ಶೀಘ್ರಸ್ಖಲನದ ಸಮಸ್ಯೆ ತಡೆಯೋಕೆ ಪವರ್ ಫುಲ್ ಆಹಾರಗಳು

Subscribe to Boldsky

ಇಂದು ಹೆಚ್ಚಿನ ಪುರುಷರು ಶೀಘ್ರಸ್ಖಲನದ ತೊಂದರೆಯಿಂದ ಬಳಲುತ್ತಿದ್ದಾರೆ ಹಾಗೂ ಇದು ಚಿಂತಾಜನಕ ಸ್ಥಿತಿಯಾಗಿದೆ. ಆದರೆ ಇದು ತೀರಾ ಅತಿ ಎನಿಸುವಷ್ಟಿದ್ದು ಲೈಂಗಿಕ ಜೀವನವನ್ನೇ ಬೇಸರ ಬರಿಸುವಂತೆ ಮಾಡಿದರೆ ನಿರ್ಲಕ್ಷ್ಯ ಮಾಡಲೇಬಾರದ, ತಕ್ಷಣ ಚಿಕಿತ್ಸೆ ಪಡೆಯಬೇಕಾದ ಸ್ಥಿತಿಯಾಗಿದೆ. ಈ ಬಗ್ಗೆ ನಡೆದ ಅಧ್ಯಯನಗಳಲ್ಲಿ ಶೀಘ್ರಸ್ಖಲನಕ್ಕೂ ವಯಸ್ಸು ಏರುತ್ತಿರುವುದಕ್ಕೂ ನೇರವಾದ ಸಂಬಂಧವಿರುವುದನ್ನು ಕಂಡುಕೊಳ್ಳಲಾಗಿದೆ.

ಪುರುಷರಲ್ಲಿ ವಯಸ್ಸು ಹೆಚ್ಚುತ್ತಿದ್ದಂತೆಯೇ ದೇಹದಲ್ಲಿ ಉತ್ಪತ್ತಿಯಾಗುವ ಟೆಸ್ಟೋಸ್ಟೆರೋನ್ ರಸದೂತದ ಪ್ರಮಾಣದಲ್ಲಿಯೂ ಇಳಿಕೆಯಾಗುತ್ತದೆ. ಪರಿಣಾಮವಾಗಿ ಶೀಘ್ರಸ್ಖಲನದ ಸಾಧ್ಯತೆಯೂ ಹೆಚ್ಚುತ್ತದೆ. ಇಂದಿನ ಲೇಖನದಲ್ಲಿ ಈ ತೊಂದರೆಯನ್ನು ನಿವಾರಿಸುವ ಕೆಲವು ಆಹಾರಗಳನ್ನು ಪರಿಚಯಿಸಲಾಗಿದ್ದು ಇವು ದೇಹದಲ್ಲಿ ಟೆಸ್ಟೋಸ್ಟೆರೋನ್ ಪ್ರಮಾಣವನ್ನು ಹೆಚ್ಚಿಸಿ ಲೈಂಗಿಕ ಶಕ್ತಿಯನ್ನೂ ಹೆಚ್ಚಿಸುವ ಸಾಮರ್ಥ್ಯ ಪಡೆದಿವೆ. ಅಲ್ಲದೇ ಲೈಂಗಿಕ ಜೀವನಕ್ಕೆ ಅವಶ್ಯಕವಾಗಿರುವ ಪೋಷಕಾಂಶಗಳನ್ನೂ ಒದಗಿಸಿ ದಾಂಪತ್ಯವನ್ನೂ ಇನ್ನಷ್ಟು ಬಿಗಿಗೊಳಿಸುತ್ತವೆ.

ದಿನನಿತ್ಯ 'ಲೈಂಗಿಕ ಕ್ರಿಯೆ' ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

ವಯಸ್ಸಾಗುವಿಕೆಯ ಹಾಗೂ ಟೆಸ್ಟೋಸ್ಟೆರೋನ್ ಉತ್ಪತ್ತಿ ಕಡಿಮೆಯಾಗುವ ಹೊರತಾಗಿ ಶೀಘ್ರಸ್ಖಲನಕ್ಕೆ ಇನ್ನೂ ಕೆಲವಾರು ಕಾರಣಗಳಿವೆ. ಉದಾಹರಣೆಗೆ ಪುರುಷ ಜನನಾಂಗದ ಪ್ರಮುಖ ನರಗಳನ್ನು ಅಗತ್ಯಕ್ಕೂ ಹೆಚ್ಚೇ ಪ್ರಚೋದಿಸುವ ಮೂಲಕವೂ ಈ ತೊಂದರೆ ಎದುರಾಗಬಹುದು. ಇಂದಿನ ಲೇಖನದಲ್ಲಿ ಪುರುಷರ ಚಿಂತೆಗೆ ಕಾರಣವಾದ ಈ ತೊಂದರೆಯನ್ನು ನಿವಾರಿಸಬಲ್ಲ ಹದಿನೈದು ಆಹಾರಗಳ ಬಗ್ಗೆ ವಿವರಿಸಲಾಗಿದ್ದು ಇವುಗಳಲ್ಲಿ ಸೂಕ್ತವಾದುದನ್ನು ನಿಯಮಿತವಾಗಿ ಸೇವಿಸುವ ಮೂಲಕ ಲೈಂಗಿಕ ಆರೋಗ್ಯವನ್ನು ಉತ್ತಮಪಡಿಸಬಹುದು....

ಶತಾವರಿ

ಶತಾವರಿ

ವಿಶೇಷವಾಗಿ ಪುರುಷರಲ್ಲಿ ಶತಾವರಿಯ ಸೇವನೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. ಪ್ರಮುಖವಾಗಿ ಇದರ ಕಾಮೋತ್ತೇಜಕ ಗುಣ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ ಹಾಗೂ ಇದರಲ್ಲಿ ಸಮೃದ್ದವಾಗಿರುವ ಪೋಷಕಾಂಶಗಳು, ಖನಿಜಗಳು ಹಾಗೂ ವಿಶೇಷವಾಗಿ ವಿಟಮಿನ್ ಇ ಪುರುಷರಲ್ಲಿ ರಸದೂತಗಳ ಪ್ರಮಾಣ ಹೆಚ್ಚಲು ನೆರವಾಗುವ ಮೂಲಕ ಈ ತೊಂದರೆಯನ್ನು ನಿವಾರಿಸುತ್ತವೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಯಲ್ಲಿರುವ ವಿಟಮಿನ್ ಡಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶವಾಗಿದೆ. ನಿತ್ಯವೂ ಸುಮಾರು ಎರಡು ಮೊಟ್ಟೆಗಳನ್ನು ಸೇವಿಸುವ ಮೂಲಕ ಪುರುಷರಲ್ಲಿ ಟೆಸ್ಟೋಸ್ಟೆರಾನ್ ರಸದೂತದ ಮಟ್ಟ ಹೆಚ್ಚುತ್ತದೆ. ಅಲ್ಲದೇ ಮೊಟ್ಟೆಯಲ್ಲಿರುವ ಹಲವಾರು ಪೋಷಕಾಂಶಗಳು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುವ ಜೊತೆಗೇ ಲೈಂಗಿಕ ಆರೋಗ್ಯವನ್ನೂ ಹೆಚ್ಚಿಸುತ್ತದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಈ ಚಾಕಲೇಟನ್ನು ಶೀಘ್ರಸ್ಖಲನ ತೊಂದರೆ ನಿವಾರಿಸುವ ಆಹಾರವೆಂದು ಪರಿಗಣಿಸಲಾಗಿದೆ. ಇವು ಪುರುಷರ ಜನನಾಂಗಗಳಲ್ಲಿ ಹೆಚ್ಚಿನ ರಕ್ತಪರಿಚಲನೆ ಒದಗಿಸುವ ಮೂಲಕ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಕಪ್ಪು ಚಾಕಲೇಟಿನಲ್ಲಿರುವ ಎಲ್-ಆರ್ಜಿನೈನ್ ಹೈಡ್ರೋಕ್ಲೋರೈಡ್ ಎಂಬ ಅಮೈನೋ ಆಮ್ಲ ದೇಹದಲ್ಲಿ ರಸದೂತಗಳು ಹೆಚ್ಚು ಹೆಚ್ಚಾಗಿ ಉತ್ಪತ್ತಿಯಾಗಲು ಪ್ರಚೋದನೆ ನೀಡುತ್ತದೆ.

ಕ್ಯಾರೆಟ್

ಕ್ಯಾರೆಟ್

ಗಜ್ಜರಿ ಅಥವಾ ಕ್ಯಾರಟ್ಟುಗಳಲ್ಲಿಯೂ ಅವಶ್ಯಕ ಖನಿಜಗಳ ರೂಪದಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳಿವೆ. ಇವು ಪುರುಷರ ಜನನಾಂಗದ ಸ್ನಾಯುಗಳನ್ನು ಬಳಪಡಿಸುವ ಮೂಲಕ ಹೆಚ್ಚು ರಕ್ತಸಂಚಾರಕ್ಕೆ ನೆರವು ನೀಡುತ್ತವೆ.

ಓಟ್ಸ್

ಓಟ್ಸ್

ಓಟ್ಸ್ ರವೆಯಲ್ಲಿರುವ ಸೆರೋಟೋನಿನ್ ಎಂಬ ಅವಶ್ಯಕ ರಾಸಾಯನಿಕ ಮೆದುಳಿಗೆ ಮುದನೀಡಿ ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡುವ ಪೋಷಕಾಂಶವಾಗಿದೆ. ಶೀಘ್ರಸ್ಖಲನಕ್ಕೂ ಮಾನಸಿಕ ಒತ್ತಡ ಮತ್ತು ಉದ್ವೇಗಕ್ಕೂ ನೇರವಾದ ಸಂಬಂಧವಿರುವುದನ್ನು ಈಗಾಗಲೇ ಸಾಬೀತುಗೊಳಿಸಲಾಗಿದೆ. ಹಾಗಾಗಿ ಓಟ್ಸ್ ಸೇವನೆಯಿಂದ ಒತ್ತಡ ಕಡಿಮೆಯಾಗುತ್ತದೆ ಹಾಗೂ ಇದರಲ್ಲಿರುವ ಹೆಚ್ಚಿನ ಪ್ರಮಾಣದ ಪ್ರೋಟೀನುಗಳು ಟೆಸ್ಟೋಸ್ಟೆರೋನ್ ಪ್ರಮಾಣ ಹೆಚ್ಚಿಸಲೂ ನೆರವಾಗುತ್ತವೆ.

ಅಶ್ವಗಂಧ

ಅಶ್ವಗಂಧ

ಭಾರತದ ಪಶ್ಚಿಮಭಾಗದಲ್ಲಿ ಯಥೇಚ್ಛವಾಗಿ ಬೆಳೆಯುವ ಅಶ್ವಗಂಧವನ್ನು ಶತಮಾನಗಳಿಂದಲೂ ಲೈಂಗಿಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಬಳಸಲ್ಪಡುತ್ತಾ ಬರಲಾಗಿದೆ. ಇದು ಶೀಘ್ರಸ್ಖಲನದ ತೊಂದರೆಯನ್ನು ನಿವಾರಿಸುವುದು ಮಾತ್ರವಲ್ಲ, ಲೈಂಗಿಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಹಾಗೂ ಒತ್ತಡ ಮತ್ತು ಉದ್ವೇಗಗಳನ್ನೂ ಕಡಿಮೆ ಮಾಡುತ್ತದೆ.

ಬೆಣ್ಣೆಹಣ್ಣು

ಬೆಣ್ಣೆಹಣ್ಣು

ಈ ಹಣ್ಣನ್ನು ಅದ್ಭುತ ಹಣ್ಣು ಎಂದೇ ಹೆಚ್ಚಾಗಿ ಪರಿಗಣಿಸಲಾಗುತ್ತದೆ. ಇದರಲ್ಲಿ ವಿಟಮಿನ್ ಸಿ, ಕೆ ಮತ್ತು ಬಿ ಸಹಿತ ಹಲವು ವಿಟಮಿನ್ನುಗಳಿವೆ. ವಿಟಮಿನ್ ಕೆ ನಮ್ಮ ರಕ್ತದ ಸಂಚಾರವನ್ನು ನಿಯಂತ್ರಿಸುವ ಹಾಗೂ ಗಾಯವಾದಲ್ಲಿ ರಕ್ತವನ್ನು ಹೆಪ್ಪುಗಟ್ಟಿಸಲು ಅಗತ್ಯವಾದ ಪೋಷಕಾಂಶವಾಗಿದೆ. ಬೆಣ್ಣೆಹಣ್ಣಿನಲ್ಲಿರುವ ಪ್ರೋಟೀನು, ಕರಗುವ ನಾರು ಹಾಗೂ ಇತರ ಪೋಷಕಾಂಶಗಳು ಒಟ್ಟಾರೆ ಆರೋಗ್ಯ ವೃದ್ದಿಸುವ ಜೊತೆಗೇ ಶೀಘ್ರಸ್ಖಲನದ ತೊಂದರೆಯನ್ನೂ ನಿವಾರಿಸುತ್ತವೆ.

ಬ್ಲೂಬೆರ್ರಿ ಹಣ್ಣುಗಳು

ಬ್ಲೂಬೆರ್ರಿ ಹಣ್ಣುಗಳು

ಈ ಹಣ್ಣುಗಳು ಶೀಘ್ರಸ್ಖಲನವನ್ನು ತಡೆಗಟ್ಟುವುದು ಮಾತ್ರವಲ್ಲ, ದೇಹದಲ್ಲಿ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತವೆ. ಈ ಕಣಗಳು ಪುರುಷರ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆಗೊಳಿಸಿ ನಪುಂಸಕತ್ವವನ್ನೂ ಎದುರಿಸುವ ಕಣಗಳಾಗಿವೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಬ್ರೋಮಿಲೈನ್ ಎಂಬ ಕಿಣ್ವವಿದೆ. ಇದು ಪುರುಷರಲ್ಲಿ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ ಹಾಗೂ ವೀರ್ಯಾಣುಗಳ ಸಂಖ್ಯೆ ವೃದ್ಧಿಗೊಳ್ಳಲೂ ನೆರವಾಗುತ್ತದೆ.

ಅಕ್ರೋಟು

ಅಕ್ರೋಟು

ಈ ಒಣಫಲಗಳು ಪುರುಷರಲ್ಲಿ ನಪುಂಸಕತ್ವ, ನಿಮಿರು ದೌರ್ಬಲ್ಯ ಹಾಗೂ ಶೀಘ್ರಸ್ಖಲನದ ತೊಂದರೆಯನ್ನು ಇಲ್ಲವಾಗಿಸಲು ಸಮರ್ಥವಾದ ಆಹಾರವಾಗಿದೆ. ಇದರಲ್ಲಿರುವ ಪ್ರೋಟೀನುಗಳು ಹಾಗೂ ಇತರ ಪ್ರಮುಖ ಖನಿಜಗಳು ಒಟ್ಟಾರೆ ಆರೋಗ್ಯ ಹೆಚ್ಚಿಸುವ ಜೊತೆಗೇ ಶೀಘ್ರಸ್ಖಲನದ ತೊಂದರೆಯನ್ನೂ ನಿವಾರಿಸುತ್ತವೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ ಗಳಲ್ಲಿರುವ ಆಲಿಸಿನ್ ಎಂಬ ಪ್ರಮುಖ ಪೋಷಕಾಂಶ ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಲು ನೆರವಾಗುತ್ತದೆ. ವಿಶೇಷವಾಗಿ ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚುವಲ್ಲಿ ಈ ಪೋಷಕಾಂಶ ಪ್ರಮುಖ ಪಾತ್ರ ವಹಿಸುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿಗಳಲ್ಲಿ ಸತು ಮತ್ತು ಪ್ರೋಟೀನುಗಳು ಸಮೃದ್ಧವಾಗಿವೆ. ಸತು ಹೆಚ್ಚಿರುವ ಆಹಾರಗಳೇ ಶೀಘ್ರಸ್ಖಲನದ ತೊಂದರೆ ಕಡಿಮೆ ಮಾಡುವ ಆಹಾರಗಳಾಗಿವೆ.

ಬೀನ್ಸ್ ಮತ್ತು ಅಣಬೆ

ಬೀನ್ಸ್ ಮತ್ತು ಅಣಬೆ

ಇವೆರಡರಲ್ಲಿಯೂ ಸತುವಿನ ಪ್ರಮಾಣ ಸಮೃದ್ದವಾಗಿದೆ. ಬೀನ್ಸ್ ಮೊದಲಾದ ಕಾಳುಗಳಲ್ಲಿಯೂ ಪುರುಷರ ಲೈಂಗಿಕ ಬಯಕೆ ಹೆಚ್ಚಿಸುವ ನೈಸರ್ಗಿಕ ಪೋಷಕಾಂಶಗಳಿವೆ.

ಈರುಳ್ಳಿಗಳು

ಈರುಳ್ಳಿಗಳು

ಹಸಿರು ಈರುಳ್ಳಿಯ ಬೀಜಗಳು ಅತ್ಯುತ್ತಮವಾದ ಕಾಮೋತ್ತೇಜಕ ಗುಣಗಳನ್ನು ಹೊಂದಿದ್ದಾವೆ. ಇದರಿಂದಾಗಿ ಇವು ಶೀಘ್ರ ವೀರ್ಯ ಸ್ಖಲನವನ್ನು ತಡೆಗಟ್ಟಿ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅದಕ್ಕಾಗಿ ಒಂದು ಚಮಚದಷ್ಟು ಹಸಿರು ಈರುಳ್ಳಿಯ ಬೀಜಗಳನ್ನು ತೆಗೆದುಕೊಂಡು, ಅದನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ. ಇವುಗಳನ್ನು ಚೆನ್ನಾಗಿ ಕಲೆಸಿ ಪ್ರತಿ ಬಾರಿ ಊಟ ಮಾಡುವ ಮುನ್ನ ಇದನ್ನು ಸೇವಿಸಿ. ಇದರಿಂದ ನಿಮ್ಮ ದೇಹದ ಶಕ್ತಿ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ನೀವು ನಿಮ್ಮ ವೀರ್ಯ ಸ್ಖಲನವನ್ನು ಹತೋಟಿಯಲ್ಲಿಡಬಹುದು.

ಬಿಳಿ ಈರುಳ್ಳಿಗಳು ಸಹ ಅತ್ಯುತ್ತಮವಾದ ಕಾಮೋತ್ತೇಜಕ ಗುಣಗಳನ್ನು ತಮ್ಮಲ್ಲಿ ಹೊಂದಿವೆ. ಇವು ನಿಮ್ಮ ಜನನಾಂಗಗಳನ್ನು ಸದೃಢಗೊಳಿಸಿ ಶೀಘ್ರ ವೀರ್ಯ ಸ್ಖಲನವನ್ನು ತಡೆಯುತ್ತವೆ. ಇದರಲ್ಲಿರುವ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಲು ಈರುಳ್ಳಿಗಳನ್ನು ಹಸಿಯಾಗಿ ಸೇವಿಸಿ ಸಾಕು.

ಶುಂಠಿ ಮತ್ತು ಜೇನು ತುಪ್ಪ

ಶುಂಠಿ ಮತ್ತು ಜೇನು ತುಪ್ಪ

ಶುಂಠಿಯು ದೇಹವನ್ನು ಬೆಚ್ಚಗಿಡಲು ಸಹಕರಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಶುಂಠಿಯನ್ನು ಸೇವಿಸುವುದರಿಂದ ಶಿಶ್ನಕ್ಕೆ ರಕ್ತ ಪರಿಚಲನೆಯು ಸರಾಗವಾಗುತ್ತದೆ ಮತ್ತು ಶಿಶ್ನದ ನಿಮಿರುವಿಕೆ ಹಾಗು ಶೀಘ್ರ ವೀರ್ಯ ಸ್ಖಲನ ಸಮಸ್ಯೆಯು ದೂರವಾಗುತ್ತದೆ.ಅರ್ಧ ಚಮಚದಷ್ಟು ಶುಂಠಿ ಮತ್ತು ಅಷ್ಟೇ ಪ್ರಮಾಣದ ಜೇನು ತುಪ್ಪವನ್ನು ತೆಗೆದುಕೊಳ್ಳಿ. ಇವೆರಡನ್ನು ಒಂದು ಲೋಟ ಬೆಚ್ಚನೆಯ ಹಾಲಿನಲ್ಲಿ ಬೆರೆಸಿ. ಮಲಗುವ ಮೊದಲು ಈ ಹಾಲನ್ನು ಸೇವಿಸಿ, ಮುಂದೆ ಇದರಿಂದ ದೊರೆಯುವ ಬದಲಾವಣೆಯ ಸುಖವನ್ನು ನೀವೇ ಅನುಭವಿಸುವಿರಿ.

ಹರಳೆಣ್ಣೆ

ಹರಳೆಣ್ಣೆ

ಮುದುಕರಲ್ಲಿ ಅಥವಾ ವಯಸ್ಸಾದ ಗಂಡಸರಲ್ಲಿ ಶೀಘ್ರ ವೀರ್ಯಸ್ಖಲನವು ಪ್ರೊಸ್ಟೇಟ್ ಅಥವಾ ಜನನಾಂಗದ ಗ್ರಂಥಿಗೆ ಸಂಬಂಧಿಸಿದ ಲೋಪದೋಷಗಳಿಂದ ಕಾಣಿಸಿಕೊಳ್ಳುತ್ತದೆ. ಈ ಪ್ರೊಸ್ಟೇಟ್ ಸಮಸ್ಯೆಯನ್ನು ನಿವಾರಿಸಲು ಮತ್ತು ಇದನ್ನು ತಡೆಗಟ್ಟಲು ಹರಳೆಣ್ಣೆಯು ಪರಿಣಾಮಕಾರಿಯಾಗಿ ನೆರವಾಗುತ್ತದೆ. ಹರಳೆಣ್ಣೆಯಿಂದ ಜನನಾಂಗದ ಸುತ್ತ ಮೆದುವಾಗಿ ಮಸಾಜ್ ಮಾಡುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಹರಳೆಣ್ಣೆಯನ್ನು ನಿಮ್ಮ ಜನನಾಂಗದ ತುದಿಯಿಂದ ಹಿಡಿದು ವೃಷಣಗಳವರೆಗು ಲೇಪಿಸಿ. ಆನಂತರ ಶಿಶ್ನದ ತುದಿಯಿಂದ ಆರಂಭಿಸಿ ಬುಡದವರೆಗೆ ವೃತ್ತಾಕಾರವಾಗಿ, ಉದ್ದವಾಗಿ ಮತ್ತು ಮೆದುವಾಗಿ ಮಸಾಜ್ ಮಾಡಿ. ಈ ಎಲ್ಲಾ ಪರಿಹಾರಗಳನ್ನು ಪ್ರಯತ್ನಿಸಿ ಮತ್ತು ಶೀಘ್ರ ವೀರ್ಯ ಸ್ಖಲನದ ಸಮಸ್ಯೆಯಿಂದ ಮುಕ್ತಿ ಹೊಂದಿ.

For Quick Alerts
ALLOW NOTIFICATIONS
For Daily Alerts

    English summary

    Foods To Cure Premature Ejaculation

    As men grow older and testosterone levels drop with age, premature ejaculation most likely sets in. In this article, we look at foods that cure premature ejaculation. These foods can be seen as natural remedies for premature ejaculation and have the potential to boost testosterone levels in men. These foods to cure premature ejaculation pump the body with essential vitamins and minerals and boost sex drive. Let us now look at these 15 natural remedies for premature ejaculation. Here are 15 foods to cure premature ejaculation in men. Read on...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more