For Quick Alerts
ALLOW NOTIFICATIONS  
For Daily Alerts

ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದರೆ- ದೇಹದ ತೂಕ ಇಳಿಸಬಹುದು!

|

ಭಾರತೀಯ ಅಡುಗೆ ಪದ್ಧತಿಯಲ್ಲಿ ಜೀರಿಗೆಗೆ ಮಹತ್ವದ ಸ್ಥಾನವಿದೆ. ಹಲವಾರು ಆರೋಗ್ಯಕಾರಿ ಗುಣಗಳಿಂದ ಇದು ಮಹತ್ವದ ಔಷಧಿ ಪದಾರ್ಥವಾಗಿಯೂ ಬಳಸಲ್ಪಡುತ್ತದೆ. ಜೀರಿಗೆಯ ನೀರು ಸೇವಿಸುವುದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದರಲ್ಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಸೇವಿಸಿದರೆ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು.

jeera water

ಖಾಲಿ ಹೊಟ್ಟೆಯಲ್ಲಿ ಜೀರಿಗೆಯ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಳಗೊಂಡು ಜೀರ್ಣ ಕ್ರಿಯೆ ಕ್ರಿಯೆ ಸುಧಾರಿಸುತ್ತದೆ. ಜೀರಿಗೆಯ ಉತ್ತಮ ಗುಣಗಳ ಬಗ್ಗೆ ಹೇಳುತ್ತಾ ಹೊರಟರೆ ಆ ಪಟ್ಟಿ ಮುಗಿಯುವುದಿಲ್ಲ. ಆದರೂ ಜೀರಿಗೆ ನೀರಿನ ಇನ್ನೊಂದು ಅತ್ಯಂತ ಮಹತ್ವದ ಉಪಯೋಗ ಯಾವುದು ಎಂಬುದನ್ನು ನೀವು ತಿಳಿದುಕೊಳ್ಳಲೇಬೇಕು. ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನಶೈಲಿಯ ಕಾರಣದಿಂದ ಬಹಳಷ್ಟು ಜನ ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೊತೆಗೆ ಹೆಚ್ಚಾದ ಕೊಬ್ಬು ಕರಗಿಸಲು ಆಗದೆ ಅದರಿಂದ ಇನ್ನೂ ಹೆಚ್ಚು ಅನಾರೋಗ್ಯಗಳಿಗೆ ಒಳಗಾಗುತ್ತಿದ್ದಾರೆ. ಆದರೆ ದೇಹದಲ್ಲಿನ ಬೇಡವಾದ ಕೊಬ್ಬು ಕರಗಿಸಲು ಜೀರಿಗೆ ನೀರು ರಾಮಬಾಣವಾಗಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಜೀರಿಗೆ ನೀರು ಸೇವನೆಯಿಂದ ಕೇವಲ ೧೫ ದಿನಗಳಲ್ಲಿ ದೇಹದಲ್ಲಿನ ಹೆಚ್ಚುವರಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡಬಹುದು ಎಂಬುದು ಆಶ್ಚರ್ಯವಾದರೂ ಸತ್ಯವಾಗಿದೆ.

ಜೀರಿಗೆ ನೀರು ತಯಾರಿಸುವುದು ಹೇಗೆ?

ಜೀರಿಗೆ ನೀರು ತಯಾರಿಸುವುದು ಹೇಗೆ?

ಜೀರಿಗೆ ನೀರು ತಯಾರಿಸುವುದು ಅತ್ಯಂತ ಸುಲಭ. ರಾತ್ರಿ ಮಲಗುವ ಮುನ್ನ ಒಂದು ಬಟ್ಟಲು ನೀರಲ್ಲಿ ಒಂಚೂರು ಜೀರಿಗೆ ಹಾಕಿ ಇಟ್ಟರೆ ಸಾಕು. ಬೆಳಗ್ಗೆ ಎದ್ದ ತಕ್ಷಣ ಜೀರಿಗೆ ನೀರು ಸಿದ್ಧವಾಗಿರುತ್ತದೆ. ನೀರಲ್ಲಿ ಜೀರಿಗೆ ಬೆರೆಸಿದಾಗ ಓಸ್ಮೊಸಿಸ್ ಪ್ರಕ್ರಿಯೆ ನಡೆಯುತ್ತದೆ. ನೀರಲ್ಲಿ ಚೆನ್ನಾಗಿ ನೆನೆದ ಜೀರಿಗೆ ಕಾಳುಗಳು ತಮ್ಮಲ್ಲಿನ ಪೋಷಕಾಂಶಗಳನ್ನು ನೀರಿಗೆ ಬಿಡುಗಡೆ ಮಾಡುತ್ತವೆ. ಈ ಪೋಷಕಾಂಶಗಳಿಂದ ತುಂಬಿದ ಜೀರಿಗೆ ನೀರು ಹಳದಿ ಬಣ್ಣದ್ದಾಗಿ ಕಾಣುತ್ತದೆ.

ಕಡಿಮೆ ಕ್ಯಾಲೋರಿ

ಕಡಿಮೆ ಕ್ಯಾಲೋರಿ

ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಜೀರಿಗೆ ನೀರು ದೇಹಕ್ಕೆ ಯಾವುದೇ ಅಪಾಯ ಉಂಟು ಮಾಡುವುದಿಲ್ಲ. ತೂಕ ಇಳಿಸುವ ಪ್ರಯತ್ನದಲ್ಲಿರುವಾಗ ಜೀರಿಗೆ ನೀರು ಸೇವನೆ ಅತ್ಯಂತ ಸೂಕ್ತವಾಗಿದೆ. ಒಂದು ಟೇಬಲ್ ಚಮಚೆ ಜೀರಿಗೆಯಲ್ಲಿ ಕೇವಲ ೭ ಕ್ಯಾಲೋರಿ ಶಕ್ತಿ ಇರುವುದರಿಂದ ಇದನ್ನು ಕರಗಿಸಲು ಹೆಚ್ಚುವರಿ ವ್ಯಾಯಾಮದ ಅವಶ್ಯಕತೆ ಇರುವುದಿಲ್ಲ. ಅತ್ಯುತ್ತಮ ಆಂಟಿ ಆಕ್ಸಿಡೆಂಟ್ ಅಧ್ಯಯನಗಳ ಪ್ರಕಾರ ಜೀರಿಗೆ ಅತ್ಯುತ್ತಮ ಆಂಟಿ ಆಕ್ಸಿಡೆಂಟ್‌ಗಳಾಗಿವೆ. ವಿಟಮಿನ್ ಎ, ಸಿ ಗಳಿಂದ ಸಮೃದ್ಧ ವಾಗಿರುವ ಜೀರಿಗೆಯಲ್ಲಿ ದೇಹಕ್ಕೆ ಅಗತ್ಯವಾದ ಮ್ಯಾಂಗನೀಸ್ ಮತ್ತು ತಾಮ್ರದ ಪೋಷಕಾಂಶಗಳೂ ಇವೆ. ಉತ್ತಮ ಆಂಟಿ ಆಕ್ಸಿಡೆಂಟ್‌ ಗಳಾಗಿರುವ ಜೀರಿಗೆ ದೇಹದಲ್ಲಿ ಬೇಡವಾದ ಆಕ್ಸಿಜನ್ ರ್‍ಯಾಡಿಕಲ್ ಅಂಶಗಳನ್ನು ನಿವಾರಿಸುತ್ತವೆ.

Most Read: ಖಾಲಿ ಹೊಟ್ಟೆಗೆ ಚಿಟಿಕೆಯಷ್ಟು ಕರಿಮೆಣಸಿನ ಪುಡಿ ಬೆರೆಸಿ ಕುಡಿದರೆ, ಆರೋಗ್ಯಕ್ಕೆ ಒಳ್ಳೆಯದು

ಚಯಾಪಚಯ ಕ್ರಿಯೆ ಸುಧಾರಣೆ

ಚಯಾಪಚಯ ಕ್ರಿಯೆ ಸುಧಾರಣೆ

ದೇಹದಲ್ಲಿ ನಿಧಾನ ಗತಿಯ ಚಯಾಪಚಯ (ಮೆಟಬಾಲಿಸಂ) ಪ್ರಕ್ರಿಯೆಯಿಂದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡುವುದು ಕಷ್ಟಕರವಾಗಿ ಪರಿಣಮಿಸುತ್ತದೆ. ನಿಧಾನ ಗತಿಯ ಚಯಾಪಚಯದಿಂದ ದೇಹವು ಸಕ್ಕರೆ ಹಾಗೂ ಕೊಬ್ಬಿನ ಅಂಶಗಳನ್ನು ಕರಗಿಸಲು ಸಾಧ್ಯವಾಗುವುದಿಲ್ಲ. ಇದರಿಂದ ತೂಕ ಹೆಚ್ಚಾಗುತ್ತಲೇ ಹೋಗುವ ಸಾಧ್ಯತೆ ಇರುತ್ತದೆ. ಆದರೆ ಇಂಥ ಸಮಸ್ಯೆಗಳಿಗೆ ಜೀರಿಗೆ ಉತ್ತಮ ಔಷಧಿಯಾಗಿದೆ ಎಂಬುದು ವೈಜ್ಞಾನಿಕ ಅಧ್ಯಯನಗಳಿಂದ ದೃಢಪಟ್ಟಿದೆ. ನಿಯಮಿತವಾಗಿ ಜೀರಿಗೆ ನೀರು ಸೇವಿಸಿದವರಲ್ಲಿ ದೇಹದ ಚಯಾಪಚಯ ಪ್ರಕ್ರಿಯೆ ಸುಧಾರಿಸಿ, ಲಿಪಿಡ್ ಸಂಖ್ಯೆಯಲ್ಲಿ ಸಮತೋಲನ ಕಂಡು ಬಂದಿದೆ. ಅಲ್ಲದೆ ಅತಿತೂಕ ಹೊಂದಿದವರಲ್ಲಿ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಕಡಿಮೆಯಾಗಿರುವುದು ಸಹ ಸಾಬೀತಾಗಿದೆ.

ಜೀರ್ಣಕ್ರಿಯೆ ಸುಧಾರಣೆ

ಜೀರ್ಣಕ್ರಿಯೆಗೆ ಒಳ್ಳೆಯದು

ಜೀರ್ಣಕ್ರಿಯೆಗೆ ಒಳ್ಳೆಯದು

ದೇಹದಲ್ಲಿನ ಜೀರ್ಣಕ್ರಿಯೆ ಉತ್ತಮವಾಗಿದ್ದರೆ ಮಾತ್ರ ವ್ಯಕ್ತಿ ಆರೋಗ್ಯದಿಂದಿರಲು ಸಾಧ್ಯ. ಜೀರಿಗೆ ನೀರು ಸೇವನೆಯಿಂದ ಕರುಳಿನ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಸಹಜವಾಗಿಯೇ ಸುಧಾರಿಸುತ್ತದೆ. ಉತ್ತಮ ಜೀರ್ಣಕ್ರಿಯೆಯಿಂದ ಚಯಾಪಚಯ ಕ್ರಿಯೆ ಸುಸೂತ್ರವಾಗಿ ದೇಹದಲ್ಲಿನ ಹೆಚ್ಚುವರಿ ಕೊಬ್ಬು ನಿವಾರಣೆಗೆ ಇದು ಸಹಕಾರಿಯಾಗುತ್ತದೆ. ಜೀರ್ಣಕ್ರಿಯೆಯ ಎಂಝೈಮ್‌ಗಳನ್ನು ಉತ್ತೇಜಿಸುವ ಗುಣ ಹೊಂದಿರುವ ಜೀರಿಗೆ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್ ತಡೆಗಟ್ಟಲು ಸಹಕಾರಿ

ಕೊಲೆಸ್ಟ್ರಾಲ್ ತಡೆಗಟ್ಟಲು ಸಹಕಾರಿ

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ಜೀರಿಗೆ ನೀರು ಸೇವನೆಯಿಂದ ಇಂಥ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ಹೋಗಲಾಡಿಸಬಹುದು. ಅಲ್ಲದೆ ದೇಹಕ್ಕೆ ಬೇಕಾದ ಉತ್ತಮ ಕೊಲೆಸ್ಟರಾಲ್ ಅಂಶಗಳ ಉತ್ಪಾದನೆಯನ್ನು ಜೀರಿಗೆ ಹೆಚ್ಚಿಸುತ್ತದೆ. ಇದರಿಂದ ಸೊಂಟದ ಸುತ್ತ ಶೇಖರವಾಗಿರುವ ಕೆಟ್ಟ ಫ್ಯಾಟ್ ಅನ್ನು ನಿವಾರಿಸಿ ಆರೋಗ್ಯವಂತರಾಗಲು ಸಹಾಯಕವಾಗುತ್ತದೆ.

Most Read: ಬ್ರೇಕ್‍ಫಾಸ್ಟ್‌ನ ಮೊದಲೇ ಖಾಲಿ ಹೊಟ್ಟೆಗೆ ಸೇವಿಸಬೇಕಾದ ಆಹಾರಗಳು

ದೇಹದಲ್ಲಿ ವಿಷಕಾರಿ ಅಂಶಗಳ ನಿವಾರಣೆ

ದೇಹದಲ್ಲಿ ವಿಷಕಾರಿ ಅಂಶಗಳ ನಿವಾರಣೆ

ನಾವು ಬದುಕುವ ಪರಿಸರದಲ್ಲಿ ಹಲವಾರು ಕಡೆ ವಿಷಕಾರಿ ಅಂಶಗಳು ಇದ್ದೇ ಇರುತ್ತವೆ. ಉಸಿರಾಡುವ ಗಾಳಿ, ಕುಳಿತುಕೊಳ್ಳುವ ಕುರ್ಚಿ ಅಥವಾ ಕೆಲಸದ ಮೇಜು ಹೀಗೆ ಎಲ್ಲಿ ಬೇಕಾದರೂ ಕೀಟಾಣುಗಳು ಇರಬಹುದು. ಅನಾರೋಗ್ಯಕರ ಜೀವನ ಶೈಲಿಯಿಂದ ಇಂಥ ವಿಷಕಾರಿ ಅಂಶಗಳು ದೇಹದಲ್ಲಿ ಶೇಖರಣೆಯಾಗುವ ಸಾಧ್ಯತೆಗಳಿರುತ್ತವೆ. ಈ ವಿಷಕಾರಿ ಅಂಶಗಳಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಜೊತೆಗೆ ಅಜೀರ್ಣತೆ ಉಂಟಾಗಿ ಬೇಡವಾದ ಕೊಬ್ಬಿನಂಶ ಹೆಚ್ಚಳವಾಗುತ್ತದೆ. ಆದರೆ ಜೀರಿಗೆಯ ನೀರು ಸೇವನೆಯಿಂದ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ಆರೋಗ್ಯಕರ ಜೀವನ ನಮ್ಮದಾಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ಜೀರಿಗೆ ಬಳಸಿ ತೂಕ ಇಳಿಸಿಕೊಳ್ಳುವ ಮತ್ತಷ್ಟು ವಿಧಾನಗಳು

ಮೊಸರಿನೊಂದಿಗೆ ಜೀರಿಗೆ

ಮೊಸರಿನೊಂದಿಗೆ ಜೀರಿಗೆ

ತೂಕ ಇಳಿಸಿಕೊಳ್ಳುವಾಗ ಊಟದೊಂದಿಗೆ ಮೊಸರು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಆದರೆ ಮೊಸರಿಗೆ ಒಂದು ಚಮಚ ಜೀರಿಗೆ ಪುಡಿಯನ್ನು ಸೇರಿಸಿ ಸೇವಿಸಿದರೆ ತೂಕ ಇಳಿಸಿಕೊಳ್ಳುವ ಪ್ರಕ್ರಿಯೆ ಇನ್ನೂ ಸುಲಭವಾಗುತ್ತದೆ.

ನಿಂಬೆ, ಶುಂಠಿ ಮತ್ತು ಜೀರಿಗೆ

ನಿಂಬೆ, ಶುಂಠಿ ಮತ್ತು ಜೀರಿಗೆ

ನಿಂಬೆ ಹಾಗೂ ಶುಂಠಿಗಳ ಸೇವನೆಯು ಸಹ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ. ತುರಿದ ಶುಂಠಿಯನ್ನು ಇತರ ತರಕಾರಿಗಳೊಂದಿಗೆ ಮಿಕ್ಸ್ ಮಾಡಿ ನೀರಲ್ಲಿ ಕುದಿಸಬೇಕು. ಇದಕ್ಕೆ ಒಂಚೂರು ಜೀರಿಗೆ ಪುಡಿಯನ್ನು ಹಾಕಿ ಕುಡಿದರೆ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಿನ ಊಟದಲ್ಲಿ ಬಳಸಬಹುದು.

Most Read: ಜೀರಿಗೆ ಬೆರೆಸಿದ ಬೆಲ್ಲದ ನೀರು, ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ

ಜೀರಿಗೆ ನಿಂಬೆ ನೀರು

ಜೀರಿಗೆ ನಿಂಬೆ ನೀರು

ದೇಹದ ಬೊಜ್ಜು ಇಳಿಸಲು ಜೀರಿಗೆ ಹಾಗೂ ನಿಂಬೆ ನೀರು ಸೇವನೆ ಮತ್ತೊಂದು ಸುಲಭ ವಿಧಾನವಾಗಿದೆ. ಎರಡು ಟೇಬಲ್ ಚಮಚದಷ್ಟು ಜೀರಿಗೆ ಕಾಳುಗಳನ್ನು ರಾತ್ರಿ ನೀರಿಗೆ ಬೆರೆಸಿ ಇಡಬೇಕು. ಬೆಳಗ್ಗೆ ಈ ನೀರನ್ನು ಕುದಿಸಿ ಇದಕ್ಕೆ ಒಂದು ನಿಂಬೆ ಹಣ್ಣಿನ ರಸ ಸೇರಿಸಬೇಕು. ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನಿಂಬೆ ಹಾಗೂ ಜೀರಿಗೆ ನೀರು ಸೇವಿಸುತ್ತಿದ್ದರೆ ಅತಿ ಶೀಘ್ರ ಆರೋಗ್ಯಕರ ಪರಿಣಾಮಗಳನ್ನು ನೀವು ಕಾಣಬಹುದು.

Read more about: jeera water health
English summary

Drink jeera water every morning in empty stomach to lose weight

In our effort to lose weight and lead a healthy life, we don’t refrain from trying different healthy concoctions. Not only do they promise numerous health benefits, but also weight loss. One such healthy drink is jeera (cumin) water. Have jeera water every day for a week and the results were amazing.
X
Desktop Bottom Promotion