For Quick Alerts
ALLOW NOTIFICATIONS  
For Daily Alerts

ಕೋಕಾ ಹುಡಿಯಲ್ಲಿರುವ ಪ್ರಯೋಜನಗಳು ಒಂದೇ ಎರಡೇ? ಇದು ತುಂಬಾನೇ ಆರೋಗ್ಯಕಾರಿ

By Hemanth
|

ಕೆಲವರಿಗೆ ಚಾಕಲೇಟ್ ಅಂದರೆ ಪಂಚಪ್ರಾಣ. ದಿನದಲ್ಲಿ ಎಷ್ಟು ಚಾಕಲೇಟ್ ತಿಂದರೂ ಇವರಿಗೆ ತೃಪ್ತಿ ಅನ್ನೋದೆ ಇರಲ್ಲ. ಇನ್ನು ಕೆಲವರಿಗೆ ಚಾಕಲೇಟ್ ನೋಡಿದರೆ ಆಗಲ್ಲ. ಚಾಕಲೇಟ್ ಬೊಜ್ಜನ್ನು ಉಂಟು ಮಾಡುವುದು ಮತ್ತು ಇದರಿಂದ ಆರೋಗ್ಯ ಕೂಡ ಕೆಡುವುದು ಎಂದು ಕೆಲವರ ಅಭಿಪ್ರಾಯ. ಚಾಕಲೇಟ್ ನ್ನು ಕೋಕಾ ಬೀಜಗಳಿಂದ ಮಾಡಲಾಗುತ್ತದೆ. ಇದನ್ನು ಹುಡಿ ಮಾಡಿ ಚಾಕಲೇಟ್ ಗೆ ಬಳಸಲಾಗುವುದು. ಕೋಕಾ ಬೀಜಗಳು ಪೋಷಕಾಂಶಗಳ ಆಗರ ಮತ್ತು ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಕೋಕಾ ಹುಡಿಯು ಚಾಕಲೇಟ್ ಉತ್ಪನ್ನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಖಾದ್ಯಗಳನ್ನು ಬೇಕ್ ಮಾಡಲು ಇದು ತುಂಬಾ ಪ್ರಮುಖ ಪಾತ್ರ ವಹಿಸುವುದು. ಕೋಕಾ ಹುಡಿಯಲ್ಲಿ ಇರುವ ಪೋಷಕಾಂಶಗಳು
• ಕೋಕಾ ಹುಡಿಯಲ್ಲಿ ಕೆಲವು ಪ್ರಮುಖ ಖನಿಜಾಂಶಗಳಾಗಿರುವ ಕ್ಯಾಲ್ಸಿಯಂ, ತಾಮ್ರ, ಮೆಗ್ನಿಶಿಯಂ, ಸತು, ಫೋಸ್ಪರಸ್ ಮತ್ತು ಪೊಟಾಶಿಯಂ ಇದೆ.
• ಎರಡು ಚಮಚ ಕೋಕಾ ಹುಡಿಯಲ್ಲಿ 25 ಕ್ಯಾಲರಿ, 1.5 ಗ್ರಾಂ ಕೊಬ್ಬು, 3.6 ಗ್ರಾಂ ನಾರಿನಾಂಶವಿದ್ದು, ಇದು ದೈನಂದಿನ ಅಗತ್ಯಕ್ಕೆ ಬೇಕಾಗಿರುವ ಕೊಬ್ಬಿನ ಶೇ.14ರಷ್ಟಕ್ಕೆ ಸಮಾನವಾಗಿದೆ. ದೈನಂದಿನ ಅಗತ್ಯಕ್ಕೆ ಬೇಕಾಗಿರುವ ಮೆಗ್ನಿಶಿಯಂ ಶೇ. 14ರಷ್ಟು ಇದು ಒದಗಿಸಿಕೊಡುವುದು ಮತ್ತು ದೈನಂದಿನ ಅಗತ್ಯಕ್ಕೆ ಬೇಕಾಗಿರುವ ಶೇ.8ರಷ್ಟು ಕಬ್ಬಿನಾಂಶ ಕೂಡ.
• ಸಸ್ಯಜನ್ಯ ಫ್ಲಾವನಾಯ್ಡ್ ಆಗಿರುವ ಎಪಿಕೆಟೆಚಿನ್ ಮತ್ತು ಕ್ಯಾಟೆಚಿನ್ ಕೂಡ ಕೋಕಾ ಹುಡಿಯಲ್ಲಿದೆ. ಕೋಕಾ ಹುಡಿಯಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ನಾವು ತಿಳಿಯುತ್ತಾ ಸಾಗುವ.
ಕೋಕಾ ಹುಡಿಯಿಂದ ಸಿಗುವ ಆರೋಗ್ಯ ಲಾಭಗಳು ಯಾವುದು?

1. ಅಧಿಕ ರಕ್ತದೊತ್ತಡ ಕಡಿಮೆ ಮಾಡುವುದು

1. ಅಧಿಕ ರಕ್ತದೊತ್ತಡ ಕಡಿಮೆ ಮಾಡುವುದು

ಕೋಕಾ ಹುಡಿಯು ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಸುಧಾರಣೆ ಮಾಡಿ ರಕ್ತದೊತ್ತಡವನ್ನು ಕಡಿಮೆ ಮಾಡುವುದು. ಇದರಲ್ಲಿ ಇರುವಂತಹ ಫ್ಲಾವನಾಲ್ ಗಳು ರಕ್ತದಲ್ಲಿ ನೈಟ್ರಿಕ್ ಆಕ್ಸೈಡ್ ನ ಮಟ್ಟವನ್ನು ಸುಧಾರಣೆ ಮಾಡುವುದು. ಇದರಿಂದ ರಕ್ತನಾಳಗಳ ಚಟುವಟಿಕೆಯು ಉತ್ತಮವಾಗಿ ರಕ್ತದೊತ್ತಡವು ಕಡಿಮೆಯಾಗುವುದು. ಅಧ್ಯಯನಗಳ ಪ್ರಕಾರ ಕೋಕಾ ಹುಡಿಯಲ್ಲಿ 30ರಿಂದ 1,218 ಮಿ.ಗ್ರಾಂ.ನಷ್ಟು ಫ್ಲಾವನಾಲ್ ಗಳಿವೆ. ಇದು ರಕ್ತದೊತ್ತಡವನ್ನು ಸರಾಸರಿ 2ಎಂಎಂಎಚ್ ಜಿಯಷ್ಟು ತಗ್ಗಿಸುವುದು.

2. ಖಿನ್ನತೆ ಶಮನಕಾರಿ

2. ಖಿನ್ನತೆ ಶಮನಕಾರಿ

ಕೋಕಾ ಹುಡಿಯು ಮನಸ್ಥಿತಿ ಸುಧಾರಣೆ ಮಾಡುವುದು ಮತ್ತು ಖಿನ್ನತೆಯ ಲಕ್ಷಣಗಳನ್ನು ತಗ್ಗಿಸುವುದು. ಫೆನೆಥೈಲಾಮೈನ್ ಎನ್ನುವ ಕೋಕಾ ಹುಡಿಯಲ್ಲಿರುವ ಕಂಡುಬರುವಂತಹ ಅಂಶವು, ಮೆದುಳಿನಲ್ಲಿರುವ ನರಸಂವಾಹಕವಾಗಿದ್ದು, ಇದು ಮನಸ್ಥಿತಿ ಸುಧಾರಣೆ ಮಾಡುವುದು ಮತ್ತು ನೈಸರ್ಗಿಕ ಖಿನ್ನತೆ ಶಮನಕಾರಿಯಾಗಿ ಕೆಲಸ ಮಾಡುವುದು. ಕೋಕಾ ಹುಡಿಯು ಸೆರೊಟೊನಿನ್ ಮಟ್ಟವನ್ನು ಉತ್ತಮಪಡಿಸುವುದು. ಇದು ಮತ್ತೊಂದು ನರಸಂವಾಹಕವಾಗಿದ್ದು, ಖಿನ್ನತೆ ಶಮನಕಾರಿಯಾಗಿ ಕೆಲಸ ಮಾಡುವುದು.

3. ಕೋಕಾ ಹುಡಿಯಲ್ಲಿ ಪಾಲಿಫೆನಾಲ್ ಸಮೃದ್ಧವಾಗಿದೆ

3. ಕೋಕಾ ಹುಡಿಯಲ್ಲಿ ಪಾಲಿಫೆನಾಲ್ ಸಮೃದ್ಧವಾಗಿದೆ

ಕೋಕಾ ಹುಡಿಯಲ್ಲಿ ಕಂಡುಬರುವಂತಹ ಫಾಲಿಫೆನಾಲ್ ಗಳು ಆ್ಯಂಟಿಆಕ್ಸಿಡೆಂಟ್ ಗಳಾಗಿದೆ. ಇದು ಬೇರೆ ರೀತಿಯ ಹಣ್ಣುಗಳು, ತರಕಾರಿಗಳು, ಚಾಕಲೇಟ್, ಚಾ ಮತ್ತು ವೈನ್ ನಲ್ಲಿ ಕಂಡುಬರುವುದು. ಪಾಲಿಫೆನಾಲ್ ಗಳು ಹಲವಾರು ರೀತಿಯಿಂದ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿದೆ. ಇದು ಉರಿಯೂತ ಶಮನಕಾರಿಯಾಗಿದ್ದು, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ, ಕೊಲೆಸ್ಟ್ರಾಲ್ ಮಟ್ಟ ಸುಧಾರಿಸಿ ರಕ್ತಸಂಚಾರ ಉತ್ತಮಪಡಿಸುವುದು.

4. ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ

4. ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ

ಕೋಕಾ ಹುಡಿಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವುದು ಮತ್ತು ಹೃದಯಕ್ಕೆ ಸರಿಯಾಗಿ ರಕ್ತಸಂಚಾರವಾಗುವಂತೆ ನೋಡಿಕೊಳ್ಳುವುದು. ಫ್ಲಾವನಾಲ್ ಹೃದಯದ ಆರೋಗ್ಯ ಮತ್ತು ರಕ್ತನಾಳಗಳ ಆರೋಗ್ಯ ಸುಧಾರಣೆ ಮಾಡುವುದು. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಅಪಧಮನಿ ಕಾಯಿಲೆಗಳ ಸಮಸ್ಯೆ ಬರುವುದಿಲ್ಲ.

5. ತೂಕ ಕಾಯ್ದುಕೊಳ್ಳಲು ಸಹಕಾರಿ

5. ತೂಕ ಕಾಯ್ದುಕೊಳ್ಳಲು ಸಹಕಾರಿ

ಕೋಕಾ ಹುಡಿ ಸೇವನೆ ಮಾಡುವುದರಿಂದ ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗುವುದು. ಆಹಾರದ ಕೊಬ್ಬು ದೇಹದಲ್ಲಿ ಪಚನಗೊಂಡು ಶಕ್ತಿಯಾಗಿ ಪರಿವರ್ತಿತವಾಗುವುದು. ಕೋಕಾ ಹುಡಿಯು ಶಕ್ತಿಯ ಬಳಸುವಿಕೆಯನ್ನು ನಿಯಂತ್ರಿಸುವುದು. ಶಕ್ತಿಯ ಬಳಕೆ ಮಾಡದೆ ಇದ್ದರೆ ಆಗ ಕೊಬ್ಬಿನ ಕೋಶಗಳಲ್ಲಿ ಕೊಬ್ಬು ಜಮೆಯಾಗುವುದು. ಕೋಕಾ ಹುಡಿಯು ಹಸಿವನ್ನು ಕಡಿಮೆ ಮಾಡುವುದು, ಉರಿಯೂತ ತಗ್ಗಿಸುವುದು, ಕೊಬ್ಬಿನ ಉತ್ಕರ್ಷಣವನ್ನು ನಿಯಂತ್ರಿಸಿ, ಯಾವಾಗಲೂ ಹೊಟ್ಟೆ ತುಂಬಿರುವಂತೆ ಮಾಡುವುದು.

6. ಅಸ್ತಮಾ ಚಿಕಿತ್ಸೆಗೆ

6. ಅಸ್ತಮಾ ಚಿಕಿತ್ಸೆಗೆ

ಕೋಕಾ ಹುಡಿಯು ಅಸ್ತಮಾ ರೋಗಿಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ. ಯಾಕೆಂದರೆ ಇದರಲ್ಲಿ ಅಸ್ತಮಾ ವಿರೋಧಿ ಅಂಶಗಳಾಗಿರುವ ಥಿಯೋಫಿಲಿನ್ ಮತ್ತು ಥಿಯೋಬ್ರೊಮಿನ್ ಇದೆ. ಥಿಯೋಬ್ರೊಮಿನ್ ಕೆಫಿನ್ ಗೆ ಸಮಾನವಾಗಿದ್ದು, ಇದು ಕಫವನ್ನು ತಡೆಯುವುದು. ಥಿಯೋಫಿಲಿನ್ ಅಂಶವು ಶ್ವಾಸಕೋಶವು ಹಿಗ್ಗಲು ನೆರವಾಗುವುದು ಇದರಿಂದ ಶ್ವಾಸನಾಳಗಳು ಆರಾಮವಾಗಿರುವುದು ಮತ್ತು ಉರಿಯೂತವು ಕಡಿಮೆಯಾಗುವುದು.

7. ದಂತಕುಳಿಯಿಂದ ರಕ್ಷಣೆ

7. ದಂತಕುಳಿಯಿಂದ ರಕ್ಷಣೆ

ಕೋಕಾ ಹುಡಿಯಲ್ಲಿ ಕಿಣ್ವ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಪ್ರತಿರೋಧಕ ಶಕ್ತಿ ವರ್ಧಕ ಗುಣಗಳು ಇವೆ. ಬಾಯಿಯ ಆರೋಗ್ಯಕ್ಕೂ ಇದು ನೆರವಾಗುವುದು. ಕೋಕಾ ಹುಡಿಯು ದಂತುಕುಳಿ ಉಂಟು ಮಾಡುವಂತಹ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಿ ಹಲ್ಲಿನ ಆರೋಗ್ಯವನ್ನು ಸುಧಾರಿಸುವುದು.

8. ಕ್ಯಾನ್ಸರ್ ವಿರೋಧಿ ಗುಣಗಳು

8. ಕ್ಯಾನ್ಸರ್ ವಿರೋಧಿ ಗುಣಗಳು

ಕೋಕಾ ಹುಡಿಯಲ್ಲಿ ಇರುವಂತಹ ಉನ್ನತ ಮಟ್ಟದ ಫ್ಲಾವನಾಲ್ ಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಪ್ರತಿಕ್ರಿಯಾತ್ಮಕ ಕಣಗಳು, ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತವೆ, ಉರಿಯೂತದ ವಿರುದ್ಧ ಹೋರಾಡುವುದು ಮತ್ತು ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುವುದು. ಕೋಕಾವು ಸ್ತನದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಜನನೇಂದ್ರಿಯ ಕ್ಯಾನ್ಸರ್, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಮತ್ತು ಯಕೃತ್ ನ ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುವುದಾಗಿ ಅಧ್ಯಯನಗಳು ಕಂಡುಕೊಂಡಿವೆ.

ದಿನಕ್ಕೆ ಎಷ್ಟು ಕೋಕಾ ಹುಡಿ ಸೇವಿಸಬೇಕು?

ದಿನಕ್ಕೆ ಎಷ್ಟು ಕೋಕಾ ಹುಡಿ ಸೇವಿಸಬೇಕು?

2.5 ಗ್ರಾಂನಷ್ಟು ಅಧಿಕ ಫ್ಲಾವನಾಲ್ ಹೊಂದಿರುವ ಕೋಕಾ ಹುಡಿ ಅಥವಾ 10 ಗ್ರಾಂ ಅಧಿಕ ಫ್ಲಾವನಾಲ್ ಹೊಂದಿರುವ ಡಾರ್ಕ್ ಚಾಕಲೇಟ್ ಸೇವಿಸಬೇಕು. ಇದರಲ್ಲಿ ಸುಮಾರು 200 ಮಿ.ಗ್ರಾಂನಷ್ಟು ಫ್ಲಾವನಾಲ್ ಇದೆ. ಇದು ಆರೋಗ್ಯ ಲಾಭವನ್ನು ಕೊಡುವುದು ಎಂದು ಯುರೋಪಿಯನ್ ಫುಡ್ ಸೇಫ್ಟ್ ಅಥಾರಿಟಿ ಹೇಳಿದೆ.

ಕೋಕಾ ಹುಡಿಯನ್ನು ಆಹಾರ ಕ್ರಮದಲ್ಲಿ ಬಳಸುವುದು ಹೇಗೆ?

ಕೋಕಾ ಹುಡಿಯನ್ನು ಆಹಾರ ಕ್ರಮದಲ್ಲಿ ಬಳಸುವುದು ಹೇಗೆ?

*ಶೇ.70ರಷ್ಟು ಕೋಕಾ ಹೊಂದಿರುವ ಡಾರ್ಕ್ ಚಾಕಲೇಟ್ ಸೇವನೆ ಮಾಡಿ.

*ನೀವು ಕೋಕಾವನ್ನು ಸ್ಮೂಥಿಗೆ ಹಾಕಿಕೊಂಡು ಅದರ ಉನ್ನತ ಮತ್ತು ಚಾಕಲೇಟ್ ರುಚಿ ಸವಿಯಬಹುದು.

*ಬಿಸಿ ಅಥವಾ ತಣ್ಣಗಿನ ಕೋಕಾವನ್ನು ನೀವು ಆಹಾರ ಕ್ರಮದಲ್ಲಿ ಬಳಸಿಕೊಳ್ಳಬಹುದು.

*ನಿಮ್ಮ ಸಿಹಿತಿಂಡಿಗಳು ಮತ್ತು ಸಿಹಿತಿಂಡಿಗಳ ಅಲಂಕಾರಕ್ಕೆ ಕೊಕಾ ಹುಡಿ ಬಳಸಿ.

*ಸ್ಟ್ರಾಬೆರಿ ಅಥವಾ ಬಾಳೆಹಣ್ಣಿನ ಮೇಲೆ ಕೋಕಾ ಹುಡಿ ಸಿಂಪಡಿಸಿ ತಿನ್ನಿ.

English summary

Cocoa Powder: Surprising Health And Nutrition Benefits

Cocoa powder contains several minerals, such as calcium, copper, magnesium, sodium, zinc, phosphorous and potassium. A 2-tbsp serving of cocoa powder contains just 25 calories, 1.5 g of fat, 3.6 g of fibre which is equivalent to 14 per cent of the daily requirement of fibre and provides 14 per cent of the daily requirement of magnesium.
X
Desktop Bottom Promotion