For Quick Alerts
ALLOW NOTIFICATIONS  
For Daily Alerts

ಬರೀ ಒಂದೆರಡು ದಿನಗಳಲ್ಲಿಯೇ ಮೂಲವ್ಯಾಧಿ ರೋಗಕ್ಕೆ ಪರಿಹಾರ...

By
|

ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಬಂದರೆ ವಿಪರೀತ ನೋವಿನಿಂದ ಒದ್ದಾಡಬೇಕಾಗುತ್ತದೆ. ಪೈಲ್ಸ್ ಬೇರೆ-ಬೇರೆ ಗಾತ್ರದಲ್ಲಿ ಕಂಡು ಬರುವುದು, ಕೆಲವರಿಗೆ ಗುದದ್ವಾರ ಹೊರಗೆ ಪೈಲ್ಸ್ ಉಂಟಾದರೆ, ಮತ್ತೆ ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಉಂಟಾಗುವುದು. ಈ ಕಾಯಿಲೆ ಹೆಚ್ಚಾದರೆ ರಕ್ತಸ್ರಾವ ಕಂಡು ಬರುವುದು ಹಾಗೂ ಮಲವಿಸರ್ಜನೆಗೆ ಹೋಗುವಾಗ ವಿಪರೀತ ನೋವು ಕಂಡು ಬರುವುದು, ಕೂರುವುದು, ನಡೆಯುವುದು ಕೂಡ ಕಷ್ಟವಾಗುವುದು.

ಇದಕ್ಕೆ ಆರ್ಯುವೇದ ಅಥವಾ ಅಲೋಪತಿ ಔಷಧಿ ತೆಗೆದುಕೊಂಡರೆ, ಕೆಲವರು ಆಪರೇಷನ್ ಮಾಡಿಸಿದರೆ ಮೂಲವ್ಯಾಧಿಯ ನೋವಿನಿಂದ ಪಾರಾಗಬಹುದು. ಆದರೆ ಇದರ ಜೊತೆಗೆ ಆಹಾರಕ್ರಮದ ಬಗ್ಗೆ ಗಮನ ಕೊಡದಿದ್ದರೆ ಆ ನೋವು ಮರುಕಳಿಸುವುದು, ಆದ್ದರಿಂದ ಮೂಲವ್ಯಾಧಿ ಇರುವವರು ಈ ಕೆಳಗಿನ ಆಹಾರಗಳನ್ನು ಕಡ್ಡಾಯವಾಗಿ ತಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು...

ಬೀನ್ಸ್

ಬೀನ್ಸ್

ಹಸಿರು ಮತ್ತು ಎಳೆಯ ಬೀನ್ಸ್ (ಕನ್ನಡದಲ್ಲಿ ತಿಂಗಳಾವರೆ) ಕೋಡುಗಳನ್ನು ಹಸಿಯಾಗಿ ತಿಂದಷ್ಟೂ ಮೂಲವ್ಯಾಧಿಗೆ ಉತ್ತಮ. ಇದರಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಹಾಗೂ ಪೋಷಕಾಂಶಗಳಿವೆ. ಇದನ್ನು ಮೂಲವ್ಯಾಧಿ ಪೂರ್ಣವಾಗಿ ಗುಣವಾಗುವವರೆಗೂ ನಿತ್ಯವೂ ಸೇವಿಸುವುದು ಉತ್ತಮ. ಇದರೊಂದಿಗೆ ಬೀನ್ಸ್ ಬೀಜಗಳು, ಚಪ್ಪರದಾವರೆ ಬೀಜಗಳು, ಅಲಸಂಡೆ ಕಾಳು ಮೊದಲಾದವು ಸಹಾ ಉತ್ತಮವಾದ ಪರಿಹಾರವನ್ನು ಒದಗಿಸುತ್ತವೆ.

ಚೆನ್ನಾಗಿ ನೀರು ಕುಡಿಯಿರಿ

ಚೆನ್ನಾಗಿ ನೀರು ಕುಡಿಯಿರಿ

ಮೂಲವ್ಯಾಧಿಯ ತೊಂದರೆ ಇದ್ದವರು ಇತರರಿಗಿಂತಲೂ ಹೆಚ್ಚು ಹಾಗೂ ಸತತವಾಗಿ ನೀರು ಕುಡಿಯುತ್ತಲೇ ಇರಬೇಕು. ಇದರಿಂದ ಜೀರ್ಣಾಂಗಗಳಲ್ಲಿ ಮಲ ಗಟ್ಟಿಯಾಗದೇ ಇರಲು ಸಾಧ್ಯವಾಗುತ್ತದೆ. ಅತ್ಯುತ್ತಮ ವಿಧಾನವೆಂದರೆ ಪ್ರತಿ ಘಂಟೆಗೊಂದು ದೊಡ್ಡ ಲೋಟ ತಣ್ಣೀರನ್ನು ಎಚ್ಚರಿದ್ದಷ್ಟೂ ಹೊತ್ತು ಕುಡಿಯುತ್ತಾ ಇರುವುದು. ನಡುನಡುವೆ ಹಣ್ಣಿನ ರಸವನ್ನು ಸೇವಿಸುವುದು ಇನ್ನೂ ಉತ್ತಮ. ಆದರೆ ಬಿಸಿ ಪೇಯಗಳಾದ ಕಾಫಿ, ಟೀ ಹಾಗೂ ಆರೋಗ್ಯಕ್ಕೆ ಮಾರಕವಾದ ಮದ್ಯ, ಸೋಡಾ, ಬುರುಗುಬರುವ ಲಘುಪಾನೀಯಗಳು ಮೊದಲಾದವುಗಳು ಮೂಲವ್ಯಾಧಿ ಸಂಪೂರ್ಣವಾಗಿ ತೊಲಗುವವರೆಗೆ ಬೇಡವೇ ಬೇಡ. ಎಳನೀರು, ಬಾರ್ಲಿ ಬೇಯಿಸಿದ ನೀರು, ಕೊತ್ತಬಂರಿ ಕಾಳು ನೆನೆಸಿಟ್ಟ ನೀರು ಸಹಾ ಉತ್ತಮವಾದ ಆಯ್ಕೆಯಾಗಿವೆ.

ಹಸಿರು ಎಲೆಗಳು ಮತ್ತು ತರಕಾರಿಗಳು

ಹಸಿರು ಎಲೆಗಳು ಮತ್ತು ತರಕಾರಿಗಳು

ಹಸಿಯಾಗಿ ತಿನ್ನಬಹುದಾದ ಯಾವುದೇ ತರಕಾರಿ ಮತ್ತು ಎಲೆಗಳು ಮೂಲವ್ಯಾಧಿಗೆ ಅತ್ಯುತ್ತಮವಾಗಿವೆ. ಇದರಲ್ಲಿ ಗರಿಷ್ಟ ಪ್ರಮಾಣದ ಕರಗದ ನಾರು (ಸೆಲ್ಯುಲೋಸ್) ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ಜೀರ್ಣಕ್ರಿಯೆಯಲ್ಲಿ ನೆರವಾಗುತ್ತವೆ. ವಿಶೇಷವಾಗಿ ಪಾಲಕ್ ಮತ್ತು ಬಸಲೆ ಎಲೆಗಳಲ್ಲಿ ಹೆಚ್ಚಿನ ನಾರಿನ ಜೊತೆಗೇ ಕಬ್ಬಿಣದ ಅಂಶವೂ ಹೆಚ್ಚಾಗಿದ್ದು ಮೂಲವ್ಯಾಧಿ ಗುಣಪಡಿಸಲು ಉತ್ತಮ ಆಯ್ಕೆಯಾಗಿವೆ. ಇವುಗಳೊಂದಿಗೆ ಕೇಲ್ ಎಲೆಗಳು, ಬ್ರಸೆಲ್ಸ್ ಮೊಳಕೆ, ಶತಾವರಿ ಮೊದಲಾದವುಗಳನ್ನು ಹಸಿಯಾಗಿ ಸೇವಿಸುವ ಮೂಲಕ ಮೂಲವ್ಯಾಧಿಯನ್ನು ನಿಧಾನವಾಗಿ ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಗುಣಪಡಿಸಬಹುದು.

ಶುಂಠಿ

ಶುಂಠಿ

ಅರ್ಧ ಚಮಚ ಶುಂಠಿ ಪುಡಿಯನ್ನು ಒಂದು ಚಮಚ ನಿಂಬೆ ರಸದ ಜೊತೆ ಕಲೆಸಿ, ಅದಕ್ಕೆ 1 ಚಮಚ ಜೇನು ಬೆರೆಸಿ ತಿಂದರೆ ಕೂಡ ಪೈಲ್ಸ್ ಕಡಿಮೆಯಾಗುವುದು.

ಮೂಲಂಗಿ

ಮೂಲಂಗಿ

ಮೂಲಂಗಿ ಮೂಲವ್ಯಾಧಿಗೆ ಅತ್ಯುತ್ತಮವಾದ ಔಷಧಿಯಾಗಿದೆ. ಇದರ ಜ್ಯೂಸ್ ಕುಡಿದರೆ ಮೂಲವ್ಯಾಧಿ ಕಾಯಿಲೆ ಗುಣಮುಖವಾಗುವುದು. ಮೊದಮೊದಲು 1/3 ಕಪ್ ಮೂಲಂಗಿ ರಸ ಕುಡಿಯಿರಿ. ನಂತರ ಅರ್ಧ ಕಪ್ ನಷ್ಟು ಪ್ರತಿದಿನ ಕುಡಿಯುತ್ತಾ ಬನ್ನಿ. ಹೀಗೆ ಮಾಡಿದರೆ ಪೈಲ್ಸ್ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಇದರಿಂದ ಚಟ್ನಿ, ಪಲ್ಯ ಮಾಡಿ ತಿನ್ನಿ. ಇದರ ಸೊಪ್ಪು ಕೂಡ ತುಂಬಾ ಒಳ್ಳೆಯದು.

ಮೂಲವ್ಯಾಧಿ ಈಗಾಲೇ ವ್ಯಾಪಿಸಿದ್ದರೆ...

ಮೂಲವ್ಯಾಧಿ ಈಗಾಲೇ ವ್ಯಾಪಿಸಿದ್ದರೆ...

ಒಂದು ವೇಳೆ ಮೂಲವ್ಯಾಧಿ ಈಗಾಲೇ ವ್ಯಾಪಿಸಿದ್ದರೆ, ಹೀಗೆ ಮಾಡಿ ಒಂದು ಮೂಲಂಗಿಯನ್ನು ಚೆನ್ನಾಗಿ ಅರೆದು ಲೇಪನ ತಯಾರಿಸಿ. ಅರೆಯಲು ನೀರಿನ ಬದಲು ಹಾಲನ್ನು ಬಳಸಿ. ಈ ಲೇಪನವನ್ನು ಮೂಲವ್ಯಾಧಿ ಇದ್ದೆಡೆ ಲೇಪಿಸಿ. ಇದರಿಂದ ನೋವು, ಊತ ಮತ್ತು ತುರಿಕೆ ಶೀಘ್ರವಾಗಿ ಕಡಿಮೆಯಾಗುತ್ತದೆ.

ಹಸಿ ಈರುಳ್ಳಿ

ಹಸಿ ಈರುಳ್ಳಿ

ಹಸಿ ಈರುಳ್ಳಿ ಮೂಲವ್ಯಾಧಿಗೆ ಉತ್ತಮವಾದ ಮನೆ ಮದ್ದಾಗಿದೆ. ಪೈಲ್ಸ್ ನಿಂದಾಗಿ ರಕ್ತ ಬರುತ್ತಿದ್ದರೆ, ಹಸಿ ಈರುಳ್ಳಿ ತಿಂದರೆ ಸಾಕು ರಕ್ತ ಸೊರುವುದು ನಿಲ್ಲುವುದು.

ಆಪಲ್ ಸೈಡರ್ ವಿನೆಗರ್‌

ಆಪಲ್ ಸೈಡರ್ ವಿನೆಗರ್‌

ಆಪಲ್ ಸೈಡರ್ ವಿನೆಗರ್‌‌ನಲ್ಲಿ ಸೋಂಕು ನಿವಾರಕ ಗುಣಗಳಿದ್ದು, ಇದು ಗುದನಾಳದಲ್ಲಿ ಸೋಂಕಿನಿಂದ ಉಂಟು ಮಾಡುವ ನೋವಿನ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್‌ ನಲ್ಲಿರುವ ಉರಿಯೂತ ಶಮನಕಾರಿ ಗುಣಗಳು ನೋವು ಹಾಗೂ ಊತವನ್ನು ಕಡಿಮೆ ಮಾಡುವುದು. ಇದರಿಂದಾಗಿ ಪೈಲ್ಸ್ ನಿಂದ ಉಂಟಾಗುವ ನೋವು ತುಂಬಾ ಕಡಿಮೆಯಾಗುವುದು. ಆಪಲ್ ಸೈಡರ್ ವಿನೆಗರ್‌ ಅನ್ನು ಇತರ ನೈಸರ್ಗಿಕ ಸಾಮಗ್ರಿ ಅಲೋವೆರಾದೊಂದಿಗೆ ಬೆರೆಸಿಕೊಂಡು ಬಳಸಿದಾಗ ಉರಿಯೂತ ಶಮನಕಾರಿ ಗುಣವು ಹೆಚ್ಚುವುದು ಮತ್ತು ಪೈಲ್ಸ್ ಅನ್ನು ಪರಿಣಾಮಕಾರಿಯಾಗಿ ನಿವಾರಿಸಲು ನೆರವಾಗುವುದು.

ಇದನ್ನು ಬಳಸುವುದು ಹೇಗೆ?

*ಒಂದು ಸಣ್ಣ ಪಿಂಗಾಣಿಯಲ್ಲಿ ಎರಡು ಚಮಚ ಆಪಲ್ ಸೈಡರ್ ವಿನೆಗರ್‌ ಅನ್ನು ಹಾಕಿ. ಇದರಲ್ಲಿ ಸ್ವಚ್ಛವಾಗಿರುವ ಬಟ್ಟೆ ಅಥವಾ ಹತ್ತಿ ಉಂಡೆಯನ್ನು ಅದ್ದಿಕೊಳ್ಳಿ. ಇದನ್ನು ಬಾಧಿತ ಪ್ರದೇಶಕ್ಕೆ ಹಚ್ಚಿ. ನಿಮಗೆ ನೋವಿನಿಂದ ಪರಿಹಾರ ಸಿಗುವ ತನಕ ಹಚ್ಚುತ್ತಿರಿ.

ಬಾಳೆ ಹಣ್ಣು

ಬಾಳೆ ಹಣ್ಣು

ಬಾಳೆ ಹಣ್ಣನ್ನು ಒಂದು ಕಪ್ ನೀರಿನಲ್ಲಿ ಹಾಕಿ ಬೇಯಿಸಿ, ಈ ನೀರನ್ನು ದಿನದಲ್ಲಿ 3 ಬಾರಿ ಕುಡಿಯಿರಿ. ಈ ರೀತಿ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆ ನೈಸರ್ಗಿಕವಾಗಿ ಕಡಿಮೆಯಾಗುವುದು.

English summary

Foods to eat if you suffer from Piles

Piles, also known as haemorrhoids, is a condition in which the veins in the lower rectum or anus get inflamed.This capain while passing stools. Piles can be of two types, namely, internal piles and external piles.Most people suffer from a single type of piles at a given time, while some can suffer from both. The most common causes of piles include chronic constipation, diarrhoea, anal intercourse, pregnancy and ageing process.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more