For Quick Alerts
ALLOW NOTIFICATIONS  
For Daily Alerts

ಡೆಂಗ್ಯೂ ಜ್ವರದ ಹೆಡೆಮುರಿ ಕಟ್ಟಿ ಹಾಕುವ ಪವರ್ ಫುಲ್ ಜ್ಯೂಸ್‌ಗಳು

|

ನಮಗೆಲ್ಲಾ ಗೊತ್ತಿರುವ ಹಾಗೆ ವಿವಿಧ ರೀತಿಯ ಜ್ವರಗಳು, ಕೆಲವು ರೋಗಗಳು ಹರಡುವುದು ಸೊಳ್ಳೆಗಳಿಂದಾಗಿ. ಸೊಳ್ಳೆಗಳು ಸಂತಾನೋತ್ಪತ್ತಿಯನ್ನು ಹೆಚ್ಚು ಮಾಡಿ ರೋಗ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಮಯದಲ್ಲಿ ರೋಗವನ್ನು ತಡೆಗಟ್ಟುವುದು ಪ್ರಮುಖವಾಗಿರುತ್ತದೆ. ಆದರೆ ರೋಗ ತಡೆಗಟ್ಟಲು ಮುಖ್ಯವಾಗಿ ಸೊಳ್ಳೆಗಳನ್ನು ನಾಶ ಮಾಡಬೇಕು. ಸೊಳ್ಳೆಗಳನ್ನು ಎಷ್ಟೇ ನಾಶ ಮಾಡಿದರೂ ಅವುಗಳು ತಮ್ಮ ಸಂತಾನ ಮತ್ತೆ ಬೆಳೆಸುತ್ತದೆ.

ಉಷ್ಣವಲಯದ ರಾಷ್ಟ್ರವಾಗಿರುವ ಭಾರತದಲ್ಲಿ ಇದು ಸಾಮಾನ್ಯ. ಯಾಕೆಂದರೆ ಇಲ್ಲಿ ಚಳಿ ಹಾಗೂ ಬೇಸಗೆಯು ಸಮಾನವಾಗಿರುವ ಕಾರಣದಿಂದ ಸೊಳ್ಳೆಗಳಿಗೆ ಸಂತಾನೋತ್ಪತ್ತಿ ಮಾಡಲು ಇದು ಸರಿಯಾದ ಹವಾಮಾನ. ವಿಜ್ಞಾನಿಗಳು ಸೊಳ್ಳೆಗಳನ್ನು ನಾಶ ಮಾಡಲು ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ ಇದುವರೆಗೆ ಸೊಳ್ಳೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಮದ್ದು ಕಂಡು ಹುಡುಕಲು ಸಾಧ್ಯವಾಗಿಲ್ಲ. ಸೊಳ್ಳೆಯಿಂದ ಬರುವಂತಹ ಪ್ರಮುಖ ಜ್ವರಗಳಲ್ಲಿ ಡೆಂಗ್ಯೂ ಕೂಡ ಒಂದು.

ಕರ್ನಾಟಕದಲ್ಲಿ ಡೆಂಗ್ಯೂ ಜ್ವರ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ನಮ್ಮ ಸುತ್ತಮುತ್ತಲು ಇರುವಂತಹ ಕೊಳಚೆ ನೀರು. ಸೊಳ್ಳೆಗಳು ನಿಂತ ಕೊಳಚೆ ನೀರಿನಲ್ಲಿ ಮೊಟ್ಟೆಯನ್ನಿಟ್ಟು ಮರಿ ಮಾಡುವ ಕಾರಣದಿಂದಾಗಿ ನಮ್ಮ ಮನೆಯ ಸುತ್ತಮುತ್ತಲು ಹಾಗೂ ಊರನ್ನು ಸ್ವಚ್ಛವಾಗಿಡಬೇಕು. ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.

ಡೆಂಗ್ಯೂ ಜ್ವರದ ಪ್ರಮುಖ ಲಕ್ಷಣವೆಂದರೆ ಗಂಟು ನೋವು ಮತ್ತು ತಲೆನೋವು. ಇದು ಯಾವುದೇ ವಯಸ್ಸಿನವರಲ್ಲೂ ಕಾಣಿಸಿಕೊಳ್ಳಬಹುದು. ಡೆಂಗ್ಯೂಗೆ ಪೂರ್ಣ ಪ್ರಮಾಣದ ಔಷಧಿ ಇದುವರೆಗೆ ಪತ್ತೆಯಾಗಿಲ್ಲ. ವೈದ್ಯರು ಜ್ವರ ಬಂದವರಿಗೆ ಸಂಪೂರ್ಣವಾಗಿ ವಿಶ್ರಾಂತಿ ಮಾಡಲು ಸೂಚಿಸುವರು ಮತ್ತು ದ್ರವಾಹಾರ ಹೆಚ್ಚು ಸೇವಿಸಲು ಹೇಳುವರು. ಡೆಂಗ್ಯೂ ಇದ್ದವರಲ್ಲಿ ನಿರ್ಜಲೀಕರಣ ಕೂಡ ಕಾಣಿಸಿಕೊಳ್ಳುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು. ನಿರ್ಜಲೀಕರಣ ಮಾತ್ರವಲ್ಲದೆ ರಕ್ತಕಣಗಳು ಕೂಡ ಕಡಿಮೆಯಾಗುವುದು. ಇದಕ್ಕಾಗಿ ಈ ಲೇಖನದಲ್ಲಿ ರಕ್ತಕಣಗಳನ್ನು ಹೆಚ್ಚು ಮಾಡಿ ನಿರ್ಜಲೀಕರಣ ತಡೆಯುವ ಕೆಲವು ಜ್ಯೂಸ್ ಗಳ ಬಗ್ಗೆ ತಿಳಿಸಿದ್ದೇವೆ. ಇದನ್ನು ಓದಿಕೊಂಡು ಡೆಂಗ್ಯೂ ಬಂದವರು ತಪ್ಪದೆ ಕುಡಿಯಿರಿ...

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವು ಸಮೃದ್ಧವಾಗಿದೆ. ಇದು ದೇಹದಲ್ಲಿ ರಕ್ತಕಣಗಳನ್ನು ಹೆಚ್ಚು ಮಾಡುವುದು. ಇದು ದೇಹದಲ್ಲಿ ದುಗ್ದಕೋಶಗಳನ್ನು ಅಭಿವೃದ್ಧಿಪಡಿಸುವುದು. ಇದು ಸೋಂಕಿನ ವಿರುದ್ಧ ಹೋರಾಡುವುದು ಮತ್ತು ಪ್ರತಿರೋಧಕ ಶಕ್ತಿ ಬಲಪಡಿಸುವುದು.

ಅಲೋವೆರಾ ಜ್ಯೂಸ್

ಅಲೋವೆರಾ ಜ್ಯೂಸ್

ಅಲೋವೆರಾ ಜ್ಯೂಸ್ ನಲ್ಲಿ ಅಮಿನೋ ಆಮ್ಲವು ಅತ್ಯಧಿಕ ಮಟ್ಟದಲ್ಲಿದೆ. ಅಮಿನೋ ಆಮ್ಲವು ಕಡಿಮೆಯಾದರೆ ಆಗ ರಕ್ತಕಣ ಕೂಡ ಕುಗ್ಗುವುದು. ಅಲೋವೆರಾವು ಜ್ವರ ತರುವ ವೈರಸನ್ನು ಪರಿಣಾಮಕಾರಿಯಾಗಿ ಕೊಂದು ವೇಗವಾಗಿ ಚೇತರಿಸಿಕೊಳ್ಳಲು ನೆರವಾಗುವುದು. ಅಲೋವೆರಾ ಜ್ಯೂಸ್ ಎಲ್ಲಾ ಮಾರುಕಟ್ಟೆಗಳಲ್ಲಿ ಲಭ್ಯವಿದೆ.

ಪಪ್ಪಾಯಿ ಎಲೆ ಜ್ಯೂಸ್

ಪಪ್ಪಾಯಿ ಎಲೆ ಜ್ಯೂಸ್

ಪಪ್ಪಾಯಿಯು ನೈಸರ್ಗಿಕದತ್ತವಾದ ವಿಟಮಿನ್ ಹಾಗೂ ಖನಿಜಾಂಶಗಳಿಂದ ಸಮೃದ್ಧವಾಗಿದೆ. ಇದು ದೇಹ ಬೇಗನೆ ಚೇತರಿಸಲು ನೆರವಾಗುವುದು. ಇದು ರೋಗನಿರೋಧಕ ಶಕ್ತಿ ವೃದ್ಧಿಸಿ, ರಕ್ತಕಣ ಹೆಚ್ಚು ಮಾಡುವುದು. ಪಪ್ಪಾಯಿಯ ಎಲೆಗಳಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ. ಇದನ್ನು ಪ್ರತಿನಿತ್ಯ 4-5 ಚಮಚ ಸೇವಿಸಿ.

ಪೇರಳೆ ಅಥವಾ ಸೀಬೆ ಹಣ್ಣಿನ ಜ್ಯೂಸ್

ಪೇರಳೆ ಅಥವಾ ಸೀಬೆ ಹಣ್ಣಿನ ಜ್ಯೂಸ್

ವಿಟಮಿನ್ ಗಳಿಂದ ಸಮೃದ್ಧವಾಗಿರುವಂತಹ ಪೇರಳೆ ಜ್ಯೂಸ್ ದೇಹವು ಬೇಗನೆ ಚೇತರಿಸಿಕೊಳ್ಳಲು ನೆರವಾಗುವುದು. ಇದರಲ್ಲಿ ಇರುವಂತಹ ವಿಟಮಿನ್ ಸಿ ಅಂಶವು ಪ್ರತಿರೋಧಕ ಶಕ್ತಿ ಹೆಚ್ಚು ಮಾಡಿ ಮತ್ತೆ ಸೋಂಕು ಹೆಚ್ಚದಂತೆ ಮಾಡುವುದು. ಇದು ನಿರ್ಜಲೀಕರಣ ತಡೆಯುವುದು. ಎರಡು ಪೇರಳೆಗಳನ್ನು ತುಂಡು ಮಾಡಿಕೊಂಡು ಸ್ವಲ್ಪ ನೀರಿನೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಸೋಸಿಕೊಂಡು ಕುಡಿಯಿರಿ. ಇದಕ್ಕೆ ಸಿಹಿ ಬೆರಸಬೇಡಿ.

ಕಹಿ ಬೇವಿನ ಜ್ಯೂಸ್

ಕಹಿ ಬೇವಿನ ಜ್ಯೂಸ್

ಕಹಿಬೇವು ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಗಿಡಮೂಲಿಕೆ. ಇದು ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚು ಮಾಡಿ ಸೋಂಕಿನ ವಿರುದ್ಧ ಹೋರಾಡುವುದು. ತಾಜಾ ಕಹಿಬೇವಿನ ಎಲೆಗಳ ಪೇಸ್ಟ್ ಮಾಡಿ. ಒಂದು ಲೋಟ ನೀರಿಗೆ ಒಂದು ಚಮಚ ಪೇಸ್ಟ್ ಹಾಕಿ ಮತ್ತು ದಿನದಲ್ಲಿ ಎರಡು ಸಲ ಕುಡಿಯಿರಿ.

ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಪಾರ ಪ್ರಮಾಣದಲ್ಲಿದೆ. ಇದು ದೇಹದಲ್ಲಿ ಪ್ರತಿಕಾಯಗಳ ಚಲನೆ ಹೆಚ್ಚಿಸಲು ನೆರವಾಗುವುದು ಮತ್ತು ಸೋಂಕಿನ ವಿರುದ್ಧ ಉತ್ತಮವಾಗಿ ಹೋರಾಡುವುದು. ಇದು ದೇಹಕ್ಕೆ ಪುನಶ್ಚೇತನ ನೀಡಿ ಜ್ವರದ ಲಕ್ಷಣಗಳಿಂದ ಆರಾಮ ನೀಡುವುದು. ನೆಲ್ಲಿಕಾಯಿ ಜ್ಯೂಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

ತುಳಸಿ ಜ್ಯೂಸ್

ತುಳಸಿ ಜ್ಯೂಸ್

ಭಾರತದಲ್ಲಿ ತುಂಬಾ ಪವಿತ್ರವೆಂದು ಪರಿಗಣಿಸಲಾಗಿರುವ ತುಳಸಿಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಇದು ಡೆಂಗ್ಯೂಗೆ ಕೂಡ ಪರಿಣಾಮಕಾರಿ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಿ, ದೇಹವು ಚೇತರಿಸಿಕೊಳ್ಳಲು ನೆರವಾಗುವುದು. ತಾಜಾ ತುಳಸಿ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಅದರ ಪೇಸ್ಟ್ ಮಾಡಿ. ಒಂದು ಭಾಗ ಪೇಸ್ಟ್ ಗೆ ನಾಲ್ಕು ಭಾಗ ನೀರು ಹಾಕಿ ಮತ್ತು ನಿಯಮಿತವಾಗಿ ಕುಡಿಯಿರಿ.

ಕ್ಯಾರೆಟ್, ಸೌತೆಕಾಯಿ ಮತ್ತು ಲಿಂಬೆ ಜ್ಯೂಸ್

ಕ್ಯಾರೆಟ್, ಸೌತೆಕಾಯಿ ಮತ್ತು ಲಿಂಬೆ ಜ್ಯೂಸ್

ಕ್ಯಾರೆಟ್ ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಮತ್ತು ಲಿಂಬೆಯಲ್ಲಿ ವಿಟಮಿನ್ ಸಿ ಇದೆ. ಸೌತೆಕಾಯಿಯಲ್ಲಿರುವ ನೈಸರ್ಗಿಕದತ್ತ ನೀರಿನಾಂಶವು ದೇಹದಲ್ಲಿ ದ್ರವ ತುಂಬುವುದು. ಇದು ರೋಗನಿರೋಧಕ ಹೆಚ್ಚಿಸಲು ತುಂಬಾ ರುಚಿಕರ ವಿಧಾನ ಮತ್ತು ಡೆಂಗ್ಯೂ ಉಂಟುಮಾಡುವ ವೈರಸ್ ನ ವಿರುದ್ಧ ಹೋರಾಡುವುದು. ಎಲ್ಲಾ ತರಕಾರಿಯನ್ನು ಅರ್ಧರ್ಧ ಕಪ್ ತೆಗೆದುಕೊಳ್ಳಿ ಮತ್ತು ಒಂದು ಕಪ್ ನೀರಿನೊಂದಿಗೆ ರುಬ್ಬಿಕೊಳ್ಳಿ. ಈ ಜ್ಯೂಸ್ ನ್ನು ದಿನದಲ್ಲಿ ಎರಡು ಸಲ ಸೇವಿಸಿ.

ಬಾರ್ಲಿ ಹುಲ್ಲಿನ ಜ್ಯೂಸ್

ಬಾರ್ಲಿ ಹುಲ್ಲಿನ ಜ್ಯೂಸ್

ನಿಯಮಿತವಾಗಿ ಬಾರ್ಲಿ ಹುಲ್ಲಿನ ಜ್ಯೂಸ್ ಸೇವನೆಯಿಂದ ದೇಹಕ್ಕೆ ಬೇಕಾಗುವ ಎಲ್ಲಾ ರೀತಿಯ ಪೋಷಕಾಂಶಗಳು ಲಭ್ಯವಾಗುವುದು ಮತ್ತು ಸೋಂಕಿನ ವಿರುದ್ಧ ಹೋರಾಡಲು ದೇಹವನ್ನು ಬಲಿಷ್ಠಗೊಳಿಸುವುದು. ಪ್ರತಿರೋಧಕ ಕೋಶಗಳ ಸಮತೋಲನ ಮಾಡುವುದು. ದೇಹವನ್ನು ನಿರ್ವಿಷಗೊಳಿಸಿ ವಿಷಕಾರಿ ಪದಾರ್ಥಗಳನ್ನು ದೇಹದಿಂದ ಹೊರಹಾಕುವುದು.

 ಕಿತ್ತಳೆ ಜ್ಯೂಸ್

ಕಿತ್ತಳೆ ಜ್ಯೂಸ್

ವಿಟಮಿನ್ ಸಿ ಇರುವಂತಹ ಯಾವುದೇ ಆಹಾರವಾದರೂ ಅದು ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಕಿತ್ತಳೆ ಜ್ಯೂಸ್ ನಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಇದು ಮೂತ್ರ ವಿಸರ್ಜನೆ ಹೆಚ್ಚು ಮಾಡಿ ದೇಹದಿಂದ ವಿಷ ಹೊರಹಾಕುವುದು.

ಕಿವಿ ಜ್ಯೂಸ್

ಕಿವಿ ಜ್ಯೂಸ್

ಕಿವಿ ಜ್ಯೂಸ್ ನಲ್ಲಿ ಕೂಡ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಇದು ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುವುದು. ಈ ಹಣ್ಣಿನಲ್ಲಿ ಇರುವಂತಹ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ದೇಹಕ್ಕೆ ರೋಗಗಳ ವಿರುದ್ಧ ಹೋರಾಡಲು ನೆರವಾಗುವುದು. ಕಿವಿ ಡೆಂಗ್ಯೂ ಜ್ವರಕ್ಕೆ ತುಂಬಾ ಒಳ್ಳೆಯದು ಎಂದು ಇತ್ತೀಚಿನ ವರದಿಗಳು ಕೂಡ ಹೇಳಿವೆ. ಸಿಪ್ಪೆ ತೆಗೆದ ಮತ್ತು ತುಂಡು ಮಾಡಿದ ಎರಡು ಕಿವಿ ಹಣ್ಣುಗಳನ್ನು ಮಿಕ್ಸಿಗೆ ಹಾಕಿ. ಅದಕ್ಕೆ ಒಂದು ಕಪ್ ನೀರು ಹಾಕಿ. ಇದನ್ನು ಪ್ರತಿನಿತ್ಯ ಸೇವಿಸಿದರೆ ರಕ್ತಕಣ ಹೆಚ್ಚಾಗುವುದು.

English summary

Effective Juices For Dengue Fever

Dengue is a tropical disease which is spread through mosquitoes which carry the dengue virus. Mosquitoes breed in places with stagnant water. The common symptoms of dengue include fever, joint pain and head ache. It can affect any age group. The vaccines against this disease are still in the testing stage and hence there are no proper medications available for this disease as of now.
Story first published: Monday, February 5, 2018, 20:07 [IST]
X
Desktop Bottom Promotion