For Quick Alerts
ALLOW NOTIFICATIONS  
For Daily Alerts

ಹೊಟ್ಟೆ ಬೊಜ್ಜು ಇಳಿಸಿಕೊಳ್ಳಲು 6 ಪವರ್ ಫುಲ್ ಪಾನೀಯಗಳು

|

ತೂಕ ಇಳಿಸಿಕೊಳ್ಳುವುದು ಎಂದರೆ ಅದು ಹಿಮಾಲಯ ಏರಿದಷ್ಟೇ ಕಠಿಣ! ಯಾಕೆಂದರೆ ಅದಕ್ಕೆ ಬದ್ಧತೆ, ಕಠಿಣ ಪರಿಶ್ರಮ ಮತ್ತು ಮನಸ್ಸಿನ ಮೇಲೆ ಹಿಡಿತ ಬೇಕಾಗುತ್ತದೆ. ಒಂದು ದಿನ ತೂಕ ಇಳಿಸಿಕೊಳ್ಳುವ ಆಹಾರ ಕ್ರಮ ಪಾಲಿಸಿ, ವ್ಯಾಯಾಮ ಮಾಡಿದ ಬಳಿಕ ಮರುದಿನ ಮತ್ತೆ ಹಸಿವು ಹೆಚ್ಚಾಗಿದೆ ಎಂದು ತಿನ್ನಲು ಹೋದರೆ ಅದರಿಂದ ಯಾವುದೇ ಪ್ರಯೋಜನವು ಆಗದು.

ಅದರಲ್ಲೂ ಕೆಲವರ ಹೊಟ್ಟೆ ತುಂಬಾ ಬೆಳೆದಿರುವ ಕಾರಣ ಇದು ನೋಡಲು ಅಸಹ್ಯವಾಗಿರುವುದು. ಇಂತಹ ಹೊಟ್ಟೆಯ ಬೊಜ್ಜು ಕರಗಬೇಕೆಂದರೆ ಆಗ ನೀವು ಸರಿಯಾದ ವ್ಯಾಯಾಮ ಮತ್ತು ಆಹಾರ ಕ್ರಮ ಪಾಲಿಸಬೇಕು. ಒಂದು ದಿನದಲ್ಲಿ ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಕೆಲವೊಂದು ಸರಳವಾದ ಜೀವನಶೈಲಿ ಬದಲಾವಣೆಯಿಂದಾಗಿ ಹೊಟ್ಟೆಯ ಬೊಜ್ಜನ್ನು ಖಂಡಿತವಾಗಿಯೂ ಕರಗಿಸಬಹುದು. ಸಮತೋಲಿತ ಆಹಾರ ಕ್ರಮ ಮತ್ತು ನಾರಿನಾಂಶವು ಅಧಿಕವಾಗಿರುವ ಆಹಾರ ಕ್ರಮ ಪಾಲಿಸಿಕೊಂಡು ಹೋಗಬೇಕು. ಆದರೆ ಕೆಲವೊಂದು ಪಾನೀಯಗಳು ನಿಮ್ಮ ಚಯಾಪಚಯವನ್ನು ಹೆಚ್ಚಿಸಿ, ಹೊಟ್ಟೆಯ ಬೊಜ್ಜು ಕರಗುವಂತೆ ಮಾಡಿ, ತೂಕ ಕಳೆದುಕೊಳ್ಳುವ ನಿಮ್ಮ ಸಾಧನೆಗೆ ನೆರವಾಗಲಿದೆ.

ಗ್ರೀನ್ ಟೀ

ಗ್ರೀನ್ ಟೀ

ಇಂದು ಮಾರುಕಟ್ಟೆಯಲ್ಲಿ ದೊರಕುತ್ತಿರುವ ಟೀ ಗಳಲ್ಲಿ ಅತಿ ಆರೋಗ್ಯಕರವಾದುದೆಂದರೆ ಹಸಿರು ಟೀ. ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಪರಿಚಯಿಸಲ್ಪಟ್ಟ ಈ ಹಸಿರು ಟೀ ಶೀಘ್ರ ಸಮಯದಲ್ಲಿಯೇ ಭಾರತೀಯರ ಅಚ್ಚುಮೆಚ್ಚಿನ ಪೇಯವಾಗಿದೆ. ಇದುವರೆಗೆ ಭಾರತೀಯರ ನೆಚ್ಚಿನ ಪೇಯವಾಗಿದ್ದ ಕಪ್ಪು ಟೀ ಹಾಗೂ ಹಾಲು ಬೆರೆಸಿದ ಟೀ ಸಹಾ ಹಿನ್ನಡೆ ಪಡೆದಿವೆ. ನಿತ್ಯವೂ ಹಸಿರು ಟೀ ಸೇವಿಸುವ ವ್ಯಕ್ತಿಗಳ ಆರೋಗ್ಯ ಉಳಿದವರಿಗಿಂತ ಉತ್ತಮವಾಗಿರುದು ಕಂಡುಬಂದಿದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ಹಸಿರು ಟೀ ಸೇವನೆಯಿಂದ ತೂಕದಲ್ಲಿ ಇಳಿಕೆ, ಕ್ಯಾನ್ಸರ್ ಬರುವುದರಿಂದ ರಕ್ಷಣೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು ಮೊದಲಾದ ಪ್ರಯೋಜನಗಳಿವೆ. ಇನ್ನು ಇದರಲ್ಲಿ ಕ್ಯಾಟೆಚಿನ್ಸ್ ಎಂದು ಕರೆಯಲ್ಪಡುವ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಇದು ಹೊಟ್ಟೆಯ ಕೊಬ್ಬು ಕರಗಿಸುವುದು. ಗ್ರೀನ್ ಟೀ ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಬೊಜ್ಜು ಕರಗಿಸಬಹುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಕ್ಯಾಟೆಚಿನ್ಸ್ ಹೊಟ್ಟೆಯಲ್ಲಿರುವ ಕೊಬ್ಬಿನ ಕೋಶಗಳಿಂದ ಕೊಬ್ಬಿನ ಬಿಡುಗಡೆ ಹೆಚ್ಚು ಮಾಡುವುದು ಮತ್ತು ಯಕೃತ್ ನಲ್ಲಿ ಕೊಬ್ಬು ಕರಗಿಸುವ ಕಾರ್ಯಕ್ಕೆ ವೇಗ ನೀಡುವುದು.

ಜೇನುತುಪ್ಪ-ದಾಲ್ಚಿನ್ನಿ ನೀರು

ಜೇನುತುಪ್ಪ-ದಾಲ್ಚಿನ್ನಿ ನೀರು

ಬಹಳ ಹಿಂದಿನಿಂದಲೂ ಜೇನು ಆಹಾರವಾಗಿಯೂ ಔಷಧಿಯಾಗಿಯೂ ಉಪಯೋಗಿಸಲ್ಪಡುತ್ತಿದೆ. ದಾಲ್ಚಿನ್ನಿಯ (ಲವಂಗಪಟ್ಟೆ, ಅಥವಾ ಚಕ್ಕೆ) ಉಪಯೋಗ ಬಹುತೇಕ ಮಸಾಲೆಯಾಗಿ ಮಾತ್ರ ಇತ್ತು. ಆದರೆ ಕೆಲವೆಡೆ ಮಾತ್ರ ದಾಲ್ಚಿನ್ನಿಯನ್ನು ಔಷಧಿಯಾಗಿ ಬಳಸಲ್ಪಡುತ್ತದೆ. ಈ ಎರಡರ ಜೋಡಿ ಬಹಳಷ್ಟು ಕಾಯಿಲೆಗಳಿಗೆ ಪರಿಣಾಮಕಾರಿಯಾಗಿದೆ. ಈ ಸಂಯೋಜನೆಯಿಂದ ಹೈಡ್ರೋಜನ್ ಪೆರಾಕ್ಸೈಡ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ದೇಹದಲ್ಲಿರುವ ಅತಿಸೂಕ್ಷ್ಮ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತವೆ. ದಕ್ಷಿಣ ಅಮೇರಿಕಾದಲ್ಲಿ ಕಳೇಬರವನ್ನು ಅತಿಹೆಚ್ಚು ಕಾಲ ಕೆಡದಿರಲು ಉಪಯೋಗಿಸುವ ಮಸಾಲೆಯಲ್ಲಿ ಈ ಜೋಡಿಯ ಪ್ರಸ್ತಾಪವಿದೆ. ಇದೇ ಕಾರಣದಿಂದ ಈ ಜೋಡಿಯನ್ನು ಉಪಯೋಗಿಸಿ ತಯಾರಿಸಲಾದ ಅಡುಗೆಗಳು ಸಹಾ ಬಹುಕಾಲ ಕೆಡದಿರುತ್ತವೆ. ವಿಶ್ವಕ್ಕೆ ನಮ್ಮ ದೇಶದ ಕೊಡುಗೆಯಾದ ಆಯುರ್ವೇದದಲ್ಲಿಯೂ ಈ ಜೋಡಿಯ ಮಹತ್ವವನ್ನು ಸಾರಲಾಗಿದೆ. "ಯೋಗವಾಹಿ"ಅಥವಾ ಮೂಲಿಕೆಗಳ ಉತ್ತಮಗುಣಗಳನ್ನು ಜೀವಕೋಶಗಳವರೆಗೆ ತಲುಪಿಸುವ ವಾಹಕ ಎಂದು ಬಣ್ಣಿಸಲಾಗಿದೆ. ದಾಲ್ಚಿನ್ನಿ ನಿಮ್ಮ ಚಯಾಪಚಯ ಕ್ರಿಯೆಗೆ ವೇಗ ನೀಡುವುದು. ಇದರಿಂದ ತೂಕ ಕಳೆದುಕೊಳ್ಳಲು ನಿಮಗೆ ಸಾಧ್ಯವಾಗುವುದು. ಕೊಬ್ಬಾಗಿ ಪರಿವರ್ತನೆ ಹೊಂದುವ ಸಕ್ಕರೆಯನ್ನು ಚಯಾಪಚಯ ಗೊಳಿಸುವುದು. ಒಂದು ಚಮಚ ದಾಲ್ಚಿನಿ ಹುಡಿಯನ್ನು ಬಿಸಿ ನೀರಿಗೆ ಹಾಕಿ ಮತ್ತು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಪ್ರತಿದಿನ ಬೆಳಗ್ಗೆ ಸೇವಿಸಿ.

ಅನಾನಸು ಜ್ಯೂಸ್

ಅನಾನಸು ಜ್ಯೂಸ್

ಅನಾನಸ್ ಹಣ್ಣು ನಾರಿನ೦ಶ, ಆ೦ಟಿ ಆಕ್ಸಿಡೆ೦ಟ್, ಹಾಗೂ ಉಪಯುಕ್ತವಾದ ಕಿಣ್ವಗಳಿ೦ದ ಸಮೃದ್ಧವಾಗಿದೆ. ಇವೆಲ್ಲವೂ ಶರೀರದಿ೦ದ ವಿಷಪದಾರ್ಥಗಳನ್ನು ಹಾಗೂ ಭಾರವಾದ ಲೋಹಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿವೆ. ಅದರಲ್ಲೂ ಹೊಟ್ಟೆಯ ಕೊಬ್ಬು ಕರಗಿಸಲು ಅನಾನಸು ಜ್ಯೂಸ್ ತುಂಬಾ ಪರಿಣಾಮಕಾರಿ ಎಂದು ನಂಬಲಾಗಿದೆ. ಬ್ರೊಮೆಲೈನ್ ಎನ್ನುವ ಪ್ರಮುಖ ಕಿಣ್ವವು ಅನಾನಸು ಜ್ಯೂಸ್ ನಲ್ಲಿದ್ದು, ಇದು ಪ್ರೋಟೀನ್ ನ್ನು ಚಯಾಪಚಯಗೊಳಿಸುವುದು ಮತ್ತು ಹೊಟ್ಟೆಯ ಹೆಚ್ಚುವರಿ ಕೊಬ್ಬು ಕರಗಿಸುವುದು.

ಪುದೀನಾ ಚಹಾ

ಪುದೀನಾ ಚಹಾ

ಪುದೀನಾವು ನಿಮ್ಮ ದೇಹವು ಬೇಗನೆ ಆಹಾರವನ್ನು ಕರಗಿಸುವಂತೆ ಮಾಡುವುದು ಮತ್ತು ಕೊಬ್ಬು ಜಮೆಯಾಗದಂತೆ ನೋಡಿಕೊಳ್ಳುವುದು. ಆಹಾರವು ಸರಿಯಾಗಿ ಜೀರ್ಣವಾಗದೆ ಹೊಟ್ಟೆಯ ಭಾಗದಲ್ಲಿ ಜಮೆಯಾಗುವ ಕೊಬ್ಬಿನಿಂದಾಗಿ ಉಂಟಾಗುವ ಹೊಟ್ಟೆ ಉಬ್ಬರವನ್ನು ಕೂಡ ಇದು ತಡೆಯುವುದು. ಹೊಟ್ಟೆಯಲ್ಲಿನ ಕೊಬ್ಬನ್ನು ಪುದೀನಾವು ಪರಿಷ್ಕರಿಸುವುದು.

ಪುದೀನಾ ಚಹಾ ತಯಾರಿಸುವ ವಿಧಾನ

ಸುಮಾರು ನಾಲ್ಕು ಲೋಟ ಕುದಿಯುವ ನೀರಿಗೆ ಎರಡು ದೊಡ್ಡಚಮಚ ಒಣ ಎಲೆಗಳನ್ನು ಸೇರಿಸಿ ಸುಮಾರು ಇಪ್ಪತ್ತು ನಿಮಿಷಗಳವರೆಗೆ ಹಾಗೇ ಬಿಡಿ (ಮತ್ತೆ ಕುದಿಸಬಾರದು). ಬಳಿಕ ಸೋಸಿ ನೀರನ್ನು ಬಾಟಲಿಯಲ್ಲಿ ಶೇಖರಿಸಿ ಫ್ರಿಜ್ ನಲ್ಲಿಡಬಹುದು. ಕುಡಿಯುವ ಅಗತ್ಯವಿದ್ದಾಗ ಬಾಟಲಿ ಹೊರತೆಗೆದು ಮತ್ತೊಮ್ಮೆ ಬಿಸಿಮಾಡಿ ಸೇವಿಸಿ. ರುಚಿಗಾಗಿ ಕೆಲವು ತೊಟ್ಟು ಲಿಂಬೆರಸ ಮತ್ತು ಸಕ್ಕರೆ ಅಥವಾ ಕಲ್ಲುಸಕ್ಕರೆಯನ್ನೂ ಸೇರಿಸಬಹುದು.

ಬಿಸಿ ನೀರಿನ ಜತೆಗೆ ಆ್ಯಪಲ್ ಸೀಡರ್ ವಿನೇಗರ್

ಬಿಸಿ ನೀರಿನ ಜತೆಗೆ ಆ್ಯಪಲ್ ಸೀಡರ್ ವಿನೇಗರ್

ಆ್ಯಪಲ್ ಸೀಡರ್ ವಿನೇಗರ್ (ಸೇಬಿನ ಶಿರ್ಕಾ) ನೊಂದಿಗೆ ದಿನದ ಆರಂಭವನ್ನು ಮಾಡಿದರೆ, ಆಗ ಜೀರ್ಣಕ್ರಿಯೆಯು ಸರಾಗಿರುವುದು ಎಂದು ಹೇಳಲಾಗುತ್ತದೆ. ಆ್ಯಪಲ್ ಸೀಡರ್ ವಿನೇಗರ್ ಪಿತ್ತರಸವನ್ನು ಉತ್ತೇಜಿಸುವುದು ಮತ್ತು ಹೊಟ್ಟೆಯಲ್ಲಿನ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುವುದು. ಇದರಿಂದ ಹೊಟ್ಟೆ ತುಂಬಿದಂತೆ ಆಗುವುದು. ಆ್ಯಪಲ್ ಸೀಡರ್ ವಿನೇಗರ್ ಹೊಟ್ಟೆ ತುಂಬಿದಂತೆ ಮಾಡಿ, ಹಸಿವು ಕಡಿಮೆ ಮಾಡುವುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಹಾಕಿ ಕುಡಿಯಬೇಕು.

ಇನ್ನೊಂದು ವಿಧಾನ-

ಒಂದು ದೊಡ್ಡ ಲೋಟ ನೀರಿಗೆ ಎರಡು ದೊಡ್ಡಚಮಚ ಸೇಬಿನ ಶಿರ್ಕಾ (apple cider vinegar) ಬೆರೆಸಿ ಇದಕ್ಕೆ ಒಂದು ಮಧ್ಯಮಗಾತ್ರದ ಲಿಂಬೆಯರಸ, ಕೊಂಚ ದಾಲ್ಚಿನ್ನಿಪುಡಿ ಮತ್ತು ಕೊಂಚ ಜೇನನ್ನು ಬೆರೆಸಿ ಕಲಕಿ. ಈ ಪೇಯವನ್ನು ದಿನದ ಪ್ರಥಮ ಆಹಾರವಾಗಿ ಸೇವಿಸಿ. ಸುಮಾರು ಮುಕ್ಕಾಲು ಘಂಟೆಯ ಬಳಿಕ ಅಲ್ಪ ಉಪಾಹಾರ ಸೇವಿಸಿ.

ಮೆಂತೆ ನೀರು ಬಹಳ ಒಳ್ಳೆಯದು

ಮೆಂತೆ ನೀರು ಬಹಳ ಒಳ್ಳೆಯದು

ಮೆಂತೆಯು ತುಂಬಾ ಕಹಿಯಾಗಿರುವುದು. ಆದರೆ ಇದು ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವಿದ್ದು, ಕಾರ್ಬ್ರ್ಸ್ ಮತ್ತು ಕೊಲೆಸ್ಟ್ರಾಲ್ ಕಡಿಮೆಯಿದೆ. ಇದು ಕೊಬ್ಬು ಕರಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ತುಂಬಾ ಪರಿಣಾಮಕಾರಿ. ಒಂದು ಚಮಚ ಮೆಂತೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದು ಈ ನೀರನ್ನು ಬಿಸಿ ಮಾಡಿಕೊಂಡು ಕುಡಿಯಿರಿ.

English summary

Drinks That Can Help You Get Rid of Belly Fat

To gain pounds around the belly is easy but to lose them can be a nightmare and even more challenging than what you think. Therefore, it is important to know and understand that losing belly fat is a gradual process that requires the right combination of workout and diet. It cannot be achieved overnight, but it is certainly possible to shed all that belly fat that is making you doubt yourself with the simplest of lifestyle changes.
X
Desktop Bottom Promotion