For Quick Alerts
ALLOW NOTIFICATIONS  
For Daily Alerts

  ಗುದ ಸಂಭೋಗ ಮಾಡಲು ಹೋಗಬೇಡಿ! ಇದು ತುಂಬಾ ಅಪಾಯಕಾರಿ!

  |

  ನಮ್ಮ ದೇಶದಲ್ಲಿ ಕಾಮದ ವಿಷಯವೆಂದರೆ ಹೆಚ್ಚಿನ ಗೋಪ್ಯ ಅಥವಾ ಸಾರ್ವಜನಿಕವಾಗಿ ಚರ್ಚಿಸಲ್ಪಡದ ವಿಷಯವಾಗಿದೆ. ಯಾವಾಗ ಇದು ಗೋಪ್ಯವಾಗುತ್ತದೆಯೋ ಆಗ ಹೆಚ್ಚಿನ ಜನರ ಗಮನವನ್ನು ಸೆಳೆಯುತ್ತದೆ. ಕಾಮದ ವಿಷಯ ಹಿಂದಿನಿಂದಲೂ ಕುತೂಹಲ ಕೆರಳಿಸುವ ವಿಷಯವಾಗಿದೆ ಹಾಗೂ ಇಂದು ಮುಕ್ತವಾಗಿ ದೊರಕುತ್ತಿರುವ ಕಾಮಪ್ರಚೋದಕ ಪಠ್ಯ ಮತ್ತು ಚಲನಚಿತ್ರಗಳನ್ನು ಭಾರೀ ಸಂಖ್ಯೆಯಲ್ಲಿ ಜನರು ಕದ್ದುಮುಚ್ಚಿ ಓದುತ್ತಾರೆ ಹಾಗೂ ವೀಕ್ಷಿಸುತ್ತಾರೆ.

  ನಮ್ಮ ದೇಶದಲ್ಲಿ ಕಾಮದ ವಿಷಯ ಅತಿ ಸೂಕ್ಷ್ಮವಾಗಿದ್ದು ಇಂದು ಲೈಂಗಿಕ ದೌರ್ಜನ್ಯ, ಲೈಂಗಿಕ ರೋಗಗಳ ಹರಡುವಿಕೆ ಹಾಗೂ ಗರ್ಭಾಂಕುರಗಳಿಗೆ ಪ್ರಮುಖ ಕಾರಣವಾಗಿದೆ. ಇಂದಿಗೂ ಹೆಚ್ಚಿನ ಜನರಿಗೆ ಲೈಂಗಿಕ ವಿಷಯದಲ್ಲಿ ಸೂಕ್ತ ಶಿಕ್ಷಣವಿಲ್ಲದೇ ಇರುವ ಕಾರಣ ಅನಗತ್ಯ ಗರ್ಭಾಂಕುರ, ಲೈಂಗಿಕ ರೋಗಗಳ ಹರಡುವಿಕೆ ಹಾಗೂ ಸೋಂಕುಗಳು ವ್ಯಾಪಿಸುತ್ತಿವೆ. ಲೈಂಗಿಕ ಕಾಮನೆಯನ್ನು ತಣಿಸುವುದು ಪ್ರತಿ ಜೀವಿಯ ಹಕ್ಕಾಗಿದ್ದು ಇದನ್ನು ಪೂರೈಸಲು ಸಮಾಜ ವಿವಾಹಬಂಧನವನ್ನು ನಿರ್ಮಿಸಿದೆ ಹಾಗೂ ಈ ಬಂಧನಕ್ಕೆ ಒಳಪಡುವ ಜೋಡಿ ತಮ್ಮ ಕಾಮನೆಗಳನ್ನು ಪೂರೈಸಲು ಹೊದಿಕೆಯಡಿ ಭಿನ್ನವಾದ ಪ್ರಯೋಗಗಳನ್ನೂ ನಡೆಸುತ್ತಾರೆ.

  ಅಷ್ಟಕ್ಕೂ, ಯಾವುದೇ ಸಂಬಂಧದಲ್ಲಿ ದೈಹಿಕ ಸಂಪರ್ಕ ಮಹತ್ವವಾದ ಪಾತ್ರ ವಹಿಸುತ್ತದೆ. ಹೊಸ ಭಂಗಿಗಳನ್ನು ಯತ್ನಿಸುವುದು ಲೈಂಗಿಕ ಕಾಮನೆಗಳನ್ನು ತಣಿಸುವ ಭಿನ್ನ ಪ್ರಯತ್ನವಾಗಿದೆ. ಎಲ್ಲಿಯವರೆಗೆ ಇದು ನಿಸರ್ಗದ ನಿಯಮಗಳನ್ನು ಮೀರುವುದಿಲ್ಲವೋ ಅಲ್ಲಿಯವರೆಗೆ ಇವು ಸುರಕ್ಷಿತ ಹಾಗೂ ಪರಸ್ಪರರಿಗೆ ಹಿತಕರವಾಗಿರುತ್ತದೆ. ಆದರೆ ಕೆಲವು ಜೋಡಿಗಳು ಈ ಮಿತಿಯನ್ನು ಮೀರಿ ಹೆಚ್ಚಿನ ಪ್ರಯೋಗಗಳನ್ನು ಮಾಡತೊಡಗುತ್ತಾರೆ. ಇದರಲ್ಲಿ ಒಂದು ಗುದಕಾಮ ಅಥವಾ ಗುದಸಂಭೋಗ. ಇಂದು ಈ ಬಗೆಯ ವರ್ತನೆ ಹೆಚ್ಚಿನವರ ಗಮನ ಸೆಳೆಯುತ್ತಿದೆ ಹಾಗೂ ಕಾಮದ ವಿಷಯದಲ್ಲಿ ಹೆಚ್ಚಿನ ವೈವಿಧ್ಯತೆಯನ್ನು ಪಡೆಯುವಂತೆ ಮಾಡುತ್ತಿದೆ. ಆದರೆ ನಿಸರ್ಗ ಈ ನಿಟ್ಟಿನಲ್ಲಿ ನಮ್ಮಜನನಾಂಗಗಳನ್ನು ಸೃಷ್ಟಿಸಿಲ್ಲ.

  ಸೆಕ್ಸ್ ಬಳಿಕ, ಮಹಿಳೆಯರು ಈ ಕೆಲಸಗಳನ್ನು ಮಾತ್ರ ಮಾಡಲೇಬೇಕು!

  ನಿಸರ್ಗ ಎಲ್ಲಾ ಬಗೆಯ ಜೀವಿಗಳ ಮಿಲನಕ್ಕಾಗಿ ಪುರುಷ ಮತ್ತು ಮಹಿಳಾ ಜನನಾಂಗಗಳನ್ನು ಸೃಷ್ಟಿಸಿದ್ದು ಗುದದ್ವಾರವನ್ನು ಕೇವಲ ಮಲವಿಸರ್ಜನೆಗೆ ಮಾತ್ರವೇ ಬಳಸಬೇಕಾಗುತ್ತದೆ. ಈ ಕಾಮದಲ್ಲಿ ಗುದದ್ವಾರವನ್ನು ಕಾಮತೃಷೆ ತಣಿಸಲು ಬಳಸುವುದು ನಿಸರ್ಗಕ್ಕೆ ವಿರೋಧವಾಗಿದ್ದು ಅಪಾಯಕಾರಿಯೂ ಆಗಿದೆ. ಎಲ್ಲೋ ನೋಡಿದ ಚಿತ್ರಗಳಲ್ಲಿದ್ದನ್ನು ಪುನರಾವರ್ತಿಸಲು ಹೋಗುವ ಜೋಡಿಗಳು ತಮಗರಿವಿಲ್ಲದಂತೆಯೇ ಕೆಲವು ಅಪಾಯಗಳನ್ನು ಆಹ್ವಾಹಿಸಿಕೊಳ್ಳುತ್ತಾರೆ.

  ಸಾಮಾನ್ಯವಾಗಿ ಪೋಲಿಕಥೆಗಳಲ್ಲಿ ಅಥವಾ ಚಿತ್ರಗಳಲ್ಲಿ ತೋರಿಸುವ ಈ ಕಾಮುಕತೆಯ ಮೂಲಕ ಲಭಿಸುವ ಖುಷಿ ವಾಸ್ತವವಾಗಿ ಇದಕ್ಕೆ ವಿರುದ್ದವಾದ ಪರಿಣಾಮವನ್ನೇ ನೀಡಬಹುದು. ಲೇಖನದ ಮೊದಲಿನಲ್ಲಿಯೇ ತಿಳಿಸಿದಂತೆ ಕಾಮದ ವಿಷಯ ನಮ್ಮ ದೇಶದಲ್ಲಿ ಗೋಪ್ಯವಾಗಿದ್ದು ಇದು ಸರಿಯೋ ಅಲ್ಲವೋ ಎಂಬುದನ್ನು ವಿಮರ್ಶಿಸಲು ಅವಕಾಶವೇ ಇಲ್ಲದಂತಾಗಿ ಪ್ರಯೋಗಿಸಿದ ಬಳಿಕವೇ ಇದರ ಕೆಟ್ಟ ಪರಿಣಾಮಗಳನ್ನು ಅನುಭವಿಸುವಂತಾಗುತ್ತದೆ. ಇಂದಿನ ಲೇಖನದಲ್ಲಿ ಈ ಕೊರತೆಯನ್ನು ನೀಗಿಸಲಾಗಿದ್ದು ಗುದಕಾಮದ ಭೀಕರ ಪರಿಣಾಮಗಳ ಹಾಗೂ ಈ ಮೂಲಕ ಆರೋಗ್ಯದ ಮೇಲೆ ಉಂಟಾಗುವ ತೊಂದರೆಯ ಬಗ್ಗೆ ವಿವರಿಸಲಾಗಿದೆ...

  ಸೋಂಕುಗಳು ಹರಡಬಹುದು

  ಸೋಂಕುಗಳು ಹರಡಬಹುದು

  ಗುದಕಾಮದಿಂದ ಹಲವಾರು ಬಗೆಯ ಲೈಂಗಿಕ ರೋಗಗಳು (STIs (sexually transmitted infections) ಹರಡುವ ಸಾಧ್ಯತೆ ಅಪಾರವಾಗಿ ಹೆಚ್ಚುತ್ತದೆ. ಉದಾಹರಣೆಗೆ ಗೋನೋರಿಯಾ, ಹೆಪಟೈಟಿಸ್ ಬಿ ಮತ್ತು ಸಿಫಿಲಿಸ್. ನಮ್ಮ ದೇಹದ ಗುದದ್ವಾರದ ಗೋಡೆಗಳು ದೇಹದೊಳಗಿನ ಮಲವನ್ನು ಹೊರಹಾಕುವಂತೆ ನಿರ್ಮಿಸಲ್ಪಟ್ಟಿದ್ದು ಇದಕ್ಕಾಗಿಯೇ ಇದರ ಚರ್ಮ ತೆಳುವಾಗಿರುತ್ತದೆ. ಗುದಕಾಮದಿಂದ ಮಲದ ಚಲನೆಯ ವಿರುದ್ದ ಚಲನೆಯಾಗುವ ಕಾರಣ ಇದು ಸುಲಭವಾಗಿ ಹರಿಯುವ ಸಾಧ್ಯತೆ ಇದೆ. ನಮ್ಮ ಮಲದ ಮೂಲಕ ದೇಹದಿಂದ ಹೊರದಬ್ಬಲ್ಪಡುವ ನೂರಾರು ಅನಗತ್ಯ ಹಾಗೂ ಸೋಂಕುಕಾರಕ ಕ್ರಿಮಿಗಳೂ ಇರುತ್ತವೆ. ಈ ಬಗೆಯ ಸಂಪರ್ಕದಿಂದ ಈ ಸೋಂಕುಗಳು ಸುಲಭವಾಗಿ ಇನ್ನೊಬ್ಬರಿಗೆ ದಾಟಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಗುದದ್ವಾರದ ಪದರವು ತುಂಬಾ ತೆಳುವಾಗಿರುವುದು. ಇದು ಬೇಗನೆ ಹರಿದುಹೋಗುವುದು ಮತ್ತು ಇದರಿಂದ ಸೋಂಕು ಸುಲಭವಾಗಿ ಹರಡುವುದು.

  ಸುಲಭವಾಗಿ ಗುಣವಾದ ಗುದದ್ವಾರದ ಗಾಯ

  ಸುಲಭವಾಗಿ ಗುಣವಾದ ಗುದದ್ವಾರದ ಗಾಯ

  ಗುದಕಾಮದಿಂದ ಈ ಭಾಗದ ಚರ್ಮ ಸುಲಭವಾಗಿ ಹರಿಯುತ್ತದೆ ಆದರೆ ಇದು ಸುಲಭವಾಗಿ ಗುಣವಾಗುವುದಿಲ್ಲ! ನಿತ್ಯವೂ ಬಹಿರ್ದೆಸೆಗೆ ಹೋಗಲೇಬೇಕಾದ ಅನಿವಾರ್ಯತೆ ಇದನ್ನು ಶೀಘ್ರವಾಗಿ ಗುಣವಾಗಲೂ ಬಿಡುವುದಿಲ್ಲ! ಈ ಚರ್ಮ ಸೋಂಕುಕಾರಕ ಬ್ಯಾಕ್ಟೀರಿಯಾಗಳನ್ನು ದೇಹದಲ್ಲಿ ಮತ್ತೆ ಪ್ರವೇಶಿಸದಂತೆ ತಡೆಯುತ್ತದೆ ಹಾಗೂ ಈಗ ಆಗಿರುವ ಗಾಯದ ಮೂಲಕ ಸೋಂಕುಕಾರಕ ಕ್ರಿಮಿಗಳು ಮತ್ತೆ ಸುಲಭವಾಗಿ ದೇಹದೊಳಕ್ಕೆ ಪ್ರವೇಶ ಪಡೆಯುತ್ತವೆ. ಈ ಭಾಗದಲ್ಲಿ ಆದ ಗಾಯ ಶೀಘ್ರವೇ ಸೋಂಕಿಗೊಳಗಾಗಿ ಕೀವಿನಿಂದ ತುಂಬುತ್ತದೆ (anal abscess) ಹಾಗೂ ಶೀಘ್ರವೇ ಭಾರೀ ಸೋಂಕಿಗೆ ಕಾರಣವಾಗುತ್ತದೆ.

  ಮೂಲವ್ಯಾಧಿ ಆವರಿಸುವ ಸಾಧ್ಯತೆ

  ಮೂಲವ್ಯಾಧಿ ಆವರಿಸುವ ಸಾಧ್ಯತೆ

  ಗುದದ್ವಾರದ ಗೋಡೆಯಲ್ಲಿ ಆದ ಚಿಕ್ಕ ಗೀರು ಸಹಾ ಸೋಂಕಿಗೆ ಕಾರಣವಾಗಬಹುದು ಹಾಗೂ ಈ ಸೋಂಕು ಚಿಕ್ಕ ಗಡ್ಡೆಯ ರೂಪ ತಳೆಯಬಹುದು ಇದನ್ನು ಮೂಲವ್ಯಾಧಿ (fistula) ಎಂದು ಕರೆಯುತ್ತಾರೆ. ಇದು ಗುದದ್ವಾರದ ಒಳಗೆ ಗಡ್ಡೆಯಂತೆ ಅಂಟಿಕೊಂಡು ಸಹಜ ಮಲವಿಸರ್ಜನೆಗೆ ತಡೆಯೊಡ್ಡುತ್ತದೆ. ಮಲವಿಸರ್ಜನೆಗೆ ಕೊಂಚವೂ ಒತ್ತಡ ಹೇರಿದವೂ ಇದು ಆ ಗಡ್ಡೆಯ ಮೇಲೂ ಒತ್ತಡ ಹೇರುತ್ತದೆ ಹಾಗೂ ಭಾರೀ ನೋವು ಎದುರಾಗುತ್ತದೆ. ಪರಿಣಾಮವಾಗಿ ಮಲವಿಸರ್ಜನೆಗೆ ಅವಸರವಾದರೂ ವಿಸರ್ಜಿಸಲು ಸಾಧ್ಯವಾಗದೇ ಒದ್ದಾಡುವಂತಾಗುತ್ತದೆ. ಇದು ಭಾರೀ ಮುಜುಗರ ತರಿಸುವ ತೊಂದರೆಯಾಗಿದ್ದು ಇದಕ್ಕೆ ಶಸ್ತ್ರಚಿಕಿತ್ಸೆಯೇ ಏಕಮಾತ್ರ ದಾರಿಯಾಗಿದೆ.

  ಅನಗತ್ಯ ಗರ್ಭಧಾರಣೆ

  ಅನಗತ್ಯ ಗರ್ಭಧಾರಣೆ

  ಹೇಗಿದ್ದರೂ ಗುದಕಾಮದಿಂದ ಮಕ್ಕಳಾಗುವುದಿಲ್ಲ ಎಂಬ ನಂಬಿಕೆಯಿಂದ ಹೆಚ್ಚಿನವರು ಯಾವುದೇ ರಕ್ಷಣಾಕ್ರಮವನ್ನು ಅನುಸರಿಸದೇ ಈ ಕ್ರಿಯೆಗೆ ಮುಂದಾಗುತ್ತಾರೆ. ಆದರೆ ಈ ಕ್ರಿಯೆಯಿಂದ ನೇರವಾಗಿಯಲ್ಲದಿದ್ದರೂ ಗರ್ಭಧಾರಣೆಯ ಸಂಭವ ಇದ್ದೇ ಇರುತ್ತದೆ. ಕ್ರಿಯೆಯ ಕೊನೆಯಲ್ಲಿ ಸ್ಖಲಿಸಲ್ಪಟ್ಟ ವೀರ್ಯದ ಕೆಲವು ತೊಟ್ಟುಗಳಾದಗೂ ಯೋನಿದ್ವಾರ ತಲುಪುವ ಸಾಧ್ಯತೆ ಇದೆ ಹಾಗೂ ವೀರ್ಯಾಣುಗಳು ಯೋನಿಯ ತೇವದ್ವಾರದಲ್ಲಿ ಈಜಾಡುತ್ತಾ ಗರ್ಭಕಂಠದವರೆಗೂ ತಲುಪುವಷ್ಟು ಶಕ್ತಿ ಪಡೆದಿರುತ್ತವೆ. ಎಲ್ಲಾ ಸುಸೂತ್ರವಾಗಿದ್ದರೆ ಒಂದು ವೀರ್ಯಾಣು ಅಂಡಾಣುವಿನೊಡನೆ ಕೂಡುವ ಭಾಗ್ಯ ಪಡೆಯುತ್ತದೆ ಹಾಗೂ ಗರ್ಭಧಾರಣೆಯಾಗುತ್ತದೆ. ಅಲ್ಲದೇ ಕಾಂಡೋಂ ಧರಿಸುವ ಮೂಲಕವೂ ಈ ಸಾಧ್ಯತೆಯನ್ನು ಇಲ್ಲವಾಗಿಸಲು ಸಾಧ್ಯವಿಲ್ಲ. ಏಕೆಂದರೆ ಯೋನಿದ್ವಾರದಲ್ಲಿ ಸಹಜವಾದ ದ್ರವ ಒಸರುವ ಮೂಲಕ ಸಹಜ ಜಾರುವಿಕೆ ಸಾಧ್ಯವಾಗುತ್ತದೆ ಹಾಗೂ ಈ ಬಗೆಯ ಯಾವುದೇ ವ್ಯವಸ್ಥೆ ಗುದದ್ವಾರದಲ್ಲಿ ಇರದ ಕಾರಣ ಕಾಂಡೋಂ ಹರಿಯುವ ಹಾಗೂ ವೀರ್ಯ ಹೊರಚೆಲ್ಲುವ ಸಾಧ್ಯತೆಗಳು ದಟ್ಟವಾಗಿರುತ್ತದೆ.

  ಗುದದ್ವಾರ ಹಾಗೂ ಗರ್ಭಕಂಠದ ಕ್ಯಾನ್ಸರ್ ಸಾಧ್ಯತೆ

  ಗುದದ್ವಾರ ಹಾಗೂ ಗರ್ಭಕಂಠದ ಕ್ಯಾನ್ಸರ್ ಸಾಧ್ಯತೆ

  ಇತ್ತೀಚಿನ ಅಧ್ಯಯನಗಳಲ್ಲಿ ಕಂಡುಕೊಂಡಂತೆ ಗುದದ್ವಾರ ಹಾಗೂ ಗರ್ಭಕಂಠದ ಕ್ಯಾನ್ಸರ್ ಗಳಿಗೆ ಮಾನವರಿಂದ ಹರಡುವ ಒಂದು ಬಗೆಯ ವೈರಸ್ (pappillomavirus) ಕಾರಣವಾಗಿದ್ದು ಈ ವೈರಸ್ ಹರಡುವಿಕೆಗೆ ಗುದಕಾಮ ಪ್ರಮುಖವಾದ ಕಾರಣವಗಿದೆ. ಆದ್ದರಿಂದ ಕಾಮದ ವಿಷಯದಲ್ಲಿ ಎಷ್ಟೇ ವೈವಿದ್ಯತೆಯನ್ನು ಮನ ಬಯಸಿದರೂ ನಿಸರ್ಗದ ಮಿತಿಗಳ ಒಳಗೇ ಇದ್ದರೆ ಮಾತ್ರ ಇದು ಆರೋಗ್ಯಕರ ಹಾಗೂ ಸುಖಕರವಾಗಿರುತ್ತದೆ. ನಿಸರ್ಗದ ಮಿತಿಗಳನ್ನು ಮೀರಿದಾಗ ಆಗುವ ಅನಾಹುತಗಳು ಜೀವಮಾನವಿಡೀ ಬಾಧಿಸಬಹುದು!

  English summary

  Does anal sex have any health risks?

  The topic of "Sex" is the most taboo subject in our country. That is one of the reasons why it instantly attracts attention of the people. Sex has always garnered interest among individuals and thanks to porn freely accessible to everyone across the world, people are always either talking about it or watching it.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more