For Quick Alerts
ALLOW NOTIFICATIONS  
For Daily Alerts

ಇದೇ ಕಾರಣಕ್ಕೆ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನ ಸಮಸ್ಯೆ ಕಾಡುವುದು!

|

ಸಂತಾನಾಭಿವೃದ್ಧಿ, ನಿಸರ್ಗ ಈ ಜಗದ ಪ್ರತಿ ಜೀವಿಗೂ ನೀಡಿರುವ ವರದಾನವಾಗಿದ್ದು ಸಂತತಿಯನ್ನು ಮುಂದುವರೆಸಿಕೊಂಡು ಹೋಗುವ ವ್ಯವಸ್ಥೆಯಾಗಿದೆ. ಪ್ರತಿ ಜೀವಿಗೂ ನಿಸರ್ಗ ಸಂತಾನೋತ್ಪತ್ತಿಯ ಭಿನ್ನ ವಿಧಗಳನ್ನು ಒದಗಿಸಿದೆ. ಸಸ್ತನಿಗಳಲ್ಲಿ ಹೆಣ್ಣು ಜೀವಿಯ ಗರ್ಭಾಶಯದಲ್ಲಿ ಬಿಡುಗಡೆಯಾಗುವ ಅಂಡಾಣುವನ್ನು ಪುರುಷರ ವೀರ್ಯಾಣುಗಳು ಸಂಯೋಜನೆಗೊಳ್ಳುವ ಮೂಲಕ ಸಂತಾನೋತ್ಪತ್ತಿ ಮುಂದುವರೆಯುತ್ತದೆ.

ನಿಸರ್ಗದ ಈ ಕ್ರಿಯೆ ಮಾನವರಿಗೂ ಅನ್ವಯವಾಗುತ್ತಿದ್ದು ಇದಕ್ಕಾಗಿ ಮಾನವರೇ ನಿರ್ಮಿಸಿಕೊಂಡ ಸಮಾಜ ವ್ಯವಸ್ಥೆಯಲ್ಲಿ ಈ ಹೊಣೆಯನ್ನು ಸಮಾನವಾಗಿ ಹೊರಲು ವಿವಾಹ ವ್ಯವಸ್ಥೆಯನ್ನೂ ಕಲ್ಪಿಸಿದೆ. ಈ ವ್ಯವಸ್ಥೆಗೆ ಬದ್ದರಾಗಿ ದಂಪತಿಗಳಾದ ಜೋಡಿಗಳು ಸಂತಾನೋತ್ಪತ್ತಿಯಿಂದ ಮಾನವ ಸಂತತಿಯನ್ನು ಮುಂದುವರೆಸಲು ಹಾಗೂ ಈ ಮೂಲಕ ಮಾತಾಪಿತೃರಾಗುವ ಭಾಗ್ಯವನ್ನು ಪಡೆದು ಸಂತಸದ ಜೀವನ ನಡೆಸುತ್ತಾರೆ.

ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಬಂಜೆತನಕ್ಕೆ ಕಾರಣಗಳು

ಕೆಲವು ಸಂದರ್ಭಗಳಲ್ಲಿ, ಕೆಲವು ದಂಪತಿಗಳು ಈ ನಿಸರ್ಗದ ಕೊಡುಗೆಯಿಂದ ವಂಚಿತರಾಗಿರುತ್ತಾರೆ. ದಂಪತಿಗಳಿಗೆ ಮಕ್ಕಳಾಗದೇ ಇರಲು ಪುರುಷರಲ್ಲಿಯೂ ಅಥವಾ ಮಹಿಳೆಯರಲ್ಲಿಯೂ ಇರುವ ಕೆಲವು ಕೊರತೆಗಳು ಸಮಾನವಾಗಿ ಕಾರಣವಾಗಿರಬಹುದು. ಈ ವಾಸ್ತವವನ್ನೇ ಬಂಜೆತನ ಎಂದು ಕರೆಯಲಾಗುತ್ತದೆ.

ಇಂದು ದಂಪತಿಗಳಲ್ಲಿ ಮಕ್ಕಳಾಗದೇ ಇರಲಿಕ್ಕೆ ಇಬ್ಬರಲ್ಲೊಬ್ಬರನ್ನು ಮಾತ್ರವೇ ದೂಷಣೆ ಮಾಡುವ ಬದಲು ಇಬ್ಬರ ಆರೋಗ್ಯವನ್ನು ಪರಿಶೀಲಿಸಿ ನಿಜವಾದ ಕಾರಣವನ್ನು ಕಂಡುಕೊಳ್ಳುವ ಮೂಲಕ ಈ ದಂಪತಿಗಳ ಮಡಿಲನ್ನೂ ತುಂಬಿಸಬಹುದು....

ಪುರುಷರ ಬಂಜೆತನಕ್ಕೆ ಕಾರಣಗಳು

ಪುರುಷರ ಬಂಜೆತನಕ್ಕೆ ಕಾರಣಗಳು

ಒಂದು ವೇಳೆ ಪುರುಷನ ವೀರ್ಯಾಣು ಅಂಡಾಣುವನ್ನು ಕೂಡಲು ವಿಫಲಗೊಂಡರೆ ಇದು ಪುರುಷರ ಬಂಜೆತನಕ್ಕೆ ಕಾರಣವಾಗುತ್ತದೆ. ಇದಕ್ಕೆ ಸ್ಖಲನದ ಬಳಿಕ ಸಂಗ್ರಹಗೊಂಡ ವೀರ್ಯಾಣುಗಳ ಗುಣಮಟ್ಟ ಹಾಗೂ ಒಟ್ಟಾರೆ ಸಾಂದ್ರತೆ ಎರಡೂ ಮುಖ್ಯವಾಗಿರುತ್ತದೆ. ಪ್ರಮುಖವಾಗಿ ಎರಡು ಅಂಶಗಳು ಬಂಜೆತನಕ್ಕೆ ಕಾರಣವಾಗಿವೆ. ಮೊದಲನೆಯದಾಗಿ ವೀರ್ಯಾಣುಗಳ ಸಂಖ್ಯೆ ಪ್ರತಿ ಮಿಲೀ ನಲ್ಲಿ ಕನಿಷ್ಟ ಇರಬೇಕಾದುದಷ್ಟು ಇರದೇ ಇರುವುದು ಹಾಗೂ ಎರಡನೆಯದಾಗಿ ಈ ಸಂಖ್ಯೆಯಲ್ಲಿ ವೀರ್ಯಾಣುಗಳಿದ್ದರೂ ಅಂಡಾಣುವಿನೊಡನೆ ಕೂಡುವಷ್ಟು ದೂರ ಸಾಗಿ ಗುರಿ ತಲುಪಬಲ್ಲ ಶಕ್ತಿ ಹೊಂದಿರದೇ ಇರುವುದು. ಇವರಡರಲ್ಲಿ ಒಂದೂ ಇಲ್ಲದಿದ್ದರೂ ಫಲವಂತಿಕೆ ಸಾಧ್ಯವಿಲ್ಲ. ಸಾಮಾನ್ಯವಾಗಿ ದಂಪತಿಗಳ ನಡುವಣ ಸಮಾಗಮ ಸುಗಮವಾಗಿದ್ದರೇ ಫಲವಂತಿಕೆ ಸಾಧ್ಯ ಎಂಬ ನಂಬಿಕೆ ಇದೆ. ಆದರೆ ಈ ಸ್ಥಿತಿ ಹೊಂದಿರುವ ಪುರುಷರಿಂದ ಸಮಾಗಮ ಸುಗಮವಾಗಿದ್ದರೂ ಬಂಜೆತನ ಕಂಡುಬರುತ್ತದೆ. ಆದರೆ ಪುರುಷರ ಈ ಬಂಜೆತನವನ್ನು ಮೇಲ್ನೋಟಕ್ಕೆ ಗುರುತಿಸಲು ಸಾಧ್ಯವೇ ಇಲ್ಲ. ಈ ಕೊರತೆ ಇದ್ದ ಪುರುಷರು ಇತರ ಪುರುಷರಷ್ಟೇ ಆರೋಗ್ಯವಂತರಾಗಿದ್ದು ಉತ್ತಮ ಲೈಂಗಿಕ ಜೀವನವನ್ನೂ ನಡೆಸಿಕೊಂಡು ಹೋಗುತ್ತಿರುತ್ತಾರೆ. ಇವರಲ್ಲಿ ನಿಮಿರು ದೌರ್ಬಲ್ಯವಾಗಲೀ ಸ್ಖಲನದ ತೊಂದರೆಯಾಗಲೀ ಇರುವುದಿಲ್ಲ. ಇವರ ವೀರ್ಯಾಣುಗಳನ್ನು ಪ್ರಯೋಗಾಲಯದಲ್ಲಿ ಸೂಕ್ತ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕವಷ್ಟೇ ಈ ವೀರ್ಯಾಣುಗಳು ಅಂಡಾಣುವಿನೊಡನೆ ಕೂಡುವ ಸಾಮರ್ಥ್ಯ ಹಾಗೂ ಅಗತ್ಯ ಸಾಂದ್ರತೆ ಹೊಂದಿವೆಯೇ ಎಂದು ತೀರ್ಮಾನಿಸಬಹುದು.

ಪುರುಷ ಬಂಜೆತನಕ್ಕೆ ಕಾರಣಗಳು

ಪುರುಷ ಬಂಜೆತನಕ್ಕೆ ಕಾರಣಗಳು

* ಪುರುಷರ ದೇಹದಲ್ಲಿ ಸ್ರವಿಸುವ ಟೆಸ್ಟಾಸ್ಟೆರಾನ್ ಎಂಬ ರಸದೂತದ ಕೊರತೆಯಿಂದ ಸಾಕಷ್ಟು ಪ್ರಮಾಣದಲ್ಲಿ ವೀರ್ಯಾಣುಗಳು ಉತ್ಪತ್ತಿಯಾಗದೇ ಇರಬಹುದು.

* ಕೆಲವು ಶಸ್ತ್ರಚಿಕಿತ್ಸೆ, ಔಷಧದ ಅಡ್ಡ ಪರಿಣಾಮ ಅಥವಾ ಕ್ಯಾನ್ಸರ್, ವೃಷಣದ ಕ್ಯಾನ್ಸರ್ ಮೊದಲಾದ ಸ್ಥಿತಿಗಳೂ ಕಡಿಮೆ ವೀರ್ಯಾಣುಗಳ ಉತ್ಪನ್ನಕ್ಕೆ ಕಾರಣವಾಗಬಹುದು.

* ಕೆಲವೊಮ್ಮೆ, ವೃಷಣಗಳ ಮೇಲ್ಭಾಗದಲ್ಲಿ ಅನಗತ್ಯವಾದ ಬೆಳವಣಿಗೆ ಕಂಡುಬರಬಹುದು. ಅತಿ ಬಿಸಿ ಇರುವ ವಾತಾವರಣದಲ್ಲಿ ವ್ಯಾಯಾಮ ಮಾಡುವುದು, ಬಿಗಿಯಾದ ಒಳ ಉಡುಪು ಧರಿಸಿರುವುದು, ಸೌನಾ ಸ್ನಾನಗೃಹದ ಅತಿಯಾದ ಬಳಕೆ, ಬಿಸಿ ಹಬೆಯ ಸ್ನಾನದ ಅತಿಯಾದ ಬಳಿಕೆ, ತೊಡೆಸಂಧಿಯಲ್ಲಿ ನರಗಳು ತಿರುಚಿಕೊಂಡು ನೇರಳೆ ಬಣ್ಣ ಪಡೆಯುವ ವೆರಿಕೋಸ್ ನರಗಳು ಮೊದಲಾದವು ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು

ಕಾರಣವಾಗಬಹುದು.

* ಇನ್ನೂ ಕೆಲವು ಸಂದರ್ಭಗಳಲ್ಲಿ ಈ ಸ್ಥಿತಿ ಅನುವಂಶಿಕವಾಗಿ ಬಂದಿರಬಹುದು

* ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯೂ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು

* ಇತ್ತೀಚಿಗೆ ಕಂಡುಬಂದಿರುವ ಕೆಲವು ಪ್ರಕರಣಗಳಲ್ಲಿ 'atypical centriole'ಎಂಬ ಭಾಗದ ತೊಂದರೆಯನ್ನೂ ಕಂಡುಕೊಳ್ಳಲಾಗಿದೆ. ಈ ಸ್ಥಿತಿಯಿಂದ ಫಲವಂತಿಕೆ ಸಾಧ್ಯವಾದರೂ, ಸಾಮಾನ್ಯವಾಗಿ ಈ ಅಂಡಾಣು ಪರಿಪೂರ್ಣವಾಗಿರುವುದಿಲ್ಲ ಹಾಗೂ ಗರ್ಭಾಪಾತದಲ್ಲಿ ಪರ್ಯವಸಾನಗೊಳ್ಳುತ್ತದೆ.

ಮಹಿಳೆಯರ ಬಂಜೆತನಕ್ಕೆ ಕಾರಣಗಳು

ಮಹಿಳೆಯರ ಬಂಜೆತನಕ್ಕೆ ಕಾರಣಗಳು

ನಿಸರ್ಗ ನೀಡಿರುವ ಈ ಕೊಡುಗೆ ಪುರುಷರಲ್ಲಿ ಜೀವಮಾನವಿಡೀ ಇದ್ದರೆ ಮಹಿಳೆಯರಲ್ಲಿ ಒಂದು ವಯಸ್ಸಿನವರೆಗೆ ಮಾತ್ರವೇ ಇರುತ್ತದೆ. ಮಹಿಳೆಯ ದೇಹದಲ್ಲಿ ಒಟ್ಟಾರೆ ನಿಗದಿತ ಅಂಡಾಣುಗಳು ಮಾತ್ರವೇ ಇದ್ದು ಪ್ರತಿ ತಿಂಗಳ ಮಾಸಿಕ ಸ್ರಾವದ ಮೂಲಕ ಒಂದೊಂದೋ ಅಂಡಾಣು ಕಡಿಮೆಯಾಗುತ್ತಾ ಬಂದು ಒಂದು ಹಂತದಲ್ಲಿ ಪೂರ್ಣವಾಗಿ ಖಾಲಿಯಾಗಿಬಿಡುತ್ತದೆ. ಈ ಸಮಯವನ್ನು ರಜೋನಿವೃತ್ತಿ ಎಂದು ಕರೆಯುತ್ತಾರೆ. ರಜೋನಿವೃತ್ತಿ ಹತ್ತಿರಾಗುತ್ತಿದ್ದಷ್ಟೂ ಮಹಿಳೆ ಗರ್ಭವತಿಯಾಗುವ ಸಾಧ್ಯತೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ವಯಸ್ಸಿನ ಹೊರತಾಗಿ ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುವ ಅಂಶಗಳೆಂದರೆ ಅಂಡನಾಳ ಅಥವಾ ಫ್ಯಾಲೋಪಿಯನ್ ಟ್ಯೂಬ್, ಗರ್ಭಾಶಯದಲ್ಲಿ ಆಗಿರುವ ಘಾಸಿಯಿಂದಾಗಿ ಅಂಡಾಣು ಬಿಡುಗಡೆಯಾಗಲು ಇರುವ ಅಸಾಮರ್ಥ್ಯ ಇತ್ಯಾದಿ. ಈ ತೊಂದರೆಗಳಿದ್ದರೆ ಪುರುಷನ ವೀರ್ಯಾಣುಗಳು ಆರೋಗ್ಯವಂತವಾಗಿದ್ದರೂ ಫಲ ಕಂಡುಬರದೇ ಹೋಗುತ್ತದೆ.

 ಮಹಿಳೆಯರ ಬಂಜೆತನಕ್ಕೆ ಕಾರಣಗಳು

ಮಹಿಳೆಯರ ಬಂಜೆತನಕ್ಕೆ ಕಾರಣಗಳು

ಮಹಿಳೆಯರ ಬಂಜೆತನಕ್ಕೆ ಹಲವಾರು ಕಾರಣಗಳಿವೆ

* ಥ್ರೈರಾಯ್ಡ್ ಗ್ರಂಥದ ಕಾರ್ಯಕ್ಷಮತೆಯಲ್ಲಿ ಏರುಪೇರಿನ ಮೂಲಕ ಎದುರಾಗುವ ರಸದೂತಗಳ ಏರುಪೇರು, ಅತಿಯಾದ ಮಾನಸಿಕ ಒತ್ತಡ ಅಂಡಾಣು ಫಲಗೊಳ್ಳದೇ ಇರಲು ಕಾರಣವಾಗಬಹುದು.

* ಅನಿಯಮಿತ ಹಾಗೂ ಅಸಮರ್ಪಕ ಮಾಸಿಕ ಸ್ರಾವ ಅಸಹಜ ಅಂಡೋತ್ಪತ್ತಿಗೆ ಕಾರಣವಾಗಬಹುದು

* ಅತಿಯಾದ ತೂಕ ಏರಿಕೆ ಅಥವಾ ಅತಿಯಾದ ತೂಕ ಇಳಿಕೆ ಎರಡೂ ಬಂಜೆತನಕ್ಕೆ ಕಾರಣವಾಗಬಹುದು

* ಗರ್ಭಾಶಯದಲ್ಲಿ ಗಡ್ಡೆ ಅಥವಾ ದ್ರಾಕ್ಷಿಗೊಂಚಲಿನಂತಹ ಬೆಳವಣಿಗೆ ಕಂಡುಬರುವುದು ಅಥವಾ ಅಂಡಾಶಯಗಳಿಗೆ ಆದ ಪೆಟ್ಟಿನಿಂದ್ ಅಂಡಾಣು ಉತ್ಪತ್ತಿಯಾಗುವ ಸಾಮರ್ಥ್ಯ ಕಳೆದುಕೊಂಡಿರುವುದು

* ಮಹಿಳೆಯರಲ್ಲಿ ಈಸ್ಟ್ರೋಜೆನ್ ಕೊರತೆ ಕಂಡು ಬಂದರೆ ಇದಕ್ಕೆ ಚಿಕಿತ್ಸೆಯಾಗಿ ನೀಡಲಾಗುವ Diethylstilbestrol(DES)ಅಥವಾ stilbestrolಅಥವಾ stilboestrolಎಂಬ

ಔಷಧಿಗಳನ್ನು ಇವರು ಗರ್ಭವತಿಯಾಗಿದ್ದಾಗ ನೀಡಿದ್ದು ಇವರಿಗೆ ಜನಿಸಿದ ಮಕ್ಕಳಲ್ಲಿಯೂ ಬಂಜೆತನ ಸಾಮಾನ್ಯವಾಗಿ ಕಂಡುಬರುತ್ತದೆ.

* ಮದ್ಯಪಾನ, ನಿಕೋಟಿನ್ ಮೊದಲಾದ ವ್ಯಸನಕಾರಿ ಪದಾರ್ಥಗಳ ಸೇವನೆಯೂ ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು.

ಮಹಿಳೆಯರ ಬಂಜೆತನ ಸಮಸ್ಯೆಗೆ ಕೆಲವೊಂದು ಮನೆ ಔಷಧಿ!
ಬಂಜೆತನಕ್ಕೆ ಪರ್ಯಾಯ ಚಿಕಿತ್ಸೆಗಳು

ಬಂಜೆತನಕ್ಕೆ ಪರ್ಯಾಯ ಚಿಕಿತ್ಸೆಗಳು

ಪುರುಷರ ಹಾಗೂ ಮಹಿಳೆಯರ ಬಂಜೆತನವನ್ನು ಕಂಡುಹಿಡಿಯಲು ಇಂದು ಹಲವಾರು ಬಗೆಯ ಪರೀಕ್ಷೆಗಳು ಲಭ್ಯವಿವೆ,. ಮೂತ್ರ ಹಾಗೂ ರಕ್ತಪರೀಕ್ಷೆಯ ಮೂಲಕ ಬಂಜೆತನಕ್ಕೆ ಕಾರಣವಾಗುವ ಇತರ ಅಂಶಗಳೂ ಬೆಳಕಿಗೆ ಬರುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಬಂಜೆತನಕ್ಕೆ ಸುಲಭವಾದ ಮತ್ತು ಸರಳ ಚಿಕಿತ್ಸೆಯೇ ಸಾಕಾಗುತ್ತದೆ ಹಾಗೂ ದಂಪತಿಗಳ ಮಡಿಲು ತುಂಬಲು ನೆರವಾಗುತ್ತದೆ.

ಪುರುಷರ ಬಂಜೆತನಕ್ಕೆ ಚಿಕಿತ್ಸೆಗಳು

ಪುರುಷರ ಬಂಜೆತನಕ್ಕೆ ಚಿಕಿತ್ಸೆಗಳು

ಒಂದು ವೇಳೆ ವೀರ್ಯಾಣುಗಳ ಸಂಖ್ಯೆ ಕನಿಷ್ಟಕ್ಕೂ ಕಡಿಮೆ ಇದ್ದರೆ ವೀರ್ಯಾಣುಗಳ ಸಾಂದ್ರತೆಯನ್ನು ಕೃತಕವಾಗಿ ಹೆಚ್ಚಿಸಿ ಈ ವೀರ್ಯಾಣುಗಳನ್ನು ಮಹಿಳೆಯ ಗರ್ಭಾಶಯದಲ್ಲಿ ಕೃತಕ ಗರ್ಭಧಾರಣೆಯ ವಿಧಾನದಿಂದ ಗರ್ಭ ನಿಲ್ಲುವಂತೆ ಪ್ರಯತ್ನಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣುಗಳನ್ನು ಪ್ರಯೋಗಾಲಯದಲ್ಲಿ ಸೂಕ್ತ ಸಲಕರಣೆಗಳನ್ನು ಬಳಸಿ ಮತ್ತು ಗರ್ಭಾಂಕುರಗೊಳ್ಳುವ ಸಾಧ್ಯತೆ ಹೆಚ್ಚುವ ವಾತಾವರಣದಲ್ಲಿ ವೀರ್ಯಾಣುಗಳು ಅಂಡಾಣುವೊಡನೆ ಮಿಲನಗೊಳ್ಳುವಂತೆ ಮಾಡಲಾಗುತ್ತದೆ. ಹೀಗೆ ಫಲಿತಗೊಂಡ ಅಂಡಾಣುವನ್ನು ಕೃತಕವಾಗಿ ಮಹಿಳೆಯ ಗರ್ಭಾಶಯದಲ್ಲಿ ಸ್ಥಾಪಿಸಲಾಗುತ್ತದೆ. ಈ ವಿಧಾನವನ್ನು ಐವಿಎಫ್ (In vitro fertilisation) ಎಂದು ಕರೆಯಲಾಗುತ್ತಿದ್ದು ಈ ಕಾರ್ಯವನ್ನು ಕೇವಲ ಅಧಿಕೃತ ವೈದ್ಯಕೀಯ ವ್ಯವಸ್ಥೆ ಹೊಂದಿರುವ ಆಸ್ಪತ್ರೆಗಳಲ್ಲಿ ಮಾತ್ರವೇ ನಡೆಸಲಾಗುತ್ತದೆ. ಇದರ ಹೊರತಾಗಿ ಕಡಿಮೆ ವೀರ್ಯಾಣುಗಳ ಸಂಖ್ಯೆ ಮತ್ತು ಸಾಂದ್ರತೆಯನ್ನು ಹೆಚ್ಚಿಸುವ ಔಷಧಿಗಳು, ರಸದೂತದ ಚುಚ್ಚುಮದ್ದುಗಳ ಬಳಕೆ ಹಾಗೂ ಬಂಜೆತನಕ್ಕೆ ಪೂರಕವಾಗಿರುವ ಇತರ ಸೋಂಕುಗಳನ್ನು ನಿವಾರಿಸುವ ಮೂಲಕವೂ ಅಡ್ಡಿಗಳನ್ನು ನಿವಾರಿಸಿ ಸಹಜ ಗರ್ಭಧಾರಣೆಗೆ ಅನುಕೂಲ ಮಾಡಿಕೊಡಲಾಗುತ್ತದೆ.

ಮಹಿಳೆಯರ ಬಂಜೆತನಕ್ಕೆ ಚಿಕಿತ್ಸೆಗಳು

ಮಹಿಳೆಯರ ಬಂಜೆತನಕ್ಕೆ ಚಿಕಿತ್ಸೆಗಳು

ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯರ ಬಂಜೆತನಕ್ಕೆ ಕೆಲವು ಸೋಂಕುಗಳು ಕಾರಣವಾಗಿರುತ್ತವೆ. ಇವುಗಳ ಚಿಕಿತ್ಸೆಗೆ ಸೂಕ್ತ ಪ್ರತಿಜೀವಕ (ಆಂಟಿ ಬಯಾಟಿಕೋ) ಔಷಧಿಗಳ ಸೇವನೆಯೇ ಸಾಕಾಗುತ್ತದೆ. ರಸದೂತದ ಅಸಮತೋಲನ ಕಾರಣವಾಗಿದ್ದರೆ ಇದನ್ನು ಸರಿಪಡಿಸಲು ಹಾರ್ಮೋನ್ ಚಿಕಿತ್ಸೆ ಅಥವಾ ಚುಚ್ಚುಮದ್ದನ್ನು ನೀಡಬೇಕಾಗುತ್ತದೆ. ಅಲ್ಲದೇ ಗರ್ಭಾಶಯದಿಂದ ಅಂಡಾಣು ಬಿಡುಗಡೆಗೊಳ್ಳದೇ ಇರುವ ಸಂದರ್ಭ ಇದ್ದರೆ ಇವನ್ನು ಸೂಕ್ತ ಸಮಯದಲ್ಲಿ ಬಿಡುಗಡೆಗೊಳಿಸುವ ಔಷಧಿಗಳು ಅಥವಾ ಹೆಚ್ಚುವರಿ ಆಹಾರಗಳನ್ನೂ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಅಪರೂಪದ ಸಂದರ್ಭಗಳಲ್ಲಿ ಅಂಡನಾಳದಲ್ಲಿ ಯಾವುದಾದರೂ ತೊಡಕು ಇದ್ದರೆ ಅಥವಾ ಇತರ ಕಾರಣಗಳಿಂದ ಅಂಡನಾಳ ಮುಚ್ಚಿ ಹೋಗಿದ್ದರೆ ಸೂಕ್ತ ಪರೀಕ್ಷೆಗಳ ಬಳಿಕವೇ ಚಿಕ್ಕ ಶಸ್ತ್ರಚಿಕಿತ್ಸೆಯ ಮೂಲಕ ಈ ಕೊರತೆಯನ್ನು ವೈದ್ಯರು ನಿವಾರಿಸಿ ಸಹಜ ಗರ್ಭಧಾರಣೆಗೆ ದಾರಿ ಸುಗಮಗೊಳಿಸುತ್ತಾರೆ.

ಮಹಿಳೆಯರಲ್ಲಿ ಬಂಜೆತನ ತಡೆಯುವ ವಿಧಾನಗಳು

English summary

Causes Of Infertility In Males And Females

Reproduction is a natural process where all the living beings produce the young ones of their species through one or another method of reproduction. Humans reproduce through fertilization process that happen between males and females after the fusion of sperm and egg cells. This is a very natural process and most of the human couples are able to carry it out and enjoy parenthood.
X
Desktop Bottom Promotion