ನಿಮಗೆ ಜ್ವರ ಅಥವಾ ಶೀತ ಇದ್ದಾಗ ಸಂಗಾತಿ ಜೊತೆ ಸೆಕ್ಸ್ ಮಾಡಬೇಡಿ!

Subscribe to Boldsky

ಚಳಿಗಾಲದ ಈ ಸಮಯದಲ್ಲಿ ಪ್ರಕೃತಿಯನ್ನು ನೋಡುವುದೇ ಒಂದು ಸೊಬಗು. ಅದಾಗಲೇ ಸಣ್ಣ ಸಣ್ಣ ನೀರ ಹನಿಗಳಿಂದ ಮರಗಳು ಮುತ್ತಿನಂತೆ ಸಿಂಗರಿಸಲ್ಪಟ್ಟಿರುವುದು. ಇಂತಹ ಸಮಯದಲ್ಲಿ ಮನುಷ್ಯನಿಗೆ ಕೆಲವೊಂದು ಸಣ್ಣಪುಟ್ಟ ಅನಾರೋಗ್ಯಗಳು ಕಾಡುವುದು ಕೂಡ ಸಹಜ.

ಇದರಲ್ಲಿ ಪ್ರಮುಖವಾಗಿ ಶೀತ. ಈ ಸಮಯದಲ್ಲಿ ಹೆಚ್ಚಿನವರು ಶೀತದಿಂದ ಬಳಲುತ್ತಿರುವವರು. ನೀವು ಎಲ್ಲಿ ನೋಡಿದರೂ ಸೀನುವವರೇ ಕಂಡುಬರುವರು. ಇಂತಹ ಸಮಯದಲ್ಲಿ ಪ್ರತಿಯೊಬ್ಬರಿಗೂ ರಾತ್ರಿ ವೇಳೆ ಮೈ ಬೆಚ್ಚಗೆ ಇರಬೇಕೆಂದು ಬಯಸುವರು. ಅದರಲ್ಲೂ ಸಂಗಾತಿಗಳು ಸೆಕ್ಸ್ ನಲ್ಲಿ ತೊಡಗಿಕೊಳ್ಳುವರು.

ಶೀತ, ವೈರಸ್ ಅಥವಾ ಸೋಂಕು ಇರುವಾಗ ಸೆಕ್ಸ್ ಬೇಡ

ಶೀತ, ವೈರಸ್ ಅಥವಾ ಸೋಂಕು ಇರುವಾಗ ಸೆಕ್ಸ್ ಬೇಡ

ಆದರೆ ಶೀತ, ವೈರಸ್ ಅಥವಾ ಸೋಂಕು ಇರುವಾಗ ಸೆಕ್ಸ್ ನಲ್ಲಿ ತೊಡಗಿಕೊಳ್ಳುವುದು ಸರಿಯೇ ಎನ್ನುವ ಪ್ರಶ್ನೆಯಿದೆ. ಸೆಕ್ಸ್ ವೇಳೆ ಲೈಂಗಿಕವಲ್ಲದ ಕೆಲವೊಂದು ರೋಗಗಳು ಹರಡುತ್ತದೆ ಎನ್ನುವಂತಹ ತಪ್ಪು ಮಾಹಿತಿಗಳು ಕೂಡ ಇದೆ. ಜ್ವರ ಇರುವವರ ವೀರ್ಯದಿಂದ ವೈರಸ್ ಹರಡುವುದು ಮತ್ತು ಸೆಕ್ಸ್ ವೇಳೆ ಬೆವರು ಹರಿದುಹೋದರೆ ಜ್ವರ ಕಡಿಮೆಯಾಗುವುದು ಎನ್ನುವ ಮಾಹಿತಿಗಳು ಇವೆ. ಆದರೆ ಇವೆರಡೂ ತಪ್ಪು ಮಾಹಿತಿಗಳಾಗಿವೆ.

ಅನಾರೋಗ್ಯದಿಂದ ಇರುವಾಗ ಸೆಕ್ಸ್ ನಲ್ಲಿ ತೊಡಗಿಕೊಳ್ಳಬೇಡಿ

ಅನಾರೋಗ್ಯದಿಂದ ಇರುವಾಗ ಸೆಕ್ಸ್ ನಲ್ಲಿ ತೊಡಗಿಕೊಳ್ಳಬೇಡಿ

ಸರಳ ನಿಯಮವೆಂದರೆ ಅನಾರೋಗ್ಯದಿಂದ ಇರುವಾಗ ಸೆಕ್ಸ್ ನಲ್ಲಿ ತೊಡಗಿಕೊಳ್ಳಬೇಡಿ. ಇಬ್ಬರು ಕೂಡ ಒಂದೇ ರೀತಿಯಲ್ಲಿ ಅನಾರೋಗ್ಯದಿಂದ ಬಳಲುತ್ತಲಿದ್ದರೆ ಆಗ ಸೆಕ್ಸ್ ನಲ್ಲಿ ತೊಡಗಿಕೊಳ್ಳುವುದು ಸರಿಯಾದ ಕ್ರಮವಲ್ಲ. ಸೆಕ್ಸ್ ನಿಂದಾಗಿ ನಿಮ್ಮ ಅನಾರೋಗ್ಯವು ದೂರವಾಗುವುದಿಲ್ಲ. ಇದರಿಂದ ನಿಮ್ಮ ಸಂಗಾತಿಯು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬಹುದು. ಸೆಕ್ಸ್ ಎನ್ನುವುದು ಲೈಂಗಿಕ ಜೀವನದ ಪ್ರಮುಖ ಅಂಗವಾಗಿದ್ದರೂ ಅನಾರೋಗ್ಯದ ವೇಳೆ ನೀವು ಈ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಈ ಲೇಖನದಲ್ಲಿ ಅನಾರೋಗ್ಯದ ವೇಳೆ ಸೆಕ್ಸ್ ನಡೆಸುವಾಗ ನೀವು ತಿಳಿದಿರಬೇಕಾದ ಐದು ವಿಚಾರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕು ಆಗಿರಬಹುದು. ಮುಂದಿನ ಸಲ ನಿಮ್ಮ ಸಂಗಾತಿಯು ನನಗೆ ಸ್ವಲ್ಪ ಜ್ವರ ಇದೆ. ಆದರೆ ಚೆನ್ನಾಗಿದ್ದೇನೆ ಎಂದು ಹೇಳಿದರೆ ಆಗ ನೀವು ಸೆಕ್ಸ್ ನಲ್ಲಿ ತೊಡಗುವ ಮೊದಲು ಇವುಗಳನ್ನು ಪರಿಗಣಿಸಲೇಬೇಕು.

ಶೀತ ಮತ್ತು ಜ್ವರವು ಲೈಂಗಿಕ ದ್ರವದ ಮೂಲಕ ಹರಡುವುದಿಲ್ಲ

ಶೀತ ಮತ್ತು ಜ್ವರವು ಲೈಂಗಿಕ ದ್ರವದ ಮೂಲಕ ಹರಡುವುದಿಲ್ಲ

ಸಾಮಾನ್ಯ ಶೀತ ಅಥವಾ ಜ್ವರವು ವೀರ್ಯ ಅಥವಾ ಯೋನಿಯ ದ್ರವದಿಂದ ಹರಡುವುದಿಲ್ಲ. ನಿಮಗೆ ಯಾವುದೇ ರೀತಿಯ ಲೈಂಗಿಕ ಕಾಯಿಲೆಗಳು ಇದ್ದರೆ ಇದು ಹರಡಬಹುದು. ಆದರೆ ಇದು ಹಾಗೆ ಹರಡುವುದಿಲ್ಲ. ಆದರೆ ಅನಾರೋಗ್ಯದ ವೇಳೆ ಸೆಕ್ಸ್ ನಡೆಸುವುದು ಅಪಾಯವಿಲ್ಲವೆಂದು ನೀವು ಭಾವಿಸಬೇಡಿ.

ಸೆಕ್ಸ್ ನಡೆಸುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುವಿರಿ

ಸೆಕ್ಸ್ ನಡೆಸುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗುವಿರಿ

ಸೆಕ್ಸ್ ಅನ್ನುವುದು ತುಂಬಾ ದ್ರವನ್ನು ಹೊರ ಹಾಗೂ ಒಳ ಹಾಕುವಂತಹ ಕ್ರಿಯೆ. ಇದರಲ್ಲಿ ಬಾಯಿಯ ಜೊಲ್ಲುರಸವು ಇರುವುದು. ಸಾಂಕ್ರಾಮಿಕ ರೋಗವಿದ್ದರೆ ಆಗ ನೀವು ಸೆಕ್ಸ್ ನಲ್ಲಿ ತೊಡಗಬೇಡಿ. ಯಾಕೆಂದರೆ ನಿಮ್ಮ ಜನನೇಂದ್ರಿಯಗಳು ಇದಕ್ಕೆ ಸಹಕರಿಸುವುದಿಲ್ಲವೆಂದಲ್ಲ. ಯಾವುದೇ ರೀತಿಯ ಕೆಮ್ಮು ಅಥವಾ ಸೀನುವಿನಿಂದಾಗಿ ಸಾಂಕ್ರಾಮಿಕ ರೋಗವು ನಿಮ್ಮಿಂದ ಮತ್ತೊಬ್ಬರಿಗೆ ಹರಡಬಹುದು.ಜ್ವರದಿಂದ ಬಳಲುತ್ತಿರುವ ವ್ಯಕ್ತಿಯೊಂದಿಗೆ ಯಾರಾದರೂ ಯಾಕೆ ಸೆಕ್ಸ್ ನಲ್ಲಿ ತೊಡಗಿಕೊಳ್ಳುವರು? ಆದರೆ ಕೆಲವೊಂದು ಜನರ ಪ್ರಕಾರ ಹೀಗೆ ಸೆಕ್ಸ್ ನಡೆಸಿದರೂ ಬಳಿಕ ಸ್ನಾನ ಮಾಡಬೇಕು ಅಥವಾ ಸ್ವಚ್ಛತೆ ಕಾಪಾಡಬೇಕು. ಆದರೆ ಕೆಲವೊಂದು ಕೀಟಾಣುಗಳು ದೇಹದ ಹೊರಗಡೆ ಸುಮಾರು 72 ಗಂಟೆಗಳ ಕಾಲ ಬದುಕುವುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಈ ಕೀಟಾಣುಗಳು ನಿಮ್ಮ ಬಾಯಿ ಮೂಲಕವಾಗಿ ದೇಹದೊಳಗೆ ಸೇರಿಕೊಳ್ಳಬಹುದು. ಇದರಿಂದಾಗಿ ನೀವು ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗಬಹುದು. ಸಾಂಕ್ರಾಮಿಕ ರೋಗವಿರುವಂತಹ ವ್ಯಕ್ತಿಯು ಸ್ಪರ್ಶ ಮಾಡಿದರೂ ಅದರಿಂದ ವೈರಸ್ ಹಬ್ಬುವುದು. ಇದರಿಂದ ನೀವು ಕಾಂಡೋಮ್ ಬಳಕೆ ಮಾಡಿ ಸೆಕ್ಸ್ ನಡೆಸಿದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ.

Most Read:ಮುಜುಗರ ಉಂಟು ಮಾಡುವ ಸಮಸ್ಯೆ-ಸೆಕ್ಸ್ ವೇಳೆ ಮೂತ್ರ ವಿಸರ್ಜನೆ!

ಸೆಕ್ಸ್ ನಿಂದ ಜ್ವರ ಕಡಿಮೆಯಾಗಲ್ಲ!

ಸೆಕ್ಸ್ ನಿಂದ ಜ್ವರ ಕಡಿಮೆಯಾಗಲ್ಲ!

ಸೆಕ್ಸ್ ವೇಳೆ ಬೆವರು ಬಂದರೆ ಆಗ ಅದು ಜ್ವರವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ದೊಡ್ಡ ಮಿಥ್ಯವೆಂದು ಹೆಚ್ಚಿನವರಿಗೆ ತಿಳಿದಿಲ್ಲ. ಬೆವರಿದರೆ ಅದರಿಂದ ಜ್ವರ ಕಡಿಮೆಯಾಗುವುದು ಎನ್ನುವುದು ದೊಡ್ಡ ಮಟ್ಟಿನ ತಪ್ಪು ತಿಳುವಳಿಕೆ. ಅತಿಯಾಗಿ ವ್ಯಾಯಾಮ ಮಾಡಿ ಅಥವಾ ಕಂಬಳಿಗಳನ್ನು ಹೊದ್ದುಕೊಂಡು ಮಲಗಿ ಬೆವರು ಬಂದರೆ ಅದರಿಂದ ಜ್ವರ ಕಡಿಮೆಯಾಗಲ್ಲ. ದೇಹದಲ್ಲಿ ಸೋಂಕಿಗೆ ಪ್ರತಿಕ್ರಿಯೆ ನೀಡಲು ದೇಹದ ತಾಪಮಾನವು ಹೆಚ್ಚಾಗಿರುವುದು. ದೇಹವನ್ನು ಪ್ರವೇಶಿಸಿರುವ ವೈರಸ್ ವಿರುದ್ಧ ಪ್ರತಿರೋಧಕ ವ್ಯವಸ್ಥೆಯು ಹೋರಾಡುವಾಗ ಜ್ವರ ಬರುವುದು. ಬೆವರಿನಿಂದ ಜ್ವರ ಕಡಿಮೆಯಾಗುತ್ತದೆ ಎನ್ನುವುದು ತಪ್ಪು.

ಸೆಕ್ಸ್ ವೇಳೆ ಬರುವಂತಹ ಬೆವರಿನಿಂದ ನೀವು ಜ್ವರವನ್ನು ನಿವಾರಿಸಬಹುದು ಎಂದು ಹೇಳುವುದು ನೀವು ವ್ಯಾಯಾಮದಿಂದ ಬೆವರು ತರಿಸಿದಂತೆ. ಇದರಿಂದ ನೀವು ಜ್ವರದಿಂದ ಗುಣಮುಖರಾಗುವ ಸಾಧ್ಯತೆಯು ಕಡಿಮೆ ಆಗುವುದು. ಜ್ವರದಿಂದಾಗಿ ನಿಮ್ಮ ದೇಹವು ಅದಾಗಲೇ ತುಂಬಾ ಬಳಲಿರುವುದು. ಮತ್ತೆ ಅದರ ಮೇಲೆ ಒತ್ತಡ ಹಾಕಿದರೆ ಒಳ್ಳೆಯದಲ್ಲ. ನೀವು ಜ್ವರದಿಂದ ಸಂಪೂರ್ಣವಾಗಿ ಗುಣಮುಖರಾಗಿ, ದೇಹದ ತಾಪಮಾನವು ಸಾಮಾನ್ಯಕ್ಕೆ ಬರುವ ತನಕ ನೋ ಸೆಕ್ಸ್...

ಹೌದು, ಅನಾರೋಗ್ಯದ ವೇಳೆ ಹಸ್ತಮೈಥುನ ಸುರಕ್ಷಿತ

ಹೌದು, ಅನಾರೋಗ್ಯದ ವೇಳೆ ಹಸ್ತಮೈಥುನ ಸುರಕ್ಷಿತ

ಹಸ್ತಮೈಥುನವು ದೇಹದ ಪ್ರಮುಖ ದ್ರವ ಹಾಗೂ ಕೆಲವೊಂದು ಖನಿಜಾಂಶಗಳನ್ನು ಹೊರಹಾಕುವ ಕಾರಣದಿಂದಾಗಿ ಅನಾರೋಗ್ಯದ ವೇಳೆ ಇದನ್ನು ಮಾಡಬಾರದು ಎನ್ನುವ ಮಿಥ್ಯವಿದೆ. ನೀವು ತುಂಬಾ ಗಡುಸಾಗಿ ಹಸ್ತಮೈಥುನ ಮಾಡಿಕೊಳ್ಳುತ್ತಲಿದ್ದರೆ ಮತ್ತು ಇದರ ಬಳಿಕ ನಿಮಗೆ ಐದು ಗಂಟೆಗಳ ನಿದ್ರೆ ಬೇಕೆಂದಿದ್ದರೆ ಆಗ ನೀವು ವ್ಯಾಯಾಮದಂತೆ ಇದನ್ನು ಕಡೆಗಣಿಸಬೇಕು. ಆದರೆ ಯೋನಿ ದ್ರವ ವಿಸರ್ಜನೆ ಮತ್ತು ಖನಿಜಾಂಶ ಹೊರಹಾಕುವ ವಿಚಾರದಲ್ಲಿ ಇದು ಉತ್ತಮ. ಹಸ್ತಮೈಥುನ ವೇಳೆ ಮಹಿಳೆಯರ ದೇಹದಿಂದ ಪೋಷಕಾಂಶಗಳು ಹೊರಹೋಗುತ್ತದೆ ಎನ್ನುವ ಬಗ್ಗೆ ತುಂಬಾ ಕಡಿಮೆ ಅಧ್ಯಯನಗಳು ನಡೆದಿವೆ. ಹಸ್ತಮೈಥುನ ವೇಳೆ ಹೊರಬೀಳುವ ಪೋಷಕಾಂಶದ ಪ್ರಮಾಣವು ತುಂಬಾ ಕಡಿಮೆ. ನೀವು ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳಿ ಮತ್ತು ಪ್ರತಿರೋಧಕ ವ್ಯವಸ್ಥೆ ಬಲಪಡಿಸುವ ಸತು ಇರುವ ಆಹಾರ ಸೇವಿಸಿ. ಆದರೆ ಸಂಗಾತಿ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸರಿಯಾದ ಕ್ರಮವಲ್ಲ. ಇದು ಸೋಂಕು ಅಥವಾ ವೈರಸ್ ಹರಡುವುದು.

ಅನಾರೋಗ್ಯದ ವೇಳೆ ಸೆಕ್ಸ್ ನಡೆಸಿದರೆ ಪ್ರತಿರೋಧಕ ವ್ಯವಸ್ಥೆ ಬಲಗೊಳ್ಳದು

ಅನಾರೋಗ್ಯದ ವೇಳೆ ಸೆಕ್ಸ್ ನಡೆಸಿದರೆ ಪ್ರತಿರೋಧಕ ವ್ಯವಸ್ಥೆ ಬಲಗೊಳ್ಳದು

ನಿಯಮಿತವಾಗಿ ಸೆಕ್ಸ್ ನಡೆಸಿದರೆ ಆಗ ನಿಮ್ಮ ಪ್ರತಿರೋಧಕ ವ್ಯವಸ್ಥೆಯು ಬಲಗೊಂಡು, ನಿಮ್ಮ ಅನಾರೋಗ್ಯವು ಕಡಿಮೆಯಾಗುವುದು ಎಂದು ನೀವು ತಿಳಿಯಬಹುದು. ಆದರೆ ಇದು ನೀವು ಅದಾಗಲೇ ಅನಾರೋಗ್ಯಕ್ಕೆ ಒಳಗಾಗಿದ್ದರೆ ಆಗ ನೀವು ಸೆಕ್ಸ್ ನಡೆಸಿದರೂ ಪ್ರತಿರೋಧಕ ವ್ಯವಸ್ಥೆಯು ಬಲಗೊಳ್ಳದು. ಇದು ಯಾವುದೇ ನಿರ್ವಹಣೆ ಮಾಡದೆ ಇರುವಂತಹ ಯಂತ್ರದೊಳಗೆ ಪದೇ ಪದೇ ಎಣ್ಣೆ ಸುರಿದಂತೆ ಆಗುವುದು. ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇರುವುದು ನಿಮಗೆ ನೆರವಾಗದು.

Most Read:ಮುಟ್ಟಿನ ದಿನಗಳಲ್ಲಿ ಸೆಕ್ಸ್- ಇವೆಲ್ಲಾ ಸಂಗತಿಗಳು ನೆನಪಿರಲಿ!

ಅಧ್ಯಯನದ ಪ್ರಕಾರ

ಅಧ್ಯಯನದ ಪ್ರಕಾರ

2015ರಲ್ಲಿ ನಡೆಸಿರುವ ಅಧ್ಯಯನದ ಪ್ರಕಾರ ನಿಯಮಿತವಾಗಿ ಸೆಕ್ಸ್ ನಡೆಸಿದರೆ ಅದರಿಂದ ಮಹಿಳೆಯರಿಗೆ ಒಳ್ಳೆಯದು. ಇದು ಅವರಲ್ಲಿ ಫಲವತ್ತತೆ ಸಾಧ್ಯತೆಯನ್ನು ಹೆಚ್ಚಿಸುವುದು. ಆದರೆ ಗರ್ಭಧರಿಸಲು ನಿಮ್ಮ ಪ್ರತಿರೋಧಕ ವ್ಯವಸ್ಥೆಯು ಬಲವಾಗಿರಬೇಕು. ಇಲ್ಲವಾದಲ್ಲಿ ಅದು ವೀರ್ಯವನ್ನು ಕೂಡ ಬಾಹ್ಯವಸ್ತುವೆಂದು ಪರಿಗಣಿಸಿ ಗರ್ಭಧಾರಣೆಗೆ ತಡೆಯಾಗುವುದು. ಪ್ರತಿರೋಧಕ ವ್ಯವಸ್ಥೆಯು ಬಲಿಷ್ಠವಾಗಿದ್ದರೆ ಆಗ ಸೋಂಕಿನ ಸಾಧ್ಯತೆಯು ಕಡಿಮೆ ಇರುವುದು. ಗರ್ಭಧಾರಣೆಯು ಯಶಸ್ವಿಯಾಗಿ ಆಗುವುದು. ಆದರೆ ಅನಾರೋಗ್ಯದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ನಿಮ್ಮ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು.

For Quick Alerts
ALLOW NOTIFICATIONS
For Daily Alerts

    English summary

    Dont have sex while you are sick with a fever or cold!

    In general, the rule is: don't have sex while you're sick. I know, it's sucky, but unless you're both down with the same thing at the one time, it's likely a poor plan, and even then you may just keep passing it back and forth if immunity doesn't develop. Sex will not cure your ills, and likely also won't endear you to your lover if it ends up making them miserable and sniffly too.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more