For Quick Alerts
ALLOW NOTIFICATIONS  
For Daily Alerts

ಸೀತಾಫಲ ತಿಂದರೆ ಶೀತವಾಗುವುದಿಲ್ಲ!, ಭಯಬಿಟ್ಟು ಹೊಟ್ಟೆ ತುಂಬಾ ತಿನ್ನಿ...

By Hemanth
|

ಪ್ರಕೃತಿಯಲ್ಲಿ ಸಿಗುವಂತಹ ಪ್ರತಿಯೊಂದು ಹಣ್ಣುಹಂಪಲುಗಳಲ್ಲಿ ಅದರದ್ದೇ ಆಗಿರುವಂತಹ ಪೋಷಕಾಂಶಗಳು ಇವೆ. ಇದರಿಂದ ಹಲವಾರು ರೀತಿಯ ಲಾಭಗಳು ದೇಹಕ್ಕೆ ಸಿಗುವುದು. ಆದರೆ ಕೆಲವೊಂದು ಸಲ ಯಾವುದಾದರೂ ಹಣ್ಣನ್ನು ತಿನ್ನುವಾಗ ಹಿರಿಯರು ಅದನ್ನು ತಡೆದಿರಬಹುದು. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಹಣ್ಣುಗಳು ಆರೋಗ್ಯಕಾರಿಯಾಗಿದ್ದರೂ ಸಹಿತ ಕೆಲವೊಂದು ಹಣ್ಣುಗಳು ತುಂಬಾ ಉಷ್ಣ ಹಾಗೂ ಇನ್ನು ಕೆಲವು ಹಣ್ಣುಗಳು ತಂಪನ್ನು ಉಂಟು ಮಾಡುವುದು. ಇದರಿಂದಾಗಿ ಕೆಲವು ಹಣ್ಣುಗಳನ್ನು ತಿನ್ನುವಾಗಲು ನಾವು ಎಚ್ಚರಿಕೆ ವಹಿಸಬೇಕು.

ಕೆಲವು ಹಣ್ಣುಗಳು ಶೀತ ಹಾಗೂ ಜ್ವರ ಕೂಡ ಉಂಟು ಮಾಡಬಹುದು. ಮಾವಿನಹಣ್ಣು ಮತ್ತು ಪಪ್ಪಾಯಿ ತುಂಬಾ ಉಷ್ಣ ಹಣ್ಣುಗಳು ಎಂದು ಪರಿಗಣಿಸಲಾಗಿದೆ. ಬಾಳೆಹಣ್ಣು ಮತ್ತು ಸೀತಾಫಲದಂತಹ ಹಣ್ಣುಗಳು ತುಂಬಾ ತಂಪು. ಇದನ್ನು ತಿನ್ನುವುದರಿಂದ ಕೆಲವರಿಗೆ ಶೀತ ಉಂಟಾಗಬಹುದು. ಆದರೆ ಇದೆಲ್ಲವೂ ವೈಜ್ಞಾನಿಕವಾಗಿ ಸಾಬೀತಾಗಿದೆಯಾ ಎಂದು ನಮಗೆ ತಿಳಿದಿಲ್ಲ. ಇದರ ಬಗ್ಗೆ ತಿಳಿಯಲು ಮುಂದಕ್ಕೆ ಓದಿಕೊಳ್ಳಿ.

ಹಣ್ಣುಗಳು ಉಷ್ಣ ಅಥವಾ ತಂಪು ಎಂದು ವಿಂಗಡಿಸಿರುವುದು ಹೇಗೆ?
ಆಯುರ್ವೇದದ ಪ್ರಕಾರ ಎಲ್ಲಾ ಹಣ್ಣುಗಳನ್ನು ಉಷ್ಣ ಹಾಗೂ ತಂಪು ಹಣ್ಣುಗಳಾಗಿ ವಿಂಗಡಿಸಲಾಗಿದೆ. ನಮ್ಮ ದೇಹಕ್ಕೆ ಹಣ್ಣುಗಳಿಂದ ಆಗುವಂತಹ ಪರಿಣಾಮ ಪರಿಗಣಿಸಿ ಇವುಗಳನ್ನು ವಿಂಗಡಿಸಲಾಗಿದೆ. ಕೆಲವು ಹಣ್ಣುಗಳು ದೇಹದೊಳಗಿನ ಉಷ್ಣತೆ ಹೆಚ್ಚಿಸುವುದು. ಇನ್ನು ಕೆಲವು ಹಣ್ಣುಗಳು ಕಡಿಮೆ ಮಾಡುವುದು. ಇದರಿಂದಾಗಿ ಅವುಗಳನ್ನು ಉಷ್ಣ ಹಾಗೂ ತಂಪು ಎಂದು ಪರಿಗಣಿಸಲಾಗಿದೆ.

ಸೀತಾಫಲವು ತಂಪುಕಾರಿಯೇ?
ತುಂಬಾ ರುಚಿ ಹಾಗೂ ಸಿಹಿಯಾಗಿರುವಂತಹ ದಪ್ಪಸಿಪ್ಪೆಯ ಸೀತಾಫಲವು ತುಂಬಾ ಮೃಧು ಹಾಗೂ ಕ್ರೀಮ್ ನಂತಿರುವುದು. ಬಿಳಿ ತಿರುಳಿನೊಳಗಡೆ ಬೀಜಗಳಿರುವುದು. ಸಿಹಿಯೊಂದಿಗೆ ಇದು ತುಂಬಾ ತಂಪುಕಾರಿ ಹಣ್ಣು. ಇದು ದೇಹದೊಳಗಿನ ಉಷ್ಣತೆ ಕಡಿಮೆ ಮಾಡುವುದು. ಇದರಿಂದಾಗಿ ಇದು ಶೀತವನ್ನುಂಟು ಮಾಡುವುದು ಎನ್ನಲಾಗಿದೆ.

ಸೀತಾಫಲವು ಶೀತವನ್ನುಂಟು ಮಾಡುವುದೇ?
ಖಂಡಿತವಾಗಿಯೂ ಇಲ್ಲ. ಈ ಹಣ್ಣು ಶೀತವನ್ನು ಉಂಟು ಮಾಡುವುದಿಲ್ಲವೆಂದು ಅರ್ಥಮಾಡಿಕೊಳ್ಳಲು ಹೆಚ್ಚಿನ ಜನರಿಗೆ ಸಾಧ್ಯವಾಗುವುದಿಲ್ಲ. ಸಾಮಾನ್ಯ ಶೀತವು ವೈರಸ್ ನಿಂದಾಗಿ ಬರುವುದು. ಯಾವುದೇ ಹಣ್ಣುಗಳನ್ನು ತಿಂದರೆ ಇದು ಬರುವುದಿಲ್ಲ. ಇದರಿಂದ ಸೀತಾಫಲವು ಶೀತ ಉಂಟು ಮಡುವುದೆಂಬ ವಿಚಾರ ಬಿಟ್ಟುಬಿಡಿ...

ಹಾಗಾದರೆ ಇದು ನಿಜವಾಗಿಯೂ ಸುಳ್ಳು ಸುದ್ದಿಯೇ?

ಹಾಗಾದರೆ ಇದು ನಿಜವಾಗಿಯೂ ಸುಳ್ಳು ಸುದ್ದಿಯೇ?

ಸಾಮಾನ್ಯ ಶೀತ ಮತ್ತು ತಂಪಾದ ಹಣ್ಣುಗಳ ನಡುವಿನ ಸಂಬಂಧವು ಸಾವಿರಾರು ವರ್ಷಗಳು ಹಳೆಯದ್ದಾಗಿದೆ. ಇದರಿಂದಾಗಿ ಇದನ್ನು ಇಂದಿಗೂ ಸುಳ್ಳೆಂದು ಒಪ್ಪಿಕೊಳ್ಳಲು ಯಾರೂ ತಯಾರಾಗುವುದಿಲ್ಲ. ತಂಪು ಹಣ್ಣುಗಳು ದೇಹದ ಉಷ್ಣತೆ ಕಡಿಮೆ ಮಾಡುವುದು. ಒಂದೇ ಸಲ ಅತಿಯಾಗಿ ತಿಂದರೆ ಮಾತ್ರ ಇಂತಹ ಹಣ್ಣುಗಳು ನಿಮಗೆ ಸಮಸ್ಯೆಯನ್ನು ಉಂಟು ಮಾಡುವುದು. ಒಂದೇ ಸಲಕ್ಕೆ ನೀವು ತುಂಬಾ ಹಣ್ಣುಗಳನ್ನು ತಿಂದರೆ ಆಗ ದೇಹದ ಉಷ್ಣತೆಯು ತುಂಬಾ ಕಳೆಮಟ್ಟಕ್ಕೆ ಕುಸಿಯಬಹುದು. ಇದರಿಂದ ಪ್ರತಿರೋಧಕ ಶಕ್ತಿ ಕಡಿಮೆಯಾಗಬಹುದು ಮತ್ತು ಸೋಂಕು ಕಾಡಿ, ಸಾಮಾನ್ಯ ಶೀತ ಉಂಟಾಗಬಹುದು.

ಸೀತಾಫಲ ಕ್ಯಾನ್ಸರ್ ವಿರೋಧಿ

ಸೀತಾಫಲ ಕ್ಯಾನ್ಸರ್ ವಿರೋಧಿ

ಸೀತಾಫಲದ ಬಗ್ಗೆ ಜನರಿಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆದರೆ ಸಂಶೋಧನೆಗಳು ಇದು ಕ್ಯಾನ್ಸರ್ ವಿರೋಧಿ ಎಂದು ಹೇಳಿದ ಬಳಿಕ ಬೇಡಿಕೆ ಹೆಚ್ಚಾಗಿದೆ. ಸೀತಾಫಲದಲ್ಲಿ ಅಸೆಟೋಜೆನಿನ್ ಮತ್ತು ಆಲ್ಕಲಾಯ್ಡ್ಸ್ ಇರುವುದರಿಂದ ಇದು ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುವುದು.

ಕಬ್ಬಿನಾಂಶ ಅಧಿಕ

ಕಬ್ಬಿನಾಂಶ ಅಧಿಕ

ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ವೈದ್ಯರು ಸೀತಾಫಲ ತಿನ್ನುವಂತೆ ಸೂಚಿಸುವರು. ಯಾಕೆಂದರೆ ಇದರಲ್ಲಿ ಕಬ್ಬಿನಾಂಶ ಅಧಿಕವಾಗಿದೆ. ಇದು ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುವುದು. ಇದರಿಂದ ರಕ್ತ ಸಂಚಾರ ಸರಿಯಾಗಿ ನಿಶ್ಯಕ್ತಿ ದೂರವಾಗುವುದು.

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಸೀತಾಫಲದಲ್ಲಿ ವಿಟಮಿನ್ ಬಿ ಸಂಕೀರ್ಣವಿದೆ. ಇದು ಮೆದುಳಿನದಲ್ಲಿ ಒತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಡುವುದು. ಮೆದುಳಿನ ಕಾಯಿಲೆಯಾಗಿರುವ ಪರ್ಕಿಸನ್ ನಿಂದ ಇದು ರಕ್ಷಣೆ ನೀಡುವುದು.

ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಲು

ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಲು

ಹಣ್ಣಿನಲ್ಲಿ ಇರುವಂತಹ ನಾರಿನಾಂಶವು ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಹಾಕುವುದು. ಇದರಿಂದ ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ನಂತಹ ಸಮಸ್ಯೆಯು ದೂರವಾಗುವುದು.

ತೂಕ ಹೆಚ್ಚಿಸಲು ಸಹಕಾರಿ

ತೂಕ ಹೆಚ್ಚಿಸಲು ಸಹಕಾರಿ

ಸೀತಾಫಲವು ಹೆಚ್ಚಿನ ಕ್ಯಾಲರಿ ಹೊಂದಿರುವ ಕಾರಣದಿಂದ ಇದು ತೂಕ ಹೆಚ್ಚಿಸಿಕೊಳ್ಳಲು ತುಂಬಾ ಪರಿಣಾಮಕಾರಿ. ಇದು ಚಯಾಪಚಾಯ ಕ್ರಿಯೆ ಉತ್ತಮಪಡಿಸುವುದು ಮತ್ತು ಸಂಪೂರ್ಣವಾಗಿ ಹಸಿವು ಹೆಚ್ಚಳ ಮಾಡುವುದು.

ಚರ್ಮವು ಆರೋಗ್ಯ ಮತ್ತು ಯೌವನಯುತವಾಗಿರಲು

ಚರ್ಮವು ಆರೋಗ್ಯ ಮತ್ತು ಯೌವನಯುತವಾಗಿರಲು

ನಿಯಮಿತವಾಗಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಕಾಲಜನ್ ಉತ್ಪತ್ತಿಯು ಪ್ರಚೋದಿಸುವುದು. ಇದರಿಂದಾಗಿ ಚರ್ಮದ ಸ್ಥಿತಿಸ್ಥಾಪಕತ್ವು ಉಳಿದು ವಯಸ್ಸಾಗುವ ಲಕ್ಷಣಗಳು ಕಾಣಿಸುವುದಿಲ್ಲ. ನೀವು ಸೀತಾಫಲವನ್ನು ತಿಂದರೆ ಅದರಿಂದ ಹಲವಾರು ರೀತಿಯ ಲಾಭಗಳು ದೇಹಕ್ಕೆ ಸಿಗುವುದು.

ಅಸ್ತಮಾ ರೋಗಿಗಳಿಗೆ

ಅಸ್ತಮಾ ರೋಗಿಗಳಿಗೆ

ಸೀತಾಫಲದಲ್ಲಿ ವಿಟಮಿನ್ ಬಿ6 ಅಧಿಕ ಪ್ರಮಾಣದಲ್ಲಿರುತ್ತದೆ. ಈ ವಿಟಮಿನ್‍ನಿಂದಾಗಿ ಶ್ವಾಸಕೋಶದ ಉರಿಯೂತ ಕಡಿಮೆಯಾಗುತ್ತದೆ ಮತ್ತು ಇದು ಅಸ್ತಮಾ ಬರುವುದನ್ನು ತಡೆಯುತ್ತದೆ.

ಹೃದಯಾಘಾತ

ಹೃದಯಾಘಾತ

ಸೀತಾಫಲದಲ್ಲಿರುವ ಮೆಗ್ನೀಶಿಯಂ ಅಂಶವು ಈ ಹಣ್ಣನ್ನು ಅತ್ಯುತ್ತಮವಾದ ಆರೋಗ್ಯಕಾರಿ ಹಣ್ಣನ್ನಾಗಿಸಿದೆ. ಇದು ಹೃದಯವನ್ನು ಹೃದ್ರೋಗಗಳಿಂದ ಕಾಪಾಡುತ್ತದೆ.

ಜೀರ್ಣಕ್ರಿಯೆ ಹೆಚ್ಚಿಸಲು ನೆರವಾಗುತ್ತದೆ

ಜೀರ್ಣಕ್ರಿಯೆ ಹೆಚ್ಚಿಸಲು ನೆರವಾಗುತ್ತದೆ

ಸೀತಾಫಲದಲ್ಲಿ ತಾಮ್ರ ಮತ್ತು ಡಯಟರಿ ಫೈಬರ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಆದ್ದರಿಂದ ಈ ಹಣ್ಣನ್ನು ಸೇವಿಸಿದಷ್ಟು ಆರೋಗ್ಯ ನಿಮ್ಮ ಸ್ವಂತವಾಗುತ್ತದೆ. ಇದರಲ್ಲಿರುವ ವಿಟಮಿನ್ ಉಪಸ್ಥಿತಿಯಿಂದಾಗಿ, ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಸೀತಾಫಲವು ಜಠರ ಮತ್ತು ಕರುಳುಗಳು ಸುಗಮವಾಗಿ ಕಾರ್ಯ ನಿರ್ವಹಿಸಲು ನೆರವಾಗಿ, ಮಲಬದ್ಧತೆಯನ್ನು ನಿವಾರಿಸುತ್ತದೆ.

ಅಧಿಕ ರಕ್ತದೊತ್ತಡಕ್ಕೆ

ಅಧಿಕ ರಕ್ತದೊತ್ತಡಕ್ಕೆ

ಸೀತಾಫಲದಿಂದ ಅಧಿಕ ಆರೋಗ್ಯಕಾರಿ ಲಾಭವನ್ನು ಪಡೆಯಬೇಕೆಂದಲ್ಲಿ, ಇದರಲ್ಲಿರುವ ಪೊಟಾಶಿಯಂ ಮತ್ತು ಮ್ಯೆಗ್ನಿಶಿಯಂಗಳನ್ನು ಬಳಸಿಕೊಳ್ಳಬೇಕು. ಈ ಎರಡು ಅಂಶಗಳು ರಕ್ತದ ಮಟ್ಟವನ್ನು ನಿಯಂತ್ರಣದಲ್ಲಿಡುತ್ತವೆ.

ಕೊಲೆಸ್ಟ್ರಾಲ್ ಮಟ್ಟಗಳು

ಕೊಲೆಸ್ಟ್ರಾಲ್ ಮಟ್ಟಗಳು

ಸೀತಾಫಲದಲ್ಲಿ ನಿಯಾಸಿನ್ ಮತ್ತು ಡಯಟೆರಿ ಫೈಬರ್ ಅಧಿಕ ಪ್ರಮಾಣದಲ್ಲಿರುತ್ತವೆ. ಇದರ ಪ್ರಭಾವದಿಂದಾಗಿ ಇದನ್ನು ಸೇವಿಸಿದಾಗ ಕೊಲೆಸ್ಟ್ರಾಲ್ ಮಟ್ಟಗಳು ಕಡಿಮೆಯಾಗುತ್ತವೆ.

ನಿಮ್ಮಲ್ಲಿ ರಕ್ತ ಹೀನತೆ ಇದೆಯೇ?

ನಿಮ್ಮಲ್ಲಿ ರಕ್ತ ಹೀನತೆ ಇದೆಯೇ?

ಯಾಕೆ ಯೋಚನೆ ಮಾಡುತ್ತೀರಿ ಸೀತಾಫಲವನ್ನು ಸೇವಿಸಿ. ಇದು ಒಳ್ಳೆಯ ಪ್ರಚೋದಕ, ಎಕ್ಸ್‌ಪೆಕ್ಟೊರೆಂಟ್ ಮತ್ತು ಹಿಮಾಟ್ನಿಕ್ ಆಗಿರುವ ಹಣ್ಣಾಗಿದೆ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಈ ಹಣ್ಣಿನಲ್ಲಿ ಕಬ್ಬಿಣಾಂಶವು ಅಧಿಕವಾಗಿರುವುದರಿಂದ ಅನಿಮಿಯಾ ಅಥವಾ ರಕ್ತ ಹೀನತೆಗೆ ಹೇಳಿ ಮಾಡಿಸಿದ ಹಣ್ಣಾಗಿದೆ.

ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು

ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು

ಸೀತಾಫಲಗಳಲ್ಲಿ ರಿಬೊಫ್ಲಾವಿನ್ ಮತ್ತು ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಕಣ್ಣಿಗೆ ಒಳ್ಳೆಯದು. ಇವುಗಳು ಫ್ರೀ ರ‍್ಯಾಡಿಕಲ್‍ಗಳ ವಿರುದ್ಧ ಹೋರಾಡುತ್ತವೆ. ಆ ಮೂಲಕ ಇವು ಕಣ್ಣಿನ ದೃಷ್ಟಿ ಕುಂದದಂತೆ ಕಾಪಾಡುತ್ತವೆ.

ಅರ್ಥರಿಟಿಸ್ ಅನ್ನು ತಡೆಯುತ್ತದೆ

ಅರ್ಥರಿಟಿಸ್ ಅನ್ನು ತಡೆಯುತ್ತದೆ

ಸೀತಾಫಲದಿಂದ ದೊರೆಯುವ ಅತ್ಯುತ್ತಮ ಆರೋಗ್ಯಕಾರಿ ಪ್ರಯೋಜನಗಳಲ್ಲಿ ಅರ್ಥರಿಟಿಸ್ ಬರದಂತೆ ತಡೆಯುವುದು ಸಹ ಒಂದು. ಇದರಲ್ಲಿ ಮ್ಯೆಗ್ನಿಶಿಯಂ ಇರುತ್ತದೆ. ಇದು ದೇಹದಲ್ಲಿನ ನೀರಿನ ಸಮತೋಲನವನ್ನು ಸಮಗೊಳಿಸುತ್ತದೆ. ಇದು ಕೀಲುಗಳಲ್ಲಿರುವ ಆಮ್ಲಗಳನ್ನು ಹೊಡೆದೊಡಿಸುತ್ತದೆ. ಆ ಮೂಲಕ ಅರ್ಥರಿಟಿಸ್ ಬರದಂತೆ ತಡೆಯುತ್ತದೆ.

ಮುಂಜಾನೆಯ ಮಂಕನ್ನು ನಿವಾರಿಸುತ್ತದೆ

ಮುಂಜಾನೆಯ ಮಂಕನ್ನು ನಿವಾರಿಸುತ್ತದೆ

ಗರ್ಭಿಣಿ ಹೆಂಗಸರು ಬೆಳಗ್ಗೆ ಎದ್ದ ಕೂಡಲೆ ಮಂಕಾಗಿರುತ್ತಾರೆ. ಬಾಣಂತಿಯರಲ್ಲಿ ಪ್ರಸವದ ನಂತರ ತೂಕ ಕಡಿಮೆಯಾಗುತ್ತದೆ. ಇವೆಲ್ಲದ್ದಕ್ಕು ಸೀತಾಫಲವೇ ದಿವ್ಯೌಷಧ. ಇದು ಗರ್ಭಾವಧಿಯಲ್ಲಿ ಕಂಡುಬರುವ ನಾಸಿಯಾ, ಮಂಕು, ತಿನ್ನುವ ಚಪಲ ಮತ್ತು ಬೇಸರ ಮುಂತಾದ ಮೂಡಿಗೆ ಸಂಬಂಧಿಸಿದ ಲೋಪ ದೋಷಗಳನ್ನು ಸರಿಪಡಿಸುತ್ತದೆ.

English summary

Does Eating Custard Apple Cause Cold?

How many times have our parents stopped us from eating certain fruits just because they are known to cause excess heat or cold in the body? Well, the answer is ALMOST all the time. Fruits are healthy and delicious and should be a part of everyone's diet. It is also important to consume all kinds of fruits, as every different coloured fruit has nutrients, which may be exclusive to them. But most of the time, we are not allowed to eat certain fruits, as they claim to cause fever of cold.
X
Desktop Bottom Promotion