For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವ- ಆಯುರ್ವೇದೀಯ ಟಾನಿಕ್‌ಗಳು

By Arshad
|

ಆಯುರ್ವೇದದ ಪ್ರಕಾರ ನಮ್ಮ ಆರೋಗ್ಯ ಚೆನ್ನಾಗಿರಲು ಅಗ್ನಿ ಅಥವಾ ಬೆಂಕಿ ಎಂಬ ಧಾತು ಕಾರಣವಾಗಿದೆ. ಈ ಧಾತುವಿಗೆ ನಮ್ಮ ದೇಹದ ಜೀವಕೋಶ-ಅಂಗಾಂಶಗಳ ಒಳಗೆ ಯಾವ ವಸ್ತುಗಳಿಗೆ ಪ್ರವೇಶ ಪಡೆಯಬಹುದು ಅಥವಾ ನಿವಾರಿಸಬಹುದು ಎಂದು ನಿರ್ಧರಿಸುವ ಶಕ್ತಿ ಇದೆ. ನಾವು ಸೇವಿಸುವ ಆಹಾರಗಳು ಈ ಅಗ್ನಿಯನ್ನು ಇನ್ನಷ್ಟು ಬಲಪಡಿಸಬಹುದು ಅಥವಾ ಶಿಥಿಲಗೊಳಿಸಿ ಆರೋಗ್ಯವನ್ನು ಬಾಧಿಸಬಹುದು.

ಆಯುರ್ವೇದದ ಪ್ರಕಾರ ಅನಾರೋಗ್ಯಕ್ಕೆ ಕಾರಣಗಳೇನು?

ಆಯುರ್ವೇದದ ಪ್ರಕಾರ ಅನಾರೋಗ್ಯಕರ ಆಹಾರಗಳ ಸೇವನೆ, ಅತಿಯಾಗಿ ತಣ್ಣಗಿರುವ ಆಹಾರಗಳು, ಸಿದ್ದರೂಪದ ಆಹಾರ ಮೊದಲಾದವೆಲ್ಲಾ ದೇಹದಲ್ಲಿ 'ಆಮ' ಎಂಬ ವಿಷವಸ್ತುವಿನ ಉತ್ಪಾದನೆಗೆ ಕಾರಣವಾಗುತ್ತವೆ. ಈ ವಿಷವಸ್ತುಗಳೇ ಅನಾರೋಗ್ಯಕ್ಕೆ ಮೂಲವಾಗಿದ್ದು ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತವೆ.

ಆರೋಗ್ಯ ಉಳಿಸಿಕೊಳ್ಳಬೇಕಾದರೆ ಹೀಗೆ ಮಾಡಿ

ಆಯುರ್ವೇದದ ಪ್ರಕಾರ ಉತ್ತಮ ಆರೋಗ್ಯ ಉಳಿಸಿಕೊಳ್ಳಬೇಕಾದರೆ ಮೊದಲಾಗಿ ಆಹಾರಕ್ರಮವನ್ನು ಬದಲಿಸಿಕೊಳ್ಳಬೇಕಾಗುತ್ತದೆ ಹಾಗೂ ದೇಹದಲ್ಲಿ ಅಗ್ನಿಯ ಪ್ರಮಾಣವನ್ನು ಸಮತೋಲನಗೊಳಿಸಬೇಕಾಗುತ್ತದೆ. ಈ ಜೀವರಾಸಾಯನಿಕ ಅಗ್ನಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಈ ಕ್ರಮಗಳನ್ನು ಅನುಸರಿಸಬೇಕು:

1. ಆರೋಗ್ಯಕರ ಆಹಾರಗಳನ್ನೇ ಸೇವಿಸಿ, ಅತಿಯಾದ ಎಣ್ಣೆ ಇರುವ, ಹುರಿದ, ಅತಿ ಖಾರ ಅಥವಾ ತಣ್ಣನೆಯ ಆಹಾರಗಳನ್ನು ವರ್ಜಿಸಿ. ಹೆಚ್ಚು ಹೆಚ್ಚು ಕ್ಷಾರೀಯ ಆಹಾರಗಳನ್ನು ಸೇವಿಸಿ. ಇವು ದೇಹದಲ್ಲಿ ಅಗ್ನಿಯ ಪ್ರಭಾವವನ್ನು ನಿಯಂತ್ರಿಸಲು ನೆರವಾಗುತ್ತವೆ.
2. ಹೆಚ್ಚು ಪ್ರಮಾಣದಲ್ಲಿ ಸೇವಿಸದಿರಿ, ಪ್ರತಿ ಬಾರಿ ಹಸಿವಾದಾಗಲೂ ಮಿತಪ್ರಮಾಣದಲ್ಲಿಯೇ ಸೇವಿಸಿ.
3. ಪ್ರತಿ ಎರಡು ಊಟಗಳ ನಡುವೆ ಕನಿಷ್ಠ ಮೂರು ಗಂಟೆಗಳಾದರೂ ಏನನ್ನೂ ಸೇವಿಸಬಾರದು. ಈ ಮೂಲಕ ಅಜೀರ್ಣತೆಯಾಗುವುದನ್ನು ತಡೆಯಬಹುದು ಹಾಗೂ ಆಮ್ಲೀಯತೆ, ಹುಳಿತೇಗು ಮೊದಲಾದ ಜಠರ ಮತ್ತು ಜೀರ್ಣಸಂಬಂಧಿ ತೊಂದರೆಗಳೂ ಎದುರಾಗುವುದಿಲ್ಲ. ಒಂದು ವೇಳೆ ಜೀರ್ಣಶಕ್ತಿಗೆ ಸಂಬಂಧಿಸಿದ ಯಾವುದೇ ತೊಂದರೆ ಎದುರಾದರೆ ಆಯುರ್ವೇದ ಈ ಬಗೆಯ ಚಿಕಿತ್ಸೆಗಳನ್ನು ಸೂಚಿಸುತ್ತದೆ:

ಹೊಟ್ಟೆಯ ಗ್ಯಾಸ್ ಕಡಿಮೆ ಮಾಡಲು 7 ಉಪಾಯ

1. ಅಜೀರ್ಣತೆ

1. ಅಜೀರ್ಣತೆ

ಒಂದು ವೇಳೆ ಅಜೀರ್ಣತೆಯ ತೊಂದರೆ ಇದ್ದರೆ ನೀವು ಹೆಚ್ಚು ಹೆಚ್ಚಾಗಿ ಹಬೆಯಲ್ಲಿ ಬೇಯಿಸಿದ ಅಥವಾ ಬೆಂಕಿಯಲ್ಲಿ ಸುಟ್ಟ ತರಕಾರಿಗಳನ್ನು ಸೇವಿಸಬೇಕು. ಜೀರ್ಣಶಕ್ತಿಯನ್ನು ಚುರುಕುಗೊಳಿಸುವ ಮಸಾಲೆಗಳಾದ ಶುಂಠಿ, ಕಾಳುಮೆಣಸು, ದಾಲ್ಚಿನ್ನಿ ಮೊದಲಾದವುಗಳನ್ನೂ ಸೇವಿಸಬೇಕು. ಇನ್ನೊಂದು ಉಪಶಮನ ನೀಡುವ ವಿಧಾನವೆಂದರೆ ಕಾಲು ಲೋಟ ಗೋಧಿಯಹುಲ್ಲಿನ ರಸದಲ್ಲಿ (wheatgrass juice) ಹತ್ತರಿಂದ ಹನ್ನೆರಡು ತುಳಸಿ ಎಳೆಗಳು ಮತ್ತು ಮೂರರಿಂದ ನಾಲ್ಕು ಎಸಳು ಬೆಳ್ಳುಳ್ಳಿಯನ್ನು ಸೇರಿಸಿ ಚೆನ್ನಾಗಿ ಗೊಟಾಯಿಸಿ ದಿನಕ್ಕೊಂದು ಬಾರಿ ಕುಡಿಯಿರಿ.

2.ಹೊಟ್ಟೆಯುಬ್ಬರಿಕೆ

2.ಹೊಟ್ಟೆಯುಬ್ಬರಿಕೆ

ಈ ತೊಂದರೆಗೆ ಸರಳವಾದ ಪರಿಹಾರವಿದೆ. ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಕೊಂಚ ಹಸಿಶುಂಠಿ, ಕಲ್ಲುಪ್ಪು ಮತ್ತು ಚಿಟಿಕೆ ಇಂಗು ಬೆರೆಸಿ ಊಟದ ಬಳಿಕ ನಿಧಾನವಾಗಿ ಕುಡಿಯಿರಿ. ಇದರಿಂದ ಹೊಟ್ಟೆಯುಬ್ಬರಿಕೆಯುಂಟಾಗುವುದಿಲ್ಲ. ಊಟದ ಬಳಿಕ ದೊಡ್ಡಜೀರಿಗೆಯ ಕಾಳುಗಳನ್ನೂ ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಂಡು ಹೊಟ್ಟೆಯುಬ್ಬರಿಕೆಯಾಗುವುದನ್ನು ತಡೆಯುತ್ತದೆ.

3. ಮಲಬದ್ಧತೆ

3. ಮಲಬದ್ಧತೆ

ಒಂದು ಚಿಕ್ಕಚಮಚ ತುಪ್ಪವನ್ನು ಒಂದೂಕಾಲು ಲೋಟದಷ್ಟು ನೀರಿನಲ್ಲಿ ಬೆರೆಸಿ ಅರ್ಧ ಚಿಕ್ಕಚಮಚ ಉಪ್ಪು ಹಾಕಿ ಕಲಕಿ. ಈ ನೀರನ್ನು ರಾತ್ರಿ ಊಟ ಮಾಡಿದ ಒಂದು ಘಂಟೆಯ ಬಳಿಕ ಕುಡಿಯಿರಿ. ಈ ನೀರಿನಲ್ಲಿರುವ ತುಪ್ಪ ಜೀರ್ಣಾಂಗಳ ಒಳಗೆ ಆಹಾರದ ಚಲನೆಗೆ ಸೂಕ್ತವಾದ ಜಾರುಕದಂತೆ ಕೆಲಸಮಾಡುತ್ತದೆ. ಉಪ್ಪಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಸೋಂಕಿನಿಂದ ರಕ್ಷಿಸುತ್ತದೆ. ಪರಿಣಾಮವಾಗಿ ಮಲಬದ್ದತೆಯ ತೊಂದರೆ ನೈಸರ್ಗಿಕವಾಗಿ ಕಡಿಮೆಯಾಗುತ್ತದೆ.

4. ಹೊಟ್ಟೆಯ ಹುಣ್ಣುಗಳು

4. ಹೊಟ್ಟೆಯ ಹುಣ್ಣುಗಳು

ಹೊಟ್ಟೆಯ ಹುಣ್ಣು ಅಥವಾ ಗ್ಯಾಸ್ಟ್ರಿಕ್ ಅಲ್ಸರ್ ಎಂದು ಕರೆಯಲಾಗುವ ಈ ತೊಂದರೆ ಹೊಟ್ಟೆಯ ಒಳಪದರಲ್ಲಿ ಉಂಟಾಗುವ ಹುಣ್ಣುಗಳಾಗಿದ್ದು ಹಲವು ವ್ಯಕ್ತಿಗಳು ಈ ತೊಂದರೆಗೆ ಒಳಗಾಗುತ್ತಾರೆ. ಸಾಮಾನ್ಯವಾಗಿ ಈ ಹುಣ್ಣುಗಳಿಗೆ ನೀಡಲಾಗುವ ಔಷಧಿಗಳ ಅಡ್ಡ ಪರಿಣಾಮದಿಂದ ಅತಿಸಾರ, ತಲೆನೋವು ಮೊದಲಾದವು ಎದುರಾಗುತ್ತವೆ. ಆದ್ದರಿಂದ ಈ ತೊಂದರೆಯನ್ನು ಯಾವುದೇ ಅಡ್ಡಪರಿಣಾಮಗಳಿಲ್ಲದೇ ನಿವಾರಿಸಲು ನೈಸರ್ಗಿಕ ಸಾಮಾಗ್ರಿಗಳೇ ಉತ್ತಮ. ಆಹಾರದಲ್ಲಿ ಜೇನು, ಎಲೆಕೋಸಿನ ರಸ, ಬೆಳ್ಳುಳ್ಳಿ, ಅರಿಶಿನ ಮೊದಲಾದವುಗಳನ್ನು ಸೇವಿಸಬೇಕು. ಎಲೆಕೋಸಿನ ರಸವನ್ನು ತಯಾರಿಸಲು ಒಂದೂಮುಕ್ಕಾಲು ಕಪ್ ನೀರು ಮತ್ತು ಸುಮಾರು ಮೂರು ಕಪ್ (ಸುಮಾರು 675 ಗ್ರಾಂ) ಚಿಕ್ಕದಾಗಿ ಕತ್ತರಿಸಿದ ಎಲೆಕೋಸಿನ ತುರಿಯನ್ನು ಚೆನ್ನಾಗಿ ಕುದಿಸಿ ಬಳಿಕ ಮಿಕ್ಸಿಯಲ್ಲಿ ಕಡೆದು ಬಟ್ಟೆಯಲ್ಲಿ ಸೋಸಿ ರಸವನ್ನು ಸಂಗ್ರಹಿಸಬೇಕು. ಈ ರಸವನ್ನು ಫ್ರಿಜ್ಜಿನಲ್ಲಿರಿಸಿ ತಣ್ಣಗಾದ ಬಳಿಕವೇ ಸೇವಿಸಬೇಕು. ಒಂದು ಅಧ್ಯಯನದ ಪ್ರಕಾರ ಅಲ್ಸರ್ ತೊಂದರೆ ಇರುವ ವ್ಯಕ್ತಿಗಳು ದಿನದ ಅವಧಿಯಲ್ಲಿ ಒಟ್ಟು 946 ಮಿಲೀನಶ್ಟು ಈ ರಸವನ್ನು ಸೇವಿಸಿದ ಬಳಿಕ ಈ ಹುಣ್ಣುಗಳು ಸುಮಾರು ಏಳರಿಂದ ಹತ್ತು ದಿನಗಳ ಅವಧಿಯಲ್ಲಿ ಸಂಪೂರ್ಣವಾಗಿ ಗುಣವಾಗಿವೆ.

5. ಎದೆಯುರಿ

5. ಎದೆಯುರಿ

ಎದೆಯುರಿ ಅಥವಾ ಹುಳಿತೇಗು (ಅಜೀರ್ಣತೆಯಿಂದ ಎದುರಾದ ಆಮ್ಲೀಯತೆ) ನಿವಾರಣೆಗೆ ಮಜ್ಜಿಗೆಯೇ ಅತ್ಯುತ್ತಮ ಔಷಧಿಯಾಗಿದೆ. ಕೊಂಚ ಮೊಸರಿಗೆ ಸಮಪ್ರಮಾಣದ ನೀರು ಬೆರೆಸಿ ಕೊಂಚ ಕಲ್ಲುಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಹುರಿದ ಜೀರಿಗೆಯ ಪುಡಿಯನ್ನೂ, ಒಂದು ಚಿಕ್ಕ ತುಂಡು ಶುಂಠಿಯನ್ನೂ ಬೆರೆಸಿ ಇನ್ನಷ್ಟು ಸ್ವಾದಭರಿತವಾಗಿಸಬಹುದು. ಈ ದ್ರವವನ್ನು ಊಟದ ಬಳಿಕ ಸೇವಿಸುವುದರಿಂದ ಹುಳಿತೇಗು ಇಲ್ಲವಾಗುತ್ತದೆ.

ಎದೆಯುರಿ ಸಮಸ್ಯೆ- ಒಂದೆರಡು ದಿನಗಳಲ್ಲಿಯೇ ನಿಯಂತ್ರಣಕ್ಕೆ!

6. ಹೊಟ್ಟೆಯುರಿ (Gastritis)

6. ಹೊಟ್ಟೆಯುರಿ (Gastritis)

ಜಠದ ಒಳಭಾದ ಪದರದಲ್ಲಿ ಎದುರಾಗುವ ಉರಿಯೂತದಿಂದ ಎದುರಾಗುವ ಈ ತೊಂದರೆ ಸಮಾನ್ಯವಾಗಿ ಸಂಸ್ಕರಿಸಿದ, ಅತಿಯಾದ ಮಸಾಲೆಯುಕ್ತ ಅಹಾರ ಅಥವಾ ಮದ್ಯ ಸೇವನೆಯಿಂದಲೇ ಎದುರಾಗುತ್ತದೆ. ಈ ತೊಂದರೆಯನ್ನು ನಿವಾರಿಸಲು ಬೆಳ್ಳುಳ್ಳಿ, ಹಸಿರು ಟೀ ಅಥವಾ ಮನುಕಾ ಜೇನು (ಈ ಜೇನಿಗೆ ಔಷಧೀಯ ಗುಣಗಳಿವೆ) ಸೇವಿಸಬಹುದು. ಹಸಿರು ಟೀ ಯಲ್ಲಿ ಕೊಂಚ ಮನುಕಾ ಜೇನು ಬೆರೆಸಿ ಕುಡಿಯಬಹುದು.

7.ಅತಿಸಾರ

7.ಅತಿಸಾರ

ಒಂದು ವೇಳೆ ಈ ತೊಂದರೆ ಬಾಧಿಸುತ್ತಿದ್ದರೆ ನೀವು ದಿನಿವಿಡೀ ಇತರ ದಿನದಲ್ಲಿ ಸೇವಿಸುವುದಕ್ಕಿಂತಲೂ ಹೆಚ್ಚು ಪ್ರಮಾಣದ ನೀರನ್ನು ಕುಡಿಯುತ್ತಿರಬೇಕು. ಅಲ್ಲದೇ ಹೆಚ್ಚಿನ ಪ್ರಮಾಣದ ಆಹಾರವನ್ನು ಸೇವಿಸಬಾರದು. ಸುಲಭವಾಗಿ ಜೀರ್ಣವಾಗುವಂತಹ ಆಹಾರಗಳನ್ನೇ ಸೇವಿಸಬೇಕು. ಈ ತೊಂದರೆಗೆ ಸುಲಭ ಪರಿಹಾರವೆಂದರೆ ಒಂದೂಕಾಲು ಲೋಟ ನೀರಿನಲ್ಲಿ ಒಂದಿಂಚು ದೊಡ್ಡ ಶುಂಠಿಯನ್ನು ಚಿಕ್ಕದಾಗಿ ತುರಿದು ಬೆರೆಸಿ ಹಾಗೂ ಕೊಂಚ aniseed (ದೊಡ್ಡಜೀರಿಗೆಯನ್ನು ಹೋಲುವ ಕಾಳುಗಳು) ಕಾಳುಗಳನ್ನು ಬೆರೆಸಿ ಈ ನೀರನ್ನು ಕುದಿಸಿ. ಬಳಿಕ ಈ ನೀರನ್ನು ಸೋಸಿ ತಣ್ಣಗಾದ ಬಳಿಕ ಚಿಟಿಕೆಯಷ್ಟು ಅರಿಶಿನ ಬೆರೆಸಿ ಕುಡಿಯಿರಿ. ಇದರಲ್ಲಿರುವ ಶುಂಠಿ ಅತಿಸಾರ ತೊಂದರೆಯನ್ನು ನಿವಾರಿಸುವ ಜೊತೆಗೇ ಜೀರ್ಣಶಕ್ತಿಯನ್ನೂ ಉತ್ತಮಗೊಳಿಸುತ್ತದೆ.

ಹೊಟ್ಟೆ ನೋವು ನಿರ್ಲಕ್ಷಿಸಬೇಡಿ! ಇದರ ಹಿಂದಿದೆ ಭಯಾನಕ ಸಮಸ್ಯೆ!

English summary

Curb Stomach Problems Naturally

As per ayurveda, fire or agni is responsible for our overall health. Agni has the ability to judge which substance entering our cells and tissues should be removed. The food you consume either strengthens this agni or affects it adversely and makes you weak.Consuming junk foods, very cold foods, processed meats, etc. result in the formation of toxins which are referred to as ama in ayurveda. These toxins are the main causes for triggering ailments and weakening the body's immunity.
X
Desktop Bottom Promotion