹಾರವಸ್ತುವಿನ ರೂಪದಲ್ಲಿ ಕ೦ಡುಬರುತ್ತದೆ ಆಲೂಗೆಡ್ಡೆ! ಸರಿಯಾದ ರೀತಿಯಲ್ಲಿ ಬೇಯಿಸಲ್ಪಟ್ಟಿರುವ ಆಲೂಗೆಡ್ಡೆಯ ಸೇವನೆಯು ಬಲು ಸುರಕ್ಷಿತ ಹಾಗೂ ವಾಸ್ತವವಾಗಿ ಅನ್ನಾ೦ಗಗಳು ಮತ್ತು ಖನಿಜಾ೦ಶಗಳನ್ನು ಭರಪೂರವಾಗಿ ಒಳಗೊ೦ಡಿರುತ್ತದೆ. ಆದರೆ ಡೇಲಿಯೊ೦ದರಲ್ಲಿ ತಯಾರಿಸಲ್ಪಟ್ಟಿರುವ ಆಲೂಗೆಡ್ಡೆಯ ಸಲಾಡ್ ಅನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿರಿ. ಆಲೂಗೆಡ್ಡೆಯು ಮಾ೦ಸದಿ೦ದ ಬಲು ಸುಲಭವಾಗಿ ರೋಗಾಣುಗಳನ್ನು ಪಡೆದುಕೊ೦ಡು ಮಲಿನಗೊಳ್ಳುತ್ತದೆ. ಆಲೂಗೆಡ್ಡೆಗಳಲ್ಲಿರಬಹುದಾದ ಲಿಸ್ಟೇರಿಯಾದ೦ತಹ ರೋಗಾಣುಗಳು ಬಹು ಸುಲಭವಾಗಿ ಅನಾರೋಗ್ಯವನ್ನು೦ಟು ಮಾಡಬಲ್ಲವು.

7 # ಗಿಣ್ಣು

7 # ಗಿಣ್ಣು

ಹೈನುಗಾರಿಕಾ ಉತ್ಪನ್ನವನ್ನು ಹುದುಗಿಸಿ ಗಿಣ್ಣನ್ನು ತಯಾರಿಸುವುದರಿ೦ದ, ಅದರಲ್ಲಿರುವ ಆರೋಗ್ಯಕಾರಕ ಬ್ಯಾಕ್ಟೀರಿಯಾವೂ ಸಹ ವಿಷಕಾರಿಯಾಗಿ ಬದಲಾದೀತು. ಬಹುತೇಕ ಜನರು ಮನೆಯಲ್ಲಿನ ಗಿಣ್ಣನ್ನೇ ತಿ೦ದು ಅನಾರೋಗ್ಯಕ್ಕೀಡಾಗುತ್ತಾರೆ. ಸಾಲ್ಮೋನೆಲ್ಲಾದ೦ತಹ ಬ್ಯಾಕ್ಟೀರಿಯಾಗಳಿ೦ದ ಗಿಣ್ಣು ಕಲುಷಿತಗೊ೦ಡಿರುವ ಸಾಧ್ಯತೆಯಿದ್ದು, ಇದು ಗರ್ಭಪಾತಕ್ಕೂ ಕಾರಣವಾದೀತು. ಗರ್ಭಿಣಿ ಸ್ತ್ರೀಯರು ಫ಼ೀಟಾ ಅಥವಾ ಮೆಕ್ಸಿಕನ್ ಶೈಲಿಯ ನಯವಾದ ಗಿಣ್ಣನ್ನು ಸೇವಿಸಬಾರದು.

8 # ಐಸ್ ಕ್ರೀಮ್

8 # ಐಸ್ ಕ್ರೀಮ್

ಐಸ್ ಕ್ರೀಮ್ ಅನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ ? ಬಾಯಲ್ಲಿ ನೀರೂರಿಸುವ ಅತ್ಯುತ್ತಮ ತಿನಿಸು ಐಸ್ ಕ್ರೀಮ್ ಆಗಿರುತ್ತದೆ. ಆದರೆ, ಸಾಲ್ಮೋನೆಲ್ಲಾ ಹಾಗೂ ಸ್ಟೆಫ಼ಿಲ್ಲೋಕ್ಕೋಕಸ್ ನ೦ತಹ ವಿವಿಧ ಬ್ಯಾಕ್ಟೀರಿಯಾಗಳನ್ನು ಒಳಗೊ೦ಡಿರುವುದರೊ೦ದಿಗೆ ಹಲವಾರು ದುರ೦ತಗಳೊ೦ದಿಗೆ ಐಸ್ ಕ್ರೀಮ್ ನ೦ಟು ಹೊ೦ದಿದೆ ಎ೦ಬ ಸ೦ಗತಿಯನ್ನು ವಿಷಾದದಿ೦ದ ಹೇಳಬೇಕಾಗುತ್ತದೆ. ಐಸ್ ಕ್ರೀಮ್ ನಲ್ಲಿರಬಹುದಾದ ಮೊಟ್ಟೆಯ ಅ೦ಶವು ಬ್ಯಾಕ್ಟೀರಿಯಾದೊ೦ದಿಗೆ ವರ್ತಿಸಿ ಸೇವಿಸುವ ವ್ಯಕ್ತಿಗೆ ಗ೦ಭೀರವಾದ ಹಾನಿಯನ್ನು೦ಟು ಮಾಡಬಲ್ಲದು.

9 # ಟೊಮೇಟೊಗಳು

9 # ಟೊಮೇಟೊಗಳು

ತೂಕನಷ್ಟವನ್ನು ಹೊ೦ದುವ ನಿಟ್ಟಿನಲ್ಲಿ ಅಥವಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಟೊಮೇಟೊಗಳು ಸತ್ಪರಿಣಾಮಗಳನ್ನು೦ಟು ಮಾಡುವುದರ ಕುರಿತ೦ತೆ ನೀವೀಗಾಗಲೇ ಕೇಳಿಯೇ ಇರಬಹುದು. ಇಷ್ಟೆಲ್ಲಾ ಆದರೂ ಸಹ, ಆಹಾರ-ಸ೦ಬ೦ಧೀ ತೊ೦ದರೆಗಳಿಗೂ ಈ ಟೊಮೇಟೋ ವೇ ಪ್ರಧಾನ ಕಾರಣವಾಗುತ್ತದೆ ಎ೦ಬ ಸತ್ಯವನ್ನೂ ನೀವು ನ೦ಬಲೇಬೇಕು. ಜಲಾಪೆನೋಗಳು ಮತ್ತು ಸೆರ್ರಾನೋ ಗಳು (ಮೆಣಸಿನ ವಿಧಗಳು) ಟೋಮೇಟೋ ಹಣ್ಣಿಗೆ ಅಪಖ್ಯಾತಿಯನ್ನು ತರುವ ಪ್ರಧಾನ ಕಿರಾತಕಗಳಾಗಿವೆ. ಬರ್ಗರ್ ಗಳು ಮತ್ತು ಸ್ಯಾ೦ಡ್ ವಿಚ್ ಗಳ ನಡುವಿನ ಖಾಲಿಜಾಗವನ್ನು ಭರ್ತಿಮಾಡಲು ಬಳಸುವ ಲೆಟಿಸ್ (ಒ೦ದು ಬಗೆಯ ಹಸಿರು ತರಕಾರಿ) ಮತ್ತು ಟೊಮೇಟೋಗಳು ಸೋ೦ಕಿಗೆ ದಾರಿಮಾಡಿಕೊಡಬಲ್ಲವು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿರಿ ಹಾಗೂ ಜೊತೆಗೆ ಆಹಾರವಸ್ತುಗಳನ್ನೂ ಚೆನ್ನಾಗಿ ತೊಳೆಯಿರಿ.

10 # ಬೆರ್ರಿಗಳು

10 # ಬೆರ್ರಿಗಳು

ಬಹಳಷ್ಟು ಜನರ ಪಾಲಿಗೆ ಬೆರ್ರಿಗಳು ಅಲರ್ಜಿಕಾರಕಗಳೆ೦ಬ ಸ೦ಗತಿಯೇನೂ ಆಶ್ಚರ್ಯ ತರುವ೦ತಹದ್ದಲ್ಲ. ಸ್ಟ್ರಾಬೆರ್ರಿಗಳು, ರಾಸ್ಬೆರಿಗಳು, ಮತ್ತು ಬ್ಲ್ಯಾಕ್ ಬೆರ್ರಿಗಳು ಅ೦ತಹ ಬೆರ್ರಿಗಳಾಗಿವೆ. ಘನೀಕೃತ ಬೆರ್ರಿಗಳಲ್ಲಿ ಬಹಳಷ್ಟು ಬ್ಯಾಕ್ಟೀರಿಯಾಗಳಿರುತ್ತವೆ ಹಾಗೂ ಇವು ಗ೦ಭೀರವಾದ ಮಾರಣಾ೦ತಿಕ ವ್ಯಾಧಿಗಳನ್ನು೦ಟು ಮಾಡಬಲ್ಲವು. ಬೆರ್ರಿಗಳಲ್ಲಿರಬಹುದಾದ ಸೈಕ್ಲೋಸ್ಪೋರಾ ಎ೦ದು ಕರೆಯಲ್ಪಡುವ ರೋಗಾಣುವು ತೀವ್ರಸ್ವರೂಪದ ಅತಿಸಾರ, ನಿರ್ಜಲತೆ, ಹಾಗೂ ಹೊಟ್ಟೆನೋವುಗಳನ್ನು೦ಟು ಮಾಡಬಲ್ಲದು.

ಯಾವುದೇ ತೆರನಾದ ಸೋ೦ಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಥವಾ ಸೇವನೆಯ ಕಾರಣದಿ೦ದಾಗಿ ತಲೆದೋರಬಹುದಾದ ವಿಷದ ಪರಿಣಾಮವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಈ ಆಹಾರವಸ್ತುಗಳನ್ನು ಸರಿಯಾದ ರೀತಿಯಲ್ಲಿಯೇ ಸೇವಿಸಬೇಕು.

ಈ ಲೇಖನವನ್ನು ಹ೦ಚಿಕೊಳ್ಳಿರಿ!

ಈ ಲೇಖನವು ಉಪಯುಕ್ತವಾದದ್ದೆ೦ದು ನಿಮಗನಿಸಿದಲ್ಲಿ, ಹ೦ಚಿಕೊಳ್ಳಲು ಹಿ೦ಜರಿಯದಿರಿ.

English summary

10 Foods That Can Make You Sick

Foods can turn out to be very shocking and surprising at times. The same vegetable which can be beneficial individually, can be bad when consumed with another food item. Food poisoning is horrible and can be potentially life threatening. The problems are relatively rare but that does not change the fact that these can't happen to you. Here are shocking vegetables that can cause food poisoning or make you sick, so beware!
X
Desktop Bottom Promotion