For Quick Alerts
ALLOW NOTIFICATIONS  
For Daily Alerts

ಒಣಕೆಮ್ಮು, ಗಂಟಲ ಕೆರೆತ, ಕಫ ನಿವಾರಣೆಗೆ: ಏಲಕ್ಕಿ ಪರ್ಫೆಕ್ಟ್ ಮನೆಮದ್ದು

|

ಒಣಕೆಮ್ಮು, ಗಂಟಲ ಕೆರೆತ, ಕಫ ಮೊದಲಾದವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿರುವ ಸಮಸ್ಯೆಯಾಗಿದೆ. ಈ ತೊಂದರೆಯನ್ನು ಕೇವಲವಾಗಿ ಪರಿಗಣಿಸುವುದರಿಂದಲೇ ಉಲ್ಬಣಗೊಳ್ಳುವವರೆಗೂ ಕಾದು ಬಳಿಕ ಇದರ ಕಾಟ ತಾಳಲಾರದೇ ಔಷಧಿಗಳ ಮೊರೆ ಹೋಗುತ್ತಾರೆ. ಗಂಟಲ ಸಮಸ್ಯೆ ಎದುರಾದ ಬಳಿಕ ಸತತ ಕೆಮ್ಮು ಒಂದು ಕಡೆಯಿಂದ ಕಾಡಿದರೆ ಊಟ ಮಾಡಲಾಗದೇ, ತುತ್ತನ್ನು ನುಂಗಲಾಗದೇ ಆಗುವ ಪರದಾಟ ಇನ್ನೊಂದೆಡೆ. ಹೆಚ್ಚಿನ ಸಂದರ್ಭಗಳಲ್ಲಿ ಗಂಟಲಲ್ಲಿ ನೋವು ಹಾಗೂ ಹಠಮಾರಿ ಕಫ ಕಿರಿಕಿರಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಈ ತೊಂದರೆಗಳ ನಿವಾರಣೆಗಾಗಿ ಭಾರತೀಯರು ಹಲವಾರು ವರ್ಷಗಳಿಂದ ಅಡುಗೆಮನೆಯ ಸಾಮಾಗ್ರಿಗಳನ್ನೇ ಬಳಸಿ ಪರಿಹಾರ ಕಂಡುಕೊಳ್ಳುತ್ತಿದ್ದರು. ಇದರಲ್ಲಿ ಪ್ರಮುಖವಾದ ಹಾಗೂ ಹೆಚ್ಚು ಕಾಲ ಫಲವನ್ನು ನೀಡುವ ಸಾಮಾಗ್ರಿ ಎಂದರೆ ಏಲಕ್ಕಿಯಾಗಿದ್ದು ಕೆಮ್ಮು, ಗಂಟಲಿನ ಕೆರೆತ ಹಾಗೂ ಕಫವನ್ನು ನಿವಾರಿಸಲು ನೆರವಾಗುತ್ತದೆ. ಬನ್ನಿ, ಈ ತೊಂದರೆಗಳನ್ನು ನಿವಾರಿಸಲು ಏಲಕ್ಕಿಯನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ:

ಕೆಮ್ಮಿಗೆ ಪರಿಹಾರಕ್ಕೆ ಮನೆಮದ್ದು

ಕೆಮ್ಮಿಗೆ ಪರಿಹಾರಕ್ಕೆ ಮನೆಮದ್ದು

ಚಿಟಿಕೆಯಷ್ಟು ಏಲಕ್ಕಿ ಪುಡಿಯನ್ನು ಚಿಟಿಕೆಯಷ್ಟು ಕಲ್ಲುಪ್ಪು, ಒಂದು ಟೀ ಚಮಚ ತುಪ್ಪ, ಅರ್ಧ ಟೀ ಚಮಚ ತಜಾ ಜೇನು ಬೆರೆಸಿ ಸೇವಿಸಿದರೆ ತಕ್ಷಣವೇ ಕೆಮ್ಮಿನಿಂದ ಪರಿಹಾರ ದೊರಕುತ್ತದೆ.

ಕೆಮ್ಮು ಮತ್ತು ಕಟ್ಟಿಕೊಂಡಿರುವ ಕಫ ನಿವಾರಣೆಗೆ ಮನೆಮದ್ದು

ಕೆಮ್ಮು ಮತ್ತು ಕಟ್ಟಿಕೊಂಡಿರುವ ಕಫ ನಿವಾರಣೆಗೆ ಮನೆಮದ್ದು

ಒಂದು ಏಲಕ್ಕಿ ಮತ್ತು ಕಲ್ಲುಸಕ್ಕರೆಯನ್ನು 3:1 ರ ಅನುಪಾತದಲ್ಲಿ ಬೆರೆಸಿ ಕುಟ್ಟಿ ಪುಡಿಮಾಡಿಕೊಳ್ಳಿ. ಈ ಮಿಶ್ರಣದಲ್ಲಿ ಒಂದು ಟೀ ಚಮಚದಷ್ಟನ್ನು ಕೊಂಚ ನೀರಿನಲ್ಲಿ ಬೆರೆಸಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸುತ್ತಾ ಬಂದರೆ ಉತ್ತಮ ಪರಿಹಾರ ಕಂಡುಬರುತ್ತದೆ.

Most Read:ಬ್ಯೂಟಿ ಟಿಪ್ಸ್: ಒಂದೆರಡು ನೆಲ್ಲಿಕಾಯಿ ಬಳಸಿ-ಮುಖದ ಸೌಂದರ್ಯ ವೃದ್ಧಿಸಿ!

ಶೀತಕ್ಕೆ ಮನೆಮದ್ದು

ಶೀತಕ್ಕೆ ಮನೆಮದ್ದು

ಒಂದು ವೇಳೆ ನಿಮಗೆ ಶೀತ ಆವರಿಸುವಂತೆ ಅನ್ನಿಸುತ್ತಿದ್ದರೆ ತಕ್ಷಣವೇ ಒಂದು ಕಪ್ ಬಿಸಿನೀರಿನಲ್ಲಿ ಏಲಕ್ಕಿ ಕುದಿಸಿ ಟೀ ತಯಾರಿಸಿ ಕುಡಿಯಿರಿ. ಇದರ ಗುಣಪಡಿಸುವ ಗುಣ ಶೀತಕ್ಕೆ ಕಾರಣವಾದ ಕಫದ ಪದರವನ್ನು ಸಡಿಲಿಸಿ ನಿವಾರಿಸುವ ಮೂಲಕ ಕಫ ಹಾಗೂ ಶೀತವನ್ನು ನಿವಾರಿಸುತ್ತದೆ.

ಡಿಫ್ರೆಷನ್ ಕಡಿಮೆ ಮಾಡುತ್ತೆ

ಡಿಫ್ರೆಷನ್ ಕಡಿಮೆ ಮಾಡುತ್ತೆ

ಈಗಿನ ಕಾಲದಲ್ಲಿ ಒತ್ತಡ ಅನ್ನೋದು ಯಾರಿಗೆ ಇರಲ್ಲ ಹೇಳಿ. ಅದ್ರಿಂದ ಪ್ರತಿ ಮನೆಯಲ್ಲೂ ಒಬ್ರಲ್ಲ ಒಬ್ಬ ಸದಸ್ಯ ಸಂಕುಚಿತಗೊಳ್ತಾರೆ. ಆದ್ರೆ ಹಾಗೆ ಆಗಬಾರದು, ಡಿಫ್ರೆಷನ್ ಸಮಸ್ಯೆ ದೂರವಾಗ್ಬೇಕು ಅಂದ್ರೆ ಮನೆಯಲ್ಲಿ ಪರಿಮಳಯುಕ್ತವಾದ ಒಂದು ಏಲಕ್ಕಿ ಮಾಲೆಯನ್ನು ಇಟ್ಟಿರಿ. ಅಡುಗೆ ಮನೆಯ ಸಾಂಬಾರ ಪದಾರ್ಥದ ಡಬ್ಬದಲ್ಲಿ 100 ಗ್ರಾಂನಷ್ಟೋ, 200 ಗ್ರಾಂನಷ್ಟೋ ಏಲಕ್ಕಿಯನ್ನು ಮುಚ್ಚುಳ ಹಾಕಿ ಡಬ್ಬದಲ್ಲಿ ಇಟ್ಟರೆ ಸಾಲದು. ಅದ್ರ ಘಮಘಮಿಸುವ ಸ್ವಾದ ಮನೆಯ ಮೂಲೆಮೂಲೆಯನ್ನು ಪಸರಿಸಿದ್ರೆ ಮನೆಯ ಸದಸ್ಯರಲ್ಲಿ ಡಿಫ್ರೆಷನ್ ಸಮಸ್ಯೆ ಬಾಧಿಸೋದಿಲ್ಲ.

ಹುಳಹುಪ್ಪಟೆಗಳ ನಿಯಂತ್ರಣ

ಹುಳಹುಪ್ಪಟೆಗಳ ನಿಯಂತ್ರಣ

ಸಕ್ಕರೆ ಡಬ್ಬಕ್ಕೆ ಆಗಾಗ ಇರುವೆ ಬರುತ್ತೆ ಅಂದ್ರೆ ಅದ್ರೊಳಗೆ ಒಂದು ಏಲಕ್ಕಿ ಹಾಕಿಡೋದು ಎಲ್ಲರಿಗೂ ಗೊತ್ತು. ಆಗ ಇರುವೆ ಆ ಕಡೆ ತಲೆಯೂ ಹಾಕಲ್ಲ. ಕೇವಲ ಒಂದು ಡಬ್ಬದಲ್ಲಿ ಕೆಲಸ ಮಾಡುವ ಏಲಕ್ಕಿಯನ್ನು ಇಡೀ ಮನೆಯ ವಾತಾವರಣವನ್ನು ಶುಚಿಯಾಗಿಡಲು ಬಳಸಿಕೊಳ್ಳಬಹುದು. ಯಾರ ಮನೆಯಲ್ಲಿ ಸೊಳ್ಳೆ, ನೊಣ, ಇತ್ಯಾದಿ ಕೀಟಗಳ ಕಾಟವಿರುತ್ತೋ ಅಂತವರು ಒಂದು ಏಲಕ್ಕಿ ಮಾಲೆಯನ್ನು ಮನೆಯಲ್ಲಿ ಅಲಂಕಾರಿಕ ವಸ್ತುವಾಗಿ ಇಟ್ಟು ನೋಡಿ. ಖಂಡಿತ ನಿಮ್ಮ ಮನೆಯಲ್ಲಿ ಹುಳಹುಪ್ಪಟೆಗಳ ಕಾಟ ನಿಯಂತ್ರಣಕ್ಕೆ ಬರುತ್ತೆ.

English summary

Elaichi For Dry Cough, Sore Throat & Congestion

Congestion, sore throat or dry cough are just a few complaints amongst the many common throat-related issues these days. But no matter how frequently these illnesses occur, they always make it difficult for you to eat and swallow food, your taste senses go for a toss and you are left with constant discomfort and, in some cases, pain too. Certain ingredients commonly available in Indian kitchens are known to bring long lasting relief. One of these time-tested ingredients is elaichi or cardamom that has been known to help reduce pain and irritability in the throat.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more