For Quick Alerts
ALLOW NOTIFICATIONS  
For Daily Alerts

ಸರಳ ಮನೆಮದ್ದುಗಳು: ರಾತ್ರಿ ಬೆಳಗಾಗುವುದರೊಳಗೆ 'ಒಣ ಕೆಮ್ಮು' ಮಾಯ

By Deepu
|

ಚಳಿಗಾಲದಲ್ಲಿ ಶೀತ ಹೆಚ್ಚಾದಾಗ ಅದರೊಂದಿಗೆ ಕೆಮ್ಮು ಕೂಡ ಕಾಣಿಸಿಕೊಳ್ಳುವುದು. ಇದು ಸಾಮಾನ್ಯ ಎನ್ನುವ ಸಮಸ್ಯೆ. ಅದರಲ್ಲೂ ಒಣಕೆಮ್ಮಿನ ಸಮಸ್ಯೆಯು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರನ್ನು ಕಾಡುತ್ತಿರುತ್ತದೆ. ಒಣ ಕೆಮ್ಮಿನ ವೇಳೆ ಕಫ ನಿರ್ಮಾಣವಾಗುವುದಿಲ್ಲ. ಒಣ ಕೆಮ್ಮಿಗೆ ಕೆಲವೊಂದು ವೈರಸ್ ಅಥವಾ ಸೋಂಕು ಪ್ರಮುಖ ಕಾರಣವಾಗಿದೆ. ವಾಯುನಾಳಗಳನ್ನು ತೆರವುಗೊಳಿಸಲು ನೈಸರ್ಗಿಕ ಪರಿವರ್ತನೆಯು ಇದಾಗಿದೆ.

ಆದರೆ ಯಾವಾಗಲೂ ಕೆಮ್ಮುತ್ತಲಿದ್ದರೆ ಅದು ಚಿಂತೆಯ ವಿಷಯ. ಒಣ ಕೆಮ್ಮಿನಿಂದಾಗಿ ಗಂಟಲಿನಲ್ಲಿ ಕಿರಿಕಿರಿಯುಂಟಾಗುವುದು. ಒಣಕೆಮ್ಮಿನಲ್ಲೂ ಎರಡು ವಿಧಗಳಿಗೆ. ಒಂದು ತೀವ್ರ ಮತ್ತೊಂದು ದೀರ್ಘಕಾಲದ್ದಾಗಿದೆ. ಸೈನಟಿಸ್, ಅಸ್ತಮಾ, ಶ್ವಾಸಕೋಶದ ಉರಿ ಮತ್ತು ಕ್ಷಯರೋಗದಿಂದಲೂ ಒಣಕೆಮ್ಮು ಬರಬಹುದು. ಒಣಕೆಮ್ಮಿನ ಸಮಸ್ಯೆ ಕಂಡುಬಂದವರಲ್ಲಿ ಗಂಟಲಿನ ಊತ, ನಿಶ್ಯಕ್ತಿ, ಕಿರಿಕಿರಿ ಮತ್ತು ರೋಗನಿರೋಧಕ ಶಕ್ತಿ ಕುಗ್ಗಿರುವುದನ್ನು ಕಾಣಬಹುದು.

ಒಣಕೆಮ್ಮಿನಿಂದ ನಿವಾರಣೆ ಪಡೆಯಲು ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಇಲ್ಲ. ಬೋಲ್ಡ್ ಸ್ಕೈ ಕೊಟ್ಟಿರುವ ಮನೆಮದ್ದುಗಳನ್ನು ಬಳಸಿಕೊಂಡು ಒಣಕೆಮ್ಮು ನಿವಾರಣೆ ಮಾಡಿ...

ಅರಿಶಿನ ಹಾಲು

ಅರಿಶಿನ ಹಾಲು

ಅರಿಶಿನನದಲ್ಲಿ ಕರ್ಕ್ಯುಮಿನ್ ಎನ್ನುವ ಅಂಶವಿದ್ದು, ಇದು ವೈರಲ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದೆ. ಇದು ಒಣಕೆಮ್ಮಿನಿಂದ ಆಗುವಂತಹ ಸೋಂಕು ನಿವಾರಣೆ ಮಾಡುವುದು.

ಒಂದು ಲೋಟ ಹಾಲನ್ನು ಬಿಸಿ ಮಾಡಿ ಮತ್ತು ಇದಕ್ಕೆ ಅರಶಿನ ಹಾಕಿ. ಸರಿಯಾಗಿ ಮಿಶ್ರಣ ಮಾಡಿ.

ಜೇನುತುಪ್ಪ ಬೆರೆಸಿಕೊಂಡು ಕುಡಿಯಿರಿ. ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವ ತನಕ ಕುಡಿಯಿರಿ.

ಕರಿಮೆಣಸು

ಕರಿಮೆಣಸು

ಕರಿಮೆಣಸಿನಲ್ಲಿ ಬಿಸಿಯಾಗಿಸುವಂತಹ ಗುಣವಿರುವ ಕಾರಣದಿಂದ ಇದು ಒಣಕೆಮ್ಮು ನಿವಾರಣೆ ಮಾಡುವುದು.ಅರ್ಧ ಚಮಚ ಕರಿಮೆಣಸನ್ನು ತುಪ್ಪದೊಂದಿಗೆ ಮಿಶ್ರಣ ಮಾಡಿ ಮತ್ತು ಹೊಟ್ಟೆ ತುಂಬಿರುವಾಗ ಸೇವಿಸಿ.

ಶುಂಠಿ

ಶುಂಠಿ

ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣಗಳಿವೆ ಮತ್ತು ಇದರ ಖಾರವಾದ ರುಚಿಯು ಒಣಕೆಮ್ಮು ನಿವಾರಿಸುವುದು. ಒಣಕೆಮ್ಮು ನಿವಾರಣೆಗೆ ದಿನವಿಡಿ ತಾಜಾ ಶುಂಠಿ ತುಂಡುಗಳನ್ನು ಜಗಿಯುತ್ತಲಿರಿ.

ಲಿಂಬೆ

ಲಿಂಬೆ

ಲಿಂಬೆಯಲ್ಲಿ ಉರಿಯೂತ ಶಮನಕಾರಿ ಗುಣವಿದೆ ಮತ್ತು ಇದರಲ್ಲಿ ಇರುವ ವಿಟಮಿನ್ ಸಿ ಒಣಕೆಮ್ಮಿಗೆ ಕಾರಣವಾಗುವಂತಹ ಸೋಂಕಿನ ವಿರುದ್ಧ ಹೋರಾಡುವುದು.

ಜೇನುತುಪ್ಪ ಕೆಮ್ಮಿನ ಸೀರಪ್

ಜೇನುತುಪ್ಪ ಕೆಮ್ಮಿನ ಸೀರಪ್

ಜೇನುತುಪ್ಪವು ಕೆಮ್ಮು ನಿವಾರಣೆ ಮಾಡುವಂತಹ ಗುಣಗಳನ್ನು ಹೊಂದಿದೆ. ಇದು ಒಣ ಕೆಮ್ಮಿನಿಂದ ಶೀಘ್ರ ಪರಿಹಾರ ನೀಡುವುದು.

ಐದು ಚಮಚ ಜೇನುತುಪ್ಪಕ್ಕೆ ಎರಡು ಚಮಚ ತೆಂಗಿನೆಣ್ಣೆ ಮತ್ತು ಒಂದು ಚಮಚ ಲಿಂಬೆರಸ ಬೆರೆಸಿಕೊಳ್ಳಿ.

ಇದನ್ನು ಎರಡು ನಿಮಿಷ ಕಾಲ ಬಿಸಿ ಮಾಡಿ ಮತ್ತು ಕೆಮ್ಮು ಕಡಿಮೆಯಾಗುವ ತನಕ ಸೇವಿಸಿ.

 ಈರುಳ್ಳಿ

ಈರುಳ್ಳಿ

ಈರುಳ್ಳಿಯು ಕೆಮ್ಮು ನಿವಾರಣೆ ಮಾಡಲು ತುಂಬಾ ಸರಳ ಮನೆಮದ್ದು. ಇದರಲ್ಲಿ ಇರುವ ಪ್ರಬಲ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ಸೋಂಕನ್ನು ತೆಗೆದುಹಾಕುವುದು.

1/2 ಚಮಚ ಈರುಳ್ಳಿ ರಸ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿಕೊಳ್ಳಿ.

ದಿನದಲ್ಲಿ ಎರಡು ಸಲ ಈ ಮಿಶ್ರಣವನ್ನು ಸೇವಿಸಿ.

ಗಿಡಮೂಲಿಕೆ ಚಹಾ

ಗಿಡಮೂಲಿಕೆ ಚಹಾ

ಒಣಕೆಮ್ಮಿನಿಂದ ಮುಕ್ತಿ ಪಡೆಯಲು ಮತ್ತೊಂದು ಮನೆಮದ್ದು ಎಂದರೆ ಅದು ಗಿಡಮೂಲಿಕೆ ಔಷಧಿ.

ಶುಂಠಿ, ದಾಲ್ಚಿನ್ನಿ ಮತ್ತು ಲವಂಗವು ಗಂಟಲಿಗೆ ಶಮನ ನೀಡುವುದು.

ಒಂದು ಚಮಚ ಶುಂಠಿ ಹುಡಿ, ಒಂದು ಚಿಟಿಕೆ ದಾಲ್ಚಿನ್ನಿ ಮತ್ತು ಕೆಲವು ಲವಂಗವನ್ನು ಕುದಿಯುವ ನೀರಿಗೆ ಹಾಕಿ.

ಇದನ್ನು ಸರಿಯಾಗಿ ಬಿಸಿ ಮಾಡಿ ತಣ್ಣಗಾಗಲು 5 ನಿಮಿಷ ಬಿಡಿ. ಈ ಮಿಶ್ರಣವನ್ನು ದಿನನಿತ್ಯ ಸೇವಿಸಿ.

ಖರ್ಜೂರ ಹಾಗೂ ಹಾಲು

ಖರ್ಜೂರ ಹಾಗೂ ಹಾಲು

ಆರು ಒಣ ಖರ್ಜೂರಗಳನ್ನು ತೆಗೆದುಕೊಳ್ಳಿ

ಅರ್ಧ ಲೀಟರ್ ಹಾಲನ್ನು ಪಾತ್ರೆಯಲ್ಲಿ ಸಂಗ್ರಹಿಸಿ

ಹಾಲನ್ನು ಕುದಿಸಿ. ಖರ್ಜೂರಗಳನ್ನು ತೆರೆದು ಬೀಜ ನಿವಾರಿಸಿ ಕುದಿಯಲು ಪ್ರಾರಂಭವಾದ ಹಾಲಿಗೆ ಬೆರೆಸಿ

ಹಾಲು ಉಕ್ಕಿಹೋಗದಂತೆ ಉರಿಯನ್ನು ಅತಿ ಚಿಕ್ಕದಾಗಿಸಿ ಮುಂದಿನ ಇಪ್ಪತ್ತರಿಂದ ಮೂವತ್ತು ನಿಮಿಷಗಳವರೆಗೆ ಬಿಸಿ ಮಾಡಿ

ಬಳಿಕ ಈ ಹಾಲನ್ನು ಕುಡಿಯಲು ಸಾಧ್ಯವಾಗುವಷ್ಟು ತಣಿಸಿ ಒಂದು ಕಪ್ ಕುಡಿಯಿರಿ. ಒಣಕೆಮ್ಮು ಕಡಿಮೆಯಾಗುವವರೆಗೆ ದಿನಕ್ಕೆ ಮೂರು ಬಾರಿ ಪುನರಾವರ್ತಿಸಿ.

ಜೇನು-ಲವಂಗ-ಚೆಕ್ಕೆ

ಜೇನು-ಲವಂಗ-ಚೆಕ್ಕೆ

*4 ದೊಡ್ಡಚಮಚ ಜೇನು

*6 ಲವಂಗ

*1 ಇಂಚಿನಷ್ಟು ಚೆಕ್ಕೆ, ಚಿಕ್ಕದಾಗಿ ತುಂಡರಿಸಿದ್ದು.

* ಮೊದಲು ಬಾಣಲೆಯೊಂದರಲ್ಲಿ ಚಿಕ್ಕ ಉರಿಯಲ್ಲಿ ಲವಂಗ ಮತ್ತು ಚೆಕ್ಕೆಗಳನ್ನು ಸುಮಾರು ಎರಡರಿಂದ ಮೂರು ನಿಮಿಷ ಹುರಿಯಿರಿ. ಅಂದರೆ ಇದರಿಂದ ಕೊಂಚ ವಾಸನೆ ಸೂಸಲು ಪ್ರಾರಂಭವಾಗುವಷ್ಟು ಮಾತ್ರ. ಬಳಿಕ ತಕ್ಷಣವೇ ಗ್ರೈಂಡರಿನ ಚಿಕ್ಕ ಜಾರ್‌ನಲ್ಲಿ ಒಣದಾಗಿಯೇ ನುಣ್ಣನೆಯ ಪುಡಿಮಾಡಿ.

* ಈ ಪುಡಿಯನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಜೇನಿನೊಂದಿಗೆ ಬೆರೆಸಿ ಚಿಕ್ಕ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ.

* ಒಣ ಕೆಮ್ಮಿದ್ದಾಗ ರಾತ್ರಿ ಮಲಗುವ ಮುನ್ನ ಮೂರು ಚಿಕ್ಕ ಚಮಚದಷ್ಟು ಸೇವಿಸಿ ಮಲಗಿ. ಕೆಮ್ಮು ಹೆಚ್ಚಿದ್ದರೆ ಬೆಳಗ್ಗಿನ ಉಪಾಹಾರದ ಬಳಿಕವೂ ಇಷ್ಟೇ ಪ್ರಮಾಣದಲ್ಲಿ ಸೇವಿಸಿ.

ತುಳಸಿ ಎಲೆಯ ಚಹಾ

ತುಳಸಿ ಎಲೆಯ ಚಹಾ

ಒಣಕೆಮ್ಮಿಗೆ ಅತ್ಯುತ್ತಮ ಪರಿಹಾರದಂತೆ ಕೆಲಸ ನಿರ್ವಹಿಸುವ ನೈಸರ್ಗಿಕ ಉತ್ಪನ್ನ ತುಳಸಿ. ತುಳಸಿ ಅತ್ಯುತ್ತಮ ಔಷಧೀಯ ಗುಣಗಳನ್ನು ಒಳಗೊಂಡಿದೆ. ಆಯುರ್ವೇದ ಚಿಕಿತ್ಸಾವಿಧಾನದಲ್ಲಿ ತುಳಸಿ ಪ್ರಧಾನ ಸ್ಥಾನವನ್ನು ಪಡೆದುಕೊಂಡಿದೆ. ಇದರ ಚಹಾವನ್ನು ತಯಾರಿಸಿ ಸೇವಿಸುವುದರಿಂದ ಬಹುಬೇಗ ಒಣಕೆಮ್ಮಿನಿಂದ ಪರಿಹಾರ ಕಾಣಬಹುದು. ಜೊತೆಗೆ ಯಾವುದೇ ಅಡ್ಡ ಪರಿಣಾಮವೂ ಉಂಟಾಗದು. ಆಯುರ್ವೇದದಲ್ಲಿ ತುಳಸಿ ಎಲೆಗಳು ಮತ್ತು ಬೀಜಗಳನ್ನು ಸೂಕ್ಷ್ಮಜೀವಿಯ ಸೋಂಕುಗಳು ಮತ್ತು ರೋಗನಿರೋಧಕತೆಯನ್ನು ಹೆಚ್ಚಿಸಲು ದೇಸಿ ಮಿಶ್ರಣಗಳನ್ನು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ.

ತುಳಸಿ ಚಹಾ ತಯಾರಿಸುವ ವಿಧಾನ

*ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಮತ್ತು 5-7 ತುಳಸಿ ಎಲೆಯನ್ನು ಸೇರಿಸಿ.

*ಪಾತ್ರೆಗೆ ಮುಚ್ಚಳವನ್ನು ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ.

*ನಂತರ ಉರಿಯನ್ನು ಆರಿಸಿ, ಚಹಾವನ್ನು ತಣಿಯಲು ಬಿಡಿ.

*ಉಗುರು ಬೆಚ್ಚಗಿರುವಾಗಲೇ ಸೇವಿಸಬಹುದು.

*ಬೇಕಿದ್ದರೆ ಆರೋಗ್ಯ ಉತ್ಪನ್ನಗಳಾದ ಶುಂಠಿ, ಏಲಕ್ಕಿ, ಕರಿಮೆಣಸು, ಲವಂಗ ಹಾಗೂ ಕೆಲವು ಮಸಾಲೆ ಗಿಡಮೂಲಿಕೆಗಳನ್ನು ಸೇರಿಸಬಹುದು.

English summary

Effective Home Remedies For Dry Cough

Cough is one of the most common health problems, especially dry cough. It does not produce any kind of a phlegm or mucus and is mostly caused by some kind of a virus or infection. While it may be a natural reflex to clear the airways, constant coughing is bothersome.Dry cough causes a ticklish feeling on the back of the throat, which makes you feel irritated. There are 2 types of dry cough, one is acute and the other is chronic. Constant dry cough can also be caused by sinusitis, asthma, pneumonia, tuberculosis, among others.
X
Desktop Bottom Promotion