ಮಹಿಳೆಯರಿಗೆ ಸೆಕ್ಸ್ ಸಮಯದಲ್ಲಿ ನೋವು - ತಿಳಿದಿರಬೇಕಾದ ಸಂಗತಿಗಳು

Subscribe to Boldsky

ದಾಂಪತ್ಯಕ್ರಿಯೆಯ ಸಮಯದಲ್ಲಿ ಎದುರಾಗುವ ನೋವು ಅಥವಾ dyspareunia ಎಂಬ ಸ್ಥಿತಿ ದಂಪತಿಗಳ ನಡುವೆ ವಿರಸಕ್ಕೆ ಕಾರಣವಾಗಬಹುದು. ದೈಹಿಕ ಮಿಲನ ನೋವುಕಾರಕವಾಗಿದ್ದು ಇದರಿಂದ ವಿಮುರಾಗುವುದು ಅನಿವಾರ್ಯವಾಗಿಸುವುದು ನೇರವಾದ ಪ್ರಭಾವವಾದರೆ ಲೈಂಗಿಕ ಅತೃಪ್ತಿ ಹಾಗೂ ಋಣಾತ್ಮಕ ಭಾವನೆಯಿಂದ ಎದುರಾಗುವ ಮಾನಸಿಕ ತೊಂದರೆಗಳು ಪರೋಕ್ಷವಾದ ಪ್ರಭಾವವಾಗಿದೆ. ಹಾಗಾಗಿ ಸುಖಮಯ ದಾಂಪತ್ಯಕ್ಕಾಗಿ ಈ ನೋವಿನ ಮೂಲವನ್ನು ಕಂಡುಕೊಂಡು ತಕ್ಷಣವೇ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ.

ಮಹಿಳೆಯರಲ್ಲಿ ಈ ನೋವು ಎದುರಾಗಲು ಕಾರಣವೇನು?

ಹೆಚ್ಚಿನ ದಂಪತಿಗಳಲ್ಲಿ, ಮಹಿಳೆಯರ ಜನನಾಂಗದಲ್ಲಿ ಸಾಕಷ್ಟು ಜಾರುವಿಕೆ ಇಲ್ಲದೇ ಹೋದಾಗ ನೋವು ಎದುರಾಗುತ್ತದೆ. ಈ ತೊಂದರೆಗೆ ಪರಸ್ಪರ ಅರ್ಥೈಸಿಕೊಳ್ಳದೆ ಮುಂದುವರೆಯುವುದೇ ಮೂಲ ತೊಂದರೆಯಾಗಿದೆ. ಮಹಿಳೆಯರು ಉದ್ರೇಕಗೊಂಡು ಮಿಲನಕ್ರಿಯೆಗೆ ಸನ್ನದ್ದರಾಗಲು ಪುರುಷರಿಗಿಂತ ಹೆಚ್ಚಿನ ಸಮಯ ತಗೆದುಕೊಳ್ಳುತ್ತಾರೆ ಹಾಗೂ ಇದಕ್ಕಾಗಿ ನಿರಾಳವಾದ ಮನಸ್ಸು ಹಾಗೂ ಸಾಕಷ್ಟು ಮುನ್ನಲಿವಿನ ಅಗತ್ಯವಿದೆ. ಆದಾಗ್ಯೂ ಜಾರುವಿಕೆಯ ಕೊರತೆ ಎದುರಾದರೆ ವೈದ್ಯರು ಸೂಚಿಸುವ ಜಾರುಕದ್ರವವನ್ನು ಬಳಸಿ ಮುಂದುವರೆಯಬಹುದು. ಕೆಲವು ಸಂದರ್ಭಗಳಲ್ಲಿ ಮಹಿಳೆಯರ ಈ ನೋವಿಗೆ ಇತರ ಕಾರಣಗಳೂ ಇರಬಹುದು. ಇವುಗಳಲ್ಲಿ ಪ್ರಮುಖವಾದವು ಎಂದರೆ....

ವಜೈನಿಸ್ಮಸ್ (Vaginismus)

ವಜೈನಿಸ್ಮಸ್ (Vaginismus)

ಇದೊಂದು ಸಾಮಾನ್ಯವಾಗಿ ಕಂಡುಬರುವ ತೊಂದರೆಯಾಗಿದ್ದು ಜನನಾಂಗದ ಸ್ನಾಯುಗಳು ಅನೈಚ್ಛಿಕವಾಗಿ ಸೆಡೆತಕ್ಕೊಳಗಾಗುತ್ತವೆ. ತನಗೆ ಗಾಯವಾಗುತ್ತದೆಯೋ ಎಂಬ ದುಗುಡ ಅಥವಾ ಭಯದಿಂದ ಈ ಸೆಡೆತ ಎದುರಾಗಿರುತ್ತದೆ.

ಯೋನಿಭಾಗದಲ್ಲಿ ಸೋಂಕು

ಯೋನಿಭಾಗದಲ್ಲಿ ಸೋಂಕು

ಸ್ವಚ್ಛತೆಯ ಕೊರತೆ ಅಥವಾ ಬೇರಾವುದೋ ಕಾರಣದಿಂದ ಎದುರಾಗುವ ಶಿಲೀಂಧ್ರದ ಸೋಂಕು ಈ ಭಾಗದಲ್ಲಿ ನೋವು ಮತ್ತು ಉರಿಗೆ ಕಾರಣವಾಗಬಹುದು.

ಗರ್ಭಕಂಠದಲ್ಲಿ ತೊಂದರೆ (Problems with the cervix)

ಗರ್ಭಕಂಠದಲ್ಲಿ ತೊಂದರೆ (Problems with the cervix)

ಮಿಲನಕ್ರಿಯೆಯಲ್ಲಿ ಗರಿಷ್ಟ ಪ್ರಮಾಣದ ನುಗ್ಗುವಿಕೆಯಲ್ಲಿ ಶಿಶ್ನದ ತುದಿ ಗರ್ಭಕಂಠದವರೆಗೆ ತಲುಪಬಹುದು. ಒಂದು ವೇಳೆ ಗರ್ಭಕಂಠದ ಭಾಗದಲ್ಲಿ ಯಾವುದಾದರೂ ಸೋಂಕು ಇದ್ದರೆ ಈ ತಗಲುವಿಕೆ ಭಾರೀ ನೋವನ್ನುಂಟುಮಾಡುತ್ತದೆ.

ಗರ್ಭಕೋಶದಲ್ಲಿ ತೊಂದರೆ

ಗರ್ಭಕೋಶದಲ್ಲಿ ತೊಂದರೆ

ಗರ್ಭಕೋಶದ ಒಳಭಾಗದಲ್ಲಿ ಎದುರಾಗುವ ದ್ರಾಕ್ಷಿಗೊಂಚಲಿನಂತಹ ಬೆಳವಣಿಗೆ (fibroids) ಸಹಾ ಆಳವಾದ ನುಗ್ಗುವಿಕೆಯಿಂದ ಭಾರೀ ನೋವು ನೀಡುತ್ತವೆ.

ಎಂಡೋಮೆಟ್ರಿಯೋಸಿಸ್ (Endometriosis)

ಎಂಡೋಮೆಟ್ರಿಯೋಸಿಸ್ (Endometriosis)

ಈ ಕಾಯಿಲೆ ಇರುವ ಮಹಿಳೆಯರ ಗರ್ಭಕೋಶದ ಒಳಗೆ ಬೆಳೆಯಬೇಕಾಗಿದ್ದ ಪದರಗಳು ಗರ್ಭಕೋಶದ ಹೊರಗೆ ಬೆಳೆದು ನೋವಿಗೆ ಕಾರಣವಾಗುತ್ತವೆ.

ಅಂಡಾಶಯಗಳಲ್ಲಿನ ತೊಂದರೆಗಳು

ಅಂಡಾಶಯಗಳಲ್ಲಿನ ತೊಂದರೆಗಳು

ಅಂಡಾಶಯದ ಹೊರಭಾಗದಲ್ಲಿ ಯಾವುದೋ ಕಾರಣಕ್ಕೆ ಎದ್ದಿರುವ ಗುಳ್ಳೆಗಳು ನೋವಿಗೆ ಕಾರಣವಾಗಬಹುದು.

 ಅಸ್ಥಿಕುಹರದ ಸೋಂಕು (Pelvic inflammatory disease (PID)

ಅಸ್ಥಿಕುಹರದ ಸೋಂಕು (Pelvic inflammatory disease (PID)

ಈ ಕಾಯಿಲೆ ಇರುವ ಮಹಿಳೆಯರ ಜನನಾಂಗದ ಒಳಭಾಗ ಭಾರೀ ಸೋಂಕಿಗೆ ಒಳಗಾಗಿರುತ್ತದೆ ಹಾಗೂ ಸಂಭೋಗದ ಯಾವುದೇ ಒತ್ತಡ ಈ ಭಾಗದಲ್ಲಿ ನೋವಿಗೆ ಕಾರಣವಾಗುತ್ತದೆ.

ಅಪಸ್ಥಾನೀಯ ಗರ್ಭಾವಸ್ಥೆ (Ectopic pregnancy)

ಅಪಸ್ಥಾನೀಯ ಗರ್ಭಾವಸ್ಥೆ (Ectopic pregnancy)

ಒಂದು ವೇಳೆ ಗರ್ಭಾಶಯದ ಹೊರಭಾಗದಲ್ಲಿ ಅಂಡಾಣು ವೀರ್ಯಾಣುವಿನೊಂದಿಗೆ ಮಿಲನ ಹೊಂದಿ ಬೆಳವಣಿಗೆ ಪ್ರಾರಂಭವಾಗಿದ್ದರೆ ಸಹಾ ನೋವು ಕಾಣಿಸಿಕೊಳ್ಳುತ್ತದೆ.

ಮುಟ್ಟು:( Menopause)

ಮುಟ್ಟು:( Menopause)

ಈ ಸಂದರ್ಭದಲ್ಲಿ ಜನನಾಂಗದ ಒಳಭಾಗದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತಿದ್ದ ಜಾರುಕದ್ರವ ಕಡಿಮೆಯಾಗಿ ಒಣಗುತ್ತವೆ. ಹಾಗೂ ಸ್ನಾಯುಗಳು ತಮ್ಮ ಸೆಳೆತವನ್ನು ಕಳೆದುಕೊಂಡು ಅಗತ್ಯಪ್ರಮಾಣದ ಒತ್ತಡವನ್ನು ನೀಡದೇ ಹೋಗುತ್ತವೆ.

ಶಸ್ತ್ರಚಿಕಿತ್ಸೆ ಅಥವಾ ಹೆರಿಗೆಯ ಬಳಿಕ ಮಿಲನಕ್ಕೆ ಹೆಚ್ಚು ಸಮಯದ ಕಾಯದಿರುವುದು

ಶಸ್ತ್ರಚಿಕಿತ್ಸೆ ಅಥವಾ ಹೆರಿಗೆಯ ಬಳಿಕ ಮಿಲನಕ್ಕೆ ಹೆಚ್ಚು ಸಮಯದ ಕಾಯದಿರುವುದು

ಲೈಂಗಿಕವಾಗಿ ಹರಡಬಹುದಾದ ರೋಗಗಳು

ಇವುಗಳಲ್ಲಿ ಜನನಾಂಗದ ಕೀವುಗುಳ್ಳೆ ಅಥವಾ ಬೊಕ್ಕೆಗಳು, ಹರ್ಪಿಸ್ ಅಥವಾ ಇತರ ಮೇಹರೋಗಗಳು ಒಳಗೊಂಡಿರುತ್ತವೆ.

ಸುಗಮ ಹೆರಿಗೆಗಾಗಿ ಮಾಡಲಾದ ಗಾಯ ಅಥವಾ ಪೆಟ್ಟು

ಸುಗಮ ಹೆರಿಗೆಗಾಗಿ ಮಾಡಲಾದ ಗಾಯ ಅಥವಾ ಪೆಟ್ಟು

ಹೆರಿಗೆಯ ಸಮಯದಲ್ಲಿ ಹೆರಿಗೆ ಸುಗಮವಾಗಲು ಪ್ರಸೂತಿತಜ್ಞರು ಯೋನಿ ಮತ್ತು ಆಸನದ ನಡುವಣ ಭಾಗವನ್ನು ಚಿಕ್ಕ ಶಸ್ತ್ರಚಿಕಿತ್ಸೆಯ ಮೂಲಕ ತೆರೆಯುತ್ತಾರೆ (episiotomy). ಈ ಗಾಯ ಪೂರ್ಣವಾಗಿ ಮಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಇದರ ಹೊರತಾಗಿ ಯೋನಿಯ ಭಾಗದಲ್ಲಿ ಬೇರಾವುದೋ ಕಾರಣದಿಂದ ಉಂಟಾದ ಪೆಟ್ಟು ಸಹಾ ನೋವಿಗೆ ಕಾರಣವಾಗಬಲ್ಲುದು.

ವಲ್ವೋಡೈನಿಯಾ (Vulvodynia)

ವಲ್ವೋಡೈನಿಯಾ (Vulvodynia)

ಜನನಾಂಗದ ಹೊರಗಿನಿಂದ ಕಾಣುವ ಯಾವುದೇ ಭಾಗದಲ್ಲಿ ಎದುರಾಗುವ ನೋವಿಗೆ ಒಟ್ಟಾರೆಯಾಗಿ ಈ ಹೆಸರನ್ನಿಡಲಾಗಿದೆ. ಹೊರತುಟಿ, ಒಳತುಟಿ, ಚಂದ್ರನಾಡಿ ಹಾಗೂ ಯೋನಿದ್ವಾರ ಮೊದಲಾದ ಸೂಕ್ಷ್ಮಭಾಗಗಳಲ್ಲಿ ಒಂದು ನಿರ್ದಿಷ್ಟ ಭಾಗ ಮಾತ್ರವೇ ನೋವು ನೀಡುತ್ತಿದ್ದಿರಬಹುದು ಅಥವಾ ಕಾಲಕಾಲಕ್ಕೆ ಬೇರೆ ಬೇರೆ ಭಾಗಗಳು ನೋವು ನೀಡುತ್ತಿದ್ದಿರಬಹುದು. ಈ ಸ್ಥಿತಿಗೆ ಏನು ಕಾರಣ ಎಂದು ವೈದ್ಯರೂ ಸುಲಭವಾಗಿ ಹೇಳಲು ಸಾಧ್ಯವಿಲ್ಲ ಹಾಗೂ ಈ ಸ್ಥಿತಿಗೆ ನೇರವಾದ ಚಿಕಿತ್ಸೆಯೂ ಇಲ್ಲ. ಆದರೆ ಸಾಕಷ್ಟು ಮುಂಜಾಕರೂಕತಾ ಕ್ರಮ ಹಾಗೂ ಲಭ್ಯವಿರುವ ಚಿಕಿತ್ಸೆಗಳನ್ನು ಪಡೆದುಕೊಳ್ಳುವ ಮೂಲಕ ಈ ಸ್ಥಿತಿ ಸುಧಾರಿಸಬಹುದು.

ಮಹಿಳೆಯರಲ್ಲಿ ನೋವಿನಿಂದ ಕೂಡಿದ ಸಂಭೋಗಕ್ಕೆ ಚಿಕಿತ್ಸೆ ಏನು?

ಮಹಿಳೆಯರಲ್ಲಿ ನೋವಿನಿಂದ ಕೂಡಿದ ಸಂಭೋಗಕ್ಕೆ ಚಿಕಿತ್ಸೆ ಏನು?

ಕೆಲವು ಸಂದರ್ಭಗಳಲ್ಲಿ, ಮಹಿಳೆಯರಿಗೆ ಎದುರಾಗುವ ನೋವಿಗೆ ಚಿಕಿತ್ಸೆಯ ಅಗತ್ಯವೇ ಇಲ್ಲ. ಉದಾಹರಣೆಗೆ ಹೆರಿಗೆಯ ಬಳಿಕ ಎದುರಾಗುವ ನೋವು. ಇದಕ್ಕೆ ಹೆರಿಗೆಯ ಬಳಿಕ ಕನಿಷ್ಟ ಆರು ವಾರಗಳವರೆಗೆ ಮಿಲನದಿಂದ ದೂರವಿರುವುದೇ ಚಿಕಿತ್ಸೆ! ಆ ಬಳಿಕವೂ ಸಾಕಷ್ಟು ಕಾಳಜಿ, ನಾಜೂಕು ಹಾಗೂ ತಾಳ್ಮೆ ವಹಿಸಿಯೇ ಮುಂದುವರೆಯಬೇಕೇ ವಿನಃ ಹೆಚ್ಚಿನ ಒತ್ತಡ ಅಥವಾ ಘರ್ಷಣೆ ಕೂಡದು. ಜನನಾಂಗದಲ್ಲಿ ಜಾರುಕದ್ರವ ಕೊರತೆ, ಒಣತನ ಕಾರಣವಾಗಿದ್ದರೆ ನೀರು ಆಧಾರಿತ ಜಾರುಕದ್ರವ (water based lubricant) ಅಥವಾ ವೈದ್ಯರು ಸೂಚಿಸುವ ಉತ್ಪನ್ನಗಳನ್ನು ಬಳಸಬೇಕು. ಕೆಲವು ಸಂದರ್ಭಗಳನ್ನು ವೈದ್ಯರು ಸೂಕ್ತ ಪರೀಕ್ಷೆಗಳ ಮೂಲಕವೇ ಖಚಿತಪಡಿಸಿ ಅಗತ್ಯ ಔಷಧಿಗಳನ್ನು ನೀಡಿದರೆ ಆ ಪ್ರಕಾರವೇ ಔಷಧಿಗಳನ್ನು ಸೇವಿಸಿ ವೈದ್ಯರ ಸಲಹೆ ಪಾಲಿಸಬೇಕು.

ಲೈಂಗಿಕ ತಜ್ಞರ ಸಲಹೆ ಪಡೆಯಿರಿ

ಲೈಂಗಿಕ ತಜ್ಞರ ಸಲಹೆ ಪಡೆಯಿರಿ

ಒಂದು ವೇಳೆ ವೈದ್ಯಕೀಯ ಕಾರಣಗಳಿಗೂ ಹೊರತಾಗಿ ನೋವು ಕಾಣಿಸಿಕೊಂಡಿದ್ದರೆ ಇದಕ್ಕೆ ಲೈಂಗಿಕ ತಜ್ಞರಿಂದ ಸಲಹೆ ಪಡೆಯಬಹುದು. (sexual therapy).ಕೆಲವು ವ್ಯಕ್ತಿಗಳ ಮನದಾಳದಲ್ಲಿ ಹುದುಗಿದ್ದ ಅವ್ಯಕ್ತ ಭಾವನೆಗಳು, ಉದಾಹರಣೆಗೆ ತಪ್ಪಿತಸ್ಥ ಭಾವನೆ, ಲೈಂಗಿಕತೆಯ ಕುರಿತಾದ ದ್ವಂದ್ವಗಳು, ಧಾರ್ಮಿಕ ಕಟ್ಟುಪಾಡು, ಹಿಂದೆಂದೋ ಆದ ಲೈಂಗಿಕ ದೌರ್ಜನ್ಯ ಮೊದಲಾದವು ಅಡ್ಡಿಯಾಗಬಹುದು. ಒಂದು ವೇಳೆ ಸಂಭೋಗದ ಸಮಯದಲ್ಲಿ ರಕ್ತಸ್ರಾವ, ಗಾಯಗಳು, ಅನಿಯಮಿತ ಮಾಸಿಕ ದಿನಗಳು, ಬಿಳಿಸೆರಗು ಅಥವಾ ಅನೈಚ್ಛಿಕವಾದ ಯೋನಿಗಳ ಸ್ನಾಯುಗಳ ಸೆಡೆತ ಮೊದಲಾದವು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಕಂಡು ಸಮಸ್ಯೆಗಳನ್ನು ವಿವರಿಸಬೇಕು. ಒಂದು ವೇಳೆ ಮಾನಸಿಕ ಕಾರಣಗಳಿದ್ದರೆ ಪ್ರಮಾಣೀಕೃತ ಲೈಂಗಿಕ ಸಲಹೆಗಾರರಿಂದ ಸೂಕ್ತ ಸಲಹೆ ಪಡೆಯಬೇಕು.

For Quick Alerts
ALLOW NOTIFICATIONS
For Daily Alerts

    English summary

    Facts About Pain During Sex You Need To Know

    Intercourse pain, or dyspareunia, can cause problems in a couple's sexual relationship. In addition to the physically painful sex, there is also the possibility of negative emotional effects. So the problem should be addressed as soon as it arises.n many cases, a woman can experience painful sex if there is not sufficient vaginal lubrication. When this occurs, the pain can be resolved if the female becomes more relaxed
    ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more