For Quick Alerts
ALLOW NOTIFICATIONS  
For Daily Alerts

ಕಿಸ್‌ನಿಂದ ಆರೋಗ್ಯಕ್ಕೆ ಬರೋಬ್ಬರಿ 10 ಲಾಭಗಳಿವೆಯಂತೆ!

|

ಕೆಲವೊಂದು ದಿನ ನಾವು ಬೆಳಿಗ್ಗೆ ಎದ್ದಾಗ ಉಲ್ಲಸಿತರಾಗಿರುತ್ತೇವೆ ಹಾಗೂ ಕೆಲವು ದಿನ ರೇಗಾಡುವ ಮನೋಭಾವ ಹೊಂದಿರುತ್ತೇವೆ. ಒಂದು ವೇಳೆ ರೇಗಾಟ ಬೆಳಗ್ಗಿನಿಂದ ಪ್ರಾರಂಭವಾದರೆ ಇದು ದಿನವಿಡೀ ಮುಂದುವರೆದು ಮನಸ್ಸನ್ನೇ ಕದಡಬಹುದು. ಈ ಭಾವನೆ ಸತತವಾಗಿರುವವರಿಗೊಂದು ಒಳ್ಳೆಯ ಸುದ್ದಿ ಇದೆ. ಏನೆಂದರೆ ಬೆಳಿಗ್ಗೆದ್ದಾಗ ರೇಗಾಟದ ಮನೋಭಾವವಿದ್ದರೂ ಒಂದು ಚುಂಬನವನ್ನು ನೀಡುವ ಮೂಲಕ ಮನಸ್ಸಿನಿಂದ ಈ ಭಾವನೆ ಹೊರಟುಹೋಗುತ್ತದೆ ಎಂದು ವಿಜ್ಞಾನವೇ ತಿಳಿಸುತ್ತಿದೆ. ಈಗಲೂ ಅರ್ಥವಾಗಿಲ್ಲವೇ?

ಹಾಗಾದರೆ ಈ ಲೇಖನದಲ್ಲಿ ಒದಗಿಸಿರುವ ಎಲ್ಲಾ ಮಾಹಿತಿಗಳನ್ನು ಓದಿ ಮನನ ಮಾಡಿಕೊಳ್ಳಿ. ಚುಂಬನದ ಮೂಲಕ ತುಟಿಗಳನ್ನು ಸಂಕುಚಿಸುವುದು ಎಷ್ಟು ಆರೋಗ್ಯಕರ ಎಂಬುದನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ನೀವು ಇನ್ನೂ ಚುಂಬನದ ಅಭ್ಯಾಸ ಹೊಂದಿರದೇ ಇದ್ದಲ್ಲಿ ಈ ಅಭ್ಯಾಸವನ್ನು ಇಂದಿನಿಂದಲೇ ಪ್ರಾರಂಭಿಸಲು ಒಂದಲ್ಲ ಎರಡಲ್ಲ, ಒಟ್ಟು ಹನ್ನೆರಡು ಮಾಹಿತಿಗಳು ಖಂಡಿತಾ ನೆರವಾಗಲಿದೆ...

ಇದರಿಂದ ಉದ್ವೇಗ ಕಡಿಮೆಯಾಗುತ್ತದೆ

ಇದರಿಂದ ಉದ್ವೇಗ ಕಡಿಮೆಯಾಗುತ್ತದೆ

ನಿಮಗೆ ಉದ್ವೇಗಕ್ಕೊಳಗಾಗುವ ತೊಂದರೆ ಇದೆಯೇ? ಅಥವಾ ನಿಮ್ಮ ಮನದಲ್ಲಿರುವ ಒತ್ತಡ ಮತ್ತು ಉದ್ವೇಗಗಳನ್ನು ನಿಭಾಯಿಸಲು ನಿಮ್ಮಿಂದ ಆಗುತ್ತಿಲ್ಲವೇ? ಹಾಗಾದರೆ ನೀವು ಚುಂಬನದ ನೆರವನ್ನೇಕೆ ಪಡೆಯಬಾರದು? ಚುಂಬನದ ಸಮಯದಲ್ಲಿ ದೇಹದಲ್ಲಿ ಸ್ರವಿಸುವ ಆಕ್ಸಿಟೋಸಿನ್ ಮಾನಸಿಕ ಉದ್ವೇಗವನ್ನು ಕಡಿಮೆ ಮಾಡಿ ಹೆಚ್ಚು ನಿರಾಳತೆ ಅನುಭವಿಸಲು ನೆರವಾಗುತ್ತದೆ ಹಾಗೂ ಒಟ್ಟಾರೆ ನಿರಾಳತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಅಷ್ಟಕ್ಕೂ ಪ್ರೀತಿಗೆ ಬೆಟ್ಟಗಳನ್ನೇ ಅಲ್ಲಾಡಿಸುವ ಶಕ್ತಿ ಇರುವಾಗ ಪ್ರೀತಿಯ ಸಂಕೇತವಾದ ಚುಂಬನಕ್ಕೆ ಈ ಚಿಕ್ಕ ತೊಂದರೆ ಸರಿಸಾಟಿಯೇ?

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ

ಸಾಮಾನ್ಯವಾಗಿ ಚುಂಬನದ ವೇಳೆಯಲ್ಲಿ ಹೃದಯದ ಬಡಿತ ತೀವ್ರಗೊಳ್ಳುತ್ತದೆ. ಈ ಸಮಯದಲ್ಲಿ ರಕ್ತನಾಳಗಳೂ ಹಿಗ್ಗಿ ಹೆಚ್ಚು ವಿಶಾಲವಾಗುತ್ತವೆ ಹಾಗೂ ರಕ್ತ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಸರಾಗವಾಗಿ ಸಾಗಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಅಧಿಕ ರಕ್ತದೊತ್ತಡ ತಗ್ಗುತ್ತದೆ. ಅಷ್ಟೇ ಅಲ್ಲ, ಇದು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಹಿಳೆಯರಿಗೇ ಏಕೆ? ಮಾಸಿಕ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ಸೆಡೆತ ಹಾಗೂ ನೋವನ್ನು ಕಡಿಮೆಗೊಳಿಸಲು ಚುಂಬನ ನೆರವಾಗುತ್ತದೆ. ಇನಿಯನಿಂದ ಈ ಸಮಯದಲ್ಲಿ ಪಡೆದ ಒಂದು ಸಿಹಿಚುಂಬನ ರಕ್ತಪರಿಚಲನೆಯನ್ನು ತೀವ್ರಗೊಳಿಸಿ ಮನಸ್ಸಿಗೆ ಮುದನೀಡುವ ರಸದೂತಗಳನ್ನು ಬಿಡುಗಡೆಗೊಳಿಸಿ ನೋವನ್ನು ಕಡಿಮೆ ಮಾಡುವ ಜೊತೆಗೇ ಮನೋಭಾವವನ್ನೂ ಉತ್ತಮಗೊಳಿಸುತ್ತದೆ.

ಚುಂಬನದಿಂದ ಬಾಂಧವ್ಯ ಉತ್ತಮಗೊಳ್ಳುತ್ತದೆ

ಚುಂಬನದಿಂದ ಬಾಂಧವ್ಯ ಉತ್ತಮಗೊಳ್ಳುತ್ತದೆ

ಕುಟುಂಬ ಸದಸ್ಯರಲ್ಲಿ ವಿನಿಮಯಗೊಳ್ಳುವ ಚುಂಬನ ಕುಟುಂಬವನ್ನು ಭದ್ರವಾಗಿಸಲು ಭದ್ರಬುನಾದಿಯಾಗಿದೆ. ಮೇಲೆ ವಿವರಿಸಿದಂತೆ ಚುಂಬನದ ಮೂಲಕ ಬಿಡುಗಡೆಗೊಳ್ಳುವ ಆಕ್ಸಿಟೋಸಿನ್ ಮನಸ್ಸಿಗೆ ಮುದನೀಡುವ ರಸದೂತವಾಗಿದೆ ಹಾಗೂ ಇದರ ಸ್ರವಿಕೆಯಿಂದ ಈ ಸಮಯದಲ್ಲಿ ಈ ಮುದನೀಡುವಿಕೆಗೆ ಕಾರಣವಾದ ವ್ಯಕ್ತಿಯ ಪ್ರತಿ ಆರಾಧನಾ ಮತ್ತು ರಕ್ಷಣೆ ಪಡೆಯುವ ಭಾವನೆ ಮೂಡುತ್ತದೆ

ಆತ್ಮಗೌರವ ಹೆಚ್ಚುತ್ತದೆ

ಆತ್ಮಗೌರವ ಹೆಚ್ಚುತ್ತದೆ

ನಂಬುತ್ತೀರೋ ಇಲ್ಲವೋ, ಚುಂಬನದಿಂದ ಆತ್ಮಗೌರವ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಹಲವು ವ್ಯಕ್ತಿಗಳು ತಮ್ಮಲ್ಲಿರುವ ಕೆಲವಾರು ಕೀಳರಿಮೆಗಳಿಂದ ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದು ಈ ವ್ಯಕ್ತಿಗಳ ದೇಹದಲ್ಲಿ ಕಾರ್ಟಿಸೋಲ್ ಹೆಚ್ಚಿನ ಪ್ರಮಾಣದಲ್ಲಿದ್ದುದು ಕಂಡುಬಂದಿದೆ. ಪರಿಣಾಮವಾಗಿ ಇವರಲ್ಲಿ ಮಾನಸಿಕ ಒತ್ತಡ ಹೆಚ್ಚೇ ಇರುತ್ತದೆ. ಈ ವ್ಯಕ್ತಿಗಳೂ ಆಪ್ತರಿಂದ ಪಡೆದ ಒಂದು ಚುಂಬನದ ಮೂಲಕ ಮನಸ್ಸಿಗೆ ಮುದನೀಡುವ ರಸದೂತಗಳನ್ನು ಪಡೆದು ಕಾರ್ಟಿಸೋಲ್ ಮಟ್ಟವನ್ನು ಕಡಿಮೆಗೊಳಿಸುವ ಮೂಲಕ ಹೆಚ್ಚು ಆತ್ಮವಿಶ್ವಾಸದಿಂದ ಮುಂದೆ ಸಾಗಿರುವುದು ಕಂಡುಬಂದಿದೆ. ಇವೆರಡೂ ಪ್ರಕ್ರಿಯೆಗಳಿಂದ ವ್ಯಕ್ತಿ ಅಪಾರವಾದ ಆತ್ಮವಿಶ್ವಾಸವನ್ನೂ ಆತ್ಮಗೌರವವನ್ನೂ ಪಡೆದು ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲು ಸಾಧ್ಯವಾಗಿದೆ.

ತಲೆನೋವನ್ನು ಕಡಿಮೆಗೊಳಿಸುತ್ತದೆ

ತಲೆನೋವನ್ನು ಕಡಿಮೆಗೊಳಿಸುತ್ತದೆ

ಸಾಮಾನ್ಯವಾಗಿ ತಲೆನೋವು ಇದ್ದವರು ತಾವು ಕುಡಿಯುವ ಟೀ ಮೂಲಕವೇ ತಲೆನೋವು ವಾಸಿಯಾಗುತ್ತದೆ, ಇನ್ನೇನೂ ಬೇಡ ಎಂದು ತಿಳಿಸುತ್ತಾರೆ. ವಾಸ್ತವವಾಗಿ ಒಂದು ಸರಳ ಚುಂಬನವೂ ತಲೆನೋವನ್ನು ಕಡಿಮೆಗೊಳಿಸಬಹುದು! ಏಕೆ? ಹೇಗೆ? ಎಂದು ಕೇಳಿದವರಿಗೆ ಮೇಲೆ ವಿವರಿಸಿದ ಮಾಹಿತಿಯೇ ಇಲ್ಲಿ ನೆರವಿಗೆ ಬರುತ್ತದೆ. ಚುಂಬನದ ಸಮಯದಲ್ಲಿ ಬಿಡುಗಡೆಯಾಗುವ ಮನಸ್ಸಿಗೆ ಮುದಗೊಳಿಸುವ ರಸದೂತಗಳು ಮನಸ್ಸಿನ ಒತ್ತಡವನ್ನು ನಿವಾರಿಸುವ ಜೊತೆಗೇ ಮೆದುಳಿಗೆ ರಕ್ತ ಹರಿಸುವ ರಕ್ತನಾಳಗಳನ್ನೂ ಸಡಿಲಗೊಳಿಸಿ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಮಾನಸಿಕ ಒತ್ತಡ ಹಾಗೂ ಅಧಿಕ ರಕ್ತದೊತ್ತಡ ತಲೆನೋವಿಗೆ ಪ್ರಮುಖ ಕಾರಣವಾಗಿದ್ದು ಇವೆರಡೂ ಇಲ್ಲದೇ ಹೋದಾಗ ತಲೆನೋವೂ ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತದೆ.ಇನ್ನು ಮುಂದೆ ನಿಮಗೆ ತಲೆನೋವಾದರೆ ಏನು ಮಾಡಬೇಕೆಂದು ಈಗ ನಿಮಗೆ ಗೊತ್ತಿದೆ!

ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಉತ್ತಮಗೊಳಿಸುತ್ತದೆ

ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಉತ್ತಮಗೊಳಿಸುತ್ತದೆ

2009ರಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ನಿಯಮಿತವಾಗಿ ಚುಂಬನದಲ್ಲಿ ಪಾಲ್ಗೊಳ್ಳುವ ದಂಪತಿಗಳ ರಕ್ತಪರೀಕ್ಷೆಯಲ್ಲಿ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರ ಮಿತಿಗಳಲ್ಲಿದ್ದುದು ಕಂಡುಬಂದಿದೆ. ಹೃದ್ರೋಗಗಳು ಆವರಿಸುವ ಸಾಧ್ಯತೆ ಈ ಮಟ್ಟಗಳ ಏರುಪೇರಿನಿಂದ ಹೆಚ್ಚುತ್ತದೆ. ಈ ಮಟ್ಟಗಳು ಆರೋಗ್ಯಕರ ಮಿತಿಯಲ್ಲಿದ್ದಷ್ಟೂ ಆರೋಗ್ಯವೂ ಉತ್ತಮವೇ ಅಗಿರುತ್ತದೆ. ಅಷ್ಟೇ ಅಲ್ಲ, ಚುಂಬನದ ಮೂಲಕ ಅನಾರೋಗ್ಯಕರವಾದ ಹೆಚ್ಚುವರಿ ಕ್ಯಾಲೋರಿಗಳೂ ದಹಿಸಲ್ಪಡುತ್ತವೆ. ಚುಂಬನದ ತೀವ್ರತೆಯನ್ನು ಅನುಸರಿಸಿ ಪ್ರತಿನಿಮಿಷಕ್ಕೆ ಸುಮಾರು ಎರಡರಿಂದ ಆರು ಕ್ಯಾಲೋರಿಗಳು ದಹಿಸಲ್ಪಡುತ್ತವೆ. ಚುಂಬನದಲ್ಲಿ ಮುಖದ ಎರಡರಿಂದ ಮೂವತ್ತನಾಲ್ಕು ಸ್ನಾಯುಗಳು ಬಳಸಲ್ಪಡುತ್ತವೆ. ವಾಸ್ತವವಾಗಿ ಆರು ಕ್ಯಾಲೋರಿಗಳು ಅಂದರೆ ಅಲ್ಪ ಪ್ರಮಾಣವೇ ಆಗಿದ್ದರೂ ಈ ಅಲ್ಪ ಪ್ರಮಾಣವನ್ನು ದಹಿಸುವ ಸಮಯದಲ್ಲಿ ಪಡೆಯುವ ಆನಂದಕ್ಕೆ ಎಣೆಯಿರಲಾರದು. ಮುಖದ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ದೊರಕುವ ಜೊತೆಗೇ ಮುಖದ ಚರ್ಮದ ಅಡಿಯಲ್ಲಿ ಕೊಲ್ಯಾಜೆನ್ ಕಣಗಳನ್ನು ಹೆಚ್ಚು ಉತ್ಪಾದಿಸಲು ಪ್ರಚೋದನೆ ದೊರಕುತ್ತದೆ. ತನ್ಮೂಲಕ ಮುಖದ ತ್ವಚೆ ಹೆಚ್ಚು ತಾರುಣ್ಯ ಮತ್ತು ಆರೋಗ್ಯದಿಂದ ಕಂಗೊಳಿಸುತ್ತವೆ.

ಲೈಂಗಿಕ ಆಸಕ್ತಿಯನ್ನು ಉತ್ತೇಜಿಸುತ್ತದೆ

ಲೈಂಗಿಕ ಆಸಕ್ತಿಯನ್ನು ಉತ್ತೇಜಿಸುತ್ತದೆ

ಚುಂಬನ ಲೈಂಗಿಕ ಭಾವನೆಯನ್ನು ಭುಗಿಲೇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರಲ್ಲಿ ಲೈಂಗಿಕ ಕಾಮನೆಗೆ ಅಗತ್ಯವಾದ ಟೆಸ್ಟಾಸ್ಟೆರೋನ್ ಎಂಬ ರಸದೂತ ಲಾಲಾರಸದಲ್ಲಿಯೂ ಇರುತ್ತದೆ. ಚುಂಬನದ ಸಮಯದಲ್ಲಿ ಹೆಚ್ಚು ಹೆಚ್ಚು ಲಾಲಾರಸ ಉತ್ಪಾದನೆಯಾಗುತ್ತದೆ ಹಾಗೂ ಈ ಮೂಲಕ ಹೆಚ್ಚುವ ಲೈಂಗಿಕ ಆಸಕ್ತಿ ಇನ್ನೂ ಹಲವಾರು ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ದಂಪತಿಗಳ ನಡುವಣ ನಿಯಮಿತ ಲೈಂಗಿಕ ಕ್ರಿಯೆಯ ಮೂಲಕ ಪುರುಷರ ದೇಹದಲ್ಲಿ IgA ಅಥವಾ Immunoglobulin A ಎಂಬ ರಸದೂತ ಹೆಚ್ಚು ಹೆಚ್ಚು ಉತ್ಪತ್ತಿಯಾಗುತ್ತದೆ ಹಾಗೂ ಈ ರಾಸಾಯನಿಕ ಹೆಚ್ಚಿದ್ದಷ್ಟೂ ರೋಗ ನಿರೋಧಕ ಶಕ್ತಿ ಉತ್ತಮವಾಗಿರುತ್ತದೆ ಹಾಗೂ ಹಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತದೆ. ಇದರ ಜೊತೆಗೇ ಚುಂಬನ ಹೃದಯದ ಆರೋಗ್ಯವನ್ನು ವೃದ್ದಿಸುವ ಒಂದು ವ್ಯಾಯಾಮವೂ ಆಗಿದ್ದು ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ ಹಾಗೂ ಕಾಲು ಮತ್ತು ಬೆನ್ನು ನೋವಿನಿಂದಲೂ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಮೈಗ್ರೇನ್ ತಲೆನೋವು ಮತ್ತು ಮಹಿಳೆಯರಿಗೆ ಮಾಸಿಕ ಸೆಡೆತಗಳಿಂದಲೂ ಪರಿಹಾರ ಒದಗಿಸುತ್ತದೆ.

ಚುಂಬನ ಜೀವನಸಂಗಾತಿಯನ್ನು ಆರಿಸಿಕೊಳ್ಳಲೂ ನೆರವಾಗುತ್ತದೆ

ಚುಂಬನ ಜೀವನಸಂಗಾತಿಯನ್ನು ಆರಿಸಿಕೊಳ್ಳಲೂ ನೆರವಾಗುತ್ತದೆ

ಚುಂಬನದ ಮೂಲಕ ಜೀವನಸಂಗಾತಿಯನ್ನು ಆರಿಸಿಕೊಳ್ಳಲೂ ಸಾಧ್ಯವಾಗುತ್ತದೆ ಎಂದರೆ ನಂಬಲಾಗುತ್ತದೆಯೇ? ಈ ಬಗ್ಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ಬಹುತೇಕ ಎಲ್ಲಾ ಮಹಿಳೆಯರು ತಾವು ತಮ್ಮ ಇನಿಯರಿಂದ ಪಡೆದ ಪ್ರಥಮ ಚುಂಬನದ ಮೂಲಕ ತಾವು ಆವರತ್ತ ಆಕರ್ಷಿತರಾಗಲು ಹಾಗೂ ಅವರ ಪ್ರಿಯತಮೆಯಾಗಲು ಮನಸ್ಸು ವಾಲಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಈ ಮಾಹಿತಿ ನಿಜ ಎನ್ನಲು ಕೇವಲ ಹೇಳಿಕೆಗಳು ಸಾಕಾಗುವುದಿಲ್ಲ, ಇದರ ಹಿಂದೆ ವೈಜ್ಞಾನಿಕ ಪುರಾವೆಯೂ ಇದೆ. ನಮ್ಮ ಮೆದುಳಿನಲ್ಲಿರುವ ಕಾರ್ಟೆಕ್ಸ್ ಎಂಬ ಭಾಗ ನಮ್ಮ ತುಟಿ, ನಾಲಿಗೆ, ಮೂಗು ಮತ್ತು ಕೆನ್ನೆಗಳ ಭಾಗದಲ್ಲಿ ಉಂಟಾದ ಸಂವೇದನೆಯನ್ನು ಗ್ರಹಿಸುತ್ತದೆ ಹಾಗೂ ಈ ಭಾಗಗಳಿಗೆ ಎದುರಾಗುವ ಸ್ಪರ್ಶ, ಪರಿಮಳ, ರುಚಿ ಮೊದಲಾದವುಗಳನ್ನು ಗ್ರಹಿಸುತ್ತದೆ. ಚುಂಬನದ ಸಮಯದಲ್ಲಿಯೂ ಕಾರ್ಟೆಕ್ಸ್ ಈ ಸಂವೇದನೆಗಳನ್ನು ಗ್ರಹಿಸುತ್ತದೆ ಹಾಗೂ ಚುಂಬನ ಪಡೆಯುತ್ತಿರುವ ವ್ಯಕ್ತಿಯ ವಿವರಗಳನ್ನು ಪಡೆಯತೊಡಗುತ್ತದೆ. ಈ ಮೂಲಕ ಚುಂಬನಕ್ಕೆ ಒಳಗಾದ ಇಬ್ಬರಿಗೂ ಈ ವ್ಯಕ್ತಿ ತನ್ನ ಜೀವನ ಸಂಗಾತಿಯಾಗಲು ಯೋಗ್ಯನೇ/ಳೇ ಎಂಬ ನಿರ್ಧಾರವನ್ನು ಪಡೆಯಲು ಸಾಧ್ಯವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ

ಚುಂಬನದ ಸಮಯದಲ್ಲಿ ದಂಪತಿಗಳು ಪರಸ್ಪರ ಲಾಲಾರಸವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇದು ಸಂಭವಿಸಿದಾಗ ಪರಸ್ಪರರ ಲಾಲಾರಸದಲ್ಲಿರುವ ಸೂಕ್ಷ್ಮಜೀವಿಗಳೂ ಇನ್ನೊಬ್ಬರಿಗೆ ದಾಟಿಕೊಳ್ಳುತ್ತವೆ. ಈ ಮೂಲಕ ದೇಹಕ್ಕೆ ಆವರಿಸಿದ ಹೊಸ ಕ್ರಿಮಿಗಳನ್ನು ಎದುರಿಸಲು ದೇಹ ಸನ್ನದ್ದವಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಇನ್ನಷ್ಟು ಪ್ರಬಲವಾಗುತ್ತದೆ. ಉದಾಹರಣೆಗೆ, ಕೆಲವು ಸಂದರ್ಭಗಳಲ್ಲಿ Cytomegalovirus ಎಂಬ ವೈರಸ್ (ಗರ್ಭಿಣಿಗೆ ಒಂದು ವೇಳೆ ಗರ್ಭಾವಸ್ಥೆಯಲ್ಲಿದ್ದಾಗ ಈ ವೈರಸ್ ನ ಸೋಂಕು ಎದುರಾದರೆ ಹುಟ್ಟಲಿರುವ ಮಗು ನ್ಯೂನ್ಯತೆಗಳ ಜೊತೆಗೇ ಹುಟ್ಟುತ್ತದೆ) ಚುಂಬನದ ಅವಧಿಯಲ್ಲಿ ಅಲ್ಪ ಪ್ರಮಾಣದಲ್ಲಿ ವಿನಿಮಯಗೊಂಡರೆ ಮಹಿಳೆಯ ದೇಹದಲ್ಲಿ ಈ ವೈರಸ್ ಎನ್ನು ಎದುರಿಸಲು ರೋಗ ನಿರೋಧಕ ವ್ಯವಸ್ಥೆ ಸಜ್ಜುಗೊಳ್ಳುತ್ತದೆ ಹಾಗೂ ಮುಂದಿನ ಬಾರಿ ಈ ಮಹಿಳೆಗೆ ಈ ವೈರಸ್ ನ ಸೋಂಕು ಎದುರಾದರೆ ಆಕೆಯ ದೇಹ ಈ ವೈರಸ್ ನ ಧಾಳಿಯನ್ನೆದುರಿಸಲು ಸನ್ನದ್ದವಾಗಿರುತ್ತದೆ.

ಒತ್ತಡ ನಿವಾರಿಸುತ್ತದೆ

ಒತ್ತಡ ನಿವಾರಿಸುತ್ತದೆ

ಚುಂಬನದ ಸಮಯದಲ್ಲಿ ಹೃದಯದ ಬಡಿತ ಹೆಚ್ಚುವುದು ಮಾತ್ರವಲ್ಲ, ರಕ್ತನಾಳಗಳೂ ಹಿಗ್ಗುತ್ತವೆ ಹಾಗೂ ಈ ಮೂಲಕ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಅಧಿಕ ರಕ್ತದೊತ್ತಡವಿರುವ ವ್ಯಕ್ತಿಗಳು ಚುಂಬನಕ್ಕೆ ಹೆಚ್ಚು ಹೆಚ್ಚಾಗಿ ಒಲವು ತೋರಲು ಪ್ರೋತ್ಸಾಹಿಸಲಾಗುತ್ತದೆ. ಅಲ್ಲದೇ ದೇಹದಲ್ಲಿ ಒತ್ತಡಕ್ಕೆ ಕಾರಣವಾಗುವ ರಸದೂತಗಳ ಉತ್ಪಾದನೆಯನ್ನು ನಿಗ್ರಹಿಸಲೂ ಚುಂಬನ ನೆರವಾಗುವ ಮೂಲಕ ಒತ್ತಡದಿಂದ ಬಿಡುಗಡೆ ನೀಡುತ್ತದೆ. ಮಾನಸಿಕ ಒತ್ತಡಕ್ಕೆ ಕಾರಣವಾದ ಮುಖ್ಯ ರಸದೂತವೆಂದರೆ ಕಾರ್ಟಿಸೋಲ್. ಚುಂಬನದ ಮೂಲಕ ಈ ರಸದೂತದ ಬಿಡುಗಡೆಯೂ ಕಡಿಮೆಯಾಗುತ್ತದೆ. ಆದ್ದರಿಂದ ವಿಪರೀತವಾದ ಒತ್ತಡಕ್ಕೆ ಒಳಗಾದವರು ಖಿನ್ನತಾನಿವಾರಕ (ಹಾಗೂ ಅಪಾಯಕಾರಿ) ಗುಳಿಗೆಯನ್ನು ಸೇವಿಸುವ ಬದಲು ತಮ್ಮ ಸಂಗಾತಿಯೊಂದಿಗೆ ಕೊಂಚ ಹೊತ್ತು ಅಧರಚುಂಬನದಲ್ಲಿ ಮಗ್ನರಾಗುವ ಮೂಲಕ ಈ ಒತ್ತಡದಿಂದ ಸುಲಭವಾಗಿ ಹೊರಬರ ಬಹುದು.

English summary

Did You Know These 10 Benefits Of Smooching?

A smooch or a kiss is more than just a way of showing love or affection.It has been scientifically proven to have multiple mental as well as physical health benefits! From making us stress-free to improving our immune system, here's presenting 10 reasons why smooching could help us lead a happier and healthier life!
X
Desktop Bottom Promotion