ಶೀಘ್ರ ವೀರ್ಯ ಸ್ಖಲನಕ್ಕೆ ಸಮಸ್ಯೆ ತಡೆಯೋಕೇ ಇಂತಹ ಆಹಾರಗಳನ್ನು ಸೇವಿಸಿ...

By Hemanth
Subscribe to Boldsky

ಸಂಗಾತಿಯೊಂದಿಗೆ ನೀವು ಸುಖದ ಉತ್ತುಂಗಕ್ಕೇರುವ ಮೊದಲೇ ಶೀಘ್ರ ಸ್ಖಲನವಾಗಿ ಬಿಡತ್ತೆ. ನಿಮ್ಮ ಸಂತೋಷ, ಕಲ್ಪನೆಗಳು ಎಲ್ಲವೂ ಮಣ್ಣುಪಾಲಾಗಿ ಹೋಗುವುದು. ಇಂತಹ ಸಮಸ್ಯೆಗಳು ಹೆಚ್ಚಿನ ಪುರುಷರನ್ನು ಕಾಡುವುದು. ಅದರಲ್ಲೂ ಇಂದಿನ ಆಧುನಿಕ ಹಾಗೂ ವೇಗದ ಜಗತ್ತಿನಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವೆನ್ನುವಂತಾಗಿದೆ. ಇದು ಕೇವಲ ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ತುಂಬಾ ಮಾನಸಿಕ ನೋವು ನೀಡುವುದು.

ನುಗ್ಗುವಿಕೆ ಆರಂಭವಾಗುವ ಒಂದು ನಿಮಿಷ ಮೊದಲು ಶೀಘ್ರ ಸ್ಖಲನ ಉಂಟಾಗುವುದು. ಒಂದು ಅಧ್ಯಯನದ ಪ್ರಕಾರ ಶೇ. 29ರಷ್ಟು ಪುರುಷರಲ್ಲಿ ಇಂತಹ ಸಮಸ್ಯೆಯು ಕಂಡುಬರುವುದು. ಹಾಗಾದರೆ ಶೀಘ್ರ ಸ್ಖಲನ ತಡೆಯಲು ಯಾವುದೇ ವಿಧಾನಗಳು ಇಲ್ಲವೇ ಎಂದು ನೀವು ಪ್ರಶ್ನಿಸಬಹುದು. ಇದಕ್ಕೆ ಕೆಲವೊಂದು ಮನೆಮದ್ದುಗಳನ್ನು ನಾವು ಈ ಲೇಖನ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ...ಇದನ್ನು ನೀವು ಪ್ರಯತ್ನಿಸಿ ನೋಡಿ.....

ಅಶ್ವಗಂಧ

ಅಶ್ವಗಂಧ

ಅಶ್ವಗಂಧ ಬಹಳ ಮಹತ್ವಪೂರ್ಣವಾಗಿರುವ ವೈದ್ಯಕೀಯ ಮದ್ದಾಗಿದೆ. ಇದನ್ನು ಬಹಳಷ್ಟು ಆಯುರ್ವೇದ ಔಷಧಗಳಲ್ಲಿ ಪ್ರಮುಖವಾಗಿ ಪುರುಷರ ಲೈಂಗಿಕ ಸಮಸ್ಯೆಯ ಪರಿಹಾರಕ್ಕಾಗಿ ಬಳಕೆ ಮಾಡಲಾಗುತ್ತೆ. ಅಶ್ವಗಂಧವೂ ಸ್ಖಲಕ್ಕೆ ಸಂಬಂಧಿಸಿದ ಅಂಗಗಳ ಬಲವರ್ಧನೆಗೆ ಸಹಕರಿಸುತ್ತೆ ಮತ್ತು ಪುರುಷರ ಶಕ್ತಿಯನ್ನು ಹೆಚ್ಚಿಸುತ್ತೆ. ಒಂದು ಟೇಬಲ್ ಸ್ಪೂನ್ ನಷ್ಟು ಅಶ್ವಗಂಧವನ್ನು ತೆಗೆದುಕೊಂಡು ಒಂದು ಲೋಟ ಆಡಿನ ಹಾಲಿನೊಂದಿಗೆ ಬೆರೆಸಿ ಇದನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ ಸೂಚನೆ: ದನದ ಹಾಲಿಗಿಂತ ಆಡಿನ ಹಾಡು ಈ ಔಷಧದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ

ಕೇಸರಿ ಮತ್ತು ಬಾದಾಮಿ

ಕೇಸರಿ ಮತ್ತು ಬಾದಾಮಿ

ಕೇಸರಿಯಲ್ಲಿ ಸಣ್ಣ ಪ್ರಮಾಣದ ಕಾಮೋತ್ತೇಜಕ ಅಂಶಗಳು ಇವೆ ಮತ್ತು ಇದು ಕಾಮಾಸಕ್ತಿ ಸುಧಾರಿಸುವುದು. ಬಾದಾಮಿಯಲ್ಲಿ ಸೆಲೆನಿಯಂ, ಸತು ಮತ್ತು ವಿಟಮಿನ್ ಇ ಇದ್ದು, ಇದು ಲೈಂಗಿಕ ಆರೋಗ್ಯ ಮತ್ತು ಸಂತಾನೋತ್ಪತ್ತಿಗೆ ಪ್ರಮುಖವಾಗಿರುವುದು. ಬಂಜೆತನದ ಸಮಸ್ಯೆಯನ್ನು ಸೆಲೆನಿಯಂ ನಿವಾರಣೆ ಮಾಡುವುದು ಮತ್ತು ಸತು ಪುರುಷರಲ್ಲಿ ಲೈಂಗಿಕ ಹಾರ್ಮೋನು ಉತ್ಪತ್ತಿ ಮಾಡಿ ಕಾಮಾಸಕ್ತಿ ಹೆಚ್ಚಿಸುವುದು.

•ಹತ್ತು ಬಾದಾಮಿಯನ್ನು ಹುಡಿ ಮಾಡಿಕೊಂಡು ಒಂದು ಲೋಟ ಹಾಕಿಗೆ ಹಾಕಿ. ಇದಕ್ಕೆ ಒಂದು ಚಿಟಿಕೆ ಶುಂಠಿ, ದಾಲ್ಚಿನಿ ಮತ್ತು ಕೇಸರಿ ಹಾಕಿ.

•ಮಲಗುವ ಮೊದಲು ಪ್ರತೀ ರಾತ್ರಿ ಇದನ್ನು ಕುಡಿಯಿರಿ.

ಶುಂಠಿ ಮತ್ತು ಜೇನುತುಪ್ಪ

ಶುಂಠಿ ಮತ್ತು ಜೇನುತುಪ್ಪ

ಶೀಘ್ರ ಸ್ಖಲನಕ್ಕೆ ಶುಂಠಿ ಮತ್ತು ಜೇನುತುಪ್ಪವು ಮತ್ತೊಂದು ಮನೆಮದ್ದಾಗಿದೆ. ಶುಂಠಿಯು ಜನನಾಂಗಗಳಿಗೆ ರಕ್ತಸಂಚಾರವನ್ನು ಸುಗಮಗೊಳಿಸುವುದು ಮತ್ತು ಇದರಿಂದ ಸ್ಖಲನದ ಮೇಲೆ ನಿಯಂತ್ರಣ ಸಾಧಿಸಬಹುದು. ಇನ್ನೊಂದು ಕಡೆ ಜೇನುತುಪ್ಪವು ಕಾಮೋತ್ತೇಜಕವಾಗಿದ್ದು, ಇದು ಶುಂಠಿಯ ಶಕ್ತಿಯನ್ನು ಇಮ್ಮಡಿಗೊಳಿಸುವುದು. ಮಲಗುವ ಮೊದಲು ಅರ್ಧ ಚಮಚ ಶುಂಠಿ ಮತ್ತು ಜೇನುತುಪ್ಪ ಸೇವಿಸಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಶೀಘ್ರ ಸ್ಖಲನಕ್ಕೆ ಬೆಳ್ಳುಳ್ಳಿಯು ಅದ್ಭುತವಾಗಿರುವ ಔಷಧಿಯಾಗಿದೆ. ಇದು ಜನನಾಂಗಕ್ಕೆ ರಕ್ತ ಸಂಚಾರವನ್ನು ಸುಗಮಗೊಳಿಸುವುದು ಮತ್ತು ದೇಹದ ಉಷ್ಣತೆ ಹೆಚ್ಚಿಸುವುದು.

•ಶುದ್ಧ ತುಪ್ಪದಲ್ಲಿ ಹಾಕಿಕೊಂಡು ಬೆಳ್ಳುಳ್ಳಿಯನ್ನು ಹುರಿಯಿರಿ. ಇದು ಕಂದು ಬಣ್ಣಕ್ಕೆ ಬರಲಿ.

•ಪ್ರತಿನಿತ್ಯ ಇದನ್ನು ಸೇವಿಸಿ.

•ನೀವು 3-4 ಬೆಳ್ಳುಳ್ಳಿ ಎಸಲುಗಳನ್ನು ಜಗಿದು ತಿನ್ನಬಹುದು.

ಹಸಿರು ಈರುಳ್ಳಿಯ ಬೀಜಗಳು

ಹಸಿರು ಈರುಳ್ಳಿಯ ಬೀಜಗಳು

ಹಸಿರು ಈರುಳ್ಳಿಯ ಬೀಜಗಳನ್ನು ಬಳಸಿಕೊಂಡು ಶೀಘ್ರ ಸ್ಖಲನ ನಿಲ್ಲಿಸಬಹುದು. ಇದರಲ್ಲಿ ಕಾಮೋತ್ತೇಜಕ ಗುಣಗಳು ಇವೆ ಮತ್ತು ಪುರುಷರಲ್ಲಿನ ಲೈಂಗಿಕ ಸಮಸ್ಯೆಗಳನ್ನು ನಿವಾರಣೆ ಮಾಡುವುದು. ಈರುಳ್ಳಿ ತಿನ್ನುತ್ತಲಿದ್ದರೆ ಇದು ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ, ನಿಯಂತ್ರಣದಲ್ಲಿಡುವುದು.

•ಬೀಜಗಳನ್ನು ಜಜ್ಜಿಕೊಂಡು ನೀರಿಗೆ ಹಾಕಿ ಮಿಶ್ರಣ ಮಾಡಿ.

•ಊಟಕ್ಕೆ ಮೊದಲು ಈ ನೀರನ್ನು ದಿನದಲ್ಲಿ ಮೂರು ಸಲ ಸೇವಿಸಿ.

ಬೆಂಡೆಕಾಯಿ ಮತ್ತು ಕಲ್ಲುಸಕ್ಕರೆ(ಮಿಶ್ರಿ)

ಬೆಂಡೆಕಾಯಿ ಮತ್ತು ಕಲ್ಲುಸಕ್ಕರೆ(ಮಿಶ್ರಿ)

ಬೆಂಡೆಕಾಯಿಯನ್ನು ಪುಡಿ ಮಾಡಿ ಸೇವಿಸುವುದರಿಂದ ಶೀಘ್ರ ವೀರ್ಯ ಸ್ಖಲನವನ್ನು ಪರಿಹರಿಸಿಕೊಳ್ಳಬಹುದು. ಒಂದು ಲೋಟ ಬೆಚ್ಚನೆಯ ಹಾಲನ್ನು ತೆಗೆದುಕೊಳ್ಳಿ. ಅದಕ್ಕೆ 10ಗ್ರಾಂ ಬೆಂಡೆಕಾಯಿಯ ಪುಡಿಯನ್ನು ಬೆರೆಸಿ. ಇದಕ್ಕೆ ಎರಡು ಚಮಚದಷ್ಟು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ, ನಂತರ ಸೇವಿಸಿ. ಪ್ರತಿ ರಾತ್ರಿ ಇದನ್ನು ಪುನರಾವರ್ತಿಸಿ. ಹೀಗೆ ಒಂದು ತಿಂಗಳು ಮಾಡುವುದರಿಂದ ಶೀಘ್ರ ವೀರ್ಯಸ್ಖಲನ ಸಮಸ್ಯೆಯಿಂದ ಮುಕ್ತಿ ಹೊಂದುವಲ್ಲಿ ಗಮನಾರ್ಹವಾದ ಬೆಳವಣಿಗೆಯು ನಿಮ್ಮಲ್ಲಿ ಕಂಡು ಬರುತ್ತದೆ.

ಈರುಳ್ಳಿಗಳು

ಈರುಳ್ಳಿಗಳು

ಹಸಿರು ಈರುಳ್ಳಿಯ ಬೀಜಗಳು ಅತ್ಯುತ್ತಮವಾದ ಕಾಮೋತ್ತೇಜಕ ಗುಣಗಳನ್ನು ಹೊಂದಿದ್ದಾವೆ. ಇದರಿಂದಾಗಿ ಇವು ಶೀಘ್ರ ವೀರ್ಯ ಸ್ಖಲನವನ್ನು ತಡೆಗಟ್ಟಿ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅದಕ್ಕಾಗಿ ಒಂದು ಚಮಚದಷ್ಟು ಹಸಿರು ಈರುಳ್ಳಿಯ ಬೀಜಗಳನ್ನು ತೆಗೆದುಕೊಂಡು, ಅದನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ. ಇವುಗಳನ್ನು ಚೆನ್ನಾಗಿ ಕಲೆಸಿ ಪ್ರತಿ ಬಾರಿ ಊಟ ಮಾಡುವ ಮುನ್ನ ಇದನ್ನು ಸೇವಿಸಿ. ಇದರಿಂದ ನಿಮ್ಮ ದೇಹದ ಶಕ್ತಿ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ನೀವು ನಿಮ್ಮ ವೀರ್ಯ ಸ್ಖಲನವನ್ನು ಹತೋಟಿಯಲ್ಲಿಡಬಹುದು. ಬಿಳಿ ಈರುಳ್ಳಿಗಳು ಸಹ ಅತ್ಯುತ್ತಮವಾದ ಕಾಮೋತ್ತೇಜಕ ಗುಣಗಳನ್ನು ತಮ್ಮಲ್ಲಿ ಹೊಂದಿವೆ. ಇವು ನಿಮ್ಮ ಜನನಾಂಗಗಳನ್ನು

ಸದೃಢಗೊಳಿಸಿ ಶೀಘ್ರ ವೀರ್ಯ ಸ್ಖಲನವನ್ನು ತಡೆಯುತ್ತವೆ. ಇದರಲ್ಲಿರುವ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಲು ಈರುಳ್ಳಿಗಳನ್ನು ಹಸಿಯಾಗಿ ಸೇವಿಸಿ ಸಾಕು.

ಮೊಟ್ಟೆ

ಮೊಟ್ಟೆ

ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಡಿಯ ಪಾತ್ರ ಕೂಡ ಅಧಿಕವಾದುದು. ನಿತ್ಯವೂ ಎರಡು ಮೊಟ್ಟೆಗಳನ್ನು ಸೇವಿಸುವುದು ಪುರುಷರಲ್ಲಿ ಟೆಸ್ಟೋಸ್ಟಿರಾನ್ ಮಟ್ಟಗಳನ್ನು ವರ್ಧಿಸುತ್ತವೆ. ಇದು ಪುರುಷರಲ್ಲಿ ಕಂಡುಬರುವ ಶೀಘ್ರ ಸ್ಖಲನ ಸಮಸ್ಯೆಯನ್ನು ನಿವಾರಿಸುವ ಸೂಪರ್ ಆಹಾರವಾಗಿದೆ.

ಓಟ್ಸ್

ಓಟ್ಸ್

ಸೆರೋಟಿನ್ ಎಂದು ಕರೆಯಲಾಗುವ ರಾಸಾಯನಿಕವನ್ನು ಓಟ್ಸ್ ಒಳಗೊಂಡಿದ್ದು ಇದು ಆತಂಕ ಮತ್ತು ಒತ್ತಡವನ್ನು ದೂರಮಾಡುತ್ತದೆ. ಶೀಘ್ರ ಸ್ಖಲನವು ಒತ್ತಡ ಮತ್ತು ಆತಂಕಕ್ಕೆ ನೇರವಾದ ಸಂಬಂಧವನ್ನು ಹೊಂದಿದೆ. ಇಷ್ಟಲ್ಲದೆ ಓಟ್ಸ್ ಅಧಿಕ ಪ್ರೋಟೀನ್ ಅನ್ನು ಒಳಗೊಂಡಿರುವುದರಿಂದ ಇದು ಟೆಸ್ಟೋಸ್ಟಿರಾನ್ ಅನ್ನು ಕೂಡ ವರ್ಧಿಸುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ಎಂಜಿಮ್ ಆದ ಬ್ರೊಮಿಲಿಯನ್ ಅಂಶವನ್ನು ಬಾಳೆಹಣ್ಣು ಒಳಗೊಂಡಿದೆ. ಇದು ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆಯನ್ನು ವೃದ್ಧಿಸುತ್ತದೆ.

ಅವೊಕಾಡೊ

ಅವೊಕಾಡೊ

ವಿಟಮಿನ್ ಸಿ, ಕೆ ಮತ್ತು ಬಿಯನ್ನು ಯಥೇಚ್ಛವಾಗಿ ಹೊಂದಿರುವ ಸರ್ವಗುಣ ಸಂಪನ್ನ ಹಣ್ಣಾಗಿದೆ ಅವೊಕಾಡೊ. ದೇಹದ ಮುಖ್ಯಭಾಗಕ್ಕೆ ರಕ್ತದ ಹರಿವನ್ನು ಉತ್ತೇಜಿಸುವ ಕಾರ್ಯವನ್ನು ವಿಟಮಿನ್ ಕೆ ಮಾಡುತ್ತದೆ. ಅಷ್ಟಲ್ಲದೇ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ವಿಟಮಿನ್ ಮತ್ತು ಮಿನರಲ್‌ಗಳನ್ನು ಕೂಡ ಅವೊಕಾಡೊ ಒಳಗೊಂಡಿದೆ.

ವ್ಯಾಯಾಮ

ವ್ಯಾಯಾಮ

ಶೀಘ್ರ ವೀರ್ಯ ಸ್ಖಲನವನ್ನು ನಿವಾರಿಸುವಲ್ಲಿ ಕೆಲವೊಂದು ವ್ಯಾಯಾಮಗಳು ಸಹ ನಿಮ್ಮ ನೆರವಿಗೆ ಬರುತ್ತವೆ. ಅದರಲ್ಲೂ ಕೆಗೆಲ್ ವ್ಯಾಯಾಮವು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಅಂದರೆ ಪೆಲ್ವಿಕ್ ಸ್ನಾಯುಗಳನ್ನು ಶಕ್ತಿಶಾಲಿಗೊಳಿಸುತ್ತದೆ. ಈ ಸ್ನಾಯುಗಳು ನಿಮ್ಮ ಜನನಾಂಗದ ನಿಮಿರುವಿಕೆ ಮತ್ತು ಸ್ಖಲನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಇದೊಂದು ಸುಲಭವಾದ ವ್ಯಾಯಾಮವಾಗಿದ್ದು, ಎಲ್ಲಿ ಬೇಕಾದರು ಇದನ್ನು ಮಾಡಬಹುದಾಗಿದೆ. ಈ ವ್ಯಾಯಾಮ ಮಾಡಲು

ಮೊದಲು ನೇರವಾಗಿ ನಿಲ್ಲಿ. ನಂತರ ನಿಮ್ಮ ಸ್ನಾಯುಗಳನ್ನು ನಿಮ್ಮ ಪೃಷ್ಠದ ಭಾಗದತ್ತ ಎಳೆದುಕೊಳ್ಳಿ. ಇದರಿಂದಾಗಿ ನಿಮ್ಮ ಕಿಬ್ಬೊಟ್ಟೆಯ ಭಾಗವು ಸದೃಢಗೊಳ್ಳುತ್ತದೆ ಹಾಗು ಶೀಘ್ರ ವೀರ್ಯ ಸ್ಖಲನ ಸಮಸ್ಯೆಯಿಂದ ನಿಮಗೆ ಮುಕ್ತಿ ದೊರೆಯುತ್ತದೆ. ಅತ್ಯುತ್ತಮವಾದ ಫಲಿತಾಂಶವನ್ನು ನಿಮ್ಮದಾಗಿಸಿಕೊಳ್ಳಲು ಈ ವ್ಯಾಯಾಮವನ್ನು ದಿನಕ್ಕೆ 15-20 ಬಾರಿ ಮಾಡಿ.

For Quick Alerts
ALLOW NOTIFICATIONS
For Daily Alerts

    English summary

    Easy Steps to Treat Your Premature Ejaculation Naturally ...

    Premature ejaculation is an inability to delay ejaculation until it's desirable for both the partners. Premature ejaculation occurs before 1 minute of penetration and this is one of the most common sexual problems affecting men of all ages. It lowers a man's self-confidence and can even lead to psychological problems such as anxiety and depression. Research has shown that at least 29 percent of men are dealing with this problem at some point in their lives.
    ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more