ಪುರುಷರೇ, ಶಿಶ್ನದ ಬಗ್ಗೆ ನಿಮಗೆ ತಿಳಿದಿರದ 12 ಸಮಸ್ಯೆಗಳು

Subscribe to Boldsky

ಪುರುಷರ ಆರೋಗ್ಯವನ್ನು ಪರಿಗಣಿಸಿದಾಗ ಜನನಾಂಗದ ಆರೋಗ್ಯವೂ ಪ್ರಮುಖವಾಗಿದ್ದು ಇದರ ಆರೋಗ್ಯದ ಮಹತ್ವವನ್ನು ಸಾರಲು ಸಾಕಷ್ಟು ಸಾಕ್ಷಿಗಳನ್ನು ನೀಡಬಹುದು. ಸಾಮಾನ್ಯವಾಗಿ ಇದು ಅತ್ಯಂತ ಖಾಸಗಿ ಅಂಗವಾದ ಕಾರಣ ಹೆಚ್ಚಿನ ಪುರುಷರು ಈ ಅಂಗದ ಆರೋಗ್ಯದ ಬಗ್ಗೆ ಹೆಚ್ಚಿನ ಚಿಂತೆ ಮಾಡುವುದಿಲ್ಲ, ಆದರೆ ಇವರಿಗೆ ಅರಿವೇ ಇಲ್ಲದಂತೆ ಕೆಲವು ಸಾಮಾನ್ಯ ತೊಂದರೆಗಳು ಎದುರಾಗಬಹುದು.

ಜನನಾಂಗದ ಕ್ಷಮತೆ ಮತ್ತು ಆರೋಗ್ಯವನ್ನು ಕುಂದಿಸುವ ಕೆಲವಾರು ಕಾರಣಗಳಿವೆ, ಇವುಗಳಲ್ಲಿ ಲೈಂಗಿಕ ಸೋಂಕುಗಳು ಮತ್ತು ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನೂ ಅಲಕ್ಷಿಸುವಂತಿಲ್ಲ. ಈ ಅಂಗದ ಆರೋಗ್ಯ ದಾಂಪತ್ಯದ ಮೇಲೆ ನೇರವಾದ ಸಂಬಂಧ ಹೊಂದಿದ್ದು ಆತ್ಮವಿಶ್ವಾಸವನ್ನೇ ಕುಂದಿಸಬಹುದು.

ಶಿಶ್ನದ ಬಗ್ಗೆ ನೀವು ತಿಳಿದಿರದ ಕೆಲವೊಂದು ಆಸಕ್ತಿಕರ ಸಂಗತಿಗಳು

ಶಿಶ್ನದ ಆರೋಗ್ಯವನ್ನು ಬಾಧಿಸುವ ಅಂಶಗಳು ಯಾವುವು?:

* ಅಸುರಕ್ಷಿತ ಲೈಂಗಿಕ ಸಂಪರ್ಕದ ಮೂಲಕ ಲೈಂಗಿಕವಾಗಿ ಹರಡುವ ರೋಗಗಳು ಮತ್ತು ಸೋಂಕುಗಳು ಅಮರಿಕೊಳ್ಳಬಹುದು

* ಹೃದಯ ರೋಗ ಮತ್ತು ಅಧಿಕ ರಕ್ತದೊತ್ತಡ ನಿಮಿರು ದೌರ್ಬಲ್ಯವನ್ನುಂಟುಮಾಡಬಹುದು

* ಕೆಲವು ಔಷಧಿಗಳ ಪ್ರಭಾವ ಹಾಗೂ ಚಿಕಿತ್ಸೆಯ ಅನಿವಾರ್ಯ ಪರಿಣಾಮ (ಉದಾಹರಣೆಗೆ ಪ್ರಾಸ್ಟೇಟ್ ಗ್ರಂಥಿಯನ್ನು ನಿವಾರಿಸುವುದು) ಅಥವಾ ಬೇರಾವುದೋ ಪ್ರಮುಖ ಅಂಗಾಂಶವನ್ನು ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸುವುದು ಸಹಾ ನಿಮಿರು ದೌರ್ಬಲ್ಯಕ್ಕೆ ಕಾರಣವಾಗಬಹುದು.

* ಧೂಮಪಾನದಿಂದಲೂ ನಿಮಿರು ದೌರ್ಬಲ್ಯ ಎದುರಾಗಬಹುದು.

* ಕಡಿಮೆಯಾದ ಟೆಸ್ಟೋಸ್ಟೆರಾನ್ ರಸದೂತದ ಮಟ್ಟ, ಮನೋವೈಜ್ಞಾನಿಕ ಕಾರಣಗಳು, ನರಸಂಬಂಧಿ ಸ್ಥಿತಿಗಳು, ಅತಿಯಾದ ಆಕ್ರಮಣಶೀಲ ಲೈಂಗಿಕ ಧೋರಣೆ ಮೊದಲಾದವೂ ಶಿಶ್ನದ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು.

ಶಿಶ್ನಕ್ಕೆ ಎದುರಾಗುವ ಸಾಮಾನ್ಯ ತೊಂದರೆಗಳು ಯಾವುವು?

1. ಸ್ಖಲನದ ತೊಂದರೆ:

1. ಸ್ಖಲನದ ತೊಂದರೆ:

ಈ ತೊಂದರೆ ವಿವಿಧ ಬಗೆಗಳಲ್ಲಿರುತ್ತವೆ. ಪ್ರಮುಖವಾದ ಬಗೆ ಎಂದರೆ ಸ್ಖಲನದ ಪ್ರಮಾಣದಲ್ಲಿ ಕಡಿಮೆಯಾಗಿರುವುದು. ವಾಸ್ತವವಾಗಿ ವೀರ್ಯಾಣುಗಳ ಪ್ರಮಾಣ ಸಾಕಷ್ಟು ಉತ್ಪತ್ತಿಯಾಗಿದ್ದರೂ ಕಾಮಪರಾಕಾಷ್ಠೆಯ ಸಮಯದಲ್ಲಿ ಪೂರ್ಣಪ್ರಮಾಣದಲ್ಲಿ ಶಿಶ್ನದ ತುದಿಯಿಂದ ಹೊರಬೀಳದೇ ಕೊಂಚ ಮಾತ್ರವೇ ಹೊರಬಿದ್ದು ಉಳಿದ ಪ್ರಮಾಣ ಮೂತ್ರಕೋಶಕ್ಕೆ ಧಾವಿಸುತ್ತದೆ. ಇದಕ್ಕೆ retrograde ಎಂದು ಕರೆಯುತ್ತಾರೆ. ಪರಿಣಾಮವಾಗಿ ಈ ಪುರುಷರು ನಪುಂಸಕತ್ವದ ತೊಂದರೆಯನ್ನು ಎದುರಿಸುತ್ತಾರೆ. ಅವಧಿಗೂ ಮುನ್ನ ಸಂಭವಿಸುವ ಸ್ಖಲನ ಎಂದರೆ ಪ್ರವೇಶ ಪಡೆಯುವುದಕ್ಕೂ ಮುನ್ನ ಅಥವಾ ಈಗತಾನೇ ಪ್ರವೇಶ ಪಡೆದ ಶಿಶ್ನದಿಂದ ಸ್ಖಲನವಾಗುವುದು. ಇದಕ್ಕೆ ವಿರುದ್ದವಾದ ಪರಿಣಾಮವೆಂದರೆ ವಿಳಂಬ ಸ್ಖಲನ. ಪ್ರವೇಶವಾದ ಎಷ್ಟು ಹೊತ್ತಾದರೂ ಸ್ಖಲನಗೊಳ್ಳದೇ ಇದ್ದಲ್ಲಿ ಈ ತೊಂದರೆ ಎದುರಾಗುತ್ತದೆ. ಮಾನಸಿಕ ಒತ್ತಡ, ಖಿನ್ನತೆ, ಲೈಂಗಿಕ ಭಯ, ಮಧುಮೇಹ ಇತ್ಯಾದಿಗಳು ಈ ತೊಂದರೆಗಳಿಗೆ ಕಾರಣವಾಗಿವೆ.

2. ಪ್ರಿಯಾಪಿಸಂ (Priapism)

2. ಪ್ರಿಯಾಪಿಸಂ (Priapism)

ಇದೊಂದು ಗಂಭೀರವಾದ ಶಿಶ್ನದ ತೊಂದರೆಯಾಗಿದ್ದು ಈ ಸ್ಥಿತಿಗೆ ಒಳಗಾದ ಶಿಶ್ನ ನಿಮಿರುತನವನ್ನು ಪಡೆದ ಬಳಿಕ ಲೈಂಗಿಕ ಪ್ರಚೋದನೆಯಿಲ್ಲದೇ ಘಂಟೆಗಟ್ಟಲೇ ಇದೇ ಸ್ಥಿತಿಯಲ್ಲಿರುತ್ತದೆ. ಜನನಾಂಗಕ್ಕೆ ಆಗಮಿಸುವ ರಕ್ತದ ಒಳ ಮತ್ತು ಹೊರಹರಿವು ಸಮರ್ಪಕವಾಗಿಲ್ಲದಿದ್ದರೆ ಈ ತೊಂದರೆ ಎದುರಾಗಬಹುದು. ಇದೊಂದು ಅಸಾಮಾನ್ಯ ಸ್ಥಿತಿಯಾಗಿದ್ದು ಈ ಸ್ಥಿತಿಯಲ್ಲಿ ಜನನಾಂಗದಲ್ಲಿ ನೋವನ್ನೂ ಅನುಭವಿಸಬೇಕಾಗಿ ಬರಬಹುದು. ಇದಕ್ಕೆ ಸಾಮಾನ್ಯ ಕಾರಣಗಳೆಂದರೆ ಶಿಶ್ನಕ್ಕೆ ಆದ ಪೆಟ್ಟು, ಸಿಕಲ್ ಸೆಲ್ ಅನೀಮಿಯಾ ಅಥವಾ ರಕ್ತದಲ್ಲಿ ಒಂದು ಅಂಶದ ಕೊರತೆ ಹಾಗೂ ಕೆಲವು ಔಷಧಿಗಳ ಪರಿಣಾಮವೂ ಕಾರಣವಾಗಬಹುದು. ಈ ತೊಂದರೆ ಯಾವುದೇ ವಯಸ್ಸಿನ ಪುರುಷರಲ್ಲಿ ಕಾಣಿಸಿಕೊಳ್ಳಬಹುದು.

3.ಫೈಮೋಸಿಸ್ ಅಥವಾ ಪ್ಯಾರಾಫೈಮೋಸಿಸ್ (Phimosis or paraphimosis)

3.ಫೈಮೋಸಿಸ್ ಅಥವಾ ಪ್ಯಾರಾಫೈಮೋಸಿಸ್ (Phimosis or paraphimosis)

ಸುನ್ನತಿ ಅಥವಾ ಶಿಶ್ನದ ಮುಂದೊಗಲು ನಿವಾರಿಸದೇ ಇರುವ ಶಿಶ್ನದ ಮುಂತೊಗಲು ಹಿಂದೆ ಸರಿಯಲು ಸಾಧ್ಯವಾಗದೇ ಇದ್ದರೆ ಫೈಮೋಸಿಸ್ ಎಂಬ ತೊಂದರೆ ಎದುರಾಗುತ್ತದೆ. ಈ ತೊಗಲು ಹಿಂದೆ ಸರಿಯುವುದು ತುಂಬಾ ಅಗತ್ಯವಾಗಿದ್ದು ಹಿಂದೆ ಸರಿಯದೇ ಇದ್ದಲ್ಲಿ ಸೋಂಕು, ಮೂತ್ರವಿಸರ್ಜನೆಯ ಸಮಯದಲ್ಲಿ ಉರಿ ಹಾಗೂ ನಿಮಿರುಗೊಂಡಾಗ ಅಪಾರವಾದ ನೋವನ್ನು ತಂದೊಡ್ಡುತ್ತದೆ.

ಪ್ಯಾರಾಫೈಮೋಸಿಸ್ ಎಂದರೆ ಇದಕ್ಕೆ ವಿರುದ್ದವಾದ ತೊಂದರೆಯಾಗಿದೆ, ಅಂದರೆ ಹಿಂದೆ ಸರಿದ ಮೊಂದೊಗಲು ಪುನಃ ತನ್ನ ಪೂರ್ವಸ್ಥಿತಿಯನ್ನು ತಲುಪಲು ಸಾಧ್ಯವಾಗದೇ ಇರುವುದು. ಇದೂ ನೋವಿಗೆ ಕಾರಣವಾಗುತ್ತದೆ ಹಾಗೂ ಊದಿಕೊಳ್ಳುವುದು, ಶಿಶ್ನಕ್ಕೆ ರಕ್ತಸಂಚಾರ ಕಡಿಮೆ ಮಾಡುವುದು ಮೊದಲಾದ ತೊಂದರೆಗಳನ್ನು ತಂದೊಡ್ಡುತ್ತದೆ.

ಪುರುಷರು ತಮ್ಮ ಶಿಶ್ನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳಲು ನೈಸರ್ಗಿಕ ಪರಿಹಾರ ಸೂತ್ರಗಳು

4. ಜನನಾಂಗದ ಮುರಿತ (Penile fracture)

4. ಜನನಾಂಗದ ಮುರಿತ (Penile fracture)

ಒಂದು ವೇಳೆ ನಿಮಿರುತನ ಪಡೆದ ಶಿಶ್ನವನ್ನು ಪ್ರಯತ್ನಪೂರ್ವಕವಾಗಿ ಬಾಗಿಸಲು ಯತ್ನಿಸಿದರೆ ಇದು ಕೋಲು ಮುರಿದಂತೆ ನದುವಿನಲ್ಲಿ ಮುರಿಯಲೂಬಹುದು. ನಿಮಿರಿದ್ದ ಸಮಯದಲ್ಲಿ (ರಾತ್ರಿಯ ಸ್ವಪ್ನದ ಸಮಯದಲ್ಲಿ ಕೆಳಗೆ ಬಿದ್ದು) ಲೈಂಗಿಕ ವಿಪರೀತ ಪ್ರಯತ್ನದಿಂದ ಅಥವಾ ಅತಿಯಾದ ಘರ್ಷಣೆಯ ಹಸ್ತಮೈಥುನ ಮೊದಲಾದವು ಈ ತೊಂದರೆಯನ್ನು ತಂದೊಡ್ಡುತ್ತವೆ. ನಿಮಿರುತನಕ್ಕೆ ಶಿಶ್ನದ ಒಳಭಾಗದಲ್ಲಿರುವ corpora cavernosa ಎಂಬ ಕೊಳವೆಯಾಕೃತಿಯ ಅಂಗಾಂಶಗಳು ಪ್ರಮುಖವಾಗಿದ್ದು ಇದರಲ್ಲಿ ರಕ್ತತುಂಬಿಕೊಳ್ಳುವ ಮೂಲಕ ಇವು ಹಿಗ್ಗಿ ನಿಮಿರುತನವನ್ನು ಪಡೆಯಲು ನೆರವಾಗುತ್ತವೆ. ಅತಿಯಾದ ಬಾಗುವಿಕೆಯಿಂದ ಈ ಕೊಳವೆಗಳು ನಡುವಿನಲ್ಲಿ ಮುರಿಯಬಹುದು.

5. ಪೇಯ್ರೋನಿ ಕಾಯಿಲೆ (Peyronie's disease)

5. ಪೇಯ್ರೋನಿ ಕಾಯಿಲೆ (Peyronie's disease)

ಶಿಶ್ನದ ಒಳಭಾಗದಲ್ಲಿ ನಾರಿನಂತಹ ಅಂಗಾಂಶದ ಬೆಳವಣಿಗೆಯ ಮೂಲಕ ಶಿಶ್ನ ನಿಮಿರಿದಾಗ ಒಂದು ಕಡೆ ಬಾಗಿದ ಹಾಗೂ ಪ್ರವೇಶ ಪಡೆಯುವಾಗ ನೋವಿನ ಅನುಭವ ನೀಡುತ್ತದೆ. ಪರಿಣಾಮವಾಗಿ ಸಂಗಾತಿಯೊಂದಿಗೆ ಮಿಲನ ಸಾಧ್ಯವಾಗದೇ ಹೋಗುತ್ತದೆ ಮತ್ತು ನಿಮಿರುತನವನ್ನು ಉಳಿಸಿಕೊಳ್ಳಲೂ ಸಾಧ್ಯವಾಗದೇ ವೈಮನಸ್ಯ ಅಥವಾ ದಾಂಪತ್ಯದಲ್ಲಿ ಅಸಂತೃಪ್ತಿ ಮೊದಲಾದ ಪರೋಕ್ಷ ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ತೊಂದರೆ ತಾನಾಗಿಯೇ ಕಡಿಮೆಯಾಗುತ್ತದೆ ಅಥವಾ ಕಾಲಕ್ರಮೇಣ ಉಲ್ಬಣಗೊಳ್ಳಲೂಬಹುದು.

6. ಲಿಂಫಾನ್ಜಿಯೋಸ್ಕ್ಲೆರೋಸಿಸ್ (Lymphangiosclerosis)

6. ಲಿಂಫಾನ್ಜಿಯೋಸ್ಕ್ಲೆರೋಸಿಸ್ (Lymphangiosclerosis)

ಈ ತೊಂದರೆ ಎದುರಾದ ಶಿಶ್ನದ ಒಳಭಾಗದಲ್ಲಿರುವ ದುಗ್ಧಗ್ರಂಥಿಯ ನಾಳ ಗಟ್ಟಿಯಾಗಿಬಿಡುತ್ತದೆ. ಹೀಗೆ ಗಟ್ಟಿಯಾದ ನಾಳ ಶಿಶ್ನದ ಚರ್ಮದ ಅಡಿಯಲ್ಲಿ ಗಟ್ಟಿಯಾದ ದಾರದಂತೆ ತೋರುತ್ತದೆ. ಹೊರಗಿನಿಂದ ಮುಟ್ಟಿದರೆ ಮರದ ಕಡ್ಡಿಯೊಂದು ಒಳಗಿರುವಂತೆ ತೋರುತ್ತದೆ. ಈ ಶಿಶ್ನದ ಯಾವುದೇ ಸ್ಪರ್ಶ, ಹಸ್ತಮೈಥುನವೇ ಆಗಲಿ, ಮಿಲನಕ್ರಿಯೆಯೇ ಆಗಲಿ, ಅಪಾರ ನೋವು ನೀಡುತ್ತದೆ.

7. ಶಿಶ್ನದ ಕ್ಯಾನ್ಸರ್ ಅಥವಾ ಶಿಶ್ನದ ಕಾರ್ಸಿನೋಮಾ (carcinoma of the penis)

7. ಶಿಶ್ನದ ಕ್ಯಾನ್ಸರ್ ಅಥವಾ ಶಿಶ್ನದ ಕಾರ್ಸಿನೋಮಾ (carcinoma of the penis)

ಶಿಶ್ನದ ಒಳಭಾಗದ ಯಾವುದೇ ಅಂಗಾಂಶದ ಜೀವಕೋಶಗಳು ನಿಯಂತ್ರಣ ಮೀರಿ ಬೆಳವಣಿಗೆ ಪಡೆಯುವುದುದೇ ಶಿಶ್ನದ ಕ್ಯಾನ್ಸರ್ ಆಗಿದೆ. ಸಾಮಾನ್ಯವಾಗಿ ಶಿಶ್ನದ ತುದಿಯ ಭಾಗದಲ್ಲಿ ಚಿಕ್ಕ, ನೋವಿಲ್ಲದ ಹಾಗೂ ಸಾಮಾನ್ಯ ಆಕಾರವನ್ನು ಬದಲಿಸುವ ಚಿಕ್ಕ ಗಂಟಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ನಿಧಾನವಾಗಿ ಬೆಳೆಯುತ್ತಾ ಶಿಶ್ನದ ಇತರ ಭಾಗಕ್ಕೂ ವ್ಯಾಪಿಸತೊಡಗುತ್ತದೆ. ಕೆಲವೊಮ್ಮೆ ಈ ಗಂಟಿನಿಂದ ರಕ್ತ ಅಥವಾ ದುರ್ವಾಸನೆಯ ದ್ರವವೂ ಸೂಸಬಹುದು.

8. ಬಾಲನೈಟಿಸ್ (Balanitis)

8. ಬಾಲನೈಟಿಸ್ (Balanitis)

ಶಿಶ್ನದ ಮುಂದೊಗಲು ಅಥವಾ ತುದಿಯ ಭಾಗದಲ್ಲಿ ಎದುರಾಗುವ ಸೋಂಕಿನ ಕಾರಣ ಈ ಭಾಗ ಕಿತ್ತಳೆಯ ಬಣ್ಣಕ್ಕೆ ತಿರುಗುತ್ತದೆ. ಈ ಭಾಗದಲ್ಲಿ ಭಾರೀ ಉರಿ ಮತ್ತು ತುರಿಕೆಯೂ ಇರುತ್ತದೆ. ಸ್ವಚ್ಛತೆಗೆ ಆದ್ಯತೆ ನೀಡದೇ ಇರುವುದು, ಚರ್ಮದ ಕಾಯಿಲೆ, ಮಧುಮೇಹವನ್ನು ನಿಯಂತ್ರಣದಲ್ಲಿರಿಸದೇ ಇರುವುದು, ಅತಿ ಪ್ರಬಲ ಸೋಪುಗಳ ಬಳಕೆ ಮೊದಲಾದವು ಈ ಸ್ಥಿತಿಯನ್ನು ತಂದೊಡ್ಡಬಲ್ಲವು.

9. ಹರ್ಪಿಸ್ (Herpes)

9. ಹರ್ಪಿಸ್ (Herpes)

ಇದೊಂದು Herpes Simplex ಎಂಬ ವೈರಸ್ಸುಗಳ ಮೂಲಕ ಹರಡುವ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಇದು ಜನನಾಂಗಗಳು ಮತ್ತು ಬಾಯಿ (ತೇವಾಂಶ ಅತಿ ಹೆಚ್ಚು ಇರುವ ಮತ್ತು ಗಾಳಿಗೆ ತೆರೆದಿರುವ ಭಾಗಗಳು) ಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮಹಿಳೆಯರಲ್ಲಿ ಯೋನಿಯ ಹೊರಭಾಗದಲ್ಲಿ ಹಾಗೂ ಪುರುಷರಲ್ಲಿ ಶಿಶ್ನದ ತುದಿಯಲ್ಲಿ ಮತ್ತು ಮುಂದೊಗಲಿನ ಒಳಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಈ ಗುಳ್ಳೆಗಳು ಎದ್ದಾಗ ಮೂತ್ರವಿಸರ್ಜನೆಯ ಸಮಯದಲ್ಲಿ ಅಪಾರವಾದ ಉರಿ ಕಾಣಿಸಿಕೊಳ್ಳುತ್ತದೆ ಹಾಗೂ ಸಂಭೋಗವೂ ತೀರಾ ನೋವಿನಿಂದ ಕೂಡಿರುತ್ತದೆ. ಸದಾ ಒಳಗಿನಿಂದ ಸೂಜಿ ಚುಚ್ಚಿದಂತಹ ಅನುಭವ ಮತ್ತು ಬೆಂಕಿ ಬಿದ್ದಂತೆ ಉರಿಯಲು ಪ್ರಾರಂಭವಾಗುತ್ತದೆ.

10. ಶಿಶ್ನಭಾಗದ ಶಿಲೀಂಧ್ರ ಸೋಂಕು (Penile yeast infection)

10. ಶಿಶ್ನಭಾಗದ ಶಿಲೀಂಧ್ರ ಸೋಂಕು (Penile yeast infection)

ಕ್ಯಾಂಡಿಡಾ ಎಂಬ ಶಿಲೀಂಧ್ರದ ಮೂಲಕ ಎದುರಾಗುವ ಈ ಸೊಂಕು ಶಿಶ್ನದ ಹೊರಭಾಗದ ಚರ್ಮದ ಮೇಲೆಲ್ಲಾ ಕೆಂಪು ಗೀರುಗಳು ಮತ್ತು ಕೆಲವೊಮ್ಮೆ ಬಿಳಿಯ ಪದರವೊಂದು ಆವರಿಸಿದಂತೆ ಆವರಿಸುತ್ತದೆ. ಪರಿಣಾಮವಾಗಿ ಸತತ ತುರಿಕೆ ಹಾಗೂ ಭಾರೀ ಉರಿ ಎದುರಾಗುತ್ತದೆ. ಮಧುಮೇಹಿಗಳಿಗೆ ಮತ್ತು ಮಧುಮೇಹ ಆವರಿಸಿಕೊಳ್ಳುತ್ತಿರುವ ಪುರುಷರಿಗೆ ಇದೊಂದು ಸೂಚನೆಯ ರೂಪದಲ್ಲಿಯೂ ಅವರಿಸತೊಡಗುತ್ತದೆ. ಸುನ್ನತಿ ಅಥವಾ ಮುಂದೊಗಲನ್ನು ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸಿಕೊಳ್ಳದೇ ಇರುವ ಪುರುಷರಿಗೆ ಈ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

11. ಜನನಾಂಗದ ಸೋರಿಯಾಸಿಸ್ (Genital psoriasis)

11. ಜನನಾಂಗದ ಸೋರಿಯಾಸಿಸ್ (Genital psoriasis)

ಸಾಮಾನ್ಯವಾಗಿ ಈ ತೊಂದರೆ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಸಮಾನವಾಗಿ ಕಾಣಿಸಿಕೊಳ್ಳುತ್ತದೆ. ಶಿಶ್ನ, ಯೋನಿ, ತೊಡೆಯ ಮೇಲ್ಭಾಗ, ತೊಡೆ ಮತ್ತು ಸೊಂಟದ ನಡುವಣ ಸಂಧಿ ಮೊದಲಾದ ಕಡೆಗಳಲ್ಲಿ ಚಿಕ್ಕ ಚಿಕ್ಕ ಕೆಂಪು ಗುಳ್ಳೆಗಳು ವೃತ್ತಾಕಾರದಲ್ಲಿ ಆವರಿಸಿಕೊಳ್ಳುತ್ತವೆ. ಪುರುಷರಲ್ಲಿ ಶಿಶ್ನದಲ್ಲಿ, ಶಿಶ್ನದ ಬುಡ, ವೃಷಣದ ಭಾಗದಲ್ಲಿಯೂ ಈ ಗುಳ್ಳೆಗಳು ಆವರಿಸಿಕೊಳ್ಳಬಹುದು. ಸುನ್ನತಿ ಮಾಡಿಸಿಕೊಂಡಿರಲಿ ಅಥವಾ ಇಲ್ಲದಿರಲಿ, ಈ ಸ್ಥಿತಿ ಯಾವುದೇ ಪುರುಷರಿಗೆ ಎದುರಾಗಬಹುದು.

12. ಅನೋರ್ಗಾಸ್ಮಿಯಾ (Anorgasmia)

12. ಅನೋರ್ಗಾಸ್ಮಿಯಾ (Anorgasmia)

ಕಾಫ್ಲನ್ಸ್ ಸಿಂಡ್ರೋಮ್ (Coughlan's syndrome)ಎಂದೂ ಕರೆಯಲಾಗುವ ಈ ತೊಂದರೆ ಒಂದು ಲೈಂಗಿಕ ಅಸಾಮರ್ಥ್ಯವಾಗಿದೆ. ಈ ಸ್ಥಿತಿ ಇರುವ ಪುರುಷರಿಗೆ ಸಾಕಷ್ಟು ಲೈಂಗಿಕ ಪ್ರಚೋದನೆ ಒದಗಿಸಿದ ಬಳಿಕವೂ ಕಾಮಪರಾಕಾಷ್ಠೆ ಪಡೆಯಲು ಸಾಧ್ಯವಾಗುವುದಿಲ್ಲ ಹಾಗೂ ಸ್ಖಲನವೂ ಅತಿ ತಡವಾಗಿ ಸಂಭವಿಸುತ್ತದೆ. ರಸದೂತದ ಅಸಮತೋಲನ, ನರವ್ಯವಸ್ಥೆಯ ತೊಂದರೆ ಅಥವಾ ಮಧುಮೇಹ ಈ ತೊಂದರೆಗೆ ಕಾರಣವಾಗಬಹುದು.

ಇದರ ಹೊರತಾಗಿ ಜನನಾಂಗದ ಗಂಟುಗಳು, ಸಿಫಿಲಿಸ್, ಹೈಪೋಸ್ಪಾಡಿಯಾಸ್ ಹಾಗೂ ಪ್ಯೂಡೆಂಡಾಲ್ ನರ ಸಿಲುಕುವಿಕೆ (pudendal nerve entrapment)ಮೊದಲಾದ ಕಾಯಿಲೆಗಳೂ ಶಿಶ್ನದ ಆರೋಗ್ಯವನ್ನು ಬಾಧಿಸಬಹುದು. ಹಾಗಾಗಿ ಇವುಗಳಲ್ಲಿ ಯಾವುದೇ ತೊಂದರೆಯನ್ನು ಗಮನಿಸಿದ ತಕ್ಷಣವೇ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ.ಈ ಲೇಖನವನ್ನು ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.

For Quick Alerts
ALLOW NOTIFICATIONS
For Daily Alerts

    English summary

    Common Penis Problems You Didn't Know Of

    There are a number of ailments and disorders that can harm or damage the functioning of the penis, not to forget STIs and STDs. These health issues can have an impact on your relationship, cause stress and disrupt your self-confidence. Some of the common penis problems are ejaculation problems, penile fracture, herpes, priapism, phimosis, etc.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more