For Quick Alerts
ALLOW NOTIFICATIONS  
For Daily Alerts

ಪುರುಷರ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವ ಅದ್ಭುತ ಆಹಾರಗಳು

|

ಪುರುಷರ ಬಂಜೆತನಕ್ಕೆ ವೀರ್ಯಾಣುಗಳ ಸಂಖ್ಯೆ ಅಗತ್ಯಕ್ಕೂ ಕಡಿಮೆ ಇರುವುದು ಪ್ರಮುಖ ಕಾರಣವಾಗಿದೆ ಹಾಗೂ ಸತು ಹಾಗೂ ಇತರ ವಿಟಮಿನ್ನುಗಳ ಕೊರತೆ ಈ ಸಂಖ್ಯೆ ಕಡಿಮೆಯಾಗಲು ಕಾರಣವಾಗುತ್ತವೆ. ಒಂದು ವೇಳೆ ಬಂಜೆತನಕ್ಕೆ ಇದೇ ಕಾರಣವಾಗಿದ್ದರೆ ಸೂಕ್ತ ಆಹಾರಗಳ ಸೇವನೆಯಿಂದ ಈ ಕೊರತೆಯನ್ನು ತುಂಬಿಕೊಳ್ಳುವ ಮೂಲಕ ಬಂಜೆತನದ ತೊಂದರೆಯನ್ನು ನೈಸರ್ಗಿಕವಾಗಿ ನಿವಾರಿಸಿಕೊಳ್ಳಬಹುದು ಹಾಗೂ ಸಂತಾನಫಲವನ್ನು ಪಡೆಯುವ ಸಾಧ್ಯತೆಯನ್ನುಹೆಚ್ಚಿಸಬಹುದು. ಈ ಕೊರತೆ ಇರುವ ಪುರುಷರಿಗೆ ಸೂಕ್ತವಾಗಿರುವ ಎಂಟು ಪ್ರಮುಖ ಆಹಾರಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಬನ್ನಿ ನೋಡೋಣ....

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವ ಆಹಾರಗಳು

ವೀರ್ಯಾಣುಗಳ ಸಂಖ್ಯೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವುದು ಹೇಗೆ?

ವೀರ್ಯಾಣುಗಳ ಸಂಖ್ಯೆಯನ್ನು ನೈಸರ್ಗಿಕವಾಗಿ ಹೆಚ್ಚಿಸುವುದು ಹೇಗೆ?

ಈ ಗುಣವನ್ನು ಪಡೆದಿರುವ ಆಹಾರಗಳನ್ನು ಸೇವಿಸುವುದು ಸುಲಭ ಮತ್ತು ಆರೋಗ್ಯಕರ ವಿಧಾನವಾಗಿವೆ. ಈ ಆಹಾರಗಳೆಂದರೆ:

• ಸಿಂಪಿ

• ಕಪ್ಪು ಚಾಕಲೇಟು

• ಬೆಳ್ಳುಳ್ಳಿ

• ಬಾಳೆಹಣ್ಣು

• ಬ್ರೋಕೋಲಿ

• ಶತಾವರಿ

• ಅಕ್ರೋಟು

• ಜಿನ್ಸೆಂಗ್

• ಮೊಟ್ಟೆ

ವೀರ್ಯಾಣುಗಳ ಉತ್ಪಾದನೆಗಾಗಿ ಸೇವಿಸಿ ಸಿಂಪಿ

ವೀರ್ಯಾಣುಗಳ ಉತ್ಪಾದನೆಗಾಗಿ ಸೇವಿಸಿ ಸಿಂಪಿ

ಸತುವಿನ ಕೊರತೆಯನ್ನು ನೀಗಿಸಲು ಲಭ್ಯವಿರುವ ಅತ್ಯುತ್ತಮ ಆಹಾರವೆಂದರೆ ಸಿಂಪಿಯಾಗಿದೆ. ಈ ಸಾಗರ ಉತ್ಪನ್ನದ ಸೇವನೆಯಿಂದ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ವೃದ್ದಿಸುತ್ತದೆ ಹಾಗೂ ಇದೊಂದು ಉತ್ತಮ ಕಾಮೋತ್ತೇಜಕವೂ ಆಗಿದೆ. ದಿನವೊಂದರಲ್ಲಿ ಸುಮಾರು ಐವತ್ತು ಗ್ರಾಂ ನಷ್ಟು ಸಿಂಪಿಯ ಮೃದುಭಾಗವನ್ನು ಸೇವಿಸುವ ಮೂಲಕ ಸುಮಾರು ಹದಿನೈದು ಮಿಲಿಗ್ರಾಂ ಸತುವನ್ನು ಪಡೆಯಬಹುದು. ಪರಿಣಾಮವಾಗಿ ತಂದೆಯಾಗುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಸಿಂಪಿ ಆಗ್ಗವೂ ಹೌದು ಜೀರ್ಣಿಸಿಕೊಳ್ಳಲು ಸುಲಭವೂ ಹೌದು ಎಂಬ ಆಹಾರವಾಗಿರುವ ಕಾರಣ ಈ ಆಹಾರವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಉತ್ತಮ ಲೈಂಗಿಕ ಆರೋಗ್ಯವನ್ನು ಪಡೆಯಬಹುದು. ಸತುವಿನ ಅಂಶ ಹೆಚ್ಚಿರುವ ಇತರ ಆಹಾರಗಳೆಂದರೆ ಟರ್ಕಿ ಕೋಳಿ ಮಾಂಸ, ಕುಂಬಳದ ಬೀಜಗಳು, ಕಡಲ ಏಡಿ ಮತ್ತು ಮೃದ್ವಂಗಿಗಳಾಗಿವೆ.

Most Read: ನಿಮ್ಮ ಜೀವನದ ಎಲ್ಲಾ ಸೀಕ್ರೆಟ್ಸ್ ಬಿಚ್ಚಿಡುವ ಅಂಗೈಯಲ್ಲಿರುವ ಅದೃಷ್ಟದ ಚಿಹ್ನೆಗಳು!

 ಆಂಟಿ ಆಕ್ಸಿಡೆಂಟುಗಳಿಗಾಗಿ ಕಪ್ಪು ಚಾಕಲೇಟು

ಆಂಟಿ ಆಕ್ಸಿಡೆಂಟುಗಳಿಗಾಗಿ ಕಪ್ಪು ಚಾಕಲೇಟು

ಕಪ್ಪು ಚಾಕಲೇಟಿನಲ್ಲಿರುವ ಅಮೈನೋ ಆಮ್ಲಗಳು ವೀರ್ಯಾಣು ಮತ್ತು ವೀರ್ಯದ್ರವದ ಪ್ರಮಾಣವನ್ನು ದುಪ್ಪಟ್ಟಾಗಿಸುತ್ತವೆ. ಅಲ್ಲದೇ ಇವುಗಳಲ್ಲಿ ದಾಳಿಂಬೆ ಮತ್ತು ಅಕಾಯ್ ಬೆರ್ರಿ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟ್ ಗಳಿದ್ದು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತವೆ. ಅಲ್ಲದೇ ಪುರುಷರಲ್ಲಿ ನಪುಂಸಕತ್ವಕ್ಕೆ ಕಾರಣವಾಗಿದ್ದ ವಿಷಕಾರಿ ವಸ್ತುಗಳನ್ನು ಮತ್ತು ಪ್ರದೂಷಣೆಯಿಂದ ದೇಹವನ್ನು ಪ್ರವೇಶಿಸಿದ ಅಪಾಯಕಾರಿ ಕಣಗಳನ್ನು ನಿವಾರಿಸಿ ಸಹಜವಾಗಿ ಪುರುಷತ್ವ ಹೆಚ್ಚಲು ನೆರವಾಗುತ್ತದೆ. ಆದರೆ ಕಪ್ಪು ಚಾಕಲೇಟಿನ ಪ್ರಮಾಣ ಮಿತವಾಗಿರಬೇಕು. ಹೆಚ್ಚಾದರೆ ಇದು ದೇಹದಲ್ಲಿ ಅತಿ ಹೆಚ್ಚಿನ ಟೆಸ್ಟಾಸ್ಟೆರಾನ್ ರಸದೂತವನ್ನು ಪ್ರಚೋದಿಸಿ ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವ ಬದಲು ಕುಗ್ಗಿಸಬಹುದು. ದಿನವೊಂದಕ್ಕೆ ಕಪ್ಪು ಚಾಕಲೇಟಿನ ಎರಡು ಚೌಕಾಕಾರದ ತುಂಡುಗಳನ್ನು ಸೇವಿಸಿದರೆ ಬೇಕಾದಷ್ಟಾಯಿತು.

ವೀರ್ಯಾಣುಗಳ ಗುಣಮಟ್ಟ ಹೆಚ್ಚಿಸಲು ನೆರವಾಗುವ ಬೆಳ್ಳುಳ್ಳಿ

ವೀರ್ಯಾಣುಗಳ ಗುಣಮಟ್ಟ ಹೆಚ್ಚಿಸಲು ನೆರವಾಗುವ ಬೆಳ್ಳುಳ್ಳಿ

ಕೇವಲ ಇದರ ಪರಿಮಳ ಕೊಂಚ ಘಾಟು ಎಂಬ ಅಂಶವನ್ನು ಕಡೆಗಣಿಸಿದರೆ ಇದೊಂದು ಅದ್ಭುತ ಕಾಮೋತ್ತೇಜಕವಾಗಿದೆ. ಇದರಲ್ಲಿರುವ ಸೆಲೆನಿಯಂ ಹಾಗೂ ವಿಟಮಿನ್ ಬಿ೬ ಎರಡೂ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ಬೆಳ್ಳುಳ್ಳಿಯಲ್ಲಿವು ಆಲಿಸಿನ್ ಎಂಬ ಇನ್ನೊಂದು ಪೋಷಕಾಂಶ ಪುರುಷರ ಜನನಾಂಗಕ್ಕೆ ಹೆಚ್ಚಿನ ರಕ್ತಸಂಚಾರವನ್ನು ಪೂರೈಸಿ ವೀರ್ಯಾಣುಗಳ ಪ್ರಮಾಣವನ್ನೂ ಹೆಚ್ಚಿಸಲು ನೆರವಾಗುತ್ತದೆ. ಬೆಳ್ಳುಳ್ಳಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಹಾಗೂ ರಕ್ತವನ್ನು ಶುದ್ದೀಕರಿಸುವ ಗುಣವನ್ನೂ ಹೊಂದಿದೆ. ತನ್ಮೂಲಕ ರಕ್ತನಾಳಗಳಲ್ಲಿ ಉಂಟಾಗಿದ್ದ ತಡೆಗಳನ್ನು ನಿವಾರಿಸಿ ರಕ್ತಪರಿಚಲನೆ ಸರಾಗಗೊಳಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ನಿತ್ಯವೂ ಎರಡರಿಂದ ಮೂರು ಎಸಳು ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸದರೆ ಸಾಕು.

Most Read: ಈ 5 ರಾಶಿಯವರು ಕಷ್ಟಪಡದೇ- ಜೀವನದಲ್ಲಿ ಸುಖ ಭೋಗಗಳನ್ನು ಹೊಂದಲು ಇಷ್ಟಪಡುತ್ತಾರೆ!

ಈಜುಪಟುಗಳನ್ನೂ ನಾಚಿಸಲು ನೆರವಾಗುವ ಬ್ರೋಕೋಲಿ

ಈಜುಪಟುಗಳನ್ನೂ ನಾಚಿಸಲು ನೆರವಾಗುವ ಬ್ರೋಕೋಲಿ

ದೇಹದಲ್ಲಿ ವಿಟಮಿನ್ ಎ ಕೊರತೆಯಾಗಿದ್ದರೆ ವೀರ್ಯಾಣುಗಳ ಸಂಖ್ಯೆ ಸಾಕಷ್ಟಿದ್ದರೂ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ. ವಿಟಮಿನ್ ಎ ಕೊರತೆಯಿಂದ ವೀರ್ಯಾಣುಗಳ ಗುಣಮಟ್ಟವೂ ತಗ್ಗುತ್ತದೆ. ಬ್ರೋಕೋಲಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ ಎ ಇದ್ದು ಈ ಕೊರತೆಯನ್ನು ಸಮರ್ಥವಾಗಿ ನಿವಾರಿಸುತ್ತದೆ. ಕೆಂಪು ದೊಣ್ಣೆ ಮೆಣಸು, ಪಾಲಕ್ ಸೊಪ್ಪು, ಅಪ್ರಿಕಾಟ್, ಸಿಹಿಗೆಣಸು ಮತ್ತು ಕ್ಯಾರೆಟ್ ಗಳಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಎ ಇದೆ.

ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಬಾಳೆಹಣ್ಣು

ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಹಲವು ಖನಿಜಗಳು ಹಾಗೂ ವಿಟಮಿನ್ ಎ, ಬಿ೧, ಹಾಗೂ ಸಿ ಸಮೃದ್ಧವಾಗಿದೆ. ಇವು ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಅಗತ್ಯವಾಗಿದ್ದು ಲೈಂಗಿಕ ಸಾಮರ್ಥ್ಯ ಹೆಚ್ಚಲೂ ನೆರವಾಗುತ್ತವೆ. ಅಲ್ಲದೇ ಬಾಳೆಹಣ್ಣಿನಲ್ಲಿರುವ ಬ್ರೋಮಿಲೈನ್ ಎಂಬ ಕಿಣ್ವ ಪುರುಷಕ ಲೈಂಗಿಕ ಶಕ್ತಿ ಹಾಗೂ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ನೆರವಾಗುತ್ತದೆ.

ವೀರ್ಯಾಣುಗಳ ಸಾಂದ್ರತೆ ಹೆಚ್ಚಿಸಲು ನೆರವಾಗುವ ಶತಾವರಿ

ವೀರ್ಯಾಣುಗಳ ಸಾಂದ್ರತೆ ಹೆಚ್ಚಿಸಲು ನೆರವಾಗುವ ಶತಾವರಿ

ಆಸ್ಪರಾಗಸ್ ಎಂದೇ ಹೆಚ್ಚು ಜನಪ್ರಿಯವಾಗಿರುವ ಶತಾವರಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದು ಸಹಾ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ವೃಷಣದ ಜೀವಕೋಶಗಳನ್ನು ರಕ್ಷಿಸಲು ನೆರವಾಗುತ್ತದೆ. ಅಲ್ಲದೇ ಜನನಾಂಗಕ್ಕೆ ರಕ್ತಪರಿಚಲನೆ ಹೆಚ್ಚಿಸುತ್ತದೆ ಹಾಗೂ ವೃಷಣಗಳಿಗೆ ಎದುರಾಗುವ ಸೋಂಕಿನಿಂದ ರಕ್ಷಿಸುತ್ತದೆ. ಅಲ್ಲದೇ ಇದು ವೃಷಣಗಳ ಜೀವಕೋಶಗಳನ್ನು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳಿಂದ ರಕ್ಷಿಸುತ್ತದೆ, ತನ್ಮೂಲಕ ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ಹಾಗೂ ವೀರ್ಯಾಣುಗಳ ಗುಣಮಟ್ಟ ಹೆಚ್ಚಲೂ ನೆರವಾಗುತ್ತದೆ. ಹಾಗಾಗಿ ಈ ಕೊರತೆ ಇರುವ ಪುರುಷರು ಶತಾವರಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯವಾಗಿದೆ.

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವ ಅಕ್ರೋಟು

ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವ ಅಕ್ರೋಟು

ಅಕ್ರೋಟಿನ ಸೇವನೆಯಿಂದಲೂ ವೀರ್ಯಾಣುಗಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಜನನಾಂಗಕ್ಕೆ ಹರಿಯುವ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಒಮೆಗಾ ೩ ಕೊಬ್ಬಿನ ಆಮ್ಲಗಳು ಹಾಗೂ ಎಲ್-ಆರ್ಜಿನೈನ್ ಎಂಬ ಪೋಷಕಾಂಶಗಳು ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಹೆಚ್ಚಿಸುತ್ತವೆ. ಇತರ ಒಣಫಲಗಳಿಗೆ ಹೋಲಿಸಿದರೆ ಅಕ್ರೋಟಿನಲ್ಲಿ ದುಪ್ಪಟ್ಟು ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ಇವು ರಕ್ತದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ಹೋರಾಡುತ್ತವೆ. ಅಲ್ಲದೇ ಒಮೆಗಾ ೩ ಕೊಬ್ಬಿನ ಆಮ್ಲಗಳು ಜನನಾಂಗಕ್ಕೆ ಹರಿಯುವ ರಕ್ತದ ಪ್ರಮಾಣ ಹೆಚ್ಚುತ್ತದೆ ಹಾಗೂ ವೀರ್ಯಾಣುಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುತ್ತದೆ. ಅಕ್ರೋಟಿನ ಪುಡಿಯನ್ನು ನಿಮ್ಮ ನೆಚ್ಚಿನ ಲಘು ಆಹಾರದ ಮೇಲೆ ಚಿಮುಕಿಸಿ ಅಥವಾ ಇತರ ಆಹಾಗಳಲ್ಲಿ ತುಂಡುಗಳ ರೂಪದಲ್ಲಿ ಬೆರೆಸಿ ಸೇವಿಸಬಹುದು. ಒಮೆಗಾ ೩ ಕೊಬ್ಬಿನ ಆಮ್ಲಗಳು ಹೆಚ್ಚಿರುವ ಇತರ ಅಹಾರಗಳೆಂದರೆ ಏಡಿ, ಸಾಲ್ಮನ್ ಮೀನು, ಕೋಳಿ ಮಾಂಸ ಹಾಗೂ ಕುಂಬಳದ ಬೀಜಗಳಾಗಿವೆ.

Most Read: ನಿಮ್ಮ ಮೈ ಮೇಲೆ ಹಲ್ಲಿ ಬಿದ್ದರೆ ಅಪಶಕುನವೇ? ಅದೃಷ್ಟವೇ?

ಟೆಸ್ಟೋಸ್ಟೆರೋನ್ ರಸದೂತವನ್ನು ಹೆಚ್ಚಿಸುವ ಜಿನ್ಸೆಂಗ್

ಟೆಸ್ಟೋಸ್ಟೆರೋನ್ ರಸದೂತವನ್ನು ಹೆಚ್ಚಿಸುವ ಜಿನ್ಸೆಂಗ್

ಹಶಿಶುಂಠಿಯನ್ನೇ ಹೋಲುವ ಈ ಚೀನಾದ ಮೂಲಿಕೆ ನೂರಾರು ವರ್ಷಗಳಿಂದ ಪುರುಷರ ದಾರ್ಢ್ಯತೆಯನ್ನು ಹೆಚ್ಚಿಸುತ್ತಾ ಬಂದಿದೆ. ಇದರ ನಿಯಮಿತ ಸೇವನೆಯಿಂದ ಪುರುಷರ ದೇಹದಲ್ಲಿ ಟೆಸ್ಟಾಸ್ಟೆರೋನ್ ರಸದೂತದ ಪ್ರಮಾಣವನ್ನು ಹೆಚ್ಚಿಸಿ ಕಾಮಾಸಕ್ತಿಯನ್ನು ಹೆಚ್ಚಿಸಲು ಹಾಗೂ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಈ ಮೂಲಿಕೆಯ ಸೇವನೆಯಿಂದ ಪ್ರಬಲ ಕಾಮಪರಾಕಾಷ್ಠೆಯನ್ನು ಪಡೆಯಲು ಹಾಗೂ ನಿಮಿರುದೌರ್ಬಲ್ಯದ ತೊಂದರೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ. ಜಿನ್ಸೆಂಗ್ ವೀರ್ಯಾಣುಗಳ ಗುಣಮಟ್ಟ ಹಾಗೂ ಸಾಂದ್ರತೆಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಫಲವತ್ತತೆಯ ಕೊರತೆ ಇರುವ ಪುರುಷರು ಈ ಮೂಲಿಕೆಯ ಒಣಪುಡಿಯನ್ನು ತಮ್ಮ ನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಈ ಕೊರತೆಯನ್ನು ಸಮರ್ಥವಾಗಿ ಎದುರಿಸಬಹುದು.

English summary

Fabulous Foods to Boost Mens Sperm Count

A low sperm count has often been linked with factors such as a zinc deficiency or a lack of vitamins. So, making some nutritional changes can be a great way to bring that sperm count up. That’s why we’ve put together a list of foods you definitely need to get on his Trying To Conceive menu.
X
Desktop Bottom Promotion