For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಮೂಲಕ ಹರಡುವ 'ಗೊನೊರಿಯಾ' ಕಾಯಿಲೆ! ಇಲ್ಲಿದೆ ಇದರ ಲಕ್ಷಣಗಳು

|

ಮನುಷ್ಯನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಕಾಮಾಸಕ್ತಿಯನ್ನು ಈಡೇರಿಸಿಕೊಳ್ಳಲು ಇರುವಂತಹ ಸುಲಭವ ವಿಧಾನವೇ ಲೈಂಗಿಕ ಕ್ರಿಯೆ. ಆದರೆ ಈ ಲೈಂಗಿಕ ಕ್ರಿಯೆಯಿಂದ ಕೆಲವೊಂದು ರೀತಿಯ ಲೈಂಗಿಕ ರೋಗಗಳು ಕೂಡ ಬರುವುದು. ಇದರಲ್ಲಿ ಗೊನೊರಿಯಾ(ಶುಕ್ಲಮೇಹರೋಗ)ವು ಒಂದಾಗಿದೆ.

ಮೆಡಿಕಲ್ ನ್ಯೂಸ್ ಟುಡೇ ವರದಿ ಮಾಡಿರುವ ಪ್ರಕಾರ ವಿಶ್ವದಲ್ಲಿ ಪ್ರತೀವರ್ಷ ಸುಮಾರು 820,000 ಹೊಸತಾಗಿ ಗೊನೊರಿಯಾ ಸೋಂಕಿತರು ಪತ್ತೆಯಾಗುತ್ತಾರೆ. 2016ರಲ್ಲಿ ಹದಿಹರೆಯದವರು ಮತ್ತು ಯುವಕರಲ್ಲಿ ಈ ಸೋಂಕು ಅತಿಯಾಗಿ ಕಂಡುಬಂದಿತ್ತು. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ನೀವು ಈ ಲೇಖನ ಓದಿ...

ಗೊನೊರಿಯಾ ಎಂದರೇನು?

ಗೊನೊರಿಯಾ ಎಂದರೇನು?

ನೀಸ್ಸೆರಿಯಾ ಗೊನೋರ್ಹೋಯೆ ಎನ್ನುವ ಬ್ಯಾಕ್ಟೀರಿಯಾದಿಂದಾಗಿ ಗೊನೊರಿಯಾವು ಪುರುಷರು ಹಾಗೂ ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯ ಮೂಲಕ ಹರುಡುವುದು. ಗೊನೊರಿಯಾ ರೋಗವು ಯೋನಿಯ ಲೈಂಗಿಕ ಕ್ರಿಯೆ, ಗುದದ ಲೈಂಗಿಕ ಕ್ರಿಯೆ ಮತ್ತು ಬಾಯಿಯಿಂದಲೂ ಇದು ಹರಡಬಹುದು. ಇದು ಸೋಂಕಿತ ಮಹಿಳೆಯಿಂದ ಸಾಮಾನ್ಯ ಹೆರಿಗೆ ಸಮಯದಲ್ಲಿ ಮಗುವಿಗೂ ತಗುಲಬಹುದು. ಆದರೆ ಸಿಸೇರಿಯನ್ ಹೆರಿಗೆ ವೇಳೆ ಈ ಭೀತಿ ಇರದು.

ದೇಹದಿಂದ ಹೊರಗಡೆ ಈ ಬ್ಯಾಕ್ಟೀರಿಯಾವು ಕೆಲವು ಸೆಕೆಂಡುಗಳ ಕಾಲವೂ ಬದುಕಿರಲಾರದು. ಈ ಲೈಂಗಿಕ ರೋಗವು ಬಟ್ಟೆಗಳು ಮತ್ತು ಟಾಯ್ಲೆಟ್ ನ ಸೀಟ್ ನ ಮೂಲಕವು ಹರಡಬಹುದು.

ಗೊನೊರಿಯಾದ ಲಕ್ಷಣಗಳು ಏನು?

ಗೊನೊರಿಯಾದ ಲಕ್ಷಣಗಳು ಏನು?

ಸೋಂಕು ತಗುಲಿದ 1-14 ದಿನಗಳಲ್ಲಿ ಗೊನೊರಿಯಾದ ಲಕ್ಷಣಗಳು ಕಂಡುಬರುವುದು. ಆದರೆ ಪುರುಷರು ಹಾಗೂ ಮಹಿಳೆಯರಲ್ಲಿ ಈ ರೋಗಲಕ್ಷಣಗಳು ಭಿನ್ನವಾಗಿರುವುದು.

ಪುರುಷರಲ್ಲಿ ಕಂಡುಬರುವಂತಹ ಲಕ್ಷಣಗಳು

ಪುರುಷರಲ್ಲಿ ಕಂಡುಬರುವಂತಹ ಲಕ್ಷಣಗಳು

* ಹಸಿರು, ಹಳದಿ ಅಥವಾ ಬಿಳಿಯ ಮೂತ್ರ ವಿಸರ್ಜನೆ

* ನೋವಿನ ಮತ್ತು ಪದೇ ಪದೇ ಮೂತ್ರವಿಸರ್ಜನೆ

* ಮಲವಿಸರ್ಜನೆ ವೇಳೆ ನೋವು, ಕಿರಿಕಿರಿ, ತುರಿಕೆ ಇತ್ಯಾದಿ.

* ವೃಷಣಗಳಲ್ಲಿ ತೀವ್ರ ನೋವು.

* ತುರಿಕೆ ಮತ್ತು ನುಂಗಲು ಕಷ್ಟವಾಗುವುದು.

* ಕೆಂಪು, ಊತ, ಬಿಸಿ ಮತ್ತು ನೋವಿನ ಗಂಟುಗಳು.

* ಕಣ್ಣು ನೋವು ಮತ್ತು ಕಣ್ಣಿನಿಂದ ಕೀವಿನಂತೆ ಹೊರಬರುವುದು

ಮಹಿಳೆಯರಲ್ಲಿ ಕಂಡುಬರುವ ಲಕ್ಷಣಗಳು

ಮಹಿಳೆಯರಲ್ಲಿ ಕಂಡುಬರುವ ಲಕ್ಷಣಗಳು

•ಲೈಂಗಿಕ ಕ್ರಿಯೆ ವೇಳೆ ನೋವು

•ಹಳದಿ ಅಥವಾ ಹಸಿರು ವಿಸರ್ಜನೆ

•ಜ್ವರ ಮತ್ತು ಯೋನಿ ಊತ

•ಋತುಚಕ್ರ ದೀರ್ಘವಾಗಿರುವುದು

•ಋತುಚಕ್ರದ ಮಧ್ಯೆ ರಕ್ತಸ್ರಾವ

•ವಾಂತಿ ಮತ್ತು ಹೊಟ್ಟೆ ನೋವು

•ಮಲವಿಸರ್ಜನೆ ವೇಳೆ ನೋವು, ಕಿರಿಕಿರಿ, ತುರಿಕೆ ಇತ್ಯಾದಿ.

•ಲೈಂಗಿಕ ಕ್ರಿಯೆ ಬಳಿಕ ರಕ್ತಸ್ರಾವ

•ನೋವಿನ ಮತ್ತು ಪದೇ ಪದೇ ಮೂತ್ರವಿಸರ್ಜನೆ

•ಗಂಟಲಿನ ಊತ, ಕಿರಿಕಿರಿ ಮತ್ತು ನುಂಗಲು ಕಷ್ಟಪಡುವುದು

•ಕಣ್ಣು ನೋವು ಮತ್ತು ಕಣ್ಣಿನಿಂದ ಕೀವಿನಂತೆ ಹೊರಬರುವುದು

•ಕೆಂಪು, ಊತ, ಬಿಸಿ ಮತ್ತು ನೋವಿನ ಗಂಟುಗಳು

ಗೊನೊರಿಯಾ ತಡೆಗಟ್ಟುವುದು ಹೇಗೆ?

ಗೊನೊರಿಯಾ ತಡೆಗಟ್ಟುವುದು ಹೇಗೆ?

ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆಂಟೇಷನ್(ಸಿಡಿಸಿ) ಪ್ರಕಾರ ಗೊನೊರಿಯಾ ತಡೆಯಲು ಒಳ್ಳೆಯ ವಿಧಾನವೆಂದರೆ ಯೋನಿ, ಗುದ ಮತ್ತು ಬಾಯಿಯ ಸೆಕ್ಸ್ ನಡೆಸದೆ ಇರುವುದು.

ನೀವು ಲೈಂಗಿಕವಾಗಿ ಕ್ರಿಯಾತ್ಮಕವಾಗಿದ್ದರೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು.

ನೀವು ಲೈಂಗಿಕವಾಗಿ ಕ್ರಿಯಾತ್ಮಕವಾಗಿದ್ದರೆ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶಗಳು.

*ನೀವು ದೀರ್ಘಕಾಲದಿಂದ ಏಕಸಂಗಾತಿಯ ಜತೆಗೆ ಸಂಬಂಧದಲ್ಲಿ ಇದ್ದರೆ, ಆಗ ನೀವು ಅಥವಾ ಆಕೆ ಪರೀಕ್ಷಿಸಿಕೊಳ್ಳಬೇಕು ಮತ್ತು ಲೈಂಗಿಕ ರೋಗದಲ್ಲಿ ನೆಗೆಟಿವ್ ಫಲಿತಾಂಶ ಬರಬೇಕು.

*ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬಳಸುವುದು ಸರಿಯಾದ ವಿಧಾನ.

*ನೀವು ಪುರುಷನಾಗಿದ್ದು, ಪುರುಷನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದರೆ, 25ರ ಹರೆಯಕ್ಕಿಂತ ಕೆಳಗಿನ ಲೈಂಗಿಕವಾಗಿ ಕ್ರಿಯಾತ್ಮಕವಾಗಿರುವ ಮಹಿಳೆ ಅಥವಾ ಹಲವು ಸಂಗಾತಿಗಳನ್ನು ಹೊಂದಿರುವ ಮಹಿಳೆ ಜತೆಗೆ ನೀವು ಸಂಬಂಧ ಹೊಂದಿದ್ದರೆ ಆಗ ನೀವು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಿ.

 ಸಮಸ್ಯೆಗಳು ಏನು?

ಸಮಸ್ಯೆಗಳು ಏನು?

ಕೆಲವೊಂದು ಸಮಸ್ಯೆಗಳನ್ನು ತಕ್ಷಣ ಪತ್ತೆಹಚ್ಚಿಕೊಂಡು ಅದಕ್ಕೆ ಚಿಕಿತ್ಸೆ ನೀಡಬೇಕು. ಮಹಿಳೆಯರಲ್ಲಿ ಗೊನೊರಿಯಾದಿಂದಾಗಿ ದೀರ್ಘಕಾಲದ ಯೋನಿ ನೋವು, ಯೋನಿ ಉರಿಯೂತದ ಕಾಯಿಲೆ, ಬಂಜೆತನ ಮತ್ತು ಅಪಸ್ಥಾನೀಯ ಗರ್ಭಧಾರಣೆ ಸಮಸ್ಯೆ ಕಂಡುಬರಬಹುದು. ಪುರುಷರಲ್ಲಿ ಈ ಸೋಂಕಿನಿಂದಾಗಿ ಬಂಜೆತನ ಮತ್ತು ಎಪಿಡಿಡಿಮಿಮಿಸ್ ಉಂಟಾಗಬಹುದು. ಈ ಸೋಂಕಿಗೆ ಚಿಕಿತ್ಸೆ ನೀಡದೆ ಇದ್ದಾಗ ಇದರಿಂದ ಸಂಧಿವಾತ, ಡರ್ಮಟೈಟಿಸ್ ಮತ್ತು ಎಚ್ ಐವಿ ಕಾಣಿಸಿಕೊಳ್ಳಬಹುದು.

ಗೊನೊರಿಯಾಗೆ ಚಿಕಿತ್ಸೆ ಏನು?

ಗೊನೊರಿಯಾಗೆ ಚಿಕಿತ್ಸೆ ಏನು?

ಮೂತ್ರ ಪರೀಕ್ಷೆ ಅಥವಾ ಸೋಂಕಿತ ಜಾಗದ ತುಂಡನ್ನು ತೆಗೆದು ಪರೀಕ್ಷೆ ಮಾಡಬಹುದು. ಚರ್ಮದ ತುಂಡಿನ ಪರೀಕ್ಷೆಯನ್ನು ಶಿಶ್ನ, ಗರ್ಭಕೋಶ, ಗರ್ಭಕಂಢ, ಗುದದ್ವಾರ ಮತ್ತು ಗಂಟಲಿನಿಂದ ತೆಗೆದುಕೊಳ್ಳಲಾಗುತ್ತದೆ. ಪರೀಕ್ಷೆಯು ಪಾಸಿಟಿವ್ ಆಗಿದ್ದರೆ ಆಗ ಸೋಂಕಿತ ವ್ಯಕ್ತಿ ಮತ್ತು ಆತನ ಸಂಗಾತಿಯು ಕೆಳಕಂಡ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ.

ಗೊನೊರಿಯಾಗೆ ಚಿಕಿತ್ಸೆ ಏನು?

ಗೊನೊರಿಯಾಗೆ ಚಿಕಿತ್ಸೆ ಏನು?

*ಆ್ಯಂಟಿಬಯೋಟಿಕಗಳಾಗಿರುವ ಸೆಫ್ಟ್ರಿಯಾಕ್ಸೋನ್ ಮತ್ತು ಆಜಿಥ್ರಮೈಸಿನ್ ಸೇವಿಸಲು ಹೇಳಬಹುದು.

ನಿಮ್ಮ ಚಿಕಿತ್ಸೆ ಪೂರ್ಣಗೊಳ್ಳುವ ತನಕ ಲೈಂಗಿಕ ಕ್ರಿಯೆಯಿಂದ ದೂರವಿರಿ. ಇದರಿಂದ ಸೋಂಕು ಹರಡುವ ಸಾಧ್ಯತೆಯಿದೆ.

*ಸಿಡಿಸಿಯು ರೋಗಿಯ ಮರುಪರಿಕ್ಷೆಗೆ ಸೂಚಿಸುತ್ತದೆ ಮತ್ತು ವೈದ್ಯರು ಅಗತ್ಯವಿದ್ದರೆ ಇದನ್ನು ಸೂಚಿಸುವರು ಮತ್ತು ಚಿಕಿತ್ಸೆ ಆರಂಭಗೊಂಡ 7 ದಿನಗಳಲ್ಲಿ ಇದನ್ನು ಮಾಡಬೇಕು.

*ಗೊನೊರಿಯಾವನ್ನು ಸರಿಯಾದ ಚಿಕಿತ್ಸೆಯಿಂದ ಗುಣಪಡಿಸಬಹುದು. ನೀವು ಗರ್ಭಿಣಿಯಾಗಿದ್ದರೆ ಆಗ ವೈದ್ಯರನ್ನು ಭೇಟಿಯಾಗಿ ಅವರಿಂದ ಸರಿಯಾದ ಪರೀಕ್ಷೆ ತಪಾಸನೆ ಮತ್ತು ಚಿಕಿತ್ಸೆ ಪಡೆದುಕೊಳ್ಳಿ. ಈ ಲೇಖನ ಶೇರ್ ಮಾಡಿಕೊಂಡು ಜಾಗೃತಿ ಉಂಟು ಮಾಡಿ.

English summary

Everything You Need To Know Gonorrhea

One can get gonorrhea through any kind of sexual contact like vaginal intercourse, anal intercourse or oral intercourse and it can even pass from mother to the baby through a vaginal delivery. According to the Centers for Disease Control and Prevention (CDC), the only way of reducing the risk of gonorrhea is to avoid having vaginal, anal or oral sex.
X
Desktop Bottom Promotion