ಮಹಿಳೆಯರೇ ಲೈಂಗಿಕ ಕ್ರಿಯೆ ವೇಳೆ ನೋವಾಗುತ್ತಿದೆಯಾ? ಕೂಡಲೇ ವೈದ್ಯರನ್ನು ಕಾಣಿ...

Posted By: Hemanth Amin
Subscribe to Boldsky

ಲೈಂಗಿಕ ಕ್ರಿಯೆಯೆಂದರೆ ಅದು ಪರಸ್ಪರರು ಒಪ್ಪಿ ಮಾಡುವಂತಹ ಕ್ರಿಯೆ. ಇಲ್ಲಿ ಸಂಗಾತಿಗಳ ಮಧ್ಯೆ ಪ್ರೀತಿಯು ಕಾಮವಾಗಿ ಬದಲಾಗುವುದು. ಇಂತಹ ಸಂದರ್ಭದಲ್ಲಿ ಆರಂಭದಲ್ಲಿ ಮಹಿಳೆಯರಿಗೆ ಲೈಂಗಿಕ ಕ್ರಿಯೆಯಿಂದ ನೋವಾಗುವುದು ಸಹಜ. ಸಮಯ ಕಳೆದಂತೆ ಈ ನೋವು ಕಡಿಮೆಯಾಗುವುದು. ಆದರೆ ನೋವು ಹಾಗೆ ಉಳಿದುಕೊಂಡಿದ್ದರೆ ಆಗ ಏನೋ ಸಮಸ್ಯೆಯಿದೆ ಎಂದು ಹೇಳಬಹುದು. ಮಹಿಳೆಯರು ವರ್ಷದಲ್ಲಿ ಮೂರು ಸಲವಾದರೂ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಪರೀಕ್ಷೆಗೊಳಪಡಬೇಕು ಎಂದು ತಜ್ಞರು ಹೇಳುತ್ತಾರೆ.

ಇದರಿಂದ ಮಕ್ಕಳ ಜನನ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ನಿಮಗೆ ಮಾಹಿತಿ ಹಾಗೂ ವಿವರಗಳು ಸಿಗುವುದು. ಪ್ರತೀ ಸಲ ಲೈಂಗಿಕ ಕ್ರಿಯೆ ವೇಳೆ ನೋವಾಗುತ್ತಾ ಇದೆ ಎಂದಾದರೆ ಯೋನಿಯಲ್ಲಿ ಸೋಂಕು ಉಂಟಾಗಿರಬಹುದು ಅಥವಾ ಅಂಡಾಶಯದ ಚೀಲಗಳು ಅಥವಾ ಎಂಡೋಮೆಟ್ರಿಯೊಸಿಸ್ ನಿಂದ ಬಳಲುತ್ತಿದ್ದೀರಿ ಎಂದು ಹೇಳಬಹುದಾಗಿದೆ.

ಸೆಕ್ಸ್ ಬಗ್ಗೆ ಇರುವ ಈ ವಿಷಯಗಳನ್ನು ನಿಮ್ಮಲ್ಲಿ ಯಾರೂ ಹೇಳುವುದಿಲ್ಲ!

ಇದನ್ನು ಕಡೆಗಣಿಸಿದರೆ ಅದರಿಂದ ಮುಂದೆ ದೊಡ್ಡ ಸಮಸ್ಯೆಯಾಗಬಹುದು. ಲೈಂಗಿಕ ಕ್ರಿಯೆ ವೇಳೆ ಅಥವಾ ಅದರ ಬಳಿಕ ನೋವಾಗುತ್ತಾ ಇದ್ದರೆ ಆಗ ವೈದ್ಯರನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಈ ಲೇಖನದಲ್ಲಿ ಲೈಂಗಿಕ ಕ್ರಿಯೆ ವೇಳೆ ಉಂಟಾಗಬಹುದಾದ ನೋವಿಗೆ ಕೆಲವೊಂದು ಕಾರಣಗಳನ್ನು ಹೇಳಲಾಗಿದೆ. ಇದನ್ನು ನೀವು ತಿಳಿದುಕೊಳ್ಳಿ....

ಒಣ ಜನನೇಂದ್ರೀಯ

ಒಣ ಜನನೇಂದ್ರೀಯ

ಒಣ ಯೋನಿಯಿದ್ದರೆ ಆಗ ಲೈಂಗಿಕ ಕ್ರಿಯೆ ವೇಳೆ ನಿಮಗೆ ನೋವಾಗಬಹುದು. ಅತಿಯಾದ ಒತ್ತಡ ಅಥವಾ ಔಷಧಿಯ ಪರಿಣಾಮದಿಂದಾಗಿ ಯೋನಿಯು ಒಣಗಿ ಹೋಗಬಹುದು. ಹೆರಿಗೆ ಬಳಿಕ ನಿಮ್ಮ ಯೋನಿಯು ಒಣಗುತ್ತಲಿದ್ದರೆ ಇದು ಅದರ ಅಡ್ಡಪರಿಣಾಮವಾಗಿದೆ. ವಯಸ್ಕರಲ್ಲಿ ಯೋನಿ ಒಣಗುವುದು ಮುಟ್ಟು ನಿಲ್ಲುವುದರ ಮುನ್ಸೂಚನೆಯಾಗಿದೆ. ಜೀವನಶೈಲಿಯನ್ನು ಬದಲಾಯಿಸಿಕೊಂಡು ಸಮಸ್ಯೆ ದೂರ ಮಾಡಿ.

ಸೋಂಕು

ಸೋಂಕು

ಜನನೇಂದ್ರೀಯದಲ್ಲಿ ಉಂಟಾಗುವ ಸೋಂಕು ಲೈಂಗಿಕ ಕ್ರಿಯೆ ವೇಳೆ ಉಂಟಾಗುವ ನೋವಿಗೆ ಪ್ರಮುಖ ಕಾರಣವಾಗಿದೆ. ಯೀಸ್ಟ್ ಸೋಂಕು, ಟ್ರೈಕೊಮೋನಿಯಾಸಿಸ್ ಮತ್ತು ಜನನಾಂಗದ ಹರ್ಪಿಸ್ ನಿಂದಾಗಿ ಲೈಂಗಿಕ ಕ್ರಿಯೆ ಮತ್ತು ಅದರ ಬಳಿಕದ ನೋವನ್ನು ಅತಿಯಾಗಿಸುವುದು. ಇದರಿಂದ ವೈದ್ಯಕೀಯ ನೆರವು ಆದಷ್ಟು ಬೇಗ ಪಡೆಯಿರಿ...

ಹೆರಿಗೆ ಬಳಿಕ

ಹೆರಿಗೆ ಬಳಿಕ

ಸಾಮಾನ್ಯ ಹೆರಿಗೆಯಾದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ವೇಳೆಯ ನೋವು ಕಂಡುಬರುವುದು. ಎಪಿಸೊಟಮಿ ಮತ್ತು ಯೋನಿಯು ಹೆಚ್ಚು ಸೂಕ್ಷ್ಮವಾಗುವುದು ಇದಕ್ಕೆ ಕಾರಣವಾಗಿದೆ. ಇದರಿಂದ ಹೆರಿಗೆ ಬಳಿಕ ಕೆಲವು ತಿಂಗಳು ಲೈಂಗಿಕ ಕ್ರಿಯೆಯಿಂದ ದೂರವಿರಿ.

ಋತುಚಕ್ರದ ಸಮಯ

ಋತುಚಕ್ರದ ಸಮಯ

ಋತುಚಕ್ರದ ಒಂದು ಅಥವಾ ಎರಡು ದಿನದ ಮೊದಲು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ನೋವು ಕಾಣಿಸಿಕೊಳ್ಳುವುದು. ಯಾಕೆಂದರೆ ಈ ವೇಳೆ ಜನನೇಂದ್ರೀಯವು ತುಂಬಾ ಸೂಕ್ಷ್ಮವಾಗಿರುವುದು. ಸ್ನಾಯು ಸೆಳೆತ ಮತ್ತು ಹೊಟ್ಟೆಯ ನೋವಿನಿಂದಾಗಿ ಲೈಂಗಿಕ ಕ್ರಿಯೆಯು ಸಂತೋಷದಿಂದ ಹೆಚ್ಚು ನೋವು ನೀಡುವುದು.

ನೋವಿನ ಹೊಟ್ಟೆಯ ಸಮಸ್ಯೆಯಿಂದ

ನೋವಿನ ಹೊಟ್ಟೆಯ ಸಮಸ್ಯೆಯಿಂದ

ಹೊಟ್ಟೆಯ ಕೆರಳಿಸುವ ಸಮಸ್ಯೆ(ಐಬಿಎಸ್) ಲೈಂಗಿಕ ಕ್ರಿಯೆ ವೇಳೆ ನೋವುಂಟು ಮಾಡಬಹುದು. ಋತುಚಕ್ರದ ವೇಳೆ ಕರುಳಿನ ಸೆಳೆತ, ಮಲಬದ್ಧತೆ ಅಥವಾ ಭೇದಿಯ ಸಮಸ್ಯೆಯಿದ್ದರೆ ಲೈಂಗಿಕ ಕ್ರಿಯೆ ವೇಳೆ ನೋವು ಕಂಡುಬರುವುದು.

ಬೆಂಕಿಯಂತೆ ಸುಡುವುದು

ಬೆಂಕಿಯಂತೆ ಸುಡುವುದು

ಲೈಂಗಿಕ ಕ್ರಿಯೆ ವೇಳೆ ಯೋನಿಯು ಬೆಂಕಿಯಂತೆ ಸುಡುವುದೇ? ಹೌದು ಎಂದಾದರೆ ಇದಕ್ಕೆ ಪ್ರಮುಖ ಕಾರಣ ಯೋನಿಯ ಉರಿಯೂತ. ರಾಸಾಯನಿಕಯುಕ್ತ ಸೋಪು ಮತ್ತು ಲೋಷನ್ ಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ಇಂತಹ ಸೋಪುಗಳನ್ನು ಜನನೇಂದ್ರಿಯಗಳಿಗೆ ಉಪಯೋಗಿಸಬೇಡಿ.

ಅಂಡಾಶಯದ ಚೀಲಗಳು

ಅಂಡಾಶಯದ ಚೀಲಗಳು

ಲೈಂಗಿಕ ಕ್ರಿಯೆ ವೇಳೆ ನಿಮಗೆ ತುಂಬಾ ನೋವಾಗುತ್ತಾ ಇದ್ದರೆ ಮತ್ತು ಆ ಜಾಗವು ತುಂಬಾ ಸೂಕ್ಷ ಮತ್ತು ಸ್ಪರ್ಶವಿಲ್ಲದಂತೆ ಆಗಿದ್ದರೆ ಇದಕ್ಕೆ ಗರ್ಭಕೋಶದ ಚೀಲಗಳು ಕಾರಣವಾಗಿವೆ. ಇದನ್ನು ನೀವು ದೃಢಪಡಿಸಲು ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

ಎಂಡೊಮೆಟ್ರೋಸಿಸ್ ಸಮಸ್ಯೆ ಕಾರಣ

ಎಂಡೊಮೆಟ್ರೋಸಿಸ್ ಸಮಸ್ಯೆ ಕಾರಣ

ಲೈಂಗಿಕ ಕ್ರಿಯೆ ವೇಳೆ ಉಂಟಾಗುವಂತಹ ನೋವನ್ನು ಕಡೆಗಣಿಸಬಾರದು. ದೀರ್ಘಕಾಲದ ತನಕ ಈ ಸಮಸ್ಯೆ ಕಾಡುತ್ತಲಿದ್ದರೆ ಇದಕ್ಕೆ ಎಂಡೊಮೆಟ್ರೋಸಿಸ್ ಕಾರಣವಾಗಿದೆ. ಗರ್ಭಕೋಶದ ಸಂಧಿಯ ಕೆಲವೊಂದು ಕೋಶಗಳು ಬೇರೆ ಭಾಗದಲ್ಲಿ ಬೆಳೆಯುವುದು ಈ ನೋವಿಗೆ ಕಾರಣವಾಗಿದೆ.

English summary

Do You Know Why Your Having Painful Intercourse?

Painful intercourse is one of the many problems most women suffer from. Though this is not an alarming health problem, if ignored and if the pain still persists, it can be quite a problem. According to health experts, sexually active women should make it a point to visit their gynaecologist at least thrice in a year. In the mean time, take a look at some of the causes of a painful intercourse, you might recognise a few symptoms or signs related to your existing problem.