For Quick Alerts
ALLOW NOTIFICATIONS  
For Daily Alerts

ಅಕ್ಕಿಯಲ್ಲಿರುವ ಈ ಪೋಷಕಾಂಶದ ವಿಚಾರಗಳು ನಿಮಗೆ ತಿಳಿದಿದೆಯೇ?

By Sushma Charhra
|

ಅಕ್ಕಿ ಒಂದು ಅದ್ಭುತ ಧಾನ್ಯವಾಗಿದ್ದು, ಭಾರತೀಯರ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದೆನಿಸಿಕೊಂಡಿದೆ. ಪ್ರಕೃತಿಯಲ್ಲಿ ಅಕ್ಕಿಯು ಬಹುಮುಖವಾಗಿರುವ ಒಂದು ಆಹಾರ ಯಾಕೆಂದರೆ ಇದರ ಜೊತೆ ನೀವು ಯಾವುದೇ ಸುವಾಸನೆ ಮತ್ತು ಮಸಾಲೆಯನ್ನು ಹಾಕಿದರೂ ಕೂಡ ಅಂದು ಹೊಂದಿಕೊಂಡು ಉತ್ತಮ ರುಚಿಯನ್ನು ನೀಡುತ್ತೆ. ಅಕ್ಕಿ ಒಂದು ಬೆಲೆಬಾಳುವ ಆಹಾರ ಪದಾರ್ಥವಾಗಿದೆ. ಹಾಗಾಗಿ ನಾವಿಲ್ಲಿ ಇಂದು ಈ ಲೇಖನದಲ್ಲಿ ಅಕ್ಕಿಯ ಪ್ರಮುಖ ಪೋಷಕಾಂಶದ ವಿಚಾರಗಳನ್ನು ನಿಮಗೆ ತಿಳಿಸಿ ಕೊಡಲಿದ್ದೇವೆ.

ಎಲ್ಲಾ ರೀತಿಯ ಅಡುಗೆ ಪದ್ಧತಿಗಳಲ್ಲೂ ಕೂಡ ಅಕ್ಕಿಯನ್ನು ಬಳಸಲಾಗುತ್ತೆ. ಅಕ್ಕಿಯನ್ನು ಬೇಯಿಸಿದಾಗ ಮೃದುವಾದ ರಚನೆ ಲಭ್ಯವಾಗುತ್ತೆ ಅರ್ಥಾತ್ ಅನ್ನವನ್ನು ಮೃದುವಾಗಿ ಮಾಡಬಹುದು. ಹಾಗಾಗಿ ನೀವು ಯಾವುದೇ ಸಾಂಬಾರು, ಪಲ್ಯ, ಗೊಜ್ಜು, ಏನನ್ನೇ ಅದರ ಜೊತೆ ಸೇರಿಸಿ ಸೇವಿಸಿದರೂ ಅದರ ರುಚಿ ಇಮ್ಮಡಿಗೊಳ್ಳುತ್ತೆ.

Nutrition Facts Of Rice

ರೈಸ್ ಅಸೋಸಿಯೇಷನ್ ತಿಳಿಸುವಂತೆ, ಅಕ್ಕಿಯಲ್ಲಿ ಹಲವಾರು ವಿಧಗಳಿವೆ. ಉದಾಹರಣೆಗೆ ದೀರ್ಘ ಧಾನ್ಯ ಅಕ್ಕಿ, ದೀರ್ಘ ಧಾನ್ಯ ಬಿಳಿ ಅಕ್ಕಿ, ಧಾನ್ಯದ ಅಕ್ಕಿ, ಬಾಸುಮತಿ ಅಕ್ಕಿ, ಜಾಸ್ಮಿನ್ ಅಕ್ಕಿ, ಸುಗಂಧ ದ್ರವ್ಯ ಮತ್ತು ಜಪೋನಿಕಾ ಅಕ್ಕಿ ಹೀಗೆ ಇತ್ಯಾದಿಗಳು ಇನ್ನು ಹಲವು ರೀತಿಯ ಅಕ್ಕಿಗಳಿದ್ದು,ಆರ್ಬೊರಿಯೊ ಅಕ್ಕಿ, ಜಿಗುಟಾದ ಅಕ್ಕಿ, ಕಂದು ಅಕ್ಕಿ, ಕಾಡು ಅಕ್ಕಿ, ಮತ್ತು ವೈಲ್ಡ್ ಪೆಕನ್ ಅಕ್ಕಿ. ಹಾಗಾದರೆ ಅಕ್ಕಿಯಲ್ಲಿರುವ ಪೋಷಕಾಂಶಗಳ ಬಗ್ಗೆ ಚರ್ಚೆ ಮಾಡೋಣ...

ಫೈಬರ್
ಕಂದು ಅಕ್ಕಿಯಲ್ಲಿ 8 ಶೇಕಡಾದಷ್ಟು ಫೈಬರ್ ಅಂಶವಿದೆ. ಅದೇ ಬಿಳಿ ಅಕ್ಕಿಯಲ್ಲಿ 0.3 ಶೇಕಡಾದಷ್ಟು ಫೈಬರ್ ಅಂಶವಿರುತ್ತೆ. ಒಂದು ಕಪ್ ಬೇಯಿಸಿದ ಅಕ್ಕಿ ಅಥವಾ ಅನ್ನದಲ್ಲಿ 3.5 ಗ್ರಾಂನಷ್ಟು ಫೈಬರ್ ಇರುತ್ತದೆ.ನಿರೋಧಕ ಪಿಷ್ಟದಂಶವು ಎರಡೂ ಅಕ್ಕಿಗಳಲ್ಲೂ ಗಮನಿಸಿದ್ದು, ಇದು ಕರುಳಿನ ಲಾಭದಾಯಕವಾಗಿರುವ ಅಥವಾ ಆರೋಗ್ಯಕಾರಿಯಾಗಿರುವ ಬ್ಯಾಕ್ಟೀರಿಯಾಗಳಿಗೆ ಆಹಾರ ಒದಗಿಸುತ್ತದೆ ಮತ್ತು ಅವುಗಳ ಬೆಳವಣಿಗೆಗೆ ನೆರವಾಗುತ್ತದೆ.

ವಿಟಮಿನ್ಸ್ ಮತ್ತು ಮಿನರಲ್ ಗಳು
ಹಲವಾರು ವಿಟಮಿನ್ ಗಳು ಮತ್ತು ಮಿನರಲ್ ಗಳು ಕಂದು ಅಕ್ಕಿಯಲ್ಲಿ ಲಭ್ಯವಿರುತ್ತದೆ ಆದರೆ ಬಿಳಿ ಅಕ್ಕಿಯಲ್ಲಿ ಇರುವುದಿಲ್ಲ. ವಿಟಮಿನ್ಸ್ ಮತ್ತು ಮಿನರಲ್ ಗಳಾಗಿರುವ ಮ್ಯಾಂಗನೀಸ್, ಸೆಲೇನಿಯಂ, ಥೈಯಾಮಿನ್, ನಿಯಾಸಿನ್, ಮೆಗ್ನೇಷಿಯಂ, ಮತ್ತು ಕಬ್ಬಿಣದ ಅಂಶವು ಕಂದು ಅಕ್ಕಿಯಲ್ಲಿ ಲಭ್ಯವಿರುತ್ತೆ.ಥೈಯಾಮಿನ್ ಅನ್ನುವುದು ವಿಟಮಿನ್ ಬಿ ಆಗಿದ್ದು ಇದು ಕಾರ್ಬೋಹೈಡ್ರೇಟ್ ಮೆಟಬಾಲಿಸಂಗೆ ಸಹಾಯ ನೀಡುತ್ತೆ ಮತ್ತು ಇದರಲ್ಲಿರುವ ಮೆಗ್ನೇಷಿಯಂ ಅಂಶವು DNA ಸಂಶ್ಲೇಷಣೆಯಲ್ಲಿ ಭಾಗವಹಿಸುವ ನೂರಕ್ಕೂ ಹೆಚ್ಚು ರೀತಿಯ ಎಝೈಮ್ ಗಳ ಪ್ರತಿಕ್ರಿಯೆಗಳಲ್ಲಿ ಇದು ಭಾಗವಹಿಸುತ್ತದೆ. ಮ್ಯಾಂಗನೀಸ್ ಅಂಶವು ಕಾರ್ಬೋಹೈಡ್ರೇಟ್ ಮತ್ತು ಪ್ರೊಟೀನ್ ಮೆಟಬಾಲಿಸಂ ನಲ್ಲಿ ನೆರವು ನೀಡುತ್ತದೆ.

ಕಾರ್ಬೋಹೈಡ್ರೇಟ್ಸ್
ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್ಸ್ ಗಳು ಪ್ರಮುಖವಾಗಿ ಪಿಷ್ಟದ ರೂಪದಲ್ಲಿ ಇರುತ್ತದೆ.ಇದು ಒಟ್ಟು ಒಣ ತೂಕದ ಶೇಕಡಾ 90 ರಷ್ಟು ಮತ್ತು ಒಟ್ಟು ಕ್ಯಾಲೊರಿ ಅಂಶದ ಶೇಕಡಾ 87 ರಷ್ಟಿದೆ. ಇದರಲ್ಲಿರುವ ಪಿಷ್ಟದ ಅಂಶವು ,ಅಮೈಲೋಸ್ ಮತ್ತು ಅಮೈಲೋಪಿಕ್ಟಿನ್ ಎಂಬ ಗ್ಲೂಕೋಸ್ ಚೈನ್ ಗಳ ಸರಣಿಗಳಿಂದ ಮಾಡಲ್ಪಟ್ಟಿರುತ್ತದೆ. ಬಾಸುಮತಿಯಂತ ಅಕ್ಕಿಯಲ್ಲಿ ಅತೀ ಹೆಚ್ಚು ಅಂಶದ ಅಮೈಲೋಸ್ ಇರುತ್ತದೆ ಹಾಗಾಗಿ ಬೇಯಿಸಿದ ನಂತರ ಅಕ್ಕಿಯು ಹೆಚ್ಚು ಅಂಟಿಕೊಳ್ಳುವುದಿಲ್ಲ. ಯಾವ ಅಕ್ಕಿಯಲ್ಲಿ ಅತೀ ಹೆಚ್ಚು ಅಮೈಲೋ ಪಿಕ್ಟನ್ ಅಂಶವಿರುತ್ತೋ ಅದು ಬೇಯಿಸಿದ ನಂತರ ಸ್ವಲ್ಪ ಅಂಟಂಟಾಗುತ್ತದೆ.

ಇತರ ಸಸ್ಯಜನ್ಯಗಳು
ಪಿಗ್ಮೆಂಟೆಡ್ ರೈಸ್ ಅಥವಾ ಕೆಂಪು ಬಣ್ಣದ ಕಾಳುಗಳ ವೆರೈಟಿ ಅಕ್ಕಿಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಕಂದು ಅಕ್ಕಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಅನ್ನು ಫೈಟಿಕ್ ಆಸಿಡ್ ಎಂದು ಕರೆಯಲಾಗುತ್ತೆ. ಲಿಗ್ನ್ಯಾನ್ಸ್ ಅನ್ನುವುದು ಅಕ್ಕಿಯಲ್ಲಿ ಗಮನಿಸಬಹುದಾದ ಮತ್ತೊಂದು ಅಂಶ. ಇನ್ನು ಫೆರುಲಿಕ್ ಆಸಿಡ್ ಅನ್ನೋ ಮತ್ತೊಂದು ಬಲಶಾಲಿಯಾದ ಆಂಟಿ ಆಕ್ಸಿಡೆಂಡ್ ಗಳನ್ನು ಕೂಡ ನಾವಿದರಲ್ಲಿ ಗಮನಿಸಬಹುದು. ಅಷ್ಟೇ ಅಲ್ಲ 2-acetyl 1-pyrroline (2AP) ಅಂಶವು ಅಕ್ಕಿಗೆ ರುಚಿ ಮತ್ತು ವಾಸನೆಯನ್ನು ನೀಡಿರುತ್ತದೆ. ಬಾಸುಮತಿ ಮತ್ತು ಜಾಸ್ಮಿನ್ ಅಕ್ಕಿಗಳಲ್ಲಿ ನಾವು ಗಮನಿಸುವ ರುಚಿ ಮತ್ತು ವಾಸನೆಗೆ ಇದುವೇ ಕಾರಣವಾಗಿರುತ್ತದೆ.

ಚಯಾಪಚಯ ಕ್ರಿಯೆಗೆ ಅಕ್ಕಿ ಹೇಗೆ ಸಹಾಯ ಮಾಡುತ್ತದೆ?
ಹಲವು ರೀತಿಯ ಊಟದ ಯೋಜನೆಗಳಲ್ಲಿ ಅಕ್ಕಿ ಇದ್ದೇ ಇರುತ್ತದೆ. ಅರ್ಥಾತ್ ಅಕ್ಕಿಯನ್ನು ಭಾರತದ ಮೂಲೆ ಮೂಲೆಯ ಜನರೂ ಕೂಡ ತಮ್ಮ ಊಟದಲ್ಲಿ ಬಳಸುತ್ತಾರೆ. ಒಂದು ವೇಳೆ ನೀವು ಅಕ್ಕಿಯನ್ನು ಮಾತ್ರ ನಿಮ್ಮ ಊಟಕ್ಕೆ ಬಳಸುತ್ತೀರಾದರೆ ಹೇಗೆ ಬಳಸಬೇಕು ಗೊತ್ತಾ? ಮೂರರಲ್ಲಿ ಎರಡಂಶದ ಕಪ್ ಅಥವಾ ನಾಲ್ಕರಲ್ಲಿ ಮೂರಂಶದ ಕಪ್ ನಲ್ಲಿ ಅನ್ನವನ್ನು ಸೇವಿಸಬಹುದು.
ಅತೀ ಹೆಚ್ಚಿನ ಪ್ರಮಾಣದಲ್ಲಿ ಒಂದು ವೇಳೆ ನೀವು ಅನ್ನವನ್ನೇ ಸೇವಿಸಿದರೆ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್ಸ್ ಅಧಿಕವಾಗಬಹುದು. ಅದನ್ನು ಕರಗಿಸಲು ನೀವು ಪ್ರಯತ್ನಿಸಬೇಕಾಗುತ್ತದೆ. ಕಾರ್ಬೋಹೈಡ್ರೇಟ್ಸ್ ಗಳನ್ನು ನೀವು ಕರಗಿಸದೇ ಇದ್ದರೆ, ಅದು ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತೆ ಮತ್ತು ನಿಮ್ಮ ದೇಹದ ವಿವಿಧ ಭಾಗಗಳಲ್ಲಿ ಕೊಬ್ಬಾಗಿ ಶೇಖರಣೆಗೊಳ್ಳುತ್ತೆ.

ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಸ್ ಗಳು ನಿಮ್ಮ ದೇಹಕ್ಕೆ ಕೂಡಲೇ ಸಕ್ಕರೆ ಅಂಶವನ್ನು ಒದಗಿಸಿ ಅದನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ನಿಮ್ಮ ದೇಹದಲ್ಲಿ ಇನ್ಸುಲಿನ್ ಲೆವೆಲ್ ಅಧಿಕವಾಗುತ್ತೆ. ಹಾಗಾಗಿ ಸಕ್ಕರೆ ಕಾಯಿಲೆ ಇರುವ ರೋಗಿಗಳಿಗೆ ಇದು ಸ್ವಲ್ಪ ಸಮಸ್ಯೆದಾಯಕವಾಗಿರುತ್ತದೆ. ಸಣ್ಣ ಅಕ್ಕಿಯ ಧಾನ್ಯದಲ್ಲಿ ಹೆಚ್ಚು ಗ್ಲೈಸಮಿಕ್ ಇಂಡೆಕ್ಸ್ ಇದ್ದು ಇದು ನಿಮ್ಮ ರಕ್ತದ ಸಕ್ಕರೆ ಅಂಶವನ್ನು ಬಹು ಬೇಗನೆ ವೃದ್ಧಿಸಿ ಬಿಡುತ್ತದೆ.

ಅಕ್ಕಿಯ ಶೇಖರಣೆ ಹೇಗಿರಬೇಕು?
ಗಾಳಿ ನುಸುಳದ ಡಬ್ಬಗಳಲ್ಲಿ ಬಿಳಿ ಅಕ್ಕಿಯನ್ನು ಶೇಕರಿಸಿ, 70 ಡಿಗ್ರಿ ಫ್ಯಾರನೀಟ್ ಅಥವಾ ಅದಕ್ಕಿಂತ ತಾಪಮಾನದಲ್ಲಿರುವ ತುಂಪಾದ ಶುಷ್ಕ ಜಾಗಗಳಲ್ಲಿ ಶೇಖರಿಸಿ ಇಡಬಹುದು. ಕಂದು ಅಕ್ಕಿಯನ್ನು 6 ತಿಂಗಳವರೆಗೆ ತಂಪಾದ ಶುಷ್ಕ ಜಾಗದಲ್ಲಿ ಶೇಖರಿಸಿ ಇಡಬಹುದು. ಒಮ್ಮೆ ಅಕ್ಕಿಯನ್ನು ಬೇಯಿಸಿದ ನಂತರ ಕೂಡಲೇ ಬಳಸಿ, ಒಂದು ವೇಳೆ ರೆಫ್ರಿಜರೇಟರ್ ನಲ್ಲಿ ಇಟ್ಟರೆ ಎರಡು ದಿನದ ಒಳಗೆ ಬಳಸಲೇಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚು ಸಮಯ ಬಿಟ್ಟರೆ ನಿಮ್ಮ ಆರೋಗ್ಯಕ್ಕೆ ಅಷ್ಟು ಹಿತವಲ್ಲ. ಆದರೆ ಕನ್ನಡಿಗರು ಹೀಗೆ ಸೇವಿಸುವುದೇ ಇಲ್ಲ. ತಂಗಳು ತಿನ್ನಬಾರದು ಎಂದೇ ಹೇಳುತ್ತಾರೆ.

ಅಕ್ಕಿಯನ್ನು ಬೇಯಿಸುವ ಆರೋಗ್ಯಕಾರಿ ವಿಧಾನಗಳು
ಒಂದು ಲೋಟ ಅಕ್ಕಿಗೆ ಎರಡು ಲೋಟ ನೀರು ಸೇರಿಸಿ ಬೇಯಿಸುವುದು ಒಂದು ನಾರ್ಮಲ್ ಕ್ರಮವಾಗಿದೆ. ಆದರೆ ಅಕ್ಕಿಯ ವಿಧಾನದ ಮೇಲೆ ನೀರು ಹಾಕುವುದು ಕೂಡ ಬೇರೆಬೇರೆಯಾಗಿರಬಹುದು.ಅನ್ನಕ್ಕೆ ಬದಿಯಲ್ಲಿ ನೀವು ತರಕಾರಿಗಳಿಂದ ತಯಾರಿಸಿದ ಯಾವುದೇ ಪದಾರ್ಥವನ್ನೂ ಬಳಸಬಹುದು.. ಸಾರು, ಸಾಂಬಾರು, ಪಲ್ಯ ಮಾಡಬಹುದು. ಇನ್ನು ಅಕ್ಕಿಯನ್ನು ಸಿಹಿ ತಿನಿಸುಗಳ ತಯಾರಿಕೆಯಲ್ಲೂ ಬಳಸುತ್ತಾರೆ. ಈ ಲೇಖನವನ್ನು ಶೇರ್ ಮಾಡಿ.! ನಿಮಗೆ ಈ ಲೇಖನ ಇಷ್ಟವಾದರೆ ನಿಮ್ಮವರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಿ

English summary

Did You Know These Nutrition Facts Of Rice?

According to the Rice Association, there are different types of rice, such as long grain rice, long grain white rice, whole grain rice, Basmati rice, Jasmine rice, the aromatics, and Japonica rice. Some other varieties of rice are Arborio rice, sticky rice, brown rice, wild rice, and Wild Pecan rice. Let's have a look at the nutrition facts of rice.
X
Desktop Bottom Promotion