For Quick Alerts
ALLOW NOTIFICATIONS  
For Daily Alerts

ಚರ್ಮ ರೋಗ 'ಇಸಬು' ತೊಂದರೆ ನಿವಾರಣೆಗೆ-ಬೇವಿನ ಎಣ್ಣೆ ಸಾಕು

By Arshad
|

ಇಸುಬು ಅಥವಾ ಎಸ್ಜಿಮಾ (Eczema) ಒಂದು ಬಗೆಯ ಚರ್ಮವ್ಯಾಧಿಯಾಗಿದೆ. ಚರ್ಮದಲ್ಲಿ ಅಲ್ಲಲ್ಲಿ ಕೊಂಚ ಅಗಲದಲ್ಲಿ ಕೆಂಪಗಾಗಿ ಬಿರುಕು ಬಿಡುತ್ತದೆ ಹಾಗೂ ಅತೀವ ತುರಿಕೆ ಮತ್ತು ಉರಿಯಿಂದ ಕೂಡಿರುತ್ತದೆ. ಇದೊಂದು ಸಾಮಾನ್ಯವಾದ ಉರಿಯೂತದ ಪರಿಣಾಮವಾಗಿ ಕಂಡುಬರುವ ಚರ್ಮವ್ಯಾಧಿಯಾಗಿದ್ದು ಇದನ್ನು ಉಗುರಿನಿಂದ ತುರಿಸಿದಷ್ಟೂ ಇದರ ತುರಿಕೆ ಉಲ್ಬಣಗೊಳ್ಳುತ್ತಾ ಹೋಗುತ್ತದೆ ಹಾಗೂ ತಡೆಯಲಸಾಧ್ಯವಾದ ನವೆ ಭಾರೀ ಮುಜುಗರವನ್ನೂ ಉಂಟು ಮಾಡುತ್ತದೆ. ಈ ತುರಿಕೆಯನ್ನು ಕಡಿಮೆ ಮಾಡಲು ಕೆಲವಾರು ಸುಲಭವಾಗಿದ್ದು ಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ.

ಇಸುಬು ಎದುರಾಗಲು ಅನುವಂಶಿಕ ಕಾರಣ ಪ್ರಮುಖವಾಗಿದ್ದು ನಮ್ಮ ಹಿರಿಯರಲ್ಲಿ ಯಾರಿಗಾದರೂ ಈ ತೊಂದರೆ ಇದ್ದರೆ ಕುಟುಂಬ ಸದಸ್ಯರಲ್ಲಿಯೂ ಕಂಡುಬರಬಹುದು. ಸಾಮಾನ್ಯವಾಗಿ ಈ ತೊಂದರೆ ಇರುವ ವ್ಯಕ್ತಿಗಳು ಪರಿಸರದಲ್ಲಿ ಅತಿ ಸಾಮಾನ್ಯವಾಗಿರುವ ಧೂಳು, ಹೂವಿನ ಪರಾಗ, ಸೊಳ್ಳೆ-ತಿಗಣೆ ಮೊದಲಾದ ಕಡಿಯುವ ಕೀಟಗಳು, ಮನೆಯನ್ನು ಸ್ವಚ್ಛಗೊಳಿಸುವ ಫಿನಾಯಿಲ್ ಅಥವಾ ಇತರ ರಾಸಾಯನಿಕಗಳು, ಕೆಲವು ಸೌಂದರ್ಯವರ್ಧಕ ಪ್ರಸಾದನಗಳು ಮೊದಲಾದವುಗಳಿಗೆ ಅತಿ ಹೆಚ್ಚಿನ ಅಲರ್ಜಿಯನ್ನು ಹೊಂದಿರುತ್ತಾರೆ. ಇಸುಬು ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದೇ ಇದ್ದರೆ ಕೆಲವು ವ್ಯಕ್ತಿಗಳಿಗೆ ಇದು ಏರಿಳಿತದ ಜ್ವರ (hay fever) ಮತ್ತು ಅಸ್ತಮಾ ಎದುರಾಗಲೂ ಕಾರಣವಾಗಬಹುದು.

skin care tips

ಇಸುಬು ಇರುವ ವ್ಯಕ್ತಿಗಳು ತಮಗೆ ಅಲರ್ಜಿಕಾರಕವಾದ ಯಾವುದೇ ವಸ್ತುಗಳಿಂದ ಆದಷ್ಟೂ ದೂರವಿರಬೇಕು. ಉದಾಹರಣೆಗೆ ತಾಪಮಾನದಲ್ಲಿ ಬದಲಾವಣೆ, ಕೆಲವು ಪ್ರಾಣಿಗಳ ಒಡನಾಟ, ಕೆಲವು ಬಗೆಯ ಸುಗಂಧದ್ರವ್ಯಗಳು, ಬಟ್ಟೆ ಒಗೆಯುವ ಸೋಪಿನ ಪುಡಿ, ಬೆವರು ಮೊದಲಾದವುಗಳಲ್ಲಿ ಯಾವುದು ತಮಗೆ ಸೂಕ್ತವಲ್ಲವೂ ಆ ವಿಷಯದಿಂದ ದೂರವಿರಲು ತಮ್ಮ ಗರಿಷ್ಟ ಪ್ರಯತ್ನ ನಡೆಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ತ್ವಚೆಯನ್ನು ಒಣಗಿಸಲು ಬಿಡಬಾರದು, ತ್ವಚೆಯ ಒಣಗುವಿಕೆ ಹೆಚ್ಚಿನವರಲ್ಲಿ ಈ ತುರಿಕೆ ಹೆಚ್ಚಿಸುತ್ತದೆ.

ಮಕ್ಕಳಿಗೆ ಕಾಡುವ ಇಸುಬು ಸಮಸ್ಯೆಗೆ ಪರಿಹಾರ

ಇಸುಬು ರೋಗದ ಅತಿ ದೊಡ್ಡ ತೊಡಕೆಂದರೆ ಒಣಚರ್ಮ! ಏಕೆಂದರೆ ಚರ್ಮದಲ್ಲಿ ಆರ್ದ್ರತೆಯ ಕೊರತೆ ಇದ್ದಾಗ ತ್ವಚೆ ಕಾರ್ಯನಿರ್ವಹಿಸುವ ಸಾಮರ್ಥ ಕಳೆದುಕೊಳ್ಳುತ್ತದೆ ಹಾಗೂ ತ್ವಚೆ ಇನ್ನಷ್ಟು ನೀರಿನಂಶವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ ಹಾಗೂ ನೀರಿನ ಕೊರತೆ ಭಾರೀ ತುರಿಕೆ ಮತ್ತು ಉರಿಯನ್ನುಂಟು ಮಾಡುತ್ತದೆ. ಆದರೆ ಇಸುಬು ರೋಗಕ್ಕೆ ಇಂದು ಕೆಲವಾರು ಚಿಕಿತ್ಸೆಗಳು ಲಭ್ಯವಿದ್ದು ಚಿಂತೆಗೆ ಕಾರಣವಿಲ್ಲ. ಇದರಲ್ಲೊಂದು ಸಮರ್ಥ ಹಾಗೂ ನೈಸರ್ಗಿಕವಾದ ಚಿಕಿತ್ಸೆ ಎಂದರೆ ಬೇವಿನ ಎಣ್ಣೆ. ಬನ್ನಿ, ಇಸುಬು ರೋಗದ ನಿವಾರಣೆಗೆ ಬೇವಿನ ಎಣ್ಣೆಯನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ:

ಬೇವಿನ ಎಣ್ಣೆ ಎಂದರೇನು?

ಬೇವಿನ ಎಲೆಗಳನ್ನು ಒಗ್ಗರಣೆಗೆ ಹಾಕುವಾಗ ಈ ಎಲೆಗಳಿಂದ ಒಸರುವ ಎಣ್ಣೆಯೇ ಬೇವಿನ ಎಣ್ಣೆ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ವಾಸ್ತವವಾಗಿ ಬೇವಿನ ಮರದಲ್ಲಿ ಚೆನ್ನಾಗಿ ಬಲಿತ ಹಣ್ಣುಗಳಿಂದ ಪ್ರತ್ಯೇಕಿಸಲ್ಪಟ್ಟ ಬೀಜಗಳನ್ನು ಚೆನ್ನಾಗಿ ಒಣಗಿಸಿ ಹಿಂಡಿ ತೆಗೆಯಲಾದ ಎಣ್ಣೆಯೇ ಬೇವಿನೆಣ್ಣೆ. ಬೇವಿನ ಬೀಜ ಮತ್ತು ಎಲೆಗಳು ಮಾತ್ರವಲ್ಲ, ತೊಗಟೆ, ಬೇರು, ಹಣ್ಣು ಮೊದಲಾದವುಗಳಲ್ಲಿಯೂ ಔಷಧೀಯ ಗುಣಗಳಿವೆ. ಬೇವಿನಲ್ಲಿರುವ ಉರಿಯೂತ ನಿವಾರಕ ಗುಣ ಹಲವಾರು ಚರ್ಮವ್ಯಾಧಿಗಳ ಚಿಕಿತ್ಸೆಗೆ ನೆರವಾಗುತ್ತದೆ ಹಾಗೂ ವಿಶೇಷವಾಗಿ ಇಸುಬು ರೋಗ ಆವರಿಸಿರುವ ಚರ್ಮದಿಂದ ಉರಿ, ತುರಿಕೆ, ಕೆಂಪಗಾಗುವುದು ಮೊದಲಾದವುಗಳನ್ನು ನಿವಾರಿಸುತ್ತದೆ. ಅಲ್ಲದೇ ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಹಲವಾರು ಸೋಂಕುಗಳಿಂದ ರಕ್ಷಿಸುವ ಮೂಲಕ ಬಹುತೇಕ ಎಲ್ಲ ಬಗೆಯ ಸೋಂಕುಗಳನ್ನು ನಿವಾರಿಸಲು ನೆರವಾಗುತ್ತದೆ ಹಾಗೂ ಸೋಂಕುಗಳನ್ನು ಆವರಿಸುವುದನ್ನು ತಡೆಯುವ ಮೂಲಕ ರಕ್ಷಣೆ ಒದಗಿಸುತ್ತದೆ.

ಇಸುಬು ರೋಗದ ಚಿಕಿತ್ಸೆಯೂ ಬೇವಿನೆಣ್ಣೆಯಿಂದ ಸಾಧ್ಯವೇ?

ಇಸುಬು ರೋಗದ ಚಿಕಿತ್ಸೆಗಾಗಿ ಇಂದು ಔಷಧಿ ಅಂಗಡಿಯಲ್ಲಿ ಹಲವಾರು ಕ್ರೀಮುಗಳು ದೊರಯುತ್ತಿವೆ. ಆದರೆ ಸಾಮಾನ್ಯ ಕ್ರೀಮುಗಳಿಂದ ಸಾಧ್ಯವಾಗದ ಚಿಕಿತ್ಸೆಯನ್ನು ಬೇವಿನೆಣ್ಣೆ ನೀಡುತ್ತದೆ ಹಾಗೂ ಇದರ ಇನ್ನೊಂದು ಹೆಗ್ಗಳಿಗೆ ಎಂದರೆ ಯಾವುದೇ ಅಡ್ಡ ಪರಿಣಾಮವಿಲ್ಲದೇ ಇರುವುದು! ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ, ಇಸುಬು ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಬೇವಿನೆಣ್ಣೆ ಸಶಕ್ತವಾಗಿದೆ.

ಬನ್ನಿ, ಈಗ ಈ ಎಣ್ಣೆಯನ್ನು ಇಸುಬು ರೋಗದ ಚಿಕಿತ್ಸೆಗಾಗಿ ಹೇಗೆ ಬಳಸಬಹುದು ಎಂಬುದನ್ನು ನೋಡೋಣ:

* ಈ ಚಿಕಿತ್ಸೆಯಲ್ಲಿ ವಹಿಸಬೇಕಾದ ಅತಿ ಪ್ರಮುಖ ಎಚ್ಚರಿಕೆ ಎಂದರೆ, ಚರ್ಮದ ಈ ಭಾಗಕ್ಕೆ ಅಪ್ಪಿ ತಪ್ಪಿಯೂ ಸೋಪು ತಗಲದಂತೆ ನೋಡಿಕೊಳ್ಳಬೇಕು. ಬೇವಿನಿಂದ ತಯಾರಾದ ಸೋಪಾಗಿದ್ದರೂ ಸರಿ, ಸರ್ವಥಾ ಬಳಸಬಾರದು.

* ಚರ್ಮದ ಇತರ ಬಗೆಯ ವ್ಯಾಧಿಗಳ ಚಿಕಿತ್ಸೆಗೆ ಬೇವಿನ ಸೋಪು ಉಪಯುಕ್ತವಾದರೂ ಇಸುಬು ರೋಗಕ್ಕಲ್ಲ. ಹಾಗಾಗಿ ಇಸುಬು ಇರುವ ಚರ್ಮದ ಭಾಗವನ್ನು ಸ್ವಚ್ಛಪಡಿಸಲು ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಬೇವಿನ ಎಣ್ಣೆಯನ್ನು ಬೆರೆಸಿ ಈ ನೀರಿನಿಂದ ಚರ್ಮವನ್ನು ಸ್ವಚ್ಛಗೊಳಿಸಬೇಕು.

* ಸ್ನಾನದ ನೀರು ಉಗುರುಬೆಚ್ಚಗಿರುವುದು ಅಗತ್ಯ. ಅತಿ ಬಿಸಿಯೂ ಇರಬಾರದು, ತಣ್ಣಗೂ ಇರಬಾರದು. ತೇವಗೊಂಡ ಚರ್ಮದ ಭಾಗಕ್ಕೆ ಬೇವಿನ ಕ್ರೀಂ ಅಥವಾ ಲೋಶನ್ ಹಚ್ಚಬೇಕು. ಇದರಿಂದ ಚರ್ಮ ತನ್ನ ಮೂಲಸ್ವರೂಪವನ್ನು ಪಡೆದುಕೊಳ್ಳಲು ನೆರವಾಗುತ್ತದೆ.

* ವ್ಯಾಧಿಗೊಳಗಾದ ಚರ್ಮದ ಭಾಗಕ್ಕೆ ಎಂದಿಗೂ ಬೇವಿನ ಎಣ್ಣೆಯನ್ನು ನೇರವಾಗಿ ಹೆಚ್ಚಬಾರದು, ಏಕೆಂದರೆ ಈಗಾಗಲೇ ಈ ಭಾಗ ಭಾರೀ ಉರಿ ಮತ್ತು ತುರಿಕೆಯಿಂದ ಕೂಡಿದ್ದು ಬೇವಿನೆಣ್ಣೆಯನ್ನು ನೇರವಾಗಿ ಹೆಚ್ಚುವುದರಿಂದ ಈ ತುರಿಕೆ, ಉರಿ ಹೆಚ್ಚುತ್ತದೆ.

* ಹಾಗಾಗಿ, ಬೇವಿನೆಣ್ಣೆಯನ್ನು ಬಳಸಿದ ಔಷಧಿಗಳನ್ನೇ ಬಳಸಬೇಕು. ತ್ವಚೆಗೆ ರಾಸಾಯನಿಕ ಮುಕ್ತ, ಉತ್ತಮ ಗುಣಮಟ್ಟದ ಹಾಗೂ ನೈಸರ್ಗಿಕ ಉತ್ಪನ್ನಗಳನ್ನೇ ಕೊಳ್ಳಬೇಕು. ನಿಮ್ಮ ತ್ವಚೆಗೆ ಯಾವ ಉತ್ಪನ್ನ ಸೂಕ್ತ ಎಂದು ಪರಿಶೀಲಿಸಿ ಖಚಿತಗೊಂಡ ಬಳಿಕವೇ ಬಳಸಲು ತೊಡಗಬೇಕು.

1. ಲೋಳೆಸರ:

ಆಲೋವೆರಾ ಅಥವಾ ಲೋಳೆಸರವೂ ಇಸುಬು ರೋಗ ನಿವಾರಣೆಗೆ ಹೆಚ್ಚಿನ ನೆರವು ನೀಡುತ್ತದೆ. ಇಸಬಿನ ಲಕ್ಷಣಗಳಾದ ತುರಿಕೆ ಮತ್ತು ಉರಿಯನ್ನು ಈ ಎಲೆಗಳ ಸ್ನಿಗ್ಧ ದ್ರವ ಶೀಘ್ರವಾಗಿ ಶಮನಗೊಳಿಸುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣ ಉರಿಯನ್ನು ಕಡಿಮೆಗೊಳಿಸಿ ತುರಿಕೆಯಿಂದ ಮುಕ್ತಿ ನೀಡುತ್ತದೆ. ಅಲ್ಲದೇ ಲೋಳೆಸರದ ಬಳಕೆಯಿಂದ ತ್ವಚೆಗೆ ಅಗತ್ಯವಾದ ಆರ್ದ್ರತೆ ದೊರಕುವುದರಿಂದ ತ್ವಚೆಯ ಆರೋಗ್ಯ ಹೆಚ್ಚುತ್ತದೆ ಮತ್ತು ಇಸಬಿನಿಂದ ಶೀಘ್ರವೇ ಮುಕ್ತಿ ಪಡೆಯುತ್ತದೆ.

2. ಅರಿಶಿನ:

ಅರಿಶಿನದಲ್ಲಿ ಅಲರ್ಜಿನಿವಾರಕ, ಅಲರ್ಜಿಕಾರಕ ಕಣಗಳಿಗೆ ಪ್ರತಿರೋಧ ನೀಡುವ, ಸೂಕ್ಷ್ಮ ಜೀವಿ ನಿವಾರಕ ಗುಣಗಳಿದ್ದು ಇವು ತ್ವಚೆಯ ಉರಿಯೂತ, ಚರ್ಮದ ಬಣ್ಣ ಬದಲಾಗುವುದು, ಪ್ರದೂಷಣೆ ಮತ್ತು ರಾಸಾಯನಿಕಗಳಿಂದ ಚರ್ಮ ಘಾಸಿಗೊಳ್ಳುವುದರಿಂದ ತಡೆಯುತ್ತದೆ. ಅರಿಶಿನ ತ್ವಚೆಗೆ ಹೊರಗಿನಿಂದ ಮತ್ತು ಒಳಗಿನಿಂದ ಆರೈಕೆ ನೀಡುವ ಮೂಲಕ ಇಸುಬು ಶೀಘ್ರವೇ ಗುಣವಾಗುತ್ತದೆ. ಇದಕ್ಕಾಗಿ ನಿತ್ಯದ ಅಡುಗೆಯಲ್ಲಿ ಸುಮಾರು ಒಂದು ದೊಡ್ಡ ಚಮಚದಷ್ಟು ಅರಿಶಿನ ಬಳಸಬೇಕಾಗುತ್ತದೆ.

3. ಆಲಿವ್ ಎಣ್ಣೆ:

ಇಸುಬು ರೋಗದ ಚಿಕಿತ್ಸೆಗಾಗಿ ಆಲಿವ್ ಎಣ್ಣೆಯೂ ಉತ್ತಮ ಆಯ್ಕೆಯಾಗಿದ್ದು ಇದರ ಹಚ್ಚುವಿಕೆಯಿಂದ ಇಸಬಿಗೆ ಒಳಗಾಗಿರುವ ಚರ್ಮದಲ್ಲಿ ಈ ಚರ್ಮ ಆಳಕ್ಕೆ ಇಳಿದು ತ್ವಚೆಗೆ ಅಗತ್ಯವಾದ ಪೋಷಣೆ ಹಾಗೂ ಆರೈಕೆಯನ್ನು ಒದಗಿಸುತ್ತದೆ. ಇತರ ಎಣ್ಣೆಗಳಿಗೆ ಹೋಲಿಸಿದರೆ ಆಲಿವ್ ಎಣ್ಣೆ ಹೆಚ್ಚಿನ ಜನರಿಗೆ ಅಲರ್ಜಿಕಾರಕವಾಗದೇ ಇರುವ ಹಾಗೂ ಪೂರ್ಣವಾಗಿ ನೈಸರ್ಗಿಕವಾಗಿರುವ ಕಾರಣ ಇಸಬಿನ ಚಿಕಿತ್ಸೆಗೆ ಉತ್ತಮವಾಗಿದೆ. ಆದರೆ ಸದಾ ಪ್ರಥಮ ಪ್ರಯತ್ನದಲ್ಲಿ ಹಾಗೂ ತಣ್ಣನೆಯ ವಿಧಾನದಿಂದ ಹಿಂಡಲ್ಪಟ್ಟ ಆಲಿವ್ ಎಣ್ಣೆಯನ್ನೇ (extra-virgin olive oil) ಆಯ್ಕೆ ಮಾಡಿಕೊಳ್ಳುವುದು ಅಗತ್ಯ.

4. ವ್ಯಾಸೆಲಿನ್ (Petroleum Jelly):

ವ್ಯಾಸೆಲಿನ್ ಎಂದೇ ನಾವೆಲ್ಲಾ ಅರಿತಿರುವ ಈ ಗಾಢ ಪೆಟ್ರೋಲಿಯಂ ಜೆಲ್ಲಿ ಪ್ರತಿ ಮನೆಯಲ್ಲಿಯೂ ಇದ್ದೇ ಇರುತ್ತದೆ ಹಾಗೂ ಸೂಕ್ಷ್ಮ ಸಂವೇದಿ ತ್ವಚೆ ಇರುವ ವ್ಯಕ್ತಿಗಳಿಗೆ ಇಸುಬು ರೋಗ ಆವರಿಸಿದರೆ ಬಳಸಲು ಅತಿ ಸೂಕ್ತವಾಗಿದೆ. ಇಸುಬು ಇರುವ ತ್ವಚೆಗೆ ಈ ಉತ್ಪನ್ನವನ್ನು ಹಚ್ಚಿಕೊಂಡರೆ ಇದು ತ್ವಚೆಗೆ ಅಗತ್ಯ ಆರ್ದ್ರತೆಯನ್ನು ನೀಡುವುದು ಮಾತ್ರವಲ್ಲ, ಬಿರುಕುಬಿಟ್ಟ ತ್ವಚೆಯ ಮೇಲೆ ತೆಳ್ಳನೆಯ ಪದರವೊಂದನ್ನು ಸ್ಥಾಪಿಸುವ ಮೂಲಕ ಆರ್ದ್ರತೆ ನಷ್ಟವಾಗದಂತೆಯೂ ತಡೆಯುತ್ತದೆ. ಅಲ್ಲದೇ ಇದು ಸೌಮ್ಯವಾಗಿದ್ದು ಎಲ್ಲಾ ಬಗೆಯ ತ್ವಚೆಗಳಿಗೂ ಸೂಕ್ತವಾಗಿದೆ. ವಿಶೇಷವಾಗಿ ಒಣಚರ್ಮಕ್ಕೆ ಉತ್ತಮವಾಗಿದ್ದು ಇದರ ಅತ್ಯಂತ ಪ್ರಬಲ ಅಲರ್ಜಿನಿವಾರಕ ಮತ್ತು ಚರ್ಮದ ಉಸಿರಾಟಕ್ಕೆ ತಡೆಯುಂಟು ಮಾಡದ ಗುಣಗಳನ್ನು ಹೊಂದಿದೆ. ಚರ್ಮಕ್ಕೆ ಎದುರಾಗುವ ಚಿಕ್ಕ ಪುಟ್ಟ ಗಾಯಗಳು, ಸೂಕ್ಷ್ಮಗೀರುಗಳು ಮೊದಲಾದವುಗಳನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ.ಇವುಗಳಲ್ಲಿ ಯಾವುದು ನಿಮ್ಮ ತ್ವಚೆಗೆ ಹೆಚ್ಚು ಹೊಂದಿಕೊಳ್ಳುತ್ತದೆಯೋ ಅದನ್ನೇ ಆರಿಸಿಕೊಳ್ಳಿ ಹಾಗೂ ಶೀಘ್ರವೇ ಇಸುಬು ರೋಗಮುಕ್ತರಾಗಿ.

English summary

Can You Use Neem Oil For Treating Eczema

Eczema is a condition where patches of skin becomes red, dry, cracked and itchy. And it is a very common inflammatory skin disorder. The skin tends to flare up after scratching it because the itchiness can be unbearable. Scratching will only worsen eczema, but there are numerous ways to reduce the itchiness and treat eczema. The main cause of eczema lies in our genes, and it usually runs in the family. People suffering from eczema are very sensitive to common allergens, like dust, pollen, house mites, household chemicals, cosmetics, etc. If eczema is not treated properly, then some people develop allergies like hay fever and asthma.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more