For Quick Alerts
ALLOW NOTIFICATIONS  
For Daily Alerts

ಜನನಾಂಗದಲ್ಲಿ ನೋವು ಎದುರಾಗಲು ಐದು ಅಚ್ಚರಿಯ ಕಾರಣಗಳು

By Arshad
|

ಮಹಿಳೆಯರೇ, ವೃಂತಕೋಶ ಅಥವಾ ಯೋನಿನಾಳದಲ್ಲಿ ಎದುರಾಗುವ ನೋವು ನಿಜ! ಸಾಮಾನ್ಯವಾಗಿ ಆಸ್ಪತ್ರೆಗೆ ಬರುವ ಮಹಿಳೆಯರಲ್ಲಿ ಕನಿಷ್ಠ ಒಬ್ಬರಾದರೂ ತಮ್ಮ ಗುಪ್ತಾಂಗದಲ್ಲಿ ನೋವಾಗುವ ಬಗ್ಗೆ ದೂರು ಹೇಳುತ್ತಾರೆ. ಈ ನೋವಿಗೆ ಕಾರಣಗಳನ್ನು ಕೆದಕುವ ಮುನ್ನ ಮಹಿಳಾ ಶರೀರ ರಚನೆಯ ಬಗ್ಗೆ ಕೊಂಚ ಅರಿತಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರ ಗುಪ್ತಾಂಗ ಒಂದೇ ಭಾಗವಲ್ಲ, ವಾಸ್ತವವಾಗಿ ದೇಹದ ಹೊರಗೆ ಕಾಣುವ ರತಿಕವಾಟ ಇಡಿಯ ವ್ಯವಸ್ಥೆಯ ಒಂದು ಭಾಗ ಮಾತ್ರವೇ ಆಗಿದ್ದು ಗರ್ಭಕಂಠ ಮತ್ತು ರತಿಕವಾಟದ ನಡುವಣ ಕೊಳವೆಯ ಒಟ್ಟು ವ್ಯವಸ್ಥೆಯನ್ನು ಯೋನಿ ಎಂದು ಕರೆಯಬಹುದು.

ಜನನಾಂಗದಲ್ಲಿ ವಿವಿಧ ಭಾಗಗಳಿವೆ: ಹೊರತೆರೆದ ಭಾಗ ಅಥವಾ ರತಿಕವಾಟ, ಒಳತುಟಿ ಮತ್ತು ಒರತುಟಿಗಳು, ಚಂದ್ರನಾಡಿ (ಈ ಭಾಗಕ್ಕೆ ಹೆಚ್ಚಿನ ವಿವರಣೆ ಬೇಕಾಗಿಲ್ಲ!) ಮೂತ್ರನಾಳ (ಮೂತ್ರ ಹೊರಬರುವ ಭಾಗ) ಹಾಗೂ ಮೂಲಾಧಾರ (ಯೋನಿ ಮತ್ತು ಗುದದ್ವಾರದ ನಡುವಣ ಭಾಗ). ಜನನಾಂಗದಲ್ಲಿ ನೋವು ಎದುರಾಗಲು ಕೆಲವಾರು ಕಾರಣಗಳಿದ್ದು ಇವುಗಳಲ್ಲಿ ಈ ಐದು ಪ್ರಮುಖವಾಗಿವೆ.

ಯೋನಿಯ ದುರ್ವಾಸನೆ ಸಮಸ್ಯೆ! ಸಂಕೋಚ ಪಟ್ಟರೆ ಇನ್ನಷ್ಟು ಸಂಕಷ್ಟ!

1. ಯೋನಿ ನಾಳದ ಉರಿಯೂತ (Vaginitis)

1. ಯೋನಿ ನಾಳದ ಉರಿಯೂತ (Vaginitis)

ಜನನಾಂಗದ ಒಳಭಾಗದ ತೇವವಿರುವ ಭಾಗದಲ್ಲಿ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾದ ಸೋಂಕಿನಿಂದ ಉರಿಯೂತವುಂಟಾಗುವುದಕ್ಕೆ ವಜೈನೈಟಿಸ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಉರಿಯೂತದ ಪರಿಣಾಮವಾಗಿ ಒಳಭಾಗದಲ್ಲಿ ತುರಿಕೆ, ಬಿಳಿಸೆರಗು ಹಾಗೂ ಕೆಲವೊಮ್ಮೆ ಉರಿಯೂ ಉಂಟಾಗಬಹುದು.

ತೇವಾಂಶದ ಕೊರತೆ

ತೇವಾಂಶದ ಕೊರತೆ

ಹೆಸರೇ ತಿಳಿಸುವಂತೆ ಜನನಾಂಗದ ಒಳಭಾಗದಲ್ಲಿ ತೇವಾಂಶದ ಕೊರತೆಯುಂಟಾಗಿ ಉರಿ ಎದುರಾಗುತ್ತದೆ. ರಜೋನಿವೃತ್ತಿಯ ಬಳಿಕ ಒಣಗುವಿಕೆ ಸಾಮಾನ್ಯವಾಗಿ ಎದುರಾದರೂ ಉಳಿದವರಿಗೂ ಈ ತೊಂದರೆ ತಪ್ಪಿದ್ದಲ್ಲ. ಗರ್ಭನಿರೋಧಕ ಗುಳಿಗೆಗಳನ್ನು ಸೇವಿಸುವ ಯುವತಿಯರು, ಇನ್ನೂ ಹಾಲೂಡಿಸುತ್ತಿರುವ ಬಾಣಂತಿಯರು, ಖಿನ್ನತಾ ನಿವಾರಕ ಗುಣಗಳನ್ನು ಸೇವಿಸುತ್ತಿರುವವರು, ಅಲರ್ಜಿ ನಿವಾರಕ ಔಷದಿ ಸೇವಿಸುವ, ಅಸ್ತಮಾ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ, ಉದ್ವೇಗದ ತೊಂದರೆ ಇರುವ, ಮಹಿಳೆಯರ ನೈರ್ಮಲ್ಯ ಉತ್ಪನ್ನಗಳಲ್ಲಿ ಬಳಸಲಾಗುವ ಕೆಲವು ರಾಸಾಯನಿಕಗಳಿಗೆ ಅಲರ್ಜಿ ಹೊಂದಿರುವ ಮಹಿಳೆಯರಲ್ಲಿ ಈ ತೊಂದರೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಪತಿಯೊಂದಿಗೆ ವೈಮನಸ್ಯ ಹೊಂದಿರುವ ಪತ್ನಿಯರಲ್ಲಿಯೂ ಮಾನಸಿಕ ಕಾರಣಗಳಿಂದ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಬಾರ್ಥೋಲಿನ್ ಗ್ರಂಥ ಎಂಬ ಅಂಗದಲ್ಲಿ ಉಂಟಾದ ಸೋಂಕು ಸಹಾ ಈ ತೊಂದರೆಗೆ ಕಾರಣವಾಗಿರಬಹುದು. ಈ ಗ್ರಂಥಿ ರತಿಕವಾಟವನ್ನು ಗಡಿಯಾರದಂತೆ ಕಂಡಾಗ ನಾಲ್ಕು ಮತ್ತು ಆರು ಘಂಟೆಯ ಭಾಗ ಇರುವಲ್ಲಿರುತ್ತದೆ. ಮಿಲನದ ಸಮಯದಲ್ಲಿ ಯೋನಿಯ ಒಳಭಾಗದಲ್ಲಿ ಸಾಕಷ್ಟು ಜಾರುಕ ದ್ರವವನ್ನು ಸ್ರವಿಸುವುದು ಈ ಗ್ರಂಥಿಯ ಕೆಲಸವಾಗಿದೆ. ಕೆಲವೊಮ್ಮೆ ಈ ಗ್ರಂಥಿಯ ತುದಿಭಾಗ ಮುಚ್ಚಿಹೋಗಿ ಜಾರುಕದ್ರವ ಹೊರಬರದೇ ಹೋಗುತ್ತದೆ. ಜಾರುಕ ದ್ರವ ಇಲ್ಲವೆಂದಾದ ಒಳಭಾಗ ಒಣದಾಗಿರುವುದು ಸಹಜ. ಈ ತೊಂದರೆಯನ್ನು ವೈದ್ಯರು ಪರೀಕ್ಷೆಯ ಮೂಲಕ ಖಚಿತಪಡಿಸುತ್ತಾರೆ. ವೈದ್ಯರು ರೋಗಿಯ ಆರೋಗ್ಯ ಇತಿಹಾಸವನ್ನೂ ಪರಿಶೀಲಿಸಬಹುದು. ಕಾರಣ ಖಚಿತಪಡಿಸಿಕೊಂಡ ಬಳಿಕವೇ ಇದಕ್ಕೆ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ASTROGLIDE ಮೊದಲಾದ ಸಹಜ ಜಾರುಕದ್ರವಕ್ಕೆ ಸಮನಾದ ಔಷಧಿಗಳನ್ನು ಬಳಸುವ ಮೂಲಕ ಜನನಾಂಗದ ಒಳಭಾಗದಲ್ಲಿ ಎದುರಾಗುವ ಒಣಗುವಿಕೆಯನ್ನು ಇಲ್ಲವಾಗಿಸಿ ಮಿಲನಕ್ರಿಯೆಯನ್ನೂ ಸುಲಭವಾಗಿಸಬಹುದು.

ಮಹಿಳೆಯರ ಜನನಾಂಗ ಸಮಸ್ಯೆಗೆ ಸೂಕ್ತ ಸಲಹೆಗಳು

3. ರಜೋನಿವೃತ್ತಿಯ ಬಳಿಕ ಎದುರಾಗುವ ಯೋನಿಯ ಸ್ನಾಯುಗಳ ಶಿಥಿಲತೆ (Postmenopausal Vaginal Atrophy)

3. ರಜೋನಿವೃತ್ತಿಯ ಬಳಿಕ ಎದುರಾಗುವ ಯೋನಿಯ ಸ್ನಾಯುಗಳ ಶಿಥಿಲತೆ (Postmenopausal Vaginal Atrophy)

PAVಎಂದು ಚುಟುಕಾಗಿ ಕರೆಯಲ್ಪಡುವ ಈ ತೊಂದರೆ ರಜೋನಿವೃತ್ತಿಯ ವಯಸ್ಸು ದಾಟಿರುವ ಮಹಿಳೆಯರಲ್ಲಿ ಈಸ್ಟ್ರೋಜೆನ್ ರಸದೂತದ ಕೊರತೆಯಿಂದಾಗಿ ಯೋನಿಯ ಒಳಗೋಡೆಗಳಲ್ಲಿ ಉರಿಯೂತ ಎದುರಾಗುತ್ತದೆ. ಪರಿಣಾಮವಾಗಿ ಯೋನಿಯ ಗೋಡೆಗಳು ತೀರಾ ತೆಳುವಾಗಿ, ಒಣಗಿ ನೋವು ನೀಡತೊಡಗುತ್ತವೆ. ಈ ತೊಂದರೆಯನ್ನು ವೈದ್ಯರು ಪರೀಕ್ಷೆಯ ಮೂಲಕ ಖಚಿತಪಡಿಸುತ್ತಾರೆ. ಈ ತೊಂದರೆಗೆ ನೀಡುವ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಯೋನಿಭಾಗದಲ್ಲಿ ಈಸ್ಟ್ರೋಜೆನ್ ಒದಗಿಸುವುದಾಗಿದೆ. ಯೋನಿಯ ಒಳಭಾಗದಲ್ಲಿ ದ್ರವ್ಯತೆ ಮತ್ತು ಆರ್ದ್ರತೆ ಒದಗಿಸುವ ಉತ್ಪನ್ನಗಳೂ ನೆರವಿಗೆ ಬರುತ್ತವೆ.

4. ಯೋನಿಸಂಕೋಚನ (Vaginismus)

4. ಯೋನಿಸಂಕೋಚನ (Vaginismus)

ಒಂದು ವೇಳೆ ಯೋನಿಯ ಸ್ನಾಯುಗಳು ಅನೈಚ್ಛಿಕವಾಗಿ ಸಂಕುಚಿತಗೊಳ್ಳುವ ಮೂಲಕ ರತಿಕವಾಟಗಳು ಹೆಚ್ಚು ಒತ್ತಿಕೊಂಡಿರುತ್ತವೆ. (ಈ ಸ್ಥಿತಿಗೆ pelvic floor tension myalgia ಎಂದೂ ಕರೆಯುತ್ತಾರೆ) ಈ ಸ್ಥಿತಿ ಇರುವ ಮಹಿಳೆಯರೊಂದಿಗೆ ಮಿಲನಕ್ರಿಯೆ ನಡೆಸುವುದು ತೀರಾ ಕಷ್ಟಕರವೂ ನೋವಿನಿಂದ ಕೂಡಿದ್ದೂ ಆಗಿರುತ್ತದೆ. ಈ ಸ್ಥಿತಿಯನ್ನು ವೈದ್ಯರು ಸೂಕ್ತ ಪರೀಕ್ಷೆಯ ಮೂಲಕ ಖಚಿತಪಡಿಸಬಲ್ಲರು. ಇದಕ್ಕೆ ಯೋನಿಯ ಸ್ನಾಯುಗಳಿಗೆ ಅಗತ್ಯ ವ್ಯಾಯಾಮ ನೀಡುವುದು, ಮನಃಶಾಸ್ತ್ರಜ್ಞರೊಂದಿಗೆ ಸಲಹೆ ಹಾಗೂ ಕೃತಕ ಉಪಕರಣಗಳನ್ನು ಬಳಸುವುದು ಮೊದಲಾದ ಕ್ರಮಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

5. ವಲ್ವೋಡೈನಿಯಾ (Vulvodynia)

5. ವಲ್ವೋಡೈನಿಯಾ (Vulvodynia)

ಸುಮಾರು ಮೂರು ತಿಂಗಳವರೆಗೆ ಸತತವಾಗಿ ಕಾಡುವ ಈ ನೋವಿಗೆ ಸೋಂಕು, ಕ್ಯಾನ್ಸರ್ ಅಥವಾ ಕೆಲವು ಚರ್ಮರೋಗ ಕಾರಣವಾಗಬಹುದು. ನಿರಾಶೆಯ ವಿಷಯವೆಂದರೆ ಈ ತೊಂದರೆಗೆ ಸ್ಪಷ್ಟವಾದ ಕಾರಣವಿನ್ನೂ ತಿಳಿದುಬಂದಿಲ್ಲ. ಈ ಕಾಯಿಲೆ ಎದುರಾದಾಗ ಮಹಿಳೆಯರು ಜನನಾಂಗದಲ್ಲಿ ಭಾರಿ ಉರಿ ಎದುರಾಗುತ್ತದೆ ಎಂದು ದೂರುತ್ತಾರೆ. ಬಿಗಿಯಾದ ಉಡುಪುಗಳನ್ನು ಧರಿಸುವುದು ಇದಕ್ಕೆ ಮೊದಲ ಕಾರಣವಾಗಿದೆ. ಈ ರೋಗ ಎದುರಾದರೆ ಇದಕ್ಕೆ ಕಾರಣವನ್ನು ಕಂಡುಕೊಳ್ಳಲು ಯಾವುದೇ ಖಚಿತ ಪರೀಕ್ಷೆಯಿಲ್ಲ. ಈ ತೊಂದರೆಗೆ ಕಾರಣವಾಗುವ ಉಳಿದ ಸಾಧ್ಯತೆಗಳನ್ನು ಇಲ್ಲವೆಂದು ಖಚಿತಪಡಿಸಿದ ಬಳಿಕವೇ ಈ ತೊಂದರೆಯ ಸಾಧ್ಯತೆಯನ್ನು ಪರಿಗಣಿಸಲಾಗುತ್ತದೆ. ಈ ತೊಂದರೆಗೆ ಚಿಕಿತ್ಸೆಯಾಗಿ ಸ್ನಾಯುಗಳ ಸೆಡೆತವನ್ನು ಕಡಿಮೆಯಾಗಿಸುವ ಔಷದಿಗಳ ಸೇವನೆ, ಸ್ಥಳೀಯ ಅರವಳಿಕೆ ನೀಡುವುದು ಹಾಗೂ ಖಿನ್ನತೆ ನಿವಾರಣೆಯ ಔಷಧಿಗಳ ಸೇವನೆಯನ್ನು ಸಲಹೆ ಮಾಡಾಲಾಗುತ್ತದೆ. vulvar vestibulitis ಎಂಬ ಇನ್ನೊಂದು ತೊಂದರೆಗೂ ಈ ತೊಂದರೆಯ ಇನ್ನೊಂದು ರೂಪವಾಗಿದೆ. ಇದು ರತಿಕವಾಟದ ಭಾಗದಲ್ಲಿ ಭಾರೀ ಉರಿ ಎದುರಾಗುತ್ತದೆ. ಪರಿಣಾಮವಾಗಿ ಮಿಲನಕ್ರಿಯೆ ಕಷ್ಟಕರವಾಗಿಸುತ್ತದೆ. ಅಷ್ಟೇ ಅಲ್ಲ, ಪರೀಕ್ಷೆಗಾಗಿ ಟ್ಯಾಂಪೋನ್ ಎಂಬ ಉಪಕರಣವನ್ನು ತೂರಿಸಿದರೂ ನೋವು ಉಲ್ಬಣಗೊಳ್ಳುತ್ತದೆ. ಹಾಗಾಗಿ ವೈದ್ಯರು ಈ ಭಾಗದ ಪರೀಕ್ಷೆಗಾಗಿ ಹತ್ತಿ ಸುತ್ತಿದ ಕಡ್ಡಿಯನ್ನು ಪರೀಕ್ಷೆಗಾಗಿ ಬಳಸಬೇಕಾಗುತ್ತದೆ.

ಯೋನಿಯ ಬಗ್ಗೆ ಇರುವ ಇಂತಹ ಕಟ್ಟುಕಥೆಗಳನ್ನು ನಂಬಬೇಡಿ!

English summary

five surprising way that will hurt your vagina

Ladies, vaginal pain is real! I see at least one patient daily that complains of pain in her lady parts. But before we dive into some common causes of vaginal pain, let’s review some female anatomy. We all use the word "vagina" to refer to the whole package down there, but the vagina is actually the canal between your vulva and the cervix.On the other hand, the vulva includes many different parts: the opening of the vagina, the inner and outer labia (lips), the clitoris (this one needs no intro), urethra (the hole you urinate out of), and the perineum (the space between the bottom of the vagina opening and the anus).
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more