For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಕ್ಯಾನ್ಸರ್‌‌ನ್ನು ನಿಯಂತ್ರಿಸುವ ಪವರ್ ಈ ತರಕಾರಿಗಳಲ್ಲಿದೆ!

By Deepu
|

ಕ್ಯಾನ್ಸರ್ ಎಂದರೆ ಸಾವಿನ ಬಾಗಿಲು ಎಂದೇ ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ಎಲ್ಲಾ ಕ್ಯಾನ್ಸರ್‍‌ಗಳು ಮಾರಣಾಂತಿಕವಲ್ಲ. ಪ್ರಾರಂಭಿಕ ಹಂತದಲ್ಲಿದ್ದರೆ ಖಂಡಿತಾ ಗುಣಪಡಿಸಬಹುದು. ಅಲ್ಲದೇ ರಕ್ತ, ಕರುಳು, ಗರ್ಭಾಶಯ ಮೊದಲಾದ ಕ್ಯಾನ್ಸರ್‍‌ಗಳು ಮಾತ್ರ ಉಲ್ಬಣಾವಸ್ಥೆ ತಲುಪಿದರೆ ಚಿಕಿತ್ಸೆ ಫಲಕಾರಿಯಾಗುವ ಸಾಧ್ಯತೆ ಕಡಿಮೆ.

ಅದರಲ್ಲೂ ಕರುಳಿನ ಕ್ಯಾನ್ಸರ್ ಬೇಗನೇ ವೃದ್ಧಿಗೊಳ್ಳುವ ಮತ್ತು ಚಿಕಿತ್ಸೆ ಕಷ್ಟವಿರುವ ಕಾಯಿಲೆಯಾಗಿದ್ದು ಇದರ ದುಷ್ಪರಿಣಾಮಗಳಿಂದ ದೇಹದ ಇತರ ಅಂಗಗಳೂ ಬಾಧೆಗೊಳಗಾಗುತ್ತವೆ. ಆದರೆ ಈ ಕ್ಯಾನ್ಸರ್ ಅನ್ನು ತಡೆಗಟ್ಟಲು ನಮಗೆಲ್ಲಾ ಚಿರಪರಿಚಿತವಾಗಿರುವ, ಆಹಾರಗಳಿಂದಲೇ ನಿಯಂತ್ರಿಸಬಹುದು!

ಹೌದು ನಮ್ಮ ದೈನಂದಿನ ಆಹಾರಕ್ರಮಗಳಲ್ಲಿ ಸರಿಯಾದ ಆಹಾರಗಳನ್ನು ಸೇವಿಸುವುದರಿಂದ ಖಂಡಿತವಾಗಿಯೂ ಕ್ಯಾನ್ಸರ್ ರೋಗ ಬಾರದಂತೆ ತಡೆಗಟ್ಟ ಬಹುದು. ಎಷ್ಟೇ ಆದರೂ ಸಹ, Prevention is better than cure ಎಂಬ ಗಾದೆಯಂತೆ ಸಾಧ್ಯವಾದಷ್ಟರ ಮಟ್ಟಿಗೆ ಕ್ಯಾನ್ಸರ್ ಬಾರದಂತೆ ತಡೆಗಟ್ಟುವುದರಲ್ಲಿಯೇ ನಮ್ಮ ಜಾಣತನವು ಅಡಗಿದೆ. ಧೂಮಪಾನ, ಮದ್ಯಪಾನಗಳಂತಹ ದುಶ್ಚಟಗಳೊoದಿಗೆ, ನಮ್ಮ ಆಹಾರಕ್ರಮವೂ ಕೂಡ ಅನೇಕ ಬಾರಿ ಕ್ಯಾನ್ಸರ್‌ಗೆ ಕಾರಣವಾಗ ಬಹುದು. ಆದ್ದರಿಂದ ಕ್ಯಾನ್ಸರ್ ಅನ್ನು ದೂರವಿರಿಸಲು ನೆರವಾಗುವ ಆಹಾರಕ್ರಮವು ಯಾವುದೆಂದು ತಿಳಿಯಬಯಸುವಿರಾ? ಹಾಗಿದ್ದರೆ ಇದನ್ನು ಓದಿರಿ...

ತರಕಾರಿ ಮತ್ತು ಹಣ್ಣನ್ನು ಸೇವಿಸಿರಿ

ತರಕಾರಿ ಮತ್ತು ಹಣ್ಣನ್ನು ಸೇವಿಸಿರಿ

ತಾಜಾ ತರಕಾರಿ ಮತ್ತು ಹಣ್ಣುಗಳನ್ನು ನಿಮ್ಮ ದಿನನಿತ್ಯದ ಆಹಾರದ ಕ್ರಮದಲ್ಲಿ ಸೇರಿಸಿಕೊಳ್ಳುವುದರ ಮೂಲಕ ನಿಮ್ಮ ಶರೀರಕ್ಕೆ ಅವಶ್ಯಕವಾಗಿರುವ ಪೋಷಕಾಂಶಗಳು ಮತ್ತು ವಿಟಮಿನ್ ಗಳನ್ನು ಒದಗಿಸಬಹುದು. ಈ ಪೋಷಕಾಂಶಗಳು ಮತ್ತು ವಿಟಮಿನ್‌ಗಳು , ನಿಮ್ಮ ರೋಗನಿರೋಧಕ ಮಟ್ಟವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಸೋಂಕುಗಳು ಮತ್ತು ಕ್ಯಾನ್ಸರ್ ನ ವಿರುದ್ಧ ಕಾದಾಡಲೂ ಕೂಡ ಸಹಕಾರಿಯಾಗಿವೆ. ಅಲ್ಲದೇ, ಇವು ಜಂಕ್ ಮತ್ತು ಕೊಬ್ಬುಯುಕ್ತ ಆಹಾರಗಳ ಬಗೆಗಿನ ನಿಮಗಿರುವ ಹಸಿವನ್ನು ತನ್ನಿಂತಾನಾಗಿಯೇ ಕಡಿಮೆ ಮಾಡುತ್ತವೆ. ಕ್ಯಾಬೇಜು, brococoli, ಹೂಕೋಸು (cauiflower), ಪಾಲಾಕ್ ಸೊಪ್ಪು, ಸೇಬುಗಳು ಇತ್ಯಾದಿ ಗಳನ್ನು ದಿನನಿತ್ಯ ಸೇವಿಸುವುದರಿಂದ ಇದು ಸಾಬೀತಾಗುತ್ತದೆ.

ನಾರುಯುಕ್ತ ಆಹಾರಪದ್ಧತಿ

ನಾರುಯುಕ್ತ ಆಹಾರಪದ್ಧತಿ

ರೋಗಗಳ ವಿರುದ್ಧ ನಿಮ್ಮ ಶರೀರವನ್ನು ಗುರಾಣಿಯoತೆ ಹುರಿಯಾಗಿಸಲು, ನಿಮ್ಮ ಅಹಾರಪದ್ಧತಿಯಲ್ಲಿ ನಾರುಯುಕ್ತ ಆಹಾರಪದಾರ್ಥಗಳನ್ನು ಸೇರಿಸಿರಿ. ಈ ಕ್ರಮವನ್ನು ಕೈಗೊಳ್ಳಲು ಇರುವ ಸರಳ ಮಾರ್ಗವೆಂದರೆ, ನಿಮ್ಮ ಬೆಳಗಿನ ಉಪಹಾರದಲ್ಲಿ ಬಿಳಿಯ ಬ್ರೆಡ್ಡಿಗೆ ಬದಲಾಗಿ ಕಂದು ಬಣ್ಣದ ಬ್ರೆಡ್ಡನ್ನು ಬಳಸುವುದು, ಕಂದು ಬಣ್ಣದ ಅಕ್ಕಿ(ಕುಚ್ಚಲಕ್ಕಿ), ಕಾಳುಗಳನ್ನು ಬಳಸುವುದು ಇತ್ಯಾದಿ.

ಎಲೆಕೋಸು

ಎಲೆಕೋಸು

ವಿಟಮಿನ್ ಮತ್ತು ಖನಿಜಾಂಶಗಳನ್ನು ಯಥೇಚ್ಛವಾಗಿ ಒಳಗೊಂಡಿರುವ ಎಲೆಕೋಸಿನಲ್ಲಿ ಪೊಟಾಶಿಯಂ ಮತ್ತು ಫೋಲೆಟ್‍ಗಳಂತ ಖನಿಜಾಂಶಗಳು ಅಧಿಕವಾಗಿ ಇರುತ್ತವೆ. ಕ್ಯಾನ್ಸರನ್ನು ನಿಯಂತ್ರಿಸುವಲ್ಲಿ ಎಲೆಕೋಸುಗಳು ಮುಂಚೂಣಿಯಲ್ಲಿ ನಿಲ್ಲುವ ತರಕಾರಿಯಾಗಿದೆ. ಇದರಲ್ಲಿರುವ ಸಿನಿಗ್ರಿನ್, ಸಲ್ಫೋರಫೇನ್ ಮತ್ತು ಲುಪಿಯೊಲ್‍ಗಳು ನಮ್ಮ ದೇಹದಲ್ಲಿ ಟ್ಯೂಮರ್ ಬೆಳವಣಿಗೆಯನ್ನು ನಿಯಂತ್ರಿಸುವ ಎನ್‍ಜೈಮ್‍ಗಳನ್ನು ಉದ್ಧೀಪನಗೊಳಿಸುತ್ತದೆ.

ಬೀನ್ಸ್

ಬೀನ್ಸ್

ಬೀನ್ಸ್‌ಗಳಲ್ಲಿ ವಿಟಮಿನ್ ಬಿಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಕ್ಯಾನ್ಸರ್ ನಿಯಂತ್ರಿಸಲು ಗಣನೀಯವಾದ ಕೊಡುಗೆಯನ್ನು ನೀಡುತ್ತದೆ. ಇವುಗಳು ಕಾರ್ಸಿನೊಜೆನ್‍ಗಳನ್ನು ನಿವಾರಿಸುವ ಲುಲುಟೇನ್ ಮತ್ತು ವೈಯೊಲಕ್ಸಂಥಿನ್ ಮತ್ತು ಬೀಟಾ-ಕೆರೊಟಿನ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಈರುಳ್ಳಿ

ಈರುಳ್ಳಿ

ಈರುಳ್ಳಿಗಳು ಕ್ಯಾನ್ಸರನ್ನು ನಿಯಂತ್ರಿಸುವ ಅಧ್ಬುತವಾದ ತರಕಾರಿಗಳಾಗಿವೆ. ಇವುಗಳಲ್ಲಿ ಆಂಟಿ ಆಕ್ಸಿಡೆಂಟ್‍ಗಳು ಅತ್ಯಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ನಮ್ಮ ದೇಹದಲ್ಲಿರುವ ಫ್ರೀ ರ‍್ಯಾಡಿಕಲ್‌ಗಳನ್ನು ನಿವಾರಿಸುತ್ತವೆ. ಇವುಗಳಲ್ಲಿ ಫೈಟೊಕೆಮಿಕಲ್‍ಗಳು ಕ್ಯಾನ್ಸರನ್ನು ನಿವಾರಿಸುವ ಅಂಶಗಳು ಗಣನೀಯವಾಗಿ ಹೆಚ್ಚಿರುತ್ತವೆ. ಗಂಡಸರ ಜನನಾಂಗದಲ್ಲಿ ಕಾಣಿಸಿಕೊಳ್ಳುವ ಪ್ರೊಸ್ಟೇಟ್ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಯಲು ಈರುಳ್ಳಿಗಳು ಸಹಾಯ ಮಾಡುತ್ತವೆ.

ಹಸಿರು ಬಟಾಣಿ

ಹಸಿರು ಬಟಾಣಿ

ಹಸಿರು ಬಟಾಣಿಗಳು ಕ್ಯಾನ್ಸರನ್ನು ನಿಯಂತ್ರಿಸಲು ಇರುವ ಅತ್ಯಂತ ಶಕ್ತಿಶಾಲಿ ತರಕಾರಿಗಳಾಗಿವೆ. ಅದರಲ್ಲೂ ಮುಖ್ಯವಾಗಿ ಜಠರದ ಕ್ಯಾನ್ಸರ್ ನಿವಾರಿಸಲು ಇವು ಸಹಾಯ ಮಾಡುತ್ತವೆ. ಇದರಲ್ಲಿ ಪೊಟಾಶಿಯಂ, ಕಬ್ಬಿಣಾಂಶ ಮತ್ತು ವಿಟಮಿನ್‍ಗಳು ಯಥೇಚ್ಛವಾಗಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಲು ಇವು ನೆರವು ನೀಡುತ್ತವೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು ಸಹ ಪ್ರಪಂಚದಲ್ಲಿರುವ ಅತ್ಯಂತ ಆರೋಗ್ಯಕಾರಿ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಅದರಲ್ಲೂ ಇದು ಕ್ಯಾನ್ಸರನ್ನು ನಿಯಂತ್ರಿಸುವ ಆಹಾರ ಪದಾರ್ಥವಾಗಿರುವುದು ಸಹ ಇದರ ಹೆಚ್ಚುಗಾರಿಕೆ. ಸ್ಪೈನಚ್‍ನಲ್ಲಿ ಪೊಟಾಶಿಯಂ, ಸತು, ವಿಟಮಿನ್ ಕೆ, ಇ, ಮತ್ತು ಎ ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಕ್ಯಾನ್ಸರನ್ನು ನಿಯಂತ್ರಿಸಲು ಸ್ವಾಭಾವಿಕವಾಗಿ ನೆರವಾಗುತ್ತವೆ.

ಬೀಟ್‍ರೂಟ್‍ಗಳು

ಬೀಟ್‍ರೂಟ್‍ಗಳು

ಬೀಟ್‍ರೂಟ್‍ಗಳು ರಕ್ತ ಪರಿಚಲನೆಯನ್ನು ಮತ್ತು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ. ಇವುಗಳು ರಕ್ತದೊತ್ತಡವನ್ನು ನಿವಾರಿಸುವ ಅಂಶಗಳನ್ನು ಸಹ ಹೊಂದಿರುತ್ತವೆ. ವಿಶೇಷವಾಗಿ ಸಕ್ಕರೆಯ ಪ್ರಮಾಣವನ್ನು ಹದ್ದು ಬಸ್ತಿನಲ್ಲಿಡಲು ಇದು ಖ್ಯಾತಿಯನ್ನು ಪಡೆದಿದೆ. ಜೊತೆಗೆ ಕ್ಯಾನ್ಸರನ್ನು ಸಹ ನಿಯಂತ್ರಿಸುತ್ತದೆ.

ಬ್ರೊಕ್ಕೊಲಿ

ಬ್ರೊಕ್ಕೊಲಿ

ಬ್ರೊಕ್ಕೊಲಿಯು ಪ್ರಪಂಚದಲ್ಲಿರುವ ಅತ್ಯಂತ ಆರೋಗ್ಯಕಾರಿ ಹಣ್ಣುಗಳಲ್ಲಿ ಒಂದಾಗಿದೆ. ಇದರ ಆಂಟಿ-ಕ್ಯಾನ್ಸರ್ ಅಂಶಗಳು ಸಹ ಇದಕ್ಕೆ ಒಳ್ಳೆಯ ಹೆಸರನ್ನು ನೀಡಿದೆ. ಇದರಲ್ಲಿ ಮೂಲತಃ ಆಂಟಿ-ಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ದೇಹದಲ್ಲಿ ಕ್ಯಾನ್ಸರ್ ರೂಪುಗೊಳ್ಳುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ.

ಹಲಸಿನ ಹಣ್ಣು

ಹಲಸಿನ ಹಣ್ಣು

ಹಲಸಿನಲ್ಲಿರುವ ಕೆಲವು ಪೋಷಕಾಂಶಗಳು ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಿ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ದೇಹದ ರೋಗ ನಿರೋಧಕ ವ್ಯವಸ್ಥೆಯೇ ಹೊರದೂಡುವಂತೆ ಮಾಡುತ್ತದೆ. ಅಲ್ಲದೇ ಕರುಳಿನ ಒಳಗಣ ಹುಣ್ಣು ಮತ್ತು ಹೊಟ್ಟೆಯ ಹುಣ್ಣುಗಳನ್ನು ನಿವಾರಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ತನ್ಮೂಲಕ ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ.

 ನೈಸರ್ಗಿಕ ಜ್ಯೂಸ್

ನೈಸರ್ಗಿಕ ಜ್ಯೂಸ್

*ಕ್ಯಾರೆಟ್ - ಅರ್ಧ ಕೇಜಿ

*ಬೀಟ್ ರೂಟ್ - ಅರ್ಧ ಕೇಜಿ

*ಒಣ ಅಪ್ರಿಕಾಟ್ ಹಣ್ಣುಗಳು(Dried apricots)-ಇಪ್ಪತ್ತು ಗ್ರಾಂ

*ಒಣ ದ್ರಾಕ್ಷಿ - ಇಪ್ಪತ್ತು ಗ್ರಾಂ

*ನೀರು ಎರಡು ಕಪ್

*ಜೇನುತುಪ್ಪ: ಎರಡು ದೊಡ್ಡ ಚಮಚ

ತಯಾರಿಸುವ ವಿಧಾನ

1) ಕ್ಯಾರೆಟ್ ಮತ್ತು ಬೀಟ್ ರೂಟ್ ಗಳನ್ನು ಚಿಕ್ಕದಾಗಿ ತುಂಡರಿಸಿಕೊಳ್ಳಿ

2) ಒಂದು ಪಾತ್ರೆಯಲ್ಲಿ ಈ ಎರಡೂ ತರಕಾರಿಗಳು ಮುಳುಗುವಷ್ಟು ನೀರು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ.

3) ಹತ್ತು ನಿಮಿಷಗಳ ಕಾಲ ಕುದಿದ ನಂತರ ಆಪ್ರಿಕಾಟ್ ಮತ್ತು ದ್ರಾಕ್ಷಿಯನ್ನು ಹಾಕಿ ಚಿಕ್ಕ ಉರಿಯಲ್ಲಿ ಇನ್ನೂ ಹತ್ತು ನಿಮಿಷ ಬೇಯಿಸಿ

4) ಬಳಿಕ ಒಲೆ ನಂದಿಸಿ ಈ ದ್ರವ ತಣಿಯಲು ಬಿಡಿ.

English summary

Everyday Foods That Help Prevent Cancer

Cancer is easily the deadliest and most dreaded disease in the world today. As a matter of fact, with changing lifestyles and increase in pollution levels, the number of cancer cases are only going up. This article takes a look at foods that prevent cancer, particularly at vegetables that prevent cancer.
X
Desktop Bottom Promotion